ಪ್ರಹ್ಲಾದ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಪ್ರಹ್ಲಾದ |
---|
"ಪ್ರಹ್ಲಾದ" ೧೯೪೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ.[೧]
ಕಥಾ ಸಾರಾಂಶ
ಬದಲಾಯಿಸಿಹರಿ ಭಕ್ತನಾದ ಪ್ರಹ್ಲಾದ, ಹರಿಯ ಕಡು ವೈರಿಯಾದ ತಂದೆ ಹಿರಣ್ಯಕಶಿಪುವಿನ ನಡುವೆ ಸಂಘರ್ಷ. ಅಂತ್ಯದಲ್ಲಿ ಹರಿಯು ಬಾಲಕನ ಭಕ್ತಿಗೆ ಒಲಿದು ನರಸಿಂಹಾವತಾರದಲ್ಲಿ ಕಂಬದಿಂದ ಸೀಳಿ ಬಂದು ಹಿರಣ್ಯಕಶಿಪುವನ್ನು ಸಂಹರಿಸುವುದೇ ಈ ಚಿತ್ರದ ಕಥಾ ಹಂದರ. ಇದೊಂದು ಪೌರಾಣಿಕ ಕಥೆಯ ಆಧಾರಿತವಾಗಿದೆ.
ವಿಶೇಷತೆ
ಬದಲಾಯಿಸಿಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಡಾ.ರಾಜ್‌ಕುಮಾರ ತೆರಯಲ್ಲಿ ಕಂಡಿರುವ ಮೊದಲ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಇವರು ತಮ್ಮ ಸಹೋದರ ಎಸ್.ಪಿ.ವರದರಾಜ್ ಅವರೊಂದಿಗೆ ಗುರುಕುಲದ ವಿಧ್ಯಾರ್ಥಿಯಾಗಿ ಅಭಿನಯಿಸಿದ್ದಾರೆ. ಜೊತೆಗೆ ಇವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಅಖಂಡಾಸುರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.[೨]
ನಿರ್ಮಾಣ
ಬದಲಾಯಿಸಿನ್ಯೂಟೋನ್ ಹಾಗೂ ನೆಪ್ಚೂನ್ ಸ್ಟೂಡಿಯೋ, ಮದರಾಸಿನಲ್ಲಿ ತಯಾರಾದ ಈ ಚಿತ್ರವನ್ನು ಕಲೈವಾಣಿ ಫಿಲಂಸ್ ಲಾಂಛನದಲ್ಲಿ ಕೆ.ಸುಬ್ರ್ಹಮಣ್ಯಂ ನಿರ್ಮಿಸಿದರು. ಚಲನಚಿತ್ರ ಸೆನ್ಸಾರ್ ಆದ ಬಳಿಕ ೧೧,೦೦೦ ಅಡಿಗಳಷ್ಟು ಉದ್ದವಿತ್ತು.
ಉಲ್ಲೇಖ
ಬದಲಾಯಿಸಿ- ↑ "Bhakta Prahlada". chiloka.com. Retrieved 2015-02-09.
- ↑ "'ಬೇಡರ ಕಣ್ಣಪ್ಪ' ಚಿತ್ರಕ್ಕೂ ಮೊದಲು ಡಾ. ರಾಜ್ ನಟಿಸಿದ್ದ ಆ ಎರಡು ಸಿನಿಮಾಗಳು ಯಾವುವು?" [Before 'Bedara Kannappa' What were those two movies that Dr. Raj starred in?] (in Kannada). 5 May 2020. Archived from the original on 15 September 2020. Retrieved 12 April 2021.
{{cite web}}
: CS1 maint: unrecognized language (link)