ಬಜಾರ್ (2019 ಚಲನಚಿತ್ರ)

ಕನ್ನಡ ಚಲನಚಿತ್ರ

ಬಜಾರ್ ಭಾರತದ ಕನ್ನಡ ಭಾಷೆಯ ಸುನಿ ನಿರ್ದೇಶನದ ಭಾರತಿ ಫಿಲಂ ಪ್ರೊಡಕ್ಷನ್ ಅಡಿಯಲ್ಲಿ ತಿಮ್ಮೇಗೌಡ ನಿರ್ಮಿಸಿರುವ ಆಕ್ಷನ್ ಕ್ರೈಮ್ ಚಲನಚಿತ್ರ.[] ಈ ಚಿತ್ರದಲ್ಲಿ ಹೊಸ ಪರಿಚಯ ಧನ್ವೀರ್ ಗೌಡ[] ಮತ್ತು ಆಧಿತಿ ಪ್ರಭುದೇವ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾಧು ಕೋಕಿಲ, ಶರತ್ ಲೋಹಿತಾಶ್ವ ಮತ್ತು ಅರುಣಾ ಬಾಲರಾಜ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. [] ಚಿತ್ರದ ಕಥಾವಸ್ತುವು ಪಾರಿವಾಳ ಓಟದಲ್ಲಿ ಒಳಗೊಂಡಿರುವ ಜೂಜಿನ ಪ್ರಕ್ರಿಯೆಯ ಬಗ್ಗೆ ಹೇಳುತ್ತದೆ. [] ಈ ಚಿತ್ರವನ್ನು ಪಾರಿವಾಳ ರೇಸ್ ನಡೆಯುವ ಬೆಂಗಳೂರು, ಮೈಸೂರು ಮತ್ತು ತುಮಕೂರಿನಂತ ನೈಜ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.[]

ಬಜಾರ್
ನಿರ್ದೇಶನಸುನಿ
ನಿರ್ಮಾಪಕತಿಮ್ಮೇಗೌಡ
ಚಿತ್ರಕಥೆಸುನಿ
ಕಥೆಎಂ.ಎಲ್. ಪ್ರಸನ್ನ
ಪಾತ್ರವರ್ಗಧನ್ವೀರ್ ಗೌಡ
ಅಧಿತಿ ಪ್ರಭುದೇವ
ಶರತ್ ಲೋಹಿತಾಶ್ವ
ಸಾಧು ಕೋಕಿಲ
ಸಂಗೀತರವಿ ಬಸ್ರೂರ್
ಛಾಯಾಗ್ರಹಣಸಂತೋಷ್ ರೈ ಪತಂಜೆ
ಸಂಕಲನಅಭಿಷೇಕ್ .ಎಂ
ಸ್ಟುಡಿಯೋಭಾರತಿ ಫಿಲಂ ಪ್ರೊಡಕ್ಷನ್ಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 1 ಫೆಬ್ರವರಿ 2019 (2019-02-01)
ದೇಶಭಾರತ
ಭಾಷೆಕನ್ನಡ

ಚಿತ್ರದ ತಾಂತ್ರಿಕ ಸಿಬ್ಬಂದಿಗಳಲ್ಲಿ ಸಂಗೀತ ಸಂಯೋಜಕರಾಗಿ ರವಿ ಬಸ್ರೂರ್, ಛಾಯಾಗ್ರಾಹಕರಾಗಿ ಸಂತೋಷ್ ರೈ ಪತಂಜೆ, ಸಂಕಲನಕಾರರಾಗಿ ಅಭಿಷೇಕ್ ಇದ್ದಾರೆ. ಆರಂಭದಲ್ಲಿ ಸಂಕ್ರಾಂತಿ ಹಬ್ಬದ ದಿನದಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು, ಆದರೆ ನಂತರ ಬಿಡುಗಡೆಯನ್ನು 1 ಫೆಬ್ರವರಿ 2019 ಕ್ಕೆ ಮುಂದೂಡಿದರು. []

ಕಥಾವಸ್ತು

ಬದಲಾಯಿಸಿ

ಕಲ್ಕಿ ಯಾವಾಗಲೂ ಪಾರಿವಾಳ ರೇಸರ್ ಆಗಬೇಕೆಂದು ಕನಸು ಕಾಣುತ್ತಾನೆ. ಅವನು ಪರಿಳನ್ನು ಪ್ರೀತಿಸುತ್ತಾನೆ. ಪರಿ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವಳು, ಫ್ಯಾಶನ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುತ್ತಾಳೆ. ಕಲ್ಕಿ ಗ್ಯಾಂಗ್ಸ್ಟರ್ ಕುಟುಂಬದಿಂದ ಬಂದವನು. ಇಬ್ಬರೂ ಪ್ರೀತಿಯಲ್ಲಿ ಬಿದ್ದಾಗ ಅವರ ಜೀವನವು ಹೇಗೆ ಬದಲಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು.

ಪಾತ್ರವರ್ಗ

ಬದಲಾಯಿಸಿ
  • ಕಲ್ಕಿ ಪತ್ರದಲ್ಲಿ ಧನವೀರ್ ಗೌಡ
  • ಪಾರಿಜಾತ/ಪರಿ ಪಾತ್ರದಲ್ಲಿ ಅಧಿತಿ ಪ್ರಭುದೇವ[]
  • ಯಜಮಾನ್ ಪಾತ್ರದಲ್ಲಿ ಶರತ್ ಲೋಹಿತಾಶ್ವ
  • ಜುಮಾಂಜಿ ಪಾತ್ರದಲ್ಲಿ ಸಾಧು ಕೋಕಿಲ
  • ಅರುಣಾ ಬಾಲರಾಜ್
  • ಮಂಜುನಾಥ ಹೆಗಡೆ
  • ಹಂಪ ಕುಮಾರ್ ಅಂಗಡಿ

ಧ್ವನಿಪಥ

ಬದಲಾಯಿಸಿ

ರವಿ ಬಸ್ರೂರ್ ಚಿತ್ರಕ್ಕಾಗಿ ಧ್ವನಿಪಥ ಮತ್ತು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಒಟ್ಟು ಮೂರು ಹಾಡುಗಳನ್ನು ಅವರು ಸಂಯೋಜಿಸಿದ್ದಾರೆ. ನಟ ದರ್ಶನ್ ಅವರು ಆನಂದ ಆಡಿಯೊ ಲೇಬಲ್ ಅಡಿಯಲ್ಲಿ ಆಡಿಯೋವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.[]

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರ(ರು)ಸಮಯ
1."ಲವ್ ಫೇಲ್ಯೂರ್"ವಿಷ್ಣು .ಎಸ್ವಿಜಯ್ ಪ್ರಕಾಶ್, ಸಂತೋಷ್ ವೆಂಕಿ05:26
2."ಏಕೋ ಏನೋ"ಸಚಿನ್ ಶೆಟ್ಟಿ ಕುಂಬಳೆಸಂಜಿತ್ ಹೆಗ್ಡೆ, ಅನುರಾಧ ಭಟ್03:52
3."ಒಂದೂರಲ್ಲಿ ಒಬ್ಬ ಯಜಮಾನ"ಕಿನ್ನಲ್ ರಾಜ್ಕೈಲಾಶ್ ಖೇರ್02:53
4."ಮಸಣ ಸೇರಾಯ್ತು"ಪ್ರಮೋದ್ ಜಯರವಿ ಬಸ್ರೂರ್03:01
5."ಮಸಣ ಸೇರಾಯ್ತು"ಪ್ರಮೋದ್ ಜಯಮೆಹಬೂಬ್ ಸಾಬ್03:01

ಉಲ್ಲೇಖಗಳು

ಬದಲಾಯಿಸಿ
  1. "Bazaar To Release On Feb 1st". Chitraloka.com. 25 January 2019. Archived from the original on 21 ಏಪ್ರಿಲ್ 2019. Retrieved 28 ಅಕ್ಟೋಬರ್ 2019.
  2. "Director Suni to cast debut actor for his next". The News Minute. 27 December 2017.
  3. "Sanjay Kapoor makes Kannada debut". The Mumbai Mirror. 27 September 2018.
  4. "Kannada film 'Bazaar' the new attraction with pigeons on sets". 4 April 2018.
  5. "Bazaar shot in real locations where pigeon racing is held". 4 May 2018.
  6. "Bazaar To Release On Feb 1st". Chitraloka.com. 25 January 2019. Archived from the original on 21 ಏಪ್ರಿಲ್ 2019. Retrieved 28 ಅಕ್ಟೋಬರ್ 2019.
  7. "In the 'market' for simplicity". 17 January 2018.
  8. "Darshan Releases The Songs Of 'Bazaar'". Chitraloka.com. 16 August 2018. Archived from the original on 21 ಏಪ್ರಿಲ್ 2019. Retrieved 28 ಅಕ್ಟೋಬರ್ 2019.


ಬಾಹ್ಯ ಕೊಂಡಿಗಳು

ಬದಲಾಯಿಸಿ