ಪೃಥ್ವಿ ವಲ್ಲಭ
ಪ್ರಥ್ವಿ ವಲ್ಲಭ ( IAST : Pṛthvīvallabha ), ಅಥವಾ ವಲ್ಲಭ ರಾಜ [೧] ಎನ್ನುವುದು ಇಂದಿನ ಕಾಲದ ಭಾರತದಲ್ಲಿ ಆಳಿದ ವಾತಾಪಿಯ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಅವರ ಉತ್ತರಾಧಿಕಾರಿಗಳು ಅಳವಡಿಸಿಕೊಂಡಿದ್ದ ಬಿರುದು.
ವಾತಾಪಿಯ ಚಾಲುಕ್ಯರು
ಬದಲಾಯಿಸಿವಾತಾಪಿಯ ಚಾಲುಕ್ಯ ರಾಜವಂಶದ ಸಾರ್ವಭೌಮ ಆಡಳಿತಗಾರೆಲ್ಲರೂ ಶ್ರೀ-ಪ್ರಥ್ವಿ-ವಲ್ಲಭ ಎಂಬ ಬಿರುದನ್ನು ಹೊಂದಿದ್ದರು. ಶ್ರೀ-ಪ್ರಥ್ವಿ-ವಲ್ಲಭ ಎಂದರೆ ‘ಅದೃಷ್ಟ ಮತ್ತು ಭೂಮಿ ದೇವತೆಯ ಪತಿ’ (ಅಂದರೆ ವಿಷ್ಣು ). [೨] ಮಹಾಕೂಟ ಶಾಸನಗಳ ಪ್ರಕಾರ ಮಂಗಳೇಶನು ನಿಖರವಾಗಿ ಪ್ರಥ್ವಿ-ವಲ್ಲಭ ಬಿರುದನ್ನು ಹೊಂದಿದ್ದನು. [೨] ಚಾಲುಕ್ಯ ರಾಜ್ಯಪಾಲ ಜಯಾಶ್ರಯ ಮಂಗಳರಸನ 7 ಎಪ್ರಿಲ್ 691ರ ( ಶಕ ಯುಗದ ವರ್ಷ 613) ಮಾನೊರ್ ಶಾಸನವು ಆತನ ಬಿರುದುಗಳಲ್ಲಿ ಪ್ರಥ್ವಿ-ವಲ್ಲಭ ಒಂದೆಂದು ಉಲ್ಲೇಖಿಸಿದೆ. ಅವನ ಮಗ ಅವನಿಜನಾಶ್ರಯ ಪುಲಕೇಶಿನ್ ಕೂಡ ಅದೇ ಬಿರುದನ್ನು ಹೊಂದಿದ್ದನು. [೨]
ರಾಷ್ಟ್ರಕೂಟರು
ಬದಲಾಯಿಸಿರಾಷ್ಟ್ರಕೂಟರಲ್ಲಿ, ದಖ್ಖನ್ನಿನ 8ನೇ ಶತಮಾನದ ರಾಜ ಮತ್ತು ರಾಷ್ಟ್ರಕೂಟ ರಾಜವಂಶದ ಸ್ಥಾಪಕನಾಗಿದ್ದ ದಂತಿದುರ್ಗನು ಮೊದಲನೆಯದಾಗಿ ಈ ಬಿರುದನ್ನು ಹೊಂದಿದ್ದನು. ಪೃಥ್ವಿ ಎಂದರೆ ‘ಭೂಮಿ’ ಮತ್ತು ವಲ್ಲಭ ಎಂದರೆ ‘ಮನೆಯ ಮುಖ್ಯಸ್ಥ’ ಅಥವಾ ‘ಪ್ರೇಮಿ’. ಆದ್ದರಿಂದ ಈ ಬಿರುದನ್ನು ಭೂಮಿಯ ಒಡೆಯ ಎಂಬುದಾಗಿ ತಿಳಿದುಕೊಳ್ಳಬಹುದು. ಪ್ರಥ್ವಿ ಎಂಬುದೂ ವಿಷ್ಣುವಿನ ನಿಯಂತ್ರಣದಲ್ಲಿದ್ದ ಭೂಮಿ ದೇವತೆಯ ಹೆಸರಾಗಿರುವುದರಿಂದ, ಈ ಬಿರುದು ದಂತಿದುರ್ಗ ಮತ್ತು ಆತನ ಉತ್ತರಾಧಿಕಾರಿಗಳನ್ನು ಹಿಂದೂ ದೇವರಾದ ವಿಷ್ಣುವಿಗೆ ಹೋಲಿಸುವಂತಿತ್ತು. ಈ ಬಿರುದನ್ನು ವಲ್ಲಭ ಎಂಬುದಾಗಿ ಸಂಕ್ಷಿಪ್ತಗೊಳಿಸಲಾಯಿತು ಮತ್ತು ಮುಸ್ಲಿಮ್ ವೀಕ್ಷಕರು ಬಲ್ಲಾರ ಎಂಬುದಾಗಿ ಬರೆದಿದ್ದಾರೆ. [೩]
ನಂತರದ ರಾಜವಂಶಗಳು
ಬದಲಾಯಿಸಿಈ ಬಿರುದನ್ನು ರಾಷ್ಟ್ರಕೂಟರ ನಂತರ ದಖ್ಖನ್ನನ್ನು ಆಳಿದ ಕಲ್ಯಾಣಿಯ ಚಾಲುಕ್ಯರೂ ಪಡೆದುಕೊಂಡಿದ್ದರು. [೪] ಮಾಳ್ವಾದಲ್ಲಿ ರಾಷ್ಟ್ರಕೂಟರ ನಂತರ ಅಧಿಕಾರಕ್ಕೆ ಬಂದ ಪರಮರ ರಾಜವಂಶದ ಮುಂಜ ಯಾನೆ ವಾಕ್ಪತಿಯವರೂ ಈ ಬಿರುದನ್ನು ಬಳಸಿಕೊಂಡಿದ್ದರು. [೫]
ಉಲ್ಲೇಖಗಳು
ಬದಲಾಯಿಸಿ- ↑ Inden 2000.
- ↑ ೨.೦ ೨.೧ ೨.೨ Durga Prasad Dikshit 1980.
- ↑ India, a History by John Keay. Published by Harper Perennial in 2000. Page 191.
- ↑ Negotiating the Past in the Past: Identity, Memory, and Landscape in Archaeological Research. University of Arizona Press. 2007. p. 174. ISBN 978-081652670-3.
- ↑ Yadava, Ganga Prasad (1982). Dhanapāla and His Times: A Socio-cultural Study Based Upon His Works. Concept. p. 36.