ಬರಪೊಳೆ ಕೊಡಗು ಜಿಲ್ಲೆ ಯ ಒಂದು ನದಿ. ಇದು ಕಂಗನ ಹೊಳೆ ಮತ್ತು ಕಾಕಟಹೊಳೆ ಎಂಬ ಎರಡು ಬೃಹತ್ ತೊರೆಗಳ ಸೇರುವಿಕೆಯಿಂದ ಉಂಟಾಗಿದೆ. ಬ್ರಹ್ಮಗಿರಿ ಪರ್ವತಗಳ ಸಾಲಿನಿಂದ ಹೊರಡುವ ಈ ನದಿ ಮೊದಲು ಪೂರ್ವಾಭಿಮುಖವಾಗಿ ಸಾಗಿ ನಂತರ ಪಶ್ಚಿಮಕ್ಕೆ ತಿರುಗಿ ಮಲಬಾರಿನ ಮೂಲಕ ಅರಬ್ಬೀ ಸಮುದ್ರ ವನ್ನು ಸೇರುತ್ತದೆ.




"https://kn.wikipedia.org/w/index.php?title=ಬರಪೊಳೆ&oldid=788163" ಇಂದ ಪಡೆಯಲ್ಪಟ್ಟಿದೆ