ಪರಶುರಾಮ ಕುಂಡವು ಹಿಂದೂ ಯಾತ್ರಾ ಸ್ಥಳವಾಗಿದ್ದು, ಭಾರತಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯಲ್ಲಿ ಲೋಹಿತ್ ನದಿಯ ಕೆಳವ್ಯಾಪ್ತಿಯಲ್ಲಿನ ಬ್ರಹ್ಮಪುತ್ರ ಪ್ರಸ್ಥಭೂಮಿಯಲ್ಲಿ ಸ್ಥಿತವಾಗಿದೆ. ಋಷಿ ಪರಶುರಾಮ್‌ಗೆ ಸಮರ್ಪಿತವಾದ ಈ ಜನಪ್ರಿಯ ತಾಣವು ನೇಪಾಳದಿಂದ, ಭಾರತದಾದ್ಯಂತ ಮತ್ತು ಹತ್ತಿರದ ರಾಜ್ಯಗಳಾದ ಮಣಿಪುರ ಮತ್ತು ಅಸ್ಸಾಂನಿಂದ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. 70,000 ಕ್ಕೂ ಹೆಚ್ಚು ಭಕ್ತರು ಮತ್ತು ಸಾಧುಗಳು ಪ್ರತಿವರ್ಷ ಜನವರಿ ತಿಂಗಳಲ್ಲಿ ಮಕರ ಸಂಕ್ರಾಂತಿಯಂದು ನೀರಿನಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.[][][]

ಧಾರ್ಮಿಕ ಮಹತ್ವ

ಬದಲಾಯಿಸಿ

ಇದು ಲೋಹಿತ್ ನದಿಯ ಕೆಳಭಾಗದಲ್ಲಿ ಸ್ಥಿತವಾಗಿದ್ದು ಅಖಿಲ ಭಾರತ ಪ್ರಾಮುಖ್ಯದ ಸ್ಥಳವಾಗಿದೆ. ಪ್ರತಿವರ್ಷ ಚಳಿಗಾಲದಲ್ಲಿ ಸಾವಿರಾರು ಯಾತ್ರಿಕರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ, ವಿಶೇಷವಾಗಿ ಮಕರ ಸಂಕ್ರಾಂತಿ ದಿನದಂದು ಪವಿತ್ರ ಕುಂಡದಲ್ಲಿ ಪವಿತ್ರ ಸ್ನಾನಕ್ಕಾಗಿ. ಇದು ಒಬ್ಬರ ಪಾಪಗಳನ್ನು ತೊಳೆಯುತ್ತದೆ ಎಂದು ನಂಬಲಾಗಿದೆ. ಪರಶುರಾಮನು ಕೆಟ್ಟ ಅಪರಾಧಗಳಲ್ಲಿ ಒಂದಾದ ಸ್ವಂತ ತಾಯಿಯನ್ನು ಕೊಲ್ಲುವ ಅಪರಾಧ ಮಾಡಿದ್ದರಿಂದ, ಕೊಡಲಿ ಅವನ ಕೈಗೆ ಅಂಟಿಕೊಂಡಿತು. ಅವನ ತಂದೆ ಅವನ ವಿಧೇಯತೆಗೆ ಸಂತೋಷಪಟ್ಟನು, ಅವನಿಗೆ ಒಂದು ವರವನ್ನು ನೀಡಲು ನಿರ್ಧರಿಸಿದನು, ಅದಕ್ಕೆ ಅವನು ತನ್ನ ತಾಯಿಯನ್ನು ಪುನಃ ಜೀವಿತಗೊಳಿಸುವಂತೆ ಕೇಳಿಕೊಂಡನು. ಆತನ ತಾಯಿಗೆ ಜೀವ ಬಂದ ನಂತರವೂ ಆತನ ಕೈಯಿಂದ ಕೊಡಲಿಯನ್ನು ತೆಗೆಯಲಾಗಲಿಲ್ಲ. ಇದು ಆತ ಮಾಡಿದ ಘೋರ ಅಪರಾಧವನ್ನು ನೆನಪಿಸುತ್ತದೆ. ಅವನು ತನ್ನ ಅಪರಾಧಕ್ಕಾಗಿ ಪಶ್ಚಾತ್ತಾಪಪಟ್ಟನು ಮತ್ತು ಆ ಕಾಲದ ಪ್ರಖ್ಯಾತ ಋಷಿಗಳ ಸಲಹೆಯನ್ನು ಪಡೆದ ನಂತರ, ಲೋಹಿತ್ ನದಿಯ ದಡಕ್ಕೆ ಅದರ ಶುದ್ಧ ನೀರಿನಲ್ಲಿ ಕೈ ತೊಳೆಯಲು ಬಂದನು. ಇದು ಅವನನ್ನು ಎಲ್ಲ ಪಾಪಗಳಿಂದ ಶುದ್ಧೀಕರಿಸುವ ಒಂದು ಮಾರ್ಗವಾಗಿತ್ತು. ಅವನು ತನ್ನ ಕೈಗಳನ್ನು ನೀರಿನಲ್ಲಿ ಮುಳುಗಿಸಿದ ತಕ್ಷಣ ಕೊಡಲಿಯು ಬೇರ್ಪಟ್ಟಿತು ಮತ್ತು ಅಂದಿನಿಂದ ಅವನು ಕೈಗಳನ್ನು ತೊಳೆದ ಸ್ಥಳವು ಪೂಜಾ ಸ್ಥಳವಾಯಿತು ಮತ್ತು ಸಾಧುಗಳಿಂದ ಪರಶುರಾಮ ಕುಂಡ ಎಂದು ಕರೆಯಲ್ಪಟ್ಟಿತು. ಮೇಲಿನ ಘಟನೆಯನ್ನು ವಿವರಿಸುವ ಭಾರತದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುವ ಅನೇಕ ಕಥೆಗಳಿವೆ ಮತ್ತು ಪರಶುರಾಮ ದೇವರಿಗೆ ಅರ್ಪಿತವಾದ ಹಲವಾರು ದೇವಾಲಯಗಳಿವೆ, ಅವುಗಳಲ್ಲಿ ಹೆಚ್ಚಿನವು ಕೇರಳದಲ್ಲಿವೆ. ಆದರೆ ಈ ಸ್ಥಳವು ಹತ್ತಿರದಿಂದ ಮತ್ತು ದೂರದಿಂದ ಅನೇಕ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ ಮತ್ತು ಕೆಲವು ಸನ್ಯಾಸಿಗಳು ಇಲ್ಲಿ ವಾಸಿಸುತ್ತಾರೆ ಮತ್ತು ಪರಶುರಾಮನಿಗೆ ಸಮರ್ಪಿತವಾದ ದೇವಾಲಯವನ್ನು ನೋಡಿಕೊಳ್ಳುತ್ತಾರೆ.

ಇತಿಹಾಸ

ಬದಲಾಯಿಸಿ

ಸಾಧು ಸ್ಥಾಪಿಸಿದ ಪರಶುರಾಮ ಕುಂಡದ ಸ್ಥಳವು 1950ರ ಅಸ್ಸಾಂ ಭೂಕಂಪದವರೆಗೂ ಅಸ್ತಿತ್ವದಲ್ಲಿತ್ತು. ಆ ಭೂಕಂಪವು ಇಡೀ ಈಶಾನ್ಯ ಭಾರತವನ್ನು ಬೆಚ್ಚಿಬೀಳಿಸಿತು ಮತ್ತು ಕುಂಡವನ್ನು ಸಂಪೂರ್ಣವಾಗಿ ಆವರಿಸಿತು. ಕುಂಡದ ಮೂಲ ಸ್ಥಳದ ಮೇಲೆ ಈಗ ಪ್ರಬಲವಾದ ಪ್ರವಾಹ ಹರಿಯುತ್ತಿದೆ. ಆದರೆ ಬೃಹತ್ ಬಂಡೆಗಳು ನಿಗೂಢ ರೀತಿಯಲ್ಲಿ ನದಿ ತಳದಲ್ಲಿ ವೃತ್ತಾಕಾರದಲ್ಲಿ ಹುದುಗಿಕೊಂಡಿರುವುದರಿಂದ ಹಳೆಯದಕ್ಕೆ ಬದಲಾಗಿ ಇನ್ನೊಂದು ಕುಂಡವನ್ನು ರೂಪಿಸಿವೆ.[]

ಪ್ರವಾಸೋದ್ಯಮ

ಬದಲಾಯಿಸಿ

ಮಕರ ಸಂಕ್ರಾಂತಿಯ ಸಮಯದಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ. ಆಗ ಕಾಡು ಹಸುಗಳು, ಅಪರೂಪದ ತುಪ್ಪಳ-ರಗ್ಗುಗಳು ಮತ್ತು ಇತರ ಅಪರೂಪದ ಅಸಾಮಾನ್ಯ ವಸ್ತುಗಳನ್ನು ಬೆಟ್ಟದ ಬುಡಕಟ್ಟು ಜನರು ತರುತ್ತಾರೆ. ತೇಜುವಿನಿಂದ ಹೊಳೆಯುವ ಸರೋವರದವರೆಗೆ ಚಾರಣಕ್ಕೆ ಒಂದು ದಿನ ತೆಗೆದುಕೊಳ್ಳುತ್ತದೆ, ಪಾದಯಾತ್ರೆ ಮತ್ತು ನದಿ ರಾಫ್ಟಿಂಗ್ ಮತ್ತು ಲೋಹಿತ್ ನದಿಯಲ್ಲಿ ಆಂಗ್ಲಿಂಗ್.

ಉಲ್ಲೇಖಗಳು

ಬದಲಾಯಿಸಿ

 

  1. "Thousands gather at Parshuram Kund for holy dip on Makar Sankranti". The News Mill. Retrieved 2017-01-13.
  2. "70,000 devotees take holy dip in Parshuram Kund". 18 January 2013. Retrieved 2014-06-29.
  3. "Arunachal Pradesh planning to promote tourism at Parsuram Kund". Daily News & Analysis. Retrieved 2014-06-29.
  4. "Parashuram Kund". indiaprofile.com.


ಹೊರಗಿನ ಕೊಂಡಿಗಳು

ಬದಲಾಯಿಸಿ