ನೇತ್ರಾಣಿ ದ್ವೀಪ

ಭಾರತದಲ್ಲಿರುವ ಒಂದು ದ್ವೀಪ

ಪಾರಿವಾಳ ದ್ವೀಪ ಎಂದೂ ಕರೆಯಲ್ಪಡುವ ನೇತ್ರಾಣಿ ಅರಬ್ಬೀ ಸಮುದ್ರದಲ್ಲಿರುವ ಭಾರತದ ಒಂದು ದ್ವೀಪ. ಇದು ಕರ್ನಾಟಕದ ಕರಾವಳಿಯ ಬದಿಯಲ್ಲಿದೆ. ಮುರುಡೇಶ್ವರದಿಂದ ಸುಮಾರು ೧೦ ಕಿ.ಮೀ ದೂರದಲ್ಲಿದೆ. ಇಲ್ಲಿ ಪಾರಿವಾಳಗಳಲ್ಲದೆ, ಕಾಡು ಮೇಕೆಗಳು ಕಂಡು ಬರುತ್ತವೆ. ಈ ಗೋವಾ, ಮುಂಬಯಿ ಮತ್ತು ಬೆಂಗಳೂರು ನಗರಗಳಿಂದ ದ್ವೀಪವು ಸುಲಭವಾಗಿ ಹೋಗಬಹುದಾಗಿದ್ದು ಸ್ಕೂಬಾ ಡೈವಿಂಗ್ ನಡೆಸಲು ಪ್ರಶಸ್ತವಾದ ಜಾಗಗಳನ್ನು ಹೊಂದಿದೆ. ಗೋವಾದಲ್ಲಿ ಇಲ್ಲಿ ಸ್ಕೂಬಾ ಡೈವಿಂಗ್ ನಡೆಸುವ ಅನೇಕ ಕಾರ್ಯಾಗಾರಗಳು ನಡೆಯುತ್ತವೆ[೧].

ನೇತ್ರಾಣಿ
Nickname: Pigeon Island
ನೇತ್ರಾಣಿ ದ್ವೀಪ
ಭಾರತ
Geography
Coordinates14°04′59″N 74°28′16″E / 14.083°N 74.471°E / 14.083; 74.471Coordinates: 14°04′59″N 74°28′16″E / 14.083°N 74.471°E / 14.083; 74.471
Country
India
ರಾಜ್ಯಕರ್ನಾಟಕ
ಜಿಲ್ಲೆಉತ್ತರ ಕನ್ನಡ

ಆಕರ್ಷಣೆಗಳು ಸಂಪಾದಿಸಿ

ನೇತ್ರಾಣಿಯು ಹವಳದ ದ್ವೀಪವಾಗಿದ್ದು ಊದುಗೊಳವೆ ಹಾಕಿ ಈಜುವ ಮತ್ತು ಧುಮುಕುವ ಚಟುವಟಿಕೆಗಳಿಗೆ ಪ್ರಶಸ್ತವಾಗಿದೆ. ವಿವಿಧ ರೀತಿಯ ಹವಳಗಳು, ಚಿಟ್ಟೆ ಮೀನು, ಬಂದೂಕು ಮೀನು, ಗಿಳಿ ಮೀನು, ಹಾವು ಮೀನು ಮತ್ತು ಸೀಗಡಿ ಮೀನುಗಳು ಕಂಡು ಬರುತ್ತವೆ. ಧುಮುಕುಗಾರರು ಓರ್ಕಾ ಮತ್ತು ತಿಮಿಂಗಿಲಗಳನ್ನೂ ನೋಡಿರುವ ವರದಿ ಇದೆ.

ಚೂಪಾದ ಬಂಡೆಗಳು ಮತ್ತು ಕಡಿದಾದ ಕಮರಿಗಳಿರುವುದರಿಂದ ಸಾಮಾನ್ಯವಾಗಿ ಪ್ರವಾಸಿ ಗಳು ದ್ವೀಪವನ್ನು ಹತ್ತದೇ, ಧುಮುಕುವ ಮತ್ತು ಊದುಗೊಳವೆ ಹಾಕಿ ಈಜುವ ಚಟುವಟಿಕೆಗಳನ್ನು ದ್ವೀಪದ ಸಮೀಪದಲ್ಲಿ ನಡೆಸುತ್ತಾರೆ. ವೃತ್ತಿನಿರತ ಧುಮುಕುಗಾರರಿಗೆ ಈ ಸ್ಥಳವು ಪ್ರಶಸ್ತವಾಗಿದೆ.

ನೇತ್ರಾಣಿಯ ಪಕ್ಕದಲ್ಲಿರುವ ದ್ವೀಪವು ಭಾರತೀಯ ನೌಕಾಪಡೆಯಿಂದ ಗುರಿ ಅಭ್ಯಾಸಕ್ಕಾಗಿ ಬಳಸಲ್ಪಡುತ್ತದೆ. ಖಾಲಿ ಗುಂಡುಗಳನ್ನು ನೇತ್ರಾಣಿ ಮತ್ತು ಪಕ್ಕದ ದ್ವೀಪದಲ್ಲಿ ಕಾಣಬಹುದು. ನೇತ್ರಾಣಿಗೆ ತೆರಳಲು ತಹಶೀಲ್ದಾರರ ಅನುಮತಿ ಬೇಕಾಗುತ್ತದೆ. ಅನುಮತಿಯಿಲ್ಲದೆ ನೇತ್ರಾಣಿಗೆ ಭೇಟಿ ಕೊಡುವುದು ಸಮಂಜಸವಲ್ಲ.

ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಡಿಸೆಂಬರ್ ಮತ್ತು ಜನವರಿ. ಸಮುದ್ರವು ಪ್ರಕ್ಷುಬ್ಧವಾಗುವುದರಿಂದ ಇಲ್ಲಿನ ವಿಹಾರ ಧಾಮವು ಜೂನ್-ಸಪ್ಟೆಂಬರ್ ತಿಂಗಳುಗಳಲ್ಲಿ ಊದು ಗೊಳವೆ ಹಾಕಿ ಈಜುವ ಮತ್ತು ಧುಮುಕುವ ಚಟುವಟಿಕೆಗಳಿಗೆ ಪ್ರವಾಸಿಗರನ್ನು ಕರೆಸಿಕೊಳ್ಳುವುದಿಲ್ಲ.

ಉಲ್ಲೇಖಗಳು ಸಂಪಾದಿಸಿ

ಕರ್ನಾಟಕದ ಏಳು ಅದ್ಭುತಗಳು
ಹಿರೇಬೆಣಕಲ್ ಶಿಲಾ ಸಮಾಧಿಗಳು | ಹಂಪಿ | ಗೋಲ ಗುಮ್ಮಟ | ಶ್ರವಣಬೆಳಗೊಳದ ಗೊಮ್ಮಟೇಶ್ವರ | ಮೈಸೂರು ಅರಮನೆ | ಜೋಗ ಜಲಪಾತ | ನೇತ್ರಾಣಿ ದ್ವೀಪ