ಕುಣಿಗಲ್ ನಾಗಭೂಷಣ್

ಕುಣಿಗಲ್ ನಾಗಭೂಷಣ (ಜನನ: ಡಿಸೆಂಬರ್ ೬, ೧೯೪೫ - ಮರಣ: ಜೂನ್ ೨೩, ೨೦೧೩) ಅವರು ನಟರಾಗಿ, ಚಿತ್ರಸಾಹಿತಿಯಾಗಿ, ಸಹನಿರ್ದೇಶಕರಾಗಿ, ನಿರ್ದೇಶಕರಾಗಿ ಹಲವಾರು ಕನ್ನಡ ಚಲನಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಸಿನಿಮಾಟೋಗ್ರಫಿಯಲ್ಲಿ ಡಿಪ್ಲೋಮಾ ಮಾಡಿರುವ ಇವರು, ಕನ್ನಡ ರಂಗಭೂಮಿಯಲ್ಲೂ, ಕಿರುತೆರೆ ಧಾರಾವಾಹಿಗಳಲ್ಲೂ ಛಾಪು ಮೂಡಿಸಿದ್ದಾರೆ. ಹಾಸ್ಯನಟರಾಗಿ ಸಿನಿಮಾಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರಾದರೂ ಇವರು ಹೆಚ್ಚಾಗಿ ಕೆಲಸ ಮಾಡಿದ್ದು ಚಿತ್ರಸಾಹಿತಿಯಾಗಿ.

ಕುಣಿಗಲ್ ನಾಗಭೂಷಣ್
ಜನನಡಿಸೆಂಬರ್ ೬, ೧೯೪೫
ಮರಣಜೂನ್ ೨೩, ೨೦೧೩
ವೃತ್ತಿನಟ, ಚಿತ್ರಸಾಹಿತಿ, ಸಹನಿರ್ದೇಶಕ, ನಿರ್ದೇಶಕ
ರಾಷ್ಟ್ರೀಯತೆಭಾರತೀಯ

6೦ರ ದಶಕದಲ್ಲಿ ಲಕ್ಷ್ಮೀನಾರಾಯಣ ನಿರ್ದೇಶಿಸಿದ ನಾಂದಿ (ಚಲನಚಿತ್ರ) ಚಿತ್ರದ ಮೂಲಕ ಸಹನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಾಗಭೂಷಣ ಅವರು, 70ರ ದಶಕದಲ್ಲಿ ಸ್ವತಂತ್ರ ನಿರ್ದೇಶನಕ್ಕೆ ಕೈ ಹಾಕಿದರು.[] ಆಶೀರ್ವಾದ ಹಾಗೂ ಬಾಳು ಜೇನು ಚಿತ್ರಗಳನ್ನು ನಿರ್ದೇಶಿಸಿದ್ದರ ಹೊರತಾಗಿ ಇವರು ನಿರ್ದೇಶನದಲ್ಲಿ ತೊಡಗಿಸಿಕೊಳ್ಳಲಿಲ್ಲ. ಆದರೆ ಉತ್ತಮ ಸಂಭಾಷಣೆಕಾರ ಎಂದು ಹೆಸರಾದರು. ಇವರು ಸಂಭಾಷಣೆ ಬರೆದ ಮೊದಲ ಸಿನಿಮಾ 'ಸಿಂಹ ಜೋಡಿ'. 80 ಹಾಗೂ 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸದಾ ಸಕ್ರಿಯರಾಗಿದ್ದ ಸಂಭಾಷಣೆಕಾರ ಎನಿಸಿಕೊಂಡ ನಾಗಭೂಷಣ್ ಅವರಿಗೆ ನವರಸ ವಿಶಾರದಾ ಎಂಬ ಬಿರುದು ಒಲಿದುಬಂತು. ಸಹೋದರರ ಸವಾಲ್, ಸಿಂಹದ ಜೋಡಿ, ಎಸ್‍..ಪಿ. ಸಾಂಗ್ಲಿಯಾನ ಸೇರಿದಂತೆ ೨೦೦ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಮೊದಲಾದ ಪ್ರಸಿದ್ಧ ನಟರ ಚಿತ್ರಗಳಿಗೆ ಸಂಭಾಷಣೆ ಬರೆದ ಹೆಗ್ಗಳಿಕೆ ಇವರದು.

ಸಂಭಾಷಣೆ ಬರೆದ ಕೆಲವು ಚಿತ್ರಗಳು

ಬದಲಾಯಿಸಿ
  • ಸಿಂಹದ ಜೋಡಿ
  • ಗಣೇಶನ ಮದುವೆ
  • ಗೌರಿ ಗಣೇಶ
  • ಯಾರಿಗೂ ಹೇಳ್ಬೇಡಿ
  • ಗೋಲ್‌ಮಾಲ್ ರಾಧಾಕೃಷ್ಣ

ಪ್ರಶಸ್ತಿಗಳು

ಬದಲಾಯಿಸಿ

ರಾಜ್ಯ ಸರ್ಕಾರದಿಂದ ಎರಡು ಬಾರಿ ಅತ್ಯುತ್ತಮ ಸಂಭಾಷಣಾ ಕರ್ತೃ ಪ್ರಶಸ್ತಿ (ಗೌರಿ ಗಣೇಶ, ಯಾರಿಗೂ ಹೇಳ್ಬೇಡಿ) ಪಡೆದಿದ್ದಾರೆ.

ದೀರ್ಘಕಾಲದ ಮಧುಮೇಹದಿಂದ ಬಳಲುತ್ತಿದ್ದ ಇವರು ಜೂನ್ ೨೩, ೨೦೧೩ರಂದು ಹೃದಯಾಘಾತದಿಂದ ನಿಧನ ಹೊಂದಿದರು [].


ಉಲ್ಲೇಖಗಳು

ಬದಲಾಯಿಸಿ
  1. http://www.thehindu.com/todays-paper/tp-national/tp-karnataka/kunigal-nagabhushan-dialogue-writer-and-actor-dead/article4844761.ece
  2. http://kannada.oneindia.in/movies/news/2013/06/veteran-kannada-actor-kunigal-nagabhushan-passes-away-075133.html