ನರೇಂದ್ರ ರೈ ದೇರ್ಲ
ಕನ್ನಡ ಪ್ರಾಧ್ಯಾಪಕ, ಕೃಷಿಕ, ಅಂಕಣಗಾರ, ಸೂಕ್ಷ್ಮ ಸಂವೇದನೆಯ ಲೇಖಕ, ಪರಿಸರ ಕುರಿತ ಬರಹಗಾರ, ಚಲನಶೀಲ ಸಂಶೋಧಕರಾಗಿ ಕೆಲಸ ಮಾಡಿದವರು.
ಹುಟ್ಟು
ಬದಲಾಯಿಸಿ14 ಅಕ್ಟೋಬರ್ 1964ರಲ್ಲಿ ಜನಿಸಿದರು. ಸಾಹಿತಿ, ಅಂಕಣಗಾರ, ಕನ್ನಡ ಪ್ರಾಧ್ಯಾಪಕರೂ ಆಗಿದ್ದಾರೆ. ಇದರೊಂದಿಗೆ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿದವರು.
ಸಾಹಿತ್ಯ ಸೇವೆ
ಬದಲಾಯಿಸಿನರೇಂದ್ರ ರೈ ದೇರ್ಲ ತಮ್ಮ ಪರಿಸರ ಸಂಬಂಧಿ ಬರಹಗಳಿಂದ ಗುರುತಿಸಿಕೊಂಡವರು. ತಮ್ಮ ಬರಹಗಳಲ್ಲಿ ಪರಿಸರ ಕಾಳಜಿಯನ್ನು ವ್ಯಕ್ತಪಡಿಸುವ ಅವರು ನಿಸರ್ಗ ಪ್ರೇಮಿ. ಕನ್ನಡ ಪತ್ರಿಕೆಗಳಲ್ಲಿ ಅವರ ಲೇಖನಗಳು, ಅಂಕಣಗಳು ಪ್ರಕಟಗೊಳ್ಳುತ್ತದೆ. ಕೆಲವು ಪತ್ರಿಕೆಗಳಿಗೆ ನಿರಂತರವಾಗಿ ಅಂಕಣ ಬರಹವನ್ನು ನರೇಂದ್ರ ರೈ ಬರೆಯುತ್ತಾರೆ. ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡುವ ನರೇಂದ್ರ ರೈ ಈ ಕುರಿತು ಹಲವು ಜನೋಪಯೋಗಿ ಬರಹಗಳ ಮೂಲಕ ಜನಪ್ರಿಯತೆ ಪಡೆದಿದ್ದಾರೆ.[೧] ಕೃಷಿ ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ. ಸ್ವತಃ ಕೃಷಿಕರಾಗಿರುವ ಇವರು, ತಮ್ಮ ಲೇಖನಗಳ ಮೂಲಕ ಕೃಷಿ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡುವ ನರೇಂದ್ರ ರೈ ಈ ಕುರಿತು ಹಲವು ಜನೋಪಯೋಗಿ ಬರಹಗಳ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಹುಟ್ಟೂರಾದ ದೇರ್ಲದಲ್ಲಿ ವಿವಿಧ ಕೃಷಿ ಪ್ರಯೋಗಗಳನ್ನು ಮಾಡುತ್ತಾ ಆ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಇವೆಲ್ಲದರ ಜೊತೆಗೆ ನರೇಂದ್ರ ರೈ ಓರ್ವ ಉತ್ತಮ ವಾಗ್ಮಿ, ಸಾಹಿತಿ ಹಾಗೂ ಪ್ರಗತಿಪರ ಚಿಂತಕ. ಉತ್ತಮ ಕನ್ನಡ ಪ್ರಾಧ್ಯಾಪಕರೂ ಹೌದು. ತಮ್ಮ ಮಾತಿನ ಮೂಲಕ ಎಂತಹವರಲ್ಲೂ ಪರಿಸರದ ಕುರಿತು ಕಾಳಜಿ ಮೂಡುವಂತೆ ಮಾಡುವ ಇವರು ಈ ಮೂಲಕ ಉತ್ತಮ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ.[೨] ದೇರ್ಲರು ಮರಗಿಡಗಳನ್ನು ಮನುಷ್ಯರಂತೆ ಕಾಣುತ್ತಾರೆ. ತಮ್ಮ ಬರಹಗಳಲ್ಲಿ ಅವುಗಳನ್ನು ಮಾತನಾಡಿಸುತ್ತಾರೆ. ತಮ್ಮ ಬರಹಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವು ಕೃಷಿಕರ ಪ್ರಯೋಗಶೀಲತೆಯನ್ನು ವಿವರಿಸುತ್ತಾರೆ. ಇದು ಹಲವರಿಗೆ ಪ್ರೇರಣೆಯಾದದ್ದೂ ಇದೆ. ಸಾವಯವ ಕೃಷಿ, ತೇಜಸ್ವಿ ಪತ್ರಗಳು, ಹಸಿರು ಉಸಿರು, ನಿರ್ಮಾಣ, ನೆಲದವರು, ಹಸಿರು ಕೃಷಿಯ ನಿಟ್ಟುಸಿರು, ಇದೂ ಪತ್ರಿಕೋದ್ಯಮ ಮುಂತಾದ ಪುಸ್ತಕಗಳು ಹಾಗೂ ಹಲವಾರು ಅಂಕಣ ಬರಹಗಳು, ಲೇಖನಗಳ ಮೂಲಕ ಪರಿಸರ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ.[೩]
ಕೃತಿಗಳು
ಬದಲಾಯಿಸಿ- ನೆಲದವರು- ಕೃಷಿ
- ಕಥೆ-ವ್ಯಥೆ
- ಕನಸು ಪ್ರಕಾಶನ.
- ಸಾವಯವ ಕೃಷಿ
- ಹಸಿರು ಉಸಿರು.
ಉಲ್ಲೇಖ
ಬದಲಾಯಿಸಿ