ಭಾರತದ ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ವಿಧಾನಸಭೆಗೆ 30 ಕ್ಷೇತ್ರಗಳಿಗೆ ಸದಸ್ಯರನ್ನು ಚುನಾಯಿಸುವ ಚುನಾವಣೆ 16 ಮೇ 2016 ರಂದು ನಡೆಯಲಿದೆ. [೧]
ಯಾಣಂ ಕ್ಷೇತ್ರ ೧; ಮತ್ತು ಮಾಹೆ ಕ್ಷೇತ್ರ ೧;. ಕಾರೈಕಾಲ್ ಜಿಲ್ಲೆಯು 5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ, ಅವೆಂದರೆ ನೆಡುಂಗಾಡು, ತಿರುನಲ್ಲರ್, ಕರೈಕಲ್ ಉತ್ತರ, ಕರೈಕಲ್ ದಕ್ಷಿಣ ಮತ್ತು ನೆರವ್ಯ ಟಿಆರ್ ಪಟ್ಟಿನಮ್; ಪುದುಚೇರಿ ಜಿಲ್ಲೆಯ ಪ್ರದೇಶವನ್ನು 23 ವಿಧಾನಸಭಾ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ.
ಆಡಳಿತ ಪಕ್ಷವಾದ AINRS ಪ್ರಸ್ತುತ ಬಿಜೆಪಿ ಮೈತ್ರಿಕೂಟ ಎನ್ಡಿಎ (NDA) ಜೊತೆಗಿದೆ. ಆವು ಎರಡೂ ಪಕ್ಷಗಳು ಒಟ್ಟಿಗೆ ಸ್ಪರ್ಧಿಸುತ್ತವೆ. ಡಿಎಂಕೆ ಮತ್ತು ಕಾಂಗ್ರೆಸ್ ಸಹ ಮೈತ್ರಿಕೂಟ ಹೊಂದಿವೆ. ಪುದುಚೇರಿಯಲ್ಲಿ ವಿಧಾನಸಭೆ ಅಧಿಕಾರ ಅವಧಿ 2 ಜೂನ್ 2016 ಕ್ಕೆ ಕೊನೆಗೊಳ್ಳುತ್ತದೆ.
ಪುದುಚೇರಿಯಲ್ಲಿ ಮೂರು ವಿಧಾನಸಭೆ ಕ್ಷೇತ್ರಗಳ ಮತಗಟ್ಟೆಗಳಲ್ಲಿ (ಒಟ್ಟು 30 ವಿಭಾಗಗಳ ಪೈಕಿ) ಮತದಾರರ-ಪರಿಶೀಲಿಸಿದ ಕಾಗದದ ಆಡಿಟ್ ಟ್ರಯಲ್ (ವಿವಿಪಿಎಟಿ ) ಯಂತ್ರಗಳನ್ನು ಸಜ್ಜುಗೊಂಡಿರುವುದು. ವಿವಿಪಿಎಟಿ ವ್ಯವಸ್ಥೆಯಲ್ಲಿ 68 ಕೇಂದ್ರಗಳಲ್ಲಿ ಮತದಾನ ಆರಂಭಿಸಲಾಗುವುದು. 35 ವಿವಿಪಿಎಟಿ(VVPAT) ಯಂತ್ರಗಳನ್ನು ಪುದುಚೇರಿಯಲ್ಲಿ ಬಳಸಲಾಗುತ್ತದೆ. ವಿಧಾನಸಭಾ ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಜೊತೆ ಪುದುಚೇರಿ ಹೊಂದಿರುವ EVMs ಸೌಲಭ್ಯದ ಉಪಯೋಗಮಾಡಲಾಗುವುದು. [೨]
ವೇಳಾಪಟ್ಟಿ
ಅಧಿಸೂಚನೆ ದಿನಾಂಕ ಏಪ್ರಿಲ್ 22, 2016
ನಾಮನಿರ್ದೇಶನಗಳುಸಲ್ಲಿಸಲು ಕೊನೆಯ ದಿನಾಂಕ ಏಪ್ರಿ 29, 2016
ನಾಮನಿರ್ದೇಶನಗಳನ್ನು ಪರಿಶೀಲನೆಗೆ ದಿನಾಂಕ ಏಪ್ರಿಲ್ 30, 2016
ಐಎಡಿಎಂಕೆ ಸ್ವತಂತ್ರವಾಗಿ ಪುದುಚೇರಿಯಲ್ಲಿ ಸ್ಪರ್ಧಿಸಲು ನಿರ್ಧರಿಸಿತು, ಮತ್ತು ಸೋಮವಾರ ದಿನಾಂಕ ಏಪ್ರಿಲ್ 04,2016 ರಂದು ಎಲ್ಲಾ 30 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತು.ಉಳಿದ ಪಕ್ಷಗಳು ಅಂತಿಮ ನಿರ್ಧಾರಕ್ಕೆ ಬಂದಿಲ್ಲ.[೩]
ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಕೇಂದ್ರ ಮಾಜಿ ಸಚಿವ ವಿ. ನಾರಾಯಣಸ್ವಾಮಿ ಅವರು ಪುದುಚೇರಿಯ ನೂತನ ಮುಖ್ಯಮಂತ್ರಿಯಾಗಿ 06/06/2016 ಸೋಮವಾರ ಅಧಿಕಾರ ಸ್ವೀಕರಿಸಿದರು. ‘ಗಾಂಧಿ ಥಿಡಾಲ್’ನಲ್ಲಿ ಆಯೋಜಸಿದ್ದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಮುಖ್ಯಮಂತ್ರಿ ನಾರಾಯಣಸ್ವಾಮಿ ಹಾಗೂ ಇತರ ಐವರು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಮಲ್ಲಾಡಿ ಕೃಷ್ಣ ರಾವ್, ಎಂಒಎಚ್‌ಎಫ್ ಶಹ ಜಹಾನ್, ಎಂ. ಕಂಡಸ್ವಾಮಿ ಮತ್ತು ಆರ್. ಕಮಲಾಕರನ್ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು.
ನಾರಾಯಣ ಸ್ವಾಮಿ ಅವರು 15 ಸದಸ್ಯ ಬಲದೊಂದಿಗೆ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. ಇಬ್ಬರು ಡಿಎಂಕೆ ಸದಸ್ಯರ ಬೆಂಬಲದೊಂದಿಗೆ ಒಟ್ಟು 17 ಸದಸ್ಯರನ್ನೊಳಗೊಂಡ ನೂತನ ಸರ್ಕಾರ ರಚಿಸಿದ್ದಾರೆ.[೭]
ಆದರೆ ಅವರು ವಿಧಾನ ಸಭೆ ಸದಸ್ಯರಲ್ಲ. ಇನ್ನು ಆರು ತಿಂಗಳ ವಳಗೆ ವಿಧಾನ ಸಭೆಗೆ ಆಯ್ಕೆಯಾಗಬೇಕು.
ಪುದುಚೇರಿ ಮುಖ್ಯಮಂತ್ರಿ ಕಾಂಗ್ರೆಸ್ ಅಭ್ಯರ್ಥಿ ವಿ.ನಾರಾಯಣಸ್ವಾಮಿ 18.709 ಮತಗಳನ್ನು ಪಡೆದು. ನಲ್ಲಿತೊಪು ಉಪಚುನಾವಣೆಯನ್ನು 11.144 ಮತಗಳಿಂದ, ಎಐಎಡಿಎಂಕೆ ಅಭ್ಯರ್ಥಿ ಓಂಶಕ್ತಿ ಸೇಕರ್ ವಿರುದ್ಧ ಗೆದ್ದರು. ಸೇಕರ್ 7.565 ಮತಗಳನ್ನು ಪಡೆದರು. [೮]