ದ್ರಷ್ಟಿ ಧಾಮೀ
ದ್ರಷ್ಟಿ ಧಾಮೀ ಯವರು ಒಬ್ಬ ಭಾರತೀಯ ನಟಿ, ರೂಪದರ್ಶಿ ಮತ್ತು ನರ್ತಕಿ[೧].ಅವರು ಮೊದಲಿಗೆ 'ದಿಲ್ ಮಿಲ್ ಗಯೇ' ಎಂಬ ಧಾರವಾಹಿಯಲ್ಲಿ ಮುಸ್ಕಾನ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು.ನಂತರ ಅವರು ಗೀತ್-ಹುಯಿ ಸಬ್ಸೇ ಪರಾಯಿಧಾರವಾಹಿಯಲ್ಲಿ ಗೀತ್ ಎಂಬ ಪ್ರಮುಖ ಪಾತ್ರವನ್ನು ಪಡೆದುಕೊಂಡರು.ಅದಲ್ಲದೇ, ಅವರು ಮಧುಬಾಲಾ-ಏಕ್ ಇಷ್ಕ್ ಏಕ್ ಜುನೂನ್, ಏಕ್ ಥಾ ರಾಜ ಏಕ್ ಥಿ ರಾಣಿ, ಪರ್ದೇಸ್ ಮೇ ಹೇ ಮೇರಾ ದಿಲ್ ಮತ್ತು ಸಿಲ್ಸಿಲಾ ಬದಲ್ತೇ ರಿಶ್ತೋಂ ಕಾದರುಸತಿ ದಹಅಮಿ ಇನ ಪಅರದೆಸ ಮೆಇನ ಹಅಇನ ಮೆರಅ ದಿಲ [೨] ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದರು.ಧಾಮೀ ಯವರು ಭಾರತೀಯ ಟೆಲಿವಿಷನ್ ನ ಅಗ್ರ ನಟಿಯರಲ್ಲಿ ಒಬ್ಬರಾಗಿದ್ದಾರೆ.
ದ್ರಷ್ಟಿ ಧಾಮೀ | |
---|---|
Born | |
Nationality | ಭಾರತೀಯ |
Education | ಸಮಾಜಶಾಸ್ತ್ರದಲ್ಲಿ ಪದವಿ |
Occupations |
|
Years active | ೨೦೦೭ – ಪ್ರಸ್ತುತ |
Known for | ಮಧುಬಾಲ ಏಕ್ ಇಶ್ಕ್ ಏಕ್ ಜುನೂನ್ ಗೀತ್ - ಹುಯಿ ಸಬ್ಸೇ ಪರಾಯಿ |
Spouse | ನೀರಜ್ ಕೇಮ್ಕಾ |
Relatives | ಸುಹಾಸಿ ಧಾಮೀ (ಅತ್ತಿಗೆ) |
ಆರಂಭಿಕ ಜೀವನ
ಬದಲಾಯಿಸಿದ್ರಷ್ಟಿ ಧಾಮೀ ಯವರು ೧೯೮೫ ರ ಜನವರಿ ೧೦ ರಂದು ಮುಂಬೈನ ಗುಜರಾತಿ ಕುಟುಂಬದಲ್ಲಿ ಜನಿಸಿದರು. ಮೇರಿ ಇಮ್ಮಾಕ್ಯುಲೇಟ್ ಗರ್ಲ್ಸ್ ಹೈಸ್ಕೂಲ್ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ ನಂತರ ಮುಂಬೈನ ಮಿಥಿಬಾಯ್ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಪದವಿ ಪಡೆದುಕೊಂಡರು[೩]. ಮಾಡೆಲಿಂಗ್ ಗೆ ಪ್ರವೇಶಿಸುವ ಮೊದಲು ಧಾಮೀ ಯವರು ನೃತ್ಯ ಬೋಧಕರಾಗಿದ್ದರು.
ವೃತ್ತಿ ಜೀವನ
ಬದಲಾಯಿಸಿದ್ರಷ್ಟಿ ಧಾಮೀ ಯವರು ಮನರಂಜನಾ ಉದ್ಯಮದಲ್ಲಿ ಪ್ರಥಮ ಬಾರಿಗೆ ಮುದ್ರಣ ಮತ್ತು ದೂರದರ್ಶನ ಜಾಹೀರಾತುಗಳೊಂದಿಗೆ ಮಾಡೆಲಿಂಗ್ನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಅವರು 'ಸೈಯಾಂ ದಿಲ್ ಮೇಂ ಆನಾ ರೇ', 'ಹಮ್ಕೋ ಆಜ್ ಕಲ್ ಹೇ', 'ತೇರಿ ಮೇರಿ ನಝರ್ ಕೀ ಡೋರಿ', 'ನಚ್ಲೇ ಸೋನಿಯೋ ತೂ' ಸಂಗೀತ ವೀಡಿಯೋಗಳಲ್ಲಿ ಕಾಣಿಸಿಕೊಂಡರು. ಅದಲ್ಲದೇ ಅವರು ಕೊಲ್ಗೇಟ್,ಲಯನ್ ಹನಿ, ಆರ್.ಕೆ.ಎಸ್ ಗ್ರ್ಯಾಂಡ್(ಶಾಪಿಂಗ್ ಮಾಲ್), ಅಮೂಲ್, ವಿಐಪಿ ಬ್ಯಾಗ್ಸ್, ರಿಲಾಯನ್ಸ್ ಮೊಬೈಲ್, ಜ್ಯುವೆಲ್ಲರಿ ನಂತಹ ಹಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ.[೪]
ವೈಯಕ್ತಿಕ ಜೀವನ
ಬದಲಾಯಿಸಿ೨೧ ಫೆಬ್ರವರಿ ೨೦೧೫ ರಂದು, ಧಾಮಿ ಸಾಂಪ್ರದಾಯಿಕ ಹಿಂದೂ ಸಮಾರಂಭದಲ್ಲಿ ಉದ್ಯಮಿ ನೀರಜ್ ಖೇಮ್ಕಾ ಅವರನ್ನು ವಿವಾಹವಾದರು. [೫][೬][೭]
ಮಾಧ್ಯಮ
ಬದಲಾಯಿಸಿಮಾಧ್ಯಮಗಳು ದ್ರಷ್ಟಿ ಧಾಮೀ ಯವರಿಗೆ 'ಕ್ವೀನ್ ಆಫ್ ಎಕ್ಸ್ಪ್ರೆಶನ್' ಎಂಬ ಬಿರುದನ್ನು ನೀಡುವ ಮೂಲಕ ಅವರ ನಟನಾ ಕೌಶಲ್ಯವನ್ನು ಶ್ಲಾಘಿಸಿವೆ. ದ್ರಷ್ಟಿ ಯವರು ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಗಳಿಸಿರುವ ಕಿರುತೆರೆ ನಟಿಯರಲ್ಲಿ ಒಬ್ಬರಾಗಿದ್ದಾರೆ.
ದೂರದರ್ಶನ
ಬದಲಾಯಿಸಿವರ್ಷ | ಪ್ರದರ್ಶನ | ಪಾತ್ರ | ಟಿಪ್ಪಣಿ | Ref |
---|---|---|---|---|
೨೦೦೭-೦೯ | ದಿಲ್ ಮಿಲ್ ಗಯೇ | ಡಾ. ಮುಸ್ಕಾನ್ ಚಡ್ಡಾ | ಚೊಚ್ಚಲ | |
೨೦೧೦ | ಬಿಗ್ ಮನೀ: ಚೋಟಾ ಪರ್ದಾ ಬಡಾ ಗೇಮ್ | ಅತಿಥಿ ಸ್ಪರ್ಧಿ | ರಾಗಿಣಿ ಖನ್ನಾ ವಿರುದ್ಧ | |
ನಚ್ಲೇ ವೇ ವಿದ್ ಸರೋಜ್ ಖಾನ್ | ಸ್ಪರ್ಧಿ | |||
೨೦೧೦-೧೧ | ಗೀತ್–ಹುಯಿ ಸಬ್ಸೇ ಪರಾಯಿ | ಗೀತ್ ಹಂಡಾ | ಗುರ್ಮೀತ್ ಚೌದರಿ ವಿರುದ್ಧ | |
೨೦೧೨-೧೪ | ಮಧುಬಾಲಾ – ಏಕ್ ಇಷ್ಕ್ ಏಕ್ ಜುನೂನ್ | ಮಧುಬಾಲಾ ಚೌದರಿ/ ಮಧುಬಾಲಾ ಕುಂದ್ರಾ | ವಿವಿಯನ್ ದ್ಸೇನಾ ವಿರುದ್ಧ | |
೨೦೧೩ | ನಚ್ ಬಲಿಯೇ ೫ | ಅತಿಥಿ | ತನ್ನ ಸಹೋದರ ಹಾಗು ಅವರ ಪತ್ನಿ ಸುಹಾಸಿ ಧಾಮೀ ರವರನ್ನು ಬೆಂಬಲಿಸಲು | |
ಝಲಕ್ ದಿಖ್ಲಾ ಝಾ ೬ | ಸ್ಪರ್ಧಿ | ವಿಜೇತರು | ||
೨೦೧೪ | ಕಾಮಿಡಿ ನೈಟ್ಸ್ ವಿದ್ ಕಪಿಲ್ | ಅತಿಥಿ | 'ಝಲಕ್' ನ ಪ್ರಚಾರಕ್ಕಾಗಿ | [೮] |
ಮಿಷನ್ ಸಪ್ನೇ | ಸ್ಪರ್ಧಿ | ಕಾರ್ಯಕ್ರಮದ ಹೋಸ್ಟ್ ಆಗಿ ಸೊನಾಲಿ ಬೇಂದ್ರೆ | [೯] | |
ಝಲಕ್ ದಿಖ್ಲಾ ಝಾ ೭ | ಹೋಸ್ಟ್ | ರಣ್ವೀರ್ ಶೋರೆ ಜೊತೆ | ||
೨೦೧೪-೧೫ | ಬಾಕ್ಸ್ ಕ್ರಿಕೆಟ್ ಲೀಗ್ | ಸ್ಪರ್ಧಿ | ಮುಂಬೈ ವಾರಿಯರ್ಸ್ ನ ಆಟಗಾರ್ತಿಯಾಗಿ | [೧೦] |
೨೦೧೫-೧೬ | ಏಕ್ ಥಾ ರಾಜ ಏಕ್ ಥಿ ರಾಣಿ | ಗಾಯತ್ರಿ ಸೇಥ್/ರಾಣಿ ಗಾಯತ್ರಿ ದೇವಿ/ಸಾವಿತ್ರಿ | ಸಿದ್ಧಾಂತ್ ಕಾರ್ನಿಕ್ ವಿರುದ್ಧ | [೧೧] |
೨೦೧೫ | ಝಲಕ್ ದಿಖ್ಲಾ ಝಾ ೮ | ಅತಿಥಿ ಸ್ಪರ್ಧಿ | ಟೀನ್ ಕಾ ಟಡ್ಕಾ ಸನಾಯಾ ಇರಾನಿ ಜೊತೆ | [೧೨] |
೨೦೧೬ | ಐ ಡೋಂಟ್ ವಾಚ್ ಟಿವಿ | ಸ್ವತಃ | ಸನಾಯಾ, ನಕೂಲ್ ಮತ್ತು ಕರಣ್ ಪಟೇಲ್ ರವರ ಜೊತೆ | [೧೩] |
೨೦೧೬-೧೭ | ಪರ್ದೇಸ್ ಮೇ ಹೇ ಮೇರಾ ದಿಲ್ | ನೈನಾ ಬಟ್ರಾ | ಅರ್ಜುನ್ ಬಿಜ್ಲಾನಿ ವಿರುದ್ಧ | [೧೪] |
೨೦೧೭ | ನಚ್ ಬಲಿಯೇ ೮ | ಅತಿಥಿ | ಸನಾಯಾ ಮತ್ತು ಮೋಹಿತ್ ರವರನ್ನು ಬೆಂಬಲಿಸಲು | [೧೫] |
೨೦೧೮ | ಎ ಟೇಬಲ್ ಫಾರ್ ಟೂ | ಅತಿಥಿ | ನಕೂಲ್ ರವರ ಜೊತೆ | [೧೬] |
ಸಿಲ್ಸಿಲಾ ಬದಲ್ತೇ ರಿಶ್ತೋಂ ಕಾ | ನಂದಿನಿ ಮಲ್ಹೋತ್ರಾ | ಶಕ್ತಿ ಅರೋರಾ ವಿರುದ್ಧ | [೧೭] | |
ಡಾನ್ಸ್ ದಿವಾನೆ | ಅತಿಥಿ | ಸ್ಪರ್ಧಿಗಳನ್ನು ಬೆಂಬಲಿಸಲು | ||
ಬಿಗ್ ಬಾಸ್ ೧೨ | ಅತಿಥಿ | ಕರಣ್ವೀರ್ ರವರನ್ನು ಬೆಂಬಲಿಸಲು |
ವಿಶೇಷ ಪ್ರದರ್ಶನಗಳು
ಬದಲಾಯಿಸಿವರ್ಷ | ಟಿವಿ ಪ್ರದರ್ಶನ | ಚಾನಲ್ | ಟಿಪ್ಪಣಿ |
---|---|---|---|
೨೦೧೦ | ಸಪ್ನಾ ಬಾಬುಲ್ ಕಾ...ಬಿದಾಯಿ | ಸ್ಟಾರ್ ಪ್ಲಸ್ | (ಕೊನೆಯ ಎಪಿಸೋಡ್ನಲ್ಲಿ ಹೀನಾ ಖಾನ್ ರೊಂದಿಗೆ ಪ್ರದರ್ಶನ ನೀಡಿದರು) |
೨೦೧೧ | ಚೋಟಿ ಬಹೂ - ಸವರ್ ಕೆ ರಂಗ್ ರಚಿ | ಝೀ ಟಿವಿ | (ಗುರ್ಮೀತ್ ಚೌದರಿ ಯೊಂದಿಗೆ ಪ್ರದರ್ಶನ ನೀಡಿದರು) |
ಪ್ಯಾರ್ ಕೀ ಯೆ ಏಕ್ ಕಹಾನಿ | ಸ್ಟಾರ್ ವನ್ | (ನಿಶಾಂತ್ ಮಲ್ಕಾನಿ ಯೊಂದಿಗೆ ಪ್ರದರ್ಶನ ನೀಡಿದರು) | |
ಸಾಜನ್ ರೆ ಜೂಟ್ ಮತ್ ಬೋಲೋ | ಸ್ಯಾಬ್ ಟಿವಿ | ನೃತ್ಯ ಪ್ರದರ್ಶನ | |
೨೦೧೨ | ನಾ ಬೋಲೆ ತುಮ್ ನಾ ಮೈನೆ ಕುಚ್ ಕಹಾ | ಕಲರ್ಸ್ | 'ಮಧುಬಾಲಾ' ದ ಪ್ರಚಾರಕ್ಕಾಗಿ |
೨೦೧೩ | ಇಸ್ಸ್ ಪ್ಯಾರ್ ಕೊ ಕ್ಯಾ ನಾಮ್ ದೂಂ?...ಏಕ್ ಬಾರ್ ಫಿರ್ | ಸ್ಟಾರ್ ಪ್ಲಸ್ | ಅತಿಥಿ |
೨೦೧೪ | ಬೇಯಿಂತಹಾ - ಜಝ್ಬಾತ್ ಕೆ ರಂಗ್ | ಕಲರ್ಸ್ | ಹೋಳಿ ವಿಶೇಷ |
೨೦೧೫ | ಕುಮ್ಕುಮ್ ಭಾಗ್ಯ | ಝೀ ಟಿವಿ | ಕ್ರಾಸ್ಓವರ್ ವಿಶೇಷ |
೨೦೧೬ | ಯೆ ಹೇ ಮೊಹಬ್ಬತೇಂ | ಸ್ಟಾರ್ ಪ್ಲಸ್ | ನೈನಾ |
ಸಾಥ್ ನಿಭಾನಾ ಸಾಥಿಯಾ | |||
೨೦೧೭ | ಯೆ ರಿಶ್ತಾ ಕ್ಯಾ ಕಹ್ಲಾತಾ ಹೈ | ||
೨೦೧೮ | ಶಕ್ತಿ - ಅಸ್ತಿತ್ವ ಕೆ ಎಹಸಾಸ್ ಕೀ | ಕಲರ್ಸ್ ಟಿವಿ | ನಂದಿನಿ [೧೮] |
ನಾಗಿನ್ ೩ | ರವಿ ದುಬೇ ಜೊತೆ | ||
೨೦೧೯ | ಗಟ್ಬಂಧನ್ | ಸ್ವತಃ/ಅತಿಥಿ [೧೯] |
ಇತರ ಕೆಲಸಗಳು
ಬದಲಾಯಿಸಿದ್ರಷ್ಟಿ ಯವರು ಕನ್ವಿರಾನ್ಮೆಂಟ್ ವೀಕ್ ೨೦೧೧ ಮತ್ತು ೨೦೧೩ ರ ಬ್ರಾಂಡ್ ಅಂಬಾಸಿಡರ್ ಆಗಿದ್ದರು.೨೦೧೬ ರಲ್ಲಿ ಅವರು ಸ್ವಚ್ಛ್ ಸರ್ವೇಕ್ಷಣ್ ೨೦೧೭ ರ ಭಾಗಿಯಾಗಿದ್ದರು[೨೦].ಧಾಮೀಯವರು ಟೀಮ್ 'ಡಿ' ಸೆಲೆಬ್ರಿಟಿ ಚಾಂಪಿಯನ್ ಶಿಪ್ ೨೦೧೬ ರ ನಾಯಕಿಯಾಗಿದ್ದರು.ಅವರು 'ಐ ಹೆಲ್ಪ್ ಎ ಕಿಡ್.ಕಾಮ್' ಸೆಲೆಬ್ರಿಟಿ ಚಾಂಪಿಯನ್ ಶಿಪ್ ನಿಂದ ಪ್ರಶಸ್ತಿಯನ್ನೂ ಪಡೆದಿದ್ದರು[೨೧].೨೦೧೭ ರಲ್ಲಿ ಅವರು 'ಬಜಾಜ್ ಬ್ರಾಹ್ಮೀ ಆಮ್ಲಾ ಆಯುರ್ವೇದಿಕ್ ಹೇರ್ ಆಯ್ಲ್' ನ ಬ್ರಾಂಡ್ ಅಂಬಾಸಿಡರ್ ಆದರು[೨೨].
ಚಲನಚಿತ್ರಗಳು ಮತ್ತು ಜಾಹೀರಾತುಗಳು
ಬದಲಾಯಿಸಿ೨೦೧೬ | ದಿ ಚೇಂಜ್ | ಕಿರು ಚಿತ್ರ | |
೨೦೧೭ | ಗೋಡ್ರೆಜ್ ಸೋಪ್ (ಕಮರ್ಷಿಯಲ್ ವಿಡಿಯೊ) | ಧಾಮೀಯವರು ರಾಗಿಣಿ ಖನ್ನಾ ಮತ್ತು ಏಕ್ತಾ ಕೌಲ್ ರೊಂದಿಗೆ ಬಾತ್ ಸೋಪ್ ಜಾಹೀರಾತನ್ನು ನೀಡಿದರು | [೨೩] |
ಇತರ ಪ್ರದರ್ಶನಗಳು
ಬದಲಾಯಿಸಿ೨೦೧೦ ರಲ್ಲಿ ಇಮ್ಯಾಜಿನ್ ಟಿವಿಯ ರಿಯಾಲಿಟಿ ಶೋ ಬಿಗ್ ಮನಿ: ಚೋಟಾ ಪಾರ್ದಾ ಬಡಾ ಗೇಮ್‌ನಲ್ಲಿ ಧಾಮಿ ಕಾಣಿಸಿಕೊಂಡರು. [೨೪] ಅದೇ ವರ್ಷದಲ್ಲಿ ಅವರು ಮತ್ತೊಂದು ರಿಯಾಲಿಟಿ ಶೋ, ನ್ಯಾಚ್ಲ್ ವೆ ವಿತ್ ಸರೋಜ್ ಖಾನ್ ನ ಭಾಗವಾಗಿದ್ದರು . ೨೦೧೧ ರಲ್ಲಿ, ಧಾಮಿ (ಅವರ ಗೀತ್ ಸಹನಟ ಗುರ್ಮೀತ್ ಚೌಧರಿ ಅವರೊಂದಿಗೆ) ವಿಶೇಷ ಹೋಳಿ ಸಂಚಿಕೆಗಾಗಿ ರುಬಿನಾ ದಿಲೈಕ್ ಮತ್ತು ಅವಿನಾಶ್ ಸಚ್‌ದೇವ್ ಅವರ ಚೋಟಿ ಬಹು - ಸಾವರ್ ಕೆ ರಂಗ್[೨೫] ರಾಚಿ ಅವರ ಅತಿಥಿ ನೃತ್ಯ ಪ್ರದರ್ಶನ ನೀಡಿದರು. ನಂತರ ಜುಲೈ ೨೦೧೧ ರಲ್ಲಿ, ಅವರು ಸಾಜನ್ ರೇ ಜೂಟ್ ಮತ್ ಬೋಲ್ ನಲ್ಲಿ ನೃತ್ಯ ಪ್ರದರ್ಶನ ನೀಡಿದರು ಮತ್ತು ನಂತರ ಡಿಸೆಂಬರ್ ೨೦೧೧ ರಲ್ಲಿ, ಧಾಮಿ ಪ್ಯಾರ್ ಕಿ ಯೆ ಏಕ್ ಕಹಾನಿಯಲ್ಲಿ ಕಾಣಿಸಿಕೊಂಡರು ಮತ್ತು ಅಭಯ್ ಮತ್ತು ಪಿಯಾ ಅವರ ವಿವಾಹವನ್ನು ಪ್ರಸಾರ ಮಾಡಿದ ಕೊನೆಯ ಕಂತಿನಲ್ಲಿ ಗುರ್ಮೀತ್ ಚೌದರಿ ಅವರೊಂದಿಗೆ ನೃತ್ಯ ಮಾಡಿದರು. ಜುಲೈ ೨೦೧೨ ರಲ್ಲಿ, ಧಾಮಿ ತನ್ನ ಧಾರವಾಹಿ ಮಧುಬಾಲಾದ ಪ್ರಚಾರಕ್ಕಾಗಿ ಕಲರ್ಸ್ ಟಿವಿಯ ನಾ ಬೋಲೆ ತುಮ್ ನಾ ಮೈನೆ ಕುಚ್ ಕಹಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
ಬದಲಾಯಿಸಿವರ್ಷ | ಪ್ರಶಸ್ತಿ | ವರ್ಗ | ಪ್ರದರ್ಶನ | ಫಲಿತಾಂಶ |
---|---|---|---|---|
೨೦೧೧ | ಗೋಲ್ಡ್ ಪ್ರಶಸ್ತಿ | ಅತ್ಯಂತ ಪ್ರಸಿದ್ಧವಾದ ಜೋಡಿ
(ಗುರ್ಮೀತ್ ಚೌದರಿ ಜೊತೆ) |
ಗೀತ್ - ಹುಯೀ ಸಬ್ಸೇ ಪರಾಯಿ | ಗೆಲುವು[೨೬] |
ಬಿಗ್ ಟೆಲಿವಿಷನ್ ಪ್ರಶಸ್ತಿ | ಶ್ರೇಣಿಯ ಪಾತ್ರ | Nominated | ||
೨೦೧೨ | ಇಂಡಿಯನ್ ಟೆಲ್ಲಿ ಪ್ರಶಸ್ತಿ | ಅತ್ಯುತ್ತಮ ತೆರೆಯ ಜೋಡಿ
(ಗುರ್ಮೀತ್ ಚೌದರಿ ಜೊತೆ) |
Nominated | |
೨೦೧೩ | ಇಂಡಿಯನ್ ಟೆಲ್ಲಿ ಪ್ರಶಸ್ತಿ | ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ | ಮಧುಬಾಲಾ-ಏಕ್ ಇಷ್ಕ್ ಏಕ್ ಜುನೂನ್ | Nominated |
ಅತ್ಯುತ್ತಮ ಜೋಡಿ
(ವಿವಿಯನ್ ದ್ಸೇನಾ ಜೊತೆ) |
ಗೆಲುವು | |||
ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಪ್ರಶಸ್ತಿ | ಬಿಗ್ ಸ್ಟಾರ್ ಅತ್ಯಂತ ಮನರಂಜನೆಯ ಟೆಲಿವಿಷನ್ ನಟಿ | Nominated | ||
೨೦೧೪ | ಸ್ಟಾರ್ ಗಿಲ್ಡ್ ಪ್ರಶಸ್ತಿ | ಡ್ರಾಮಾ ಸರಣಿಯಲ್ಲಿ ಅತ್ಯುತ್ತಮ ನಟಿ | ಗೆಲುವು[೨೭] | |
ಗೋಲ್ಡ್ ಪ್ರಶಸ್ತಿ | ಅತ್ಯುತ್ತಮ ನಟಿ (ವಿಮರ್ಶಕರು) | ಗೆಲುವು[೨೮] | ||
ಇಂಡಿಯನ್ ಟೆಲ್ಲಿ ಪ್ರಶಸ್ತಿ | ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ | Nominated | ||
ಅತ್ಯುತ್ತಮ ತೆರೆಯ ಜೋಡಿ
(ವಿವಿಯನ್ ದ್ಸೇನಾ ಜೊತೆ) |
Nominated | |||
೨೦೧೮ | ಇಂಡಿಯನ್ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿ | ಅತ್ಯುತ್ತಮ ನಟಿ (ಜನಪ್ರಿಯ) | ಸಿಲ್ಸಿಲಾ ಬದಲ್ತೇ ರಿಶ್ತೋಂ ಕಾ | Nominated |
೨೦೧೯ | ಲಯನ್ಸ್ ಗೋಲ್ಡ್ ಪ್ರಶಸ್ತಿ | Nominated |
ಉಲ್ಲೇಖಗಳು
ಬದಲಾಯಿಸಿ- ↑ "Sanaya Irani, Drashti Dhami dance together again". The Indian Express (in ಅಮೆರಿಕನ್ ಇಂಗ್ಲಿಷ್). 2015-09-19. Retrieved 2018-03-17.
- ↑ DelhiNovember 2, India Today Web Desk New; November 2, India Today Web Desk New; Ist, India Today Web Desk New. "Silsila Badalte Rishton Ka: Is this the real reason why Drashti Dhami quit the show?". India Today (in ಇಂಗ್ಲಿಷ್). Retrieved 19 March 2020.
{{cite news}}
: CS1 maint: numeric names: authors list (link) - ↑ "Drashti Dhami: Lesser known facts". The Times of India. 21 April 2015. Retrieved 15 August 2016.
- ↑ "Drashti Dhami's Journey To Jhalak Dikhla Jaa 6".
- ↑ "Drashti Dhami's wedding celebrations". The Times of India (in ಇಂಗ್ಲಿಷ್). 20 February 2015. Retrieved 19 March 2020.
- ↑ "Drashti Dhami Preps for Sister-in-law Shivani Khemka's Wedding Ceremony, See Pics". News18. 27 February 2020. Retrieved 19 March 2020.
- ↑ "Drashti Dhami and Neeraj Khemka Make the Cutest Couple Dancing to Odhani at Family Wedding". News18. 29 February 2020. Retrieved 19 March 2020.
- ↑ "Drashti Dhami on Comedy Nights with Kapil". Archived from the original on 2017-01-12. Retrieved 2019-06-15.
- ↑ "Drashti as nimbu-mirchi seller for Mission Sapne!". The Times of India. 24 May 2014. Retrieved 21 August 2016.
- ↑ "Box Cricket League Teams: BCL 2014 Team Details With TV Actors & Names of Celebrities". india.com. Retrieved 14 December 2014.
- ↑ "I didn't think I could be lead: Drashti Dhami". ಟೈಮ್ಸ್ ಆಫ್ ಇಂಡಿಯ. 7 June 2012. Archived from the original on 20 ಆಗಸ್ಟ್ 2013. Retrieved 29 June 2012.
{{cite web}}
: Italic or bold markup not allowed in:|publisher=
(help) - ↑ "Jhalak Dikhhla Jaa 8': Drashti Dhami to Dance With Sanaya Irani". Indiawest.com. 18 September 2015. Archived from the original on 22 ಸೆಪ್ಟೆಂಬರ್ 2015. Retrieved 24 September 2015.
- ↑ "Nakuul Mehta brings the truth behind TV actors' life in 'I Don't Watch TV' web-series, watch trailer". 11 February 2016. Retrieved 1 July 2016.
- ↑ "First look of Drashti Dhami's new show Pardes Mai Hai Mera Dil". The Times of India. Retrieved 21 August 2016.
- ↑ "Barun Sobti, Drashti Dhami with their spouse on Nach Baliye 8 Finale to support Mohit- Sanaya Irani". Retrieved 25 June 2017.
- ↑ "Drashti Dhami Tags Vivian Dsena As 'Mr Know It All'; Nakuul Mehta Wants Drashti To Hire A Stylist!". 7 February 2018.
- ↑ "Drashti Dhami starts shooting for Silsila Badalte Rishton Ka; best friend Nakuul Mehta wishes her good luck". ದಿ ಟೈಮ್ಸ್ ಆಫ್ ಇಂಡಿಯಾ.
- ↑ "Colors TV promo of Shakti". Colors.
- ↑ "Drashti Dhami to make a SPECIAL guest appearance in 'Gathbandhan'". abplive.in. Archived from the original on 1 ಏಪ್ರಿಲ್ 2019. Retrieved 2 April 2019.
- ↑ PIB India [@PIB_India] (6 August 2016). "LIVE: Union Minister @MVenkaiahNaidu felicitates various artists for their contribution towards #SwachhBharat" (Tweet) – via Twitter.
- ↑ "I Help A Kid Celebrity Championship Results", ihelpakid.com, archived from the original on 14 September 2016, retrieved 14 September 2016
{{citation}}
: Unknown parameter|deadurl=
ignored (help) - ↑ "Bajaj Corp re-launches 'Brahmi Amla Hair Oil'". 16 October 2017. Retrieved 18 October 2017.
- ↑ "Tyooharo Ki Taiyaari, Godrej No.1, Drashti Dhami, Ragini Khanna, Ekta Kaul". 29 September 2017. Retrieved 30 September 2017.
- ↑ https://web.archive.org/web/20161006080441/http://www.filmibeat.com/television/news/2014/10-unknown-facts-about-drashti-dhami-madhubala-she-turns-an-year-old-129301.html
- ↑ https://www.india.com/entertainment/tv-rubina-dilaik-abhinav-shuklas-royal-wedding-dates-venue-guest-list-heres-all-you-need-to-know-3122446/
- ↑ "4th Boroplus Gold Awards 2011". indiantelevisionawards. Archived from the original on 8 ಏಪ್ರಿಲ್ 2019. Retrieved 24 July 2016.
- ↑ TNN (2 February 2014). "Drashti Dhami wins best actress award". The Times of India. Retrieved 24 July 2016.
- ↑ Jain, Kiran (19 May 2014). "Drashti Dhami wins best actress (critics) award at Zee TV's Gold Awards". Daily Bhaskar. Retrieved 24 July 2016.