Expression error: Unexpected < operator. ಧ್ವನಿಯಂಚೆ (ಇದು ಧ್ವನಿ-ಅಂಚೆ , VMS , ಅಥವಾ ಸಂದೇಶ ಕಣಜ ಎಂದೂ ಸಹ ಕರೆಯಲ್ಪಡುತ್ತದೆ) ಎಂಬುದು ಶೇಖರಿಸಲ್ಪಟ್ಟ ದೂರವಾಣಿ ಸಂದೇಶಗಳ ಒಂದು ಕೇಂದ್ರೀಕೃತ ವ್ಯವಸ್ಥೆಯಾಗಿದ್ದು, ಈ ಸಂದೇಶಗಳನ್ನು ನಂತರದಲ್ಲಿ ಮತ್ತೆ ಪಡೆದುಕೊಳ್ಳಬಹುದಾಗಿದೆ. ಒಂದು ಉತ್ತರಿಸುವ ಯಂತ್ರವನ್ನು ಬಳಸುವುದೂ ಸೇರಿದಂತೆ, ಶೇಖರಿಸಲ್ಪಟ್ಟಿರುವ ದೂರಸಂಪರ್ಕ ಧ್ವನಿ ಸಂದೇಶವೊಂದನ್ನು ರವಾನಿಸುವ ಯಾವುದೇ ವ್ಯವಸ್ಥೆಯನ್ನು ಸೂಚಿಸಲು ಕೂಡಾ ಈ ಪರಿಭಾಷೆಯನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ. ಬಹುತೇಕ ಸೆಲ್‌ ಫೋನುಗಳು ಧ್ವನಿಯಂಚೆಯನ್ನು ಒಂದು ಮೂಲಭೂತ ಲಕ್ಷಣವಾಗಿ ಹೊಂದಿವೆ, ಮತ್ತು ಅನೇಕ ಸ್ಥಿರ-ಸಂಪರ್ಕದ ದೂರವಾಣಿಗಳು ಮತ್ತು ಸಾಂಸ್ಥಿಕ PBX ವ್ಯವಸ್ಥೆಗಳು ತಮ್ಮದೇ ಆದ ಧ್ವನಿಯಂಚೆ ಆಯ್ಕೆಗಳನ್ನು ಹೊಂದಿವೆ.

ವಿಶಿಷ್ಟ ಲಕ್ಷಣಗಳು

ಬದಲಾಯಿಸಿ

ಧ್ವನಿಮುದ್ರಿತ ಶ್ರವಣ ಸಂದೇಶವೊಂದನ್ನು ಓರ್ವ ಗ್ರಾಹಿಗೆ ರವಾನಿಸುವುದಕ್ಕಾಗಿ ಧ್ವನಿಯಂಚೆ ವ್ಯವಸ್ಥೆಗಳು ವಿನ್ಯಾಸಗೊಳಿಸಲ್ಪಟ್ಟಿವೆ. ಇದನ್ನು ನೆರವೇರಿಸುವ ದೃಷ್ಟಿಯಿಂದ ಅವು ಅನೇಕ ವಿಶಿಷ್ಟ-ಸಜ್ಜಿಕೆಗಳನ್ನು ಹೊಂದಿರುತ್ತವೆ: ಸಂದೇಶಗಳನ್ನು ಆರಿಸಲು, ಚಾಲಿಸಲು ಮತ್ತು ನಿರ್ವಹಿಸಲೆಂದು ಒಂದು ಬಳಕೆದಾರ ಇಂಟರ್‌ಫೇಸ್‌; ಸಂದೇಶವನ್ನು ಚಾಲಿಸಲು ಅಥವಾ ಹಾಗಿಲ್ಲದೇ ಹೋದರೆ ವಿತರಿಸಲೆಂದು ಒಂದು ವಿತರಣಾ ವಿಧಾನ; ಮತ್ತು ಬಳಕೆದಾರನಿಗೆ ಒಂದು ಕಾಯುವ ಸಂದೇಶವನ್ನು ತಿಳಿಸಲೆಂದು ಒಂದು ಪ್ರಕಟಣಾ/ಘೋಷಣಾ ಸಾಮರ್ಥ್ಯ ಇವು ಸದರಿ ಸಜ್ಜಿಕೆಗಳಲ್ಲಿ ಸೇರಿರುತ್ತವೆ. ಬಹುತೇಕ ವ್ಯವಸ್ಥೆಗಳು ಈ ಎಲ್ಲಾ ಚಟುವಟಿಕೆಗಳಿಗೆ ಸಂಬಂಧಿಸಿದ ವಾಹಿನಿಯಾಗಿ ಸೆಲ್ಯುಲರ್‌ ಅಥವಾ ಸ್ಥಿರ-ಸಂಪರ್ಕ ಆಧರಿತ ದೂರವಾಣಿ-ಜಾಲಗಳನ್ನು ಬಳಸುತ್ತವೆ. ಬಹುವಿಧದ ವಿಧಾನಗಳ ಮೂಲಕ ಸಂದೇಶಗಳನ್ನು ಮತ್ತೆ ಪಡೆದುಕೊಳ್ಳುವುದಕ್ಕೆ ಅಥವಾ ಬಿಡುವುದಕ್ಕೆ ಗ್ರಾಹಿಗಳಿಗೆ ಮತ್ತು ಕರೆ ಮಾಡುವವರಿಗೆ ಅನುಮತಿಸುವಂಥ ಬಹುವಿಧದ ದೂರಸಂಪರ್ಕ ವಿಧಾನಗಳನ್ನು ಕೆಲವೊಂದು ವ್ಯವಸ್ಥೆಗಳು ಬಳಸಬಹುದು.

ಸ್ಪರ್ಶ-ನಾದಗಳ ವ್ಯವಸ್ಥೆಯೊಂದನ್ನು ಬಳಕೆದಾರ ಇಂಟರ್‌ಫೇಸ್ ಆಗಿ ಬಳಸಿಕೊಂಡು ಸರಳ ಧ್ವನಿಯಂಚೆಯು ಒಂದು ದೂರದ ಉತ್ತರಿಸುವ ಯಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚು ಸಂಕೀರ್ಣವಾಗಿರುವ ವ್ಯವಸ್ಥೆಗಳು ಧ್ವನಿ ಅಥವಾ ಒಂದು ಗಣಕಯಂತ್ರದ ಇಂಟರ್‌ಫೇಸ್‌ನಂಥ ಇತರ ಪ್ರದಾನ ಸಾಧನಗಳನ್ನು ಬಳಸಬಹುದು. ಸರಳವಾಗಿರುವ ಧ್ವನಿಯಂಚೆ ವ್ಯವಸ್ಥೆಗಳು ದೂರವಾಣಿಯ ಮೂಲಕ ಶ್ರವಣ ಸಂದೇಶವನ್ನು ಚಾಲಿಸಬಹುದು; ಹೆಚ್ಚು ಮುಂದುವರಿದ ವ್ಯವಸ್ಥೆಗಳು ಕೆಲವೊಂದು ಪರ್ಯಾಯ ವಿತರಣಾ ವಿಧಾನಗಳನ್ನು ಹೊಂದಿರಬಹುದು. ಅವುಗಳೆಂದರೆ: ಇ-ಮೇಲ್‌ ಅಥವಾ ಪಠ್ಯ ಸಂದೇಶ ವಿತರಣೆ, ಸಂದೇಶ ವರ್ಗಾವಣೆ ಮತ್ತು ಮುಂದಕ್ಕೆ ರವಾನಿಸುವ ಆಯ್ಕೆಗಳು, ಮತ್ತು ಬಹುವಿಧದ ಅಂಚೆ-ಪೆಟ್ಟಿಗೆಗಳು.

ಧ್ವನಿಯಂಚೆ ವ್ಯವಸ್ಥೆಯನ್ನು ಆಧರಿಸಿ ಸೂಚನಾ ವಿಧಾನಗಳು ಕೂಡಾ ಬದಲಾಗುತ್ತವೆ. ಸರಳ ವ್ಯವಸ್ಥೆಗಳು ಸಕ್ರಿಯ ಪ್ರಕಟಣೆ/ಘೋಷಣೆಯನ್ನೇ ಒದಗಿಸದಿರಬಹುದು, ಅದರ ಬದಲಿಗೆ ಗ್ರಾಹಕರೇ ಅದನ್ನು ವ್ಯವಸ್ಥೆಯೊಂದಿಗೆ ಪರಿಶೀಲಿಸಬೇಕಾಗಿ ಬರಬಹುದು; ಅದೇ ವೇಳೆಗೆ ಇತರ ವ್ಯವಸ್ಥೆಗಳು ಸಂದೇಶಗಳು ಕಾಯುತ್ತಿವೆ ಎಂಬ ಒಂದು ಪ್ರಕಟಣೆ/ಘೋಷಣೆಯನ್ನು ಒದಗಿಸಬಹುದು.

ಬಹುತೇಕ ಎಲ್ಲಾ ಆಧುನಿಕ ಧ್ವನಿಯಂಚೆ ವ್ಯವಸ್ಥೆಗಳು ಅಂಕೀಯ ಶೇಖರಣೆಯನ್ನು (ಡಿಜಿಟಲ್‌ ಸ್ಟೋರೇಜ್‌) ಬಳಸುತ್ತವೆ ಮತ್ತು ಇವು ಗಣಕಯಂತ್ರ ಶೇಖರಣೆ ಸಾಧನಗಳ ಮೇಲೆ ವಿಶಿಷ್ಟವಾಗಿ ಶೇಖರಿಸಲ್ಪಡುತ್ತವೆ.

ಇತಿಹಾಸ

ಬದಲಾಯಿಸಿ

ಗೆರಾಲ್ಡ್‌ M. ಕೊಲೊಡ್ನಿ ಮತ್ತು ಪಾಲ್‌ ಹ್ಯೂಸ್‌ ಎಂಬಿಬ್ಬರಿಂದ ಧ್ವನಿಯಂಚೆಯು ಆವಿಷ್ಕರಿಸಲ್ಪಟ್ಟಿತು ಮತ್ತು ರೇಡಿಯಾಲಜಿ ಎಂಬ ಒಂದು ವೈದ್ಯಕೀಯ ನಿಯತಕಾಲಿಕದಲ್ಲಿನ ಲೇಖನವೊಂದರಲ್ಲಿ ಇದು ಮೊದಲು ವಿವರಿಸಲ್ಪಟ್ಟಿತು (ಕೊಲೊಡ್ನಿ GM, ಕೊಹೆನ್‌ HI, ಕ್ಯಾಲಿಸ್ಕಿ A. ರ್ಯಾಪಿಡ್‌-ಆಕ್ಸೆಸ್‌ ಸಿಸ್ಟಮ್ಸ್‌ ಫಾರ್ ರೇಡಿಯಾಲಜಿ ರಿಪೋರ್ಟ್ಸ್‌: ಎ ನ್ಯೂ ಕಾನ್ಸೆಪ್ಟ್‌. ರೇಡಿಯಾಲಜಿ. ೧೯೭೪;೧೧೧(೩):೭೧೭-೯). ಇದಕ್ಕೆ ಸಂಬಂಧಿಸಿದ ಒಂದು ಸ್ವಾಮ್ಯದ ಸನ್ನದನ್ನು (ಪೇಟೆಂಟನ್ನು) ಪಡೆಯಲು ಕೊಲೊಡ್ನಿ ಮತ್ತು ಹ್ಯೂಸ್‌ ೧೯೭೫ರಲ್ಲಿ ಅರ್ಜಿ ಸಲ್ಲಿಸಿದರು, ಮತ್ತು ೧೯೮೧ರಲ್ಲಿ ಅವರಿಗೆ ಸ್ವಾಮ್ಯದ ಸನ್ನದು ನೀಡಲ್ಪಟ್ಟಿತು (U.S. ಸ್ವಾಮ್ಯದ ಸನ್ನದು ೪,೨೬೦,೮೫೪). ಇಂಥ ವ್ಯವಸ್ಥೆಗಳನ್ನು ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಮಾರುಕಟ್ಟೆ ಮಾಡಲು ಮತ್ತು ಮಾರಾಟ ಮಾಡಲು ಮುಂದುವರಿದ ಮ್ಯಾಸಚೂಸೆಟ್ಸ್‌ನ ಸಡ್‌ಬರಿಯ ಸಡ್‌ಬರಿ ಸಿಸ್ಟಮ್ಸ್‌ಗೆ ಸ್ವಾಮ್ಯದ ಸನ್ನದನ್ನು ನಿಯೋಜಿಸಲಾಯಿತು. IBM, ಸೋನಿ ಮತ್ತು ಲೇನಿಯರ್‌‌ ಕಂಪನಿಗಳು ಮಾತ್ರವೇ ಅಲ್ಲದೇ ಧ್ವನಿಯಂಚೆ ವ್ಯವಸ್ಥೆಗಳ ಹಲವಾರು ಸಣ್ಣಗಾತ್ರದ ತಯಾರಕರು ತಮ್ಮ ಧ್ವನಿಯಂಚೆ ವ್ಯವಸ್ಥೆಗಳಿಗಾಗಿ ಸಡ್‌ಬರಿ ಸ್ವಾಮ್ಯದ ಸನ್ನದಿನ ಪರವಾನಗಿಯನ್ನು ಪಡೆದರು. ಸಡ್‌ಬರಿ ಸ್ವಾಮ್ಯದ ಸನ್ನದಿನ ಪೂರ್ವಭಾವಿ ತಂತ್ರವಾಗಿ ಹಕ್ಕುಸಾಧಿಸ ಹೊರಟ ಪಿಟ್ನಿ ಬೋವರ್ಸ್ ವತಿಯಿಂದ ಹೂಡಲಾದ ಸ್ವಾಮ್ಯದ ಸನ್ನದು ದಾವೆಯೊಂದನ್ನು ಕನೆಕ್ಟಿಕಟ್‌ ಜಿಲ್ಲೆಯ U.S. ಜಿಲ್ಲಾ ನ್ಯಾಯಾಲಯವು ೨೦೦೦ದ ನವೆಂಬರ್‌ ೮ರಂದು ನಿರಾಕರಿಸಿತು. ೧೯೭೦ರ ದಶಕದಲ್ಲಿ ಮತ್ತು ೧೯೮೦ರ ದಶಕದ ಆರಂಭದಲ್ಲಿ, ದೂರವಾಣಿ ಕರೆಯೊಂದನ್ನು ಮಾಡುವ ವೆಚ್ಚವು ಇಳಿಯಿತು ಮತ್ತು ದೂರವಾಣಿಯ ನೆರವಿನಿಂದ ಹೆಚ್ಚು ವ್ಯವಹಾರ ಸಂವಹನೆಗಳು ಮಾಡಲ್ಪಟ್ಟವು. ಸಂಸ್ಥೆಗಳು ಬೆಳೆದಂತೆ ಮತ್ತು ಕಾರ್ಮಿಕ ದರಗಳು ಹೆಚ್ಚಿದಂತೆ, ಕಾರ್ಯದರ್ಶಿಗಳಿಂದ ಉದ್ಯೋಗಿಗಳವರೆಗಿನ ಅನುಪಾತವು ಇಳಿಯಿತು. ಬಹುವಿಧದ ಕಾಲ ವಲಯಗಳು, ಕೆಲವೇ ಕಾರ್ಯದರ್ಶಿಗಳು ಮತ್ತು ದೂರವಾಣಿಯ ಮೂಲಕ ಸಂಪರ್ಕ-ಸಂವಹನೆಯು ಹೆಚ್ಚಾದ ಕಾರಣದಿಂದಾಗಿ, ನಿಜಾವಧಿ ದೂರವಾಣಿ ಸಂವಹನೆಗಳು ಅಡಚಣೆಗೊಳಗಾದವು ಮತ್ತು ಕರೆ ಮಾಡುವವರು ಜನರನ್ನು ತಲುಪಲು ಅಸಮರ್ಥರಾಗುವಂತಾಯಿತು. ಕೆಲವೊಂದು ಆರಂಭಿಕ ಅಧ್ಯಯನಗಳು ತೋರಿಸಿರುವ ಪ್ರಕಾರ, ೪ ದೂರವಾಣಿ ಕರೆಗಳಲ್ಲಿ ಕೇವಲ ೧ ಕರೆ ಮಾತ್ರವೇ ಒಂದು ಸಂಪೂರ್ಣಗೊಂಡ ಕರೆಯಾಗಿ ಪರಿಣಮಿಸುತ್ತಿತ್ತು ಮತ್ತು ಅರ್ಧದಷ್ಟು ಕರೆಗಳು ಏಕ-ಮಾರ್ಗದ ಸ್ವರೂಪವನ್ನು ಹೊಂದಿರುತ್ತಿದ್ದವು (ಅಂದರೆ, ಅವಕ್ಕೆ ಒಂದು ಸಂಭಾಷಣೆಯ ಅಗತ್ಯವಿರಲಿಲ್ಲ). ಈ ಸನ್ನಿವೇಶ ಉದ್ಭವವಾಗಲು ಕಾರಣವೇನೆಂದರೆ, ಒಂದೋ ಜನರು ತಮ್ಮ ಕೆಲಸದಲ್ಲಿ ತೊಡಗಿರುತ್ತಿರಲಿಲ್ಲ (ಕಾಲ ವಲಯ ವ್ಯತ್ಯಾಸಗಳ ಕಾರಣದಿಂದ, ವ್ಯವಹಾರ ಸಂಬಂಧಿ ಕಾರ್ಯದ ಮೇಲೆ ಹೊರಗೆ ತೆರಳಿರುವುದು, ಇತ್ಯಾದಿ), ಅಥವಾ ಒಂದು ವೇಳೆ ಅವರು ಕೆಲಸದಲ್ಲಿ ತೊಡಗಿಕೊಂಡಿದ್ದರೂ, ಅವರು ದೂರವಾಣಿಯಲ್ಲಿ ಮಾತಾಡುತ್ತಿರುತ್ತಿದ್ದರು, ತಮ್ಮ ಕೆಲಸದ ಮೇಜುಗಳಿಂದ ಆಚೆ ತೆರಳಿ ಸಭೆಗಳಲ್ಲಿರುತ್ತಿದ್ದರು, ವಿರಾಮದ ಅವಧಿಗಳಲ್ಲಿ ವ್ಯಸ್ತರಾಗಿರುತ್ತಿದ್ದರು, ಇತ್ಯಾದಿ. ಈ ಪ್ರತಿಬಂಧಕ ಸ್ವರೂಪವು ವ್ಯವಹಾರ ಚಟುವಟಿಕೆಗಳ ಪರಿಣಾಮಕಾರಿತ್ವಕ್ಕೆ ಅಡಚಣೆಯುಂಟುಮಾಡಿತು ಮತ್ತು ವೈಯಕ್ತಿಕ ಮತ್ತು ಸಮೂಹ ಉತ್ಪಾದಕತೆಯೆರಡನ್ನೂ ಅದು ತಗ್ಗಿಸಿತು. ಇಷ್ಟೇ ಅಲ್ಲ, ಕರೆ ಮಾಡುವವರ ಸಮಯವನ್ನೂ ಇದು ಹಾಳುಮಾಡಿತು ಹಾಗೂ ಕಾಲ-ನಿರ್ಣಾಯಕ ವಿವಾದಾಂಶಗಳನ್ನು ಪರಿಹರಿಸುವಲ್ಲಿ ವಿಳಂಬಗಳನ್ನು ಸೃಷ್ಟಿಸಿತು.

೧೯೭೦ರ ದಶಕ ಮತ್ತು ೮೦ರ ದಶಕಗಳಲ್ಲಿ ಇ-ಮೇಲ್‌ ಸಂದೇಶ ವ್ಯವಸ್ಥೆಯಾಗಲೀ ಅಥವಾ ಸೆಲ್ಯುಲರ್‌ ದೂರವಾಣಿಗಳಾಗಲೀ ವ್ಯಾಪಕವಾಗಿ ಹಬ್ಬಿರಲಿಲ್ಲ. ಅಷ್ಟೇ ಅಲ್ಲ, ೧೯೯೦ರ ದಶಕದ ಮಧ್ಯಭಾಗವು ಬಂದಿದ್ದರೂ ಅವು ನಿಜವಾಗಿಯೂ ಪ್ರವರ್ಧಮಾನಕ್ಕೆ ಬರಲು ಇನ್ನೂ ಆರಂಭಿಸಿರಲಿಲ್ಲ. ವ್ಯವಹಾರದ ಅಸ್ತಿತ್ವಗಳು ತಾವು ಎದುರಿಸುತ್ತಿದ್ದ ದೂರವಾಣಿ ಸಂವಹನಾ ಸಮಸ್ಯೆಗಳಿಗೆ ಸಂಬಂಧಿಸಿದಂತೆ "ಸಂದೇಶ ಕೇಂದ್ರ"ವನ್ನು ಆರಂಭಿಕ ಪರಿಹಾರೋಪಾಯವಾಗಿ ಕಂಡುಕೊಂಡಿದ್ದವು. ಒಂದು ಸಂದೇಶ ಕೇಂದ್ರ ಅಥವಾ "ಸಂದೇಶದ ಮೇಜು" ಎಂಬುದು ಒಂದು ಕಂಪನಿಯ ಒಳಗಿನ ಒಂದು ಕೇಂದ್ರೀಕೃತವಾದ ಸೇವೆಯಾಗಿದ್ದು, ಉತ್ತರಿಸುವ ಕಾರ್ಯಕ್ಕಾಗಿ ಮಾನವಸೇವೆಯನ್ನು ಬಳಸಿಕೊಳ್ಳಲಾಗುತ್ತಿತ್ತು ಮತ್ತು ಪ್ರತಿಯೊಬ್ಬರ ದೂರವಾಣಿ ಕರೆಗಳಿಗೆ ಉತ್ತರಿಸುವುದಕ್ಕೆಂದೇ ಒಂದಷ್ಟು ಜನರನ್ನು ಸಿಬ್ಬಂದಿಗಳನ್ನಾಗಿ ನೇಮಿಸಿರಲಾಗುತ್ತಿತ್ತು. ಕಾರ್ಯನಿರತವಾಗಿರುತ್ತಿದ್ದ ಅಥವಾ "ಏನೂ ಉತ್ತರವಿಲ್ಲ" ಎಂಬ ಜವಾಬು ನೀಡುತ್ತಿದ್ದ ವಿಸ್ತರಣಾ-ದೂರವಾಣಿಗಳು, ಸಂದೇಶ ಕೇಂದ್ರದಲ್ಲಿ ಒಂದು "ಕರೆ ನಿರ್ದೇಶಕ" ಎಂದು ಕರೆಯಲ್ಪಡುವ ಸಾಧನವೊಂದಕ್ಕೆ ಸಂದೇಶವನ್ನು ಮುಂದಕ್ಕೆ ರವಾನಿಸುತ್ತಿದ್ದವು. ಕಂಪನಿಯಲ್ಲಿ ಪ್ರತಿಯೊಂದು ವಿಸ್ತರಣಾ-ವಿಭಾಗಕ್ಕೆ ಸಂಬಂಧಿಸಿದ ಒಂದು ಗುಂಡಿಯು ಕರೆ ನಿರ್ದೇಶಕ ಸಾಧನದಲ್ಲಿ ಇರುತ್ತಿತ್ತು ಹಾಗೂ ವ್ಯಕ್ತಿಯ ವಿಸ್ತರಣಾ-ಕರೆಯು ಸಂದೇಶ ಕೇಂದ್ರಕ್ಕೆ ಮುಂದಕ್ಕೆ ರವಾನಿಸಲ್ಪಡುವಾಗ ಆ ಗುಂಡಿಯು ಮಿನುಗುತ್ತಿತ್ತು. ಗುಂಡಿಯ ಪಕ್ಕದಲ್ಲೇ ಇರುತ್ತಿದ್ದ ಒಂದು ಪುಟ್ಟ ಗುರುತುಪಟ್ಟಿಯು (ಲೇಬಲ್‌) ಅದು ಯಾರ ವಿಸ್ತರಣಾ-ಸಂಖ್ಯೆ ಎಂಬುದನ್ನು ನಿರ್ವಾಹಕನಿಗೆ ಹೇಳುತ್ತಿತ್ತು.

ಇದು ಹಿಂದಿದ್ದ ವ್ಯವಸ್ಥೆಗಳ ಮೇಲಿನ ಒಂದು ಸುಧಾರಣೆಯಾಗಿದ್ದರೂ ಸಹ, ಸಂದೇಶ ಕೇಂದ್ರವು ಅನೇಕ ಅನನುಕೂಲಗಳನ್ನು ಹೊಂದಿತ್ತು. ನಿರ್ವಾಹಕರು ಕಾರ್ಯನಿರತರಾಗಿರುತ್ತಿದ್ದ ಸಂದರ್ಭದಲ್ಲಿ ಊಟದ ಸಮಯದಂಥ ಒತ್ತಡದ ಅವಧಿಗಳಲ್ಲಿ ಭಾರೀ ಪ್ರಮಾಣದ ಕರೆಗಳು ಏಕಕಾಲಿಕವಾಗಿ ದಾಳಿಮಾಡುತ್ತಿದ್ದವು. ಇದರಿಂದಾಗಿ ಪ್ರತಿಯೊಂದು ಸಂದೇಶವನ್ನೂ ಕರಾರುವಾಕ್ಕಾಗಿ ನಿರ್ವಹಿಸಲು ಸಂದೇಶದ ಸಹವರ್ತಿಗಳಿಗೆ ಅತ್ಯಲ್ಪ ಸಮಯವಷ್ಟೇ ಸಿಗುತ್ತಿತ್ತು. ಅನೇಕವೇಳೆ, ಅವರಿಗೂ ಸಹ ಉದ್ಯೋಗಿಗಳ ಹೆಸರುಗಳ ನಿಕಟ ಪರಿಚಯವಿರುತ್ತಿರಲಿಲ್ಲ ಅಥವಾ ಅವರ ಹೆಸರನ್ನು ಬರೆಯವುದು ಅಥವಾ ಉಚ್ಚರಿಸುವಲ್ಲಿ ಅವರಿಗೆ ತೊಡಕಾಗುತ್ತಿತ್ತು. ಸಂದೇಶಗಳನ್ನು ನಸುಕೆಂಪು ಬಣ್ಣದ ಕಿರುಹಾಳೆಗಳ ಮೇಲೆ ಬರೆಯಲಾಗುತ್ತಿತ್ತು ಹಾಗೂ ಆಂತರಿಕ ಅಂಚೆ ವ್ಯವಸ್ಥೆಯ ನೆರವಿನಿಂದ ವಿತರಿಸಲಾಗುತ್ತಿತ್ತು. ಅನೇಕಸಲ, ಈ ಸಂದೇಶಗಳು ಸುದೀರ್ಘವಾದ ವಿಳಂಬಗಳ ನಂತರ ಸಂಬಂಧಪಟ್ಟ ಜನರ ಮೇಜುಗಳ ಮೇಲೆ ಬಂದು ಬೀಳುತ್ತಿದ್ದವು ಮತ್ತು ಕರೆಮಾಡಿದವರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಬಿಟ್ಟರೆ ಅದರಲ್ಲಿ ಹೆಚ್ಚೇನೂ ಇರುತ್ತಿರಲಿಲ್ಲ. ಅಷ್ಟೇ ಏಕೆ, ಸದರಿ ಸಂದೇಶ-ಚೀಟಿಯಲ್ಲಿ ಬರೆಯಲ್ಪಟ್ಟ ಹೆಸರುಗಳು ಅನೇಕವೇಳೆ ಕರಾರುವಾಕ್ಕಾಗಿ ಇರುತ್ತಿರಲಿಲ್ಲ, ತಪ್ಪಾಗಿ ಬರೆದ ಹೆಸರುಗಳು ಮತ್ತು ತಪ್ಪು ದೂರವಾಣಿ ಸಂಖ್ಯೆಗಳನ್ನು ಅವು ಒಳಗೊಂಡಿರುತ್ತಿದ್ದವು.

ಟೇಪು-ಆಧರಿತ ದೂರವಾಣಿಗೆ ಉತ್ತರಿಸುವ ಯಂತ್ರಗಳು ವಸತಿ ದೂರವಾಣಿ ಮಾರುಕಟ್ಟೆಗೆ ಪ್ರವೇಶಿಸಿದ್ದವಾದರೂ, ತಂತ್ರಜ್ಞಾನದ ಭೌತಿಕ ಮಿತಿಗಳ ಕಾರಣದಿಂದಾಗಿ ಅವನ್ನು ಸಾಂಸ್ಥಿಕ ಪರಿಸರದಲ್ಲಿ ಹೆಚ್ಚಾಗಿ ಬಳಸುತ್ತಿರಲಿಲ್ಲ. ಪ್ರತಿ ದೂರವಾಣಿಗೂ ಒಂದೊಂದು ಉತ್ತರಿಸುವ ಯಂತ್ರದ ಅಗತ್ಯವಿರುತ್ತಿತ್ತು; ಒಂದು ವೇಳೆ ಬಳಕೆದಾರನು ದೂರವಾಣಿಯನ್ನು ಬಳಸುತ್ತಿದ್ದ ಪಕ್ಷದಲ್ಲಿ ಸಂದೇಶಗಳನ್ನು ಧ್ವನಿಮುದ್ರಿಸಲು ಆಗುತ್ತಿರಲಿಲ್ಲ; ಅನುಕ್ರಮಿಕ ಕ್ರಮದಲ್ಲಿ ಸಂದೇಶಗಳನ್ನು ಮತ್ತೆ ಪಡೆದುಕೊಳ್ಳಬೇಕಾಗುತ್ತಿತ್ತು; ಆರಿಸಿಕೊಳ್ಳುವ ಮೂಲಕ ತ್ಯಜಿಸಲ್ಪಟ್ಟ, ಉಳಿಸಲ್ಪಟ್ಟ, ಅಥವಾ ಇತರರಿಗೆ ರವಾನಿಸಲ್ಪಟ್ಟ ಸಂದೇಶಗಳನ್ನು ದೂರದಲ್ಲಿದ್ದುಕೊಂಡು ಮತ್ತೆ ಪಡೆದುಕೊಳ್ಳಲು ಸಾಧ್ಯವಿರಲಿಲ್ಲ. ಮೇಲಾಗಿ, PBXನ ಕಾರ್ಯಾತ್ಮಕತೆ ಮತ್ತು ಮೌಲ್ಯವನ್ನು ಹೆಚ್ಚಿಸು ದೃಷ್ಟಿಯಿಂದ ಸ್ವಂತ ಸ್ವಾಮ್ಯದ ಅಂಕೀಯ ದೂರವಾಣಿ ಯಂತ್ರಗಳನ್ನು PBXಗಳ [ಖಾಸಗಿ ಶಾಖಾ ವಿನಿಮಯ ಕೇಂದ್ರಗಳು (ಪ್ರೈವೇಟ್‌ ಬ್ರಾಂಚ್‌ ಎಕ್ಸ್‌ಚೇಂಜ್‌‌ಗಳು) - ಇದು ಸಾಂಸ್ಥಿಕ ದೂರವಾಣಿ ವ್ಯವಸ್ಥೆಗಳಿಗಾಗಿರುವ ಹೆಸರಾಗಿದೆ] ತಯಾರಕರು ಬಳಸುತ್ತಿದ್ದರು. ಈ ದೂರವಾಣಿ ಯಂತ್ರಗಳು ತಾವು ಹೊಂದಿದ್ದ ವಿನ್ಯಾಸದಿಂದಾಗಿ ಉತ್ತರಿಸುವ ಯಂತ್ರಗಳಿಗೆ ಹೊಂದಿಕೊಳ್ಳದ ರೀತಿಯಲ್ಲಿದ್ದವು.

ಸಾಂಸ್ಥಿಕ ಧ್ವನಿಯಂಚೆಯು ಆಕ್ಟೆಲ್‌ ಕಮ್ಯುನಿಕೇಷನ್ಸ್‌‌‌ನಿಂದ (ಇದು ಬಾಬ್‌ ಕೊಹ್ನ್‌ ಮತ್ತು ಪೀಟರ್‌ ಓಲ್ಸನ್‌ ಎಂಬಿಬ್ಬರಿಂದ ೧೯೮೨ರಲ್ಲಿ ಸಂಸ್ಥಾಪಿಸಲ್ಪಟ್ಟಿತು) ವ್ಯಾಪಕವಾಗಿ ವಾಣಿಜ್ಯೀಕರಿಸಲ್ಪಟ್ಟಿತು. ROLM ಕಾರ್ಪೊರೇಷನ್‌ (ಇದು ೧೯೬೯ರಲ್ಲಿ ಜೀನ್‌ ರಿಚೆನ್ಸನ್‌, ಕೆನ್‌ ಓಶ್‌ಮನ್‌‌, ವಾಲ್ಟರ್‌‌ ಲೋವೆನ್‌ಸ್ಟರ್ನ್‌ ಮತ್ತು ರಾಬರ್ಟ್‌ ಮ್ಯಾಕ್ಸ್‌ಫೀಲ್ಡ್‌ ಎಂಬ ವ್ಯಕ್ತಿಗಳಿಂದ ಸಂಸ್ಥಾಪಿಸಲ್ಪಟ್ಟಿತು; ನಂತರ IBM ಇದರ ಮಾಲೀಕತ್ವವನ್ನು ವಹಿಸಿಕೊಂಡಿತು ಮತ್ತು ತದನಂತರದಲ್ಲಿ ಸೀಮೆನ್ಸ್‌‌‌ಗೆ ಇದನ್ನು ಮಾರಾಟಮಾಡಿತು) ಎಂಬ ಸಂಸ್ಥೆಯು ತನ್ನ ಫೋನ್‌ಮೇಲ್‌ ವ್ಯವಸ್ಥೆಯೊಂದಿಗೆ ಸಂಯೋಜಿತ ಧ್ವನಿಯಂಚೆಯನ್ನು ನೀಡುವಲ್ಲಿನ ಮೊದಲ PBX ತಯಾರಕ ಎನಿಸಿಕೊಂಡಿತು ಮತ್ತು ಧ್ವನಿಯಂಚೆಯನ್ನು ವಾಣಿಜ್ಯೀಕರಿಸುವಲ್ಲಿ ಈ ಸಂಸ್ಥೆಯು ಒಂದು ಪ್ರಮುಖ ಪಾತ್ರವನ್ನೂ ವಹಿಸಿತು.

SFS (ಸ್ಪೀಚ್‌ ಫೈಲಿಂಗ್‌ ಸಿಸ್ಟಂ ಅಥವಾ ಮಾತು ಒಪ್ಪವಾಗಿಡುವ ವ್ಯವಸ್ಥೆ) ಎಂಬುದಾಗಿ ಆರಂಭಿಕವಾಗಿ ಕರೆಯಲ್ಪಟ್ಟ IBMನ ಉತ್ಪನ್ನವನ್ನು ಒಂದು ಗಾಢವಾದ ಅಥವಾ ಕೇಂದ್ರೀಕೃತ ಸಂಶೋಧನಾ ಯೋಜನೆಯಾಗಿ IBMನ ಥಾಮಸ್‌ J. ವ್ಯಾಟ್ಸನ್‌ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಯಿತು.[] ಇ-ಮೇಲ್‌ನ ಪರಿಕಲ್ಪನೆಯನ್ನು ಅನುಕರಿಸುವುದು ಇದರ ಅಭಿವೃದ್ಧಿಯ ಹಿಂದಿನ ಉದ್ದೇಶವಾಗಿತ್ತಾದರೂ, ದೂರವಾಣಿಯನ್ನು ಪ್ರದಾನ ಸಾಧನವಾಗಿಯೂ ಮತ್ತು ಮಾನವ ಧ್ವನಿಯನ್ನು ಸಂದೇಶಕ್ಕಾಗಿರುವ ಮಾಧ್ಯಮವಾಗಿಯೂ ಬಳಸಿದ್ದು ವಿಶೇಷವಾಗಿತ್ತು. ಈ ವ್ಯವಸ್ಥೆಯ ಕುರಿತಾದ ಕೆಲಸವು ೧೯೭೩ರಲ್ಲಿ ಆರಂಭವಾಯಿತು ಮತ್ತು ಮೊದಲ ಕಾಯಾತ್ಮಕ ಮೂಲಮಾದರಿಯು ೧೯೭೫ರಲ್ಲಿ ಬಳಕೆದಾರರಿಗೆ ಲಭ್ಯವಾಯಿತು. ಇದನ್ನು ನಾಲ್ಕು ಜನರು ಒಮ್ಮೆಗೆ ಬಳಸಬಹುದಾಗಿತ್ತು. ೧೯೭೫ರಿಂದ ೧೯೮೧ರವರೆಗೆ, IBMನ ಸುಮಾರು ೭೫೦ ಮಂದಿ ಕಾರ್ಯನಿರ್ವಹಣಾಧಿಕಾರಿಗಳು, ಮುಖ್ಯವಾಗಿ U.S.ನಲ್ಲಿದ್ದಂಥವರು ತಮ್ಮ ದೈನಂದಿನ ಕೆಲಸದಲ್ಲಿ ನಾನಾಬಗೆಯ SFS ಮೂಲಮಾದರಿಗಳನ್ನು ಬಳಸಿದರು. ಹೆಚ್ಚುವರಿ ಶೇಖರಣೆಗಾಗಿ ಒಂದು IBM VM೩೭೦ ಯಂತ್ರಕ್ಕೆ ಜೋಡಿಸಲಾಗಿದ್ದ ಒಂದು IBM ಸಿಸ್ಟಮ್‌ /೭ ಗಣಕಯಂತ್ರದ ಮೇಲೆ ಆ ಮೂಲಮಾದರಿಗಳನ್ನು ಚಾಲಿಸಲಾಗಿತ್ತು. ಸೀರೀಸ್‌ /೧ ಗಣಕಯಂತ್ರವೊಂದರ ಮೇಲೆ ಓಡುವಂತೆ ಈ ಮೂಲಮಾದರಿಯನ್ನು ೧೯೭೮ರಲ್ಲಿ ಪರಿವರ್ತಿಸಲಾಯಿತು. ೧೯೮೧ರ ಸೆಪ್ಟೆಂಬರ್‌ನಲ್ಲಿ, ಈ ಉತ್ಪನ್ನವನ್ನು "ಶ್ರವಣ ವಿತರಣಾ ವ್ಯವಸ್ಥೆ"ಯಾಗಿ (ಆಡಿಯೋ ಡಿಸ್ಟ್ರಿಬ್ಯೂಷನ್‌ ಸಿಸ್ಟಮ್‌-ADS) IBM ಘೋಷಿಸಿತು ಮತ್ತು ಗ್ರಾಹಕರ ತಾಣದಲ್ಲಿನ ಮೊದಲ ಅಳವಡಿಕೆಯು ೧೯೮೨ರ ಫೆಬ್ರುವರಿಯಲ್ಲಿ ನಡೆಯಿತು. ಇದು IBM ವತಿಯಿಂದ ನೇರವಾಗಿ ಹಾಗೂ ಒಂದು ಅಲ್ಪಾವಧಿಯವರೆಗೆ AT&T ವತಿಯಿಂದಲೂ ಇದು ಮಾರುಕಟ್ಟೆ ಮಾಡಲ್ಪಟ್ಟಿತು. ಒಂದು ಗಣಕಯಂತ್ರಕ್ಕೆ ಒದಗಿಸುವ ರೀತಿಯಲ್ಲಿಯೇ IBMನ ADSಗೂ ವಿಶೇಷ ಗಮನವನ್ನು (ವಿಶೇಷ ಕೋಣೆ, ವಿಶೇಷ ವಿದ್ಯುತ್‌, ಹವಾನಿಯಂತ್ರಣ ವ್ಯವಸ್ಥೆ, ಇತ್ಯಾದಿ) ನೀಡಬೇಕಿತ್ತು. ಧ್ವನಿ ಸಂದೇಶ ರವಾನೆಗೋಸ್ಕರವೇ ADS ಸಮೃದ್ಧವಾಗಿ ರೂಪಿಸಲ್ಪಟ್ಟಿತ್ತು. ಇದು ಮಾನವ ಅಂಶಗಳಲ್ಲಿನ IBMನ ಅಗಾಧ ಸಂಶೋಧನೆ ಮತ್ತು ನಿಜವಾದ ಕಾಯಾತ್ಮಕ ಬಳಕೆಯಲ್ಲಿ SFSನ್ನು ವೀಕ್ಷಿಸುವುದರ ಫಲವಾಗಿ ರೂಪುಗೊಂಡ ಒಂದು ಉತ್ಪನ್ನವಾಗಿತ್ತು ಎನ್ನಬಹುದು. ಆದಾಗ್ಯೂ, ADS ಒಂದಷ್ಟು ಪ್ರಮುಖ ಮಿತಿಗಳನ್ನು ಹೊಂದಿದ್ದರಿಂದಾಗಿ ಒಂದು ವಾಣಿಜ್ಯ ಉತ್ಪನ್ನವಾಗಿ ಯಶಸ್ಸು ಸಾಧಿಸುವಲ್ಲಿ ಇದು ವಿಫಲಗೊಂಡಿತು: ಉದಾಹರಣೆಗೆ, ಇದು ವಾಸ್ತವಿಕವಾಗಿ ದೊಡ್ಡ ಗಾತ್ರದ, ದುಬಾರಿ ಬೆಲೆಯ ಉತ್ಪನ್ನವಾಗಿದ್ದು, ೧,೦೦೦ ಬಳಕೆದಾರರಿಗೆ ಸೀಮಿತಗೊಳಿಸಲ್ಪಟ್ಟಿತ್ತು; ಇದು ದೂರವಾಣಿಗೆ ಉತ್ತರಿಸುವ ವಿಧಾನವನ್ನು ಹೊಂದಿರಲಿಲ್ಲ (ಅಂದರೆ ಹೊರಗಿನ ಕರೆಗಳಿಗೆ ಉತ್ತರಿಸಲು ಅಸಮರ್ಥವಾಗಿತ್ತು), ಹಾಗೂ ಆಡಳಿತಾತ್ಮಕ ಬದಲಾವಣೆಗಳನ್ನು ಮಾಡಬೇಕೆಂದರೆ ಇದನ್ನು ಸೇವಾಸ್ಥಿತಿಯಿಂದ ಕಡಿತಗೊಳಿಸಿ ಬಳಕೆದಾರ ದತ್ತಾಂಶ ಸಂಗ್ರಹಕ್ಕೆ (ಇದನ್ನು "MAC" ಎಂದು ಕರೆಯಲಾಗುತ್ತಿತ್ತು, ಅಂದರೆ "ಮೂವ್ಸ್‌, ಆಡ್ಸ್‌ ಅಂಡ್‌ ಚೇಂಜಸ್‌" ಎಂದರ್ಥ) ಕೊಂಡೊಯ್ಯಬೇಕಾಗಿತ್ತು.

ಕ್ಯಾಲಿಫೋರ್ನಿಯಾದ ಡೆಲ್ಫಿ ಕಮ್ಯುನಿಕೇಷನ್ಸ್‌ ಎಂಬ ಮತ್ತೊಂದು ಕಂಪನಿಯು ಧ್ವನಿಯಂಚೆಯ ಆವಿಷ್ಕಾರಕ್ಕೆ ಸಂಬಂಧಿಸಿದ ಒಂದಷ್ಟು ಕೀರ್ತಿಯನ್ನು ಪಡೆದುಕೊಳ್ಳಲು ಅರ್ಹವಾಗಿದೆ. ಜೇ ಸ್ಟಾಫರ್ ಎಂಬಾತನ ನಾಯಕತ್ವದ ಅಡಿಯಲ್ಲಿ ಡೆಲ್ಫಿ ಕಮ್ಯುನಿಕೇಷನ್ಸ್‌ ಕಂಪನಿಯು ಒಂದು ಸ್ವಾಮ್ಯದ ವ್ಯವಸ್ಥೆಯನ್ನು (ಅದನ್ನು ಡೆಲ್ಟಾ ೧ ಎಂದು ಕರೆಯಲಾಯಿತು) ಅಭಿವೃದ್ಧಿಪಡಿಸಿತು. ಇದು ಒಳಬರುವ ಕರೆಗಳನ್ನು ದೂರವಾಣಿ ಕಂಪನಿಯಿಂದ ನೇರವಾಗಿ ಎತ್ತಿಕೊಳ್ಳುವಲ್ಲಿ ಸಮರ್ಥವಾಗಿತ್ತು. ಸುಮಾರು ೧೯೭೩ರ ವೇಳೆಗೆ, ದೂರವಾಣಿಗೆ ಉತ್ತರಿಸುವ ಸೇವೆಗಳ ಸಂಘಕ್ಕೆ ಡೆಲ್ಫಿ ಕಂಪನಿಯ ಪರಿಕಲ್ಪನೆಯನ್ನು ಸ್ಟಾಫರ್‌ ಬಹಿರಂಗವಾಗಿ ಸಾದರಪಡಿಸಿದ. ವಾಯ್ಸ್‌ಬ್ಯಾಂಕ್‌ ಎಂದು ಕರೆಯಲ್ಪಡುತ್ತಿದ್ದ ಡೆಲ್ಫಿಯ ಕಂಪನಿಯೊಂದರ ವತಿಯಿಂದ ಮೂಲಮಾದರಿ ವ್ಯವಸ್ಥೆಯನ್ನು ೧೯೭೬ರಲ್ಲಿ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಬಿಡುಗಡೆ ಮಾಡಲಾಯಿತು. ವ್ಯವಹಾರದ ಅಸ್ತಿತ್ವಗಳು ಮತ್ತು ವೃತ್ತಿಪರರಿಗೆ ಸಂಬಂಧಿಸಿದಂತೆ, ಚಂದಾದಾರರ ದೂರವಾಣಿಗಳಿಗೆ ಉತ್ತರ ಹೇಳಬಲ್ಲ ಒಂದು ಅಪ್ಪಟ ಸೇವಾ-ಉದ್ದೇಶಿತ ಧ್ವನಿ ಸಂದೇಶ ರವಾನಾ ವ್ಯವಸ್ಥೆಯಾಗಿ ಡೆಲ್ಟಾ ೧ ಸಾಧನವನ್ನು ಡೆಲ್ಫಿ ಕಮ್ಯುನಿಕೇಷನ್‌ ಅಭಿವೃದ್ಧಿಪಡಿಸಿತು. ಸಂದೇಶ ಸಂಚಯಕ್ಕೆ ಸಂಬಂಧಿಸಿದಂತೆ ಡೆಲ್ಟಾ ೧ ಸಾಧನಕ್ಕೆ ಮಾನವ ಮಧ್ಯಸ್ಥಿಕೆಯ ಅಗತ್ಯವಿತ್ತು. ಮೂರು ಯಂತ್ರಗಳನ್ನು ನಿರ್ಮಿಸಲಾಗಿತ್ತಾದರೂ, ಕೇವಲ ಒಂದು ಯಂತ್ರವನ್ನಷ್ಟೇ ಕಾಯಾತ್ಮಕ ಸೇವೆಗೆ ಬಳಸಲಾಯಿತು. ಸಂಪೂರ್ಣವಾಗಿ ಸ್ವಯಂಚಾಲಿತವಾಗಿದ್ದ ಧ್ವನಿ ಸಂದೇಶ ರವಾನಾ ವ್ಯವಸ್ಥೆಯನ್ನು (ಡೆಲ್ಟಾ ೨) ಆರಂಭಿಕ ಕಾಯಾತ್ಮಕ ಬಳಕೆಗಾಗಿ ೧೯೮೧ರಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ಅಭಿವೃದ್ಧಿಪಡಿಸಲಾಯಿತು. ಮೇಲುನೋಟಕ್ಕೆ ಕಾಣುವಂತೆ ಕೇವಲ ಒಂದು ಅಲ್ಪಾವಧಿಗಾಗಿ ಡೆಲ್ಟಾ ೨ ಸಾಧನವು ನಿರ್ಮಿಸಲ್ಪಟ್ಟು, ಅಳವಡಿಸಲ್ಪಟ್ಟು, ಕಾಯಾತ್ಮಕವಾಗಿತ್ತು. ಆದರೆ ಡೆಲ್ಫಿ ಕಮ್ಯುನಿಕೇಷನ್ಸ್‌ನ ಪ್ರಮುಖ ಆರಂಭಿಕ ಹೂಡಿಕೆದಾರನಾದ ಎಕ್ಸಾನ್‌ ಎಂಟರ್‌ಪ್ರೈಸಸ್‌, ೧೯೮೨ರಲ್ಲಿ ಡೆಲ್ಫಿಯನ್ನು ಇದ್ದಕ್ಕಿದ್ದಂತೆ ಮುಚ್ಚಿತು. ಡೆಲ್ಫಿಯ ತಂತ್ರಜ್ಞಾನದೊಂದಿಗೆ ಮುಂದೆ ಮತ್ತೇನನ್ನೂ ರೂಪಿಸಲಿಲ್ಲ. ಡೆಲ್ಫಿಯ ಸ್ವಯಂಚಾಲಿತ ದೂರವಾಣಿ ಧ್ವನಿ ಸೇವಾ ವ್ಯವಸ್ಥೆಗೆ ಸಂಬಂಧಿಸಿದಂತೆ ಒಂದು ಸ್ವಾಮ್ಯದ ಸನ್ನದು (ಪೇಟೆಂಟ್‌) ನೀಡುವಂತೆ ಅರ್ಜಿ ಸಲ್ಲಿಸಲಾಯಿತು ಮತ್ತು ಇದಕ್ಕೆ ಸ್ವಾಮ್ಯದ ಸನ್ನದು ನೀಡಲ್ಪಟ್ಟಿತು. U.S. ಸ್ವಾಮ್ಯದ ಸನ್ನದು ಸಂ. ೪,೬೨೫,೦೮೧ನ್ನು ಒಳಗೊಂಡಿದ್ದ ಸದರಿ ಸ್ವಾಮ್ಯದ ಸನ್ನದನ್ನು ಡೆಲ್ಫಿಯ ಮುಚ್ಚಿರುವಿಕೆಯ ನಂತರ ನೀಡಲಾಯಿತು; ಆದರೆ ಡೆಲ್ಫಿಯ ಸ್ವತ್ತುಗಳು (ಮತ್ತು ಸ್ವಾಮ್ಯದ ಸನ್ನದು) ಗಿಲ್ಬಾರ್ಕೊ ಎಂಬ ಎಕ್ಸಾನ್‌‌‌ನ ಮತ್ತೊಂದು ಕಂಪನಿಗೆ ವರ್ಗಾಯಿಸಲ್ಪಟ್ಟವು. ಗಿಲ್ಬಾರ್ಕೊ ಕಂಪನಿಯು ಪೆಟ್ರೋಲು ಕೇಂದ್ರಗಳಲ್ಲಿ ಬಳಕೆಯಾಗುವ ಅನಿಲ ಪಂಪುಗಳಿಗಾಗಿ ಸಲಕರಣೆಯನ್ನು ನಿರ್ಮಿಸುತ್ತಿತ್ತು. ಗಿಲ್ಬಾರ್ಕೊ ಕಂಪನಿಯು ಈಗ ಯುನೈಟೆಡ್‌ ಕಿಂಡ್‌ಡಂನಲ್ಲಿನ GEC ಮಾಲೀಕತ್ವದ ಅಡಿಯಲ್ಲಿದೆ.

೧೯೭೯ರಲ್ಲಿ, ಅಂದರೆ IBMನ SFS (ADS) ವ್ಯವಸ್ಥೆಯು ಮೊದಲು ಕಾಯಾತ್ಮಕವಾದ ಐದು ವರ್ಷಗಳ ನಂತರ ಮತ್ತು ಡೆಲ್ಫಿಯ ಡೆಲ್ಟಾ ೧ ವ್ಯವಸ್ಥೆಯು ಮೊದಲು ಕಾಯಾತ್ಮಕವಾದ ಮೂರು ವರ್ಷಗಳ ನಂತರ, ಟೆಕ್ಸಾಸ್‌‌‌ನಲ್ಲಿ ECS ಕಮ್ಯುನಿಕೇಷನ್ಸ್‌ (ಈ ಹೆಸರು ನಂತರದಲ್ಲಿ VMX ಎಂದು ಬದಲಾಯಿಸಲ್ಪಟ್ಟಿತು) ಎಂಬ ಹೆಸರಿನ ಒಂದು ಕಂಪನಿಯು ಗೋರ್ಡಾನ್‌ ಮ್ಯಾಥ್ಯೂಸ್‌ ಎಂಬಾತನಿಂದ ಸಂಸ್ಥಾಪಿಸಲ್ಪಟ್ಟಿತು. ಡೆಲ್ಫಿ ಕಮ್ಯುನಿಕೇಷನ್ಸ್‌‌ನ ಸಂಸ್ಥಾಪಕನಾದ ಜೇ ಸ್ಟಾಫರ್ ಅನುಸಾರ, ಗೋರ್ಡಾನ್‌ ಮ್ಯಾಥ್ಯೂಸ್‌ ತಾನು VMX ಕಂಪನಿಯನ್ನು ಸಂಸ್ಥಾಪಿಸುವುದಕ್ಕೆ ಮುಂಚೆಯೇ ಡೆಲ್ಫಿಯ ಧ್ವನಿಯಂಚೆಯ ಕುರಿತಾಗಿ ಅರಿತಿದ್ದ. ತಾನು ಪ್ರೇರೇಪಿಸಲ್ಪಟ್ಟಿದ್ದು ಹೇಗೆ ಎಂಬುದನ್ನು ಲೆಕ್ಕಿಸದ ಮ್ಯಾಥ್ಯೂಸ್‌ VMX ಕಂಪನಿಯನ್ನು ಅಂತಿಮವಾಗಿ ಸಂಸ್ಥಾಪಿಸಿದ ಮತ್ತು ಈ ಕಂಪನಿಯು VMX/೬೪ ಎಂಬ ಹೆಸರಿನಿಂದ ಕರೆಯಲ್ಪಟ್ಟ ೩,೦೦೦-ಬಳಕೆದಾರ ಸಾಮರ್ಥ್ಯದ ಒಂದು ಧ್ವನಿ ಸಂದೇಶ ರವಾನಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತು. ಸಾಂಸ್ಥಿಕ ಬಳಕೆಗಾಗಿ ಧ್ವನಿಯಂಚೆಯನ್ನು ವಾಣಿಜ್ಯೋದ್ದೇಶದೊಂದಿಗೆ ಮಾರಲು ಪ್ರಸ್ತಾವಿಸುವುದಕ್ಕೆ ಸಂಬಂಧಿಸಿದಂತೆ VMX ಕಂಪನಿಯು ವಾದಯೋಗ್ಯವಾಗಿ ಮೊದಲ ಕಂಪನಿಯಾಗಿತ್ತು. ತನ್ನ ಯಂತ್ರ-ವ್ಯವಸ್ಥೆಯನ್ನು ಗಮನಾರ್ಹವಾದ ಹಲವಾರು ದೊಡ್ಡ ಸಂಸ್ಥೆಗಳಿಗೆ ಮಾರುವಲ್ಲಿ ಮ್ಯಾಥ್ಯೂಸ್‌ ಯಶಸ್ಸು ಕಂಡ. ಅಂಥ ಕೆಲವು ಕಂಪನಿಗಳೆಂದರೆ: ೩M, ಕೊಡಾಕ್‌, ಅಮೆರಿಕನ್‌ ಎಕ್ಸ್‌ಪ್ರೆಸ್‌, ಇಂಟೆಲ್‌, ಹಾಫ್‌ಮನ್‌–ಲಾ ರೊಷೆ, ಕಾರ್ನಿಂಗ್‌ ಗ್ಲಾಸ್‌, ಆರ್ಕೊ, ಷೆಲ್‌ ಕೆನಡಾ ಮತ್ತು ವೆಸ್ಟಿಂಗ್‌ಹೌಸ್‌. ಆರಂಭಿಕ ಪರಿಗ್ರಾಹಕಕರ ಈ ಪ್ರಭಾವಶಾಲಿ ಪಟ್ಟಿಯು ಸಾಂಸ್ಥಿಕ ಧ್ವನಿಯಂಚೆಯ ಕಡೆಗೆ ಎಲ್ಲರ ಒಲವು ಹೊರಳುವುದಕ್ಕೆ ನಾಂದಿಹಾಡಿತು. ಧ್ವನಿಯಂಚೆಯು VMX ಮತ್ತು ಗೋರ್ಡಾನ್‌ ಮ್ಯಾಥ್ಯೂಸ್‌ರಿಂದ ಆವಿಷ್ಕರಿಸಲ್ಪಟ್ಟಿತು ಎಂಬುದಾಗಿ ಕೆಲವೊಬ್ಬರು ಸಮರ್ಥಿಸುತ್ತಾರಾದರೂ, ಈ ಸಮರ್ಥನೆಯು ಸತ್ಯವಲ್ಲ. ದಾಖಲೆಯ ಅನುಸಾರ, IBMನ ಸ್ಟೀಫನ್‌ ಬೋಯೀಸ್‌ ಇದರ ಮೊದಲ ಆವಿಷ್ಕಾರಕನಾಗಿದ್ದು, VMX ಸಂಸ್ಥಾಪಿಸಲ್ಪಡುವುದಕ್ಕೆ ಸಾಕಷ್ಟು ವರ್ಷಗಳ ಮುಂಚೆಯೇ ಈ ಆವಿಷ್ಕಾರವು ಹೊರಬಿದ್ದಿತ್ತು.

ಒಂದು ಉತ್ತಮ ಆರಂಭದೊಂದಿಗೆ VMX ಶುರುವಿಟ್ಟುಕೊಂಡಿತಾದರೂ, ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವಲ್ಲಿ ಅದು ವಿಫಲಗೊಂಡಿತು, ಮತ್ತು ಕಂಪನಿಯು ಒಂದು ವ್ಯಾಪಾರೀ-ಯಶಸ್ಸನ್ನು ಕಾಣಲು ಸಾಧ್ಯವಾಗಲಿಲ್ಲ. ಇದರ ಉತ್ಪನ್ನಗಳು ಹೊರಗಿನ ಕರೆಗಳಿಗೆ (ಮತ್ತು ನಂತರ ಕೆಲವೊಂದು ಸನ್ನಿವೇಶಗಳ ಅಡಿಯಲ್ಲಿ ಮಾತ್ರವೇ) ಉತ್ತರ ನೀಡಲು ಸಮರ್ಥವಾಗುವುದಕ್ಕೆ ಅನೇಕ ವರ್ಷಗಳೇ ಬೇಕಾದವು; ಅವು ವಾಸ್ತವಿಕವಾಗಿ ಅಗಾಧ ಗಾತ್ರದಲ್ಲಿದ್ದವು, ದುಬಾರಿಯಾಗಿದ್ದವು. ಮುಖ್ಯವಾದ ಬಳಕೆದಾರ ವಿಶಿಷ್ಟತೆಗಳನ್ನು ಇದರಲ್ಲಿ ಹಗುರವಾಗಿ ಕಾಣಲಾಗಿತ್ತು ಹಾಗೂ ಗಂಭೀರ ಸ್ವರೂಪದ ವಿಶ್ವಾಸಾರ್ಹತೆಯ ಸಮಸ್ಯೆಗಳನ್ನು ಇವು ಹೊಂದಿದ್ದವು. ಇದರ ಜೊತೆಗೆ, ಬಳಕೆದಾರ ಇಂಟರ್‌ಫೇಸ್‌ ಅನನುಕೂಲವಾಗಿದ್ದು, ಅಂತರ್ಬೋಧೆಯದ್ದಲ್ಲದ ಬಹು-ಅಂಕಿಯ ಸ್ಪರ್ಶ-ನಾದದ ಆದೇಶಗಳನ್ನು ಬಳಕೆದಾರರು ನೆನಪಿಸಿಕೊಳ್ಳಬೇಕಾದುದು ಇಲ್ಲಿ ಅಗತ್ಯವಾಗಿತ್ತು. ಓರ್ವ ಸಮೃದ್ಧ ಉದ್ಯಮಶೀಲ ಮತ್ತು ಸ್ವಾಮ್ಯದ ಸನ್ನದುದಾರನಾಗಿದ್ದ ಮ್ಯಾಥ್ಯೂಸ್‌ ಧ್ವನಿಯಂಚೆಯ ಕುರಿತಾದ ಒಂದು ಸ್ವಾಮ್ಯದ ಸನ್ನದಿಗಾಗಿ ಅರ್ಜಿ ಸಲ್ಲಿಸಿದ ಮತ್ತು ಅದು (ಸ್ವಾಮ್ಯದ ಸನ್ನದು ಸಂಖ್ಯೆ ೪,೩೭೧,೭೫೨) ಅವನಿಗೆ ಮಂಜೂರಾಯಿತು ಹಾಗೂ ೧೯೮೩ರ ಫೆಬ್ರುವರಿಯಲ್ಲಿ ಅದನ್ನು ಅವನಿಗೆ ನೀಡಲಾಯಿತು. ಧ್ವನಿಯಂಚೆಗೆ ಸಂಬಂಧಿಸಿದ ಪಥನಿರ್ಮಾಪಕ ಸ್ವಾಮ್ಯದ ಸನ್ನದಿನ ಸ್ವರೂಪದಲ್ಲಿ ಈ ಸ್ವಾಮ್ಯದ ಸನ್ನದು ಪ್ರವರ್ತಿಸಲ್ಪಟ್ಟಿತು.

ಮೊದಲ ಧ್ವನಿಯಂಚೆ ವ್ಯವಸ್ಥೆಗಳು ಅಭಿವೃದ್ಧಿಯಾದ ಕೆಲವೇ ದಿನಗಳಲ್ಲಿ, ಹಲವಾರು ಕಂಪನಿಗಳು ತಮ್ಮದೇ ಆದ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಅಖಾಡಕ್ಕೆ ಜಿಗಿದವು. ಅಂಥ ಕೆಲವು ಕಂಪನಿಗಳೆಂದರೆ: ವ್ಯಾಂಗ್‌ ಲ್ಯಾಬರೇಟರೀಸ್‌, ROLM, ಓಪ್ಕಾಮ್‌, ಆಕ್ಟೆಲ್‌, ಸೆಂಟಿಗ್ರಾಮ್‌, ಜೆನೆಸಿಸ್‌, ಮತ್ತು ಇತರ ಅನೇಕ ಕಂಪನಿಗಳು. ಡಾ. ಲ್ಯಾರಿ ಬರ್ಗೆರಾನ್‌ನ ನಾಯಕತ್ವದ ಅಡಿಯಲ್ಲಿ ವ್ಯಾಂಗ್‌ ಲ್ಯಾಬರೇಟರೀಸ್‌ ಕಂಪನಿಯು ಒಂದು ಧ್ವನಿಯಂಚೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತು. ಇದು IBM ವ್ಯವಸ್ಥೆಯ ಮಾದರಿಯನ್ನು ಅನುಸರಿಸಿತ್ತು ಎಂಬುದು ಗಮನಾರ್ಹ ಸಂಗತಿ. ವ್ಯಾಂಗ್‌ ಲ್ಯಾಬರೇಟರೀಸ್‌ ತನ್ನ ಈ ವ್ಯವಸ್ಥೆಯನ್ನು DVX ಎಂಬ ಹೆಸರಿನಿಂದ ಕರೆಯಿತು. ಇದೂ ಸಹ ಹೊರಗಿನ ಕರೆಗಳಿಗೆ ಉತ್ತರ ನೀಡಲು ಅಸಮರ್ಥವಾಗಿತ್ತಾದರೂ, IBM ವ್ಯವಸ್ಥೆಗೆ ಹೋಲಿಸಿದಾಗ ಇದು ಅಷ್ಟೊಂದು ದುಬಾರಿಯಾಗಿರಲಿಲ್ಲ ಹಾಗೂ ಸಣ್ಣಗಾತ್ರದಲ್ಲಿತ್ತು.

ತನ್ನ ಸ್ವಾಮ್ಯದ ಸನ್ನದನ್ನು ಬಳಸುವಲ್ಲಿ ಮ್ಯಾಥ್ಯೂಸ್‌ ಸಾಕಷ್ಟು ಚತುರತೆಯನ್ನು ಮೆರೆದಿದ್ದ. IBM, AT&T ಮತ್ತು ನಂತರದಲ್ಲಿ ವ್ಯಾಂಗ್‌ ಲ್ಯಾಬರೇಟರೀಸ್‌ನೊಂದಿಗೆ ತನ್ನ ಸ್ವಾಮ್ಯದ ಸನ್ನದನ್ನು ಸಮರ್ಥಿಸಲು ಮ್ಯಾಥ್ಯೂಸ್‌ ಪ್ರಯತ್ನಿಸಿದ; ಆದರೆ ವರದಿಯಾದ ಪ್ರಕಾರ ಈ ಮೂರೂ ಕಂಪನಿಗಳು ಪೂರ್ವಭಾವಿ ತಂತ್ರದ ಕಾರಣದಿಂದಾಗಿ ಮ್ಯಾಥ್ಯೂಸ್‌ ಸ್ವಾಮ್ಯದ ಸನ್ನದನ್ನು ಅನೂರ್ಜಿತಗೊಳಿಸುವುದಕ್ಕೆ ಸಮರ್ಥವಾಗಿದ್ದವು. ಒಂದು ಫೈಸಲಾತಿಯನ್ನು ಮ್ಯಾಥ್ಯೂಸ್‌ ಜಾಣತನದಿಂದ ಸಾಧಿಸಿದ. ಇದರ ಅನುಸಾರ ಅವನ ಸ್ವಾಮ್ಯದ ಸನ್ನದಿಗೆ ನಿಲ್ಲಲು ಅವಕಾಶ ಸಿಕ್ಕಿತು, ನ್ಯಾಯಾಲಯದಲ್ಲಿ ಅದರ ಕುರಿತಾಗಿ ತಕರಾರು ಸಲ್ಲಿಸಲ್ಪಡಲಿಲ್ಲ. IBM, ವ್ಯಾಂಗ್‌ ಮತ್ತು AT&T ಕಂಪನಿಗಳು (ಪ್ರತ್ಯೇಕ ಫೈಸಲಾತಿಗಳಲ್ಲಿ) ಎಲ್ಲಾ VMX ಸ್ವಾಮ್ಯದ ಸನ್ನದುಗಳಿಗೆ ರಾಯಧನ-ಮುಕ್ತ ಪರವಾನಗಿಗಳನ್ನು ಸ್ವೀಕರಿಸಿದವು. ಇಂಥದೊಂದು ಪರವಾನಗಿಯನ್ನು ಪಡೆಯುವ ಪ್ರಮುಖರ ಪೈಕಿ ಕೊನೆಯ ಕಂಪನಿ ಎನಿಸಿದ ವ್ಯಾಂಗ್ ಲ್ಯಾಬರೇಟರೀಸ್‌, ಅವಶ್ಯಕವಾಗಿ ೨೦,೦೦೦ $ನಷ್ಟು ಹಣವನ್ನು ಪಾವತಿಸಿತು ಮತ್ತು ಕೆಲವೊಂದು ಸ್ವಾಮ್ಯದ ಸನ್ನದು ಅರ್ಜಿಗಳನ್ನುಎದುರು ಪರವಾನಗಿಯಾಗಿ ನೀಡಿತು (ಸ್ವಾಮ್ಯದ ಸನ್ನದುಗಳನ್ನು ನೀಡಲಿಲ್ಲ). IBM ಮತ್ತು AT&T ಕಂಪನಿಗಳೂ ಸಹ ಅನೇಕ ಸ್ವಾಮ್ಯದ ಸನ್ನದುಗಳನ್ನು VMXಗೆ ಎದುರು-ಪರವಾನಗಿಯಾಗಿ ನೀಡಿದವು; ಅವುಗಳಲ್ಲಿ ಬಹುತೇಕ ಸನ್ನದುಗಳು ಬಳಕೆಯಲ್ಲಿಲ್ಲದ ಅಥವಾ ಹಳತಾದ ಸ್ಥಿತಿಯಲ್ಲಿದ್ದವು. ಹಲವಾರು ಪ್ರಮುಖ ಕಂಪನಿಗಳು ಸ್ವಾಮ್ಯದ ಸನ್ನದನ್ನು ಪರವಾನಗಿಯಾಗಿ ನೀಡಿವೆ ಎಂಬುದಾಗಿ VMX ಸಮರ್ಥಿಸಿತು (ಹಕ್ಕುಗಳಿಗೆ ಸಂಬಂಧಿಸಿದಂತೆ ಅವು VMXಗೆ ಬಹುತೇಕವಾಗಿ ಏನನ್ನೂ ಕೊಡದಿದ್ದರೂ ಸಹ), ಆದರೆ ಆ ಭಾಗವು ಬಹಿರಂಗವಾಗಲಿಲ್ಲ. ಸ್ವಾಮ್ಯದ ಸನ್ನದಿನ ಕುರಿತಾಗಿ ನ್ಯಾಯಾಲಯದಲ್ಲಿ ಎಂದಿಗೂ ತಕರಾರು ಸಲ್ಲಿಸಲ್ಪಡಲಿಲ್ಲ ಮತ್ತು VMX ನಂತರದಲ್ಲಿ (ತಪ್ಪಾಗಿ) ಸಮರ್ಥಿಸುವುದನ್ನು ಮುಂದುವರಿಸುತ್ತಾ ಧ್ವನಿಯಂಚೆಯನ್ನು ತಾನು ಆವಿಷ್ಕರಿಸಿದ್ದಾಗಿಯೂ, ಮ್ಯಾಥ್ಯೂಸ್‌ ಧ್ವನಿಯಂಚೆಯ ಜನಕನಾಗಿದ್ದ ಎಂಬುದಾಗಿಯೂ ಹೇಳಿಕೊಂಡಿತು. ವ್ಯಾಂಗ್ ಜೊತೆಗಿನ ಫೈಸಲಾತಿಯನ್ನು ಅನುಸರಿಸಿಕೊಂಡು, ಆಕ್ಟೆಲ್ ಜೊತೆಗೆ VMX ನೆಲೆಗೊಂಡಿತು. ಒಂದು ಸಣ್ಣ ಪಾವತಿಗೆ ಬದಲಿಯಾಗಿ ಹಾಗೂ VMXನ ಯಾವುದೇ ಸ್ವಾಮ್ಯದ ಸನ್ನದಿನ ಕುರಿತು ದಾವೆಹೂಡಬಾರದು ಎಂಬುದಕ್ಕೆ ಆಕ್ಟೆಲ್‌ ಸಮ್ಮತಿಸಿದ್ದಕ್ಕೆ ಪ್ರತಿಯಾಗಿ, VMXನ ಚಾಲ್ತಿಯಲ್ಲಿರುವ ಮತ್ತು ಭವಿಷ್ಯದ ಎಲ್ಲಾ ಸ್ವಾಮ್ಯದ ಸನ್ನದುಗಳ ಮೇಲೆ ಒಂದು ಪಾವತಿಸಲ್ಪಟ್ಟ, ರಾಯಧನ-ಮುಕ್ತ ಪರವಾನಗಿಯನ್ನು ಆಕ್ಟೆಲ್‌ ಸ್ವೀಕರಿಸಿತು.

ಫೋನ್‌ಮೇಲ್ ಎಂದು ಕರೆಯಲ್ಪಡುತ್ತಿದ್ದ ತನ್ನ ಉತ್ಪನ್ನದ ಮೂಲಕ ಸಂಯೋಜಿತ ಧ್ವನಿಯಂಚೆಯ ಸೇವೆಯನ್ನು ಒದಗಿಸುವಲ್ಲಿ ROLM (ಅಂಕೀಯ PBX ಸಾಧನಗಳ ಮೊದಲ ತಯಾರಕರ ಪೈಕಿ ಒಂದು) ಮೊದಲ ಕಂಪನಿಯಾಗಿತ್ತು. ಫೋನ್‌ಮೇಲ್ ಎಂಬ ಹೆಸರು ಒಂದು ನೋಂದಾಯಿತ ಸರಕುಮುದ್ರೆಯಾಗಿದೆ. ತನ್ನ ಅಂಕೀಯವಾಗಿಸಲ್ಪಟ್ಟ ಸಂದೇಶಗಳ ಪ್ರಭಾವಶಾಲಿಯಾದ ಧ್ವನಿಮುದ್ರಣ ಗುಣಮಟ್ಟವನ್ನು ಫೋನ್‌ಮೇಲ್‌ ನೀಡುತ್ತಿತ್ತು. ಒಂದು ಧ್ವನಿಯಂಚೆ ವ್ಯವಸ್ಥೆಗೆ ಯಾವ ವಿಸ್ತರಣಾ-ಸಂಖ್ಯೆಯನ್ನು ಮುಂದಕ್ಕೆ ರವಾನಿಸಲಾಗುತ್ತಿದೆ ಎಂಬುದನ್ನು ಸೂಚಿಸುವ ಸಂಕೇತಸೇವೆಯನ್ನು ಒದಗಿಸುವಲ್ಲಿ ROLMನ ಅಂಕೀಯ PBX (ಗಣಕೀಕೃತ ಶಾಖಾ ವಿನಿಮಯ ಕೇಂದ್ರಕ್ಕೆ ಸಂಬಂಧಿಸಿದಂತೆ ಇದು CBX ಎಂಬುದಾಗಿ ಕರೆಯಲ್ಪಡುತ್ತಿತ್ತು) ಮೊದಲ PBX ಆಗಿತ್ತು (ಈ ರೀತಿ ಮಾಡುವಲ್ಲಿ ಅದು ಮೊದಲ PBX ಎನಿಸಿಕೊಂಡಿತ್ತು). ಆದಾಗ್ಯೂ, ಸದರಿ ಸಂಕೇತಸೇವೆಯು ಸ್ವಂತ ಸ್ವಾಮ್ಯದ್ದಾಗಿತ್ತು ಮತ್ತು ತನ್ನ ಧ್ವನಿಯಂಚೆ ಉತ್ಪನ್ನವಾದ ಫೋನ್‌ಮೇಲ್‌ನಿಂದ ಬಳಸಲ್ಪಡುವುದಕ್ಕೆ ಮಾತ್ರವೇ ಅದು ಉದ್ದೇಶಿಸಲ್ಪಟ್ಟಿತ್ತು. ROLMನ ವಿದ್ಯುನ್ಮಾನ ದೂರವಾಣಿ ಸಾಧನಗಳ ಮೇಲೆ ಹಾಗೂ ನಂತರದಲ್ಲಿ ಬಂದ ಸಂದೇಶ ಕಾಯುವ ದೀಪಗಳೊಂದಿಗೆ ಸಜ್ಜುಗೊಂಡಿರುವ ಪ್ರಮಾಣಕ ದೂರವಾಣಿಗಳ ಮೇಲೆ ಒಂದು ಸಂದೇಶ ಕಾಯುವ ದೀಪವನ್ನು ಬೆಳಗಲು ಫೋನ್‌ಮೇಲ್‌ನ್ನು ಸಮರ್ಥವಾಗಿಸುವಂಥ ಸಂಕೇತಸೇವೆಯನ್ನೂ ಸಹ ROLMನ CBX ಒದಗಿಸಿತು [ಸಾದೃಶ್ಯ (ಅನಲೋಗ್‌) ಮತ್ತು ಅಂಕೀಯ (ಡಿಜಿಟಲ್‌) ದೂರವಾಣಿಗಳೊಂದಿಗೆ ಒಂದು ಡಯಲ್‌ ನಾದವನ್ನೂ ಅಳವಡಿಸಲಾಗಿತ್ತು]. ROLMನ ಎಲ್ಲ CBX ಸಾಧನಗಳ ಜೊತೆಗಲ್ಲದಿದ್ದರೂ ಬಹುತೇಕ ಸಾಧನಗಳೊಂದಿಗೆ ಫೋನ್‌ಮೇಲ್‌ ಕೆಲಸ ಮಾಡಿತು, ನೋರ್ಟೆಲ್‌ನ ಆಪ್ಷನ್‌ ಮೆರಿಡಿಯನ್‌ನಂಥ (ಅಡಾಪ್ಟರ್‌ಗಳ ಜೊತೆಗೆ ಮತ್ತು ಒಂದಷ್ಟು ಲಕ್ಷಣಗಳ ನಷ್ಟದೊಂದಿಗೆ) PBX ಸಾಧನಗಳ ಇತರ ಕೆಲವೊಂದು ಬ್ರಾಂಡ್‌ಗಳ ಜೊತೆಗೆ ಇದು ಕೆಲಸ ಮಾಡುತ್ತದೆ, ಮತ್ತು ಇದು ROLM ವತಿಯಿಂದ ಅತೀವವಾಗಿ ಪ್ರವರ್ತಿಸಲ್ಪಟ್ಟಿತು. ಫೋನ್‌ಮೇಲ್‌ ಈಗಲೂ ಸಹ ಒಂದು ವ್ಯಾಪಾರಿ ಯಶಸ್ಸನ್ನು ತನ್ನ ತೆಕ್ಕೆಯಲ್ಲಿರಿಸಿಕೊಂಡಿದೆ. ಸೀಮೆನ್ಸ್‌ ಈಗಲೂ ಸಹ ನಾನಾಬಗೆಯ ವಿನ್ಯಾಸಗಳು/ಗಾತ್ರಗಳಲ್ಲಿ (ಒಂದು ಕಿರು-ಗಾತ್ರದ ಆವೃತ್ತಿಯನ್ನೂ ಒಳಗೊಂಡಂತೆ) ಫೋನ್‌ಮೇಲ್‌ನ್ನು ಒದಗಿಸುತ್ತದೆ ಮತ್ತು ತರುವಾಯದಲ್ಲಿ ಬಂದ ಎಕ್ಸ್‌ಪ್ರೆಷನ್ಸ್ ೪೭೦ ಎಂಬ ಹೆಸರಿನ ತನ್ನ ಏಕೀಕೃತ ಸಂದೇಶ ರವಾನೆಯ ಉತ್ಪನ್ನವು ಕೂಡಾ ಅದರ ಬತ್ತಳಿಕೆಯದೇ ಆಗಿದೆ; ಇದು ಎಂದಿನಂತೆ ಹಿತಕರವಾದ ಮಹಿಳಾ ಧ್ವನಿಯನ್ನು ಹೊಂದಿದ್ದು, ROLMನ ಬಹುಪಾಲು ತಂತ್ರಜ್ಞರು ಇದಕ್ಕೆ ಸಿಲಿಕಾನ್‌ ಸ್ಯಾಲಿ ಎಂಬ ಅಡ್ಡಹೆಸರಿಟ್ಟಿದ್ದಾರೆ.

ಡೇವಿಡ್‌ ಲ್ಯಾಡ್‌ನಿಂದ ಆರಂಭಿಸಲ್ಪಟ್ಟ ಓಪ್ಕಾಮ್‌ ಎಂಬ ಒಂದು ಕಂಪನಿಯು ಧ್ವನಿಯಂಚೆಯ ಮತ್ತೊಂದು ತಯಾರಕನಾಗಿತ್ತು. ಈ ಕಂಪನಿಯೂ ಸಹ ಸ್ವಯಂಚಾಲಿತ ಸಹವರ್ತಿ ಸಾಧನದ (ಇದರ U.S. ಸ್ವಾಮ್ಯದ ಸನ್ನದು ಸಂಖ್ಯೆಗಳು ಹೀಗಿದ್ದವು: ೪,೭೪೭,೧೨೪ ಮತ್ತು ೪,೭೮೩,೭೯೬ ಮತ್ತು ಇವನ್ನು ೧೯೮೮ರಲ್ಲಿ ನೀಡಲಾಯಿತು) ಲಕ್ಷಣವನ್ನು ಪ್ರವರ್ತಿಸಿತು ಹಾಗೂ ಸ್ವಾಮ್ಯದ ಸನ್ನದನ್ನು ಪಡೆಯಿತು. ತಾಂತ್ರಿಕವಾಗಿ ಹೇಳುವುದಾದರೆ ಸ್ವಯಂಚಾಲಿತ ಸಹವರ್ತಿ ಸಾಧನವು ಧ್ವನಿಯಂಚೆಯಲ್ಲ, ಆದರೆ ಸ್ವಯಂಚಾಲಿತ ಸಹವರ್ತಿ ಸಾಧನವನ್ನು ಸಮರ್ಥವಾಗಿಸುವುದಕ್ಕೆ ಅಗತ್ಯವಾಗಿರುವ ಎಲ್ಲಾ ಲಕ್ಷಣಗಳು ಈಗಾಗಲೇ ಧ್ವನಿಯಂಚೆ ವ್ಯವಸ್ಥೆಯೊಂದರ ಭಾಗವಾಗಿವೆ. ಆದ್ದರಿಂದ ಇದು ಅದಕ್ಕೆ ಸೇರಿಸಬೇಕಿರುವ ಒಂದು ಸ್ವಾಭಾವಿಕ ಲಕ್ಷಣವಾಗಿದೆ. ಓಪ್ಕಾಮ್‌ ಸ್ವಾಮ್ಯದ ಸನ್ನದುಗಳ ಹೊರತಾಗಿಯೂ ಒಂದು ವಾಣಿಜ್ಯ ಟೆರಾಡೈನ್‌ ಉತ್ಪನ್ನದಲ್ಲಿ ಸ್ವಯಂಚಾಲಿತ ಸಹವರ್ತಿ ಲಕ್ಷಣಗಳು ೧೯೮೫ಕ್ಕಿಂತ ಮುಂಚಿತವಾಗಿ ಅಳವಡಿಸಲ್ಪಟ್ಟಿದ್ದವು.[]

ಪ್ರಧಾನವಾಗಿ ಸಣ್ಣಗಾತ್ರದ ಉದ್ಯಮಗಳಿಗಾಗಿ ಮಾರುಕಟ್ಟೆ ಮಾಡಲಾಗಿದ್ದ ಧ್ವನಿಯಂಚೆ ವ್ಯವಸ್ಥೆಯೊಂದನ್ನು ಓಪ್ಕಾಮ್‌ ಅಭಿವೃದ್ಧಿಪಡಿಸಿತು. ಕರೆ ಮಾಡುವವರು ಏಕ ಅಂಕಿಯ ಕೀಲಿಗಳನ್ನು ಒತ್ತುವ ಮೂಲಕ ನೇರ ಕರೆಗಳನ್ನು ಮಾಡುವುದಕ್ಕೆ ಸ್ವಯಂಚಾಲಿತ ಸಹವರ್ತಿ ಸಾಧನಗಳು ನೆರವಾಗುತ್ತವೆ. ಉದಾಹರಣೆಗೆ, "ನೀವು ಸ್ವದೇಶದ ಕಾದಿರಿಸುವಿಕೆಗಳನ್ನು ಮಾಡುತ್ತಿರುವಿರಾದರೆ '೧'ನ್ನು ಒತ್ತಿ; ಅಂತರರಾಷ್ಟ್ರೀಯ ಕಾದಿರಿಸುವಿಕೆಗಳಿಗಾಗಿ '೨'ನ್ನು ಒತ್ತಿ; ಪುನರಾವರ್ತಕ ಪ್ರಯತ್ನದ ಮಾಹಿತಿಗಾಗಿ '೩'ನ್ನು ಒತ್ತಿ, ಇತ್ಯಾದಿ." ಓಪ್ಕಾಮ್‌ ಒಂದು ಪರಿವರ್ತನಾಶೀಲ ಕಂಪನಿಯಾಗಿತ್ತು ಮತ್ತು ಇದು ಏಕೀಕೃತ ಸಂದೇಶ ರವಾನೆಯ ಪರಿಕಲ್ಪನೆಯನ್ನು ಕೂಡಾ ಪ್ರವರ್ತಿಸಿತು (ಇದನ್ನು ಈ ಲೇಖನದಲ್ಲಿನ ನಂತರದ ಭಾಗದಲ್ಲಿ ಚರ್ಚಿಸಲಾಗುವುದು). ಸಣ್ಣಗಾತ್ರದ ಕಂಪನಿಗಳು ಮತ್ತು ಒಂದಷ್ಟು ದೊಡ್ಡ ಕಂಪನಿಗಳಿಗೆ ಸಂಬಂಧಿಸಿದಂತೆ ಓಪ್ಕಾಮ್‌ನ ಧ್ವನಿಯಂಚೆ ಉತ್ಪನ್ನವು ಒಂದು ವಾಣಿಜ್ಯ ಯಶಸ್ಸನ್ನು ದಾಖಲಿಸಿತು. ೧೯೯೧ರ ಸುಮಾರಿಗೆ VMX ದಿವಾಳಿತನದ ಅಂಚಿಗೆ ಬಂದುಮುಟ್ಟಿತ್ತು ಮತ್ತು ಅದು ಓಪ್ಕಾಮ್‌ನಿಂದ ಸ್ವಾಧೀನಕ್ಕೊಳಗಾಯಿತು. ಓಪ್ಕಾಮ್‌ ಖಾಸಗಿ ವಲಯಕ್ಕೆ ಹಾಗೂ VMX ಸಾರ್ವಜನಿಕ ವಲಯಕ್ಕೆ ಸೇರಿದ್ದರಿಂದ, ವ್ಯವಹಾರ-ನಿರ್ವಹಣೆಯನ್ನು ಒಂದು ಹಿಮ್ಮೊಗದ ಒಕ್ಕೂಟವಾಗಿ ಕೈಗೊಳ್ಳಲಾಯಿತು ಮತ್ತು ಅಸ್ತಿತ್ವಕ್ಕೆ ಬಂದ ಕಂಪನಿಯನ್ನು VMX ಎಂದು ಕರೆಯಲಾಯಿತು. ಮೂಲ VMX ಕಂಪನಿಯ ಅಲ್ಪಭಾಗವನ್ನು ಉಳಿಸಿಕೊಳ್ಳಲಾಯಿತು. ಕೆಲವೇ ವರ್ಷಗಳಲ್ಲಿ VMXನ್ನು ಆಕ್ಟೆಲ್‌ ಸ್ವಾಧೀನಪಡಿಸಿಕೊಂಡಿತು ಮತ್ತು ಡೇವಿಡ್‌ ಲ್ಯಾಡ್‌ ಆಕ್ಟೆಲ್‌ನ ಪ್ರಧಾನ ತಂತ್ರಜ್ಞಾನ ಅಧಿಕಾರಿಯ ಸ್ಥಾನವನ್ನು ಅಲಂಕರಿಸಿದ.

ಬಾಬ್‌ ಕೊಹ್ನ್‌ ಮತ್ತು ಪೀಟರ್‌ ಓಲ್ಸನ್‌ ೧೯೮೨ರಲ್ಲಿ ಆಕ್ಟೆಲ್‌ ಕಮ್ಯುನಿಕೇಷನ್ಸ್‌ ಕಾರ್ಪೊರೇಷನ್‌ನ್ನು ಸಿಲಿಕಾನ್‌ ವ್ಯಾಲಿಯಲ್ಲಿ ಸಂಸ್ಥಾಪಿಸಿದರು. ಆಕ್ಟೆಲ್‌ನ ಧ್ವನಿಯಂಚೆ ವ್ಯವಸ್ಥೆಯು (೧೯೮೨-೧೯೮೪ರ ಅವಧಿಯಲ್ಲಿ ಇದು ಅಭಿವೃದ್ಧಿಪಡಿಸಲ್ಪಟ್ಟಿತು ಮತ್ತು ೧೯೮೪ರಲ್ಲಿ ಮೊದಲು ಮಾರಾಟವಾಯಿತು) ತಕ್ಕಮಟ್ಟಿಗೆ ಕ್ಷಿಪ್ರವಾಗಿ ನಿಚ್ಚಳವಾದ ಮಾರುಕಟ್ಟೆ ನಾಯಕ ಎನಿಸಿಕೊಂಡಿತು. ಇತರರ ಕೆಲಸ ಮತ್ತು ಪ್ರಯೋಗಗಳ ಪ್ರಯೋಜನವನ್ನು ಆಕ್ಟೆಲ್‌ ಪಡೆಯಿತಾದರೂ, ಈ ಮುಖ್ಯ ಮಾರುಕಟ್ಟೆಯಲ್ಲಿ ಜಯಗಳಿಸುವುದಕ್ಕೆ ಸಂಬಂಧಿಸಿದ ಒಂದು ಸುದೃಢ ವ್ಯವಹಾರ ಮತ್ತು ಕಾರ್ಯತಂತ್ರವನ್ನು ನಿರ್ಮಿಸುವಲ್ಲಿ ಇದು ಮೊದಲ ಅದ್ವಿತೀಯ ಧ್ವನಿಯಂಚೆ ಕಂಪನಿಯಾಗಿತ್ತು. ಇದರ ಜೊತೆಗೆ, ಗಣನೀಯವಾಗಿ ಹೊಸತೆನಿಸಿದ್ದ ತಂತ್ರಜ್ಞಾನವನ್ನು ಆಕ್ಟೆಲ್‌ ಕಾರ್ಯರೂಪಕ್ಕೆ ತಂದಿತು. ಇದು ಕಂಪನಿಯ ಯಶಸ್ಸಿಗೆ ಅಗಾಧವಾದ ಕೊಡುಗೆಯನ್ನು ನೀಡಿತು. ಭಿನ್ನವಾಗಿಸಲ್ಪಟ್ಟ ಯಂತ್ರಾಂಶ ಮತ್ತು ತಂತ್ರಾಂಶ ವಿನ್ಯಾಸವನ್ನು ಆಕ್ಟೆಲ್‌ ಬಳಸಿಕೊಂಡಿದ್ದರಿಂದಾಗಿ, ಅದರ ಯಂತ್ರ-ವ್ಯವಸ್ಥೆಗಳು ವಾಸ್ತವಿಕವಾಗಿ ಸಣ್ಣಗಾತ್ರದಲ್ಲಿರಲು, ವೇಗವಾಗಿರಲು, ಹೆಚ್ಚು ವಿಶ್ವಾಸಾರ್ಹವಾಗಿರಲು ಸಾಧ್ಯವಾಯಿತು. ಅಷ್ಟೇ ಅಲ್ಲ, ಬೇರಾವುದೇ ಮಾರಾಟಗಾರನಿಗಿಂತ ಅತಿ ಕಡಿಮೆ ವೆಚ್ಚದಲ್ಲಿ ಉತ್ಪನ್ನವು ರೂಪುಗೊಳ್ಳುವುದಕ್ಕೆ ಇದು ಕಾರಣವಾಯಿತು. ಸ್ವಾಮ್ಯದ ಸನ್ನದನ್ನು ಪಡೆದ ಅನೇಕ ಲಕ್ಷಣಗಳನ್ನು ಒಳಗೊಂಡಿದ್ದ ಈ ವಿಶಿಷ್ಟತೆಗಳು ಮಾರುಕಟ್ಟೆ ನಾಯಕತ್ವವನ್ನು ಆಕ್ಟೆಲ್‌ ಪಡೆದುಕೊಳ್ಳುವುದಕ್ಕೆ ಕಾರಣವಾದವು:

  • ಬಳಕೆದಾರ-ಸ್ನೇಹಿಯಾಗಿದ್ದ ಬಳಕೆದಾರ-ಇಂಟರ್‌ಫೇಸ್‌ (ಇತರ ಯಂತ್ರ-ವ್ಯವಸ್ಥೆಗಳು ಅಂತರ್ಬೋಧೆಯುಳ್ಳವಾಗಿರಲಿಲ್ಲ ಮತ್ತು ನೆರವಿನ ಸುಳಿವು-ಸಂಕೇತಗಳನ್ನು ಹೊಂದಿರಲಿಲ್ಲ).
  • ದೋಷ-ಮುಕ್ತವಾದ ಸ್ಪರ್ಶ-ನಾದ ಪತ್ತೆಹಚ್ಚುವಿಕೆ (ಇತರ ವ್ಯವಸ್ಥೆಗಳು ಮಾನವ ಧ್ವನಿಯಿಂದ ಒಂದು ಸ್ಪರ್ಶ-ನಾದವನ್ನು ತಪ್ಪಾಗಿ ಪತ್ತೆಮಾಡುತ್ತಿದ್ದವು, ಅಥವಾ ಬಳಕೆದಾರರು ಗುಂಡಿಗಳನ್ನು ಒತ್ತಿದಾಗ ಸ್ಪರ್ಶ-ನಾದಗಳನ್ನು ಅವು ಪತ್ತೆಮಾಡುತ್ತಿರಲಿಲ್ಲ).
  • ತರಂಗಾವರ್ತನವನ್ನು ವ್ಯತ್ಯಯಗೊಳಿಸಿದ ಸಂದೇಶಗಳು; ಇದರಿಂದಾಗಿ ಬೇರೊಬ್ಬರ ಸಂದೇಶಗಳನ್ನು ಇನ್ನೊಬ್ಬರು ಕೇಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ (ಇತರ ಯಂತ್ರ-ವ್ಯವಸ್ಥೆಗಳಲ್ಲಿ ಒಂದು ವೇಳೆ ಯಂತ್ರ-ವ್ಯವಸ್ಥೆಯು ಸರಿಯಾದ ವೇಳೆಗೆ ವಿಫಲಗೊಂಡರೆ ಇತರ ಜನರ ಸಂದೇಶಗಳು ಆಕಸ್ಮಿಕವಾಗಿ ಕೇಳಿಬರುತ್ತಿದ್ದವು).
  • ದೂರವಾಣಿಗೆ ಉತ್ತರಿಸುವ, ಧ್ವನಿ ಸಂದೇಶ ರವಾನಿಸುವ ಮತ್ತು ಸ್ವಯಂಚಾಲಿತವಾದ ಸಹವರ್ತಿ ವ್ಯವಸ್ಥೆ.
  • ಯಂತ್ರ-ವ್ಯವಸ್ಥೆಯು ಚಾಲಿಸಲ್ಪಟ್ಟ ಸ್ಥಿತಿಯಲ್ಲಿರುವಾಗ "ಮೂವ್ಸ್‌, ಆಡ್ಸ್‌ ಅಂಡ್‌ ಚೇಂಜಸ್‌" ಪ್ರಕ್ರಿಯೆಗಳನ್ನು (ಅಂದರೆ ದತ್ತಾಂಶ ಸಂಗ್ರಹಕ್ಕೆ ಒಯ್ಯುವ ಕಾರ್ಯವನ್ನು) ಮಾಡಲು ಅವಕಾಶವಿತ್ತು.
  • ದೊಡ್ಡ ಪ್ರಮಾಣಗಳಲ್ಲಿ ಸಂದೇಶಗಳನ್ನು ಶೇಖರಣೆ ಮಾಡಬಹುದಾಗಿತ್ತು.
  • ವಾಸ್ತವಿಕವಾಗಿ ಸಣ್ಣ ಗಾತ್ರವನ್ನು ಹೊಂದಿತ್ತು (೫' × ೫' × ೫'ನಷ್ಟಿದ್ದ ROLMನ ಮೂಲ ಫೋನ್‌ಮೇಲ್‌ ವ್ಯವಸ್ಥೆ ಹಾಗೂ ಒಂದು ಗಣಕಯಂತ್ರದ ಕೋಣೆಯನ್ನು ತುಂಬಿಕೊಳ್ಳುವಷ್ಟಿದ್ದ VMXನ ಯಂತ್ರ-ವ್ಯವಸ್ಥೆಗಳಿಗೆ ಹೋಲಿಸಿದಾಗ, ಇದು ಸುಮಾರಾಗಿ ೨-ಡ್ರಾಯರ್‌ಗಳನ್ನು ಒಳಗೊಂಡಿರುವ ಕಡತ-ಶೇಖರಣೆಯ ಪೆಟ್ಟಿಗೆಯ ಗಾತ್ರದಷ್ಟಿತ್ತು). ಇದಕ್ಕೆ ವಿಶೇಷ ಪರಿಸರದ ಯಾವುದೇ ಅವಶ್ಯಕತೆಯಿರಲಿಲ್ಲ.
  • ಎಲ್ಲಿ ಬೇಕಿದ್ದರೂ ನೆಲೆಗೊಳಿಸಬಹುದಾಗಿತ್ತು. ಆಕ್ಟೆಲ್‌ ಯಂತ್ರ-ವ್ಯವಸ್ಥೆಗಳನ್ನು ಯಾವುದೇ ಕಚೇರಿ ಪರಿಸರದಲ್ಲಿ ಸ್ಥಾಪಿಸಬಹುದಾಗಿತ್ತು ಮತ್ತು ಅವು ವಿದ್ಯುದಾಘಾತಗಳಿಗೆ ಈಡಾಗುವ ಸಂಭಾವ್ಯತೆಯನ್ನು ಹೊಂದಿರಲಿಲ್ಲ (ನೆಲಹಾಸು ಹಾಸಲಾದ ನೆಲಗಳನ್ನು ಹೊಂದಿರುವ ಕಚೇರಿಗಳಲ್ಲಿ, ಅದರಲ್ಲೂ ವಿಶೇಷವಾಗಿ ಚಳಿಗಾಲದ ಸಂದರ್ಭದಲ್ಲಿ ವಿದ್ಯುದಾಘಾತಗಳು ಅನೇಕವೇಳೆ ಸಾಮಾನ್ಯ).
  • ಹೆಚ್ಚಿನ ವಿಶ್ವಾಸಾರ್ಹತೆ (ತನ್ನ ಮೊದಲ ಯಂತ್ರ-ವ್ಯವಸ್ಥೆಯೊಂದಿಗೆ ೯೯.೯%ನಷ್ಟಿರುವ ಸ್ಥಗಿತ-ರಹಿತ ಕಾಲಾವಧಿಯನ್ನು ಸಾಧಿಸುವಲ್ಲಿನ ಮೊದಲು ಧ್ವನಿಯಂಚೆ ವ್ಯವಸ್ಥೆ ಎನಿಸಿಕೊಂಡಿತು).
  • ಕಾರ್ಯತಃವಾಗಿ ಎಲ್ಲಾ ಬ್ರಾಂಡ್‌ಗಳ PBXನೊಂದಿಗೆ ಹೊಂದಿಕೊಳ್ಳುವಿಕೆ (PBX ಮಾರಾಟಗಾರರಿಂದ ನೀಡಲ್ಪಟ್ಟ ಧ್ವನಿಯಂಚೆ ವ್ಯವಸ್ಥೆಯು ಕೇವಲ ಆ ಮಾರಾಟಗಾರರ PBX ವ್ಯವಸ್ಥೆಯೊಂದಿಗೆ ಮಾತ್ರವೇ ಕೆಲಸ ಮಾಡುತ್ತಿದ್ದವು).
  • ಎಲ್ಲಾ PBXಗಳೊಂದಿಗೆ ದೂರವಾಣಿಗೆ ಉತ್ತರಿಸುವ ವಿಶಿಷ್ಟತೆ; ಕರೆ ಮಾಡುವವರ IDಯನ್ನು ಒದಗಿಸುವ ವಿಧಾನವನ್ನು ಹೊಂದಿರದ ವ್ಯವಸ್ಥೆಗಳೊಂದಿಗೂ ಇದು ಕಾರ್ಯನಿರ್ವಹಿಸುತ್ತಿತ್ತು.
  • ಸಂದೇಶದ ಘೋಷಣೆ/ಪ್ರಕಟಣೆ (ಸಂದೇಶಗಳು ಸ್ವೀಕರಿಸಲ್ಪಟ್ಟಾಗ, ನಾನಾಬಗೆಯ ತಾಣಗಳಲ್ಲಿರುವ ಚಂದಾದಾರರಿಗೆ ಕರೆಮಾಡುವಿಕೆ; ಈ ತಾಣಗಳು ಚಂದಾದಾರರಿಂದ ಪೂರ್ವಭಾವಿಯಾಗಿ-ನಿಗದಿತವಾಗಿರುತ್ತಿದ್ದವು).
  • ಸಾಮರ್ಥ್ಯಗಳ ಶ್ರೇಣಿಯನ್ನೇ ಹೊಂದಿತ್ತು. ಪ್ರಮುಖ ಕಂಪನಿಗಳ ಅಗತ್ಯಗಳನ್ನು ನಿಭಾಯಿಸಿದಂಥ ಸಣ್ಣ, ಮಾಧ್ಯಮ, ದೊಡ್ಡ ಮತ್ತು ಹೆಚ್ಚುವರಿ ದೊಡ್ಡ ಸಾಮರ್ಥ್ಯದ ವ್ಯವಸ್ಥೆಗಳು ಇಲ್ಲಿದ್ದವು (ಉದಾಹರಣೆಗೆ, ಆಕ್ಟೆಲ್‌ನ ಯಂತ್ರ-ವ್ಯವಸ್ಥೆಗಳು VMXನ ಅತಿದೊಡ್ಡ ವ್ಯವಸ್ಥೆಗಿಂತ ೫೦%ನಷ್ಟು ಹೆಚ್ಚಿರುವ ಸಂಪರ್ಕಕಂಡಿ ಸಾಮರ್ಥ್ಯವನ್ನು ಹೊಂದಿದ್ದವು). ಸಣ್ಣ ಯಂತ್ರ-ವ್ಯವಸ್ಥೆಗಳು ಶಾಖಾ ಕಚೇರಿಗಳನ್ನು, ಮಧ್ಯಮ ಗಾತ್ರದವು ಜಿಲ್ಲಾ ಕಚೇರಿಗಳನ್ನು, ದೊಡ್ಡ ಗಾತ್ರದವು ಪ್ರಾದೇಶಿಕ ಕಚೇರಿಗಳನ್ನು ತಲುಪುತ್ತಿದ್ದವು; ಹೆಚ್ಚುವರಿ ದೊಡ್ಡದಾಗಿದ್ದ ಯಂತ್ರ-ವ್ಯವಸ್ಥೆಗಳು ೧೦,೦೦೦ಕ್ಕಿಂತಲೂ ಹೆಚ್ಚಿನ ಜನರನ್ನು ಹೊಂದಿದ್ದ ದೊಡ್ಡ ಸಾಂಸ್ಥಿಕ ಕೇಂದ್ರಕಾರ್ಯಾಲಯವನ್ನು ನಿಭಾಯಿಸಬಲ್ಲವಾಗಿದ್ದವು.
  • ಧ್ವನಿಯಂಚೆ ವ್ಯವಸ್ಥೆಗಳ ನಡುವೆ ಜಾಲವ್ಯವಸ್ಥೆಯನ್ನು ರೂಪಿಸಬಲ್ಲ ಸಾಮರ್ಥ್ಯ; ಇದರಿಂದಾಗಿ ಕಂಪನಿಗಳ ಧ್ವನಿಯಂಚೆ ವ್ಯವಸ್ಥೆಗಳು ಒಂದು ದೊಡ್ಡ ವಾಸ್ತವಾಭಾಸದ ಜಾಲವಾಗಿ ಕಾರ್ಯನಿರ್ವಹಿಸುವುದು ಸಾಧ್ಯವಾಗುತ್ತಿತ್ತು.

ಇತರ ಮಾರಾಟಗಾರರು ನೆರವೇರಿಸಲು ಅಸಮರ್ಥರಾಗಿದ್ದ ಪ್ರಮುಖ ಪರಿಗಣನೆಗಳ ಅಗತ್ಯಗಳನ್ನು ಆಕ್ಟೆಲ್‌ನ ಕಾರ್ಯತಂತ್ರವು ನಿಭಾಯಿಸಿತು. ಅವುಗಳೆಂದರೆ: ಮುಂದುವರಿದ ತರಬೇತಿ, ಗ್ರಾಹಕ ಸೇವೆ, ಮಾರಾಟಗಳು ಮತ್ತು ಮಾರುಕಟ್ಟೆ ಶಿಕ್ಷಣ. ತನಗೆ ಮುಂದಕ್ಕೆ ರವಾನಿಸಲ್ಪಡುತ್ತಿರುವ ಕರೆಗಳ ವಿಸ್ತರಣಾ ಸಂಖ್ಯೆಯನ್ನು ಗುರುತಿಸಲು ಹಾಗೂ ಬಹುತೇಕ PBXಗಳ ಮೇಲಿನ ಸಂದೇಶ-ಕಾಯುವ ದೀಪಗಳನ್ನು ಬೆಳಗಿಸಲು ಆಕ್ಟೆಲ್‌ನ ಯಂತ್ರ-ವ್ಯವಸ್ಥೆಯು ಸಮರ್ಥವಾಗಿತ್ತು. ಆಕ್ಟೆಲ್‌ನ ಎಂಜಿನಿಯರುಗಳು PBXನ ಪ್ರಮುಖ ಬ್ರಾಂಡ್‌ಗಳ ತಾಂತ್ರಿಕ ಮೂಲತತ್ವಗಳನ್ನು (ವಿಧ್ಯುಕ್ತವಾಗಿ) ಪತ್ತೆಹಚ್ಚಿದ ಕಾರಣದಿಂದಾಗಿ (ಅಂದರೆ ರಿವರ್ಸ್‌ ಎಂಜಿನಿಯರಿಂಗ್‌ ಪ್ರಕ್ರಿಯೆಯನ್ನು ಅನುಸರಿಸಿದ್ದರಿಂದಾಗಿ) ಇದು ಸಾಧ್ಯವಾಗಿತ್ತು. ಅಷ್ಟೇ ಅಲ್ಲ, PBX ತಯಾರಕನು ಸಾಗಿರದ ವಿಧಾನಗಳಲ್ಲಿ PBXನೊಂದಿಗೆ ಸಂವಹಿಸುವಂಥ ಮಾರ್ಗಗಳನ್ನು ಅವರು ಅನೇಕವೇಳೆ ಗ್ರಹಿಸಿದ್ದರಿಂದಲೂ ಇದು ಸಾಧ್ಯವಾಗಿತ್ತು. ಅಂತಿಮವಾಗಿ ಬಹುತೇಕ PBX ತಯಾರಕರು ಆಕ್ಟೆಲ್ ಜೊತೆಗಿನ ಸಹಕಾರ-ಸಹಯೋಗದಲ್ಲಿ ಕೆಲಸ ಮಾಡಲು ಆಶಿಸಿದರು. ವಿಶ್ವವ್ಯಾಪಿಯಾಗಿರುವ ಸರಿಸುಮಾರು ೧೦೦ರಷ್ಟು PBX ಬ್ರಾಂಡ್‌ಗಳೊಂದಿಗೆ ಆಕ್ಟೆಲ್‌ ಸಂಯೋಜಿಸಲ್ಪಟ್ಟಿತು. ಆಕ್ಟೆಲ್‌ನ ವಿಶ್ವವ್ಯಾಪಿ ನಾಯಕತ್ವದ ಪರಿಣಾಮವಾಗಿ, ಇದರ ಬಳಕೆದಾರ ಇಂಟರ್‌ಫೇಸ್‌ (೭೫ಕ್ಕೂ ಹೆಚ್ಚಿನ ಭಾಷೆಗಳು ಮತ್ತು ಉಪಭಾಷೆಗಳಲ್ಲಿ ಇದನ್ನು ರೂಪಿಸಲಾಗಿತ್ತು) ವಿಶ್ವದಲ್ಲಿ ಅತ್ಯಂತ ವ್ಯಾಪಕವಾಗಿ ಪರಿಚಿತವಾಯಿತು.

೧೯೯೦ರ ದಶಕದ ಅಂತ್ಯದ ವೇಳೆಗೆ, ದೃಶ್ಯಗೋಚರ ಅಂಚೆಪೆಟ್ಟಿಗೆ ಮತ್ತು ಏಕೀಕೃತ ಸಂದೇಶ ರವಾನೆ ಯ (ವಿಷುಯಲ್‌ ಮೇಲ್‌ಬಾಕ್ಸ್‌ ಮತ್ತು ಯೂನಿಫೈಡ್‌ ಮೆಸೇಜಿಂಗ್‌) ಪರಿಕಲ್ಪನೆಯನ್ನು ಆಕ್ಟೆಲ್‌ ಪರಿಚಯಿಸಿತು. ಬಳಕೆದಾರರು ತಮ್ಮ ಧ್ವನಿ ಅಂಚೆ-ಪೆಟ್ಟಿಗೆಗಳನ್ನು ತಮ್ಮ ಪರ್ಸನಲ್‌ ಕಂಪ್ಯೂಟರ್‌ಗಳ (PCಗಳ) ಮೂಲಕ ನಿರ್ವಹಿಸಲು ದೃಶ್ಯಗೋಚರ ಅಂಚೆಪೆಟ್ಟಿಗೆಯು ಅನುವಾಗಿಸಿತು; ಆದರೂ ಸಹ ಸಂದೇಶಗಳು ಇನ್ನೂ ಆಕ್ಟೆಲ್‌ ಯಂತ್ರ-ವ್ಯವಸ್ಥೆಯಲ್ಲಿಯೇ ಶೇಖರಿಸಲ್ಪಡುತ್ತಿದ್ದವು. ಏಕೀಕೃತ ಸಂದೇಶ ರವಾನೆಯ ವ್ಯವಸ್ಥೆಯು ಧ್ವನಿಯಂಚೆಯನ್ನು ಮೈಕ್ರೋಸಾಫ್ಟ್‌ ಎಕ್ಸ್‌ಚೇಂಜ್‌‌‌ನೊಳಗೆ ಸಂಯೋಜಿಸಿತು; ಮೈಕ್ರೋಸಾಫ್ಟ್‌ ಎಕ್ಸ್‌ಚೇಂಜ್ ಎಂಬುದು ಮೈಕ್ರೋಸಾಫ್ಟ್‌ ವತಿಯಿಂದ ರೂಪಿಸಲ್ಪಟ್ಟ ಸಾಂಸ್ಥಿಕ ಇ-ಮೇಲ್‌ ವ್ಯವಸ್ಥೆಯಾಗಿತ್ತು. ಏಕೀಕೃತ ಸಂದೇಶ ರವಾನೆಯ ವ್ಯವಸ್ಥೆಯನ್ನು ವಾಸ್ತವವಾಗಿ ರಾಬರ್ಟಾ ಕೊಹೆನ್‌, ಕೆನೆತ್‌ ಹ್ಯೂಬರ್‌ ಮತ್ತು ಡೆಬೊರಾಹ್‌ ಮಿಲ್‌‌ರವರುಗಳು AT&T ಬೆಲ್‌ ಲ್ಯಾಬ್ಸ್‌ನಲ್ಲಿ ಆವಿಷ್ಕರಿಸಿದ್ದರು. ಏಕೀಕೃತ ಸಂದೇಶ ರವಾನೆ ವ್ಯವಸ್ಥೆಗೆ ಸಂಬಂಧಿಸಿದ ಸ್ವಾಮ್ಯದ ಸನ್ನದು ೧೯೮೯ರ ಜೂನ್‌ನಲ್ಲಿ ಸ್ವೀಕರಿಸಲ್ಪಟ್ಟಿತು (ಸ್ವಾಮ್ಯದ ಸನ್ನದು ಸಂಖ್ಯೆ ೪,೮೩೭,೭೯೮).

ಚಿತ್ರ:Unified Messenger Screen Shot.png
ಒಂದು ಆರಂಭಿಕ ಏಕೀಕೃತ ಸಂದೇಶ ರವಾನೆ ವ್ಯವಸ್ಥೆಯಿಂದ (GUI) ಪಡೆಯಲಾದ ಒಂದು ಪರದೆಯ ಛಾಯಾಚಿತ್ರವನ್ನು (ಸ್ಕ್ರೀನ್‌ ಷಾಟ್‌) ಮೇಲಿನ ಚಿತ್ರವು ತೋರಿಸುತ್ತದೆ.ಇ-ಮೇಲ್‌ಗಳನ್ನು ಒಂದು ಲಕೋಟೆಯ ಬಿಂಬದಿಂದ ಗುರುತಿಸಲಾಗುತ್ತದೆ; ಧ್ವನಿಯಂಚೆಗಳನ್ನು ಒಂದು ದೂರವಾಣಿ ಹ್ಯಾಂಡ್‌ಸೆಟ್‌ನ ಬಿಂಬದಿಂದ ಗುರುತಿಸಲಾಗುತ್ತದೆ.ಈ ವ್ಯವಸ್ಥೆಯು ಮೈಕ್ರೋಸಾಫ್ಟ್‌ ಎಕ್ಸ್‌ಚೇಂಜ್‌ನೊಳಗೆ ಸಂಪೂರ್ಣವಾಗಿ ಸಂಯೋಜಿತವಾಗಿರುವ ಧ್ವನಿಯಂಚೆಯಾಗಿದೆ. ಆದ್ದರಿಂದ ಮೈಕ್ರೋಸಾಫ್ಟ್‌ ಔಟ್‌ಲುಕ್‌ ಮೂಲಕ ಧ್ವನಿಯಂಚೆಗಳು ಮತ್ತು ಇ-ಮೇಲ್‌ಗಳು ಈ ಎರಡನ್ನೂ ಪ್ರದರ್ಶಿಸಬಹುದಾಗಿದೆ ಹಾಗೂ ಸಂಪರ್ಕ-ಸಾಧಿಸಬಹುದಾಗಿದೆ.ಬಳಕೆದಾರರು ದೂರವಾಣಿಯ ಮೂಲಕವೂ ವ್ಯವಸ್ಥೆಗೆ ಕರೆಮಾಡಬಹುದು ಮತ್ತು ಧ್ವನಿಯಂಚೆಗಳು ಹಾಗೂ ಯಂತ್ರದಿಂದ-ಓದಲ್ಪಡುವ ಇ-ಮೇಲ್‌ಗಳನ್ನು ಕೇಳಿಸಿಕೊಳ್ಳಬಹುದು (TUI).

ಏಕೀಕೃತ ಸಂದೇಶ ರವಾನೆ : ಬಳಕೆದಾರರು ತಮ್ಮ ಪರ್ಸನಲ್‌ ಕಂಪ್ಯೂಟರ್‌ನಲ್ಲಿನ ರೇಖಾತ್ಮಕ ಬಳಕೆದಾರ ಇಂಟರ್‌ಫೇಸನ್ನು (ಗ್ರಾಫಿಕಲ್‌ ಯೂಸರ್‌ ಇಂಟರ್‌ಫೇಸ್‌-GUI) ಬಳಸಿಕೊಂಡು ಅಥವಾ ಪ್ರಪಂಚದಲ್ಲಿನ ಯಾವುದೇ ದೂರವಾಣಿಯೊಂದಿಗೆ ದೂರವಾಣಿ ಬಳಕೆದಾರ ಇಂಟರ್‌ಫೇಸ್‌ನ್ನು (ಟೆಲಿಫೋನ್‌ ಯೂಸರ್‌ ಇಂಟರ್‌ಫೇಸ್‌-TUI) ಬಳಸಿಕೊಂಡು ಏಕೀಕೃತ ಸಂದೇಶ ರವಾನೆಯ ನೆರವಿನೊಂದಿಗೆ ಧ್ವನಿಯಂಚೆ ಮತ್ತು ಇ-ಮೇಲ್‌ ಸಂದೇಶಗಳ ಸಂಪರ್ಕ-ಸಾಧಿಸಲು ಸಾಧ್ಯವಿದೆ. ಪರ್ಸನಲ್‌ ಕಂಪ್ಯೂಟರ್‌ನಲ್ಲಿ, ಬಳಕೆದಾರ ತಮ್ಮ ಇ-ಮೇಲ್‌ ಇನ್‌ಬಾಕ್ಸ್‌ನಲ್ಲಿ ಧ್ವನಿಯಂಚೆಗಳು ಮತ್ತು ಇ-ಮೇಲ್‌ಗಳು ಒಟ್ಟಾಗಿ ಬೆರೆತಿರುವುದನ್ನು ಕಾಣಬಹುದು. ಧ್ವನಿ ಅಂಚೆಗಳು ತಮ್ಮ ಪಕ್ಕದಲ್ಲಿ ದೂರವಾಣಿ ಸಾಧನದ ಒಂದು ಪುಟ್ಟಗಾತ್ರದ ಬಿಂಬವನ್ನು ಹೊಂದಿದ್ದರೆ, ಇ-ಮೇಲ್‌ಗಳು ತಮ್ಮ ಪಕ್ಕದಲ್ಲಿ ಲಕೋಟೆಯ ಒಂದು ಪುಟ್ಟ ಬಿಂಬವನ್ನು ಹೊಂದಿರುತ್ತಿದ್ದವು (ಕೆಳಗಿನ ಚಿತ್ರವನ್ನು ನೋಡಿ). ಧ್ವನಿಯಂಚೆಗೆ ಸಂಬಂಧಿಸಿದಂತೆ ಬಳಕೆದಾರರು "ಶೀರ್ಷಕ ಮಾಹಿತಿ"ಯನ್ನು (ಕಳಿಸಿದಾತನ ಹೆಸರು, ಕಳಿಸಿದ ದಿನಾಂಕ, ಅಂಚೆಯ ಗಾತ್ರ, ಮತ್ತು ವಿಷಯ) ನೋಡಬಹುದಾಗಿತ್ತು. ತಮ್ಮ ಇ-ಮೇಲ್‌ನ ಇನ್‌ಬಾಕ್ಸ್‌ನಲ್ಲಿನ ಒಂದು ಧ್ವನಿಯಂಚೆಯ ಮೇಲೆ ಜೋಡಿ-ಕ್ಲಿಕ್‌ ಮಾಡುವ ಮೂಲಕ ಬಳಕೆದಾರರು ತಮ್ಮ ಪರ್ಸನಲ್‌ ಕಂಪ್ಯೂಟರ್‌ ಅಥವಾ ತಮ್ಮ ಮೇಜಿನ ಪಕ್ಕದಲ್ಲಿರುವ ಒಂದು ದೂರವಾಣಿಯ ಮೂಲಕ ಸಂದೇಶವನ್ನು ಕೇಳಿಸಿಕೊಳ್ಳಬಹುದಾಗಿತ್ತು. ಪ್ರಪಂಚದಲ್ಲಿನ ಯಾವುದೇ ದೂರವಾಣಿಯನ್ನು ಬಳಸಿಕೊಂಡು ಬಳಕೆದಾರರು ತಾವು ಸಾಮಾನ್ಯವಾಗಿ ಅನುಸರಿಸುತ್ತಿದ್ದ ವಿಧಾನದಲ್ಲಿಯೇ ಧ್ವನಿ ಸಂದೇಶಗಳನ್ನು ಕೇಳಿಸಿಕೊಳ್ಳಬಹುದಾಗಿತ್ತು; ಜೊತೆಗೆ ತಮಗೆ ಬಂದ ಇ-ಮೇಲ್‌ಗಳನ್ನೂ (ಸಮನ್ವಯಗೊಳಿಸಲಾದ ಅಥವಾ ಸಂಯೋಜಿಸಲಾದ ಧ್ವನಿಯಲ್ಲಿ) ಕೇಳಿಸಿಕೊಳ್ಳಬಹುದಾಗಿತ್ತು. ಇ-ಮೇಲ್‌ ಅಥವಾ ದೂರವಾಣಿಯ ವಿಳಾಸ ನಿರ್ದೇಶನಾ ಯೋಜನೆಗಳನ್ನು ಬಳಸಿಕೊಂಡು ಧ್ವನಿ ಸಂದೇಶಗಳನ್ನು ಕಳಿಸಬಹುದಾಗಿತ್ತು, ಮತ್ತು ಸಾರ್ವಜನಿಕ ಚಾಲಿತ ದೂರವಾಣಿ ಜಾಲಕ್ಕಿಂತ ತಾಣಗಳ ನಡುವೆ ಸಂದೇಶಗಳನ್ನು ಕಳಿಸುವುದಕ್ಕಾಗಿ ದತ್ತಾಂಶ ಜಾಲಬಂಧದ ಮೂಲಸೌಕರ್ಯವನ್ನು ಬಳಸಲಾಗುತ್ತಿತ್ತು. ಏಕೀಕೃತ ಸಂದೇಶ ರವಾನೆಯು ಆ ಕಾಲದಲ್ಲಿ ಒಂದು ವ್ಯಾಪಾರಿ ಯಶಸ್ಸನ್ನೇನೂ ಸಾಧಿಸಲಿಲ್ಲ. ಏಕೆಂದರೆ, ೧೯೯೦ರ ದಶಕದ ಅಂತ್ಯದಲ್ಲಿ ಇ-ಮೇಲ್‌ ಒಂದು ಬೃಹತ್‌ ಮಾರುಕಟ್ಟೆ ಪಾಲನ್ನು ಅನುಭವಿಸಲು ಸಾಧ್ಯವಾಗಲಿಲ್ಲ, ಇ-ಮೇಲ್‌ ಸರ್ವರ್‌ಗಳು ಅತ್ಯಂತ ವಿಶ್ವಾಸಾರ್ಹವೇನೂ ಆಗಿರಲಿಲ್ಲ, ಅಂತರಜಾಲ ಸಂಪರ್ಕಗಳು ನಿಧಾನಗತಿಯನ್ನು ಹೊಂದಿದ್ದವು (ಧ್ವನಿ ಸಂದೇಶಗಳು ದೊಡ್ಡ ಕಡತಗಳಾಗಿರುತ್ತಿದ್ದವು) ಮತ್ತು ಬಹುತೇಕ ಪರ್ಸನಲ್‌ ಕಂಪ್ಯೂಟರ್‌ಗಳಿಗೆ ಸ್ಪೀಕರುಗಳು ಅಥವಾ ಧ್ವನಿವರ್ಧಕಗಳು ಇರುತ್ತಿರಲಿಲ್ಲ.

೧೯೮೮ರವರೆಗೆ, ದೂರವಾಣಿ ಕಂಪನಿಗಳು ಮತ್ತು ಹೊಸದಾಗಿ ರೂಪುಗೊಂಡ ಸೆಲ್ಯುಲರ್‌ ದೂರವಾಣಿ ಕಂಪನಿಗಳು ತಮ್ಮ ಚಂದಾದಾರರಿಗೆ ಧ್ವನಿಯಂಚೆಯನ್ನು ನೀಡದಂತೆ ಕಾನೂನು ಅವರ ಮೇಲೆ ನಿಷೇಧವನ್ನು ಹೇರಿತ್ತು. ದೇಶಾದ್ಯಂತ ಹಬ್ಬಿಕೊಂಡಿದ್ದಂಥ, ದೂರವಾಣಿಗೆ ಉತ್ತರಿಸುವ ವ್ಯವಹಾರದ ಅಸ್ತಿತ್ವಗಳನ್ನು ರಕ್ಷಿಸಲು ಅಥವಾ ಅವುಗಳ ಹಿತವನ್ನು ಕಾಪಾಡಲೆಂದು FCCಯು ಈ ಕ್ರಮಕ್ಕೆ ಮುಂದಾಗಿತ್ತು. ೧೯೮೪ರಲ್ಲಿ AT&Tಯ ವಿಘಟನೆಗೆ ಕಾರಣವಾದ ಫೈಸಲಾತಿಯೊಂದಿಗೆ ಈ ಬಹಿಷ್ಕಾರ ಮುಂದುವರಿಯಿತು. ಆದರೆ ೧೯೮೮ರ ಮಾರ್ಚ್‌ ೭ರಂದು ಹೆರಾಲ್ಡ್‌ H. ಗ್ರೀನೆ ಎಂಬ ನ್ಯಾಯಾಧೀಶ ತರುವಾಯದಲ್ಲಿ ನೀಡಿದ ಒಂದು ತೀರ್ಪು ಈ ತಡೆಗೋಡೆಯನ್ನು ರದ್ದುಮಾಡಿತು. ಧ್ವನಿಯಂಚೆಯನ್ನು ಒಂದು ಸೇವೆಯಾಗಿ ನೀಡುವುದಕ್ಕೆ ದೂರವಾಣಿ ಕಂಪನಿಗಳಿಗೆ ಅವಕಾಶ ಕಲ್ಪಿಸಲಾಯಿತಾದರೂ, ಇಂಥದೊಂದು ಸೇವೆಯನ್ನು ಒದಗಿಸಬಲ್ಲ ಯಂತ್ರಗಳನ್ನು ವಿನ್ಯಾಸಗೊಳಿಸುವ ಅಥವಾ ತಯಾರಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳದಂತೆ ಅವುಗಳ ಮೇಲೆ ನಿಷೇಧ ಹೇರಲಾಯಿತು.

VMXನ ದೊಡ್ಡ ಯಂತ್ರ-ವ್ಯವಸ್ಥೆಯನ್ನು ಕೆಲವೇ ವಾಹಕಗಳು (ದೂರವಾಣಿ ಕಂಪನಿಗಳು) ಬಳಸುತ್ತಿದ್ದವು, ಆದರೆ ತೀವ್ರ ವಿಶ್ವಾಸಾರ್ಹತೆ ಅಥವಾ ಖಾತರಿಯಾದ ಗುಣ ಮತ್ತು ವೆಚ್ಚದ ಸಮಸ್ಯೆಗಳಿಂದಾಗಿ ವಾಹಕ ಮಾರುಕಟ್ಟೆಗೆ ವಿಸ್ತರಿಸುವ ಪ್ರಯತ್ನದಿಂದ VMX ಹಿಂದೆಗೆಯಬೇಕಾಯಿತು. ಸಾಂಸ್ಥಿಕ ಬಳಕೆಗೆ ಸಂಬಂಧಿಸಿದಂತೆ ಆಕ್ಟೆಲ್‌ ತೆಕ್ಕೆಯಲ್ಲಿ ಅಷ್ಟುಹೊತ್ತಿಗಾಗಲೇ ಅತಿ ಹೆಚ್ಚಿನ ಸಾಮರ್ಥ್ಯದ ಯಂತ್ರ-ವ್ಯವಸ್ಥೆಗಳಿದ್ದವು ಮತ್ತು ೧೯೮೮ರ ವೇಳೆಗೆ ಬೆಲ್‌ ನಿರ್ವಹಣೆಯ ಎಲ್ಲಾ ಏಳು ಪ್ರಾದೇಶಿಕ ಕಂಪನಿಗಳು ಆಂತರಿಕ ಬಳಕೆಗಾಗಿ ಆಕ್ಟೆಲ್‌ನ್ನು ಬಳಸುತ್ತಿದ್ದವು. ವಾಹಕ ಕಂಪನಿಗಳಿಗೆ ಸಂಬಂಧಿಸಿದಂತೆ ತನ್ನ ಅತಿದೊಡ್ಡ ಯಂತ್ರ-ವ್ಯವಸ್ಥೆಯನ್ನು ಆಕ್ಟೆಲ್‌ ಮೊದಲು ರೂಪಾಂತರಿಸಿತು; ವಾಹಕ ಕಂಪನಿಗಳು ತಮ್ಮ ಚಂದಾದಾರರಿಗೆ ವಿಶ್ವಸನೀಯವಾದ ಧ್ವನಿಯಂಚೆಯನ್ನು ಮುಂದುಮಾಡುವುದಕ್ಕೆ ಇದು ಅನುವುಮಾಡಿಕೊಟ್ಟಿತು. ಒಂದು ವರ್ಷದೊಳಗಾಗಿ ತನ್ನ ದೊಡ್ಡ ಯಂತ್ರ-ವ್ಯವಸ್ಥೆಯ ಒಂದು ಹೊಸ ಪೀಳಿಗೆಯನ್ನು ಆಕ್ಟೆಲ್‌ ಪ್ರಾರಂಭಿಸಿತು. ದೂರವಾಣಿ ಕಂಪನಿಗಳು ತಮ್ಮ ಕೇಂದ್ರ ಕಚೇರಿಗಳಲ್ಲಿ ಸ್ಥಾಪಿಸಿರುವ ಯಾವುದೇ ಸಲಕರಣೆಗೆ ಸಂಬಂಧಿಸಿದಂತೆ ಅನುಸರಿಸಬೇಕಾಗಿದ್ದ ಕಟ್ಟುನಿಟ್ಟಿನ ಪ್ರಮಾಣಕವಾದ "NEBS ಪ್ರಮಾಣಕಗಳೊಂದಿಗೆ" ಇದು ಅನುವರ್ತನಾಶೀಲವಾಗಿತ್ತು. ವಾಹಕ ಕಂಪನಿಗಳಿಗಾಗಿ ಒಂದಷ್ಟು ಇತರ ತಯಾರಕ ಕಂಪನಿಗಳು ಧ್ವನಿಯಂಚೆ ಮಾರುಕಟ್ಟೆಯನ್ನು ಪ್ರವೇಶಿಸಿದವು. ಅಂಥವುಗಳಲ್ಲಿ ಯೂನಿಸಿಸ್‌, ಬಾಸ್ಟನ್‌ ಟೆಕ್ನಾಲಜಿ, ಮತ್ತು ಕಾಮ್‌ವರ್ಸ್‌ ಟೆಕ್ನಾಲಜಿ (ಕೋಬಿ ಅಲೆಕ್ಸಾಂಡರ್‌‌‌ನಿಂದ ಸಂಸ್ಥಾಪಿಸಲ್ಪಟ್ಟ ಇಸ್ರೇಲಿ ಮೂಲದ ಒಂದು ಕಂಪನಿ) ಸೇರಿದ್ದವು. ಈ ಮಾರಾಟಗಾರರು ಸಂಸ್ಥೆಗಳಿಗೆ ಧ್ವನಿಯಂಚೆಯ ವ್ಯವಸ್ಥೆಯನ್ನು ನೀಡಲಿಲ್ಲವಾದರೂ, ಕಾರ್ಯಸಾಧ್ಯತೆ ಹೊಂದಿರುವ ರೀತಿಯಲ್ಲಿ ದೊಡ್ಡ ಮತ್ತು ಲಾಭದಾಯಕ ಎನಿಸಿದ್ದ ವಾಹಕ ಮಾರುಕಟ್ಟೆಯ ಮೇಲೆ ಅವರು ಗಮನಹರಿಸಿದರು. ಪ್ಯಾಕ್‌ಬೆಲ್‌‌ನ ವಸತಿ ಧ್ವನಿಯಂಚೆಯ ಸೇವೆಗಳನ್ನು ಯೂನಿಸಿಸ್‌ ಗಳಿಸಿತು, ಮತ್ತು ಬಾಸ್ಟನ್‌ ಟೆಕ್ನಾಲಜಿ ಕಂಪನಿಯು ಬೆಲ್‌ ಅಟ್ಲಾಂಟಿಕ್‌ನ ವಸತಿ ಧ್ವನಿಯಂಚೆ ಪ್ರಸ್ತಾವನೆಯ ಆಧಾರಸ್ತಂಭವಾಗಿತ್ತು. ಇತರ ಸಾಂಸ್ಥಿಕ ಧ್ವನಿಯಂಚೆ ತಯಾರಕರ ಪೈಕಿ ಯಾರೂ ಸಹ ವಾಹಕ ಮಾರುಕಟ್ಟೆಯೊಂದಿಗೆ ಗಮನಾರ್ಹ ಯಶಸ್ಸನ್ನು ಸಾಧಿಸಲಾಗಲಿಲ್ಲ; ಏಕೆಂದರೆ, ಅವರ ಯಂತ್ರ-ವ್ಯವಸ್ಥೆಗಳ ಸಾಮರ್ಥ್ಯಗಳು ತೀರಾ ಚಿಕ್ಕದಾಗಿದ್ದವು ಮತ್ತು ಸಲಕರಣೆಗಳು ಅಷ್ಟೊಂದು ವಿಶ್ವಸನೀಯವಾಗಿರಲಿಲ್ಲ. ವಾಹಕ ಕಂಪನಿಗಳಿಗೆ ಮಾರುವಿಕೆಯೆಂದರೆ ಅದು ಸಾಧಾರಣ ಸಂಗತಿಯಾಗಿರಲಿಲ್ಲ, ಸಾಂಸ್ಥಿಕ ಮಾರುಕಟ್ಟೆಗೆ ಮಾರುವುದಕ್ಕಿಂತ ವಿಭಿನ್ನವಾಗಿರುವ ಒಂದು ವಿಧಾನದಲ್ಲಿ ಮಾರಾಟಗಳು ಮತ್ತು ಮಾರಾಟಗಾರಿಕೆಯನ್ನು ಕೈಗೊಳ್ಳುವುದು ಅಲ್ಲಿ ಅಗತ್ಯವಾಗಿತ್ತು. ಈ ನಿಟ್ಟಿನಲ್ಲಿ, ಈ ಎರಡೂ ದೃಷ್ಟಿಯಲ್ಲಿ ಕೇವಲ ಆಕ್ಟೆಲ್‌ ಯಶಸ್ವಿಯಾಯಿತು.

ಉತ್ತರ ಅಮೆರಿಕಾದಲ್ಲಿ ತನ್ನ ಚಂದಾದಾರರಿಗೆ ಧ್ವನಿಯಂಚೆಯ ಸೇವೆಯನ್ನು ಯಶಸ್ವಿಯಾಗಿ ಒದಗಿಸಿದ ಮೊದಲ ಸೆಲ್ಯುಲರ್‌ ವಾಹಕನೆಂದರೆ ಪ್ರಾಯಶಃ ಬೆಲ್‌ ಸೆಲ್ಯುಲರ್ ಇರಬೇಕು; ಇದು ಒಂಟಾರಿಯೊ ಮತ್ತು ಕ್ವೆಬೆಕ್‌ ವಲಯಗಳಿಗೆ ಸೇವೆ ಸಲ್ಲಿಸುತ್ತಿದ್ದ ಕೆನಡಾದ ವಾಹಕ ಕಂಪನಿಯಾಗಿತ್ತು (ಬೆಲ್‌ ಸೆಲ್ಯುಲರ್‌ ಕಾಲಾನಂತರದಲ್ಲಿ ತನ್ನ ಹೆಸರನ್ನು ಬೆಲ್‌ ಮೊಬಿಲಿಟಿ ಎಂಬುದಾಗಿ ಬದಲಾಯಿಸಿಕೊಂಡಿತು). ಧ್ವನಿಯಂಚೆಯ ವಲಯದೊಂದಿಗೆ ಬೆಲ್‌ ಸೆಲ್ಯುಲರ್‌ ಸಾಧಿಸಿದ ಯಶಸ್ಸು ಜನಪ್ರಿಯವಾಯಿತು, ಮತ್ತು ಸೆಲ್ಯುಲರ್‌ ಧ್ವನಿಯಂಚೆಯು ಕೆನಡಾದ ಉದ್ದಗಲಕ್ಕೂ ಹಬ್ಬಿತು, ನಂತರದಲ್ಲಿ US ಮತ್ತು ಸಾಗರೋತ್ತರ ವಲಯಗಳಿಗೂ ವ್ಯಾಪಿಸಿತು. ಕೆಲವೇ ವರ್ಷಗಳಲ್ಲಿ, ಕೆನಡಾದ ೧೦೦%ನಷ್ಟು ಸೆಲ್ಯುಲರ್‌ ಕಂಪನಿಗಳು ಅಂತಿಮವಾಗಿ ಆಕ್ಟೆಲ್‌ ಧ್ವನಿಯಂಚೆಯನ್ನು ಬಳಸಿದವು. ಇದನ್ನು USನ ಎಲ್ಲಾ ಪ್ರಮುಖ ನಿಸ್ತಂತು ವಾಹಕ ಕಂಪನಿಗಳು (ಏಳು RBOCಗಳು, AT&T ವೈರ್‌ಲೆಸ್‌ ಮತ್ತು ಮೆಕ್‌ಕ್ಯಾವ್‌ಗಳನ್ನು ಒಳಗೊಂಡು) ಮತ್ತು ವಿಶ್ವಾದ್ಯಂತದ ಒಂದು ದೊಡ್ಡ ಸಂಖ್ಯೆಯಲ್ಲಿನ GSM ವಾಹಕ ಕಂಪನಿಗಳು ಇದನ್ನು ಕಾರ್ಯತಃ ಅನುಸರಿಸಿದವು. ಕಾಮ್‌ವರ್ಸ್‌ ಟೆಕ್ನಾಲಜಿ ಕಂಪನಿಯು US ಆಚೆಗಿನ GSM ಮಾರುಕಟ್ಟೆಯಲ್ಲಿ ಅತ್ಯಂತ ಯಶಸ್ವಿಯಾಗಿತ್ತು. ವಿಶ್ವದಲ್ಲಿ ಆಕ್ಟೆಲ್‌ ಬಳಕೆದಾರ ಇಂಟರ್‌ಫೇಸ್‌ ವ್ಯವಸ್ಥೆಯು ವಾಹಕ ಕಂಪನಿಗಳೊಂದಿಗೆ ಅತ್ಯಂತ ಸಾಮಾನ್ಯ ಎನಿಸಿಕೊಂಡಿತಾದರೂ, ಪ್ರತಿಯೊಂದು ವಾಹಕ ಕಂಪನಿಯೂ ಇಂಟರ್‌ಫೇಸ್‌ನ ಮೇಲೆ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿತು.

"ವಾಸ್ತವಾಭಾಸದ ದೂರವಾಣಿ ವ್ಯವಸ್ಥೆ " ಎಂದು ಕರೆಯಲ್ಪಟ್ಟ ಒಂದು ಪರಿಕಲ್ಪನೆಯೂ ಸೇರಿದಂತೆ, ವಾಹಕ ಮಾರುಕಟ್ಟೆಯಿಂದ ಇತರ ಆಸಕ್ತಿಕರ ಮಾರುಕಟ್ಟೆಗಳು ಅಭಿವೃದ್ಧಿಯಾದವು. ಆಕ್ಟೆಲ್‌ನಿಂದ ಅಭಿವೃದ್ಧಿಪಡಿಸಲ್ಪಟ್ಟ ವಾಸ್ತವಾಭಾಸದ ದೂರವಾಣಿ ವ್ಯವಸ್ಥೆಯು, ಅಭಿವೃದ್ಧಿಶೀಲ ದೇಶಗಳಲ್ಲಿ ದೂರವಾಣಿಗಳಿಗೆ ಸಂಬಂಧಿಸಿದ ತಂತಿವ್ಯವಸ್ಥೆಯಿಲ್ಲದೆಯೇ ದೂರವಾಣಿ ಸೇವೆಯನ್ನು ಕ್ಷಿಪ್ರವಾಗಿ ಒದಗಿಸಲು ಧ್ವನಿಯಂಚೆಯನ್ನು ಬಳಸಿಕೊಂಡಿತು. ಅಭಿವೃದ್ಧಿಶೀಲ ದೇಶಗಳು ಅನೇಕ ದೂರವಾಣಿಗಳನ್ನು ಹೊಂದದಂತೆ ಮಾಡಿದ್ದು ಇದು ಪರಿಹರಿಸಿದ ಸಮಸ್ಯೆಯಾಗಿತ್ತು. ದೂರವಾಣಿಗಳಿಗೆ ಸಂಬಂಧಿಸಿದ ತಂತಿವ್ಯವಸ್ಥೆಯು ಅತ್ಯಂತ ದುಬಾರಿಯಾಗಿತ್ತು, ಮತ್ತು ಅನೇಕ ಬಡ ನಾಗರಿಕರ ತಂತಿ ವ್ಯವಸ್ಥೆಗಳಿಗೆ ಮನೆಗಳನ್ನು ಹೊಂದಿರಲಿಲ್ಲ. ಅಭಿವೃದ್ಧಿಶೀಲ ದೇಶಗಳಲ್ಲಿನ ಜನರು ತಾವು ನಡೆದಾಡುವ ಅಥವಾ ಒಂದು ಬೈಸಿಕಲ್ ಸವಾರಿ ಮಾಡುವ ಪ್ರದೇಶದಿಂದ ಆಚೆಗೆ ಸಂವಹಿಸಲು ಸಾಧ್ಯವಿರಲಿಲ್ಲದಿದ್ದುದು ಆ ದೇಶಗಳ ಆರ್ಥಿಕತೆಗಳು ಹಿಂದುಳಿಯಲು ಭಾಗಶಃ ಕಾರಣವಾಯಿತು. ಅವರಿಗೆ ದೂರವಾಣಿ ಸಾಧನಗಳನ್ನು ನೀಡುವುದು ಅವರ ಆರ್ಥಿಕತೆಗಳಿಗೆ ನೆರವಾಗುವುದಕ್ಕಿಂದ ಒಂದು ಮಾರ್ಗವಾಗಿತ್ತು, ಆದರೆ ಅದನ್ನು ಮಾಡಲು ಅಲ್ಲೊಂದು ಕಾರ್ಯಸಾಧ್ಯ ಮಾರ್ಗವಿರಲಿಲ್ಲ. ಕೆಲವೊಂದು ದೇಶಗಳಲ್ಲಿ, ಒಂದು ದೂರವಾಣಿಗಾಗಿ ಹಲವಾರು ವರ್ಷಗಳವರೆಗೆ ಕಾಯಬೇಕಾಗಿ ಬರುತ್ತಿತ್ತು ಮತ್ತು ವೆಚ್ಚವು ಸಾವಿರಾರು ಡಾಲರುಗಳವರೆಗೆ ಮುಟ್ಟುತ್ತಿತ್ತು. ಆ ಕಾಲದಲ್ಲಿ ಸೆಲ್ಯುಲರ್‌ ದೂರವಾಣಿಗಳು ಒಂದು ಆಯ್ಕೆ ಎನಿಸಿರಲಿಲ್ಲ, ಏಕೆಂದರೆ ಅವು ಅತೀವವಾಗಿ ದುಬಾರಿಯಾಗಿದ್ದವು (ಪ್ರತಿ ಹ್ಯಾಂಡ್‌ಸೆಟ್‌ಗೆ ಸಾವಿರಾರು ಡಾಲರುಗಳು ವೆಚ್ಚವಾಗುತ್ತಿದ್ದವು) ಮತ್ತು ಸೆಲ್‌ ತಾಣಗಳನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದ್ದ ಮೂಲಸೌಕರ್ಯವೂ ದುಬಾರಿಯಾಗಿತ್ತು.

ವಾಸ್ತವಾಭಾಸದ ದೂರವಾಣಿ ವ್ಯವಸ್ಥೆಯ ನೆರವಿನಿಂದ ಪ್ರತಿಯೋರ್ವ ವ್ಯಕ್ತಿಗೂ ಒಂದು ದೂರವಾಣಿ ಸಂಖ್ಯೆ (ಕೇವಲ ಸಂಖ್ಯೆ ಮಾತ್ರ, ದೂರವಾಣಿ ಸಾಧನವನ್ನಲ್ಲ) ಮತ್ತು ಒಂದು ಧ್ವನಿ ಅಂಚೆಪೆಟ್ಟಿಗೆಯನ್ನು ನೀಡಲು ಸಾಧ್ಯವಿತ್ತು. ನಾಗರಿಕನಿಗೆ ಒಂದು ಪೇಜರ್‌‌ನ್ನೂ ಸಹ ನೀಡಬಹುದಾಗಿತ್ತು. ಒಂದು ವೇಳೆ ಯಾರಾದರೂ ದೂರವಾಣಿ ಸಂಖ್ಯೆಗೆ ಕರೆಮಾಡಿದರೆ, ಅದು ಒಂದು ವಾಸ್ತವಿಕ ದೂರವಾಣಿಯಲ್ಲಿ ರಿಂಗಣಿಸುತ್ತಿರಲಿಲ್ಲ; ಅದರ ಬದಲಿಗೆ ಒಂದು ಕೇಂದ್ರೀಯ ಧ್ವನಿಯಂಚೆ ವ್ಯವಸ್ಥೆಗೆ ತತ್‌ಕ್ಷಣವೇ ಪಥನಿರ್ದೇಶಿಸಲ್ಪಡುತ್ತಿತ್ತು. ಧ್ವನಿಯಂಚೆ ವ್ಯವಸ್ಥೆಯು ಕರೆಗೆ ಉತ್ತರ ನೀಡುತ್ತಿತ್ತು ಮತ್ತು ಕರೆ ಮಾಡಿದಾತನು ಒಂದು ಸುದೀರ್ಘವಾದ, ವಿಸ್ತೃತವಾದ ಸಂದೇಶವನ್ನು ಬಿಡಲು ಸಾಧ್ಯವಿತ್ತು. ಸಂದೇಶವು ಸ್ವೀಕೃತವಾಗುತ್ತಿದ್ದಂತೆಯೇ ಧ್ವನಿಯಂಚೆ ವ್ಯವಸ್ಥೆಯು ನಾಗರಿಕನ ಪೇಜರ್‌ನ್ನು ಪ್ರಚೋದಿಸುತ್ತಿತ್ತು. ಪೇಜರ್‌ ಸಂದೇಶವು ಸ್ವೀಕೃತವಾಗುತ್ತಿದ್ದಂತೆಯೇ, ನಾಗರಿಕನು ಒಂದು ಪಾವತಿ ದೂರವಾಣಿಯನ್ನು ಕಂಡುಕೊಂಡು, ಸಂದೇಶವನ್ನು ಪಡೆದುಕೊಳ್ಳಲು ಕರೆ ಮಾಡಬೇಕಾಗುತ್ತಿತ್ತು. ದಕ್ಷಿಣ ಅಮೆರಿಕಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಈ ಪರಿಕಲ್ಪನೆಯು ಯಶಸ್ವಿಯಾಗಿ ಬಳಸಲ್ಪಟ್ಟಿತು.

೧೯೮೦ರ ದಶಕದಿಂದ ೧೯೯೦ರ ದಶಕದವರೆಗೆ

ಬದಲಾಯಿಸಿ

೧೯೮೦ರ ದಶಕದ ಆರಂಬದಲ್ಲಿ, ಸಾಂಸ್ಥಿಕ ಧ್ವನಿಯಂಚೆ ಮಾರುಕಟ್ಟೆಗಾಗಿ ೩೦ಕ್ಕೂ ಹೆಚ್ಚಿನ ಕಂಪನಿಗಳು ಸೆಣಸಾಡುತ್ತಿದ್ದವು ಮತ್ತು ಇಂದು ವ್ಯವಹಾರ ವಲಯದಿಂದ ಮಾಯವಾಗಿರುವ ಅನೇಕ ಕಂಪನಿಗಳು ಅದರಲ್ಲಿ ಸೇರಿದ್ದವು. ಇಂಥ ಅನೇಕ ಸ್ಪರ್ಧಿಗಳಲ್ಲಿ IBM, VMX, ವ್ಯಾಂಗ್‌, ಆಕ್ಟೆಲ್‌, ROLM, AT&T, ನಾರ್ದರ್ನ್‌ ಟೆಲಿಕಾಂ, ಡೆಲ್ಫಿ ಕಮ್ಯುನಿಕೇಷನ್ಸ್‌, ವಾಯ್ಸ್‌ ಅಂಡ್‌ ಡೇಟಾ ಸಿಸ್ಟಮ್ಸ್‌, ಓಪ್ಕಾಮ್‌, ಕಾಮ್‌ಟರ್ಮ್‌, ಜೆನೆಸಿಸ್‌, ಬ್ರೂಕ್‌ ಟ್ರೌಟ್‌, ಗ್ಲೆನಾಯ್ರ್‌, BBL, AVT, AVST, ಡಿಜಿಟಲ್‌ ಸೌಂಡ್‌, ಸೆಂಟಿಗ್ರಾಮ್‌, ವಾಯ್ಸ್‌ಮೇಲ್‌ ಇಂಟರ್‌ನ್ಯಾಷನಲ್‌, ಆಕ್ಟಿವ್‌ ವಾಯ್ಸ್‌,[] ಮತ್ತು ಇತರ ಅನೇಕ ಕಂಪನಿಗಳು ಸೇರಿದ್ದವು. ಸಾಂಸ್ಥಿಕ ಧ್ವನಿಯಂಚೆ ಮಾರುಕಟ್ಟೆಯಲ್ಲಿನ ವಸ್ತುತಃ ಎಲ್ಲಾ ಸ್ಪರ್ಧಿಗಳು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಮೂಲವನ್ನು ಹೊಂದಿದ್ದವು.

೧೯೯೦ರ ದಶಕದ ಮಧ್ಯಭಾಗದ ವೇಳೆಗೆ, IBM ಮತ್ತು ವ್ಯಾಂಗ್‌ ಲ್ಯಾಬರೇಟರೀಸ್‌ ಕಂಪನಿಗಳು ಧ್ವನಿಯಂಚೆ ಮಾರುಕಟ್ಟೆಯಿಂದ ನಿರ್ಗಮಿಸಿದವು; ಮಾರುಕಟ್ಟೆಯಲ್ಲಿ ಸಾಕಷ್ಟು ಹಿಡಿತವನ್ನು ಅವು ಪಡೆಯಲಿಕ್ಕೆ ಆಗದಿದ್ದುದೇ ಇದಕ್ಕೆ ಕಾರಣವಾಗಿತ್ತು. ೧೯೮೦ರ ದಶಕದ ಮಧ್ಯಭಾಗದಲ್ಲಿ ROLMನ್ನು IBM ಖರೀದಿಸಿತು (ಇದು ಲಾಭದಾಯಕವಾಗಿದ್ದ ROLMಗೆ ಸಂಬಂಧಿಸಿದಂತೆ ಒಂದು ಹಣಕಾಸಿನ ವಿಪತ್ತಾಗಿತ್ತು, ಏಕೆಂದರೆ ROLMನ ನಿರ್ಲಕ್ಷ್ಯತೆಯ, "ವಿಭಿನ್ನವಾಗಿ ಆಲೋಚಿಸುವ" ವರ್ತನೆಯನ್ನು ನಿಚ್ಚಳವಾಗಿ ಗ್ರಹಿಸಲು IBMಗೆ ಆಗಲಿಲ್ಲ; ಮತ್ತು ೭೦ರ ದಶಕದ ಮಧ್ಯಭಾಗದಿಂದ ೮೦ರ ದಶಕದ ಅಂತ್ಯದವರೆಗೆ ROLM ಕಂಪನಿಯು USನಲ್ಲಿ ೨ನೇ ಸ್ಥಾನದಲ್ಲಿದ್ದ PBX ಪೂರೈಕೆದಾರನಾಗಿತ್ತು), ನಂತರ ಅರ್ಧದಷ್ಟು ಭಾಗವನ್ನು ಜರ್ಮನ್‌ ಕಂಪನಿಯಾದ ಸೀಮೆನ್ಸ್‌ಗೆ ಮಾರಾಟಮಾಡಿತು.[] ೧೯೯೨ರಲ್ಲಿ, ಸೀಮೆನ್ಸ್‌ ಕಂಪನಿಯು ROLMನ್ನು IBMನಿಂದ ಸಂಪೂರ್ಣವಾಗಿ ಖರೀದಿಸಿತು ಮತ್ತು ಫೋನ್‌ಮೇಲ್‌ನ್ನು ಹೊರತುಪಡಿಸಿ (ಇದು ಸೀಮೆನ್ಸ್‌ ನಾಶಪಡಿಸದ ಏಕೈಕ ಉತ್ಪನ್ನವಾಗಿತ್ತು) ROLMನ ಮೂಲ ಉತ್ಪನ್ನಶ್ರೇಣಿಯನ್ನು ಅದು ನಾಶಮಾಡಿತು.[ಸೂಕ್ತ ಉಲ್ಲೇಖನ ಬೇಕು] ಕಳಪೆ ಉತ್ಪನ್ನ ಮತ್ತು ಅದಕ್ಷ ವ್ಯವಸ್ಥಾಪನೆಯಿಂದ VMX ಬಳಲಿತು ಮತ್ತು ಅದರೊಂದಿಗೆ ಓಪ್ಕಾಮ್‌ ವಿಲೀನಗೊಂಡಾಗ ಮುಚ್ಚುವುದರಲ್ಲಿತ್ತು. ಅಸ್ತಿತ್ವಕ್ಕೆ ಬಂದ ಕಂಪನಿಯನ್ನು VMX ಎಂಬುದಾಗಿ ಕರೆಯಲಾಯಿತಾದರೂ, ಅದರ ಹೆಸರು ಮತ್ತು ಸ್ವಾಮ್ಯದ ಸನ್ನದು ಸಂಪುಟಗಳನ್ನು ಹೊರತುಪಡಿಸಿ ಮಿಕ್ಕೆಲ್ಲವನ್ನೂ ಓಪ್ಕಾಮ್‌ ಅಳಿಸಿಹಾಕಿತು. ೧೯೯೪ರಲ್ಲಿ, VMXನ್ನು ಆಕ್ಟೆಲ್‌ ಖರೀದಿಸಿತು. ೯೦ರ ದಶಕದ ಆರಂಭದ ವೇಳೆಗೆ, ಸಾಂಸ್ಥಿಕ ಮಾರುಕಟ್ಟೆಗಾಗಿ ತನ್ನ ಧ್ವನಿಯಂಚೆಯ ಆವೃತ್ತಿಯನ್ನು AT&T/ಲ್ಯೂಸೆಂಟ್‌ ಸೃಷ್ಟಿಸಿತಾದರೂ (ಇದನ್ನು ಆಡಿಕ್ಸ್‌ ಎಂದು ಕರೆಯಲಾಗಿತ್ತು) AT&T/ಲ್ಯೂಸೆಂಟ್‌ PBXಗಳ ಮೇಲೆ ಮಾತ್ರವೇ ಅದು ಕೆಲಸ ಮಾಡಿತು.[ಸೂಕ್ತ ಉಲ್ಲೇಖನ ಬೇಕು] ನೋರ್ಟೆಲ್‌ ಕಂಪನಿಯು ಮೆರಿಡಿಯನ್‌ ಮೇಲ್‌‌‌ನ್ನು ಅಭಿವೃದ್ಧಿಪಡಿಸಿತು ಹಾಗೂ AT&Tಯ ರೀತಿಯಲ್ಲಿ ಅದೇ ಕಾರ್ಯತಂತ್ರವನ್ನು ಅನುಸರಿಸಿತು. ಇದರಿಂದಾಗಿ ನಾರ್ದರ್ನ್‌ ಟೆಲಿಕಾಂ PBXಗಳೊಂದಿಗೆ ಮಾತ್ರವೇ ಮೆರಿಡಿಯನ್‌ ಮೇಲ್‌ ಕೆಲಸ ಮಾಡುವಂತಾಯಿತು.[ಸೂಕ್ತ ಉಲ್ಲೇಖನ ಬೇಕು] ಇದರ ಪರಿಣಾಮವಾಗಿ, ಎರಡರ ಪೈಕಿ ಯಾವ ಕಂಪನಿಯೂ ದೊಡ್ಡ ರಾಷ್ಟ್ರೀಯ ಅಥವಾ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಹೆಚ್ಚಿನ ಮಾರುಕಟ್ಟೆ ಪಾಲನ್ನು ಸಾಧಿಸಲಾಗಲಿಲ್ಲ (ಏಕೆಂದರೆ, ROLM ಕಂಪನಿಯನ್ನು IBM ಖರೀದಿಸುವವರೆಗೂ ಅದು ನಿಕಟವಾಗಿ ಎರಡನೇ ಸ್ಥಾನದಲ್ಲಿದ್ದುದರೊಂದಿಗೆ ಮತ್ತು ನೋರ್ಟೆಲ್‌ನ್ನು ದಾಟಿಹೋಗುವುದಕ್ಕೆ ಸಮಚಿತ್ತತೆಯನ್ನು ಕಾಯ್ದಕೊಂಡಿದ್ದರೊಂದಿಗೆ, ೧೯೭೦ರ ದಶಕದ ಅಂತ್ಯಭಾಗದಿಂದಲೂ ನೋರ್ಟೆಲ್‌ ಪ್ರಮುಖ ನಾಯಕನಾಗಿತ್ತಾದರೂ, ಕೆಲವೊಂದು ಪ್ರಮುಖ ಕಂಪನಿಗಳು, ಹಾಗೇನಾದರೂ ಇದ್ದಲ್ಲಿ, ಕೇವಲ PBXನ ಒಂದು ಬ್ರಾಂಡನ್ನಷ್ಟೇ ಬಳಸಿದವು).[ಸೂಕ್ತ ಉಲ್ಲೇಖನ ಬೇಕು] AT&T ತನ್ನ ಸಲಕರಣೆ ವ್ಯವಹಾರವನ್ನು ಬೇರ್ಪಡಿಸಿ, ಲ್ಯೂಸೆಂಟ್‌ ಟೆಕ್ನಾಲಜೀಸ್‌ ಎಂದು ಕರೆಯಲ್ಪಟ್ಟ ಒಂದು ಕಂಪನಿಯನ್ನು ರೂಪಿಸಿತು, ಮತ್ತು ನಾರ್ದರ್ನ್‌ ಟೆಲಿಕಾಂ ತನ್ನ ಹೆಸರನ್ನು ನೋರ್ಟೆಲ್‌ ಎಂಬುದಾಗಿ ಬದಲಾಯಿಸಿತು. ಧ್ವನಿಯಂಚೆಯ ಸೇವೆಯನ್ನು ನೀಡುತ್ತಿದ್ದ ಹಲವಾರು ಸಣ್ಣ ಕಂಪನಿಗಳು ಸಾಕಷ್ಟಿಲ್ಲದ ಉತ್ಪನ್ನ ಅಥವಾ ಅದಕ್ಷ ವ್ಯವಸ್ಥಾಪನೆಯ ಕಾರಣದಿಂದಾಗಿ ಮುಚ್ಚಿಕೊಂಡವು.

೧೯೯೦ರ ದಶಕದ ಮಧ್ಯಭಾಗದ ವೇಳೆಗೆ, ಸಂಸ್ಥೆಗಳು ಮತ್ತು ವಾಹಕ ಕಂಪನಿಗಳಿಗೆರಡಕ್ಕೂ ಧ್ವನಿಯಂಚೆಯನ್ನು ಪೂರೈಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಆಕ್ಟೆಲ್‌ ಕಂಪನಿಯು ಅಗ್ರಗಣ್ಯ ಪೂರೈಕೆದಾರ ಎನಿಸಿಕೊಂಡಿತ್ತು. U.S., ಕೆನಡಾ, ಯುರೋಪ್‌ ಮತ್ತು ಜಪಾನ್‌ ದೇಶಗಳಲ್ಲಿ (ದೊಡ್ಡ ಸಂಸ್ಥೆಗಳಿಗೆ ಸಂಬಂಧಿಸಿದಂತೆ) ಇದು ಸುಮಾರು ೬೦%ನಷ್ಟಿದ್ದ ಒಂದು ಮಾರುಕಟ್ಟೆ ಪಾಲನ್ನು ಹೊಂದಿತ್ತು ಹಾಗೂ ದೇಶವನ್ನು ಅವಲಂಬಿಸಿ ವಾಹಕ ಮಾರುಕಟ್ಟೆಯಲ್ಲಿ ೩೦% ಮತ್ತು ೧೦೦% ನಡುವಿನ ಒಂದು ಪಾಲನ್ನು ಹೊಂದಿತ್ತು. ೧೯೯೭ರ ವೇಳೆಗೆ, ಆಡಿಕ್ಸ್‌ ಮತ್ತು ಮೆರಿಡಿಯನ್‌ ಮೇಲ್‌ ಎಂಬ ಉತ್ಪನ್ನಗಳು ಆಕ್ಟೆಲ್‌ನ ಅತಿದೊಡ್ಡ ಪ್ರತಿಸ್ಪರ್ಧಿಗಳಾಗಿದ್ದವು. ಇವುಗಳ ಪೈಕಿ ಆಡಿಕ್ಸ್‌ನ್ನು ಲ್ಯೂಸೆಂಟ್ ಕಂಪನಿಯು ರೂಪಿಸಿದ್ದರೆ, ಮೆರಿಡಿಯನ್‌ ಮೇಲ್‌ನ್ನು ನೋರ್ಟೆಲ್ ರೂಪಿಸಿತ್ತು. ೧೯೯೭ರ ಜುಲೈನಲ್ಲಿ, ಆಕ್ಟೆಲ್‌ನ್ನು ಲ್ಯೂಸೆಂಟ್‌ ಟೆಕ್ನಾಲಜಿಯು ಖರೀದಿಸಿತು. ಲ್ಯೂಸೆಂಟ್‌ನ ಆಡಿಕ್ಸ್‌ ವಿಭಾಗವು ಆಕ್ಟೆಲ್‌ನೊಳಗೆ ವಿಲೀನಗೊಂಡು ಆಕ್ಟೆಲ್‌ ಮೆಸೇಜಿಂಗ್‌ ಡಿವಿಷನ್‌ ಎಂಬ ವಿಭಾಗವು ರೂಪುಗೊಂಡಿತು. ಅದೇ ವರ್ಷದಲ್ಲಿ, ಬಾಸ್ಟನ್‌ ಟೆಕ್ನಾಲಜಿಯನ್ನು ಕಾಮ್‌ವರ್ಸ್‌ ಟೆಕ್ನಾಲಜಿಯು ಸ್ವಾಧೀನಪಡಿಸಿಕೊಂಡಿತು. ಇದರಿಂದಾಗಿ ವಾಹಕ ಕಂಪನಿಗಳಿಗೆ ಪೂರೈಕೆಮಾಡುವಲ್ಲಿನ ಆಕ್ಟೆಲ್ ನಂತರದ ಎರಡನೇ ಅತಿದೊಡ್ಡ ಪೂರೈಕೆದಾರ ಎಂಬ ಕೀರ್ತಿ ಅದಕ್ಕೆ ದಕ್ಕಿತು. ಕೆಲವೇ ವರ್ಷಗಳಲ್ಲಿ ಕಾಮ್‌ವರ್ಸ್‌ ಕಂಪನಿಯು ವಾಹಕ ಕಂಪನಿಗಳಿಗೆ ಸಂಬಂಧಿಸಿದ ಅತಿದೊಡ್ಡ ಪೂರೈಕೆದಾರ ಎನಿಸಿಕೊಂಡರೆ, ಲ್ಯೂಸೆಂಟ್‌ ಕಂಪನಿಯು ಸಾಂಸ್ಥಿಕ ಮಾರುಕಟ್ಟೆಯಲ್ಲಿ ತನ್ನ ನಾಯಕತ್ವವನ್ನು ಸಾಧಿಸಿತು ಮತ್ತು ವಾಹಕ ಕಂಪನಿಗಳೊಂದಿಗೆ ಎರಡನೇ ಸ್ಥಾನವನ್ನು ಗಳಿಸಿತು. ೨೦೦೦ನೇ ಇಸವಿಯ ವೇಳೆಗೆ, ಕೆಲವೊಬ್ಬರು ಅಂದಾಜಿಸುವ ಪ್ರಕಾರ, ಆಕ್ಟೆಲ್‌ ಮೆಸೇಜಿಂಗ್‌ ಡಿವಿಷನ್‌ನಿಂದ ರೂಪಿಸಲ್ಪಟ್ಟ ಸಾಂಸ್ಥಿಕ ಮತ್ತು ವಾಹಕ ಧ್ವನಿಯಂಚೆಯನ್ನು ಬಳಸುತ್ತಿದ್ದ ಸಕ್ರಿಯ ಬಳಕೆದಾರರ ಸಂಖ್ಯೆಯು ೧೫೦,೦೦೦,೦೦೦ಕ್ಕೂ ಜಾಸ್ತಿಯಿತ್ತು. ಇದಾದ ಕೆಲವೇ ದಿನಗಳಲ್ಲಿ, ಆಕ್ಟೆಲ್‌ ಮೆಸೇಜಿಂಗ್‌ ಡಿವಿಷನ್‌ನ್ನೂ ಒಳಗೊಂಡಂತೆ ಲ್ಯೂಸೆಂಟ್‌ ತನ್ನ ಸಾಂಸ್ಥಿಕ ವ್ಯವಹಾರವನ್ನು ಬೇರ್ಪಡಿಸಿ, ಅವಯಾ ಎಂಬ ಹೆಸರಿನ ಒಂದು ಕಂಪನಿಯಾಗಿ ರೂಪಿಸಿತು.[] ವಿಶ್ವಾದ್ಯಂತ ವಾಹಕ ಕಂಪನಿಗಳಿಗೆ ಮಾರಾಟಮಾಡಲ್ಪಡುವ ಪರಂಪರಾನುಗತವಾದ ಧ್ವನಿಯಂಚೆ ವ್ಯವಸ್ಥೆಗಳ ತನ್ನ ನಾಯಕತ್ವವನ್ನು ಕಾಮ್‌ವರ್ಸ್‌ ಇಂದು ಉಳಿಸಿಕೊಂಡಿದೆ.[ಸೂಕ್ತ ಉಲ್ಲೇಖನ ಬೇಕು] IP ಆಧರಿತ ಧ್ವನಿಯಂಚೆ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ, ಎರಿಕ್‌ಸನ್‌ ಕಂಪನಿಯು ತನ್ನ ಎರಿಕ್‌ಸನ್‌ ಮೆಸೇಜಿಂಗ್‌-ಓವರ್‌-IP (MoIP) ಪರಿಹಾರೋಪಾಯದೊಂದಿಗೆ ಮಾರುಕಟ್ಟೆ ನಾಯಕತ್ವವನ್ನು ಸಾಧಿಸಿಕೊಂಡಿದೆ.[ಸೂಕ್ತ ಉಲ್ಲೇಖನ ಬೇಕು]

೨೦೦೦ದ ದಶಕ

ಬದಲಾಯಿಸಿ

೨೦೦೦ನೇ ವರ್ಷದ ವೇಳೆಗೆ, ದೂರವಾಣಿ ವ್ಯವಸ್ಥೆಗಳಿಗೆ ಸೇವೆ ಸಲ್ಲಿಸುತ್ತಿರುವ ಕಂಪನಿಗಳು, ಸೆಲ್ಯುಲರ್‌ ಮತ್ತು ವಸತಿ ದೂರವಾಣಿಯ ಚಂದಾದಾರರಲ್ಲಿ ಧ್ವನಿಯಂಚೆಯು ಒಂದು ಸರ್ವತ್ರ ಗೋಚರಿಸುವ ಲಕ್ಷಣವಾಗಿ ಮಾರ್ಪಟ್ಟಿತ್ತು. ಸೆಲ್ಯುಲರ್‌ ಮತ್ತು ವಸತಿಯ ಧ್ವನಿಯಂಚೆಗಳು ತಮ್ಮ ಹಿಂದಿನ ಸ್ವರೂಪದಲ್ಲಿ, ಪ್ರಧಾನವಾಗಿ ಸರಳ ದೂರವಾಣಿಗೆ ಉತ್ತರಿಸುವಿಕೆಯಲ್ಲಿ ಇಂದೂ ಮುಂದುವರಿಯುತ್ತಿವೆ. ಇ-ಮೇಲ್‌ ಎಂಬುದು ಸಾಮಾನ್ಯ ಬಳಕೆಯಲ್ಲಿರುವ ಸಂದೇಶ ರವಾನೆ ವ್ಯವಸ್ಥೆಯಾಗಿ ಮಾರ್ಪಟ್ಟಿತು, ಇ-ಮೇಲ್‌ ಸರ್ವರ್‌ಗಳು ಮತ್ತು ತಂತ್ರಾಂಶಗಳು ಸಾಕಷ್ಟು ವಿಶ್ವಾಸಾರ್ಹವೆನಿಸಿದವು, ಮತ್ತು ಕಾರ್ಯತಃ ಕಚೇರಿಗಳ ಎಲ್ಲಾ ಕೆಲಸಗಾರರಿಗೆ ಮಲ್ಟಿಮೀಡಿಯಾದೊಂದಿಗೆ ಸಜ್ಜುಗೊಂಡಿರುವ ಡೆಸ್ಕ್‌ಟಾಪ್‌ PCಗಳನ್ನು ಒದಗಿಸಲಾಯಿತು.

ಧ್ವನಿಯಲ್ಲಿ ದಿಢೀರ್‌ ಸಂದೇಶ ರವಾನೆ : ಪಠ್ಯ ಸಂದೇಶ ರವಾನೆಯನ್ನು ಕೇವಲ ಅಸಮಕಾಲಿಕವಾಗಿ ಶೇಖರಿಸಿ ಒಂದು ಅಂಚೆಪೆಟ್ಟಿಗೆಯೊಳಗೆ ಮುಂದಕ್ಕೆ ರವಾನಿಸುವ ವಿತರಣಾ ವಸ್ತುವಾಗಿಸುವುದಕ್ಕೆ ಬದಲಾಗಿ ಅದನ್ನು ನಿಜಾವಧಿಯ ರವಾನೆಯನ್ನಾಗಿಸುವುದು ಸಂದೇಶ ರವಾನೆಯಲ್ಲಿನ ಮುಂದಿನ ಅಭಿವೃದ್ಧಿಯಾಗಿತ್ತು. ಅಂತರಜಾಲ ಸೇವಾದಾರನಾದ ಅಮೆರಿಕಾ ಆನ್‌ಲೈನ್‌ (AOL) ಜೊತೆಯಲ್ಲಿ, ಅಂತರಜಾಲ-ಆಧರಿತವಾದ, ಪಠ್ಯವನ್ನು ಬಳಸಿಕೊಳ್ಳುವ, ಉಚಿತವಾಗಿ "ಹರಟುವ" ಒಂದು ಸಾರ್ವಜನಿಕ ಸೇವೆಯಾಗಿ ಇದು ಗ್ರಾಹಕರಿಗಾಗಿ ಆರಂಭಗೊಂಡಿತು; ಆದರೆ ಕೆಲವೇ ದಿನಗಳಲ್ಲಿ ವ್ಯವಹಾರಸ್ಥರೂ ಇದನ್ನು ಬಳಸಲು ಶುರುಮಾಡಿದರು. ಅಂತರಜಾಲ ನಿಯಮಾವಳಿಯ "ಉಪಸ್ಥಿತಿಯ ನಿರ್ವಹಣೆ"ಯ ಪರಿಕಲ್ಪನೆಯನ್ನು ಇದು ಪರಿಚಯಿಸಿತು. ಅಥವಾ ಇದನ್ನು ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ನಿಜಾವಧಿಯ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕಾಗಿ ಅಂತರಜಾಲಕ್ಕಿರುವ ಸಾಧನ ಸಂಬಂಧಶೀಲತೆಯನ್ನು ಪತ್ತೆಮಾಡುವುದಕ್ಕೆ ಮತ್ತು ಗ್ರಾಹಕರ "ಲಭ್ಯತೆ"ಯ ಸ್ಥಿತಿಗತಿಯನ್ನು ಸಂಪರ್ಕಿಸುವುದಕ್ಕೆ ಸಮರ್ಥವಾಗಿರುವ ಪರಿಕಲ್ಪನೆಯನ್ನು ಇದು ಪರಿಚಯಿಸಿತು. ಅಷ್ಟೇ ಅಲ್ಲ, ನಿಮಗಷ್ಟೇ ಗೊತ್ತಿರುವ ಜನರು ನಿಮ್ಮ ಸ್ಥಿತಿಗತಿಯನ್ನು ಕಂಡುಕೊಳ್ಳುವುದಕ್ಕೆ ಹಾಗೂ ನಿಮ್ಮೊಂದಿಗೆ ಒಂದು ನಿಜಾವಧಿ ಪಠ್ಯ ಸಂದೇಶ ರವಾನೆಯ ವಿನಿಮಯಕ್ಕೆ ಚಾಲನೆನೀಡುವುದಕ್ಕೆ ಅವಕಾಶ ಕಲ್ಪಿಸಿಕೊಡಲು ವ್ಯಕ್ತಿವಿಶಿಷ್ಟವಾಗಿಸಿದ "ಆತ್ಮೀಯರ ಪಟ್ಟಿ" ಮಾರ್ಗದರ್ಶಿಕೆಗಳನ್ನು ಒದಗಿಸುವುದು ಕೂಡಾ ಇದರ ಪರಿಕಲ್ಪನೆಯಾಗಿತ್ತು. ಅಲ್ಲಿಂದೀಚೆಗೆ ಉಪಸ್ಥಿತಿ ಮತ್ತು ದಿಢೀರ್‌ ಸಂದೇಶ ರವಾನೆಯು ಮೊಟಕಾದ ಪಠ್ಯ ಸಂದೇಶಗಳಿಗಿಂತ ಹೆಚ್ಚಿನ ಮಟ್ಟಕ್ಕೆ ವಿಕಸನಗೊಂಡಿದೆಯಾದರೂ, ಈಗ ದತ್ತಾಂಶ ಕಡತಗಳ (ದಸ್ತಾವೇಜುಗಳು, ಚಿತ್ರಗಳು) ವಿನಿಮಯವನ್ನು ಹಾಗೂ ಸಂಪರ್ಕವನ್ನು ಒಂದು ಧ್ವನಿ ಸಂಭಾಷಣಾತ್ಮಕ ಸಂಪರ್ಕವಾಗಿ ವರ್ಧನೆ ಮಾಡುವುದನ್ನೂ ಇದೀಗ ಒಳಗೊಳ್ಳಬಲ್ಲದು.

ಸಂಚಾರಿ ಸಾಧನಗಳು

ಬದಲಾಯಿಸಿ

ಮೂಲತಃ ಸೆಲ್ಯುಲರ್‌ ಸೇವೆಗಳ ಮೂಲಕ ಹಾಗೂ ಇಂದು IP-ಆಧರಿತ ವೈ-ಫೈ ಮೂಲಕ ನಿಸ್ತಂತು ಚಲನಶೀಲತೆಯಲ್ಲಿ ಕಂಡುಬಂದಿರುವ ಹೆಚ್ಚಳವು ಕೂಡಾ ಸಂಚಾರಿ ದೂರವಾಣಿ ವ್ಯವಸ್ಥೆಯೊಂದಿಗೆ ಸಂದೇಶ ರವಾನೆಯ ಒಮ್ಮುಖವಾಗುವಿಕೆಗೆ ಒಂದು ಪ್ರೇರಕವಾಗಿತ್ತು. ಇಂದು ಇದು ಸಂದೇಶ ನಿರ್ವಹಣೆಗೆ ಸಂಬಂಧಿಸಿದ ಮಾತಿನ ಬಳಕೆದಾರ ಇಂಟರ್‌ಫೇಸ್‌ಗಳ ಬಳಕೆಯನ್ನು ಪೋಷಿಸುತ್ತಿರುವುದು ಮಾತ್ರವಲ್ಲದೆ, ಇ-ಮೇಲ್‌ನೊಂದಿಗೆ ಸಂಯೋಜಿತವಾಗಿರುವ ಧ್ವನಿ ಸಂದೇಶಗಳ ಮರುಗಳಿಕೆಗೆ ಸಂಬಂಧಿಸಿದ ಬೇಡಿಕೆಯನ್ನೂ ಹೆಚ್ಚಿಸುತ್ತಿದೆ. ಧ್ವನಿ ಮತ್ತು ಇ-ಮೇಲ್‌ ಸಂದೇಶಗಳಿಗೆರಡಕ್ಕೂ ಪಠ್ಯಕ್ಕೆ ಬದಲಾಗಿ ಜನರು ಧ್ವನಿಯಲ್ಲಿ ಜವಾಬುನೀಡುವುದಕ್ಕೂ ಇದು ಅನುವು ಮಾಡಿಕೊಡುತ್ತಿದೆ. ಗಾಟ್‌ವಾಯ್ಸ್‌, ಸ್ಪಿನ್‌ವಾಕ್ಸ್‌ ಮತ್ತು ಯೂಮೇಲ್‌‌ನಂಥ ಹೊಸ ಸೇವೆಗಳು, ಧ್ವನಿಯಂಚೆಗಳನ್ನು SMS ಪಠ್ಯ ಸಂದೇಶಗಳಾಗಿ ಸಂಚಾರಿ ದೂರವಾಣಿಗಳಿಗೆ ವಿತರಿಸುವ ಮೂಲಕ ಧ್ವನಿಯಂಚೆ ಮತ್ತು ಪಠ್ಯದ ನಡುವಿನ ಎಲ್ಲೆಗೆರೆಗಳನ್ನು ಮಸುಕಾಗಿಸುವುದಕ್ಕೆ ನೆರವಾಗುತ್ತಿವೆ.

VoIPಯೊಂದಿಗಿನ ಏಕೀಕೃತ ಸಂದೇಶ ರವಾನೆ

ಬದಲಾಯಿಸಿ

ವಾಯ್ಸ್‌ ಓವರ್‌ IP ವ್ಯವಸ್ಥೆಯ (VoIP — ಅಂತರಜಾಲದ ಮೂಲಕ ಪ್ರಸರಣಗೊಳ್ಳುತ್ತಿರುವ ಧ್ವನಿ) ಉದಯವಾಗುವ ತನಕ ಮತ್ತು ಪರಂಪರಾನುಗತವಾದ PBX ದೂರವಾಣಿ ವ್ಯವಸ್ಥೆಯನ್ನು ಬದಲಾಯಿಸಲೆಂದು IP ದೂರವಾಣಿ ವ್ಯವಸ್ಥೆಯ ಅನ್ವಯಗಳ (ಇವನ್ನು TDM ತಂತ್ರಜ್ಞಾನಗಳು ಎಂದು ಕರೆಯಲಾಯಿತು) ಅಭಿವೃದ್ಧಿಯಾಗುವ ತನಕ ಸಾಂಸ್ಥಿಕ ಧ್ವನಿಯಂಚೆಯಲ್ಲಿ ಹೆಚ್ಚಿನದೇನೂ ಬದಲಾವಣೆಗಳಾಗಲಿಲ್ಲ. IP (ಅಂತರಜಾಲ ನಿಯಮಾವಳಿ) ದೂರವಾಣಿ ವ್ಯವಸ್ಥೆಯು PBXಗಳ ಶೈಲಿ ಮತ್ತು ತಂತ್ರಜ್ಞಾನವನ್ನು ಹಾಗೂ ಅವುಗಳೊಂದಿಗೆ ಧ್ವನಿಯಂಚೆ ವ್ಯವಸ್ಥೆಗಳು ಸಂಯೋಜಿತವಾಗುವ ವಿಧಾನವನ್ನು ಬದಲಾಯಿಸಿತು. ಪ್ರತಿಯಾಗಿ ಇದು ಏಕೀಕೃತ ಸಂದೇಶ ರವಾನೆಯ ಒಂದು ಹೊಸ ಪೀಳಿಗೆಯನ್ನು ಅನುವುಗೊಳಿಸಿತು ಮತ್ತು ಅದೀಗ ವ್ಯಾಪಕವಾಗಿ ಜನಪ್ರಿಯವಾಗುವ ಸಾಧ್ಯತೆಗಳಿವೆ. ಸಂದೇಶ ರವಾನೆಯ ಒಮ್ಮುಖವಾಗುವಿಕೆಗೆ ಸಂಬಂಧಿಸಿದ ಸಂದರ್ಭಕ್ಕೆ ಹೊಂದಿಕೊಳ್ಳುವಿಕೆ, ನಿರ್ವಹಣಾ-ಸಾಮರ್ಥ್ಯ, ಕಡಿಮೆ ಮಟ್ಟದ ವೆಚ್ಚಗಳು, ವಿಶ್ವಾಸಾರ್ಹತೆ, ವೇಗ, ಮತ್ತು ಬಳಕೆದಾರರ ಅನುಕೂಲ ಇವೆಲ್ಲವೂ ಈಗ ಸಾಧ್ಯವಿದೆ. ಹಿಂದೆಲ್ಲಾ ಇವು ಲಭ್ಯವಿರಲಿಲ್ಲ ಎಂಬುದನ್ನಿಲ್ಲಿ ಗಮನಿಸಬೇಕು. ಉದ್ಯಮಗಳ ನಡುವಿನ ಸಂಪರ್ಕಗಳು ಮತ್ತು ಉದ್ಯಮದೊಳಗಿನ ಸಂಪರ್ಕಗಳು, ಸಂಚಾರಿ ಸಂಪರ್ಕಗಳು, ಪೂರ್ವನಿಯಾಮಕ ಅನ್ವಯದ ಮಾಹಿತಿ ವಿತರಣೆ, ಮತ್ತು ಗ್ರಾಹಕ ಸಂಪರ್ಕ ಅನ್ವಯಗಳನ್ನು ಇದು ಒಳಗೊಂಡಿರಲು ಸಾಧ್ಯವಿದೆ.

ಸಾಂಸ್ಥಿಕ IP ದೂರವಾಣಿ ವ್ಯವಸ್ಥೆ-ಆಧರಿತ ಧ್ವನಿಯಂಚೆ CPE ಮಾರುಕಟ್ಟೆಯಲ್ಲಿ ಹಲವಾರು ಮಾರಾಟಗಾರ ಕಂಪನಿಗಳು ಸೇವೆ ಸಲ್ಲಿಸುತ್ತಿವೆ. ಅವುಗಳೆಂದರೆ: ಅವಯಾ, ಸಿಸ್ಕೊ ಸಿಸ್ಟಮ್ಸ್‌, ಅಡೊಮೊ, ಇಂಟರಾಕ್ಟಿವ್‌ ಇಂಟೆಲಿಜೆನ್ಸ್‌[೧] Archived 2019-02-22 ವೇಬ್ಯಾಕ್ ಮೆಷಿನ್ ನಲ್ಲಿ., ನೋರ್ಟೆಲ್‌, ಮೈಟೆಲ್‌, ೩ಕಾಮ್‌, ಮತ್ತು AVST.[] ಒಮ್ಮುಖವಾಗಿಸುವ IP-ಆಧರಿತ ದೂರಸಂಪರ್ಕ ವ್ಯವಸ್ಥೆಗಳ ಕಡೆಗೆ ಉದ್ಯಮಗಳು ವಲಸೆಹೋಗುವುದರಿಂದ, ವೈವಿಧ್ಯಮಯವಾಗಿರುವ ಪರಂಪರಾನುಗತ PBXಗಳು ಮತ್ತು ಹೊಸ ವಾಯ್ಸ್‌ ಓವರ್‌ IPಗಳನ್ನು ಬೆಂಬಲಿಸುವ ಅಗತ್ಯವನ್ನು ಅವುಗಳ ಮಾರಾಟಗಾರಿಕೆಯ ಕಾರ್ಯತಂತ್ರವು ನಿಭಾಯಿಸಬೇಕಾಗಿದೆ. ಇದೇ ರೀತಿಯ ಒಂದು ಸನ್ನಿವೇಶವು ಧ್ವನಿಯಂಚೆ ಸರ್ವರ್‌ಗಳಿಗೆ ಸಂಬಂಧಿಸಿರುವ ವಾಹಕ ಮಾರುಕಟ್ಟೆಯಲ್ಲೂ ಕಂಡುಬರುತ್ತದೆ. ಈ ಮಾರುಕಟ್ಟೆಯಲ್ಲಿ ಪ್ರಸಕ್ತವಾಗಿ ಕಾಮ್‌ವರ್ಸ್‌ ಟೆಕ್ನಾಲಜಿ ಕಂಪನಿಯ ಪ್ರಾಬಲ್ಯತೆಯಿದ್ದರೆ, ಲ್ಯೂಸೆಂಟ್‌ ಟೆಕ್ನಾಲಜೀಸ್‌ ಕಂಪನಿಯು ಈಗಲೂ ಒಂದಷ್ಟು ಪಾಲನ್ನು ಹೊಂದಿದೆ.

ಸಾಂಸ್ಥಿಕ (ಉದ್ಯಮ) ಗ್ರಾಹಕರಿಗೆ ಸಂಬಂಧಿಸಿದಂತೆ ದೂರದ ಆಡಳಿತ ಮತ್ತು ಬಳಕೆಯ ನಿರ್ವಹಣೆಯನ್ನು ಹೊಂದಿರುವ ಕೇಂದ್ರೀಕೃತವಾದ, ಹಂಚಿಕೊಳ್ಳಲ್ಪಟ್ಟಿರುವ ಸರ್ವರ್‌ಗಳನ್ನು VoIP ದೂರವಾಣಿ ವ್ಯವಸ್ಥೆಯು ಸಮರ್ಥವಾಗಿಸುತ್ತದೆ. ಹಿಂದಿನ ನಿದರ್ಶನಗಳಲ್ಲಿ, ವಾಹಕಗಳು ಈ ವ್ಯವಹಾರವನ್ನು ಕಳೆದುಕೊಂಡಿದ್ದವು; ಏಕೆಂದರೆ ಇದು ತೀರಾ ದುಬಾರಿಯಾಗಿತ್ತು ಮತ್ತು ದೂರವಾಣಿ ಕಂಪನಿಯಿಂದ ನಿರ್ವಹಿಸಲ್ಪಡುವ ದೂರದ ಸೌಕರ್ಯಗಳಿಗೆ ಇವು ಹೊಂದಿಕೊಳ್ಳುತ್ತಿರಲಿಲ್ಲ. VoIP ಬಳಕೆಯೊಂದಿಗೆ, ದೂರದ ಆಡಳಿತವು ಹೆಚ್ಚು ಮಿತವ್ಯಯಕಾರಿಯಾಗಿದೆ. IP-PBX ಮತ್ತು ಧ್ವನಿಯಂಚೆ ಸೇವೆಗಳನ್ನು ಒಳಗೊಂಡಂತೆ, ಒಮ್ಮುಖವಾಗಿಸಿದ IP ದೂರಸಂಪರ್ಕದ ಎಲ್ಲಾ ಸ್ವರೂಪಗಳಿಗೆ ಸಂಬಂಧಿಸಿದ ಆಯೋಜಿಸಲ್ಪಟ್ಟ, ಹಂಚಿಕೊಂಡ ಸೇವೆಗಳನ್ನು ನೀಡಲು ಈ ತಂತ್ರಜ್ಞಾನವು ವಾಹಕ ಕಂಪನಿಗಳಿಗಾಗಿ ಅವಕಾಶಗಳನ್ನು ಮತ್ತೆ-ತೆರೆದಿದೆ. ತಂತಿ-ಸಹಿತ ಮತ್ತು ನಿಸ್ತಂತು ಸಂವಹನೆಗಳ ಒಮ್ಮುಖವಾಗುವಿಕೆಯ ಕಾರಣದಿಂದಾಗಿ, ಒಂದು ವೈವಿಧ್ಯಮಯವಾದ ಬಹು-ಪ್ರಕಾರದ ಕೈಯಲ್ಲಿ-ಹಿಡಿವ ಮತ್ತು ಡೆಸ್ಕ್‌ಟಾಪ್‌ನ ಆಂತ್ಯಿಕ ಬಳಕೆದಾರ ಸಾಧನಗಳ ಬೆಂಬಲವನ್ನೂ ಇಂಥ ಸೇವೆಗಳು ಒಳಗೊಳ್ಳಬಹುದು. ಈ ಸೇವೆಯನ್ನು ಅನೇಕ ವಿಸ್ತರಣೆಗಳು ಅಥವಾ ದೂರವಾಣಿ ಸಂಖ್ಯೆಗಳಿಗೆ ನೀಡಿದಾಗ, ಒಗ್ಗೂಡಿಸಿದ ಧ್ವನಿಯಂಚೆ ಎಂದೂ ಸಹ ಅದನ್ನು ಕೆಲವೊಮ್ಮೆ ಕರೆಯಲಾಗುತ್ತದೆ.

ವ್ಯವಹಾರ ದಕ್ಷತೆ

ಬದಲಾಯಿಸಿ

ಸ್ವಾಭಾವಿಕ ಧ್ವನಿಯಲ್ಲಿ ದೀರ್ಘವಾದ, ಸುರಕ್ಷಿತವಾದ ಮತ್ತು ವಿಸ್ತೃತವಾದ ಸಂದೇಶಗಳನ್ನು ಬಿಡುವುದಕ್ಕೆ ಧ್ವನಿ ಅಂಚೆಯ ಪರಿಚಯವು ಜನರಿಗೆ ಅನುವುಮಾಡಿಕೊಟ್ಟಿದೆ ಹಾಗೂ ತನ್ಮೂಲಕ ಸಾಂಸ್ಥಿಕ ದೂರವಾಣಿ ವ್ಯವಸ್ಥೆಗಳೊಂದಿಗೆ ಜೊತೆಜೊತೆಯಾಗಿ ಕೆಲಸ ಮಾಡುತ್ತಿದೆ. ಸಂಸ್ಥೆಗಳಲ್ಲಿ ಧ್ವನಿಯಂಚೆಯ ಪರಿಗ್ರಹಣ ಮಾಡಿದ ಕಾರಣದಿಂದಾಗಿ ಸಂವಹನೆಗಳ ಹರಿವು ಸುಧಾರಿಸಿದೆ ಮತ್ತು ಬೃಹತ್‌ ಪ್ರಮಾಣಗಳಲ್ಲಿ ಹಣದ ಉಳಿತಾಯವಾಗಿದೆ. ವಿಶ್ವದೆಲ್ಲೆಡೆಯ ತನ್ನ ಎಲ್ಲಾ ಕಚೇರಿಗಳಲ್ಲಿ ಧ್ವನಿಯಂಚೆಯನ್ನು ಅಳವಡಿಸಿಕೊಂಡಿರುವ ಪಥನಿರ್ಮಾಪಕರ ಪೈಕಿ ಒಂದೆನಿಸಿರುವ GEಯು ಸಮರ್ಥಿಸುವ ಪ್ರಕಾರ, ಧ್ವನಿಯಂಚೆಯ ವ್ಯವಸ್ಥೆಯು ಸರಾಸರಿಯಾಗಿ ಪ್ರತಿ ಉದ್ಯೋಗಿಗೆ ಪ್ರತಿ ವರ್ಷಕ್ಕೆ ೧,೧೦೦ US$ಗೂ ಹೆಚ್ಚಿನ ಹಣವನ್ನು ಉಳಿಸುತ್ತದೆ.

ಧ್ವನಿಯಂಚೆಯು ಎರಡು ಮುಖ್ಯ ಕಾರ್ಯಾಚರಣಾ ವಿಧಾನಗಳನ್ನು ಹೊಂದಿದೆ. ಅವುಗಳೆಂದರೆ: ದೂರವಾಣಿಗೆ ಉತ್ತರಿಸುವಿಕೆ ಮತ್ತು ಧ್ವನಿ ಸಂದೇಶವನ್ನು ರವಾನಿಸುವಿಕೆ . ದೂರವಾಣಿಗೆ ಉತ್ತರಿಸುವ ವಿಧಾನವು ಹೊರಗಿನ ಕರೆಗಳಿಗೆ ಉತ್ತರಿಸುತ್ತದೆ ಮತ್ತು ಹೊರಗಿನ ಯಾವುದೇ ಕರೆ ಮಾಡುವವನಿಂದ ಒಂದು ಸಂದೇಶವನ್ನು ತೆಗೆದುಕೊಳ್ಳುತ್ತದೆ (ಇದಕ್ಕೆ ವಿಸ್ತರಣಾ-ಸಂಖ್ಯೆಯು ಕಾರ್ಯನಿರತವಾಗಿದ್ದುದು ಕಾರಣವಾಗಿರಬಹುದು ಅಥವಾ ಯಾವುದೇ-ಉತ್ತರವಿಲ್ಲ ಎಂಬ ಸೂಚನೆ ಬಂದಿದ್ದು ಕಾರಣವಾಗಿರಬಹುದು). ಯಾವುದೇ ಚಂದಾದಾರನು (ಒಂದು ಅಂಚೆಪೆಟ್ಟಿಗೆ ಸಂಖ್ಯೆಯನ್ನು ಹೊಂದಿರುವ ಓರ್ವ ವ್ಯಕ್ತಿ) ಯಾವುದೇ ಚಂದಾದಾರನ ಅಥವಾ ಅನೇಕ ಚಂದಾದಾರರ ಅಂಚೆ-ಪೆಟ್ಟಿಗೆಗಳಿಗೆ, ಮೊದಲಿಗೆ ಅವರಿಗೆ ಕರೆಮಾಡದೆಯೇ ಸಂದೇಶಗಳನ್ನು ನೇರವಾಗಿ ಕಳಿಸುವುದಕ್ಕೆ ಧ್ವನಿ ಸಂದೇಶ ರವಾನೆ ವ್ಯವಸ್ಥೆಯು ನೆರವಾಗುತ್ತದೆ. ಈ ಎರಡೂ ವಿಧಾನಗಳನ್ನು ಕೆಳಗೆ ವಿವರಿಸಲಾಗಿದೆ.

ದೂರವಾಣಿಗೆ ಉತ್ತರಿಸುವ ವಿಧಾನ

ಬದಲಾಯಿಸಿ

ಕರೆಗಳನ್ನು ಮುಂದಕ್ಕೆ ರವಾನಿಸುವ ಸಾಮರ್ಥ್ಯವನ್ನು ಹೊಂದಿರುವುದು PBX ಒಂದರ ಅನುಕೂಲಗಳ ಪೈಕಿ ಒಂದಾಗಿದೆ. ಒಂದು ವೇಳೆ ವ್ಯಕ್ತಿಯೊಬ್ಬ ತನ್ನ ದೂರವಾಣಿಯನ್ನು ಬಳಸುತ್ತಿದ್ದರೆ ಅಥವಾ ಕರೆಗಳಿಗೆ ಉತ್ತರಿಸದಿದ್ದರೆ, ಅವನ ವಿಸ್ತರಣಾ-ಸಂಖ್ಯೆಗೆ ಬಂದ ಕರೆಗಳನ್ನು PBX ಮತ್ತೊಂದು ವಿಸ್ತರಣಾ-ಸಂಖ್ಯೆಗೆ ಸ್ವಯಂಚಾಲಿತವಾಗಿ ಮುಂದಕ್ಕೆ ರವಾನಿಸುತ್ತದೆ. ಇದು ಸಂಭಾವ್ಯವಾಗಿ ಸದರಿ ಕರೆಗೆ ಉತ್ತರ ನೀಡಬಲ್ಲ ಮತ್ತು ಸಂದೇಶವನ್ನು ತೆಗೆದುಕೊಳ್ಳಬಲ್ಲ ಓರ್ವ ವ್ಯಕ್ತಿ (ಓರ್ವ ಕಾರ್ಯದರ್ಶಿಯ ರೀತಿಯಲ್ಲಿ) ಆಗಿರುತ್ತಾರೆ. ಧ್ವನಿಯಂಚೆ ವ್ಯವಸ್ಥೆಯೊಂದು ಅಳವಡಿಸಲ್ಪಡುವುದರೊಂದಿಗೆ, ಕಾರ್ಯನಿರತ ಅಥವಾ ಉತ್ತರಿಸಲ್ಪಡದ ವಿಸ್ತರಣಾ-ಸಂಖ್ಯೆಗಳನ್ನು ಒಂದು ಯಂತ್ರವಾದ ಧ್ವನಿಯಂಚೆ ವ್ಯವಸ್ಥೆಗೆ ಮುಂದಕ್ಕೆ ರವಾನಿಸುವಂತೆ PBXನ್ನು ಸಜ್ಜುಗೊಳಿಸಲಾಗಿರುತ್ತದೆ.

ಹೊರಗಿನ ಕರೆದಾರನಾದ ವಿಲ್ಮಾ ಎಂಬಾತ ಕಂಪನಿಯೊಂದರಲ್ಲಿ ಫ್ರೆಡ್ ಎಂಬ ವ್ಯಕ್ತಿಯನ್ನು ಕರೆಯುತ್ತಾನೆ ಎಂದು ಭಾವಿಸೋಣ. ಒಂದು ವೇಳೆ "ಏನೂ ಉತ್ತರವಿಲ್ಲ" ಅಥವಾ "ಕಾರ್ಯನಿರತವಾಗಿದೆ" ಎಂಬಂಥ ಸೂಚನೆಗಳನ್ನು ಫ್ರೆಡ್‌‌ನ ದೂರವಾಣಿಯು ಧ್ವನಿಸಿದರೆ, ಸದರಿ ಕರೆಯನ್ನು PBX ಧ್ವನಿಯಂಚೆ ವ್ಯವಸ್ಥೆಗೆ ಮುಂದಕ್ಕೆ ರವಾನಿಸುತ್ತದೆ. ಮುಂದಕ್ಕೆ ರವಾನಿಸಲ್ಪಟ್ಟಿರುವ ಕರೆಯು ಫ್ರೆಡ್‌‌ನ ದೂರವಾಣಿಗೆ ಬಂದಿರುವ ಕರೆಯಾಗಿದ್ದು, ಧ್ವನಿಯಂಚೆ ವ್ಯವಸ್ಥೆಯು ಫ್ರೆಡ್‌‌ನ ವೈಯಕ್ತಿಕ ಕುಶಲೋಪರಿಯೊಂದಿಗೆ ಉತ್ತರ ಹೇಳುವಂತಾಗಬೇಕು ಎಂಬುದನ್ನು PBX ಧ್ವನಿಯಂಚೆ ವ್ಯವಸ್ಥೆಗೆ ಹೇಳಬೇಕಾದ ಅಗತ್ಯ ಕಂಡುಬರುತ್ತದೆ. ಈ ಮಾಹಿತಿಯಿಲ್ಲದಿದ್ದರೆ, ತಾನು ಯಾರ ದೂರವಾಣಿಗೆ ಉತ್ತರಿಸುತ್ತಿರುವುದು ಎಂಬ ಕಲ್ಪನೆಯನ್ನು ಧ್ವನಿಯಂಚೆ ವ್ಯವಸ್ಥೆಯು ಹೊಂದಲು ಸಾಧ್ಯವಾಗುವುದಿಲ್ಲ. ಸಂದೇಶವೊಂದು ಒಮ್ಮೆಗೆ ಬಿಡಲ್ಪಟ್ಟಿತೆಂದರೆ, ಫ್ರೆಡ್‌‌ನ ದೂರವಾಣಿಯ ಮೇಲೆ ಧ್ವನಿಯಂಚೆ ವ್ಯವಸ್ಥೆಯು ಸಂದೇಶ ಕಾಯುವ ದೀಪವನ್ನು ಬೆಳಗಿಸುತ್ತದೆ. ಯಾವ ದೀಪವನ್ನು ಬೆಳಗಿಸಬೇಕು ಎಂಬುದನ್ನು PBXಗೆ ಹೇಳುವುದಕ್ಕೆ ಅದಕ್ಕೆ ಒಂದು ಸಂಕೇತವನ್ನು ಕಳಿಸುವ ಮೂಲಕ ಈ ಕಾರ್ಯವನ್ನು ಅದು ಮಾಡುತ್ತದೆ. ಫ್ರೆಡ್‌‌ ತನ್ನ ಮೇಜಿಗೆ ಹಿಂದಿರುಗಿ ಧ್ವನಿಯಂಚೆ ವ್ಯವಸ್ಥೆಯನ್ನು ಕರೆದಾಗ (ಅಥವಾ ದೂರದಲ್ಲಿದ್ದುಕೊಂಡು ಕರೆದಾಗ), ಅವನ ವೈಯಕ್ತಿಕ ಅಂಚೆಪೆಟ್ಟಿಗೆಯಲ್ಲಿನ ಸಂದೇಶಗಳನ್ನಷ್ಟೇ ಅವನಿಗೆ ಸಾದರಪಡಿಸಲಾಗುತ್ತದೆ; ಇತರ ಜನರಿಗೆ ಸಂಬಂಧಪಟ್ಟಿರುವ ಸಾವಿರಾರು ಸಂದೇಶಗಳು ಅದೇ ಯಂತ್ರ-ವ್ಯವಸ್ಥೆಯಲ್ಲಿ ಶೇಖರಿಸಲ್ಪಟ್ಟಿರುತ್ತವೆಯಾದರೂ, ಫ್ರೆಡ್‌ಗೆ ಸಂಬಂಧಿಸಿದ ಸಂದೇಶಗಳನ್ನಷ್ಟೇ ಅವನಿಗೆ ಸಾದರಪಡಿಸಲಾಗುತ್ತದೆ ಎಂಬುದು ಇಲ್ಲಿನ ವಿಶೇಷ. ಸಂದೇಶಗಳು ಒಮ್ಮೆಗೆ ಚಾಲಿಸಲ್ಪಟ್ಟವೆಂದರೆ, ಫ್ರೆಡ್‌‌ನ ದೂರವಾಣಿ ಸಾಧನದ ಮೇಲಿನ ಸಂದೇಶ ಕಾಯುವ ದೀಪವನ್ನು ಆರಿಸುವಂತೆ ಧ್ವನಿಯಂಚೆ ವ್ಯವಸ್ಥೆಯು PBXಗೆ ಸಂಕೇತಿಸುತ್ತದೆ.

ಹಿಂದಿನ ಧ್ವನಿಯಂಚೆ ವ್ಯವಸ್ಥೆಗಳು (ಅದರಲ್ಲೂ ಗಮನಾರ್ಹವಾಗಿ IBM ಮತ್ತು VMX ವತಿಯಿಂದ ನಿರ್ಮಿಸಲ್ಪಟ್ಟಂಥವು) ಹೊರಗಿನ ಕರೆಗಳಿಗೆ ಉತ್ತರಿಸುವಷ್ಟು ಸಮರ್ಥವಾಗಿರಲಿಲ್ಲ- ಅಂದರೆ, 'ಕಾರ್ಯನಿರತವಾಗಿದೆ' ಅಥವಾ 'ಏನೂ ಉತ್ತರವಿಲ್ಲ' ಎಂಬುದಾಗಿ ಧ್ವನಿ-ಸೂಚನೆಗಳನ್ನು ನೀಡಿದ PBX ಮೇಲಿನ ವಿಸ್ತರಣಾ-ಸಂಖ್ಯೆಯೊಂದಕ್ಕೆ ಮೂಲತಃ ಉದ್ದೇಶಿಸಿ ತೆಗೆದಿಟ್ಟ ಕರೆಯೊಂದಕ್ಕೆ ಅವು ಸ್ವಯಂಚಾಲಿತವಾಗಿ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿರಲಿಲ್ಲ. ತರುವಾಯದ ಧ್ವನಿಯಂಚೆ ವ್ಯವಸ್ಥೆಗಳು (ಅದರಲ್ಲೂ ಗಮನಾರ್ಹವಾಗಿ ROLM ಮತ್ತು ಆಕ್ಟೆಲ್‌ನ ಯಂತ್ರ-ವ್ಯವಸ್ಥೆಗಳು) ಹೊರಹೊಮ್ಮುತ್ತಿದ್ದಂತೆ, ಹೊರಗಿನ ಕರೆಗಳಿಗೆ ವ್ಯವಸ್ಥೆಗಳು ಉತ್ತರ ನೀಡುವಷ್ಟು ಸಮರ್ಥವಾದವು. ಆದಾಗ್ಯೂ, ಯಾವ ವಿಸ್ತರಣಾ-ಸಂಖ್ಯೆಯನ್ನು ತಾನು ಮುಂದಕ್ಕೆ ರವಾನಿಸುತ್ತಿರುವುದಾಗಿ ಧ್ವನಿಯಂಚೆ ವ್ಯವಸ್ಥೆಗೆ ಹೇಳುವಂಥ ಸಂಕೇತಸೇವೆಯನ್ನು ಬಹುತೇಕ PBXಗಳು ಒದಗಿಸಲಿಲ್ಲ, ಅಥವಾ ಸಂದೇಶ ಕಾಯುವ ದೀಪಗಳೊಂದಿಗೆ ಅವು ದೂರವಾಣಿ ಸಾಧನಗಳನ್ನು ಬೆಂಬಲಿಸಲಿಲ್ಲ. ಈ ಬಗೆಯ ಸಂಕೇತಸೇವೆಯು ನಂತರದಲ್ಲಿ ಬಂದಿತಾದರೂ, ಅಲ್ಲಿಯ ತನಕ ಅನೇಕ ವರ್ಷಗಳವರೆಗೆ ಇದು ಧ್ವನಿಯಂಚೆ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಒಂದು ಪ್ರಮುಖ ಸವಾಲನ್ನು ಸೃಷ್ಟಿಸಿತು.

ವ್ಯವಸ್ಥೆಗಳ ನಡುವಿನ ಅಂತರ-ಚಾಲನಸಾದ್ಯತೆ

ಬದಲಾಯಿಸಿ

ಧ್ವನಿ ಸಂದೇಶ ರವಾನೆ ಎಂಬುದು ಒಂದೇ ಧ್ವನಿಯಂಚೆ ವ್ಯವಸ್ಥೆಯ ವ್ಯಾಪ್ತಿಯಲ್ಲಿರುವ ವ್ಯಕ್ತಿಗಳು ನಡುವೆ ಯಾವಾಗಲೂ ಕಳಿಸಲ್ಪಡಬೇಕು ಎಂದೇನೂ ಇಲ್ಲ. AMIS (ಆಡಿಯೋ ಮೆಸೇಜಿಂಗ್‌ ಇಂಟರ್‌ಚೇಂಜ್‌ ಸ್ಪೆಸಿಫಿಕೇಷನ್‌) ಅಥವಾ VOIP (ವಾಯ್ಸ್‌ ಓವರ್‌ ಇಂಟರ್‌ನೆಟ್‌ ಪ್ರೋಟೋಕಾಲ್‌) ತಂತ್ರಜ್ಞಾನಗಳನ್ನು ಬಳಸಿಕೊಂಡು ಸಂದೇಶಗಳನ್ನು ವರ್ಗಾಯಿಸಲು ಸಾಧ್ಯವಿದೆ; ಒಂದು ಗಣಕಯಂತ್ರ ವ್ಯವಸ್ಥೆಯಲ್ಲಿರುವ ಸಂದೇಶಗಳು ಉದ್ದೇಶಿತ ಯಂತ್ರ-ವ್ಯವಸ್ಥೆಗೆ ಮುಂದಕ್ಕೆ ರವಾನಿಸಲ್ಪಡುವುದಕ್ಕೆ ಎರಡೂ ತಂತ್ರಜ್ಞಾನಗಳು ಅವಕಾಶ ನೀಡುತ್ತವೆ. ಧ್ವನಿ ಸಂದೇಶಗಳನ್ನು ವಿತರಿಸುವ ಈ ವಿಧಾನವು ಇ-ಮೇಲ್ ರೀತಿಯಲ್ಲಿಯೇ ಕಳಪೆವಸ್ತು ಅಥವಾ ವಿಶಿಂಗ್‌‌‌ನಂಥ ದುರುಪಯೋಗಕ್ಕೆ ಈಡಾಗಬಹುದು. ಈ ಬಗೆಯ ದುರುಪಯೋಗಳನ್ನು ನಿಗ್ರಹಿಸಲೆಂದೇ ಒಕ್ಕೂಟದ ಮತ್ತು ಸಂಸ್ಥಾನದ ಕಾನೂನುಗಳು ಮತ್ತು ಕಟ್ಟಳೆಗಳು ವಿನ್ಯಾಸಗೊಳಿಸಲ್ಪಟ್ಟಿದ್ದು, ಯುನೈಟೆಡ್‌ ಸ್ಟೇಟ್ಸ್‌ ನ್ಯಾಷನಲ್‌ ಡು ನಾಟ್‌ ಕಾಲ್‌ ರಿಜಿಸ್ಟ್ರಿ ಎಂಬ ಕಟ್ಟಳೆಯು ಈ ವ್ಯಾಪ್ತಿಗೆ ಸೇರುತ್ತದೆ.

ಧ್ವನಿಯಂಚೆ ವ್ಯವಸ್ಥೆಗಳು ಹೇಗೆ ಕೆಲಸ ಮಾಡುತ್ತವೆ?

ಬದಲಾಯಿಸಿ

ಮೂಲ ಶೈಲಿಯನ್ನು ಹೊಂದಿರುವ, ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಧ್ವನಿಯಂಚೆ ವ್ಯವಸ್ಥೆಯು ಒಂದು ಸಾಂಸ್ಥಿಕ PBXನ ಜೊತೆಗೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಈ ವಿಭಾಗವು ವಿವರಿಸುತ್ತದೆ. ಇದರ ಹಿಂದಿರುವ ಮೂಲಭೂತ ತತ್ತ್ವವು ಸೆಂಟ್ರಲ್‌ ಆಫೀಸ್‌ ಸ್ವಿಚಸ್‌ (CO ಸ್ವಿಚಸ್‌) ಅಥವಾ ಮೊಬೈಲ್‌ ಟೆಲಿಫೋನ್‌ ಸ್ವಿಚಿಂಗ್‌ ಆಫೀಸ್‌ (MTSOಗಳು) ಹೊಂದಿರುವ ತತ್ತ್ವವನ್ನೇ ಹೋಲುತ್ತದೆ. ಬಹುತೇಕ ಆಧುನಿಕ ಧ್ವನಿಯಂಚೆ ವ್ಯವಸ್ಥೆಗಳು ಇದೇ ಮೂಲಭೂತ ತತ್ತ್ವದ ಆಧಾರದ ಮೇಲೆಯೇ ಕೆಲಸ ಮಾಡುತ್ತವೆಯಾದರೂ, ಅದರ ಕೆಲವೊಂದು ಅಂಗಭಾಗಗಳನ್ನು ಇ-ಮೇಲ್‌ ವ್ಯವಸ್ಥೆಗಳಂಥ ಇತರ ವ್ಯವಸ್ಥೆಗಳೊಂದಿಗೆ ಹಂಚಿಕೊಳ್ಳಬೇಕಾಗಿ ಬರಬಹುದು.

ಈ ಕೆಳಕಂಡ ವಿವರದಲ್ಲಿ ತೋರಿಸಲಾದ ಹಲವಾರು ಅಂಶಗಳನ್ನು ಧ್ವನಿಯಂಚೆ ವ್ಯವಸ್ಥೆಗಳು ಒಳಗೊಂಡಿರುತ್ತವೆ:

  • ಒಂದು ಕೇಂದ್ರ ಸಂಸ್ಕಾರಕ (CPU): ಒಂದು ಧ್ವನಿಯಂಚೆ ವ್ಯವಸ್ಥೆಯ ನೋಟ ಮತ್ತು ಅನುಭೂತಿಯನ್ನು ವ್ಯವಸ್ಥೆಗೆ ನೀಡುವಂಥ ಕಾರ್ಯಾಚರಣೆ ವ್ಯವಸ್ಥೆ ಮತ್ತು ಒಂದು ಕಾರ್ಯಸೂಚಿಯನ್ನು (ತಂತ್ರಾಂಶ) ಇದು ಚಾಲಿಸುತ್ತದೆ. ಪೂರ್ವಭಾವಿಯಾಗಿ-ಧ್ವನಿಮುದ್ರಿತವಾಗಿರುವ ಸಾವಿರಾರು ಧ್ವನಿಸಂಕೇತಗಳನ್ನು ಈ ತಂತ್ರಾಂಶವು ಒಳಗೊಂಡಿರುತ್ತದೆ; ಸದರಿ ಧ್ವನಿಸಂಕೇತಗಳು ಯಂತ್ರ-ವ್ಯವಸ್ಥೆಯೊಂದಿಗೆ ತಾವು ಪರಸ್ಪರ ತೊಡಗಿಸಿಕೊಂಡಿವೆಯೇನೋ ಎಂಬ ರೀತಿಯಲ್ಲಿ ಬಳಕೆದಾರರ ಜೊತೆಯಲ್ಲಿ "ಮಾತನಾಡುತ್ತವೆ".
  • ಡಿಸ್ಕ್‌ ನಿಯಂತ್ರಕ ಮತ್ತು ಸಂದೇಶ ಶೇಖರಣೆಗೆ ಮೀಸಲಾದ ಬಹುವಿಧದ ಡಿಸ್ಕ್‌ ಡ್ರೈವ್‌ಗಳು;
  • ಯಂತ್ರ-ವ್ಯವಸ್ಥೆಯ ಡಿಸ್ಕ್‌ಗಳು: ಇವು ಮೇಲೆ ಉಲ್ಲೇಖಿಸಿದ ತಂತ್ರಾಂಶವನ್ನು ಮಾತ್ರವಲ್ಲದೇ ಪ್ರತಿಯೊಬ್ಬರ ಕುರಿತಾದ ಸಮಂಜಸವಾದ ದತ್ತಾಂಶದೊಂದಿಗಿನ (ಹೆಸರು, ವಿಸ್ತರಣಾ ಸಂಖ್ಯೆ, ಧ್ವನಿಯಂಚೆಯ ಆದ್ಯತೆಗಳು, ಮತ್ತು ಅವರಿಗೆ ಸಂಬಂಧಿಸಿದ ಸಂದೇಶದ ಡಿಸ್ಕ್‌ ಮೇಲೆ ಶೇಖರಿಸಲ್ಪಟ್ಟ ಸಂದೇಶಗಳೆಡೆಗೆ ಇರುವ ದಿಕ್ಸೂಚಕಗಳು) ಎಲ್ಲಾ ಬಳಕೆದಾರರ ಒಂದು ಸಂಪೂರ್ಣ ನಿರ್ದೇಶಿಕೆಯನ್ನು ಕೂಡಾ ಒಳಗೊಂಡಿರುತ್ತವೆ;
  • ದೂರವಾಣಿ ಇಂಟರ್‌ಫೇಸ್‌ ವ್ಯವಸ್ಥೆ: ಇದು ತನಗೆ ಸಂಪರ್ಕಿಸಬೇಕಿರುವ ಅನೇಕ ದೂರವಾಣಿ ಮಾರ್ಗಗಳಿಗೆ ಅನುವುಮಾಡಿಕೊಡುತ್ತದೆ.

ಚಿತ್ರ:Voice Mail Block Diagram.jpg

ಧ್ವನಿಯಂಚೆ ವ್ಯವಸ್ಥೆಯು PBXನೊಂದಿಗೆ ಹೇಗೆ ಪರಸ್ಪರ ತೊಡಗಿಸಿಕೊಳ್ಳುತ್ತದೆ ಎಂಬುದನ್ನು ಕೆಳಗಿನ ರೇಖಾಚಿತ್ರವು ತೋರಿಸುತ್ತದೆ. ಓರ್ವ ಹೊರಗಿನ ಕರೆಗಾರ ಫ್ರೆಡ್‌‌ನ ವಿಸ್ತರಣಾ ಸಂಖ್ಯೆ ೨೩೪೫ಕ್ಕೆ ಕರೆಮಾಡುತ್ತಿದ್ದಾನೆ ಎಂದು ಭಾವಿಸೋಣ. ಒಳಬರುವ ಕರೆಯು ಸಾರ್ವಜನಿಕ ಜಾಲದಿಂದ (A) ಬರುತ್ತದೆ ಮತ್ತು PBXನೊಳಗೆ ಬರುತ್ತದೆ. ಕರೆಯನ್ನು ಫ್ರೆಡ್‌‌ನ ವಿಸ್ತರಣಾ-ಸಂಖ್ಯೆಗೆ (B) ಪಥನಿರ್ದೇಶನ ಮಾಡಲಾಗುತ್ತದೆ, ಆದರೆ ಫ್ರೆಡ್‌ ಉತ್ತರಿಸುವುದಿಲ್ಲ. ಒಂದಷ್ಟು ನಿಶ್ಚಿತ ಆವರ್ತನಗಳವರೆಗೆ ರಿಂಗಣಿಸಿದ ನಂತರ, ಫ್ರೆಡ್‌‌ನ ವಿಸ್ತರಣಾ-ಸಂಖ್ಯೆಯ ಮೊಳಗುವಿಕೆಯನ್ನು PBX ನಿಲ್ಲಿಸುತ್ತದೆ ಮತ್ತು ಧ್ವನಿಯಂಚೆ ವ್ಯವಸ್ಥೆಗೆ (C) ಸಂಪರ್ಕವನ್ನು ಹೊಂದಿರುವ ಒಂದು ವಿಸ್ತರಣಾ-ಸಂಖ್ಯೆಗೆ ಕರೆಯನ್ನು ಮುಂದಕ್ಕೆ ರವಾನಿಸುತ್ತದೆ. ಇದು ಹೀಗೆ ಮಾಡಲು ಕಾರಣವೇನೆಂದರೆ, ಕಾರ್ಯನಿರತವಾಗಿರುವ ಅಥವಾ ಉತ್ತರಿಸಲ್ಪಡದ ಕರೆಗಳನ್ನು ಮತ್ತೊಂದು ವಿಸ್ತರಣಾ-ಸಂಖ್ಯೆಗೆ ಮುಂದಕ್ಕೆ ರವಾನಿಸುವಂತೆ PBXಗಳನ್ನು ಸಾಮಾನ್ಯವಾಗಿ ಸಜ್ಜುಗೊಳಿಸಲಾಗಿರುತ್ತದೆ. ತಾನು ಧ್ವನಿಯಂಚೆಗೆ ಮುಂದಕ್ಕೆ ರವಾನಿಸುತ್ತಿರುವ ಕರೆಯು ವಿಸ್ತರಣಾ-ಸಂಖ್ಯೆ ೨೩೪೫ರಲ್ಲಿರುವ ಫ್ರೆಡ್‌‌ಗೆ ಸಂಬಂಧಿಸಿದ್ದು ಎಂಬುದಾಗಿ PBX ಧ್ವನಿಯಂಚೆ ವ್ಯವಸ್ಥೆಗೆ (ಸಂಕೇತಸೇವೆಯ ಕೊಂಡಿ D ಮೂಲಕ) ಏಕಕಾಲಿಕವಾಗಿ ಹೇಳುತ್ತದೆ. ಈ ರೀತಿಯಲ್ಲಿ, ಧ್ವನಿಯಂಚೆ ವ್ಯವಸ್ಥೆಯು ಫ್ರೆಡ್‌‌ನ ಕುಶಲೋಪರಿಯೊಂದಿಗೆ ಕರೆಗೆ ಉತ್ತರಿಸಬಲ್ಲದಾಗಿರುತ್ತದೆ.

 

ಯಂತ್ರ-ವ್ಯವಸ್ಥೆಯು ದೊಡ್ಡ ಪ್ರಮಾಣಗಳಲ್ಲಿರುವ ದತ್ತಾಂಶವನ್ನು ನಿಭಾಯಿಸಬೇಕಾಗುವುದರಿಂದ ಹಾಗೂ ಯಾವುದೇ ಬಗೆಯ ಕಾಯುವ ಕಾಲಗಳನ್ನು ಹೊಂದುವುದು ಸ್ವೀಕಾರಾರ್ಹವಲ್ಲವಾದ್ದರಿಂದ, ಯಂತ್ರ-ವ್ಯವಸ್ಥೆಯಾದ್ಯಂತ ಅನೇಕ ಕಿರುಸಂಸ್ಕಾರಕಗಳು (ಮೈಕ್ರೊಪ್ರೊಸೆಸರ್‌ಗಳು) ಇರುತ್ತವೆ (ಉದಾಹರಣೆಗೆ, ಯಂತ್ರ-ವ್ಯವಸ್ಥೆಯು ನಿಮ್ಮ ಸಂದೇಶವನ್ನು ಧ್ವನಿಮುದ್ರಿಸುತ್ತಿರುವಾಗ ಅಥವಾ ಚಾಲಿಸುತ್ತಿರುವಾಗ, ದೊಡ್ಡ ಕಡತಗಳೊಂದಿಗೆ ಸಂಪರ್ಕ-ಸಾಧಿಸಲು ಗಣಕಯಂತ್ರಗಳು ಪ್ರಯತ್ನಿಸುತ್ತಿರುವಾದ ಅನೇಕ ವೇಳೆ ಮಾಡುವ ರೀತಿಯಲ್ಲಿಯೇ, ಯಂತ್ರ-ವ್ಯವಸ್ಥೆಯು ಒಂದು ವೇಳೆ ಧ್ವನಿಮುದ್ರಣವನ್ನು ಅಲ್ಪಕಾಲಿಕವಾಗಿ ನಿಲ್ಲಿಸಿದರೆ ಅದು ಸ್ವೀಕಾರಾರ್ಹವಲ್ಲದ ವರ್ತನೆ ಎನಿಸಿಕೊಳ್ಳುತ್ತದೆ).

ಫ್ರೆಡ್‌‌ನ ವಿಸ್ತರಣಾ-ಸಂಖ್ಯೆಯು ಧ್ವನಿಯಂಚೆ ವ್ಯವಸ್ಥೆಗೆ ಮುಂದಕ್ಕೆ ರವಾನಿಸಿದಾಗ, ಮೊಳಗುತ್ತಿರುವಿಕೆಯನ್ನು ದೂರವಾಣಿ ಇಂಟರ್‌ಫೇಸ್‌ ಪತ್ತೆಮಾಡುತ್ತದೆ. ಒಂದು ಕರೆಯು ಒಳಬರುತ್ತಿದೆ ಎಂಬುದನ್ನು ಕೇಂದ್ರ ಸಂಸ್ಕಾರಕಕ್ಕೆ (CPU) ಇದು ಸಂಕೇತಿಸುತ್ತದೆ. PBX-ಧ್ವನಿಯಂಚೆ ದತ್ತಾಂಶ ಕೊಂಡಿಯ (D) ಮೇಲೆ ಒಂದು ಸಂಕೇತವನ್ನು CPU ಏಕಕಾಲಿಕವಾಗಿ ಸ್ವೀಕರಿಸುತ್ತದೆ ಮತ್ತು 'ಯಾವುದೇ ಉತ್ತರವಿಲ್ಲ' ಎಂಬ ಧ್ವನಿಸಂಕೇತಗಳು ಬಂದಕಾರಣ ಈಗ ಮೊಳಗುತ್ತಿರುವ ನಿರ್ದಿಷ್ಟ ವಿಸ್ತರಣೆಗೆ, ವಿಸ್ತರಣಾ-ಸಂಖ್ಯೆ ೨೩೪೫ರ ಕರೆಯು ಮುಂದಕ್ಕೆ ರವಾನಿಸಲ್ಪಡುತ್ತಿದೆ ಎಂದು ಅದಕ್ಕೆ ಹೇಳುತ್ತದೆ. ಸದರಿ ಕರೆಗೆ ಉತ್ತರಿಸುವಂತೆ ದೂರವಾಣಿ ಇಂಟರ್‌ಫೇಸ್‌ಗೆ (ಮಾರ್ಗದ ಇಂಟರ್‌ಫೇಸ್‌ ಕಾರ್ಡುಗಳನ್ನು ಇದು ನಿಯಂತ್ರಿಸುತ್ತದೆ) CPU ನಿರ್ದೇಶಿಸುತ್ತದೆ. ಇದು ಫ್ರೆಡ್‌ಗೆ ಮೀಸಲಾದ ಒಂದು ಕರೆ ಎಂಬುದನ್ನು CPUನ ಕಾರ್ಯಸೂಚಿಯು ಅರಿತುಕೊಳ್ಳುತ್ತದೆ ಮತ್ತು ತತ್‌ಕ್ಷಣವೇ ಫ್ರೆಡ್‌‌ನ ಕುಶಲೋಪರಿಯ ಕಡೆಗೆ ಅದು ಹುಡುಕುತ್ತದೆ ಹಾಗೂ ಕರೆ ಮಾಡಿದಾತನಿಗೆ ಸದರಿ ಕುಶಲೋಪರಿಯ ಧ್ವನಿಯನ್ನು ಚಾಲಿಸುವಂತೆ ಡಿಸ್ಕ್‌ ನಿಯಂತ್ರಕಕ್ಕೆ ನಿರ್ದೇಶಿಸುತ್ತದೆ. ನಂತರ ಏನು ಸೂಚನೆ ಬರುತ್ತದೆ ಎಂಬುದನ್ನು ಕರೆ ಮಾಡಿದಾತನಿಗೆ ಸೂಚಿಸುವ ಯಂತ್ರ-ವ್ಯವಸ್ಥೆಯ ಕೆಲವೊಂದು ಧ್ವನಿಸಂಕೇತಗಳನ್ನು ಕೂಡಾ ಇದು ಚಾಲಿಸುತ್ತದೆ (ಉದಾಹರಣೆಗೆ, "ನೀವು ಧ್ವನಿಮುದ್ರಣವನ್ನು ಪೂರ್ಣಗೊಳಿಸಿದಾಗ, ರಿಸೀವರ್‌ನ್ನು ಅದರ ಸ್ಥಾನದಲ್ಲಿರಿಸಬಹುದು ಅಥವಾ ಹೆಚ್ಚಿನ ಆಯ್ಕೆಗಳಿಗಾಗಿ ‘#' ಗುಂಡಿಯನ್ನು ಒತ್ತಬಹುದು" ಎಂಬಂಥವು). ಕರೆ ಮಾಡಿದಾತನೊಂದಿಗೆ ನಡೆಯುವ ಈ ಎಲ್ಲಾ "ಮಾತುಕತೆಯೂ" ಧ್ವನಿಯಂಚೆ ವ್ಯವಸ್ಥೆಯಲ್ಲಿ ಶೇಖರಿಸಲ್ಪಟ್ಟಿರುವ ಕಾರ್ಯಸೂಚಿಯ ಅನುಸಾರವಾಗಿ, CPUನಿಂದ ಆರಿಸಲ್ಪಡುವ ಧ್ವನಿಸಂಕೇತಗಳ ಮೂಲಕ ನಿರ್ವಹಿಸಲ್ಪಡುತ್ತದೆ. ಕರೆ ಮಾಡಿದವನು ಒತ್ತುವ ಕೀಲಿಗಳಿಗೆ ಪ್ರತಿಸ್ಪಂದನೆಯಾಗಿ ಧ್ವನಿಸಂಕೇತಗಳನ್ನು CPU ಆಯ್ಕೆಮಾಡುತ್ತದೆ.

ಕರೆ ಮಾಡಿದಾತನ ಸಂದೇಶವನ್ನು ದೂರವಾಣಿ ಇಂಟರ್‌ಫೇಸ್‌ ವ್ಯವಸ್ಥೆಯು ಅಂಕೀಯ-ಸ್ವರೂಪಕ್ಕೆ ಮಾರ್ಪಡಿಸುತ್ತದೆ ಮತ್ತು ಸಂದೇಶ ಡಿಸ್ಕ್‌ಗಳ ಮೇಲೆ ಶೇಖರಿಸಲ್ಪಡುವುದಕ್ಕಾಗಿ ಡಿಸ್ಕ್‌ ನಿಯಂತ್ರಕಕ್ಕೆ ಪ್ರಸರಣಗೊಳ್ಳುತ್ತದೆ. ಮುಂದಿನ ಭದ್ರತೆಗಾಗಿ ಕೆಲವೊಂದು ಧ್ವನಿಯಂಚೆ ವ್ಯವಸ್ಥೆಗಳು ಸಂದೇಶದ ತರಂಗಾವರ್ತನವನ್ನು ವ್ಯತ್ಯಯಗೊಳಿಸುತ್ತವೆ. ನಂತರದಲ್ಲಿ CPU ಆ ಸಂದೇಶದ ತಾಣವನ್ನು ಯಂತ್ರ-ವ್ಯವಸ್ಥೆಯ ಡಿಸ್ಕ್‌ನಲ್ಲಿ ಫ್ರೆಡ್‌‌ನ ಅಂಚೆಪೆಟ್ಟಿಗೆ ನಿರ್ದೇಶಿಕೆ ನಮೂದಿನ ಒಳಭಾಗದಲ್ಲಿ ಶೇಖರಿಸಿಡುತ್ತದೆ. ಕರೆ ಮಾಡಿದಾತನು ರಿಸೀವರ್‌ನ್ನು ಅದರ ಸ್ಥಾನದಲ್ಲಿ ಇರಿಸಿದ ಮೇಲೆ ಮತ್ತು ಸಂದೇಶವು ಶೇಖರಿಸಲ್ಪಟ್ಟ ನಂತರ, ಕೊಂಡಿಯ (D) ಮೂಲಕ PBXಗೆ ಒಂದು ಸಂಕೇತವನ್ನು CPU ಕಳಿಸುತ್ತದೆ ಹಾಗೂ ಫ್ರೆಡ್‌‌ನ ದೂರವಾಣಿ ಸಾಧನದ ಮೇಲಿನ ಸಂದೇಶ ಕಾಯುವ ದೀಪವನ್ನು ಬೆಳಗುವಂತೆ PBXಗೆ ಸೂಚಿಸುತ್ತದೆ.

ಫ್ರೆಡ್‌ ತನ್ನ ಮೇಜಿಗೆ ಹಿಂದಿರುಗಿ ತನ್ನ ದೂರವಾಣಿ ಸಾಧನದ ಮೇಲಿನ ದೀಪವನ್ನು ನೋಡಿದಾಗ, ಧ್ವನಿಯಂಚೆ ವ್ಯವಸ್ಥೆಗೆ ಸಂಬಂಧಿಸಿದ ಒಂದು ನಿಯೋಜಿತ ವಿಸ್ತರಣಾ ಸಂಖ್ಯೆಗೆ ಅವನು ಕರೆ ಮಾಡುತ್ತಾನೆ (ಮೇಲಿನ ಚಿತ್ರದಲ್ಲಿ, "C"ಯಲ್ಲಿನ ಮಾರ್ಗಗಳಿಗೆ ಒಂದು ವಾಸ್ತವಿಕ ವಿಸ್ತರಣಾ ಸಂಖ್ಯೆಯನ್ನು ನೀಡಲಾಗಿದೆ).

ಒಂದು ನಿರ್ದಿಷ್ಟ ಮಾರ್ಗದ ಮೇಲೆ ಒಂದು ಕರೆಯು ಬರುತ್ತಿದೆ ಎಂಬುದಾಗಿ ದೂರವಾಣಿ ಇಂಟರ್‌ಫೇಸ್‌ CPUನ್ನು ಮತ್ತೊಮ್ಮೆ ಎಚ್ಚರಿಸುತ್ತದೆ, ಆದರೆ ಈ ಬಾರಿ PBX-ಧ್ವನಿಯಂಚೆ ದತ್ತಾಂಶ ಕೊಂಡಿಯಿಂದ (D) ಬರುವ ಸಂಕೇತಸೇವೆಯು ಫ್ರೆಡ್‌ ನೇರವಾಗಿ ಕರೆಮಾಡುತ್ತಿದ್ದಾನೆ ಎಂದು ಸೂಚಿಸುತ್ತದೆ, ಮತ್ತು ಆ ಕರೆಯು ಮುಂದಕ್ಕೆ ರವಾನಿಸಲ್ಪಡುವುದಿಲ್ಲ. ಕರೆಗೆ ಉತ್ತರ ನೀಡುವಂತೆ ದೂರವಾಣಿ ಇಂಟರ್‌ಫೇಸ್‌ಗೆ CPU ನಿರ್ದೇಶಿಸುತ್ತದೆ.

ಕರೆಮಾಡುತ್ತಿರುವುದು ಫ್ರೆಡ್‌ ಎಂಬುದಾಗಿ CPU "ಅರಿತಿರುತ್ತದೆಯಾದ್ದರಿಂದ" (ದತ್ತಾಂಶ ಕೊಂಡಿ D ಮೇಲಿನ ಸಂಕೇತಸೇವೆಯಿಂದ ಅದು ಅರಿತುಕೊಳ್ಳುತ್ತದೆ), ಯಂತ್ರ-ವ್ಯವಸ್ಥೆಯ ಡಿಸ್ಕ್‌ ಮೇಲೆ ಫ್ರೆಡ್‌‌ನ ಮಾಹಿತಿಯನ್ನು, ಅದರಲ್ಲೂ ನಿರ್ದಿಷ್ಟವಾಗಿ ಅವನ ಸಂಕೇತಪದವನ್ನು CPU ಹುಡುಕುತ್ತದೆ. ಆಗ ಬಳಕೆದಾರನಿಗೆ ಒಂದು ಲಾಗ್‌-ಆನ್‌ ಧ್ವನಿಸೂಚನೆಯನ್ನು ಚಾಲಿಸುವಂತೆ ಡಿಸ್ಕ್‌ ನಿಯಂತ್ರಕಕ್ಕೆ CPU ನಿರ್ದೇಶಿಸುತ್ತದೆ: ಅದು "ದಯವಿಟ್ಟು ನಿಮ್ಮ ಸಂಕೇತಪದವನ್ನು ನಮೂದಿಸಿ" ಎಂಬ ರೀತಿಯಲ್ಲಿ ಇರುತ್ತದೆ. ಸಂಕೇತಪದವು ಒಮ್ಮೆಗೆ ನಮೂದಿಸಲ್ಪಟ್ಟಿತೆಂದರೆ (ಸ್ಪರ್ಶ-ನಾದಗಳ ಮೂಲಕ), ಸರಿಯಾದ ಸಂಕೇತಪದಕ್ಕೆ CPU ಅದನ್ನು ಹೋಲಿಸುತ್ತದೆ, ಮತ್ತು ಒಂದು ವೇಳೆ ನಮೂದಿಸಿದ್ದು ಸರಿಯಾಗಿದ್ದಲ್ಲಿ ಮುಂದುವರಿಯಲು ಫ್ರೆಡ್‌ಗೆ ಅನುವುಮಾಡಿಕೊಡುತ್ತದೆ.

ಫ್ರೆಡ್‌ ಒಂದು ಹೊಸ ಸಂದೇಶವನ್ನು ಹೊಂದಿರುವುದಾಗಿ CPU ಆಗ ನಿರ್ಣಯಿಸುತ್ತದೆ (ಫ್ರೆಡ್‌‌ನ ನಿರ್ದೇಶಿಕೆ ನಮೂದಿನ ನೆರವಿನಿಂದ). ಫ್ರೆಡ್‌ ಹೊಂದಿರುವ ಆಯ್ಕೆಗಳನ್ನು ಆಗ ಅವನಿಗೆ CPU ಸಾದರಪಡಿಸುತ್ತದೆ (ಉದಾಹರಣೆಗೆ, ನಿಮಗೊಂದು ಹೊಸ ಸಂದೇಶ ಬಂದಿದೆ. ನಿಮ್ಮ ಹೊಸ ಸಂದೇಶವನ್ನು ಕೇಳಿಸಿಕೊಳ್ಳಲು ೧ನ್ನು ಒತ್ತಿ; ಒಂದು ಸಂದೇಶವನ್ನು ಧ್ವನಿಮುದ್ರಿಸಲು ೨ನ್ನು ಒತ್ತಿ" ಇತ್ಯಾದಿ.) ಧ್ವನಿಸಂಕೇತಗಳನ್ನು ಚಾಲಿಸುವಂತೆ ಡಿಸ್ಕ್‌ ನಿಯಂತ್ರಕವನ್ನು ನಿರ್ದೇಶಿಸುವ ಆಯ್ಕೆಗಳನ್ನು CPU ಸಾದರಪಡಿಸುತ್ತದೆ, ಮತ್ತು ಫ್ರೆಡ್‌ನಿಂದ ಬರಬೇಕಿರುವ ಸ್ಪರ್ಶ-ನಾದಗಳಿಗಾಗಿ CPU ಕಾಯತೊಡಗುತ್ತದೆ. ಧ್ವನಿಸಂಕೇತಗಳನ್ನು ಚಾಲಿಸುವ ಮತ್ತು ಸ್ಪರ್ಶ-ನಾದಗಳೊಂದಿಗೆ ಪ್ರತಿಕ್ರಿಯಿಸುವ ಈ ಪಾರಸ್ಪರಿಕ ಕ್ರಿಯೆಯು, ಧ್ವನಿಯಂಚೆ ವ್ಯವಸ್ಥೆಯೊಂದಿಗೆ ಸುಲಭವಾಗಿ ತೊಡಗಿಸಿಕೊಳ್ಳಲು ಫ್ರೆಡ್‌‌ಗೆ ನೆರವಾಗುತ್ತದೆ.

ಒಂದು ವೇಳೆ ತನಗೆ ಬಂದ ಸಂದೇಶವನ್ನು ಕೇಳಲು ಫ್ರೆಡ್‌‌ ೧ನ್ನು ಒತ್ತಿದರೆ, ಫ್ರೆಡ್‌ನ ಅಂಚೆಪೆಟ್ಟಿಗೆ ನಿರ್ದೇಶಿಕೆಯಲ್ಲಿರುವ (ಇದು ಯಂತ್ರ-ವ್ಯವಸ್ಥೆಯ ಡಿಸ್ಕ್‌ನಲ್ಲಿರುತ್ತದೆ) ಅವನ ಹೊಸ ಸಂದೇಶದ ತಾಣವನ್ನು CPU ಹುಡುಕುತ್ತದೆ, ಮತ್ತು ಆ ಸಂದೇಶವನ್ನು ಚಾಳಿಸುವಂತೆ ಡಿಸ್ಕ್‌ ನಿಯಂತ್ರಕಕ್ಕೆ ನಿರ್ದೇಶಿಸುತ್ತದೆ. ಸಂದೇಶದ ಡಿಸ್ಕ್‌ಗಳ ಮೇಲಿನ ಸಂದೇಶವನ್ನು ಡಿಸ್ಕ್‌ ನಿಯಂತ್ರಕವು ಕಂಡುಕೊಳ್ಳುತ್ತದೆ, ಮತ್ತು ದೂರವಾಣಿ ಇಂಟರ್‌ಫೇಸ್‌ಗೆ ದತ್ತಾಂಶ ಹರಿವನ್ನು ನೇರವಾಗಿ ಕಳಿಸುತ್ತದೆ. ಆಮೇಲೆ ದತ್ತಾಂಶ ಹರಿವನ್ನು ಧ್ವನಿಯಾಗಿ ದೂರವಾಣಿ ಇಂಟರ್‌ಫೇಸ್‌ ಪರಿವರ್ತಿಸುತ್ತದೆ ಮತ್ತು ಫ್ರೆಡ್‌‌ ಸಂಪರ್ಕವನ್ನು ಹೊಂದಿರುವ ಮಾರ್ಗದ ಇಂಟರ್‌ಫೇಸ್‌ ಕಾರ್ಡ್‌ ಮೂಲಕ ಅದನ್ನು ಫ್ರೆಡ್‌ಗೆ ಕೇಳಿಸುತ್ತದೆ.

ಮರುಚಾಲನೆ ನಿಯಂತ್ರಣಗಳನ್ನು (ಅಂದರೆ ಪುನಃ ಸುರುಳಿಸುತ್ತುವಿಕೆ, ಅಲ್ಪವಿರಾಮ, ವೇಗವಾಗಿ ಮುಂದಕ್ಕೆ ರವಾನಿಸುವಿಕೆ, ಸಂಪುಟವನ್ನು ಬದಲಾಯಿಸುವಿಕೆ, ಇತ್ಯಾದಿ.) ಸಮಗ್ರವಾಗಿ ಸ್ಪರ್ಶ-ನಾದಗಳ ಮೂಲಕ ಪ್ರದಾನ ಮಾಡಲಾಗುತ್ತದೆ, ಇವು CPUನಿಂದ "ಓದಲ್ಪಡುತ್ತವೆ", ಮತ್ತು ಯಂತ್ರ-ವ್ಯವಸ್ಥೆಯಲ್ಲಿ ಶೇಖರಿಸಲ್ಪಟ್ಟಿರುವ ಕಾರ್ಯಸೂಚಿಯನ್ನು ಆಧರಿಸಿ ಸೂಕ್ತ ಕ್ರಮಗಳನ್ನು ಅದು ತೆಗೆದುಕೊಳ್ಳುತ್ತದೆ. ಉದಾಹರಣೆಗೆ, ಒಂದು ವೇಳೆ ಸಂದೇಶದ ಮರುಚಾಲನೆಗೆ ಅಲ್ಪವಿರಾಮವನ್ನು ನೀಡಲು ಫ್ರೆಡ್‌ ಬಯಸಿದರೆ, ಅವನು ೨ನ್ನು ಒತ್ತಬಹುದು. ಫ್ರೆಡ್‌‌ನಿಂದ ಬರುವ ಸ್ಪರ್ಶ-ನಾದಗಳನ್ನು CPU ನಿರಂತರವಾಗಿ ಕೇಳಿಸಿಕೊಳ್ಳುತ್ತಲೇ ಇರುವುದರಿಂದ, ಅವನು ನೀಡುವ ಆದೇಶದ ಅನುಸಾರ ಸಂದೇಶದ ಚಾಲಿಸುವಿಕೆಯನ್ನು ನಿಲ್ಲಿಸುವಂತೆ ಡಿಸ್ಕ್‌ ನಿಯಂತ್ರಕಕ್ಕೆ CPU ನಿರ್ದೇಶನ ನೀಡುತ್ತದೆ. ಅತ್ಯಾಧುನಿಕವಾದ ಮತ್ತು ಸಂಕೀರ್ಣವಾದ ಬಹುತೇಕ ಧ್ವನಿಯಂಚೆ ವ್ಯವಸ್ಥೆಗಳಲ್ಲಿ ವೈವಿಧ್ಯಮಯವಾದ ಮರುಚಾಲನೆ ನಿಯಂತ್ರಣಗಳು ಮತ್ತು ಆಯ್ಕೆಗಳು ಲಭ್ಯವಿವೆ. ಇದರಿಂದಾಗಿ ಬಳಕೆದಾರರು ಸಂದೇಶ ಮರುಚಾಲನೆಯನ್ನು ನಿಯಂತ್ರಿಸುವುದು, ಸಂಗ್ರಹಾಗಾರಗಳಲ್ಲಿ ಸಂದೇಶಗಳನ್ನು ಶೇಖರಿಸುವುದು, ಸಮೂಹಗಳಿಗೆ ಸಂದೇಶಗಳನ್ನು ಕಳಿಸುವುದು, ಅವುಗಳ ಆದ್ಯತೆಗಳನ್ನು ಬದಲಾಯಿಸುವುದು ಇತ್ಯಾದಿ ಪ್ರಕ್ರಿಯೆಗಳನ್ನು ನಿರ್ವಹಿಸಬಹುದಾಗಿರುತ್ತದೆ.

ಉತ್ತಮವಾಗಿ ವಿನ್ಯಾಸಗೊಳಿಸಲ್ಪಟ್ಟ ಧ್ವನಿಯಂಚೆ ವ್ಯವಸ್ಥೆಗಳು ನಿಚ್ಚಳವಾದ ಮತ್ತು ಅರ್ಥಪೂರ್ಣವಾದ ಧ್ವನಿಸಂಕೇತಗಳೊಂದಿಗೆ ಒಂದು ಬಳಕೆದಾರ-ಸ್ನೇಹಿ ಇಂಟರ್‌ಫೇಸ್‌ನ್ನು ಹೊಂದಿರುತ್ತವೆ. ಇದರಿಂದಾಗಿ ಧ್ವನಿಯಂಚೆ ವ್ಯವಸ್ಥೆಯೊಂದಿಗಿನ ಪಾರಸ್ಪರಿಕ ಕ್ರಿಯೆಯು ಕ್ಷಿಪ್ರ ಮತ್ತು ಸುಲಭವಾಗಿರುತ್ತದೆ.

ಟಿಪ್ಪಣಿಗಳು

ಬದಲಾಯಿಸಿ
  1. J. D. Gould, S. J. Boies (1984). "Speech filing-office system for principals". 23. IBM Systems Journal: 65. Archived from the original on 2011-07-13. Retrieved 2011-05-21. {{cite journal}}: Cite journal requires |journal= (help)
  2. "E.R. - ಆನ್‌ ಇಲೆಕ್ಟ್ರಾನಿಕ್‌ ಟೆಲಿಫೋನ್‌ ರಿಸೆಪ್ಷನಿಸ್ಟ್‌", ಸ್ಪೀಚ್‌ ಟೆಕ್ನಾಲಜಿ ಮ್ಯಾಗಜೀನ್‌ , ಫೆಬ್ರುವರಿ/ಮಾರ್ಚ್‌ ೧೯೮೫, ಲೇಖಕ: ಜೆರ್ರಿ ಫಿಟ್ಜ್‌ಪ್ಯಾಟ್ರಿಕ್‌‌.
  3. "Voice Mail, Inc. – Active Voice". Retrieved 2008-02-14.
    ೧೯೮೩ರಲ್ಲಿ ಸಂಸ್ಥಾಪಿಸಲ್ಪಟ್ಟಿತು, ಈಗ NECಯ ಭಾಗವಾಗಿದೆ.
  4. "COMPANY NEWS; Rolm Sale By I.B.M. To Siemens". New York Times. May 8, 1992. Retrieved 2011-03-29.
  5. "Avaya Octel". Voice Main, Inc. 2008. Retrieved 2008-01-09.
  6. Popova, Elka (2007-07-05). "Customers Attest to the Value of Flexible Independent Messaging Solutions". Frost & Sullivan. Retrieved 2009-05-12.

ಉಲ್ಲೇಖಗಳು‌‌

ಬದಲಾಯಿಸಿ
  1. "ಎ ರಿಯಾಕ್ಟಿವ್‌ ಟೆಲಿಫೋನ್‌ ಮೆಸೇಜ್‌ ನೆಟ್‌ವರ್ಕ್‌ ಫಾರ್‌ ದಿ ಆಫೀಸ್‌ ಆಫ್‌ ಫ್ಯೂಚರ್‌", ಬಿಸಿನೆಸ್‌ ಕಮ್ಯುನಿಕೇಷನ್ಸ್‌ ರಿವ್ಯೂ, ಜುಲೈ-ಆಗಸ್ಟ್‌ ೧೯೮೦; "ವಾಯ್ಸ್‌ ಮೇಲ್‌ ಅರೈವ್ಸ್‌ ಇನ್‌ ದಿ ಆಫೀಸ್‌", ಬಿಸಿನೆಸ್‌ ವೀಕ್‌, ಜೂನ್‌ ೯, ೧೯೮೦, ಪುಟ ೮೧.
  2. "ದಿ ಕೇಸ್‌ ಫಾರ್‌ ವಾಯ್ಸ್‌ ಮೇಲ್‌: ಕನ್‌ಫರ್ಮ್‌ಡ್‌." GE ಕಾರ್ಪೊರೇಟ್‌ ಟೆಲಿಕಮ್ಯುನಿಕೇಷನ್ಸ್‌ ಪ್ರಕಟಣೆ, ಮೇ, ೧೯೮೯, ಕಾನ್‌ಸ್ಟೆನ್ಸ್‌ C. ಕೆಲ್ಲಿ, ಸಂಪಾದಕ.
  3. "IBM ಆಡಿಯೋ ಡಿಸ್ಟ್ರಿಬ್ಯೂಷನ್‌ ಸಿಸ್ಟಮ್‌", IBM ಪಬ್ಲಿಕೇಷನ್‌ GX೬೦-೦೦೭೫-೦
  4. "ಟುವರ್ಡ್‌ ಕಾಂಪಿಟಿಟಿವ್‌ ಪ್ರಾವಿಷನ್‌ ಆಫ್‌ ಪಬ್ಲಿಕ್‌ ರೆಕಾರ್ಡ್‌ ಮೆಸೇಜ್‌ ಸರ್ವೀಸಸ್‌", ಎಕ್ಸ್‌ಪರಿಮೆಂಟಲ್‌ ಟೆಕ್ನಾಲಜಿ ಇನ್ಸೆಂಟಿವ್ಸ್‌ ಪ್ರೋಗ್ರಾಂ, ನ್ಯಾಷನಲ್‌ ಬ್ಯೂರೋ ಆಫ್‌ ಸ್ಟಾಂಡರ್ಡ್ಸ್‌, ವಾಷಿಂಗ್ಟನ್‌‌, DC. ಪ್ರಕಟಣೆ NBX-GCR-ETIP-೮೧-೯೭ ಅಕ್ಟೋಬರ್‌‌, ೧೯೯೧.
  5. "ಸ್ಪೀಚ್‌ ಫೈಕಿಂಗ್‌ ಸಿಸ್ಟಂ ರೆಫರೆನ್ಸ್‌ ಮ್ಯಾನ್ಯುಯೆಲ್‌"", ೧೯೭೫, ಲೇಖಕರು: J. W. ಸ್ಕೂನಾರ್ಡ್‌ ಮತ್ತು S. J. ಬೋಯೀಸ್‌, IBM ಸಂಶೋಧನಾ ಕೇಂದ್ರ, ಯಾರ್ಕ್‌ಟೌನ್‌ ಹೈಟ್ಸ್‌, NY, ೧೦೫೯೮.
  6. "ಹೌ ಟು ಷೌಲ್ಡರ್‌ ಅಸೈಡ್‌ ದಿ ಟೈಟನ್ಸ್‌", ಜೀನ್‌ ಬೈಲಿನ್ಸ್‌ಕಿ, ಫಾರ್ಚೂನ್‌, ಮೇ ೧೮, ೧೯೯೨; "ಆಕ್ಟೆಲ್‌ ಕೀಪ್ಸ್‌ ಬ್ರಿಂಗಿಂಗ್‌ ಯು ವಾಯ್ಸ್‌ ಮೇಲ್‌", ಗ್ಲೋಬಲ್‌ ಟೆಲಿಕಾಮ್ಸ್‌ ಬಿಸಿನೆಸ್‌ (UK), ಫೆಬ್ರುವರಿ/ಮಾರ್ಚ್‌ ೧೯೯೬, ಪುಟಗಳು ೨೨–೨೪
  7. "ಹ್ಯೂಮನ್‌ ಫ್ಯಾಕ್ಟರ್ಸ್‌ ಚಾಲೆಂಜಸ್‌ ಇನ್‌ ಕ್ರಿಯೇಟಿಂಗ್‌ ಎ ಪ್ರಿನ್ಸಿಪಲ್‌ ಸಪೋರ್ಟ್‌ ಆಫೀಸ್‌ ಸಿಸ್ಟಮ್‌ — ದಿ ಸ್ಪೀಚ್‌ ಫೈಲಿಂಗ್‌ ಸಿಸ್ಟಮ್‌ ಅಪ್ರೋಚ್‌", ಲೇಖಕರು: ಜಾನ್‌ D. ಗೌಲ್ಡ್‌ ಮತ್ತು ಸ್ಟೀಫನ್‌ J. ಬೋಯೀಸ್‌, IBM ಥಾಮಸ್‌ J. ವ್ಯಾಟ್ಸನ್‌ ಸಂಶೋಧನಾ ಕೇಂದ್ರ; ಅಸೋಸಿಯೇಷನ್‌ ಫಾರ್‌ ಕಂಪ್ಯೂಟರ್‌ ಮೆಷಿನರಿಗೆ ಸಲ್ಲಿಸಲಾದ ನಿಬಂಧದಲ್ಲಿ ಉಲ್ಲೇಖಿಸಲ್ಪಟ್ಟಂತೆ. ನೋಡಿ: ACM ಟ್ರಾನ್ಸಾಕ್ಷನ್ಸ್‌ ಆನ್‌ ಆಫೀಸ್‌ ಇನ್ಫರ್ಮೇಷನ್‌ ಸಿಸ್ಟಮ್ಸ್‌ , ಸಂಪುಟ ೧, ಸಂ. ೪, ಅಕ್ಟೋಬರ್‌‌ ೧೯೮೩, ಪುಟಗಳು ೨೭೩–೨೯೮.
  8. "ಸ್ಪೀಚ್‌ ಫೈಲಿಂಗ್‌ — ಆನ್‌ ಆಫೀಸ್‌ ಸಿಸ್ಟಮ್‌ ಫಾರ್‌ ಪ್ರಿನ್ಸಿಪಲ್ಸ್‌", by J.D. ಗೌಲ್ಡ್‌ ಮತ್ತು S.J. ಬೋಯೀಸ್‌, IBM ವ್ಯವಸ್ಥೆಗಳು ನಿಯತಕಾಲಿಕ , ಸಂಪುಟ ೨೩, ಸಂಖ್ಯೆ ೧, ೧೯೮೪, ಪುಟ ೬೫.
  9. "IBM ಆಡಿಯೋ ಡಿಸ್ಟ್ರಿಬ್ಯೂಷನ್‌ ಸಿಸ್ಟಮ್‌ ಸಬ್‌ಸ್ಕ್ರೈಬರ್‌'ಸ್‌ ಗೈಡ್‌" ಮತ್ತು "IBM ಆಡಿಯೋ ಡಿಸ್ಟ್ರಿಬ್ಯೂಷನ್‌ ಸಿಸ್ಟಮ್‌, ಅಡ್ಮಿನಿಸ್ಟ್ರೇಟರ್‌'ಸ್‌ ಗೈಡ್‌". IBM ಪಬ್ಲಿಕೇಷನ್ಸ್‌ SC೩೪-೦೪೦೦-೩ ಮತ್ತು SC೩೪-೦೪೦೦-೧
  10. ಜೇ ಸ್ಟಾಫರ್ ಜೊತೆಗಿನ ಪತ್ರವ್ಯವಹಾರ, ಮಾರ್ಚ್‌ ೨೬, ೨೦೦೬: "... ಗೋರ್ಡಾನ್‌ ಮ್ಯಾಥ್ಯೂಸ್‌ಗೆ ಸಂಬಂಧಿಸಿದಂತೆ ಹೇಳುವುದಾದರೆ, ಕಾಲಾನಂತರದಲ್ಲಿ ಡೆಲ್ಫಿಯಲ್ಲಿ ಹಣಹೂಡಿಕೆಯನ್ನು ಮಾಡಿದ ಓರ್ವ ಸಾಹಸೋದ್ಯಮದ ಬಂಡವಾಳಗಾರನು ಅವನಿಗೆ ನನ್ನನ್ನು ಪರಿಚಯಿಸಿದ. ಡಲ್ಲಾಸ್‌ನಲ್ಲಿರುವ ಅವರ ಮನೆಯಲ್ಲಿ ಗೋರ್ಡಾನ್‌ ಮತ್ತು ಅವನ ಪತ್ನಿಯನ್ನು ನಾನು ಭೇಟಿಯಾಗಿದ್ದೆ; ನಮ್ಮ ಉತ್ಪನ್ನ ಯೋಜನಾ ಪ್ರಕ್ರಿಯೆಗೆ ಅವನಿಂದ ಏನಾದರೂ ಕೊಡುಗೆ ನೀಡಲು ಸಾಧ್ಯವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಉದ್ದೇಶವಾಗಿತ್ತು. ಆ ಚಟುವಟಿಕೆಯಲ್ಲಿ ಅವನು ಮೌಲ್ಯವರ್ಧನೆ ಮಾಡುವ ಸಂಭವವಿಲ್ಲವಾದರೂ, ಎಂಜಿನಿಯರಿಂಗ್‌ ವಲಯಕ್ಕೆ ಅವನು ನೀಡಿರುವ ಸಮರ್ಥ ಕೊಡುಗೆಯನ್ನು ನನ್ನ ಸಹೋದ್ಯೋಗಿಗಳು ಮೌಲ್ಯಮಾಪನ ಮಾಡಬೇಕು ಎಂಬ ತೀರ್ಮಾನಕ್ಕೆ ನಾನು ಬಂದೆ. ನಾವು ಗೋರ್ಡಾನ್‌ನನ್ನು ಮರಳಿ LAಗೆ ಕರೆದೊಯ್ದೆವು. ಅಲ್ಲಿ ನಮ್ಮ ತಾಂತ್ರಿಕ ತಂಡದ ಸದಸ್ಯರು ಅವನನ್ನು ಸಂದರ್ಶನ ಮಾಡಿದರು. ಈ ಸಮಯದಲ್ಲಿಯೇ (೧೯೭೩/೧೯೭೪) ಅವನು ಧ್ವನಿಯ ಅನ್ವಯದ ಪ್ರಾತ್ಯಕ್ಷಿಕೆಯೊಂದನ್ನು ಅವನು ನೋಡಿರಬಹುದು ಎನಿಸುತ್ತದೆ. ಈ ಭೇಟಿಗೆ ಪೂರ್ವಭಾವಿಯಾಗಿ, ಧ್ವನಿಯಂಚೆ ವ್ಯವಸ್ಥೆಯೊಂದರ ಕುರಿತಾಗಿ ಆತ ಖಂಡಿತವಾಗಿಯೂ ಆಲೋಚಿಸಿದ್ದಿರಬಹುದು, ಆದರೆ ಆತ ಖಂಡಿತವಾಗಿ ತನ್ನದೇ ಆದ ಕಂಪನಿಯೊಂದನ್ನು ಸ್ಥಾಪಿಸುವಂಥವನಾಗಿರಲಿಲ್ಲ ಆಥವಾ ಹಾಗೆ ಮಾಡಲು ಬಂಡವಾಳವನ್ನು ಸಂಗ್ರಹಿಸುವವನಾಗಿರಲಿಲ್ಲ. ಮೇಲಾಗಿ, ಉತ್ಪನ್ನದ ಕುರಿತಾಗಿ ಅವನು ಹೊಂದಿದ್ದ ಯೋಜನೆಯು ಇನ್ನೂ ರೂಪತಳೆಯುವ ಹಂತದಲ್ಲಿಯೇ ಇತ್ತು ಮತ್ತು ಅದು ಡೆಲ್ಫಿಯ ಪ್ರಸ್ತಾವದ ಉತ್ಕೃಷ್ಟತೆಯನ್ನು ಎಂದಿಗೂ ತಲುಪಿರಲಿಲ್ಲ. ಹೀಗಾಗಿ ಡೆಲ್ಫಿ ವತಿಯಿಂದ ಮ್ಯಾಥ್ಯೂಸ್‌ಗೆ ಉದ್ಯೋಗವನ್ನು ನೀಡುವ ಪ್ರಸ್ತಾವವನ್ನು ಮಾಡಲಿಲ್ಲ ಎಂದು ಹೇಳುವ ಅವಶ್ಯಕತೆಯಿಲ್ಲ.
  11. ೧೯೮೨ರ ಸೆಪ್ಟೆಂಬರ್‌ನಲ್ಲಿ ಪ್ರೋಬ್‌ ರಿಸರ್ಚ್‌, ಇಂಕ್‌‌ ವತಿಯಿಂದ ಪ್ರಾಯೋಜಿಸಲ್ಪಟ್ಟ ನಾನಾಬಗೆಯ ವಿಚಾರ-ಸಂಕಿರಣಗಳ ಪ್ರತಿಲೇಖನಗಳು:
    • "ವಾಯ್ಸ್‌ ಮೆಸೇಜ್‌ ಸರ್ವೀಸ್‌," ಧ್ವನಿ ಸಂಸ್ಕರಣಾ ವಿಚಾರ-ಸಂಕಿರಣದ ನಡಾವಳಿಗಳು, ಸೆಪ್ಟೆಂಬರ್‌ ೧೫, ೧೯೮೨;
    • "BBL ಇಂಡಸ್ಟ್ರೀಸ್‌, ಇಂಕ್‌.," ಧ್ವನಿ ಸಂಸ್ಕರಣಾ ವಿಚಾರ-ಸಂಕಿರಣದ ನಡಾವಳಿಗಳು, ಸೆಪ್ಟೆಂಬರ್‌ ೧೫, ೧೯೮೨;
    • "ವ್ಯಾಂಗ್‌ ಲ್ಯಾಬರೇಟರೀಸ್‌," ಧ್ವನಿ ಸಂಸ್ಕರಣಾ ವಿಚಾರ-ಸಂಕಿರಣದ ನಡಾವಳಿಗಳು, ಸೆಪ್ಟೆಂಬರ್‌ ೧೬, ೧೯೮೨;
    • "ಅಮೆರಿಕನ್‌ ಟೆಲಿಫೋನ್‌ ಅಂಡ್‌ ಟೆಲಿಗ್ರಾಫ್‌, ಇಂಕ್‌.," ಧ್ವನಿ ಸಂಸ್ಕರಣಾ ವಿಚಾರ-ಸಂಕಿರಣದ ನಡಾವಳಿಗಳು, ಸೆಪ್ಟೆಂಬರ್‌ ೧೬, ೧೯೮೨;
    • "ಕಾಮ್‌ಟರ್ಮ್‌, ಇಂಕ್‌.," ಧ್ವನಿ ಸಂಸ್ಕರಣಾ ವಿಚಾರ-ಸಂಕಿರಣದ ನಡಾವಳಿಗಳು, ಸೆಪ್ಟೆಂಬರ್‌ ೧೬, ೧೯೮೨.
  12. "ವಾಯ್ಸ್‌ ಸ್ಟೋರ್‌ ಅಂಡ್‌ ಫಾರ್ವರ್ಡ್‌ ಫಾರ್‌ ದಿ ಆಟೊಮೇಟೆಡ್‌ ಆಫೀಸ್‌", -ಈ ಪ್ರಸ್ತುತಿಯನ್ನು ಸಾದರಪಡಿಸಿದವರು: ಲಾರೆನ್ಸ್‌‌ E. ಬರ್ಗೆರಾನ್‌, ಡೆನಿಸ್‌ B. ಹೋವೆಲ್‌ ಮತ್ತು ಡೀನ್‌ ಓಸ್ಬಾರ್ನ್‌, ವ್ಯಾಂಗ್‌ ಲ್ಯಾಬರೇಟರೀಸ್‌, ಇಂಕ್‌., ಲೊವೆಲ್‌, ಮಾಸ್‌; ಇದರಲ್ಲಿ ಧ್ವನುಮುದ್ರಿಸಲ್ಪಟ್ಟಿತು: "ಕಂಪ್ಯೂಟರ್‌ ಕಂಟ್ರೋಲ್ಡ್‌ ವಾಯ್‌ ಮೆಸೇಜ್‌ ಸಿಸ್ಟಮ್ಸ್‌ ಅಂಡ್‌ ದಿ ಆಫೀಸ್‌ ಆಫ್‌ ದಿ ಫ್ಯೂಚರ್‌", ಪ್ರೊಫೆಷನಲ್‌ ಪ್ರೋಗ್ರಾಮ್‌ ಸೆಷನ್‌ ರೆಕಾರ್ಡ್‌ (೧೦), ವೆಸ್ಕಾನ್‌/೮೧, ಇಲೆಕ್ಟ್ರಾನಿಕ್‌ ಷೋ ಅಂಡ್‌ ಕನ್ವೆನ್ಷನ್‌, ಸೆಪ್ಟೆಂಬರ್‌ ೧೫–೧೭ ಸೆಪ್ಟೆಂಬರ್‌ ೧೯೮೧, ವಿಭಾಗ ೨, ಪುಟಗಳು ೧–೮.
  13. "ದಿ ಫೋನ್‌ಮೇಲ್‌ ಸಿಸ್ಟಮ್‌ ಫಾರ್‌ ದಿ ROLM CBX", ಪ್ರಕಟಣೆ: ROLM ಕಾರ್ಪೊರೇಷನ್‌.
  14. "ಆಕ್ಟೆಲ್‌ ಎಮರ್ಜಸ್‌ ಆಸ್‌ ರೈಸಿಂಗ್‌ ಸ್ಟಾರ್‌ ಇನ್‌ ವಾಯ್ಸ್‌ ಮೆಸೇಜಿಂಗ್‌ ಸಿಸ್ಟಮ್ಸ್‌", ಪೆನಿನ್ಸುಲಾ ಟೈಮ್ಸ್‌ ಟ್ರಿಬ್ಯೂನ್‌, ನವೆಂಬರ್‌ ೭, ೧೯೮೮, ಪುಟ C-೧; "ಇನ್ವೆಸ್ಟರ್ಸ್‌ ವೇಕಿಂಗ್‌ ಅಪ್‌ ಟು ಆಕ್ಟೆಲ್‌'ಸ್‌ ಲೀಡರ್‌ಷಿಪ್‌", ಇನ್ವೆಸ್ಟರ್‌'ಸ್‌ ಡೈಲಿ, ಫೆಬ್ರುವರಿ ೧೭, ೧೯೮೯; "ಆಕ್ಟೆಲ್‌'ಸ್‌ ಸ್ಟಾಕ್‌ ಗ್ಯಾಂಬಲ್‌ ಹ್ಯಾಸ್‌ ಪೇಯ್ಡ್‌ ಆಫ್‌", USA ಟುಡೆ, ಶುಕ್ರವಾರ, ಫೆಬ್ರುವರಿ ೨೪, ೧೯೮೯, ಪುಟ ೩B.
  15. "ಆಕ್ಟೆಲ್‌ ಕಮ್ಯುನಿಕೇಷನ್ಸ್‌ ಕಾರ್ಪೊರೇಷನ್‌", ಫೈಲಿಂಗ್ಸ್‌ ವಿತ್‌ ದಿ ಸೆಕ್ಯುರಿಟೀಸ್‌ ಅಂಡ್ ಎಕ್ಸ್‌ಚೇಂಜ್‌ ಕಮಿಷನ್‌ ಫಾರ್‌ ಇಟ್ಸ್‌ ಪ್ರಾಸ್ಪೆಕ್ಟಸ್‌ ಫಾರ್‌ ಸೆಕೆಂಡರಿ ಪಬ್ಲಿಕ್‌ ಆಫರಿಂಗ್‌, ಆಗಸ್ಟ್‌ust ೧೫, ೧೯೮೯; ಆಕ್ಟೆಲ್‌ ಕಮ್ಯುನಿಕೇಷನ್ಸ್‌ ಕಾರ್ಪೊರೇಷನ್‌ ವತಿಯಿಂದ ಪಡೆಯಲಾದ ನಾನಾಬಗೆಯ ಆಂತರಿಕ ಕೈಹೊತ್ತಿಗೆಗಳು ಮತ್ತು ಪ್ರಕಟಣೆಗಳು.
  16. "ಆಲ್‌ ಯುವರ್‌ ಮೆಸೇಜಸ್‌ ಇನ್‌ ಒನ್‌ ಪ್ಲೇಸ್‌", ಮೈಕೇಲ್‌ H. ಮಾರ್ಟಿನ್‌, ಫಾರ್ಚೂನ್‌, ಮೇ ೧೨, ೧೯೯೭, ಪುಟ ೧೭೨.
  17. "ಟುವರ್ಡ್‌ ಕಾಂಪಿಟಿಟಿವ್‌ ಪ್ರಾವಿಷನ್‌ ಆಫ್‌ ಪಬ್ಲಿಕ್‌ ರೆಕಾರ್ಡ್‌ ಮೆಸೇಜ್‌ ಸರ್ವೀಸಸ್‌", ETIP (ಎಕ್ಸ್‌ಪರಿಮೆಂಟಲ್‌ ಟೆಕ್ನಾಲಜಿ ಇನ್ಸೆಂಟಿವ್ಸ್‌ ಪ್ರೋಗ್ರಾಮ್‌), ನ್ಯಾಷನಲ್‌ ಬ್ಯೂರೋ ಆಫ್‌ ಸ್ಟಾಂಡರ್ಡ್ಸ್, ವಾಷಿಂಗ್ಟನ್‌‌, D.C., ಅಕ್ಟೋಬರ್‌‌, ೧೯೮೧; "ಡೊಮೆಸ್ಟಿಕ್‌ ಪಬ್ಲಿಕ್‌ ಮೆಸೇಜ್‌ ಸರ್ವೀಸಸ್‌", FCC ಪ್ರಕಟಣೆ ೭೧FCC ೨d ೪೭೧; "ಟೆಲಿಕಮ್ಯುನಿಕೇಷನ್ಸ್‌ ಕಾಂಪಿಟಿಷನ್‌ ಅಂಡ್‌ ಡೀರೆಗ್ಯುಲೇಷನ್‌ ಆಕ್ಟ್‌ ಆಫ್‌ ೧೯೮೧" (FCC ಕಂಪ್ಯೂಟರ್‌ ಇನ್‌ಕ್ವೈರಿ II), ಡಾಕೆಟ್‌ ೨೦೮೨೮, ಡಿಸೆಂಬರ್‌ ೩೦, ೧೯೮೦; "ಡಿನಯಲ್‌ ಆಫ್‌ AT&T ಪಿಟಿಷನ್‌ ಫಾರ್‌ ವೇವರ್‌ ಆಫ್‌ ಸೆಕ್ಷನ್‌ ೬೪.೭೦೨ ಆಫ್‌ ದಿ ಕಮಿಷನ್‌ ರೂಲ್ಸ್‌ ಅಂಡ್‌ ರೆಗ್ಯುಲೇಷನ್ಸ್‌", ಅಕ್ಟೋಬರ್‌‌ ೭, ೧೯೮೧, ಫೆಡರಲ್‌ ಕಮ್ಯುನಿಕೇಷನ್ಸ್‌ ರಿಪೋರ್ಟ್ಸ್‌ ೮೮FCC ೨d.
  18. ಅಮೆರಿಕಾ ಸಂಯುಕ್ತ ಸಂಸ್ಥಾನಗಳು (ಫಿರ್ಯಾದಿ) v. ವೆಸ್ಟರ್ನ್‌ ಇಲೆಕ್ಟ್ರಿಕ್‌ ಕಂಪನಿ, ಇಂಕ್‌., ಮತ್ತು ಇತರರು (ಪ್ರತಿವಾದಿಗಳು). ನಾಗರಿಕ ಕ್ರಮದ ಸಂಖ್ಯೆ. ೮೨-೦೧೯೨, ವಿಭಾಗ VII ಪುಟಗಳು ೫೧–೬೫: "ದಿ ಜಡ್ಜ್‌ ಆನ್‌ ರಿವ್ಯೂ ಕನ್ಸಿಡರ್ಸ್‌ ದ ಥ್ರೆಟ್‌ ಟು ಪಾಸಿಬಲ್‌ ಕಾಂಪಿಟಿಷನ್‌ ಇನ್‌ ದಿ ವಾಯ್ಸ್‌ಮೇಲ್‌ ಅಂಡ್‌ ಸ್ಟೋರೇಜ್‌ ಬಿಸಿನೆಸ್‌ ಟು ಬಿ ಲೆಸ್‌ ರಿಯಲ್‌ ತ್ಯಾನ್‌ ದಿ ಆಪರ್ಚುನಿಟೀಸ್‌ ಲಾಸ್ಟ್‌ ಟು ದಿ ಪಬ್ಲಿಕ್‌ ವೆಲ್‌ಪೇರ್‌ ಬೈ ದೀಸ್‌ ಸರ್ವೀಸಸ್‌ ನಾಟ್‌ ಬೀಯಿಂಗ್‌ ಬ್ರಾಡ್ಲಿ ಅವೈಲಬಲ್‌. ಹೆನ್ಸ್‌, ದಿ BOCಸ್‌ ಷುಡ್‌ ಬಿ ಏಬಲ್‌ ಟು ಪ್ರೊವೈಡ್‌ ವಾಯ್ಸ್‌ಮೇಲ್‌."
  19. AT&T ವೈರ್‌ಲೆಸ್‌ ಅಂತಿಮವಾಗಿ ಖರೀದಿಸಿತು ಮೆಕ್‌ಕ್ಯಾವ್‌ ಸೆಲ್ಯುಲರ್‌. ಸಂಯೋಜಿತ ಕಂಪನಿಯು ಅಂತಿಮವಾಗಿ ಸಿಂಗ್ಯುಲರ್‌ನಿಂದ ಖರೀದಿಸಲ್ಪಟ್ಟಿತು.
  20. GSM (ಗ್ಲೋಬಲ್‌ ಸಿಸ್ಟಮ್‌ ಫಾರ್‌ ಮೊಬೈಲ್‌ ಕ್ಯಾರಿಯರ್ಸ್‌) ಎಂಬುದು ನಾನಾಬಗೆಯ ಸೆಲ್ಯುಲರ್‌ ತಂತ್ರಜ್ಞಾನಗಳ ಪೈಕಿ ಒಂದಾಗಿದ್ದು, TDMA, CDMA, iDEN ಮತ್ತು ಇತರ ವಿಶಿಷ್ಟತೆಗಳನ್ನು ಇದು ಒಳಗೊಂಡಿದೆ. GSM ತಂತ್ರಜ್ಞಾನವನ್ನು USನಲ್ಲಿ ಸಿಂಗ್ಯುಲರ್‌ ಕಂಪನಿಯು ಪ್ರಸಕ್ತವಾಗಿ ಬಳಸುತ್ತಿದೆ ಹಾಗೂ ಇದು ವಿಶ್ವಾದ್ಯಂತದ ೧೦೦ಕ್ಕೂ ಹೆಚ್ಚಿನ ದೇಶಗಳಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ತಂತ್ರಜ್ಞಾನವಾಗಿದೆ.
  21. ಇನ್ವೆಸ್ಟರ್‌‌'ಸ್‌ ಬಿಸಿನೆಸ್‌ ಡೈಲಿ , ಫೆಬ್ರುವರಿ ೧, ೧೯೯೬. "ಆಕ್ಟೆಲ್‌'ಸ್‌ ರಾಬರ್ಟ್‌ ಕೊಹ್ನ್‌: CEO ಆಫ್‌ ವಾಯ್ಸ್‌-ಮೆಸೇಜಿಂಗ್‌ ಫರ್ಮ್‌ ಪುಟ್ಸ್‌ ಪ್ರೀಮಿಯಂ ಆನ್‌ ಸ್ಪೀಡ್‌", ಲೇಖಕಿ: ಕ್ಯಾಥ್ಲೀನ್‌ ಡೋಲರ್‌.
  22. "ಲ್ಯೂಸೆಂಟ್‌ ಈಸ್‌ ಸೆಟ್‌ ಟು ಬಯ್‌ ಲೀಡರ್‌ ಇನ್‌ ವಾಯ್ಸ್‌ ಮೇಲ್‌", ಸೇಥ್‌ ಸ್ಕೀಸೆಲ್‌, ನ್ಯೂಯಾರ್ಕ್‌ ಟೈಮ್ಸ್‌ , ಜುಲೈ ೧೮, ೧೯೯೭, ಪುಟ C೧.