ಬಹದ್ದೂರ್ ಸಿಂಗ್ ಬೊಹ್ರಾ

ಹವಾಲ್ದಾರ್ ಬಹದ್ದೂರ್ ಸಿಂಗ್ ಬೋಹ್ರಾ ಅವರು ಭಾರತೀಯ ಸೇನೆಯ ೧೦ ನೇ ಬೆಟಾಲಿಯನ್, ಪ್ಯಾರಾಚೂಟ್ ರೆಜಿಮೆಂಟ್‌ನ ನಾನ್ ಕಮಿಷನ್‌ಡ್ ಆಫೀಸರ್ (ಎನ್.ಸಿ.ಒ) ಆಗಿದ್ದರು. ಇವರು ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಮರಣೋತ್ತರವಾಗಿ ಪಡೆದರು.[] .

ಹವಾಲ್ದಾರ್

ಬಹದ್ದೂರ್ ಸಿಂಗ್ ಬೋಹ್ರಾ

ಜನನಪಿಥೋರಗಢ್, ಉತ್ತರಾಖಂಡ, ಭಾರತ
ಮರಣ೨೫ ಸೆಪ್ಟೆಂಬರ್‌ ೨೦೦೮
ಲಾವಾಂನ಼್, ಜಮ್ಮು ಮತ್ತು ಕಾಶ್ಮೀರ, ಭಾರತ
ವ್ಯಾಪ್ತಿಪ್ರದೇಶ ಭಾರತ
ಶಾಖೆ ಭಾರತೀಯ ಭೂಸೇನೆ
ಸೇವಾವಧಿ?-‌೨೦೦೮
ಶ್ರೇಣಿ(ದರ್ಜೆ) ಹವಾಲ್ದಾರ್
ಸೇವಾ ಸಂಖ್ಯೆ13621503
ಘಟಕ ೧೦ ಪ್ಯಾರಾ (ವಿಶೇಷ ಪಡೆಗಳು)
ಪ್ರಶಸ್ತಿ(ಗಳು) ಅಶೋಕ ಚಕ್ರದ
ಸಂಗಾತಿಶಾಂತಿ ಬೋಹ್ರಾ

ಅಶೋಕ ಚಕ್ರ

ಬದಲಾಯಿಸಿ
 
ಬೋಹ್ರಾ ಅವರ ಪತ್ನಿ, ಶ್ರೀಮತಿ ಶಾಂತಿ ದೇವಿ ಅವರು ೨೬ ಜನವರಿ ೨೦೦೯ ರಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಅಶೋಕ ಚಕ್ರವನ್ನು ಸ್ವೀಕರಿಸುತ್ತಿರುವ ಚಿತ್ರ.

ವಿವರಣೆ

ಬದಲಾಯಿಸಿ

ಹವಿಲ್ದಾರ್ ಬಹದ್ದೂರ್ ಸಿಂಗ್ ಬೋಹ್ರಾ (೧೦ ನೇ ಬೆಟಾಲಿಯನ್ ಪ್ಯಾರಾಚೂಟ್ ರೆಜಿಮೆಂಟ್ (ವಿಶೇಷ ಪಡೆ)): ಜಮ್ಮು ಮತ್ತು ಕಾಶ್ಮೀರದ ಸಾಮಾನ್ಯ ಪ್ರದೇಶದವಾದ ಲಾವಾಂಜ್‌ನಲ್ಲಿ ಶೋಧ ಕಾರ್ಯಾಚರಣೆಗಾಗಿ ನಿಯೋಜಿಸಲಾದ ಆಕ್ರಮಣ ತಂಡದ ಕಮಾಂಡರ್ ಆಗಿದ್ದರು.

೨೫ ಸೆಪ್ಟೆಂಬರ್ ೨೦೦೮ ರಂದು, ಸಂಜೆ ೬.೧೫ ಕ್ಕೆ, ಅವರು ಭಯೋತ್ಪಾದಕರ ಗುಂಪನ್ನು ಗಮನಿಸಿದರು ಮತ್ತು ಅವರನ್ನು ತಡೆಯಲು ಮುನ್ನಡೆದರು. ಈ ಪ್ರಕ್ರಿಯೆಯಲ್ಲಿ, ಅವರು ಭಾರೀ ಪ್ರತಿಕೂಲದ ಬೆಂಕಿಯ ದಾಳಿಗೆ ಒಳಗಾದರು. ಧೈರ್ಯಗೆಡದೆ, ಭಯೋತ್ಪಾದಕರ ಮೇಲೆ ದಾಳಿ ಮಾಡಿ ಅವರಲ್ಲಿ ಒಬ್ಬನನ್ನು ಕೊಂದರು. ಆದಾಗ್ಯೂ, ಅವರು ತೀವ್ರ ಗುಂಡಿನ ಗಾಯಗಳನ್ನು ಅನುಭವಿಸಿದರು. ಅಲ್ಲಿಂದ ಹೊರಡಲು ನಿರಾಕರಿಸಿದ ಅವರು ದಾಳಿಯನ್ನು ಮುಂದುವರೆಸಿದರು ಮತ್ತು ಇಬ್ಬರು ಭಯೋತ್ಪಾದಕರನ್ನು ಅತ್ಯಂತ ಸಮೀಪದಲ್ಲಿ ಕೊಂದರು.

ಹವಿಲ್ದಾರ್ ಬಹದ್ದೂರ್ ಸಿಂಗ್ ಬೋಹ್ರಾ ಅವರು ಅತ್ಯಂತ ಚೇತೋಹಾರಿ ಶೌರ್ಯವನ್ನು ಪ್ರದರ್ಶಿಸಿದರು ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡುವಲ್ಲಿ ರಾಷ್ಟ್ರಕ್ಕಾಗಿ ಅತ್ಯುನ್ನತ ತ್ಯಾಗ ಮಾಡಿದರು. []

ವೈಯಕ್ತಿಕ ಜೀವನ

ಬದಲಾಯಿಸಿ

ಅವರು ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯ ರಾವಲ್ಖೇಟ್ ಎಂಬ ದೂರದ ಹಳ್ಳಿಯಲ್ಲಿ ಜನಿಸಿದರು. ಇಬ್ಬರು ಹಿರಿಯ ಸಹೋದರಿಯರು ಮತ್ತು ಹಿರಿಯ ಸಹೋದರರೊಂದಿಗೆ ೪ ಮಕ್ಕಳಲ್ಲಿ ಅವರೇ ಕಿರಿಯರಾಗಿದ್ದರು. ಅವರು ಪತ್ನಿ ಶಾಂತಿ ಮತ್ತುಇಬ್ಬರು ಪುತ್ರಿಯರಾದ ಮಾನ್ಸಿ ಮತ್ತು ಸಾಕ್ಷಿ ಅವರನ್ನು ಅಗಲಿದ್ದಾರೆ. []


ಉಲ್ಲೇಖಗಳು

ಬದಲಾಯಿಸಿ