ಪವನ್ ಕಲ್ಯಾಣ್

ಭಾರತೀಯ ಚಲನಚಿತ್ರ ನಟ

ಕೋನಿಡೇಲಾ ಕಲ್ಯಾಣ್ ಬಾಬು (ಜನನ 2 ಸೆಪ್ಟೆಂಬರ್ 1971), ಅವರ ವೇದಿಕೆಯ ಹೆಸರು ಪವನ್ ಕಲ್ಯಾಣ್, ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ಬರಹಗಾರ ಮತ್ತು ರಾಜಕಾರಣಿ.ಅವರ ತೆಲುಗು ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಾರೆ .[][][][]

ಪವನ್ ಕಲ್ಯಾಣ್
Pawan Kalyan
పవన్ కళ్యాణ్
ಪವನ್ ಕಲ್ಯಾಣ್ 2007 ರಲ್ಲಿ
ಜನನ
ಕೋನಿಡೇಲಾ ಕಲ್ಯಾಣ್ ಬಾಬು[]

(1971-09-02) ೨ ಸೆಪ್ಟೆಂಬರ್ ೧೯೭೧ (ವಯಸ್ಸು ೫೩)
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ನಟ, ನಿರ್ಮಾಪಕ, ರಾಜಕಾರಣಿ, ಲೇಖಕ, ನಿರ್ದೇಶಕ
ಸಕ್ರಿಯ ವರ್ಷಗಳು1996–ಪ್ರಸ್ತುತ
ಸಂಗಾತಿ(s)ನಂದಿನಿ (1997–1999)
ರೇನು ದೇಸಾಯಿ (2009–2012)
ಅನ್ನಾ ಲೆಜ್ನೆವಾ (2013–ಪ್ರಸ್ತುತ)
ಮಕ್ಕಳು3
ಕುಟುಂಬಚಿರಂಜೀವಿ ಕುಟುಂಬ

ಕಲ್ಯಾಣ್ ಅವರು 1996 ರ ತೆಲುಗು ಚಿತ್ರ ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ ಚಿತ್ರದಿಂದ ತಮ್ಮ ನಟನೆಯನ್ನು ಪ್ರಾರಂಭಿಸಿದರು.1998 ರಲ್ಲಿ ಅವರು ತೊಲಿ ಪ್ರೇಮ ಚಿತ್ರದಲ್ಲಿ ಅಭಿನಯಿಸಿದರು ಮತ್ತು ಆ ವರ್ಷದ ತೆಲುಗು ಚಲನಚಿತ್ರದಲ್ಲಿನ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು.ಅವರು ಗೋಕುಲಂಲೋ ಸೀತಾ, ಸುಸ್ವಾಗತಮ್, ತಮ್ಮುಡು, ಬದ್ರಿ, ಖುಶಿ, ಜಲ್ಸಾ, ಗಬ್ಬರ್ ಸಿಂಗ್, ಸರ್ದಾರ್ ಗಬ್ಬರ್ ಸಿಂಗ್, ಕ್ಯಾಮೆರಾಮೆನ್ ಗಂಗತೋ ರಾಂಬಾಬು ಇತ್ಯಾದಿ ಚಿತ್ರಗಳಲ್ಲಿನ ತಮ್ಮ ನಟನೆಯಿಂದ ಹೆಸರುವಾಸಿಯಾಗಿದ್ದಾರೆ.ಭಾರತದ 2013 ರ ಫೋರ್ಬ್ಸ್ ಟಾಪ್ 100 ಖ್ಯಾತನಾಮರ ಪಟ್ಟಿಯಲ್ಲಿ ಅವರು 26 ನೇ ಸ್ಥಾನ ಪಡೆದಿದ್ದರು. ಅವರು ಅಂಜನಾ ಪ್ರೊಡಕ್ಷನ್ಸ್ ಮತ್ತು ಪವನ್ ಕಲ್ಯಾಣ್ ಕ್ರಿಯೇಟಿವ್ ವರ್ಕ್ಸ್ ಎಂಬ ಬ್ಯಾನರ್ಗಳ ಅಡಿಯಲ್ಲಿ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.[][][][೧೦] 

ರಾಜಕೀಯ ವೃತ್ತಿ

ಬದಲಾಯಿಸಿ

ಪವನ್ ಕಲ್ಯಾಣ್ ಮಾರ್ಚ್ 14, 2014 ರಂದು ಜನ ಸೇನಾ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು.

ಆಯ್ದ ಚಲನಚಿತ್ರಗಳ ಪಟ್ಟಿ

ಬದಲಾಯಿಸಿ
  • 1998: ತೊಲಿ ಪ್ರೇಮ
  • 1999: ತಮ್ಮುಡು
  • 2000: ಭದ್ರಿ
  • 2001: ಖುಶಿ
  • 2008: ಜಲ್ಸಾ
  • 2012: ಗಬ್ಬರ್ ಸಿಂಗ್
  • 2013: ಅತ್ತಾರಿಂಟಿಕಿ ದಾರೇದಿ
  • 2016: ಸರ್ದಾರ್ ಗಬ್ಬರ್ ಸಿಂಗ್
  • 2017: ಕಾಟಮರಾಯುಡು

ಉಲ್ಲೇಖಗಳು

ಬದಲಾಯಿಸಿ
  1. "Forbes 2013 Celebrity 100: Pawan Kalyan". Forbes India. Archived from the original on 24 ಸೆಪ್ಟೆಂಬರ್ 2014. Retrieved 29 May 2014.
  2. Pawan Kalyan's Childhood photo in Genes Show -Etv. YouTube (31 July 2011). Retrieved 14 May 2014.
  3. "IndiaGlitz – Happy Birthday Power Star Pawan Kalyan – Telugu Movie News". Retrieved 2016-07-25.
  4. Filmfare Awards (South): The complete list of Winners Archived 2013-07-23 ವೇಬ್ಯಾಕ್ ಮೆಷಿನ್ ನಲ್ಲಿ.. CNN-IBN.in.com (21 July 2013). Retrieved 14 May 2014.
  5. "Nitya, Nag bag awards on star-studded night". The Hindu. Chennai, India. 16 June 2013.
  6. Pawan Kalyan – Forbes India Magazine Archived 2014-09-24 ವೇಬ್ಯಾಕ್ ಮೆಷಿನ್ ನಲ್ಲಿ.. Forbesindia.com. Retrieved 14 May 2014.
  7. Is Pawan Kalyan worth just Rs 17.77 Crores? – The Times of India. The Times of India. (19 March 2014). Retrieved 14 May 2014.
  8. "Pawan Kalyan's political outfit named as 'Jana Sena' Party". The Times of India. Retrieved 13 March 2014.
  9. Shekhar (16 August 2013). "Jana Sena – Name of Pawan Kalyan's New Political Party – Oneindia Entertainment". Entertainment.oneindia.in. Archived from the original on 13 ಮಾರ್ಚ್ 2014. Retrieved 13 March 2014.
  10. "Telugu Actor Pawan Kalyan Launches New Party – new indian express". newindianexpress.com. 14 March 2014. Archived from the original on 6 ಜನವರಿ 2019. Retrieved 21 ಸೆಪ್ಟೆಂಬರ್ 2017.

ಬಾಹ್ಯ ಕೊಂಡಿಗಳು

ಬದಲಾಯಿಸಿ

ಪವನ್ ಕಲ್ಯಾಣ್ ಐ ಎಮ್ ಡಿ ಬಿನಲ್ಲಿ