ನಾಗರೇಖಾ ಗಾಂವಕರ ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಕನ್ನಡದ ಸೃಜನಶೀಲ ಬರಗಾರ್ತಿ, ಅನುವಾದಕಿ ಮತ್ತು ಅಂಕಣಕಾರ್ತಿ. ವೃತ್ತಿಯಲ್ಲಿ ಉಪನ್ಯಾಸಕರು, ಪ್ರವೃತ್ತಿಯಲ್ಲಿ ಬರಹಗಾರರು.

ಕನ್ನಡ ಬರಹಗಾರ್ತಿ ನಾಗರೇಖಾ ಗಾಂವಕರ

ಹುಟ್ಟು

ಬದಲಾಯಿಸಿ

ಉತ್ತರಕನ್ನಡ ಜಿಲ್ಲೆಯ ಅಡ್ಲೂರು ಗ್ರಾಮದಲ್ಲಿ ಜನಿಸಿದರು.

ಶಿಕ್ಷಣ

ಬದಲಾಯಿಸಿ

ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಎಂ ಎ ಪದವಿ. ವೃತ್ತಿಯಿಂದ ಉಪನ್ಯಾಸಕಿಯಾಗಿದ್ದು, ಸರಕಾರಿ ಪದವಿಪೂರ್ವ ಕಾಲೇಜು ದಾಂಡೇಲಿಯಲ್ಲಿ ಕರ್ತವ್ಯ ನಿರ್ವಹಣೆ.

ಪ್ರಕಟಿತ ಕೃತಿಗಳು

ಬದಲಾಯಿಸಿ
  1. ಏಣ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ [ಕವನ ಸಂಕಲನಗಳು,]
  2. ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ [ಅಂಕಣ ಬರಹ ಕೃತಿ]
  3. ಕವಾಟ- ಪುಸ್ತಕ ಪರಿಚಯ ಕೃತಿ
  4. ಸ್ತ್ರೀ- ಸಮಾನತೆಯ ಸಂಧಿಕಾಲದಲ್ಲಿ - ಮಹಿಳಾ ಅಸ್ಮಿತೆ ಕುರಿತ [ಅಂಕಣ ಬರಹ] ಕೃತಿ.
  5. ದಿ ಡೈರಿ ಆಫ್ ಎ ಯಂಗ್ ಗರ್ಲ್ – ಆನ್ ಫ್ರಾಂಕ್ [ಅನುವಾದಿತ ಕೃತಿ] ಬಂದಿರುತ್ತದೆ.
  6. ಮೌನದೊಳಗೊಂದು ಅಂತರ್ಧಾನ - ಕಥಾ ಸಂಕಲನ
  7. ಬಣ್ಣದ ಕೊಡೆ- ಬಾಲ್ಯದ ಅನುಭವ ಲೋಕ - ಅನುಭವ ಕಥನ
  8. ಕನ್ನಡಪ್ರಜ್ಞೆಯ ಸುತ್ತ ಮುತ್ತ - ಸಂಪಾದಿತ ಕೃತಿ
  9. ಡಾ.ಗೀತಾ ಡಿ.ಸಿ. ಜೊತೆಗೂಡಿ ಸಂಪಾದಿಸಿದ ಕೃತಿ

ಪ್ರಶಸ್ತಿಗಳು

ಬದಲಾಯಿಸಿ
  1. ಏಣ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ “ಶ್ರೀಮತಿ ಶಾರದಾರಾಮಲಿಂಗಪ್ಪ ದತ್ತಿ ಪ್ರಶಸ್ತಿ-2015”[]
  2. ಕರಾವಳಿ ಮುಂಜಾವು ದಿನಪತ್ರಿಕೆಯಲ್ಲಿಯ ಅಂಕಣ ಬರಹಗಳ ಗುರುತಿಸಿ ಬೆಳಗಾವಿಯ ಸಾರ್ವಜನಿಕ ಗ್ರಂಥಾಲಯ ಪ್ರತಿವರ್ಷ ನೀಡುವ ಪತ್ರಕರ್ತ ಪುರಸ್ಕಾರ ಕನ್ನಡ ವಿಭಾಗದ ಪ್ರಾ. ಎಸ್‌ಆರ್‌ಜೋಗ್ ಮಹಿಳಾ ಪ್ರಶಸ್ತಿ-2019.
  3. ಬರ್ಫದ ಬೆಂಕಿ ಸಂಕಲನಕ್ಕೆ ಬೆಳಗಾವಿಯ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ ವತಿಯಿಂದ ನೀಡುವ “ಡಾ. ಬೆಟಗೇರಿ ಕೃಷ್ಣಶರ್ಮ ಕಾವ್ಯ ಪ್ರಶಸ್ತಿ-2019 ಹಾಗೂ ಕರ್ನಾಟಕ ಲೇಖಕಿಯರ ಸಂಘ ಕಾವ್ಯಕ್ಕೆ ನೀಡುವ “ಗೀತಾ ದೇಸಾಯಿ ದತ್ತಿ ಬಹುಮಾನ-2018-19
  4. ಸ್ತ್ರೀ ಸಮಾನತೆಯ ಸಂಧಿಕಾಲದಲ್ಲಿ-ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನೀಡುವ ಲೀಲಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ-2020[]
  5. 2019ರಲ್ಲಿ “ಮೌನದೊಳಗೊಂದು ಅಂತರ್ಧಾನ” ಕಥಾ ಸಂಕಲನ ಹಸ್ತಪ್ರತಿಗೆ ಜಗಜ್ಯೋತಿ ಕಲಾವೃಂದ ಡೊಂಬಿವಿಲಿ, ಮುಂಬೈ ಇವರು ಕೊಡಮಾಡುವ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಕಥಾ ಪ್ರಶಸ್ತಿ
  6. ದಿ ಡೈರಿ ಆಫ್ ಎ ಯಂಗ್ ಗರ್ಲ್ - ಮೂಲ : ಅನ್ನಿ ಫ್ರಾಂಕ್ - ಕೃತಿಗೆ ಕರ್ನಾಟಕ ಲೇಖಕಿಯರ ಸಂಘ ಭಾಷಾಂತರ ಸಾಹಿತ್ಯಕ್ಕೆ ನೀಡುವ ಶ್ರೀ ಲೇಖಾ ದತ್ತಿ ಪ್ರಶಸ್ತಿ ಲಭಿಸಿದೆ.[]

ಬಾಹ್ಯಕೊಂಡಿ

ಬದಲಾಯಿಸಿ
  1. ಕೆಂಡಸಂಪಿಗೆಯಲ್ಲಿ ನಾಗರೇಖಾ ಅವರು ಬರೆದ ಬರಹಗಳ ವಿವರ
  2. ವಿಶ್ವಧ್ವನಿಯಲ್ಲಿ ನಾಗರೇಖಾ ಗಾಂವಕರರ ಬರಹಗಳು
  3. ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಅನುವಾದಕಿ ನಾಗರೇಖಾ ಗಾಂವಕರ
  4. ಚಿಲುಮೆ ಕನ್ನಡ ಸಾಹಿತ್ಯ ತಾಣ

ಉಲ್ಲೇಖ

ಬದಲಾಯಿಸಿ
  1. "Story and Poem By ನಾಗರೇಖಾ ಗಾಂವಕರ | BookBrahma". www.bookbrahma.com.
  2. https://www.shauryadigital.life/2021/07/2020.html Archived 2021-12-27 ವೇಬ್ಯಾಕ್ ಮೆಷಿನ್ ನಲ್ಲಿ. |website=SHAURYA DIGITAL LIFE
  3. https://www.huffpost.com/entry/anne-frank-diary-anniversary_n_3430185