(Marathi: पाचगणी) 'ಪಂಚ್ ಗಣಿ,' ಮಹಾರಾಷ್ಟ್ರ ರಾಜ್ಯದ 'ಸತಾರ ಜಿಲ್ಲೆ'ಯ 'ಮ್ಯುನಿಸಿಪಲ್ ಕೌನ್ಸಿಲ್' ಇರುವ ಚಿಕ್ಕನಗರ. 'ಮಹಾರಾಷ್ಟ್ರ ರಾಜ್ಯ'ದ ಕೆಲವೇ 'ಅತಿ ಸುಂದರ ಗಿರಿಧಾಮ'ಗಳಲ್ಲಿ ಒಂದು. ಹೆಸರೇ ತಿಳಿಸುವಂತೆ ಈ ಸ್ಥಳದ ಸುತ್ತಲೂ ೫ ಬೆಟ್ಟಗಳು ಸುತ್ತುವರಿದಿವೆ. ಆ ಪ್ರದೇಶದಲ್ಲಿ ಸಹಜವಾಗಿ ಅತಿ ತಂಪಾದ ಹವೆಯಿರುವುದರಿಂದ ನಗರದ ಹಾಗೂ ದೇಶವಿದೇಶಗಳ ಪರ್ಯಟಕರನ್ನು ಸೂಜಿಗಲ್ಲಿನಂತೆ ಸೆಳೆದಿಟ್ಟ ಗಿರಿಧಾಮ-'ಪಂಚ್ ಗಣಿ,' 'ಸಹ್ಯಾದ್ರಿ ಪರ್ವತಶ್ರೇಣಿ'ಯ ವ್ಯಾಪ್ತಿಯಲ್ಲಿರುವ ಈ ಸುಂದರ ಪ್ರದೇಶ, ಸಮುದ್ರಮಟ್ಟದಿಂದ ಸುಮಾರು ೪,೪೦೦ ಅಡಿ ಎತ್ತರದಲ್ಲಿದೆ. ಮತ್ತೊಂದು ವಿಶೇಷವೆಂದರೆ ಇಲ್ಲಿ ಸುಪ್ರಸಿದ್ಧ 'ಬೋರ್ಡಿಂಗ್ ಹಾಗೂ ರೆಸಿಡೆನ್ಷಿಯಲ್ ಶಾಲೆ'ಗಳಿವೆ. ಪುರಾತನ ಪೋರ್ಚುಗೀಸ್ ಕಾಲೊನಿಯ ಶೈಲಿಯ ಕಾಟೇಜ್ ಗಳು,ಮತ್ತು ಬಂಗಲೆಗಳು ಸುತ್ತುವರೆದಿವೆ. ನಿಧಾನವಾದ ಎಲ್ಲವೂ ಸ್ಥಬ್ದ, ಜನಜೀವನ,ಗಡಿಬಿಡಿಯಿಲ್ಲದ ನೀರವತೆ ಎದ್ದು ಕಾಣುವ, ಜೀವನ ಶೈಲಿ ಎಲ್ಲರಿಗೂ ಮುದಕೊಡುತ್ತದೆ. ಎತ್ತರದ ಗಿರಿಗಳ ನೋಟ ಕಂದಕಗಳು, ಜುಳುಜುಳು ಹರಿಯುವ ತೊರೆಗಳು, ಪಕ್ಷಿಸಂಕುಲ, ಬಣ್ಣಬಣ್ಣದ ವಿಚಿತ್ರ ಗಿಡಮರ,ಫಲ ಪುಷ್ಪಗಳು. ಪುಟ್ಟ ಊರು ನಗರ ವಾಸಿಗಳಿಗೆ ಸ್ವರ್ಗದಂತೆ ಗೋಚರಿಸುತ್ತದೆ. ವಾರಂತ್ಯಾದಲ್ಲಿ ರಜೆಯಮೇಲೆ ಬರುವವರ ಸಂಖ್ಯೆ ಅಪಾರ. ಮೂರು ದಿನಗಳ ರಜೆಯನ್ನು ಹೊಂದಿಸಿಕೊಂಡು ಪರಿವಾರದ ಸಹಿತ ಇಲ್ಲವೇ ಹೊಸದಾಗಿ ಮದುವೆಯಾದ ಯುವಕ ಯುವತಿಯರಿಗೆ ಒಂದು ಅವಿಸ್ಮರಣೀಯ ತಾಣವಾಗಿದೆ.

ಪಂಚ್ ಗಣಿ

ಪಂಚ್ ಗಣಿ
ರಾಜ್ಯ
 - ಜಿಲ್ಲೆ
ಮಹಾರಾಷ್ಟ್ರ
 - ಸತಾರ
ನಿರ್ದೇಶಾಂಕಗಳು 17.92° N 73.82° E
ವಿಸ್ತಾರ
 - ಎತ್ತರ
 km²
 - 1293 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
{{{population_total}}}
 - /ಚದರ ಕಿ.ಮಿ.

ಪಂಚ್ ಗಣಿಯ ಸ್ವಾರಸ್ಯಕರ ಜಾಗಗಳು

ಬದಲಾಯಿಸಿ

'ಪಂಚ್ ಗಣಿ,' ಪುಣೆ ಹತ್ತಿರದಲ್ಲಿದೆ. ಇಲ್ಲಿಗೆ ಭೇಟಿಕೊಡಲು ಅತಿ ಉತ್ತಮ ಸಮಯವೆಂದರೆ, ಅಕ್ಟೋಬರ್ ನಿಂದ ಏಪ್ರಿಲ್ ವರೆಗೆ, ಹಾಗೂ, ಸೆಪ್ಟೆಂಬರ್ ತಿಂಗಳಿಂದ ಮೇ ವರೆಗೆ. ಯಾವ ಸದ್ದುಗದ್ದಲ, ಕಲುಶಿತ ವಾತಾವರಣ, ದೊಂಬಿ, ದಾಂಧಲೆ ಸದ್ದುಗದ್ದಲಕ್ಕೆ ಅಪವಾದ ಅತಿ ಚಿಕ್ಕ ಗ್ರಾಮದಂತಿರುವ 'ಪಂಚ್ ಗಣಿ'ಯಲ್ಲಿ ಇಳಿಜಾರಾದ ಮತ್ತು ಎತ್ತರಕ್ಕೆ ಸಾಗುವ ಕಾಲುದಾರಿಗಳು, ಚಿಕ್ಕಪುಟ್ಟ ರಸ್ತೆಗಳಿವೆ. 'ಪಂಚ್ ಗಣಿ'ಯಲ್ಲಿ ವೀಕ್ಷಿಸಲೇಬೇಕಾದ ಸ್ಥಳಗಳ ಪಟ್ಟಿ ಹೀಗಿದೆ. ಹಾಗೇ ನಡೆದುಹೋದರೆ ನಮಗೆ ಸಿಗುವ ಹಲವು ಸುಂದರ ತಾಣಗಳಲ್ಲಿ 'ಕೃಷ್ಣಾವ್ಯಾಲಿ ಪರಿಸರ'ವೂ ಒಂದು. ಇದು 'ಪಾರ್ಸಿ ಪಾಂಟ್' ಗೆ ಹೋಗವದಾರಿಯಲ್ಲಿ ಸಿಗುತ್ತದೆ. 'ಧೋಮ್ ಅಣೆಕಟ್ಟಿ'ನಲ್ಲಿ ಹರಿದು ಬರುವ ಅತಿ ತಿಳಿಯಾದಮತ್ತು ಶುದ್ಧವಾದ ಮತ್ತು ಸ್ಪಟಿಕದಂತೆ ನೀರೊಳಗಿನ ಜಲಚರಗಳನ್ನೂ, ರಮಣೀಯ ಸೌಂದರ್ಯವನ್ನು ಸವಿಯಲು, 'ಸಿಡ್ನಿ ಪಾಯಿಂಟ್' ಗೆಧಾವಿಸಬಹುದು. ಮಂಧರ್ ದೇವ್, ಮತ್ತು ಪಾಂಡವ್ ಘಡ್ ನ ಬಳಿ ಅನೇಕ ಚಿತ್ರಗಳ ಚಿತ್ರೀಕರಣದ ದೃಶ್ಯಒಮ್ಮೆಲೇ ಕಾಣಿಸಿಕೊಳ್ಳುತ್ತದೆ. ಎಲ್ಲರನ್ನೂ ಒಮ್ಮೆಲೇ ಚಕಿತಗೊಳಿಸುವ ದೃಷ್ಯವೊಂದು ಜನರ ಮನಸೆಳೆಯುತ್ತದೆ, ಅದೇ 'ಒಂಟಿಮರದ ದೃಶ್ಯ'. ಬೃಹತ್ ಬಂಡೆಗಳಮೇಲೆ ನೆಲದ ಕೊನೆಯೆಂದು ಸಾರುವ ಫಲಕದ ಬಳಿ ಇದು ಎಲ್ಲರ ಗಮನವನ್ನು ಸೆಳೆಯುತ್ತದೆ. ಸುಮಾರು ೪.೫ ಕಿ.ಮೀ ಸಮತಟ್ಟಾದ ಪರಿಸರ, 'ಏಶ್ಯಾಖಂಡದ ಎರಡನೆಯ ಅತಿ ದೊಡ್ಡ ಪ್ರಸ್ಥಭೂಮಿ' ಪಂಚ್ ಗಣಿ' ಯೆನ್ನುವುದು ಗಮನಾರ್ಹ ಸಂಗತಿ. 'ಡೆವಿಲ್ಸ್ ಕಿಚನ್, ಪಾಂಡವರ ಸಮಯದಲ್ಲಿ ಅಡುಗೆಮನೆ'ಯಾಗಿತ್ತು. ಅವರ ಅಲ್ಲಿ ಆಡುಗೆಯನ್ನು ಮಾಡಿ, ಊಟಮಾಡಿದರೆಂಬ ವದಂತಿಯಿದೆ.

ಜಲಕ್ರೀಡೆಯ ಸೌಲಭ್ಯಗಳು

ಬದಲಾಯಿಸಿ
  • 'ಹ್ಯಾರಿಸನ್ ಫಾಲಿ,'
  • 'ಟಪೊಲ',

'ಶಿವನ ಪುತ್ರ,ಕಾರ್ತಿಕೇಯ ಸ್ವಾಮಿಯ ದೇವಾಲಯ,' 'ರಾಜ್ಪುರಿ ಗುಹೆ'ಗಳಲ್ಲಿ ಸಿಗುತ್ತದೆ.

ಶೆರ್ಬಾಗ್

ಬದಲಾಯಿಸಿ

ಹಣ್ಣು, ಫಲಪುಷ್ಪಗಳ ಉದ್ಯಾನ, 'ತರಹಾವರಿಯ ಕ್ಯಾಕ್ಟಸ್ ಗಿಡ'ಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಒಂದು ಉತ್ತಮವಾದ 'ರೆಸ್ಟೊರೆಂಟ್' ಇದೆ. ಡಬ್ಬಿಗಳಲ್ಲಿ ತುಂಬಿ ಮಾರಲ್ಪಡುವ ಆಹಾರಪದಾರ್ಥಗಳಿಗೆ ಪ್ರಸಿದ್ಧಿಯಾಗಿದೆ. ಮಕ್ಕಳೊಂದಿಗೆ ಅಲ್ಲಿ ಹೋದವರಿಗೆ ಅನೇಕ ಮಕ್ಕಳ ಮನರಂಜನೆಯ ಸಾಮಗ್ರಿಗಳು ದೊರೆಯುತ್ತವೆ. ದೂರದಲ್ಲಿ 'ಪಂಚ್ ಗಣಿ-ಮಹಾಬಲೇಶ್ವರ್ 'ಹೋಗುವ ರಸ್ತೆಯಲ್ಲಿ, ಹಾದಿಯಲ್ಲೇ ಸಿಗುವ, 'ಭಿಲಾರ್ ಜಲಪಾತ' ಅತ್ಯಾಕರ್ಷಕವಾಗಿದೆ.

'ಪಂಚ್ ಗಣಿ' ಗೆ ಹತ್ತಿರದಲ್ಲಿ

ಬದಲಾಯಿಸಿ

ಹತ್ತಿರದ ಜಾಗಗಳನ್ನು ನೋಡಲು ಇಚ್ಛಿಸುವ ಪರ್ಯಟಕರಿಗೆ 'ವೈ' ಯೆಂಬ ೧೪ ಕಿ.ಮೀ ದೂರದಲ್ಲಿರುವ ಚಾರಿತ್ರ್ಯಿಕ ಸ್ಥಳ. ದೇವಸ್ಥಾನಗಳು, ’ಕಲಲ್ ಘಾಟ್', ಕೋಟೆಗಳು, 'ದೋಲ್ಯ ಗಣಪತಿ ದೇವಾಲಯ', ಕಾಶಿವಿಶ್ವೇಶ್ವರ ದೇವಲಯಗಳಿಗೆ ಹೆಸರುವಾಸಿಯಾಗಿದೆ. ೨೧ ಕಿ. ಮೀ ದೂರದಲ್ಲಿರುವ 'ಧೋಮ್ ಅಣೆಕಟ್ಟಿನ ನದಿಪ್ರದೇಶ'ದಲ್ಲಿ ದೋಣಿಸಂಚಾರ ವ್ಯವಸ್ಥೆ. 'ಮಹಾಬಲೇಶ್ವರ್ ಗಿರಿಧಾಮ', ೨೩ ಕಿ.ಮೀ ದೂರದಲ್ಲಿ ಅದೇ ಹೆಸರಿನ ದೇವಾಲಯಗಳನ್ನು ಅಲ್ಲಿ ವೀಕ್ಷಿಸಬಹುದು. 'ವೆನ್ನಾ ಸರೋವರ', 'ಲಿಂಗ್ ಮಾಲ ಜಲಪಾತ', ಮತ್ತು ಭವ್ಯ ಮನಮೋಹಕ 'ಮಾಲ್ಕಂ ಪಾಯಿಂಟ್', 'ಮಾರ್ಜೊರಿ ಪಾಯಿಂಟ್,'ಗಳು ಮುದಕೊಡುವ ಜಾಗಗಳಾಗಿವೆ. ಖರೀದಿಸಲು ಅತಿ ಮುದಕೊದುವ ಶಾಪಿಂಗ್ ಗೆ ಹಲವಾರು ಅಂಗಡಿಗಳಿವೆ.

'ಬುಧ್ ಕಾ ಬಝಾರ್'

ಬದಲಾಯಿಸಿ

ಶಾಪಿಂಗ್ ಪ್ರಿಯರಿಗೆ ಹೇಳಿಮಾಡಿಸಿದ ತಾಣ. 'ಚೌಕಾಶಿವ್ಯಾಪಾರ'ಕ್ಕೆ ಹೆಸರುವಾಸಿ. 'ಮಾಪ್ರೊ' ಯೆಂಬ ಅತಿರುಚಿಯಾದ ಜಾಮ್, ಮರ್ಮಲೆದೆಸ್. 'ರೋಚ್ ಅಂಡ್ ಸನ್ಸ್', ಅತಿ ಹಳೆಯ ಬೇಕರಿ, 'ಕೇರಳಬೇಕರಿ', 'ವೈ'ನಲ್ಲಿ, 'ಯಮ್ಮಿ ಕೇಕ್ಸ್' ಗಳಿಗೆ, 'ಪೇಸ್ಟ್ರಿ', 'ಸ್ಟ್ರಾಬೆರ್ರಿಸ್' ಸಿಗುವ ತಾಣ. ಅಲ್ಲಿ 'ಸ್ಟ್ರಾಬೆರ್ರಿ ಹಣ್ಣು'ಗಳನ್ನು ಸವಿಯುವುದೇ ಒಂಎದು ಅಪೂರ್ವ ಅನುಭವ.

ವಾಸಕ್ಕೆ ಅನುಕೂಲವಾದ ಸ್ಥಳಗಳು

ಬದಲಾಯಿಸಿ

ವಾಸಕ್ಕೆ ಸ್ಥಳಗಳು ಸುಲಭವಾಗಿ ದೊರೆಯುತ್ತವೆ. 'ಹೋಟೆಲ್,' 'ಕಾಟೇಜ್' ಗಳಲ್ಲಿ ರಜಾದಿನಗಳಲ್ಲಿ ವಾಸ್ತವ್ಯಕ್ಕೆ ಅನುವುಮಾಡಿಕೊಡಲಾಗಿದೆ.

'ಪಂಚ್ ಗಣಿ'ತಲುಪಲು

ಬದಲಾಯಿಸಿ
  • ವಿಮಾನದಲ್ಲಿ : ೧೦೦ ಕಿ.ಮೀ ದೂರದಲ್ಲಿ 'ಪುಣೆನಗರದ ಹವಾಯಿ ಅಡ್ಡ'ವಿದೆ.
  • ರೈಲಿನಲ್ಲಿ ೧೦೦ ಕಿ.ಮೀ ದೂರದಲ್ಲಿ ಪುಣೆ, ಹತ್ತಿರದ ರೈಲ್ವೆ ನಿಲ್ದಾಣ
  • ರಸ್ತೆಯಲ್ಲಿ : ಪುಣೆ (೧೦೦ ಕಿ. ಮೀ) ಮುಂಬಯಿ (೨೫೮ ಕಿ. ಮೀ).
  • ಭೇಟಿಕೊಡಲು ಉತ್ತಮವಾದ ಸಮಯ : ಮಾರ್ಚ್-ಜೂನ್, ಹಾಗೂ ನವೆಂಬರ್-ಜನವರಿ

'ಮಹಾರಾಷ್ಟ್ರದ ಮೆಕ್ಕಾವೆಂದೇ ಹೆಸರಾದ ಪಂಚ್ ಗಣಿ'

ಬದಲಾಯಿಸಿ

ಮಹಾರಾಷ್ಟ್ರದ ಮಹಾಬಲೇಶ್ವರ ದಿಂದ 'ಮೆಕ್ಕ ಆಫ್ ಮಹಾರಾಷ್ಟ್ರ'ವೆನ್ನುವ 'ಪಂಚ್ ಗಣಿ,' ೧,೩೩೪ ಮೀ ಎತ್ತರದ ಬೆಟ್ಟಗಳ ಊರು. 'ಪಂಚ್ ಗಣಿ'. ಭಾರತದಲ್ಲಿ 'ಚಿರ್ರಾಪುಂಜಿ' ಯ ನಂತರ, ಅತಿ ಹೆಚ್ಚು ಮಳೆ ಬೀಳುವ ಪ್ರದೇಶ 'ಪಂಚ್ ಗಣಿ'. 'ಪಂಚ್ ಗಣಿ' ಬೆಟ್ಟದ ಶಹರಿನಲ್ಲಿ ಹಲವಾರು ವೀಕ್ಷಣಾ ಸ್ಥಳಗಳು ಪ್ರವಾಸಿಗಳ ಮನಸೆಳೆಯುತ್ತವೆ. ಅವುಗಳು ಹೀಗಿವೆ. ಇಲ್ಲಿನ

  • 'ಸ್ಟಾ ಬೆರ್ರಿ ತೋಟಗಳು' ವಿಶ್ವ ವಿಖ್ಯಾತವಾಗಿವೆ.
  • 'ಪಾರ್ಸಿ ಪಾಯಿಂಟ್'
  • 'ಮುನ್ಸಿಪಲ್ ಗಾರ್ಡನ್',
  • 'ಚಿಲ್ಡ್ರನ್ಸ್ ಪಾರ್ಕ್',
  • 'ಹೂವಿನ ತೋಟಗಳು',
"https://kn.wikipedia.org/w/index.php?title=ಪಂಚ್_ಗಣಿ&oldid=785889" ಇಂದ ಪಡೆಯಲ್ಪಟ್ಟಿದೆ