ಪಿ. ನರ್ಸಾ ರೆಡ್ಡಿ

ಸಂಸತ್ತಿನ ಸದಸ್ಯ

ಪಿ.ನರ್ಸಾ ರೆಡ್ಡಿ (ಜನನ ೨೨ ಸೆಪ್ಟೆಂಬರ್ ೧೯೩೧) ಒಬ್ಬ ಭಾರತೀಯ ಮಾಜಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿ. ಅವರು ಭಾರತದ ೯ ನೇ ಲೋಕಸಭೆಯ ಸಂಸತ್ತಿನ ಸದಸ್ಯರಾಗಿದ್ದರು . ರೆಡ್ಡಿ ಆಂಧ್ರಪ್ರದೇಶದ ಅದಿಲಾಬಾದ್ ಕ್ಷೇತ್ರವನ್ನು ಪ್ರತಿನಿಧಿಸಿದರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂಬ ರಾಜಕೀಯ ಪಕ್ಷದ ಸದಸ್ಯರಾಗಿದ್ದರು. [೧] [೨]

ಪಿ. ನರ್ಸಾ ರೆಡ್ಡಿ

ಸಂಸತ್ ಸದಸ್ಯ, ೯ ನೇ ಲೋಕಸಭೆ
ಅಧಿಕಾರ ಅವಧಿ
ಡಿಸೆಂಬರ್ ೧೯೮೯ – ಮಾರ್ಚ್ ೧೯೯೧
ಪೂರ್ವಾಧಿಕಾರಿ ಸಿ. ಮಾಧವ ರೆಡ್ದಿ
ಉತ್ತರಾಧಿಕಾರಿ ಅಲೋಲ ಇಂದ್ರಕರನ್ ರೆಡ್ಡಿ
ಮತಕ್ಷೇತ್ರ ಆದಿಲಾಬಾದ್

ವಿಧಾನಸಭಾ ಸದಸ್ಯ (ಭಾರತ), ೦೫ ನೇ ವಿಧಾನಸಭೆ
ಅಧಿಕಾರ ಅವಧಿ
ಮಾರ್ಚ್ ೧೯೭೨ –ಮಾರ್ಚ್ ೧೯೭೮
ಪೂರ್ವಾಧಿಕಾರಿ ಪಿ. ನರ್ಸಾ ರೆಡ್ಡಿ
ಉತ್ತರಾಧಿಕಾರಿ ಪಿ. ಗಂಗಾ ರೆಡ್ಡಿ
ಮತಕ್ಷೇತ್ರ ನಿರ್ಮಾಳ್

ವಿಧಾನಸಭಾ ಸದಸ್ಯ (ಭಾರತ), ೦೪ ನೇ ವಿಧಾನಸಭೆ
ಅಧಿಕಾರ ಅವಧಿ
ಮಾರ್ಚ್ ೧೯೬೭ – ಮಾರ್ಚ್ ೧೯೭೨
ಪೂರ್ವಾಧಿಕಾರಿ ಪಿ. ನರ್ಸಾ ರೆಡ್ಡಿ
ಉತ್ತರಾಧಿಕಾರಿ ಪಿ. ನರ್ಸಾ ರೆಡ್ಡಿ
ಮತಕ್ಷೇತ್ರ ನಿರ್ಮಾಳ್

ವಿಧಾನಸಭಾ ಸದಸ್ಯ (ಭಾರತ), ೦೩ ನೇ ವಿಧಾನಸಭೆ
ಅಧಿಕಾರ ಅವಧಿ
ಮಾರ್ಚ್ ೧೯೬೨ – ಫೆಬ್ರವರಿ ೧೯೬೭
ಪೂರ್ವಾಧಿಕಾರಿ ಮುತ್ತಿಯಂ ರೆಡ್ಡಿ
ಉತ್ತರಾಧಿಕಾರಿ ಪಿ. ನರ್ಸಾ ರೆಡ್ಡಿ
ಮತಕ್ಷೇತ್ರ ನಿರ್ಮಾಳ್
ವೈಯಕ್ತಿಕ ಮಾಹಿತಿ
ಜನನ (1931-09-22) ೨೨ ಸೆಪ್ಟೆಂಬರ್ ೧೯೩೧ (ವಯಸ್ಸು ೯೨)
ನಿರ್ಮಾಳ್, ಆದಿಲಾಬಾದ್ ಜಿಲ್ಲೆ (ಆಂಧ್ರ ಪ್ರದೇಶ)
ಪೌರತ್ವ  ಭಾರತ
ರಾಷ್ಟ್ರೀಯತೆ  ಭಾರತ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಶ್ರೀಮತಿ ಕೌಸಲ್ಯಾ ದೇವಿ
ಮಕ್ಕಳು ೩ ಗಂಡು ಮತ್ತು ೧ ಹೆಣ್ಣು
ತಂದೆ/ತಾಯಿ ಶ್ರೀ ಪಿ. ಗಂಗಾ ರೆಡ್ಡಿ (ತಂದೆ)
ವಾಸಸ್ಥಾನ ಅದಿಲಾಬಾದ್, ನವದೆಹಲಿ
ಅಭ್ಯಸಿಸಿದ ವಿದ್ಯಾಪೀಠ ಉಸ್ಮಾನಿಯಾ ವಿಶ್ವವಿದ್ಯಾಲಯ
ಉದ್ಯೋಗ ಕೃಷಿಕ, ವಕೀಲ ಮತ್ತು ರಾಜಕಾರಣಿ
ಸಮಿತಿಗಳು ಹಲವಾರು ಸಮಿತಿಗಳ ಸದಸ್ಯ
ಖಾತೆ ವಿವಿಧ

ಆರಂಭಿಕ ಜೀವನ ಮತ್ತು ಶಿಕ್ಷಣ ಬದಲಾಯಿಸಿ

ಪಿ. ನರ್ಸಾ ರೆಡ್ಡಿ ಅವರು ಆಂಧ್ರಪ್ರದೇಶ ರಾಜ್ಯದ ಅದಿಲಾಬಾದ್ ಜಿಲ್ಲೆಯ ನಿರ್ಮಾಳ್‌ನಲ್ಲಿ ಜನಿಸಿದರು. ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ, ಬಿಎ ಮತ್ತು ಎಲ್ಎಲ್ ಬಿ ಪದವಿ ಪಡೆದರು. ವೃತ್ತಿಯಲ್ಲಿ, ರೆಡ್ಡಿ ಒಬ್ಬ ಕೃಷಿಕ ಮತ್ತು ವಕೀಲರಾಗಿದ್ದರು. [೩]

ರಾಜಕೀಯ ವೃತ್ತಿಜೀವನ ಬದಲಾಯಿಸಿ

ಸ್ವಾತಂತ್ರ್ಯ ಪೂರ್ವ ಬದಲಾಯಿಸಿ

ಪಿ. ನರ್ಸಾ ರೆಡ್ಡಿ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರು ಹೈದರಾಬಾದನ್ನು ನಿಜಾಮರ ಆಳ್ವಿಕೆಯಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಭಾಗವಹಿಸಿದ್ದರು.

ಸ್ವಾತಂತ್ರ್ಯದ ನಂತರ ಬದಲಾಯಿಸಿ

ಪಿ. ನರಸಾ ರೆಡ್ಡಿ ಅವರು ೧೯೪೦ ರ ದಶಕದ ಆರಂಭದಿಂದಲೂ ಸಕ್ರಿಯ ರಾಜಕೀಯದಲ್ಲಿದ್ದಾರೆ. ಸಂಸದರಾಗುವ ಮೊದಲು ಅವರು ಮೂರು ನೇರ ಅವಧಿಗೆ ವಿಧಾನಸಭೆಯ (ಭಾರತ) ಸದಸ್ಯರಾಗಿದ್ದರು ಮತ್ತು ಒಂದು ಅವಧಿಗೆ ಆಂಧ್ರ ಪ್ರದೇಶ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ೧೯೭೧ ರಲ್ಲಿ ಅವರು ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. [೩] [೪] [೫] [೬]

ನಿರ್ವಹಿಸಿದ ಹುದ್ದೆಗಳು ಬದಲಾಯಿಸಿ

ಕ್ರ. ಸಂ ಇಂದ ಗೆ ಸ್ಥಾನ
೦೧ ೧೯೬೨ ೧೯೬೭ ಸದಸ್ಯ, ೦೩ನೇ ವಿಧಾನಸಭೆ
೦೨ ೧೯೬೨ ೧೯೬೪ ಅಧ್ಯಕ್ಷರು, ತೆಲಂಗಾಣ ಅಭಿವೃದ್ಧಿ ಸಮಿತಿ
೦೩ ೧೯೬೭ ೧೯೭೨ ಸದಸ್ಯರು, ೦೪ ನೇ ವಿಧಾನಸಭೆ
೦೪ ೧೯೬೮ ೧೯೬೮ ಸದಸ್ಯ, ನಿಯಮಗಳ ಸಮಿತಿ
೦೫ ೧೯೭೨ ೧೯೭೮ ಸದಸ್ಯ, ೦೫ ನೇ ವಿಧಾನಸಭೆ
೦೬ ೧೯೭೩ ೧೯೭೮ ಸಂಪುಟ ಸಚಿವರು, ನೀರಾವರಿ ( ರಾಜ್ಯ ಸರ್ಕಾರ )
೦೭ ೧೯೭೪ ೧೯೭೮ ಕ್ಯಾಬಿನೆಟ್ ಮಂತ್ರಿ, ಕಂದಾಯ ಮತ್ತು ಶಾಸಕಾಂಗ ವ್ಯವಹಾರಗಳು ( ರಾಜ್ಯ ಸರ್ಕಾರ ).
೦೮ ೧೯೮೧ ೧೯೮೫ ಸದಸ್ಯ, ಆಂಧ್ರ ಪ್ರದೇಶ ವಿಧಾನ ಪರಿಷತ್ತು
೦೯ ೧೯೮೨ ೧೯೮೫ ಸದಸ್ಯರು, ಸರ್ಕಾರದ ಭರವಸೆಗಳ ಸಮಿತಿ
೧೦ ೧೯೮೯ ೧೯೯೧ ಸದಸ್ಯ, ೧೯ ನೇ ಲೋಕಸಭೆ
೧೧ ೧೯೯೦ ೧೯೯೧ ಸದಸ್ಯರು, ಅರ್ಜಿಗಳ ಸಮಿತಿ
೧೨ ೧೯೯೦ ೧೯೯೧ ಸಲಹಾ ಸಮಿತಿ, ಕಾರ್ಮಿಕ ಸಚಿವಾಲಯ
೧೪ ೧೯೯೦ ೧೯೯೧ ಸಲಹಾ ಸಮಿತಿ, ಕಲ್ಯಾಣ ಸಚಿವಾಲಯ

ಸಹ ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Member Profile". Lok Sabha website. Retrieved 17 January 2014.
  2. "Election Results 1989" (PDF). Election Commission of India. Retrieved 17 January 2014.
  3. ೩.೦ ೩.೧ "Member Profile". Lok Sabha website. Retrieved 17 January 2014."Member Profile". Lok Sabha website. Retrieved 17 January 2014.
  4. "Third Andhra Pradesh Legislative Assembly". Andhra Pradesh Legislature. Archived from the original on 7 ಡಿಸೆಂಬರ್ 2013. Retrieved 17 January 2014.
  5. "Fourth Andhra Pradesh Legislative Assembly". Andhra Pradesh Legislature. Archived from the original on 3 August 2012. Retrieved 17 January 2014.
  6. "Fifth Andhra Pradesh Legislative Assembly". Andhra Pradesh Legislature. Archived from the original on 13 ಮಾರ್ಚ್ 2013. Retrieved 17 January 2014.