ಪಂಚ್ಮರ್ಹಿ
ಪಚ್ಮರ್ಹಿ (ಹಿಂದಿ:पचमड़ी) ಅನ್ನುವುದು ಮಧ್ಯ ಭಾರತದ ಮಧ್ಯಪ್ರದೇಶ ರಾಜ್ಯದಲ್ಲಿನ ಒಂದು ಗಿರಿಧಾಮವಾಗಿದ್ದು, ಇದನ್ನು ಪಚ್ಮರ್ಹಿ ದಂಡು ಪ್ರದೇಶ ಎಂದು ಕೂಡ ಗುರುತಿಸಲಾಗಿದೆ. ಇದು "ಸಾತ್ಪುರದ ರಾಣಿ " ಎಂದು ಪ್ರಸಿದ್ಧವಾಗಿದ್ದು, ಹೊಶಂಗಬಾದ್ ಜಿಲ್ಲೆಯ, [[ಸಾತ್ಪುರಶ್ರೇಣಿ]]ಯ ಒಂದು ಪ್ರಪಾತದಲ್ಲಿ 1000 ಮೀ ಎತ್ತರ ಇದೆ. ಮಧ್ಯ ಭಾರತದ ಪ್ರದೇಶದಲ್ಲಿನ ಅತ್ಯಂತ ಎತ್ತರದ ಬಿಂದು ಮತ್ತು ವಿಂಧ್ಯ ಮತ್ತು ಸಾತ್ಪುರ ಶ್ರೇಣಿಯಾದ 1100 ಮೀ ಎತ್ತರದ ಧೂಪ್‌ಘರ್ ಇಲ್ಲಿದೆ.
ಪಂಚ್ಮರ್ಹಿ
Pachmarhi | |
---|---|
town |
ಇತಿಹಾಸ
ಬದಲಾಯಿಸಿಈ ಪ್ರದೇಶವನ್ನು ಪಾಶ್ಚಿಮಾತ್ಯ ಪ್ರಪಂಚಕ್ಕೆ ಬ್ರಿಟನ್ನಿನ ಸೇನೆಯ ಕ್ಯಾಪ್ಟನ್ ಜೇಮ್ಸ್ ಫೋರ್ಸೇಥ್ ಎಂಬುವವರು 1857 ರಲ್ಲಿ ಪರಿಚಯಮಾಡಿಕೊಟ್ಟರು. ಆ ಸಮಯದಲ್ಲಿ ಪಚ್ಮರ್ಹಿಯು ಭಾರತದ ಕೇಂದ್ರೀಯ ಪ್ರಾಂತ್ಯದಲ್ಲಿ ಬ್ರಿಟೀಷರ ಸೇನೆಗೆ ಒಂದು ಗಿರಿಧಾಮ ಮತ್ತು ಆರೋಗ್ಯವರ್ಧಕ ಸ್ಥಳವಾಗಿತ್ತು. 1901 ರಲ್ಲಿ ಜನಸಂಖ್ಯೆ 3020 ಇದ್ದು, ಬೇಸಿಗೆಯ ತಿಂಗಳುಗಳಲ್ಲಿ ಈ ಸಂಖ್ಯೆ ದ್ವಿಗುಣವಾಗುತ್ತಿತ್ತು. ಪಚ್ಮರ್ಹಿ ಕೇಂದ್ರೀಯ ಪ್ರಾಂತ್ಯಕ್ಕೆ ಬೇಸಿಗೆಯ ರಾಜ್ಯಧಾನಿಯಾಗಿತ್ತು. ಈ ನಗರದ ಸುತ್ತಮುತ್ತಲಿರುವ ಕಾಡು ಅನೇಕ ಬಗೆಬಗೆಯ ಅಪರೂಪದ ಗಿಡಗಳಿಗೆ ಮನೆಯಾಗಿದೆ. 2009 ರ ಮೇ ತಿಂಗಳಲ್ಲಿ ಯುನೆಸ್ಕೋ ಪಚ್ಮರ್ಹಿ ಉದ್ಯಾನವನ್ನು ತನ್ನ ಜೈವಿಕ ಮಂಡಲ ಸಂಗ್ರಹದ ಪಟ್ಟಿಗೆ ಸೇರಿಸಿಕೊಂಡಿತು.[೧][೨]
ನಗರ
ಬದಲಾಯಿಸಿಈ ನಗರವು ತುಂಬಾ ವ್ಯಾಪಕ ಪ್ರದೇಶವೇನಲ್ಲ, ಮತ್ತು ಬಹು ಪ್ರದೇಶವು ಭಾರತದ ಸೇನೆ ನಿಯಂತ್ರಣದಲ್ಲಿದ್ದು ಪಚ್ಮರ್ಹಿ ದಂಡು ಪ್ರದೇಶದ ವ್ಯಾಪ್ತಿಯಲ್ಲಿದೆ. ಇದರ ಜನಸಂಖ್ಯೆ ಸುಮಾರು 10,000 ವಿದ್ದು, ಬಹು ಭಾಗ ಸೇನೆಯವರೇ ಆಗಿದ್ದಾರೆ.
ನಾಗರಿಕ ಪಟ್ಟಣ ಚಿಕ್ಕದಾಗಿದ್ದು ಸರೋವರದ ತುದಿಭಾಗದ ಕಡೆಗಿದೆ. ಅಲ್ಲಿ ಕೆಲವು ಉಪಹಾರ ಗೃಹ ಮತ್ತು ಚಲನಚಿತ್ರ ಮಂದಿರವಿದೆ. ಈ ಸಣ್ಣ ನಗರದ ಮಧ್ಯೆ ಒಂದು ಮಾರುಕಟ್ಟೆಯಿದೆ.
ಅಲ್ಲಿ ಸೇನೆಯ ನಿಯಂತ್ರಣದಲ್ಲಿರುವ ಒಂದಷ್ಟು ಜಾಗವಿದ್ದು, ಇದು ಕ್ಲಬ್ ಮತ್ತು "ಗೋಲ್ಫ್" ಆಟದ ಮೈದಾನದ ಜಾಗವನ್ನು ಕೂಡ ಒಳಗೊಂಡಿದೆ.
ಧೂಪ್‌ಘರ್ ಬಳಿ ಒಂದು ಅಪರೂಪವಾಗಿ ಉಪಯೋಗಿಸುವ ವಿಮಾನ ನಿಲ್ಧಾಣದ ದಾರಿಯಿದೆ. ಅದು ಹುಲ್ಲಿನಿಂದ ತುಂಬಿರುವುದರಿಂದ ಎಲ್ಲೋ ಒಮ್ಮೊಮ್ಮೆ ಉಪಯೋಗಿಸಲಾಗುತ್ತದೆ. ವಿಮಾನ ನಿಲ್ಧಾಣದ ದಾರಿಯಲ್ಲಿ ಹುಲಿಗಳು ಕಂಡು ಬಂದಿದೆ. ಪಚ್ಮರ್ಹಿ ದಂಡು ಪ್ರದೇಶದ ತುದಿಯಲ್ಲಿ ಚಿರತೆಗಳು ಕಾಣುವುದು ಸಾಮಾನ್ಯವಾಗಿದೆ.
ಪ್ರವಾಸೋದ್ಯಮ
ಬದಲಾಯಿಸಿಪಚ್ಮರ್ಹಿ ಒಂದು ಪ್ರವಾಸಿ ತಾಣವಾಗಿದೆ. ದೀಪಾವಳಿ ಮತ್ತು ಚಳಿಗಾಲದಲ್ಲಿ ಅನೇಕ ಪ್ರವಾಸಿಗಳು ಈ ಜಾಗವನ್ನು ವೀಕ್ಷಿಸುತ್ತಾರೆ, ಮತ್ತು ಅವರಿಗೆ ಅಲ್ಲಿ ಉಳಿಯಲು ಸಮುಚಿತವಾದ ಸೌಲಭ್ಯಗಳು ದೊರಕುತ್ತದೆ. ಪಚ್ಮರ್ಹಿಯ ಔನ್ನತ್ಯ ಮತ್ತು ಸಾತ್ಪುರದ ಕಾಡುಗಳು, ಜೊತೆಯಲ್ಲಿ ಅಲ್ಲಿರುವ ನದಿ ಮತ್ತು ಜಲಪಾತಗಳು ಮತ್ತು ಪ್ರಾಣಿ ಪಕ್ಷಿಗಳಿಂದಾಗಿ ಇಡೀ ಪ್ರದೇಶ ಅತ್ಯಂತ ರಮಣೀಯ ದೃಶ್ಯವಾಗಿದೆ. ಪಚ್ಮರ್ಹಿಯು ಪಚ್ಮರ್ಹಿ ಜೈವಿಕ ಮಂಡಲದ ಒಳಗೆ ಬರುತ್ತದೆ. ಇದನ್ನು 1999 ರಲ್ಲಿ ಈ ಜಾಗವನ್ನು ದೊಡ್ಡ ಪ್ರಮಾಣದ ಪ್ರಾಣಿ ಪಕ್ಷಿ ಸಂರಕ್ಷಣೆಗಾಗಿ ಎರಡು ಕಾಡುಗಳನ್ನು ಜೋಡಿಸಿ ರೂಪಿಸಲಾಯಿತು - ಇದು ಪ್ರಮುಖ ಭಾರತದ ಶಿಖರದ ತುದಿಯಾಗಿದೆ.
ಪಚ್ಮರ್ಹಿ ಕಾಡಿನಲ್ಲಿ ಅನೇಕ ಗುಹೆ ಚಿತ್ರಕಲೆಗಳಿವೆ, ಅದರಲ್ಲಿ ಕೆಲವು 10,000 ವರ್ಷಕ್ಕಿಂತ ಹಳೆಯದೆಂದು ಗುರುತಿಸಲಾಗಿದೆ. ಚಿತ್ರದಲ್ಲಿ ತೋರಿಸಿರುವ ಕೆಳಭಾಗದ ಪ್ರವಾಸಿ ಆಕರ್ಷಣ ಉದ್ಯಾನದ ಹೆಸರು ಪಾಂಡವ ಗುಹೆ. ಈ ಗುಹೆಗಳು ಮೂಲತಃ ಬೌದ್ಧ ಧರ್ಮಕ್ಕೆ ಸಂಬಧಿಸಿರುವವಾದರೂ ಈ ಹೆಸರು ಉಳಿದಿದೆ.
ಈ ಜಾಗವು ಅತ್ಯಂತ ಸಮೃದ್ಧವಾದ ಮರಗಳಿಂದ ತುಂಬಿದ್ದು, ಅದರಲ್ಲಿ ಸಾಗವಾನಿ ಕೂಡ ಇವೆ. ಆದರೆ, ಇದು ಅಭಯಾರಣ್ಯದ ಭಾಗವಾಗಿರುವುದರಿಂದ ಯಾವುದೇ ಹೊಸ ನಿರ್ಮಾಣ ಅಥವಾ ಮರ ಕಡಿತವನ್ನು ಇಲ್ಲಿ ರದ್ದುಗೊಳಿಸಲಾಗಿದೆ. ಅಪರೂಪದ ಸಸ್ಯ ಮತ್ತು ಜೀವ ವೈವಿದ್ಯಗಳನ್ನು ಹೊಂದಿರುವ ಪಚ್ಮರ್ಹಿ ಪಟ್ಟಣದ ಹೊರಭಾಗದಲ್ಲಿ ಯಾವುದೇ ಹೊಸ ನಿರ್ಮಾಣವನ್ನು ಕೈಗೊಳ್ಳಬೇಕಾದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಒಪ್ಪಿಗೆಯನ್ನು ಪಡೆಯಬೇಕು.
ಕೆಲವು ಪ್ರವಾಸಿಗರ ಆಸಕ್ತಿವುಳ್ಳ ಜಾಗಗಳು ಹೀಗಿವೆ:
- ರಜತ್ ಪ್ರಪಾತ (ದೊಡ್ಡ ಜಲಪಾತ)
- ದುಂಬಿ ಜಲಪಾತ
- ಪಾಂಡವ ಗುಹೆ
- ಬಡ ಮಹದೇವ್
- ಗುಪ್ತ ಮಹದೇವ್
- ಚೌರಾಘರ್ (ಇಲ್ಲಿಗೆ ಶಿವರಾತ್ರಿಯದಿನ ಶಿವಭಕ್ತರು ಬಾರಿ ಪ್ರಮಾಣದಲ್ಲಿ ಬರುತ್ತಾರೆ)
- ಧೂಪ್‌ಘರ್ (ಸಾತ್ಪುರ ಮತ್ತು ಮಧ್ಯ ಪ್ರದೇಶದ ಪರಮ ಶಿಖರ)
- ಹಂದಿ ಕ್ಹೊಹ್ (ಅಗಾಧ ಪ್ರಪಾತ)
- ಅಪ್ಸರ ಜಲಪಾತ (ಗಂಧರ್ವ ಕೊಳ)
- ಜಟಾಶಂಕರ್
- ಡಚೆಸ್ ಜಲಪಾತ
- ಪಚ್ಮರ್ಹಿ ಬೆಟ್ಟ
- ಪನ್ಸಿ ಕೊಳ
- ವಾಟರ್ಸ್ ಮೀಟ್
- ಪಿಕಾಡಿಲ್ಲೆ ಸರ್ಕಸ್
- ಪಥರ್ಚಟ್ಟಾ
- ಕ್ರಂಪ್ಸ್ ಕ್ರಾಗ್
- ಲೇಡಿ ರಾಬರ್ಟ್ಸನ್ ರ ನೋಟ
- ಕಾಲ್ಲೆತಿನ್ ಕ್ರಾಗ್
- ಮೌಂಟ್ ರೋಸ
ಈ ಪಟ್ಟಣದಲ್ಲಿ ಹಲವು ಪ್ರವಾಸಿ ಉಪಹಾರ ಗೃಹಗಳಿವೆ, ಇದರಲ್ಲಿ ಪ್ರವಾಸೋದ್ಯಮ ಖಾತೆಯಿಂದ ನಡೆಸುತ್ತಿರುವ ಉಪಹಾರಗೃಹ ಕೂಡ ಇದೆ (ಮಧ್ಯ ಪ್ರದೇಶ ಸರ್ಕಾರ). ಖಾಸಗಿ ಪ್ರವಾಸಿ ಸ್ಥಳ ಮತ್ತು ಕುಟೀರ / ಉಪಹಾರಗೃಹ ಹೋಲುವ ಚುನ್ಮುನ್ ಕುಟೀರ, ದೂರವಾಣಿ ಸಂಖ್ಯೆ 9424434599 ಮತ್ತು ಗೋಲ್ಫ್ ನೋಟ ಚೆನ್ನಾಗಿದೆ. ಅಲ್ಲಿ ಮುಖ್ಯ ಪಟ್ಟಣದಿಂದ 4 ಕಿಮೀ ದೂರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಸತಿ ಕೂಡ ಇದೆ.
ಸಸ್ಯ ಮತ್ತು ಜೀವ ವೈವಿದ್ಯ
ಬದಲಾಯಿಸಿಆ ದಟ್ಟವಾದ ಕಾಡು ಮತ್ತು ಕಲ್ಲುಬಂಡೆ ಪ್ರಪಾತಗಳಿಂದ ಕೂಡಿದ ಈ ಅಪರೂಪದ ಜಾಗವು ಅನೇಕ ವಿಶೇಷ ಗಿಡಮರಗಳಿಗೆ ತಾಣವಾಗಿದೆ. ಅಲ್ಲದೇ ಇಲ್ಲಿ ಹುಲಿ, ಚಿರತೆ, ಕಾಡುಹಂದಿ, ನವಿಲು ಮತ್ತು ಕೋತಿಗಳು ಈ ಕಂಡು ಬರುತ್ತದೆ. ಇದು ರಾಷ್ಟ್ರೀಯ ವನದ ಒಂದು ಭಾಗವಾಗಿದೆ.ಸಾತ್ಪುರ ರಾಷ್ಟ್ರೀಯ ವನ ಮತ್ತು ಎರಡು ಅರಣ್ಯ ಧಾಮ (ಬೊರಿ, ಪಚ್ಮರ್ಹಿ) ಇದರೊಳಗಿವೆ.
ಆಕರಗಳು
ಬದಲಾಯಿಸಿ- ↑ "Three Indian sites added to UNESCO list of biosphere reserves". Sify. 27 May 2009. Retrieved 2009-05-30.
- ↑ "UNESCO Designates 22 New Biosphere Reserves". Environment News Service. May 27, 2009. Archived from the original on 2016-03-03. Retrieved 2009-05-30.