ಫ್ರಾಂಕೋಯಿಸ್ ಅರಾಗೊ

ಡೊಮಿನಿಕ್ ಫ್ರಾಂಕೋಯಿಸ್ ಜೀನ್ ಅರಾಗೊ ಅಥವಾ ಫ್ರಾಂಕೋಯಿಸ್ ಅರಾಗೊ (26 ಫೆಬ್ರವರಿ 1786 - 2 ಅಕ್ಟೋಬರ್ 1853),ಫ್ರಾನ್ಸ್‍ಗಣಿತಜ್ಞ, ಭೌತಶಾಸ್ತ್ರಜ್ಞ,ಖಗೋಳಶಾಸ್ತ್ರಜ್ಞ, ರಾಜಕಾರಣಿ.

François Arago
ಫ್ರಾಂಕೋಯಿಸ್ ಅರಾಗೊ


ಅಧಿಕಾರದ ಅವಧಿ
9 May 1848 – 24 June 1848
ಪೂರ್ವಾಧಿಕಾರಿ Jacques-Charles Dupont de l'Eure
ಉತ್ತರಾಧಿಕಾರಿ Louis-Eugène Cavaignac

ಜನನ 26 February 1786
Estagel
ರಾಜಕೀಯ ಪಕ್ಷ Moderate Republicans

ಫ್ರಾನ್ಸಿನ ಎಸ್ಟಜೆಲ್‍ನಲ್ಲಿ ಜನಿಸಿದ. ಫ್ರಾನ್ಸಿನ ರೇಖಾಂಶ ಸಂಸ್ಥೆಯ (ಬ್ಯೂರೊ ಆಫ್ ಲಾಂಜಿಟ್ಯೂಡ್ಸ್) ಕಾರ್ಯದರ್ಶಿಯಾಗಿ ಬದುಕನ್ನು ಪ್ರಾರಂಭಿಸಿ 1806ರಲ್ಲ ಡಿಲ್ಯಾಂಬರ್ ಮತ್ತು ಮೆಕ್ಕೈಸ್ ಅವರು ಪೂರ್ಣಮಾಡದೆ ಬಿಟ್ಟಿದ್ದ ಮಧ್ಯಾಹ್ನರೇಖೆಯ ಕಂಸದ ಅಳತೆಗಳನ್ನು ಪೂರೈಸುವ ಸಲುವಾಗಿ ಬಿಯೋಟ್ ಎಂಬುವನ ಜೊತೆ ಸ್ಪೇನಿಗೆ ಪ್ರಯಾಣ ಮಾಡಿದ. ಹಿಂತಿರುಗುವಾಗ ಅವನ ಹಡಗು ಬಿರುಗಾಳಿಗೆ ಸಿಲುಕಿ ನಾಶಗೊಂಡು ಅಲ್ಜಿಯಸ್ರ್ಸ್‍ನಲ್ಲಿ ಬಂಧಿತನಾದಭೌತಶಾಸ್ತ್ರ ವಿಭಾಗದಲ್ಲಿ ಪ್ರತಿಭಾಪೂರ್ಣ ಸಂಶೋಧನೆಗಳನ್ನು ನಡೆಸಿ. ಬೆಳಕಿನ ವೇಗವನ್ನು ನಿರ್ಧರಿಸಲು ತಿರುಗುವ ಕನ್ನಡಿಯ ಬಳಕೆಯ ವಿಚಾರದಲ್ಲಿ ವಿಧಾನವನ್ನು ತಿಳಿಸಿಕೊಟ್ಟ, ಈತ ಫ್ರೆನಲ್ (ಈಡಿesಟಿeಟ) ಎಂಬ ಮತ್ತೊಬ್ಬ ಭೌತವಿಜ್ಞಾನಿಯೊಡನೆ ಬೆಳಕಿನ ನಮನದ (ಡಿಫ್ರಾಕ್ಷನ್) ಮೇಲೆ ನಡೆಸಿದ ಪ್ರಯೋಗಗಳಿಂದಾಗಿ, ಬೆಳಕಿನ ತರಂಗ ಸಿದ್ಧಾಂತವನ್ನು (ವೇವ್ ಥಿಯೊರಿ) ಸ್ಥಿರೀಕರಿಸಿದ, ಕಬ್ಬಿಣವೊಂದೇ ಅಲ್ಲದೆ ಇತರ ಕೆಲವು ಲೋಹಗಳೂ ಕಾಂತೀಯ ಗುಣಗಳನ್ನು ಹೊಂದಿವೆ ಎಂಬುದನ್ನು ತೋರಿಸಿದವರಲ್ಲಿ ಈತನೇ ಮೊದಲಿಗ, ಇದರ ಸಲುವಾಗಿ ಇವನಿಗೆ ಕಾಪ್ಲಿ ಪದಕ 1825ರಲ್ಲಿ ದೊರಕಿತು. 1818-1822ರವರೆಗೆ ಶಬ್ದದ ಬಗ್ಗೆಯೂ ಕೆಲಸಮಾಡಿ ವಿದ್ಯುಚ್ಛಕ್ತಿಯಿಂದ ಕಾಂತೀಯತೆ ಉತ್ಪತ್ತಿಯಾಗುವುದನ್ನು ಕಂಡುಹಿಡಿದ.

ರಾಜಕಾರಣ

ಬದಲಾಯಿಸಿ

ಇವನು ೧೮೪೮ರಲ್ಲಿ ಅಲ್ಪಾವಧಿಗೆ ಫ್ರಾನ್ಸ್‍ನ ಪ್ರಧಾನಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದಾನೆ.

ಉಲ್ಲೇಖಗಳು

ಬದಲಾಯಿಸಿ

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: