ಪುದುಚೇರಿ ವಿಧಾನಸಭೆ ಚುನಾವಣೆ ೨೦೧೧

ಮೂವತ್ತು ಕ್ಷೇತ್ರಗಳಿಂದ ಸದಸ್ಯರನ್ನು ಚುನಾಯಿಸುವ ಭಾರತೀಯ ಕೇಂದ್ರಾಡಳಿತ ಪ್ರದೇಶದ ಪುದುಚೇರಿ ವಿಧಾನಸಭೆಗೆ ಚುನಾವಣೆಯು ಏಪ್ರಿಲ್ 13,2011 ರಂದು ನಡೆಯಿತು. []

  • ಚುನಾವಣೆಗೆ ನಾಮಪತ್ರ ಪೂರ್ಣಗೊಳಿಸಲು ಕೊನೆಯ ದಿನ ಮಾರ್ಚ್ 26, 2011 ನಿಗದಿತ.
  • ಸಂಭವನೀಯ ನಾಮನಿರ್ದೇಶನಗಳ ವಾಪಸಾತಿಗೆ ಕೊನೆಯ ದಿನ ಮಾರ್ಚ್ 30, 2011. [೧]
  • ಎಣಿಕೆಯು ಮೇ 13, 2011 ಕ್ಕೆ ನಿಗದಿಯಾಗಿತ್ತು [೧]

ಅಭ್ಯರ್ಥಿಗಳು

ಬದಲಾಯಿಸಿ
  • ಒಟ್ಟಾರೆಯಾಗಿ 187 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದ ಅಭ್ಯರ್ಥಿಗಳಿಗೆ ಹೋಲಿಸಿದರೆ, ಯಾಣಮ್'ನಲ್ಲಿ ಒಟ್ಟು ಹತ್ತು ಅಭ್ಯರ್ಥಿಗಳಿದ್ದು ಅದೇ ಅತ್ಯಧಿಕವಾಗಿತ್ತು. ಇಂದಿರಾನಗರ ಕ್ಷೇತ್ರದಲ್ಲಿ ಕೇವಲ ಎರಡು ಅಭ್ಯರ್ಥಿಗಳು ಮಾತ್ರಾ ಇದ್ದರು; ಮಾಜಿ ಮುಖ್ಯಮಂತ್ರಿ ಎನ್ ರಂಗಸ್ವಾಮಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಮತ್ತು ಎ.ಕೆ.ಡಿ. ಅರ್'ಮೌಗಮೆ, ಮಾಜಿ ಮುಖ್ಯಮಂತ್ರಿ ಎನ್ ರಂಗಸ್ವಾಮಿ ಕದಿರ್ಕಮಮ್ ಕ್ಷೇತ್ರದಲ್ಲೂ ಸ್ಪರ್ಧಿಸಿದ್ದರು.

ಪ್ರಚಾರ

ಬದಲಾಯಿಸಿ
  • ಸ್ಪರ್ಧಿಸಿರುವ ಪಕ್ಷಗಳ ಪೈಕಿ ಎರಡು ಪ್ರಮುಖ ಒಕ್ಕೂಟಗಳಿದ್ದವು. ಒಂದು ಕಡೆ, ಸ್ಥಾನಿಕ ಮುಖ್ಯಮಂತ್ರಿ ವಿ ವೈಥಲಿಂಗಮ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಕಾಂಗ್ರೆಸ್ 17 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ದ್ರಾವಿಡ ಮುನ್ನೇತ್ರ ಕಳಗಂ (10 ಸ್ಥಾನಗಳಲ್ಲಿ ), ಪಟ್ಟಲಿ ಮಕ್ಕಳ್ ಕಚ್ಚಿ (2 ಸ್ಥಾನಗಳು), ವಿದುತಲೈ ಚರುತೈಗಲ್ ಕಚ್ಚಿ ಒಳಗೊಂಡಿರುವ (1 ಸ್ಥಾನ),ಇವುಗಳನ್ನು ಒಳಗೊಂಡ ಒಕ್ಕೂಟ. ಚುನಾವಣೆಯಲ್ಲಿ ಸ್ಪರ್ಧಿಸುವ ಇತರ ಪ್ರಮುಖ ಬಣ; ರಂಗಸ್ವಾಮಿ ಎನ್, ಅಖಿಲ ಭಾರತ ಎನ್ಆರ್ ಕಾಂಗ್ರೆಸ್ ಒಳಗೊಂಡಿರುವ ಮೈತ್ರಿ (17 ಸ್ಥಾನಗಳಲ್ಲಿ ಸ್ಪರ್ಧೆ), ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (10 ಸ್ಥಾನಗಳಲ್ಲಿ ), ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)(1 ಸ್ಥಾನ ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (1 ಸ್ಥಾನ) ಮತ್ತು ಮರಪೊಕ್ಕು ದ್ರಾವಿಡ ಕಳಗಂ (1 ಸ್ಥಾನ). ಮೂರನೆಯ ಶಕ್ತಿಯೆಂದರೆ ಭಾರತೀಯ ಜನತಾ ಪಕ್ಷ- ಯಾವುದೇ ಎರಡು ದೊಡ್ಡ ಬಣಕ್ಕೆ ಒಗ್ಗೂಡಿಲ್ಲ; ಸ್ವಂತ ಶಕ್ತಿಯಿಂದ ಇಪ್ಪತ್ತು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಕಣದಲ್ಲಿ 78 ಸ್ವತಂತ್ರ ಅಭ್ಯರ್ಥಿಗಳಿದ್ದರು.
  • ಹಲವು ಪ್ರತಿಷ್ಠಿತ ರಾಷ್ಟ್ರೀಯ ರಾಜಕಾರಣಿಗಳು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಸೋನಿಯಾ ಗಾಂಧಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು), ರಾಹುಲ್ ಗಾಂಧಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ), ಪ್ರಣಬ್ ಮುಖರ್ಜಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೇಂದ್ರ ಸಚಿವ), ನಿತಿನ್ ಗಡ್ಕರಿ (ಬಿಜೆಪಿ ಅಧ್ಯಕ್ಷ), ಸುಷ್ಮಾ ಸ್ವರಾಜ್ (ಬಿಜೆಪಿ ಎಂ.ಪಿ) ವೆಂಕಯ್ಯ ನಾಯ್ಡು (ಬಿಜೆಪಿ ಮಾಜಿ ಅಧ್ಯಕ್ಷ), ಎಂ. ಕರುಣಾನಿಧಿ (ತಮಿಳುನಾಡಿನ ಡಿಎಂಕೆ ಮುಖ್ಯಮಂತ್ರಿ), ಜೆ.ಜಯಲಲಿತಾ (ಎಐಎಡಿಎಂಕೆ ನಾಯಕಿ) ವಿಜಯಕಾಂತ್ (ಡಿಎಂಡಿಕೆ ನಾಯಕ). The Hindu. []

ಫಲಿತಾಂಶ

ಬದಲಾಯಿಸಿ
ಪಕ್ಷ/ಒಕ್ಕೂಟ ಸ್ಪರ್ಧೆ ಫಲಿತಾಂ‍ಶ ಬದಲಾವಣೆ ಶೇಕಡ ಗಳಕೆ(%)
ಅಖಿಲ ಭಾರತ ಎನ್ಆರ್ ಕಾಂಗ್ರೆಸ್ + 17 15 15 (ಹೊಸಪಕ್ಷ)  31.75%
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)+ 17 7 3   25.06%
ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ + 10 5 2  _
ದ್ರಾವಿಡ ಮುನ್ನೇತ್ರ ಕಳಗಂ 10 2 5   _
ಸ್ವತಂತ್ರ ಅಭ್ಯರ್ಥಿಗಳು (ರಾಜಕಾರಣಿಗಳು) 79 1 2  
  • ಎನ್ ರಂಗಸ್ವಾಮಿಯ ಅಖಿಲ ಭಾರತ ಎನ್ಆರ್ ಕಾಂಗ್ರೆಸ್ ಪಕ್ಷ 17 ಸ್ಥಾನಗಳ ಪೈಕಿ 15 ಸೀಟುಗಳನ್ನು ಗೆದ್ದುಕೊಂಡಿತು, ಮತ್ತು ಅವರ ಮೈತ್ರಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ 10 ಸ್ಥಾನಗಳ ಪೈಕಿ 5 ಸೀಟುಗಳನ್ನು ಗೆದ್ದುಕೊಂಡಿತು. ಎನ್ ರಂಗಸ್ವಾಮಿ ಪುದುಚೇರಿಯ ಮುಖ್ಯಮಂತ್ರಿಯಾಗಿ 16 ಮೇ 2011 ರಂದು ಅಧಿಕಾರ ಸ್ವೀಕರಿಸಿದರು.

ಉಲ್ಲೇಖ

ಬದಲಾಯಿಸಿ
  1. Election Commission of India. Schedule for holding General Election to the Legislative Assembly of Puducherry
  2. Campaigning ends in Puducherry:http://www.thehindu.com/news/national/tamil-nadu/article1688429.ece