ನಿರೂಪ್ ಭಂಡಾರಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟ. [೧] ಅವರು ತಮ್ಮ ಸಹೋದರ ಅನೂಪ್ ಭಂಡಾರಿ ನಿರ್ದೇಶನದ 2015 ರ ಚಲನಚಿತ್ರ ರಂಗಿತರಂಗ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. [೨] [೩]

ನಿರೂಪ್ ಭಂಡಾರಿ
ಜನನ (1984-08-13) ೧೩ ಆಗಸ್ಟ್ ೧೯೮೪ (ವಯಸ್ಸು ೩೯)
ಪುತ್ತೂರು, ಕರ್ನಾಟಕ, ಭಾರತ
ವೃತ್ತಿನಟ
Years active2015–ಇಂದಿನವರೆಗೆ
Notable workರಂಗಿತರಂಗ (ಚಲನಚಿತ್ರ)
ಸಂಗಾತಿಧನ್ಯಾ (ವಿವಾಹ 2016)
Relativesಅನೂಪ್ ಭಂಡಾರಿ (ಸಹೋದರ)

ಆರಂಭಿಕ ಜೀವನ

ಬದಲಾಯಿಸಿ

ನಿರೂಪ್ ಭಂಡಾರಿ ಅವರು ಆಗಸ್ಟ್ 13 ರಂದು ಕರ್ನಾಟಕದ ಪುತ್ತೂರಿನಲ್ಲಿ ಸುಧಾಕರ ಭಂಡಾರಿ ಮತ್ತು ರತ್ನ ಭಂಡಾರಿ ದಂಪತಿಗಳಿಗೆ ಜನಿಸಿದರು. ನಂತರ ಕುಟುಂಬವು ಮೈಸೂರಿಗೆ ಸ್ಥಳಾಂತರಗೊಂಡಿತು. ನಿರೂಪ್ ಮೈಸೂರಿನ ವಿದ್ಯಾ ವಿಕಾಸ್ ಇಂಜಿನಿಯರಿಂಗ್ & ಟೆಕ್ನಾಲಜಿ ಶಿಕ್ಷಣ ಸಂಸ್ಥೆಯಿಂದ ತಮ್ಮ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಬ್ಯಾಚುಲರ್ ಪದವಿ ಪೂರ್ಣಗೊಳಿಸಿದರು. ಅವರ ಪದವಿ ಮುಗಿದ ನಂತರ ಅವರು ಎಸ್ ಎ ಪಿ ಲ್ಯಾಬ್ಸ್ ಇಂಡಿಯಾದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.

ವೃತ್ತಿ

ಬದಲಾಯಿಸಿ

ಎಸ್ ಎ ಪಿ ನಲ್ಲಿ ಕೆಲಸ ಮಾಡುವಾಗ, ನಿರೂಪ್ ಅವರು ಹೆಸರಾಂತ ರಂಗಕರ್ಮಿ ರತನ್ ಠಾಕೋರ್ ಅವರ ಅಡಿಯಲ್ಲಿ ನಟನೆಯನ್ನು ಕಲಿಯಲು ಪ್ರಾರಂಭಿಸಿದರು. ಅವರು ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು ನಾಟಕಗಳು ಮತ್ತು ಕಿರುಚಿತ್ರಗಳಲ್ಲಿ ನಟಿಸಿದರು.

ಅವರು ಅನೂಪ್ ಭಂಡಾರಿಯವರ ನಿರ್ದೇಶನದ ಚೊಚ್ಚಲ ಚಿತ್ರ ರಂಗಿತರಂಗ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದರಲ್ಲಿ ರಾಧಿಕಾ ನಾರಾಯಣ್, ಆವಂತಿಕಾ ಶೆಟ್ಟಿ ಮತ್ತು ಸಾಯಿ ಕುಮಾರ್ ಕೂಡ ನಟಿಸಿದ್ದಾರೆ .[೪]


2018 ರಲ್ಲಿ, ಅವರು ಅನುಪ್ ಭಂಡಾರಿ ನಿರ್ದೇಶನದ ಅವರ ಎರಡನೇ ಚಲನಚಿತ್ರ ರಾಜರಥದಲ್ಲಿ ಕಾಣಿಸಿಕೊಂಡರು. ಪುನೀತ್ ರಾಜ್‌ಕುಮಾರ್ ಧ್ವನಿ ನೀಡಿರುವ ಈ ಚಿತ್ರವನ್ನು ಬಸ್ಸಿನ ದೃಷ್ಟಿಕೋನದಿಂದ ನಿರೂಪಿಸಲಾಗಿದೆ. [೫] [೬] [೭] [೮]

2019 ರಲ್ಲಿ,ರಾಧಿಕಾ ಪಂಡಿತ್ ಅವರೊಂದಿಗೆ ನಟಿಸಿದ ನಿರೂಪ್ ಅವರ ಮುಂದಿನ ಚಿತ್ರ ಆದಿ ಲಕ್ಷ್ಮಿ ಪುರಾಣ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. [೯] ಚಿತ್ರವು ಕೌಟುಂಬಿಕ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. [೧೦] [೧೧]

2020 ರಲ್ಲಿ, ಅವರು ಅಮೃತ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ಅಭಿನಯದ ವಿಂಡೋ ಸೀಟ್ ಚಿತ್ರದಲ್ಲಿ ನಟಿಸಿದರು. [೧೨]

ನಂತರ, ನಿರೂಪ್ ಭಂಡಾರಿ ಅವರು ದೊಡ್ಡ ಬಜೆಟ್ ಆಕ್ಷನ್ ಅಡ್ವೆಂಚರ್ ಚಲನಚಿತ್ರವಾದ ವಿಕ್ರಾಂತ್ ರೋಣದ ಭಾಗವಾದರು. ಅಲ್ಲಿ ಅವರು ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಅವರೊಂದಿಗೆ ನಟಿಸಿದರು. [೧೩] [೧೪] ಈ ಬಹು ನಿರೀಕ್ಷಿತ ಚಲನಚಿತ್ರವನ್ನು ಅನುಪ್ ಭಂಡಾರಿ ನಿರ್ದೇಶಿಸಿದ್ದಾರೆ [೧೫] [೧೬] [೮]

ವೈಯಕ್ತಿಕ ಜೀವನ

ಬದಲಾಯಿಸಿ

ನಿರೂಪ್ ಧನ್ಯಾ ಅವರನ್ನು ಮದುವೆಯಾಗಿದ್ದಾರೆ. [೧೭] ನಿರೂಪ್ ಅವರ ತಂದೆ ಸುಧಾಕರ ಭಂಡಾರಿ ದೂರದರ್ಶನ ಧಾರಾವಾಹಿಗಳನ್ನು ನಿರ್ದೇಶಿಸುತ್ತಿದ್ದರು. ಇವರು ಪುತ್ತೂರಿನ ಸಾಜ ಎಂಬ ಪುಟ್ಟ ಊರಿನವರು. ಅವರ ಹಿರಿಯ ಸಹೋದರ ಅನೂಪ್ ಭಂಡಾರಿ ನಿರ್ದೇಶಕ, ಗೀತರಚನೆಕಾರ ಮತ್ತು ಸಂಗೀತ ಸಂಯೋಜಕರಾಗಿದ್ದು, ನಿರೂಪ್ ಅವರ ಬಹುತೇಕ ಎಲ್ಲಾ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. [೮]

ಚಿತ್ರಗಳು

ಬದಲಾಯಿಸಿ
ಕೀಲಿ
  ಚಲನಚಿತ್ರ ಇನ್ನೂ ಬಿಡುಗಡೆ ಆಗಲಿಲ್ಲ ಎಂದು ಸೂಚಿಸುತ್ತದೆ.
ವರ್ಷ ಚಲನಚಿತ್ರ ಪಾತ್ರಗಳು ಟಿಪ್ಪಣಿಗಳು ಉಲ್ಲೇಖ
2015 ರಂಗಿತರಂಗ ಗೌತಮ್ ಸುವರ್ಣ / ಸಿದ್ದಾರ್ಥ್ ನಾಮನಿರ್ದೇಶನಗೊಂಡಿದೆ- ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ IIFA ಉತ್ಸವಮ್ ಪ್ರಶಸ್ತಿ - ಪುರುಷ - ಕನ್ನಡ



ನಾಮನಿರ್ದೇಶಿತ - ಸೈಮಾ ಪ್ರಶಸ್ತಿ ಅತ್ಯುತ್ತಮ ಚೊಚ್ಚಲ ನಟ - ಪುರುಷ - ಕನ್ನಡ
2018 ರಾಜರಥ ಅಭಿ
2019 ಅಮರ್ ಕೃಷ್ಣ ಸುಬ್ಬಯ್ಯ ಅತಿಥಿ ಪಾತ್ರ
ಆದಿ ಲಕ್ಷ್ಮೀ ಪುರಾಣ ಆದಿ
2022 ವಿಂಡೋ ಸೀಟ್ ರಘು [೧೮]
ವಿಕ್ರಾಂತ್ ರೋಣ ಸಂಜೀವ್ ಗಂಭೀರ ನಾಮನಿರ್ದೇಶಿತ - ಋಣಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟನಿಗಾಗಿ SIIMA ಪ್ರಶಸ್ತಿ - ಕನ್ನಡ [೧೯]
TBA ಎಡಗೈಯೇ ಅಪಘಾತಕ್ಕೆ ಕಾರಣ† TBA ವಿಶೇಷ ಕ್ಯಾಮಿಯೋ [೨೦]
ಅಮರ ಮಧುರ ಪ್ರೇಮ† TBA ಚಿತ್ರೀಕರಣ [೨೧]
ಸತ್ಯ, ಸನ್ ಆಫ್ ಹರಿಶ್ಚಂದ್ರ† ಸತ್ಯ [೨೨]

ಉಲ್ಲೇಖಗಳು

ಬದಲಾಯಿಸಿ
  1. "Nirup Bhandari Biography, Nirup Bhandari Profile". Filmibeat.com. 2015-07-03. Retrieved 2016-08-09.
  2. "Rangi Taranga: 100 days and still entertaining". The Hindu (in Indian English). 12 October 2015. Retrieved 29 August 2016.
  3. "…And success follows". The Hindu (in Indian English). 20 August 2015. Retrieved 29 August 2016.
  4. "RangiTaranga Kannada film that took on Baahubali, and (almost) won!". Timesofbengaluru.com. 2015-08-11. Archived from the original on 2016-08-25. Retrieved 2016-08-09.
  5. Upadhyaya, Prakash (2016-07-07). "'RangiTaranga' director Anup Bhandari set to announce the title of his next film". www.ibtimes.co.in (in ಇಂಗ್ಲಿಷ್). Retrieved 2021-08-25.
  6. Upadhyaya, Prakash (2016-07-11). "'Rajaratha:' Ravichandran, Juhi Chawla reveal the title of 'RangiTaranga' director Anup Bhandari's next film on 'Dancing Stars 3'". www.ibtimes.co.in (in ಇಂಗ್ಲಿಷ್). Retrieved 2021-08-25.
  7. "Nirup Bhandari relives his college days through Rajaratha - Times of India". The Times of India (in ಇಂಗ್ಲಿಷ್). Retrieved 2021-08-25.
  8. ೮.೦ ೮.೧ ೮.೨ Prathibha Joy. "Why does Anup Bhandari work with his brother Nirup on all his films?". OTT Play.
  9. "Nirup, Radhika's film is Aadi Lakshmi Purana - Times of India". The Times of India (in ಇಂಗ್ಲಿಷ್). Retrieved 2021-08-25.
  10. "'Aadi Lakshmi Purana' movie review : A feel-good entertainer". The New Indian Express. Retrieved 2021-08-25.
  11. "Aadi Lakshmi Puraana Movie Review {3.5/5}: Critic Review of Aadi Lakshmi Puraana by Times of India", The Times of India, retrieved 2021-08-25
  12. "Teaser of Nirup Bhandari's Window Seat released - Times of India". The Times of India (in ಇಂಗ್ಲಿಷ್). Retrieved 2021-08-25.
  13. "Nirup Bhandari to play Sanjeev Gambhira in Sudeep-starrer Phantom". Cinema Express (in ಇಂಗ್ಲಿಷ್). Retrieved 2021-08-25.
  14. "Kichcha Sudeep reveals Nirup Bhandari's look as Sanjeev Gambhir in Phantom - Times of India". The Times of India (in ಇಂಗ್ಲಿಷ್). Retrieved 2021-08-25.
  15. "Sudeep-starrer Vikrant Rona illuminates Dubai's Burj Khalifa". The Indian Express (in ಇಂಗ್ಲಿಷ್). 2021-02-01. Retrieved 2021-02-02.
  16. "Neetha Ashok gets her first big break in 'Phantom'".
  17. "RangiTaranga actor engaged to his girlfriend". Timesofindia.indiatimes.com. 2015-09-09. Retrieved 2016-08-09.
  18. "Nirup Bhandari stars in Sheetal Shetty-directed Window Seat". Cinema Express. Retrieved 2019-12-25.
  19. "Nirup Bhandari to play Sanjeev Gambhira in Sudeep-starrer Phantom | Cinemaexpress". Cinema Express. Retrieved 2020-08-13.
  20. Sharadhaa, A. (2023-09-27). "Nirup Bhandari makes a special cameo appearance in 'Edagaiye Apaghatakke Karana'". The New Indian Express (in ಇಂಗ್ಲಿಷ್). Retrieved 2024-02-02.
  21. Service, Express News (2023-11-02). "Nagathihalli and team brave challenges to shoot in America". The New Indian Express (in ಇಂಗ್ಲಿಷ್). Retrieved 2024-02-06.
  22. Service, Express News (2023-12-11). "Nirup Bhandari teams up with debutant Sachin Vaali for a family entertainer". The New Indian Express (in ಇಂಗ್ಲಿಷ್). Retrieved 2024-02-06.