ನುಗ್ಗೇಹಳ್ಳಿ ಪಂಕಜ
ನುಗ್ಗೇಹಳ್ಳಿ ಪಂಕಜ ( ಜನನ : ಜೂನ್ ೧೯೨೯, ೨) ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆಯುವ ಭಾರತೀಯ ಬರಹಗಾರ್ತಿ. ಪಂಕಜ ಅವರ ತಾಯಿ ಶಾಂತಮ್ಮ ಮತ್ತು ತಂದೆ ಎಸ್.ಪಿ.ರಾಘವಾಚಾರ್ ; ಪತಿ ಎನ್.ತಿರುಮಲೆ. ಅವರು ಕನ್ನಡ ಭಾಷೆಯ ಪ್ರಮುಖ ಲೇಖಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರ ಕೃತಿಗಳಲ್ಲಿ ಕಾದಂಬರಿಗಳು, ಸಣ್ಣ ಕಥೆಗಳು, ಹಾಗೂ ನಾಟಕಗಳು ಸೇರಿವೆ. ಅವರ ಶ್ರೇಷ್ಠ ಇಂಗ್ಲೀಷ್ ಕವನಗಳಿಗೆ ಇಂಟರ್‌ನ್ಯಾಷನಲ್ ಅಕಾಡೆಮಿಯ "ವಿಶ್ವ ಕವನ ಪ್ರಶಸ್ತಿ"ಯನ್ನು ನೀಡಲಾಯಿತು. [೧][೨]
ಎನ್. ಪಂಕಜ | |
---|---|
ಜನನ | ಬೆಂಗಳೂರು, ಮೈಸೂರು ರಾಜ್ಯ, ಬ್ರಿಟಿಷ್ ಭಾರತ | ೨ ಜೂನ್ ೧೯೨೯
ಕಾವ್ಯನಾಮ | ನುಗ್ಗೇಹಳ್ಳಿ ಪಂಕಜ |
ಭಾಷೆ | ಕನ್ನಡ, ಇಂಗ್ಲಿಷ್ |
ರಾಷ್ಟ್ರೀಯತೆ | ಭಾರತೀಯ |
ಗ್ರಂಥಸೂಚಿ
ಬದಲಾಯಿಸಿಕಾದಂಬರಿಗಳು
ಬದಲಾಯಿಸಿ- ಕಾವೇರಿಯ ಅರ್ಥರವ
- ಬರಲೇ ಇನ್ನು ಯಮುನೆ ?
- ಉಷಾನಿಷಿ
- ಮಲಯ ಮಾರುತ
- ವೀಣಾ ಓಹ್ ವೀಣಾ!
- ಮುಗಿಲಮಿಂಚು
- ಗಗನ
- ನಮಸ್ಕಾರ ಗರಡುಅಮ್ಮನವರೇ ಏನ್ ಸಮಾಚಾರ?
- ಬಳ್ಳಿ - ಮೊಗ್ಗು
- ದೀಪಾ
- ಗೂಡು ಬಿಟ್ಟ ಹಕ್ಕಿ
- ತೇಲಿ ಬಂದ ಬಂಧನ
- ಸಂಧ್ಯಾ ಬರುವಳೇ ?
- ಪ್ರತೀಕಾರದ ಸುಳಿಯಲ್ಲಿ
- ತೆರೆ ಸರಿಯಿತು
- ಅಲೆಗೆ ಸಿಕ್ಕಿದ ಎಲೆ
- ಟುವ್ವಿ ಟುವ್ವಿ, ಉಳಿಯಿತು ಗುಬ್ಬಚ್ಚಿ
- ಕೋಣೆಗೊಂದು ಕಥೆ ಮೂಲೆಗೊಂದು ಮಾತು
- ಎರೆಡು ರೆಂಬೆಗಳು
- ಒಂದು ವಸಂತ ಋತುವಿನಲ್ಲಿ
- ಮೋಹಿನಿಗೊಂದು ಹಾಡು
- ಅನುರಾಗದ ಸೆಳೆತ
- ಬಾಳಿನ ಉಯ್ಯಾಲೆ
ಸಣ್ಣ ಕಥೆಗಳು
ಬದಲಾಯಿಸಿ- ಅರ್ಧ ಚಂದ್ರ
- ಇಪ್ಪತ್ತು ವರ್ಷಗಳ ಹಿಂದೆ
- ತಾಯಿ ಮರ
- ಸೇವಕಿಯ ಶಿಕ್ಷಣ
ನಾಟಕಗಳು
ಬದಲಾಯಿಸಿ- ಸಾಲೋಮ್
- ಆ ಒಂದು ವಿಷದ ಘಳಿಗೆ
- ಅರಳಿಕಟ್ಟೆ ರಾಮಾಚಾರಿಯ ಎರಡನೇ ಹೆಂಡತಿ
ಪುರಸ್ಕಾರ
ಬದಲಾಯಿಸಿ“ಬಳ್ಳಿ ಮೊಗ್ಗು” ಕೃತಿಗೆ ೧೯೭೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಉತ್ತಮ ಮಹಿಳಾ ಪುಸ್ತಕ ಬಹುಮಾನ ದೊರೆತಿದೆ.
ಚಲನಚಿತ್ರಗಳು
ಬದಲಾಯಿಸಿ- ಪಂಕಜಾ ಅವರ “ಬರಲೆ ಇನ್ನು ಯಮುನೆ” ಕಾದಂಬರಿಯು ಸಿಪಾಯಿ ರಾಮು ಹೆಸರಿನಲ್ಲಿ ಚಲನಚಿತ್ರವಾಗಿ ಜನಪ್ರಿಯವಾಗಿದೆ. ಈ ಚಿತ್ರದಲ್ಲಿ ಆರತಿ ನಾಯಕಿಯಾಗಿ ಹಾಗು ರಾಜಕುಮಾರ್ ನಾಯಕರಾಗಿ ಅಭಿನಯಿಸಿದ್ದಾರೆ.
- ಅನಂತನಾಗ್, ಖುಷ್ಬೂ, ವನಿತಾ ವಾಸು ಅಭಿನಯದ "ಗಗನ" ಚಿತ್ರವೂ ಪಂಕಜಾ ಅವರ ಕಾದಂಬರಿ ಆಧರಿಸಿದ ಚಿತ್ರ.
ಉಲ್ಲೇಖನಗಳು
ಬದಲಾಯಿಸಿ- ↑ "Documentary films on 15 Kannada women writers". The Hindu. 15 June 2014. Retrieved 3 September 2014.
{{cite web}}
: Italic or bold markup not allowed in:|publisher=
(help) - ↑ "The Homepage of author Nuggehalli Pankaja". Retrieved 3 September 2014.
ಬಾಹ್ಯ ಕೊಂಡಿಗಳು
ಬದಲಾಯಿಸಿ- Nuggehalli Pankaja profile Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
ಈ ಲೇಖನವು ಭಾರತೀಯ ಬರಗಾರರು ಹಾಗು ಕವಿಗಳು ಬಗ್ಗೆ ಅಪೂರ್ಣವಾದ ಲೇಖನ. ಇದನ್ನು ವಿಸ್ತರಿಸಿ ನೀವು ವಿಕಿಪೀಡಿಯಾಗೆ ಸಹಾಯ ಮಾಡಬಹುದು . |