ನಿವಿನ್ ಪೌಲಿ

ಭಾರತೀಯ ಚಲನಚಿತ್ರ ನಟ

ನಿವಿನ್ ಪೌಲಿ (ಜನನ 11 ಅಕ್ಟೋಬರ್ 1984) ಒಬ್ಬ ಭಾರತೀಯ ನಟ ಮತ್ತು ನಿರ್ಮಾಪಕ. ಮಲಯಾಳಂ ಮತ್ತು ತಮಿಳು ಚಲನಚಿತ್ರೋದ್ಯಮಗಳು ನಲ್ಲಿನ ಕೆಲಸಕ್ಕೆ ಹೆಸರುವಾಸಿಯಾದ ಅವರು ಎರಡು ಫಿಲ್ಮ್‌ಫೇರ್ ದಕ್ಷಿಣ ಮತ್ತು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪಡೆದವರು.[೧]

ನಿವಿನ್ ಪೌಲಿ
Nivin Pauly
Nivin Pauly.jpg
2019 ರಲ್ಲಿ ಪೌಲಿ
ಜನನ (1984-10-11) ೧೧ ಅಕ್ಟೋಬರ್ ೧೯೮೪ (ವಯಸ್ಸು ೩೮)
ರಾಷ್ಟ್ರೀಯತೆಭಾರತೀಯ
ಹಳೆ ವಿದ್ಯಾರ್ಥಿಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ
ಉದ್ಯೋಗನಟ, ನಿರ್ಮಾಪಕ
ಸಕ್ರಿಯ ವರ್ಷಗಳು2010–ಇಂದಿನವರೆಗೆ
ಜೀವನ ಸಂಗಾತಿರಿನ್ನಾ ಜಾಯ್ (ವಿವಾಹ 2010)
ಮಕ್ಕಳು2

ಬಾಲ್ಯ ಮತ್ತು ವೈಯಕ್ತಿಕ ಜೀವನಸಂಪಾದಿಸಿ

ನಿವಿನ್ ಪೌಲಿ ಅವರು ಭಾರತೀಯ ಚಲನಚಿತ್ರ ನಟ ಹಾಗು ಮಲಯಾಳಂ ಚಿತ್ರರಂಗದಲ್ಲಿ ನಿರ್ಮಾಪಕರಾಗಿದ್ದರು. ಇವರು ಒಂದು ಮಲಯಾಳಿ ಸಿರೊ ಮಲಬಾರ್ ಕುಟುಂಬದಲ್ಲಿ ೧೧ ಅಕ್ಟೋಬರ ೧೯೮೪ರಲ್ಲಿ ಅಲುವದಲ್ಲಿ ಹುಟ್ಟಿದ್ದರು.ಆಲುವ ಎರ್ನಾಕುಲಂ ಜಿಲ್ಲೆಯ ಒಂದು ಸಣ್ಣ ಪಟ್ಟಣ,ನಿವಿನ್ನನವರು ತಂದೆ,ಬೋನಾವೆಂರ್ಟ ಅವರು ಆರಾವ್ ಸ್ವಿಜರ್ಲ್ಯಾಂಡ್ನಲ್ಲಿ ಒಬ್ಬ ಮೆಕ್ಯಾನಿಕ್ ಆಗಿ ಕೆಲಸ ಮಾಡುತಿದ್ದರು.ತಾಯಿ ಸ್ವಿಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಮಾಡುತ್ತಿದ್ದರು.ಅವರು ಬಿ.ಟಿಕ್ ೨೦೦೬ ರಲ್ಲಿ ಅಂಗಮಾಲಿ, ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ . ನಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ಪದವಿ ಹೊಂದಿದರು .ನಿವಿನ್ ಸೇಂಟ್ ಡೊಮಿನಿಕ್ ಸಿರೊ ಮಲಬಾರ್ ಕ್ಯಾಥೊಲಿಕ್ ಅಲುವಾ, ಎರ್ನಾಕುಲಂ ಚರ್ಚ್ ನಲ್ಲಿ 28 ಆಗಸ್ಟ್ 2010 ರಂದು ರೀನ್ನ ಜಾಯ್ ವಿವಾಹವಾದರು. ಅವರಿಗೆ ಒಂದು ಮಗ ೨೦೧೨ ರಲ್ಲಿ ಜನಿಸಿದರು.ಅವನ ಹೆಸರು ದಾವೀದ್.

ನಟನಾವೃತ್ತಿಯನ್ನುಸಂಪಾದಿಸಿ

ನಿವಿನ್ ಅವರು ಇನ್ಫೋಸಿಸ್ ಬೆಂಗಳೂರಿನಲ್ಲಿ ೨೦೦೬-೨೦೦೮ ವರೆಗೆ ಕೆಲಸಮಾಡೆದರು. ತನ್ನ ತಂದೆಯ ಮರಣದ ನಂತರ ಅವರು ಕೆಲಸಕ್ಕೆ ರಾಜೀನಾಮೆ ಕೊಟ್ಟರು ಮತ್ತು ಎರಡು ವರ್ಷಗಳ ಕಾಲ ಕೆಲಸ ಮಾಡದೆ ಮನೆಯಲ್ಲಿ ಇದ್ದರು.ಅದರ ನಂತರ ಅವರು ಚಿತ್ರರಂಗದಲ್ಲಿ ಸೇರಲು ಇಚ್ಛೆಯನ್ನು ಹೊಂದಿದರು. ಮುಂದೆ ೨೦೦೯ರಲ್ಲಿ ವಿನೀತ್ ಶ್ರೀನಿವಾಸನ್ ನಿರ್ದೇಶಿಸಿದ ಹಾಗು ನಟ ದಿಲೀಪ್ ನಿರ್ಮಾಪಿಸಿರುವ ಮರ್ಲವಾಡಿ ಆರ್ಟ್ಸ್ ಕ್ಲಬ್ ಎಂಬ ಚಲನಚಿತ್ರದಲ್ಲಿ ಮೊದಲಾಗಿ ಅಭಿನಯಿಸಿದ್ದರು.ಹಲವಾರು ಸಣ್ಣ ಪಾತ್ರಗಳನ್ನು ಮಾಡಿದ ನಂತರ ನಿವಿನ್ ಪೌಲಿ ಅನೇಕ ಚಿತ್ರಗಳಲ್ಲಿ ಜನಪ್ರಿಯವಾದರು.

ಮಾಧ್ಯಮಗಳಲ್ಲಿಸಂಪಾದಿಸಿ

ಅವರು ವಿನೀತ್ ಶ್ರೀನಿವಾಸನ್ ನಿರ್ದೇಶಿಸಿದ ಥಟತಿನ್ ಮರಯಥ್ ಎಂಬ ಸಿನಿಮದ ಮುಲಖ ನಿವಿನ್ ಪೌಲಿ ಚಿತ್ರರಂಗದಲ್ಲಿ ಪ್ರಸಿದ್ದರಾದರು. ಮುಂದೆ ಅವರು ನೆರಂ (2013), ೧೯೮೩ ( 2014), ಓಮ್ ಶಾಂತಿ ಒಶಾನಾ (2014) , ಬೆಂಗಳೂರು ಡೇಸ್ ( 2014), ಒರು ವಡಕ್ಕನ್ ಸೆಲ್ಫೀ (2015) , ಪ್ರೇಮಂ (2015 ), ಮತ್ತು ಆಕ್ಷನ್ ಹೀರೋ ಬಿಜು ಸೇರಿದಂತೆ ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದರು.

ಪ್ರಶಸ್ತಿಗಳುಸಂಪಾದಿಸಿ

ನಿವಿಮನ್ ಪೌಲಿ 45 ನೇ ಕೇರಳ ರಾಜ್ಯದ ಫಿಲ್ಮ್ ಅವಾರ್ಡ್ ಅತ್ಯುತ್ತಮ ನಟನಾಗಿ ಬೆಂಗಳೂರು ಡೇಸ್ ಮತ್ತು 1983ಗೆ ಪಡೆದರು.ಅವರು " ಯುವ್ ಎಂಬ ಆಲ್ಬಮ್ನಲ್ಲಿ "ನೆಂಜೋಡ್ ಚೇರತ" ವೀಡಿಯೊ ಸಂಗೀತದಲ್ಲಿ ಕಾಣಿಸಿಕೊಂಡಿದ್ದಾರೆ .ಈ ವೀಡಿಯೊ ಯುತ್ಯುಬನಲ್ಲಿ ವೈರಲ್ ಹಿಟ್ ಆಯಿತು.ಥಟತಿನ್ ಮರಯಥ್ ಎಂಬ ಸಿನಿಮದ ನಂತರ ಇವರಿಗೆ "ಪ್ರಸ್ತುತ ಯುವ ಸಂವೇದನೆ " ಎಂದು ಮತ್ತು " ಬಿಸಿ ಆಸ್ತಿ " ಎಂಬ ಹೆಸರುಗಲು ದೊರಕಿತು.ಇವರ ಅಭಿನಯವು ಹಲವಾರು ಯುವ ಮಕ್ಕಳನ್ನು ಆಕರ್ಷಿಸಿತು.

ಚಲನಚಿತ್ರಗಳ ಪಟ್ಟಿಸಂಪಾದಿಸಿ

ಹೀಗೆ ಯುವಜನರು ನಿವಿನ್ ಪೌಲಿರವರ ದೊಡ್ಡ ಅಭಿಮಾನಿಗಳಾದರು.ಪ್ರೆಮಂ ಬಿಡುಗಡೆಯಾದ ಬಳಿಕ ನಿವಿನ್ ಪೌಲಿ ಮುಂದಿನ ಮೋಹನ್ಲಾಲ್ ಸಾಮಾಜಿಕ ಮೀಡಿಯಾಸ್ ವಿವರಿಸಲಾಗಿದೆ ಮತ್ತು " ಸೂಪರ್ಸ್ಟಾರ್ " ಟ್ಯಾಗ್ ಸಿಕ್ಕಿತು . ನಿವಿನ್ ಪೌಲಿ ಅವರ ಪ್ರೆಮಂ ಎಂಬ ಚಿತ್ರ ಸೂಪರ್ಹಿಟ್ವಯಿತ್ತು.ಈ ಚಿನಿಮವನ್ನು ಹಲವು ಬಾಷೆಯಲ್ಲಿ ಉತ್ಪಾದಿಸಲು ನಿರ್ದೇಶಕರು ರ್ತಿಮಾನಿಸಿದರು.ನಿವಿನ್ ಕೊಚ್ಚಿ ಟೈಮ್ಸ್ , ದಿ ಟೈಮ್ಸ್ ಗ್ರೂಪ್ ಅಂಗಸಂಸ್ಥೆಯಾದ " ಹೆಚ್ಚು ಅಪೇಕ್ಷಣೀಯ 2015 ಮ್ಯಾನ್" ಆಯ್ಕೆಯಾಯಿತು. ಅವರು ಅತ್ಯಂತ ಆಸಕ್ತಿಯಿಂದ ತನ್ನ ಪಾತ್ರಗಳನ್ನು ವಹಿಸುತ್ತದೆ.ಇವರಿಗೆ ೨೦೧೪ರಲ್ಲಿ ಕೇರಳ ರಾಜ್ಯದ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ೨೦೧೫ರಲ್ಲಿ ಪ್ರಮಂ ಮತ್ತು ೧೯೮೩ ಎಂಬ ಚಲನಚಿತ್ರಗಳಿಗೆ ಫಿಲ್ಮ್ಫೇರ್ ಪ್ರಶಸ್ತಿ ಲಭಿಸಿತ್ತು.

ಉಲ್ಲೇಖಗಳುಸಂಪಾದಿಸಿ

  1. Srinivasan, Latha (16 May 2017). "Nivin Pauly's unstoppable rise: How he went from guy-next-door to bonafide superstar". Firstpost. Retrieved 13 May 2018.

ಬಾಹ್ಯ ಲಿಂಕ್‌ಗಳುಸಂಪಾದಿಸಿ