ತೃಪ್ತಿ ಮುಖರ್ಜಿ

(ಪಂ. ತೃಪ್ತಿ ಇಂದಿರ ಆರ್. ಮುಖರ್ಜಿ ಇಂದ ಪುನರ್ನಿರ್ದೇಶಿತ)

ಸಂಗೀತ ಕ್ಷೇತ್ರದಲ್ಲಿ ಬಿಡುವಿಲ್ಲದೆ, ದಣಿವಿಲ್ಲದೆ ದುಡಿಯುತ್ತಿರುವ ಕೊಲ್ಕೊತ್ತಾ ಮೂಲದ ಚೇತನ, ವಿದುಷಿ, ಪಂ.ತೃಪ್ತಿ ಮುಖರ್ಜಿ ಯವರು. ಕೆಲವೊಮ್ಮೆ ಕೆಲದಿನಗಳಲ್ಲಿ ತಮ್ಮ ಸ್ವಂತ ಗುರುಕುಲದ ಒಂದು ಶಾಖೆಯ ವಿದ್ಯಾರ್ಥಿಗಳೊಂದಿಗೆ ಇಲ್ಲವೇ ಮತ್ತೊಂದು ದೇಶದಲ್ಲಿ, ಅವರು ಕಾಣಿಸಿಕೊಳ್ಳುತ್ತಾರೆ. ರಾಗ-ತಾಳ-ಲಯದ ನಂಟಿನಲ್ಲೇ ದಿನಕಳೆಯುವ ಸಾಧಕಿಯಾಕೆ. ಭಾರತದಲ್ಲಿ ಜನಿಸಿದ ತೃಪ್ತಿ ಮುಖರ್ಜಿ, ಅವರ ಗುರುವಿನ ಸಲಹೆಯೆ ಮೇರೆಗೆ ಅಮೆರಿಕದಲ್ಲಿ ಭಾರತೀಯ ಸಂಗೀತವನ್ನು ಪಸರಿಸುವ ಅಪೂರ್ವ ಕಾರ್ಯವನ್ನು ಮನಃಪೂರ್ವಕವಾಗಿ ನಿಷ್ಠೆಯಿಂದ ಮಾಡುತ್ತಾ ಬಂದಿದ್ದಾರೆ.ಮೂಲತಃ ಇವರು ಹಿಂದೂಸ್ತಾನೀ ಸಂಗೀತಗಾರರು. ಸಪ್ತಸ್ವರಗಳಿಂದ ಹೆಣೆದ ಮಾಂತ್ರಿಕ ಶಕ್ತಿಯ ಮುಂದೆ ತಾವೊಬ್ಬ ಪುಟ್ಟ ಶಿಶುವೆಂದು ಅವರು ಭಾವಿಸುತ್ತಾರೆ. ಸರಳಸ್ವಭಾವದ ಮಗುವಿನಮಾತಿನಷ್ಟು ಮೃದು ಹಾಗೂ ರಾಗಾಲಾಪದಂತೆ ಮಾತಿನ ಸರಣಿ. ಅಮೆರಿಕದ ಅಧ್ಯಕ್ಷರ ನಿವಾಸ, ಶ್ವೇತಭವನದ ಮುಂದೆ 'ಹಿಂದೂಸ್ತಾನೀ ಪದ್ಧತಿಯ ಸಂಗೀತ ಕಾರ್ಯಕ್ರಮ' ನೀಡಿದ 'ಏಕೈಕ ಭಾರತೀಯ ಮಹಿಳಾ ಕಲಾವಿದೆ'ಯೆಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

ಚಿತ್ರ:Pttrim3.jpg
'ಪಂ. ತೃಪ್ತಿ ಮುಖರ್ಜಿ'

ಸಂಗೀತ ವಲಯ

ಬದಲಾಯಿಸಿ

ನಾಲ್ಕನೆ ಪುಟ್ಟ ವಯಸ್ಸಿನಲ್ಲೇ ಸಂಗೀತ ಯಾತ್ರೆಯ ಆರಂಭವಾದ ಯಾತ್ರೆ, ಸನ್ ೨೦೦೭ ರಲ್ಲಿ ಅಮೆರಿಕ ದೇಶ ಅಚರಿಸಿದ ದೀಪಾವಳಿಹಬ್ಬದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಮುಂದೆ ಸಾಗಿ, ಮುಗಿಲಿನ ಕಡೆಗೆ ಸಾಗುತ್ತಲೇ ಇದೆ. ಸನ್, ೧೯೯೨ ರಲ್ಲಿ, ಅವರು, ಆಗಿನ ರಾಷ್ಟ್ರಪತಿಗಳಾಗಿದ್ದ ಶ್ರೀ.ಆರ್. ವೆಂಕಟರಾಮನ್ ರವರ ಸಮ್ಮುಖದಲ್ಲಿ ರಾಷ್ಟ್ರಪತಿ ಭವನದ ಭವ್ಯ ಸಭಾಂಗಣದಲ್ಲಿ ತಮ್ಮ ಅಮೋಘ ಸಂಗೀತ ಕಾರ್ಯಕ್ರಮವನ್ನು ಕೊಟ್ಟಿದ್ದರು.

ಕೊಲ್ಕತ್ತಾದಲ್ಲಿ ಜನಿಸಿದ 'ಮೇವಾತಿ ಘರಾನದ ಗಾಯಕಿ'ಯರಲ್ಲಿ ತೃಪ್ತಿಯವರು ಪ್ರಮುಖರು. ರಜತ್ ಮುಖರ್ಜಿ ಮತ್ತು ಇಂದಿರಾ ಮುಖರ್ಜಿಯವರ ಪ್ರೀತಿಯ ಪುತ್ರಿ. ಸಂಗೀತದಲ್ಲಿನ ಒಲವು ೪ ರ ಹರೆಯದಲ್ಲೇ ಶುರುವಾಯಿತು. ಭಾರತೀಕರ್ ಚೌಧರಿ, ಸುನಿಲ್ ದಾಸ್, ಮತ್ತು ಪ್ರಸೂನ್ ಬ್ಯಾನರ್ಜಿ ಆರಂಭಿಕ ಸಂಗೀತ ಶಿಕ್ಷಣ. ಸಿಪ್ರಾ ಭೋಸ್ ರ ಬಳಿ ಠುಮರಿ ಘಜಲ್ ಮತ್ತು ಭಜನ್ ಕಲಿತ ತಲುಪಿದ್ದು ಮುಂಬಯಿ ಸಂಗೀತ ಸಾಮ್ರಾಟ್, ಹಿಂದೂಸ್ತಾನಿ ಸಂಗೀತದ ದಿಗ್ಗಜರಾದ, ಪಂ ಜಸ್ ರಾಜ್ ರವರಬಳಿ.

ಪಂಡಿತ್ ಜಿ ಬಳಿ ಕಲಿತ ಸಂಗೀತ

ಬದಲಾಯಿಸಿ

ಸಂಗೀತದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಶಿಷ್ಯರಿಗೆಮಾತ್ರ ಒಲಿಯುವ ಪಂ. ಜಸ್ ರಾಜ್, ಗುರುಗಳ ಆಶಯಗಳನ್ನು ಶಿರಸಾವಹಿಸಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರು. ಆಕಾರಣಕ್ಕಾಗಿಯೇ 'ಪಂ. ಜಸ್ ರಾಜ'ರು, 'ಅಮೆರಿಕದಲ್ಲಿ ಭಾರತೀಯ ಸಂಗೀತ ಕೇಂದ್ರ'ವೊಂದನ್ನು ಹು ಟ್ಟಿಹಾಕಿ ಅದರ ಚುಕ್ಕಾಣಿಯನ್ನು 'ತೃಪ್ತಿ ಮುಖರ್ಜಿ'ಯವರಿಗೆ ವಹಿಸಿ ಕೊಟ್ಟರು. ೯೦ ರ ದಶಕದಲ್ಲಿ 'ಅಮೆರಿಕದ ನಿವಾಸಿ ಭಾರತೀಯರು' ತಮ್ಮ ಹಲವುದಿನಗಳ ಕನಸಾಗಿದ್ದ ಸಂಗೀತ ಶಿಕ್ಷಣಾಲಯವನ್ನು ಸ್ಥಾಪಿಸಲು 'ಪಂ. ಜಸ್ ರಾಜ್' ರವರನ್ನು ಬಿನ್ನವಿಸಿಕೊಂಡಿದ್ದರು. 'ಪಂಡಿತ್ ಜಿ'ಯವರು, ಇದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದು ಸರಿಯಾದ ಅವಕಾಶಕ್ಕೆ ಕಾಯುತ್ತಿದ್ದರು. ಸನ್, ೧೯೯೫ ರಲ್ಲಿ ನ್ಯೂಜರ್ಸಿ ನಗರದಲ್ಲಿ ಪಂ.ಜಸ್ ರಾಜ್ ಮ್ಯೂಸಿಕ್ ಅಕಾಡೆಮಿಯನ್ನು ಸ್ಥಾಪಿಸಿ ಅದರ ಉಸ್ತುವಾರಿಯನ್ನು ತಮ್ಮ ಪ್ರಿಯ ಶಿಷ್ಯೆಗೆ ವಹಿಸಿಕೊಟ್ಟರು. ಕೇವಲ ಒಂದು ವರ್ಷದಲ್ಲೇ ಅದು ಅತ್ಯಂತ ಜನಪ್ರಿಯತೆಯನ್ನುಗಳಿಸಿತು. ಮುಂದಿನ ನಾಲ್ಕು ವರ್ಷಗಳಒಳಗೆ ಪಿಟ್ಸ್ ಬರ್ಗ್ ನಲ್ಲೂ ಸಂಗೀತ ತರಪೇತಿಯ ತರಗತಿಗಳನ್ನು ತೆರೆಯುವ ಅನಿವಾರ್ಯತೆಯನ್ನು ಸೃಷ್ಟಿಸಿತು. ಹಾಗೆಯೇ ಅದರ ಖ್ಯಾತಿ ನ್ಯೂಯಾರ್ಕ್ ನಗರಕ್ಕೂ ವ್ಯಾಪಿಸಿತು. 'ಗುರುಕುಲದ ಮಾದರಿಯ ಸಂಗೀತ ಶಿಕ್ಷಣ' ಕೊಡುವ ಪಂ.ಜಸ್ ರಾಜ್ ಇನ್ ಸ್ಟಿ ಟ್ಯೂಟ್ ಫಾರ್ ಮ್ಯೂಸಿಕ್ ರಿಸರ್ಚ್ ಆರ್ಟಿಸ್ಟ್ರಿ ಅಂಡ್ ಅಪ್ರಿಸಿಯೇಷನ್ ಎಂಬ ಸಂಸ್ಥೆಯಡಿಯ ಸಂಗೀತ ಕೇಂದ್ರವಾಗಿ ಮಾರ್ಪಟ್ಟಿತು. ಮುಖರ್ಜಿಯವರು ತಮ್ಮ ಗುರುಗಳ ಪಾದಕ್ಕೆ 'ಗುರುದಕ್ಷಿಣೆ'ಯಾಗಿ ಎಲ್ಲ ಸಾಧನೆಗಳನ್ನೂ ಸಮರ್ಪಿಸುವ ಭಾವನೆಯಿಂದ 'ಜಸ್ ರಂಗಿ' ಎಂಬ 'ತ್ರೈಮಾಸಿಕ ಪತ್ರಿಕೆ'ಯನ್ನು ಆರಂಭಿಸಿದರು.

ದೇಶ-ವಿದೇಶಗಳ ಸಂಗೀತೋತ್ಸವಗಳು

ಬದಲಾಯಿಸಿ

'ತೃಪ್ತಿ ಮುಖರ್ಜಿಯವರರು, 'ಆಕಾಶವಾಣಿಯ ಎ-ಗ್ರೇಡ್ ಕಲಾವಿದೆ'. ದೂರದರ್ಶನ ರಾಷ್ಟ್ರೀಯ ವಾಹಿನಿಯಲ್ಲಿ, ಅಖಿಲ ಭಾರತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇದಲ್ಲದೆ, ಹೈದರಾಬಾದ್ ನಗರದಲ್ಲಿ ಆಯೋಜಿಸಲಾಗಿದ್ದ, 'ವಾರ್ಷಿಕ ಪಂಡಿತ್ ಮೋತೀರಾಮ್ ಪಂಡಿತ್ ಮನಿರಾಮ್ ಸಂಗೀತ್ ಮಂಚ್ ನಲ್ಲಿ 'ತೃಪ್ತಿ ಮುಖರ್ಜಿಯವರು ಭಾಗವಹಿಸಿ' ನೀಡಿದ ಅದ್ಭುತ ಸಂಗೀತ ಕಾರ್ಯಕ್ರಮ ಬಹಳಕಾಲದವರೆಗೆ ಸಂಗೀತರಸಿಕರ ಮನಸ್ಸಿನಲ್ಲಿ ಹಸಿರಾಗಿ ಉಳಿದಿದೆ.

ಭಾರತದ ಕಾರ್ಯಕ್ರಮ

ಬದಲಾಯಿಸಿ
  • ’ಜಲಂಧರ್ ನಲ್ಲಿ ಆಯೋಜಿಸಲಾಗಿದ್ದ ಹರಿವಲ್ಲಭ್ ಸಂಗೀತ್ ಸಮಾರೋಹ್’
  • ’ಪುಣೆನಗರಲ್ಲಿ ನಡೆಸಿಕೊಟ್ಟ ಸವಾಯ್ ಗಂಧರ್ವ ಸಂಗೀತೋತ್ಸವ’
  • ’ಕೊಲ್ಕಟ್ಟಾದ ಡೋವರ್ ಲೇನ್ ಸಂಗೀತೋತ್ಸವ’,

ಗಳೂ ’ಪ್ರಮುಖ ಉತ್ಸವಗಳಾಗಿವೆ’.

ಅಮೆರಿಕ ಸಂಯುಕ್ತ ಸಂಸ್ಥಾನ

ಬದಲಾಯಿಸಿ
  • ’ನ್ಯೂಯಾರ್ಕ್ ನಗರದ ಕಾರ್ನೆಗೆ ಹಾಲ್’,
  • ’ಬರ್ಲಿನ್ ನಗರದ ಟ್ಯಾಗೋರ್ ಸೆಂಟರ್’,
  • ’ನೈರೋಬಿಯ (ಕೆನ್ಯಾ) ಬೆಹ್ರೇನ್ ಆರ್ಟ್ಸ್ ಪರ್ಫಾರ್ಮಿಂಗ್ ಸೆಂಟೆರ್’,
  • ’ಲಂಡನ್ ನಗರದ ಕ್ವೀನ್ ಎಲಿಝಬೆತ್ ಹಾಲ್ ನಲ್ಲಿ’.

ಪ್ರಶಸ್ತಿಗಳು

ಬದಲಾಯಿಸಿ
  • 'ಅಮೀರ್ ಖಾನ್ ಸ್ಮಾರಕ ಪ್ರಶಸ್ತಿ'
  • 'ಪಂ.ಜಸ್ ರಾಜ್ ಗುರುದೇವ ಪ್ರಶಸ್ತಿ'
  • 'ಆಚಾರ್ಯ ಶಿರೋಮಣಿ ಪ್ರಶಸ್ತಿ'

ಪಂ.ಗಂಗೂಬಾಯಿ ಹಾನಗಲ್

ಬದಲಾಯಿಸಿ

ದೇಶ-ವಿದೇಶ ಸುತ್ತುವ ಈ ಕಲಾರಾಧಕಿ, ಕರ್ನಾಟಕದ ಹುಬ್ಬಳ್ಳಿಯನ್ನು ಕಂಡರೆ ಬಹಳ ಇಷ್ಟಪಡುತ್ತಾರೆ. ಆ ನಗರದ ವಾಸಿಯಾಗಿದ್ದ ಗಂಗೂಬಾಯಿ ಹಾನಗಲ್ ರವರನ್ನು ಕಂಡರೆ ಅವರಿಗೆ ಅತ್ಯಂತ ಗೌರವ. ಅಭಿಮಾನ ವ್ಯಕ್ತಪಡಿಸುತ್ತಾರೆ. 'ಆಚಾರ್ಯ ಜಸ್ ರಾಜ'ರಂತೂ ತೃಪ್ತಿ ಮುಖರ್ಜಿಯವರ ಪರಮದೈವ. ಅವರ ಬಗ್ಗೆ ಅಪಾರ ಗೌರವ. 'ಸಂಗೀತವೆಂದರೆ ದೇವಸ್ವರೂಪಿ,ಅದು ಭಗವಂತನ ಬಳಿಗೆ ಕರೆದೊಯ್ಯುವ ಏಕೈಕ ಮಾರ್ಗ'. ಅದರಲ್ಲೂ 'ಮೇವಾತಿ ಘರಾನ,' 'ದೇವಪಾದ ಸ್ಪರ್ಷ'ಕ್ಕೆ ಸಾಗುವ ರಸ್ತೆ; ತೀರಾ ಹತ್ತಿರದ ದಾರಿ. 'ಕರ್ನಾಟಕ' ಮತ್ತು 'ಹಿಂದೂಸ್ತಾನಿ' ಯೆಂಬ ಎರಡು ಶಾಸ್ತ್ರೀಯ ಸಂಗೀತ ಶಾಖೆಗಳ ಬಗ್ಗೆಯೂ ಅವರಿಗೆ ಅಪರಮಿತವಾದ ಅಭಿಮಾನ ಹಾಗೂ ಪ್ರೀತಿ.

[೧] Archived 2009-03-11 ವೇಬ್ಯಾಕ್ ಮೆಷಿನ್ ನಲ್ಲಿ.

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ