ಪ್ರೀತಿ ನಾಗರಾಜ್
ಪ್ರೀತಿ ನಾಗರಾಜ್ (ಆಂಗ್ಲ:Preethi Nagaraj), ಕನ್ನಡ ಮತ್ತು ಇಂಗ್ಲೀಷಿನಲ್ಲಿ ಬರೆಯುವ ಲೇಖಕಿ, ಪತ್ರಕರ್ತೆ ಮತ್ತು ಅಂಕಣ ಬರಹಗಾರ್ತಿ. ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆಗಳುಳ್ಳ ಅವರ ಬರಹಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಪ್ರಜಾವಾಣಿ' ಪತ್ರಿಕೆಯಲ್ಲಿ ಪ್ರಸಾರವಾದ ಅವರ ‛ಮಿರ್ಚಿ ಮಂಡಕ್ಕಿ[ಶಾಶ್ವತವಾಗಿ ಮಡಿದ ಕೊಂಡಿ]’ ಅಂಕಣ ಬರಹಗಳು ಅಪಾರ ಮೆಚ್ಚುಗೆಗೆ ಪಾತ್ರವಾಗಿ, ಪುಸ್ತಕವಾಗಿಯೂ ಪ್ರಕಟಗೊಂಡಿವೆ.[೧]
ಪ್ರೀತಿ ನಾಗರಾಜ್ | |
---|---|
ಜನನ | ದಾವಣಗೆರೆ, ಕರ್ನಾಟಕ |
ವೃತ್ತಿ | ಲೇಖಕಿ, ರಂಗಕರ್ಮಿ, ಅಂಕಣ ಬರಹಗಾರ್ತಿ, ಪತ್ರಕರ್ತೆ |
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮೈಸೂರು ವಿಶ್ವವಿದ್ಯಾಲಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ |
ಪ್ರಭಾವಗಳು |
ವೃತ್ತಿ
ಬದಲಾಯಿಸಿಬಾಲ್ಯದಿಂದಲೂ ರಂಗಭೂಮಿಯ ವಾತಾವರಣದಲ್ಲಿಯೇ ಬೆಳೆದ ಪ್ರೀತಿ, ರಂಗಚಟುವಟಿಕೆಗಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಪತ್ರಕರ್ತೆಯಾಗಿ ತಮ್ಮ ವೃತ್ತಿ ಆರಂಭಿಸಿದ ಪ್ರೀತಿಯವರು ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್'ಪ್ರೆಸ್, CNBC ಮುಂತಾದ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.
ಪಿ.ಶೇಷಾದ್ರಿ ನಿರ್ದೇಶನದ, ರಾಷ್ಟ್ರ ಪ್ರಶಸ್ತಿ ಪಡೆದ ಡಿಸೆಂಬರ್ 1 ಚಿತ್ರಕ್ಕೆ ಚಿತ್ರಕತೆ ಸಹಾಯಕರಾಗಿ ಕೆಲಸ ಮಾಡಿದ ಪ್ರೀತಿ, ಅದೇ ಚಿತ್ರದಲ್ಲಿ ನಟಿಸಿದ್ದಾರೆ.[೨]
ರಂಗಕರ್ಮಿ, ನಟಿ ಬಿ.ಜಯಶ್ರೀ ಅವರ ಆತ್ಮಕಥೆ "ಕಣ್ಣಾಮುಚ್ಚೆ ಕಾಡೇಗೂಡೇ" ಕೃತಿಯ ನಿರೂಪಣೆ ಮಾಡಿರುವ ಪ್ರೀತಿ, ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರಲ್ಲಿ ಪ್ರಮುಖರು.[೩]
ಕೃತಿಗಳು
ಬದಲಾಯಿಸಿ- "ಮಿರ್ಚಿ ಮಂಡಕ್ಕಿ" - ಭಾಗ ೧, ೨[೪]
- "ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯ ಪಾತ್ರ"
ಇತ್ಯಾದಿ
ಪ್ರಶಸ್ತಿಗಳು
ಬದಲಾಯಿಸಿ- 2016 - ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ("ಕಣ್ಣಾಮುಚ್ಚೆ ಕಾಡೇಗೂಡೇ" ಜೀವನ ಚರಿತ್ರೆಗೆ)[೫][೬]
- 2010 - ಸರೋಜಿನಿ ನಾಯ್ಡು ಬಹುಮಾನ ( "ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯ ಪಾತ್ರ" ಲೇಖನಕ್ಕೆ)[೭]
ಇತ್ಯಾದಿ.
ಉಲ್ಲೇಖಗಳು
ಬದಲಾಯಿಸಿ- ↑ "Mirchi Mandakki - Prajavani". Prajavani.net.[ಶಾಶ್ವತವಾಗಿ ಮಡಿದ ಕೊಂಡಿ]
- ↑ "Interview of Preethi Nagaraj". Bangalore first.in. May 3, 2014.
- ↑ "‛ಕಣ್ಣಾಮುಚ್ಚೆ ಕಾಡೇ ಗೂಡೇ' - ಪ್ರೀತಿ ನಾಗರಾಜ". pustakapremi.com. Feb 29, 2020.
- ↑ "ಪ್ರೀತಿ ನಾಗರಾಜ್ ಅವರ 'ಮಿರ್ಚಿ ಮಂಡಕ್ಕಿ'". www.navakarnatakaonline.com. Archived from the original on 2020-08-10. Retrieved 2020-09-06.
- ↑ "ಪ್ರೀತಿ ನಾಗರಾಜ್, ಶಾಂತಿ ಅಪ್ಪಣ್ಣ ಸೇರಿದಂತೆ ಹಲವರಿಗೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ' ಘೋಷಣೆ". dailyhunt.com. March 1, 2018.
- ↑ "Preethi Nagaraj at Mysore Literature Festival". www.mysoreliteraturefestival.com.
- ↑ "ಲೇಖಕಿ ಪ್ರೀತಿ ನಾಗರಾಜ್". Bookbrahma.com.