ನಮ್ಮೂರ ಹಮ್ಮೀರ (ಚಲನಚಿತ್ರ)
ಕನ್ನಡ ಚಲನಚಿತ್ರ
ನಮ್ಮೂರ ಹಮ್ಮೀರ' - ಇದು 1990ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರವಾಗಿದ್ದು ಪೇರಾಲ ಅವರು ನಿರ್ದೇಶಿಸಿದ್ದಾರೆ. ಚಿತ್ರಕಥೆಯು ವಿಜಯ ಬಾಪಿನೀಡು ಅವರದು. ಇದು "ಅಮ್ಮನ್ ಕೋವಿಲ್ ಕಿಳಕಲೆ" ಎಂಬ 1986ರ ತಮಿಳು ಚಿತ್ರದ ರೀಮೇಕ್ ಆಗಿದ್ದು 1988ರಲ್ಲಿ ತೆಲುಗಿನಲ್ಲಿ "ಖೈದಿ ನಂ. 786" ಎಂಬ ಹೆಸರಿನಿಂದ ರೀಮೇಕ್ ಆಗಿತ್ತು. ಈ ಚಿತ್ರದಲ್ಲಿ ಅಂಬರೀಶ್, ಸುಮನ್ ರಂಗನಾಥ್, ದೇವರಾಜ್ ಮತ್ತು ಮುಖ್ಯಮಂತ್ರಿ ಚಂದ್ರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಬಿ. ಎಚ್. ಬುಚ್ಚಿ ರೆಡ್ಡಿ ನಿರ್ಮಾಣದ ಈ ಚಿತ್ರವು ಹಂಸಲೇಖ ಅವರ ಗೀತೆಗಳಿಂದಾಗಿ ಮತ್ತು ಪ್ರಮುಖ ನಟರ ಅಭಿನಯಗಳಿಂದಾಗಿ ವ್ಯಾಪಕ ಮೆಚ್ಚುಗೆ ಗಳಿಸಿತ್ತು.
ನಮ್ಮೂರ ಹಮ್ಮೀರ (ಚಲನಚಿತ್ರ) | |
---|---|
ನಮ್ಮೂರ ಹಮ್ಮೀರ | |
ನಿರ್ದೇಶನ | ಪೇರಾಲ |
ನಿರ್ಮಾಪಕ | ಬಿ.ಹೆಚ್.ಬುಚ್ಚಿ ರೆಡ್ಡಿ |
ಪಾತ್ರವರ್ಗ | ಅಂಬರೀಶ್ , ಸುಮನ್ ರಂಗನಾಥ್, ದೇವರಾಜ್, ಮುಖ್ಯಮಂತ್ರಿ ಚಂದ್ರು, ದಿನೇಶ್, ಡಿಸ್ಕೋಶಾಂತಿ, ಉಮಾಶ್ರೀ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಜಾನಿ ಲಾಲ್ |
ಬಿಡುಗಡೆಯಾಗಿದ್ದು | ೧೯೯೦ |
ಚಿತ್ರ ನಿರ್ಮಾಣ ಸಂಸ್ಥೆ | ಎಂ.ಜೆ.ಆರ್ಟ್ಸ್ ಪಿಕ್ಚರ್ಸ್ |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ |
ಪಾತ್ರವರ್ಗ
ಬದಲಾಯಿಸಿ
ಹಿನ್ನೆಲೆ ಸಂಗೀತ
ಬದಲಾಯಿಸಿಹಂಸಲೇಖ ಅವರು ಚಿತ್ರದ ಸಂಗೀತವನ್ನು ಸಂಯೋಜಿಸಿದ್ದರು. ಅದಕ್ಕೆ ಅಪಾರ ಜನಮನ್ನಣೆ ದೊರಕಿತು.[೧] ಚಿತ್ರದ ಸಂಗೀತವನ್ನು ಲಹರಿ ಮ್ಯೂಸಿಕ್ ಸಂಸ್ಥೆಯು ಬಿಡುಗಡೆ ಮಾಡಿತು.
ಉಲ್ಲೇಖಗಳು
ಬದಲಾಯಿಸಿ
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
1. | "ಕೋಗಿಲೆ ಓ ಕೋಗಿಲೆ" | ಹಂಸಲೇಖ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್ | |
2. | "ಆಸೆಯು ಮುಂದೆ ಮುಂದೆ" | ಹಂಸಲೇಖ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್ | |
3. | "ಅಮ್ಮಮ್ಮ ಗುಮ್ಮ" | ಹಂಸಲೇಖ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್ | |
4. | "ಗಾಳಿ ಗಾಳಿ ನಮ್ಮೂರ" | ಹಂಸಲೇಖ | ಎಸ್.ಪಿ.ಬಾಲಸುಬ್ರಹ್ಮಣ್ಯಂ | |
5. | "ಕಾವೇರಿಯ ದಂಡೆ" | ಹಂಸಲೇಖ | ಮಂಜುಳ ಗುರುರಾಜ್ |