ನಾನು ಅವನಲ್ಲ... ಅವಳು
ನಾನು ಅವನಲ್ಲ... ಅವಳು ಲಿಂಗಪರಿವರ್ತಿತ ವ್ಯಕ್ತಿಯೊಬ್ಬರ ಆತ್ಮಕತೆಯನ್ನಾಧರಿಸಿದ ಚಲನಚಿತ್ರ. ಬಿ. ಎಸ್. ಲಿಂಗದೇವರು ನಿರ್ದೇಶಿಸಿದ್ದಾರೆ. ಲಿವಿಂಗ್ ಸ್ಮೈಲ್ ವಿದ್ಯಾ ತಮಿಳಿನಲ್ಲಿ ಬರೆದಿರುವ ಈ ಆತ್ಮಕಥನವನ್ನು 'ನಾನು ಅವನಲ್ಲ.. ಅವಳು' ಎಂಬ ಹೆಸರಲ್ಲಿ ಕನ್ನಡಕ್ಕೆ ತಂದ ಲೇಖಕಿ ಡಾ.ತಮಿಳು ಸೆಲ್ವಿ.[೧] ಮಾದೇಶನೆಂಬ ಹುಡುಗನು ಲಿಂಗಪರಿವರ್ತನಗೊಂಡು ಅನುಭವಿಸುವ ಜೀವನದ ಕತೆಯನ್ನು ಮತ್ತು ಹಿಜಡಾ ಲೋಕದ ಕತೆಯನ್ನು ಒಳಗೊಂಡಿದೆ.
ನಾನು ಅವನಲ್ಲ... ಅವಳು | |
---|---|
Directed by | ಬಿ. ಎಸ್. ಲಿಂಗದೇವರು |
Written by | ಲಿವಿಂಗ್ ಸ್ಮೈಲ್ ವಿದ್ಯಾ |
Starring | ಸಂಚಾರಿ ವಿಜಯ್ |
Running time | ೧೦೫ ನಿಮಿಷಗಳು |
Country | ಭಾರತ |
Language | ಕನ್ನಡ |
ಈ ಚಿತ್ರ ೬೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಾಲಿನಲ್ಲಿ – ಶ್ರೇಷ್ಟ ನಟ (ಸಂಚಾರಿ ವಿಜಯ್)[೨][೩][೪] ಮತ್ತು ಶ್ರೇಷ್ಟ ಮೇಕಪ್ ಕಲಾವಿದ (ರಾಜು, ನಾಗರಾಜ್) ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ .[೫]
ಕಥಾಹಂದರ
ಬದಲಾಯಿಸಿಮಾದೇಶನ ತಂದೆ ರೈತನಾಗಿರುತ್ತಾನೆ. ತನ್ನ ಮಗ ಚೆನ್ನಾಗಿ ಓದಿ ಡಿಸ್ಟ್ರಿಕ್ಟ್ ಕಲೆಕ್ಟರ್ ಆಗಬೇಕೆಂದು ಅವನ ಆಸೆ. ಆದರೆ ವಿಧಿಯ ಆಟ ಬೇರೆ ಇರುತ್ತದೆ. ಮಾದೇಶನು ಬಾಲ್ಯದಿಂದಲೇ ಹೆಣ್ಣಿನ ಲಕ್ಷಣಗಳನ್ನು ತೋರಿಸುತ್ತಾ, ಹೆಣ್ಣಿನಂತೆ ಉಡುಪುಗಳನು ತೊಡುವುದು, ನಡೆಯುವುದು, ವರ್ತಿಸುವುದನ್ನು ಮಾಡುತ್ತಿರುತ್ತಾನೆ. ತನ್ನ ಸಹೋದರಿಯ ಬಟ್ಟೆ ಮತ್ತು ಆಭರಣಗಳಿಂದ ಖುಷಿಪಡುತ್ತಿರುತ್ತಾನೆ. ಈ ಅಸಹಜ ನಡವಳಿಕೆ ಅವನಿಗೆ ಹಲವು ಅವಮಾನ ಮತ್ತು ಅನುಭವಗಳನ್ನು ತಂದೊಡ್ಡುತ್ತದೆ. ಅವನು ಒಂಟಿತನ ಮತ್ತು ಖಿನ್ನತೆಗೊಳಗಾಗುತ್ತಾನೆ. ಕೊನೆಗೆ ಇದೆಲ್ಲದರಿಂದ ಬೇಸತ್ತು ಬೆಂಗಳೂರಿಗೆ ಬರುತ್ತಾನೆ. ಅಲ್ಲಿ 'ಕೋತಿ' ಎನ್ನುವ ಹಿಜಡಾ ವ್ಯಕ್ತಿಯನ್ನು ಭೇಟಿಯಾಗುತ್ತಾನೆ. ಅವನಿಗೆ ತಾನು ಹೆಣ್ಣಾಗಬೇಕೆಂಬ ಆಸೆಗೆ ಇದು ಇಂಬುಕೊಡುತ್ತದೆ. ಅವನು ಹಿಜಡಾ ಸಮುದಾಯದ ರೀತಿರಿವಾಜುಗಳನ್ನು, ನಡವಳಿಕೆಗಳನ್ನು ರೂಢಿಸಿಕೊಳ್ಳಬೇಕೆಂದು ತಿಳಿದುಕೊಳ್ಳುತ್ತಾನೆ. ಈ ಸಮಾಜದಲ್ಲಿ ಲಿಂಗಪರಿವರ್ತಿತ ವ್ಯಕ್ತಿಗೆ ಸ್ಥಾನವಿಲ್ಲದಿರುವುದು ಮತ್ತು ಅವರು ಅನಿವಾರ್ಯವಾಗಿ ಭಿಕ್ಷಾಟನೆಗೆ ಅಥವಾ ಸೂಳೆಗಾರಿಕೆಗೆ ಇಳಿಯಬೇಕಾಗುತ್ತದೆಂದು ತಿಳಿಯುತ್ತದೆ.
ಇದೆಲ್ಲವನ್ನು ತಿಳಿದುಕೊಂಡು ಅವನು ಲಿಂಗಪರಿವರ್ತನೆ ಮಾಡಿಕೊಳ್ಳುವ ಉದ್ದೇಶದಿಂದ ಮನೆ ಬಿಟ್ಟು ಬರುತ್ತಾನೆ. ಲಿಂಗಪರಿವರ್ತನೆಯ ತೊಂದರೆಗಳೇನು ಅನ್ನುವುದು ಆತನಿಗೆ ನಿಧಾನಕ್ಕೆ ಅರ್ಥವಾಗುತ್ತಾ ಹೋಗುತ್ತದೆ. ಹಿಜಡಾಗಳಿಗೆ ಯಾರೂ ಉದ್ಯೋಗವನ್ನು ಕೊಡುದೇ ಇರುವುದರಿಂದ ಆತ ಜೀವನಕ್ಕಾಗಿ ಭಿಕ್ಷಾಟನೆ ಮಾಡಬೇಕಾಗುತ್ತದೆ. ಆದರೂ ಕೂಡ ಮಾದೇಶ ವಿದ್ಯಾ ಆಗಿ ಪರಿವರ್ತಿತನಾಗುತ್ತಾನೆ.
ಸಿನೆಮಾದ ಉಳಿದ ಭಾಗ ಮಾದೇಶ ವಿದ್ಯಾ ಆಗಿ ಪರಿವರ್ತಿತನಾದ ನಂತರದ ಜೀವನವನ್ನು ಹಾಗೂ ಒಂದು ಘನೆತೆಯ ಬದುಕಿಗಾಗಿ ಆಗೆ ಹೇಗೆ ಹೋರಾಡುತ್ತಾಳೆ ಎನ್ನುವುದನ್ನು ತೋರಿಸುತ್ತದೆ.
ಪಾತ್ರಗಳು
ಬದಲಾಯಿಸಿ- ಮಾದೇಶ/ವಿದ್ಯಾ - ಸಂಚಾರಿ ವಿಜಯ್
ಸಂಗೀತ
ಬದಲಾಯಿಸಿಅನೂಪ್ ಸೀಳಿನ್ ಚಿತ್ರ ಸಂಗೀತ ಮತ್ತು ಧ್ವನಿಪಥವನ್ನು ಸಂಯೋಜಿಸಿದ್ದಾರೆ; ಸಾಹಿತ್ಯವನ್ನು ಅರಸು ಅಂತರೆ ಬರೆದಿದ್ದಾರೆ. ಧ್ವನಿಪಥದ ಆಲ್ಬಂ ಮೂರು ಹಾಡುಗಳನ್ನು ಒಳಗೊಂಡಿದೆ.
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
1. | "ಗಂಗಾ ನದಿ ಮಿಂದಾಯ್ತು" | ಅರಸು ಅಂತರೆ | ಅನೂಪ್ ಸೀಳಿನ್, ಅರಸು ಅಂತರೆ | |
2. | "ಗುಬ್ಬಚ್ಚಿ ಕಣ್ಣಿಗೆ" | ಅರಸು ಅಂತರೆ | ಅನೂಪ್ ಸೀಳಿನ್ | |
3. | "ವಾರೆ ವಾರೆ" | ಅರಸು ಅಂತರೆ | ಅನೂಪ್ ಸೀಳಿನ್ |
ಪ್ರಶಸ್ತಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ನಾನು ಅವನಲ್ಲ... ಅವಳು , ವಿಜಯಕರ್ನಾಟಕ, ೦೫ಮಾರ್ಚ್೨೦೧೨
- ↑ "Portraying transgender's life made me learn a lot: 'Sanchari' Vijay". timesofindia. 2015-03-25. Retrieved 2015-03-25.
{{cite web}}
: Cite has empty unknown parameter:|1=
(help) - ↑ "Sanchari Vijay Actor–Profile-Biography and Interesting Facts". cinetrooth. 2015-03-24. Archived from the original on 2015-03-27. Retrieved 2015-03-24.
{{cite web}}
: Cite has empty unknown parameter:|6=
(help) - ↑ ಕನ್ನಡಿಗ ವಿಜಯ್ ಶ್ರೇಷ್ಟನಟ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ Archived 2015-06-26 ವೇಬ್ಯಾಕ್ ಮೆಷಿನ್ ನಲ್ಲಿ., ಉದಯವಾಣಿ, ೨೫ಮಾರ್ಚ್೨೦೧೫
- ↑ "62nd National Film Awards: List of Winners". NDTV. 24 March 2015. Retrieved 27 March 2015.
{{cite web}}
: Italic or bold markup not allowed in:|publisher=
(help)
ಇವನ್ನೂ ನೋಡಿ
ಬದಲಾಯಿಸಿಹೊರಕೊಂಡಿಗಳು
ಬದಲಾಯಿಸಿಛಾಯಾಚಿತ್ರಗಳು
ಬದಲಾಯಿಸಿ-
ನಾನು ಅವನಲ್ಲ... ಅವಳು ಚಿತ್ರದ ದೃಶ್ಯ
-
ನಾನು ಅವನಲ್ಲ... ಅವಳು ಚಿತ್ರದ ದೃಶ್ಯ
-
ನಾನು ಅವನಲ್ಲ... ಅವಳು ಚಿತ್ರದ ದೃಶ್ಯ
-
ನಾನು ಅವನಲ್ಲ... ಅವಳು ಚಿತ್ರದ ದೃಶ್ಯ
-
ನಾನು ಅವನಲ್ಲ... ಅವಳು ಚಿತ್ರದ ದೃಶ್ಯ