ಬಂಕಾಪುರ ನವಿಲುಧಾಮ
ಹಾವೇರಿ ನಗರದಿಂದ ೨೨ ಕಿ.ಮಿ.ದೂರದಲ್ಲಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ೪ ರಿಂದ ೨.೫ ಕಿ.ಮಿ.ದೂರದಲ್ಲಿದೆ. ಇದು ಶಿಗ್ಗಾಂವಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿದೆ. ಈ ನವಿಲುಧಾಮ ನವಿಲುಗಳ ರಕ್ಷಣೆಗಾಗಿ ನಿರ್ಮಿಸಲಾದ ರಕ್ಷಿತ ಪ್ರದೇಶವಾಗಿದೆ. ಐತಿಹಾಸಿಕ ಬಂಕಾಪುರ ಕೋಟೆ ವ್ಯಾಪ್ತಿಗೆ ಸೇರಿದ ೧೩೯ ಎಕರೆ ಪ್ರದೇಶದಲ್ಲಿ ಈ ನವಿಲುಧಾಮ ಹರಡಿದೆ. ಈ ಕೋಟೆಯ ಸುತ್ತಲೂ ಐತಿಹಾಸಿಕ ಕಂದಕ ಇರುವುದರಿಂದ ಅಲ್ಲಿ ಜಾಲಿ ಮತ್ತು ಹಿಪ್ಪೆ ಮರಗಳು ನವಿಲುಗಳಿಗೆ ಸಂತಾನ ಅಭಿವೃದ್ಧಿ ಹಾಗೂ ವಿಶ್ರಾಂತಿಗೆ ಅನುಕೂಲವಾಗಿದೆ. ಇಲ್ಲಿ ಇತಿಹಾಸ ಪ್ರಸಿದ್ಧ ನಗರೇಶ್ವರ ದೇವಸ್ಥಾನವೂ ಇದೆ.
ನವಿಲುಧಾಮ ವಿವರಸಂಪಾದಿಸಿ
1963ರಲ್ಲಿ ಕೇಂದ್ರ ಸರ್ಕಾರ ನವಿಲನ್ನು ರಾಷ್ಟ್ರೀಯ ಪಕ್ಷಿ ಎಂದು ಘೋಷಿಸಿದ ಬಳಿಕ, 1972ರ ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಈ ನವಿಲುಧಾಮ ಅಸ್ತಿತ್ವಕ್ಕೆ ಬಂದಿದೆ. 2001ರಲ್ಲಿ ಕೇಂದ್ರ ಸರ್ಕಾರ ಇದನ್ನು ಅಧಿಕೃತವಾಗಿ ನವಿಲುಧಾಮ ಎಂಬುದಾಗಿ ಘೋಷಣೆ ಮಾಡಿತು. ದೇಶದಲ್ಲಿರುವ ಎರಡು ನವಿಲುಧಾಮಗಳ ಪೈಕಿ ಇದು ಒಂದು. ಇನ್ನೊಂದು ನವಿಲುಧಾಮ ಹರಿಯಾಣದಲ್ಲಿದೆ. [೧]
ನವಿಲುಗಳ ಸಂರಕ್ಷಣೆ ಹಾಗೂ ಸಂತಾನವೃದ್ಧಿ ಕೇಂದ್ರವಾಗಿ ಇದು ಪ್ರಾಮುಖ್ಯತೆ ಪಡೆದಿದೆ. ಸುಮಾರು ಒಂದು ಸಾವಿರ ನವಿಲುಗಳು ಇಲ್ಲಿವೆ ಎಂಬುದು ಅಂದಾಜು. ಮನುಷ್ಯರ ಓಡಾಟ ಹೆಚ್ಚಿಲ್ಲದ ಕಾರಣ ಇದು ನವಿಲುಗಳ ಉತ್ತಮ ಆವಾಸ ನೆಲೆಯಾಗಿ ರೂಪುಗೊಂಡಿದೆ. ನವಿಲುಗಳಲ್ಲದೆ ಅಲ್ಲಿ ಮರಕುಟಿಕ, ಗೂಬೆ, ಬ್ಯಾಬ್ಲರ್, ಮಡಿವಾಳ ಹಕ್ಕಿ, ನೊಣ ಹಿಡುಕ, ನೈಟ್ ಜಾರ್ , ಚುಕ್ಕೆ ಮುನಿಯ, ಬಾಲದಂಡೆ ಹಕ್ಕಿ, ಇಂಡಿಯನ್ ರಾಬಿನ್, ಸ್ಪಾಟೆಡ್ ಡವ್, ಗಿಳಿ, ಮಿಂಚುಳ್ಳಿ, ಬೂದು ಮಂಗಟ್ಟೆ , ದರ್ಜಿ ಹಕ್ಕಿ ಮೊದಲಾದ ಹಕ್ಕಿಗಳನ್ನು ನೋಡಬಹುದು.
ಸ್ಥಿತಿಗತಿಸಂಪಾದಿಸಿ
2009ರಲ್ಲಿ ಮೊದಲ ಬಾರಿಗೆ ನವಿಲು ತಜ್ಞ, ಬೆಂಗಳೂರಿನ ಹರೀಶ್ ಭಟ್ ಇಲ್ಲಿನ ನವಿಲುಗಳ ಗಣತಿ ಮಾಡಿದ್ದರು. ಆಗ ಇಲ್ಲಿ 400 ನವಿಲುಗಳಿದ್ದವು.[೧] ಬಂಕಾಪುರ ನವಿಲುಧಾಮವೂ ಸೇರಿದಂತೆ ದೇಶದ ೧೦ ಪಕ್ಷಿಧಾಮಗಳು ಅವಸಾನದ ಅಂಚಿಗೆ ತಲುಪಿದೆ ಎಂದು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ವರದಿ ಮಾಡಿತ್ತು.[೨] ಆದರೆ ಅನಂತರ ಇಲ್ಲಿ ನವಿಲುಗಳ ಸಂಖ್ಯೆ ಹೆಚ್ಚಾಗುತ್ತಾ ಇದೆ ಎಂದು ಹೇಳಲಾಗುತ್ತಿದೆ.[೩]
ದೂರಮಾಹಿತಿಸಂಪಾದಿಸಿ
ಹಾವೇರಿಗೆ ರಾಜ್ಯದ ಎಲ್ಲ ಕಡೆಯಿಂದ ಉತ್ತಮ ಸಂಪರ್ಕ ವ್ಯವಸ್ಥೆ ಇದೆ. ನವಿಲುಧಾಮವು ಜಿಲ್ಲಾ ಕೇಂದ್ರದಿಂದ ೨೦ ಕಿ.ಮೀ. ಹಾಗೂ ತಾಲ್ಲೂಕು ಕೇಂದ್ರದಿಂದ ೧೨ ಕಿ.ಮೀ. ದೂರದಲ್ಲಿದೆ.
ಆಧಾರ/ಆಕರಸಂಪಾದಿಸಿ
೫ ಆಗಸ್ಟ್ ೨೦೧೦ ಸುಧಾ ವಾರಪತ್ರಿಕೆ, ಲೇ: ರಾಜೇಶ್ ಶ್ರೀವನ
ಉಲ್ಲೇಖಗಳುಸಂಪಾದಿಸಿ
- ↑ ೧.೦ ೧.೧ ಅವಸಾನದ ಅಂಚಿನಲ್ಲಿದೆ ಬಂಕಾಪುರ ನವಿಲುಧಾಮ[permanent dead link], ಉದಯವಾಣಿ, Nov 16, 2014
- ↑ ಅಪಾಯದ ಅಂಚಿನಲ್ಲಿ ಬಂಕಾಪುರ ನವಿಲುಧಾಮ, ವಿಜಯ ಕರ್ನಾಟಕ, ನವೆಂಬರ್ ೧೭, ೨೦೧೪
- ↑ ಬಂಕಾಪುರ ನವಿಲುಧಾಮದಲ್ಲಿ ನವಿಲುಗಳ ಸಂಖ್ಯೆ ಹೆಚ್ಚಳ!, Kannadiga World, ೨೨ ಡಿಸೆಂಬರ್ ೨೦೧೪
ಹೊರಕೊಂಡಿಗಳುಸಂಪಾದಿಸಿ
- ಕರ್ನಾಟಕದ ಪ್ರವಾಸಿ ತಾಣಗಳು > ಶಿಗ್ಗಾಂವ ತಾಲೂಕು Archived 2016-03-06 at the Wayback Machine., ಕಣಜ ಮಾಹಿತಿಕೋಶ