ದೊಡ್ಡ ಗಣೇಶ್

ಭಾರತಿಯ ಕ್ರಿಕೆಟ್ ಆಟಗಾರ

ದೊಡ್ಡನರಸಯ್ಯ ಗಣೇಶ್ (ಜನನ 30 ಜೂನ್ 1973) ಒಬ್ಬ ಮಾಜಿ ಭಾರತೀಯ ಕ್ರಿಕೆಟಿಗ,ಕರ್ನಾಟಕ ರಣಜಿ ತಂಡದ ಪರವಾಗಿ ಮತ್ತು ಭಾರತ ತಂಡದ ಪರವಾಗಿ 1997 ರಲ್ಲಿ 4 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಅವರು ಬಲಗೈ ಸೀಮ್ ಬೌಲರ್ ಮತ್ತು ಉಪಯುಕ್ತ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದರು.

Dodda Ganesh
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
Doddanarasiah Ganesh
ಹುಟ್ಟು (1973-06-30) ೩೦ ಜೂನ್ ೧೯೭೩ (ವಯಸ್ಸು ೫೧)
ಬೆಂಗಳೂರು, ಮೈಸೂರು ರಾಜ್ಯ, ಭಾರತ
ಬ್ಯಾಟಿಂಗ್Right-handed
ಬೌಲಿಂಗ್Right-arm medium
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 210)2 January 1997 v ದಕ್ಷಿಣ ಆಫ್ರಿಕಾ
ಕೊನೆಯ ಟೆಸ್ಟ್17 April 1997 v ವೆಸ್ಟ್ ಇಂಡೀಸ್
ಒಂದೇ ಅಂ. ಏಕದಿನ​ (ಕ್ಯಾಪ್ 102)15 February 1997 v Zimbabwe
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
1994–2005Karnataka
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODIs FC LA
ಪಂದ್ಯಗಳು ೧೦೪ ೮೯
ಗಳಿಸಿದ ರನ್ಗಳು ೨೫ ೨,೦೨೩ ೫೨೫
ಬ್ಯಾಟಿಂಗ್ ಸರಾಸರಿ ೬.೨೫ ೪.೦೦ ೧೮.೩೯ ೧೩.೮೧
೧೦೦/೫೦ ೦/೦ ೦/೦ ೧/೭ ೦/೦
ಉನ್ನತ ಸ್ಕೋರ್ ೧೧೯ ೩೧
ಎಸೆತಗಳು ೪೬೧ ೩೦ ೨೦,೩೫೫ ೪,೩೪೬
ವಿಕೆಟ್‌ಗಳು ೩೬೫ ೧೨೮
ಬೌಲಿಂಗ್ ಸರಾಸರಿ ೫೭.೪೦ ೨೦.೦೦ ೨೯.೪೨ ೨೭.೧೧
ಐದು ವಿಕೆಟ್ ಗಳಿಕೆ ೨೦
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೨/೨೮ ೧/೨೦ ೭/೩೬ ೫/೨೭
ಹಿಡಿತಗಳು/ ಸ್ಟಂಪಿಂಗ್‌ ೦/– ೦/– ೪೫/– ೨೭/–
ಮೂಲ: ESPNcricinfo, 29 March 2014

ಗಣೇಶ್ ತಮ್ಮ ಸೀಮಿತ ಟೆಸ್ಟ್ ಕ್ರಿಕೆಟ್ ನಲ್ಲಿ 57.40 ಸರಾಸರಿಯಲ್ಲಿ ಐದು ವಿಕೆಟ್ ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, 104 ಪಂದ್ಯಗಳಿಂದ 365 ವಿಕೆಟ್‌ಗಳನ್ನು ಪಡೆದರು, .ಪ್ರಸ್ತುತ ಅವರು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದು ಸಂದರ್ಶನಕ್ಕಾಗಿ ಕಾಯುತ್ತಿದ್ದಾರೆ.[]

ಆರಂಭಿಕ ವೃತ್ತಿಜೀವನ

ಬದಲಾಯಿಸಿ

ದೋಡ್ಡ ಗಣೇಶ್ ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಪ್ರಾರಂಭಿಸಿದರು. ಗುಂಡಪ್ಪ ವಿಶ್ವನಾಥ್ ಇವರ ಬೌಲಿಂಗ್ ಪ್ರತಿಭೆಯನ್ನು ಗುರುತಿಸಿ ಚಿಕ್ನಾ ಕ್ಲಬ್‌ಗೆ ಸೇರಿಸಿಕೊಂಡರು.ಅವಕಾಶಗಳ ಕೊರತೆಯಿಂದ ನಿರಾಶೆಗೊಂಡ ಅವರು ಎ.ವಿ.ಜಯಪ್ರಕಾಶ್ ಅವರ ತರಬೇತಿ ಶಿಬಿರಕ್ಕೆ ಸ್ಥಳಾಂತರಗೊಂಡರು, ಅಲ್ಲಿ ಅವರು ಬೌಲರ್ ಆಗಿ ತರಬೇತಿ ಹೊಂದಿದರು ಮತ್ತು ಕರ್ನಾಟಕ ತಂಡಕ್ಕೆ ಅಯ್ಕೆಯಾದರು .[]

ದೇಶೀಯ ವೃತ್ತಿ

ಬದಲಾಯಿಸಿ

1990 ರ ದಶಕವು ಕರ್ನಾಟಕ ಕ್ರಿಕೆಟ್‌ಗೆ ಸುವರ್ಣ ಯುಗವಾಗಿತ್ತು. ಜವಾಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ಮತ್ತು ಸುನಿಲ್ ಜೋಶಿ ಅವರ ಉಪಸ್ಥಿತಿಯಿಂದಾಗಿ ಗಣೇಶ್ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸೀಮಿತ ಅವಕಾಶಗಳು ಹೊಂದಿದ್ದರು.

1994-95ರ ಪಾದಾರ್ಪಣೆ ಮಾಡಿದರೂ ಗಣೇಶರಿಗೆ ಕರ್ನಾಟಕ ತಂಡದಲ್ಲಿ ಶಾಶ್ವತ ಸ್ಥಾನ ಸಿಗಲಿಲ್ಲ. ವಿನಮ್ರ ಹಿನ್ನೆಲೆಯಿಂದ ಬಂದ ಅವರು, ಸಹ ಆಟಗಾರರು ಮತ್ತು ಹಿತೈಷಿಗಳು ಸಹಾಯ ಮಾಡಿದರು.1996-97ರಲ್ಲಿ ಇರಾನಿ ಟ್ರೋಫಿಯಲ್ಲಿ ಅವರು ವಿ.ವಿ.ಎಸ್. ಲಕ್ಷ್ಮಣ್ ಮತ್ತು ನವಜೋತ್ ಸಿಂಗ್ ಸಿಧು ಸೇರಿದಂತೆ 11 ವಿಕೆಟ್ಗಳನ್ನು ಪಡೆದರು, ಈ ಪ್ರದರ್ಶನದ ನಂತರ ಅವರನ್ನು ಭಾರತೀಯ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಮಾಡಲಾಯಿತು.[]

ಅಂತರರಾಷ್ಟ್ರೀಯ ವೃತ್ತಿಜೀವನ

ಬದಲಾಯಿಸಿ

ಕೇಪ್ ಟೌನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 2 ನೇ ಟೆಸ್ಟ್ ಪಂದ್ಯದಲ್ಲಿ ಗಣೇಶ್ ಅಂತರರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಯಾವುದೇ ಯಶಸ್ಸನ್ನು ಗಳಿಸದೆ 24 ಓವರ್‌ಗಳನ್ನು ಎಸೆದರು.ಎರಡನೇ ಇನ್ನಿಂಗ್ಸ್‌ನಲ್ಲಿ ಗ್ಯಾರಿ ಕರ್ಸ್ಟನ್ ಕಾಲಿಗೆ ವಿಕೆಟ್‌ಗೆ ಸಿಲುಕಿದಾಗ ಅವರು ತಮ್ಮ ಮೊದಲ ಟೆಸ್ಟ್ ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಭಾರತ ಭಾರಿ ಸೋಲನ್ನು ಅನುಭವಿಸಿತು. ಜೋಹಾನ್ಸ್‌ಬರ್ಗ್‌ನಲ್ಲಿ ಮುಂದಿನ ಟೆಸ್ಟ್‌ಗೆ ಅವರು ತಮ್ಮ ಸ್ಥಾನವನ್ನು ಉಳಿಸಿಕೊಂಡರು. ಅವರು ಕೇವಲ 9 ಓವರ್‌ಗಳನ್ನು ಬೌಲ್ ಮಾಡಿದರು, ಏಕೆಂದರೆ ದಕ್ಷಿಣ ಆಫ್ರಿಕಾ ಡ್ರಾ ಸಾಧಿಸಿತು.[]

ಅದ್ಭುತ ಪ್ರವಾಸವನ್ನು ಹೊಂದಿರದಿದ್ದರೂ, 1997 ರಲ್ಲಿ ಅವರನ್ನು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆ ಮಾಡಲಾಯಿತು. ಬಾರ್ಬಡೋಸ್‌ನಲ್ಲಿ ನಡೆದ 3 ನೇ ಟೆಸ್ಟ್ ನಲ್ಲಿ, ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಕಾರ್ಲ್ ಹೂಪರ್ ಸೇರಿದಂತೆ 4 ವಿಕೆಟ್‌ಗಳನ್ನು ಪಡೆದರು. ಬೆನ್ನಟ್ಟಲು ಕೇವಲ 120 ರನ್ ಗಳಿಸಿದ್ದರೂ, ಭಾರತ 2 ನೇ ಇನ್ನಿಂಗ್ಸ್‌ನಲ್ಲಿ ಎಡವಿ 81 ರನ್‌ಗಳಿಗೆ ಆಲೌಟ್ ಆಯಿತು.ಗಯಾನಾದಲ್ಲಿ ಗಣೇಶ್ ಇನ್ನೂ ಒಂದು ಮಳೆ ಪೀಡಿತ ಟೆಸ್ಟ್ ಆಡಿದ್ದಾರೆ.

ನಂತರದ ವೃತ್ತಿಜೀವನ

ಬದಲಾಯಿಸಿ

ಗಣೇಶ್ ಕರ್ನಾಟಕ ತಂಡಕ್ಕೆ ಮರಳಿದರು ಮತ್ತು ತಂಡದ ಬೌಲರ್ ಆಗಿ ಮುಂದುವರೆದರು . 1994-95 ರಿಂದ 2005-06ರವರೆಗಿನ ಸುದೀರ್ಘ ವೃತ್ತಿಜೀವನದಲ್ಲಿ ಅವರು 365 ವಿಕೆಟ್ ಪಡೆದರು. ಅವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು 2002-03ರಲ್ಲಿ ಹರಿಯಾಣ ವಿರುದ್ಧ 36 ಕ್ಕೆ 7 (ಪಂದ್ಯದಲ್ಲಿ 89 ಕ್ಕೆ 12). 2002-03ರಲ್ಲಿ ಅವರು 41.23 ರ ಸರಾಸರಿಯಲ್ಲಿ 536 ರನ್ ಗಳಿಸಿದರು, ಅವರ ಏಕೈಕ ಶತಕ, ವಿದರ್ಭ ವಿರುದ್ಧ 119 ರನ್ .[][]

ಕ್ರಿಕೆಟ್ ನಂತರ

ಬದಲಾಯಿಸಿ

ದೋಡ ಗಣೇಶ್ ಅವರು ರಾಜಕೀಯದಲ್ಲಿ ಆಸಕ್ತಿ ವ್ಯಕ್ತಪಡಿಸಿ ಭಾರತದ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ನೇತೃತ್ವದ ಜನತಾದಳ (ಜಾತ್ಯತೀತ) ಗೆ ಸೇರಿದರು. ಅವರು 2012-13ರಲ್ಲಿ ಗೋವಾದ ತರಬೇತುದಾರ ಸ್ಥಾನವನ್ನು ವಹಿಸಿಕೊಂಡರು.

ಅಕ್ಟೋಬರ್ 2016 ರಲ್ಲಿ, ಅವರು ಬಿಗ್‌ಬಾಸ್ ಕನ್ನಡ - 4 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು ಮತ್ತು 2 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರು.[]

ಉಲ್ಲೇಖಗಳು

ಬದಲಾಯಿಸಿ
  1. Dodda Ganesh bowling for teams
  2. Dodda Ganesh announces retirement
  3. Karnataka v Rest of India 1996-97
  4. South Africa v India, Cape Town 1996-97
  5. Dodda Ganesh batting by season
  6. "ದೊಡ್ಡಗಣೇಶ್‌ ಕ್ರಿಕೆಟ್‌ಗೆ ವಿದಾಯ ; ರಾಜಕೀಯದತ್ತ ಒಲವು." kannada.oneindia.com. Retrieved 8 ಮೇ 2020.
  7. Dodda Ganesh: A fast bowler who was rushed into international cricket