ಫುಲ್ಶಾ
ಫುಲ್ಶಾ (ಉರ್ದು: فالسہ, ಹಿಂದಿ:फ़ालसा) ಗ್ರೇವಿಯಾದ ಒಂದು ಪ್ರಜಾತಿಯಾಗಿದೆ. ಇದನ್ನು ಮೊದಲು ಭಾರತದ ವಾರಣಾಸಿಯಲ್ಲಿ ಕಂಡುಹಿಡಿಯಲಾಯಿತು ಮತ್ತು ಬೌದ್ಧ ವಿದ್ವಾಂಸರು ಏಷ್ಯಾದ ಇತರ ದೇಶಗಳಿಗೆ ಮತ್ತು ವಿಶ್ವದ ಇತರ ಭಾಗಗಳಿಗೆ ತೆಗೆದುಕೊಂಡು ಹೋದರು.[೧][೨]
ಇದು 8 ಮೀಟರ್ ಎತ್ತರಕ್ಕೆ ಬೆಳೆಯುವ ಪೊದೆಸಸ್ಯ ಅಥವಾ ಸಣ್ಣ ಮರವಾಗಿದೆ. ಎಲೆಗಳು ವಿಶಾಲವಾಗಿ ದುಂಡಾಗಿದ್ದು, 5–18 ಸೆಂ.ಮೀ ಉದ್ದ ಮತ್ತು ಅಗಲ, ತೊಟ್ಟುಗಳು 1–1.5 ಸೆಂ.ಮೀ ಉದ್ದವಿರುತ್ತವೆ. ಹೂವುಗಳು ಹಲವು ಒಟ್ಟಾಗಿ ಮಧ್ಯಾರಂಭಿ ಮಂಜರಿಗಳಲ್ಲಿ ಉತ್ಪತ್ತಿಯಾಗುತ್ತವೆ. ಪ್ರತ್ಯೇಕ ಹೂವುಗಳು ಸುಮಾರು 2 ಸೆಂ ವ್ಯಾಸ ಹೊಂದಿದ್ದು, ಹಳದಿ ಬಣ್ಣದ್ದಾಗಿದ್ದು, ಐದು ದೊಡ್ಡದಾದ (12) ಮಿಮೀ) ಪುಷ್ಪದಳಗಳು ಮತ್ತು ಐದು ಸಣ್ಣ (4–5 ಮಿಮೀ) ದಳಗಳನ್ನು ಹೊಂದಿರುತ್ತವೆ. ಹಣ್ಣು ತಿನ್ನಲರ್ಹ ಡ್ರೂಪ್ ಆಗಿದ್ದು 5–12 ಎಂಎಂ ವ್ಯಾಸ ಹೊಂದಿದ್ದು, ಮಾಗಿದಾಗ ನೇರಳೆ ಬಣ್ಣದಿಂದ ಕಪ್ಪು ಬಣ್ಣವನ್ನು ಹೊಂದಿರುತ್ತದೆ.[೧][೩]
ಬೇಸಾಯ ಮತ್ತು ಉಪಯೋಗಗಳು
ಬದಲಾಯಿಸಿಇದರ ಸಿಹಿ ಮತ್ತು ಹುಳಿ ಆಮ್ಲೀಯ ಹಣ್ಣುಗಳಿಗಾಗಿ ಇದನ್ನು ವ್ಯಾಪಕವಾಗಿ ಬೆಳೆಸಲಾಗುತ್ತದೆ. ಇದನ್ನು ಬೇಸಿಗೆಯ ತಿಂಗಳುಗಳಲ್ಲಿ ಫಾಲ್ಸಾ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಹಣ್ಣಿನ ತಿರುಳಿನಿಂದ ಷರಬತ್ತು ಅಥವಾ ಪಾನೀಯವನ್ನು ಸಕ್ಕರೆಯೊಂದಿಗೆ ಬೆರೆಸಿ ತಯಾರಿಸಲಾಗುತ್ತದೆ. ಇದನ್ನು ಸಂಕೋಚಕ, ಜಠರೌಷಧವಾಗಿ ಮತ್ತು ತಂಪು ನೀಡುವ ಪದಾರ್ಥವಾಗಿ ಬಳಸಲಾಗುತ್ತದೆ.
ಬೇರನ್ನು ಸಂತಾಲ್ ಬುಡಕಟ್ಟು ಜನರು ಸಂಧಿವಾತಕ್ಕಾಗಿ ಬಳಸುತ್ತಾರೆ. ಕಾಂಡದ ತೊಗಟೆಯನ್ನು ಸಕ್ಕರೆಯನ್ನು ಸಂಸ್ಕರಿಸಲು, ಹಗ್ಗಗಳನ್ನು ತಯಾರಿಸಲು ಬಳಸಲಾಗುತ್ತದೆ ಮತ್ತು ಅದರ ಕಷಾಯವನ್ನು ಶಮನಕಾರಿಯಾಗಿ ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ. ಬೊಕ್ಕೆಗಳಿಗೆ ಲೇಪನವಾಗಿ ಎಲೆಗಳನ್ನು ಬಳಸಲಾಗುತ್ತದೆ. ಮೊಗ್ಗುಗಳನ್ನೂ ಕೆಲವು ವೈದ್ಯರು ವಿಧಿಸುತ್ತಾರೆ.[೪]
ಇದು ಆಸ್ಟ್ರೇಲಿಯಾ ಮತ್ತು ಫಿಲಿಪೈನ್ಸ್‌ನಲ್ಲಿ ದೇಶೀಕೃತವಾಗಿ ಸ್ಥಳೀಯವಾಗಿ ಅತಿಕ್ರಮಣಶೀಲವಾಗಿದೆ.[೨][೩][೫]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ Flora of India Grewia asiatica Archived 2014-10-06 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ೨.೦ ೨.೧ Pacific Island Ecosystems at Risk: Grewia asiatica Archived 2014-10-06 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ೩.೦ ೩.೧ Flora of Western Australia: Grewia asiatica Archived 2007-09-01 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Purdue University: Fruits of warm climates: Phalsa
- ↑ Yadav, A. K. (1999).