ಪುದುಚೇರಿ ವಿಧಾನಸಭೆ
ಪುದುಚೇರಿಯ ಭಾರತೀಯ ಒಕ್ಕೂಟದ ಭೂಪ್ರದೇಶದ ಏಕಸಭೆಯ ಶಾಸಕಾಂಗ
ಈಗಿನ ಪುದುಚೇರಿ ವಿಧಾನಸಭೆ
ಬದಲಾಯಿಸಿ- ಪುದುಚೇರಿ, ಕರೈಕಲ್, ಮಾಹೆ ಮತ್ತು ಯಾಣಮ್ -ಎಂಬ ಭಾರತೀಯ ಕೇಂದ್ರಾಡಳಿತ ಪ್ರದೇಶ(ಯು.ಟಿ.)ವಾಗಿದೆ. ಪುದುಚೇರಿ ಯು.ಟಿ. ವಿಸ್ತೀರ್ಣ ಪುದುಚೆರಿಯ ನಾಲ್ಕು ಜಿಲ್ಲೆಗಳನ್ನು ಒಳಗೊಂಡಿರುತ್ತದೆ. ಈ ನಾಲ್ಕು ಜಿಲ್ಲೆಗಳು ಮೊದಲು ಫ್ರೆಂಚ್ ಆಳ್ವಿಕೆಗೊಳಪಟ್ಟಿದ್ದವು. ಭೌಗೋಳಿಕವಾಗಿ, ತಮಿಳುನಾಡಿನ ಜಿಲ್ಲೆಯಿಂದ ನಿಂದ ಸುತ್ತುವರೆದ, ಪುದುಚೇರಿ ಮತ್ತು ಕಾರೈಕಾಲ್ ಜಿಲ್ಲೆಗಳು; ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಿಂದ ಆವೃತವಾದ ಯಾಣಮ್, ಜಿಲ್ಲೆ; ಮತ್ತು ಕೇರಳದ ಜಿಲ್ಲೆಗಳ ಗಡಿಯ ಮಾಹೆ ಜಿಲ್ಲೆ; ಈ ಜಿಲ್ಲೆಗಳು 1962 ರಲ್ಲಿ ಭಾರತದಲ್ಲಿ ಏಕೀಕರಣಗೊಂಡವು [೧] [೨]
- ಆಡಳಿತ ಸುಲಭವಾಗಿಸಲು, ಫ್ರೆಂಚ್ ಆಳ್ವಿಕೆಯಲ್ಲಿ ಈ ನಾಲ್ಕು ಜಿಲ್ಲೆಗಳ ಪ್ರದೇಶಗಳನ್ನು 39 ವಿಧಾನಸಭಾ ಕ್ಷೇತ್ರಗಳಾಗಿ ವಿಭಜಿಸಲಾಗಿತ್ತು. ಭಾರತದ ಕೇಂದ್ರಾಡಳಿತ ಪ್ರದೇಶವಾದ ತಕ್ಷಣ ಪುದುಚೇರಿ ಭಾರತದ ಸೀಮಾ ನಿರ್ಣಯ ಆಯೋಗ 2005 ರಲ್ಲಿ 30 ವಿಧಾನಸಭಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಪುನರ್ರಚಿಸಲಾಯಿತು.
ಫ್ರೆಂಚ್ ಆಳ್ವಿಕೆಯಲ್ಲಿ ಅಸೆಂಬ್ಲಿ
ಬದಲಾಯಿಸಿ1946 ರಲ್ಲಿ, ಫ್ರೆಂಚ್ ಭಾರತ (ಇಂಡೆ ಫ್ರಾಂಕಾಯಿಸ್) ಫ್ರಾನ್ಸ್’ನ ಸಾಗರೋತ್ತರದ ಪ್ರದೇಶ ಆಯಿತು. ನಂತರ ಪ್ರತಿನಿಧಿಗಳ ವಿಧಾನಸಭೆ ಸ್ಥಾಪಿಸಲಾಯಿತು. ಚಂದ್ರನಾಗೂರಿನ ಐದು ಅಸೆಂಬ್ಲಿ ಸ್ಥಾನ ಸೇರಿದಂತೆ 44 ಸ್ಥಾನಗಳನ್ನು ಹೊಂದಿತ್ತು. ಪಾಂಡಿಚೇರಿ 22 ಸ್ಥಾನಗಳನ್ನು ಹೊಂದಿತ್ತು ಈ ವಿಧಾನಸಭೆಯಲ್ಲಿ ಕಾರೈಕಾಲ್ 12 ಸ್ಥಾನಗಳ ಪ್ರತಿನಿಧಿಗಳಿದ್ದರು ಮಾಹೆ, ಮಾಹೆ ಟೌನ್,ಪಲ್ಲೊರ್ ಮತ್ತು ಪಂಡಕಲ್, ಈ ಸ್ಥಾನಗಳ ಮೂರು ಪ್ರತಿನಿಧಿಗಳಿದ್ದರು. ಯನಾವೊನ್ ಕಂಕಲ್ ಪೇಟ್ ಮತ್ತು ಆದಿ ಆಂದ್ರಪೇಟ್ ಎಂಬ ಎರಡು ಸ್ಥಾನಗಳನ್ನು ಹೊಂದಿತ್ತು.[೩]
ಭಾರತಕ್ಕೆ ಸೇರ್ಪಡೆ-ಕೇಂದ್ರಾಡಳಿತ
ಬದಲಾಯಿಸಿ- ವಿಲೀನ ಮತ್ತು ಕೇಂದ್ರಾಡಳಿತ ಪ್ರದೇಶವಾಗಿ ರಚನೆ
- ಫ್ರೆಂಚ್ ಸರ್ಕಾರ ನವೆಂಬರ್ 1954ರಲ್ಲಿ ‘ವಸ್ತುಸ್ಥಿತಿ ರಕ್ಷಣೆ’ ಒಪ್ಪಂದದ ಅನ್ವಯ ಭಾರತೀಯ ಒಕ್ಕೂಟಕ್ಕೆ ನಾಲ್ಕು ಪರಾವೃತ ಪ್ರದೇಶಗಳನ್ನು ವರ್ಗಾಯಿಸಿತು. ಈ ಪ್ರದೇಶಗಳು 16 ಆಗಸ್ಟ್ 1962 ರಂದು ಭಾರತದಲ್ಲಿ ವಿಲೀನವಾಯಿತು.
- ನಂತರ ಜನರು ಜನಪ್ರಿಯ ಸರ್ಕಾರಬೇಕೆಂದು ಹಂಬಲಿಸಿದ ಕಾರಣ ಭಾರತೀಯ ಸಂಸತ್ತಿನಲ್ಲಿ ‘ಕೇಂದ್ರಾಡಳಿತ ಪ್ರದೇಶಗಳ ಕಾಯಿದೆ, 1963’ ಸಂಸತ್ತಿನಲ್ಲಿ ಮಂಜೂರು ಮಾಡಿತು. ಜುಲೈ 1963 1 ರಂದು ಅದು ಜಾರಿಗೆ ಬಂದಿತು. ದೇಶದ ಉಳಿದ ಚಾಲ್ತಿಯಲ್ಲಿರುವ ಸರ್ಕಾರದ ವಿಧಾನವು ಈ ಪ್ರದೇಶದಕ್ಕೂ ಅನ್ವಯಿಸಲಾಯಿತು. ಆದರೆ ಅದು ವಿಧಿಸಲಾದ ಕೆಲವು ಮಿತಿಗಳಿಗೆ (ಸಂವಿಧಾನದ ವಿಧಿ 239) ಒಳಪಟ್ಟಿರುತ್ತದೆ. ಭಾರತದ ಅಧ್ಯಕ್ಷರು ಈ ಪ್ರದೇಶದ ಆಡಳಿತದ ಮುಖ್ಯಸ್ಥರನ್ನು ಸೂಕ್ತ ಪದನಾಮವುಳ್ಳವರನ್ನು ಆಡಳಿತಗಾರನಾಗಿ ನೇಮಿಸುವರು ಮುಂತಾದ ನಿಯಮಗಳಿವೆ. ಅಧ್ಯಕ್ಷರು ಮುಖ್ಯಮಂತ್ರಿಯನ್ನು ಸಹ ನೇಮಕ ಮಾಡುವರು. ಮುಖ್ಯಮಂತ್ರಿಯ ಸಲಹೆಯಂತೆ ಅಧ್ಯಕ್ಷರು ಇತರ ಮಂತ್ರಿಗಳನ್ನು ನೇಮಕ ಮಾಡುತ್ತಾರೆ.[೪]
ಸರ್ಕಾರ ಮತ್ತು ಆಡಳಿತ
ಬದಲಾಯಿಸಿ- ಕೇಂದ್ರ ಸಕಾರವು ಅದರ ಪ್ರತಿನಿಧಿಯಾಗಿ ಲೆಫ್ಟಿನೆಂಟ್ ಗವರ್ನರ್’ರನ್ನು ನೇಮಿಸುತ್ತದೆ. ರಂಗಪಿಲ್ಲೆ ರಸ್ತೆಯಲ್ಲಿರುವ ಪುದುಚೆರಿಯ ಮಾಜಿ ಫ್ರೆಂಚ್ ಗವರ್ನರ್ ಜನರಲ್ ಅರಮನೆ ಅವರ ವಾಸಸ್ಥಳ. ಕೇಂದ್ರ ಸರ್ಕಾರವು ಕೇಂದ್ರ ಬಜೆಟ್’ನಿಂದ ಪುದುಚೆರಿ ಆಡಳಿತಕ್ಕೆ, ನೇರವಾಗಿ ಹೆಚ್ಚನ ಹಣಕಾಸಿನ ಅನುದಾನ ನೀಡುವುದು. ಕೇಂದ್ರ ಸರ್ಕಾರವು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ,ಆ ಪ್ರದೇಶಗಳ ಆರ್ಥಿಕ ಯೋಗಕ್ಷೇಮ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಪರಿಣಾಮವಾಗಿ, ಪುದುಚೇರಿ ಕಡಿಮೆ ತೆರಿಗೆ ವಿಧಿಸುವ ಅವಕಾಶ, ಸೌಲಭ್ಯ ಹೊಂದಿದೆ.
ಚುನಾವಣಾ ಕ್ಷೇತ್ರಗಳ ನಿರ್ಣಯ
ಬದಲಾಯಿಸಿ- ಪುದುಚೇರಿ ಶಾಸನಸಭೆಯ ರಚನೆ ಏಕಸಭೆಯ ವ್ಯಸ್ಥೆಯದಾಗಿದೆ. ವಿಧಾನಸಭೆಯ 30 ಸದಸ್ಯರನ್ನು ಒಳಗೊಂಡಿದೆ. ವಯಸ್ಕರಿಗೆ ಮತದಾನದ ಆಧಾರದ ಮೇಲೆ ಜನರು ನೇರವಾಗಿ ಎಲ್ಲಾ ಸದಸ್ಯರ ಆಯ್ಕೆ ಮಾಡುವರು.
- ಅವಧಿಗೆ ಮೊದಲು ರದ್ದಾದ ಹೊರತು ಕೇಂದ್ರಾಡಳಿತ ಪ್ರದೇಶಗಳಿಗೆ ಕಾಯಿದೆ 1963 ರಂತೆ ವಿಧಾನಸಭೆಗೆ ಐದು ವರ್ಷಗಳ ಅವಧಿ ಹೊಂದಿದೆ. ಸಾಮಾನ್ಯ ಅಧಿಕಾರಾವಧಿಯಲ್ಲಿ ಸರ್ಕಾರದ ವಿಧಾನಸಭೆಯಲ್ಲಿ 16 ಸಮಿತಿಗಳು ಇವೆ.
- ಪುದುಚೆರಿ ಸಂಸತ್ತಿನ ಕ್ಷೇತ್ರ ಹಾಗೂ ವಿಧಾನಸಭಾ ಕ್ಷೇತ್ರಗಳನ್ನು, ಭಾರತದ ಸೀಮಾ ನಿರ್ಣಯ ಆಯೋಗ ಭಾರತದ 2001ರ ಜನಗಣತಿಯಲ್ಲಿ ಪಡೆದ ಮಾಹಿತಿ ಆಧರಿಸಿ ವಿನ್ಯಾಸಗೊಳಿಸಿದ್ದಾರೆ. [೫][೬]
ಗಡಿನಿರ್ಣಯದ ನಂತರ ಕ್ಷೇತ್ರಗಳು
ಬದಲಾಯಿಸಿ- ಸೀಮಾ ನಿರ್ಣಯದ ನಂತರ ಪುದುಚೇರಿ ಲೋಕಸಭಾ ಕ್ಷೇತ್ರವನ್ನು 30 ವಿಧಾನಸಭಾ ಕ್ಷೇತ್ರಗಳಾಗಿ ವಿಭಾಗಿಸಲಾಗಿದೆ. ಈಗ, ಯಾಣಂ ಮತ್ತು ಮಾಹೆ ಜಿಲ್ಲೆಗಳು ಪ್ರತಿಯೊಂದೂ ಒಂದು ಕ್ಷೇತ್ರವಾಗಿದೆ. ಅವೆಂದರೆ ಅನುಕ್ರಮವಾಗಿ ಯಾಣಂ ಕ್ಷೇತ್ರ ಮತ್ತು ಮಾಹೆ ಕ್ಷೇತ್ರ. ಕಾರೈಕಾಲ್ ಜಿಲ್ಲೆಯು 5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ, ಅವೆಂದರೆ ನೆಡುಂಗಾಡು, ತಿರುನಲ್ಲರ್, ಕರೈಕಲ್ ಉತ್ತರ, ಕರೈಕಲ್ ದಕ್ಷಿಣ ಮತ್ತು ನೆರವ್ಯ ಟಿಆರ್ ಪಟ್ಟಿನಮ್; ಪುದುಚೇರಿ ಜಿಲ್ಲೆಯ ಪ್ರದೇಶವನ್ನು 23 ವಿಧಾನಸಭಾ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ. ಅವೆಂದರೆ ಮನ್ನಡಿಪೇಟ್, ತಿರುಬುವನೈ, ಓಸುಡು, ಮಂಗಳಂ, ವಿಲ್ಲಿಯಾನೂರ್, ಓಳುಕರೈ, ಕದಿರ್ಕಮಮ್, ಇಂದಿರಾನಗರ, ತಟ್ಟಂಚವಾಡಿ, ಕಾಮರಾಜ್ ನಗರಲಾಸ್’ಪೇಟ್, ಕ್ಕಲಾಪೇಟ್, ಮುತ್ತಿಯಲ್ ಪೇಟ್, ರಾಜಭವನ, ಔಪಲಮ್, ಓರ್ಲಿಯಾಮ್ ಪೇಠ್, ನೆಲ್ಲಿತೊಪೆ,ಮುದಲಿಯಾರ್ಪೆಟ್ , ಅರಿಯಾಂಕುಪ್ಪಮ್, ಮನವೇಲಿ, ಎಂಬಾಳಂ, ನೆಟ್ಟಪಾಕ್ಕಂ ಮತ್ತು ಬಹೊವರ್. ತಿರುಬುವನೈ, ಓಸುಡು, ಎಂಬಾಳಂ, ನೆಟ್ಟಪಾಕ್ಕಂ ಮತ್ತು ನೆಡುಂಗಾಡು ಚುನಾವಣಾ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ(ಎಸ್ಸಿ) ಅಭ್ಯರ್ಥಿಗಳಿಗಾಗಿ ಕಾಯ್ದಿರಿಸಲಾಗಿದೆ. [೬]
ನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ Pouducherry Legislative Assembly
- ↑ Election Commission of India. 30 March 2005.
- ↑ Delimitation of Parliamentary and Assembly Constituencies in the UT of Pondicherry on the basis of 2001
- ↑ "ಆರ್ಕೈವ್ ನಕಲು". Archived from the original on 2007-09-27. Retrieved 2016-04-04.
- ↑ Delimitation of Parliamentary and Assembly Constituencies in the UT of Pondicherry on the basis of 2001 Census" (PDF)
- ↑ Election Commission of India. 30 March 2005. Retrieved 25 January 2013