ರಂಗಿತರಂಗ (ಚಲನಚಿತ್ರ)

2015ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ

ರಂಗಿತರಂಗ(RangiTaranga). ನಿರೂಪ್ ಭಂಡಾರಿ ನಿರ್ದೇಶನದ ೨೦೧೫ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ.

ರಂಗಿತರಂಗ
ನಿರ್ದೇಶನಅನೂಪ್ ಭಂಡಾರಿ
ಲೇಖಕಅನೂಪ್ ಭಂಡಾರಿ
ಪಾತ್ರವರ್ಗನಿರೂಪ್ ಭಂಡಾರಿ, ರಾಧಿಕ ಚೆತನ್, ಅವಂತಿಕ ಶೆಟ್ಟಿ, ಸಾಯಿಕುಮಾರ್
ಸಂಗೀತಅನೂಪ್ ಭಂಡಾರಿ/ಹಿನ್ನೆಲೆ:ಬಿ.ಅಜನೀಶ್ ಲೋಕ್ನಾಥ್
ಛಾಯಾಗ್ರಹಣಲಾನ್ಸ್ ಕಪ್ಲನ್, ವಿಲ್ಲಿಯಮ್ ಡೇವಿಡ್
ಬಿಡುಗಡೆಯಾಗಿದ್ದು೩ ಜುಲೈ ೨೦೧೫
ಅವಧಿ೧೪೯ ನಿಮಿಶಗಳು
ದೇಶಭಾರತ
ಭಾಷೆಕನ್ನಡ
ಬಂಡವಾಳ೧.೫ ಕೋಟಿ
ಬಾಕ್ಸ್ ಆಫೀಸ್೨೦* ಕೋಟಿ ಕರ್ನಾಟಕದಲ್ಲಿ ೫೦ ದಿನಗಳು

ಕಥಾಹಂದರ ಬದಲಾಯಿಸಿ

ಆಕರ್ಷಕ ವ್ಯಕ್ತಿತ್ವದ ಹಸನ್ಮುಖಿ ನಾಯಕ ಗೌತಮ್ ಸುವರ್ಣ, ಕಾದಂಬರಿಕಾರ. ಆತನಿಗೊಂದು ನಿಗೂಡ ಹಿನ್ನೆಲೆ ಇರುತ್ತದೆ. ಆತನ ಹೊಸ ಕಾದಂಬರಿ 'ರಂಗಿತರಂಗ'. ಈ ಪದ ಅವನ ನಿಗೂಡ ಹಿನ್ನೆಲೆಗಿರುವ ಕೀಲಿ ಕೈಯೂ ಹೌದು. ಅವನು ಊಟಿಯಲ್ಲಿ ಜನರಿಂದ ದೂರ ವಾಸಿಸುತ್ತಿರುವನು. ಮೃದು ಸ್ವಭಾವದ ಇಂದು, ಭೀತಿಯಲ್ಲಿ ದಿನ ಕಳೆಯುತ್ತಿರುವ ಓರ್ವ ಪೈಂಟರ್. ಕುಂಚ ಕೈಯಲ್ಲಿದ್ದರೆ ಪ್ರಪಂಚವನ್ನೇ ಮರೆತು ಬಿಡುತ್ತಾಳೆ.ಸಂಧ್ಯಾ ಓರ್ವ ಉತ್ಸಾಹೀ ಪತ್ರಕರ್ತೆ. "ಅನಷ್ಕು" ಎಂಬ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ಬರೆಯತ್ತಿರುವ ಅನಾಮಧೆಯ ವ್ಯಕ್ಥಿಯ ಬೆನ್ನು ಹತ್ತಿ ಊರಿಂದೂರು ಅಲೆಯುತ್ತಿರುತ್ತಾಳೆ. ಅನಿವಾರ್ಯ ಕಾರಣಗಳಿಂದ ಗೌತಮ್ ಕಮರೊಟ್ಟು ಗ್ರಾಮದಲ್ಲಿರುವ ಇಂದುವಿನ ಪೂರ್ವಜರ ಮನೆಗೆ ಹೋಗಬೇಕಾಗಿ ಬರುವುದು. ಗೌತಮ್ ನ ಆಗಮನ ಕಾಳಿಂಗ ಮತ್ತು ಶಂಕರ ಮೇಸ್ಟ್ರಿಗೆ ಹಿತವೆನಿಸಿದರೂ ಕೆಲವು ಪ್ರಭಾವೀ ವ್ಯಕ್ತಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವುದು. ಒಮ್ಮಿಂದೊಮ್ಮೆಗೆ ಇವರಿಗೆ ಹಲವಾರು ವಿಚಿತ್ರ ಘಟನೆಗಳು ಎದುರಾಗುವವು. ತಲ್ಲಣಗೊಂಡ ಗೌತಮ್ ಈ ಅನಿರೀಕ್ಷಿತ ಘಟನೆಗಳಿಗೆ ಕಾರಣ ಹುಡುಕಲು ಹೊರಟಾಗ ಸಮಸ್ಯೆಯ ಸರಮಾಲೆಯನ್ನೇ ಎದುರಿಸ ಬೇಕಾಗುವುದು. ಅದೇ ಹೊತ್ತಿಗೆ ಅನಷ್ಕುವಿನ ಹುಡುಕಾಟದಲ್ಲಿ ಸಂಧ್ಯಾ ಕಮರೊಟ್ಟು ತಲುಪುವಳು. ಆಗ ಅಲ್ಲೊಂದು ಭಯಾನಕ ಅನಾಹುತ ಸಂಭವಿಸುವುದು!!!

ಪಾತ್ರಗಳು ಬದಲಾಯಿಸಿ

ಪಾತ್ರ ಕಲಾವಿದರು
ಗೌತಮ್/ಸಿಧ್ಧಾರ್ತ್ ನಿರೂಪ್ ಭಂಡಾರಿ
ತೆಂಕಬೈಲ್ ಕಾಳಿಂಗ ಭಟ್ಟ ಸಾಯಿಕುಮಾರ್
ಇಂಧು ಸುವರ್ಣ/ಹರಿಣಿ ರಾಧಿಕ ಚೆತನ್
ಸಂಧ್ಯಾ ಅವಂತಿಕ ಶೆಟ್ಟಿ
ಶಂಕರ್ ಮಾಸ್ಟರ್ ಅನಂತ್ ವೇಲು
ಬಸವರಾಜ ಹಾದಿಮನಿ ಅರವಿಂದ್ ರಾವ್
ನಿಲೇಶ್ ಗೌಡ (ಪಾಂಡು) ಸಿದ್ದು ಮೂಲಿಮನಿ
ಪಂಚಮಿ (ಪಾಂಚಾಲಿ) ರೋಶಿನಿ ಕೋರೆ
ಚೆತನ್ ರಾಜ್ ಗರ್ನಾಲ್ ಬಾಬು
ರಫೀಕ್ ಕಾರ್ತಿಕ್ ರಾವ್
*ಗೌತಮ್ ಸುವರ್ಣಾ ಅನೂಪ್ ಭಂಡಾರಿ

ಪ್ರಶಸ್ತಿಗಳು ಬದಲಾಯಿಸಿ


ಉಲ್ಲೇಖಗಳು ಬದಲಾಯಿಸಿ

ಹೊರಕೊಂಡಿಗಳು ಬದಲಾಯಿಸಿ

Official website
Wiki in english