ಪರ್‌ಮಾನೊಸಲ್ಫ್ಯೂರಿಕ್ ಆಮ್ಲ

ಪರ್‌ಮಾನೊಸಲ್ಫ್ಯೂರಿಕ್ ಆಮ್ಲವು (H2SO5) ಒಂದು ಆಮ್ಲ. ಈ ಆಮ್ಲವನ್ನು ಪತ್ತೆಹಚ್ಚಿದವನ ಗೌರವಾರ್ಥ ಇದಕ್ಕೆ ಕೇರೋ (1898) ಆಮ್ಲವೆಂದು ಹೆಸರಿಸಿದ್ದಾರೆ.[]

ಪರ್‌ಮಾನೊಸಲ್ಫ್ಯೂರಿಕ್ ಆಮ್ಲದ ರಚನಾ ಸೂತ್ರ

ತಯಾರಿಕೆ

ಬದಲಾಯಿಸಿ

ಪೊಟ್ಯಾಸಿಯಂ ಪರ್‌ಸಲ್ಫೇಟನ್ನು 40% ಸಲ್ಫ್ಯೂರಿಕ್ ಆಮ್ಲದೊಂದಿಗೆ ಅರೆದು ಒಂದು ಗಂಟೆಯ ಕಾಲ ಶೈತ್ಯ ಮಿಶ್ರಣದಲ್ಲಿಟ್ಟು ಅನಂತರ ಕ್ರಿಯಾಮಿಶ್ರಣವನ್ನು ಬರ್ಫದ ಮೇಲೆ ಸುರಿದರೆ ಕೇರೋ ಆಮ್ಲ ರೂಪುಗೊಳ್ಳವುದು. ಕ್ಲೋರೋಸಲ್ಫಾನಿಕ್ ಆಮ್ಲ ಮತ್ತು ಹೈಡ್ರೊಜನ್ ಪೆರಾಕ್ಸೈಡುಗಳ ವರ್ತನೆಯಿಂದ ಇದನ್ನು ಸಂಶ್ಲೇಷಿಸಬಹುದು.[]

H2O2 + ClSO2OH ⇌ H2SO5 + HCl

ಗುಣಗಳು

ಬದಲಾಯಿಸಿ

ಪರ್‌ಮಾನೋಸಲ್ಫ್ಯೂರಿಕ್ ಆಮ್ಲ ಸಹ ಹರಳು ರೂಪದ ಬಿಳಿಯ ಘನ. ಇದರ ದ್ರವನಬಿಂದು 420 ಸೆಂ. ಈ ಘನ ಸಾಕಷ್ಟು ಸ್ಥಿರವಾಗಿರುವುದು. ಇದು ಪರ್‌ಡೈಸಲ್ಫ್ಯೂರಿಕ್ ಆಮ್ಲಕ್ಕಿಂತ ಪ್ರಬಲ ಉತ್ಕರ್ಷಣಕಾರಿ. ಪೊಟ್ಯಾಸಿಯಂ ಅಯೊಡೈಡಿನ ದ್ರಾವಣದಿಂದ ತತ್‌ಕ್ಷಣ ಅಯೊಡೀನನ್ನು ಬಿಡುಗಡೆ ಮಾಡುವುದು ಇದಕ್ಕೆ ನಿದರ್ಶನ. ಇದರ ಸಂಪರ್ಕ ಪಡೆದ ಹತ್ತಿ ಮತ್ತು ಉಣ್ಣೆಗಳು ಕೂಡಲೇ ಕಾರ್ಬನೀಕರಿಸುತ್ತವೆ. ಅನಿಲೀನು ನೈಟ್ರೋಬೆನ್ಸೀನಾಗುವುದು.

ಉಲ್ಲೇಖಗಳು

ಬದಲಾಯಿಸಿ
  1. Caro, H. (1898). "Zur Kenntniss der Oxydation aromatischer Amine" [[Contribution] to [our] knowledge of the oxidation of aromatic amines]. Zeitschrift für angewandte Chemie. 11 (36): 845–846. doi:10.1002/ange.18980113602.
  2. "Synthesis of Caro's acid". PrepChem.com (in ಅಮೆರಿಕನ್ ಇಂಗ್ಲಿಷ್). 2017-02-13. Retrieved 2018-10-12.