ದೇಹ ಭಾಷೆ ಯು ಪದರಹಿತ ಸಂಹವನೆಯ ಒಂದು ಸ್ವರೂಪವಾಗಿದ್ದು ದೇಹದ ಭಂಗಿ, ಭಾವಸೂಚಕಗಳು ಹಾಗೂ ಕಣ್ಣಿನ ಚಲನೆಗಳನ್ನು ಅದು ಒಳಗೊಂಡಿರುತ್ತದೆ. ಮಾನವರು ಇಂಥ ಸಂಜ್ಞೆಗಳನ್ನು ಒಳಪ್ರಜ್ಞೆಯಿಂದ ಕಳಿಸುತ್ತಾರೆ ಮತ್ತು ಅರ್ಥೈಸುತ್ತಾರೆ.

ದೇಹ ಭಾಷೆಯಲ್ಲಿನ ಒಂದು ಅಧ್ಯಯನ

ಮಾನವ ಸಂವಹನೆಯು 93%ನಷ್ಟು ದೇಹಭಾಷೆ ಹಾಗೂ ಪೂರಕ ಭಾಷೆಯ ಸುಳಿವುಗಳನ್ನು ಒಳಗೊಂಡಿದ್ದರೆ, ಸಂವಹನೆಯ 7%ನಷ್ಟು ಭಾಗವು ಸ್ವತಃ ಪದಗಳನ್ನು ಒಳಗೊಂಡಿರುತ್ತದೆ[] ಎಂದು ಅನೇಕ ಬಾರಿ ಹೇಳಲಾಗುತ್ತದೆ. ಆದಾಗ್ಯೂ, ಈ ಅಂಕಿ-ಅಂಶಗಳಿಗೆ ಆಧಾರವಾಗಿರುವ ಕೃತಿಯೊಂದನ್ನು 1960ರ ದಶಕದಲ್ಲಿ ರಚಿಸಿದ ಆಲ್ಬರ್ಟ್‌ ಮೆಹ್ರಾಬಿಯನ್‌ ಎಂಬ ಸಂಶೋಧಕನ ಪ್ರಕಾರ, ಇದು ಕಂಡುಹಿಡಿಯಲ್ಪಟ್ಟಿದುದರ[] ಒಂದು ತಪ್ಪು ಗ್ರಹಿಕೆಯಾಗಿದೆ (ನೋಡಿ: ಮೆಹ್ರಾಬಿಯನ್‌ನ ನಿಯಮದ ತಪ್ಪುವ್ಯಾಖ್ಯಾನ). "ಎಲ್ಲಾ ಅರ್ಥದ ಶೇಕಡಾ 60 ಮತ್ತು 70ರ ನಡುವಿನ ಭಾಗವು ಪದರಹಿತ ನಡವಳಿಕೆಯಿಂದ ಜನ್ಯವಾಗಿದೆ ಎಂದು ಸಂಶೋಧನೆಯು ಸೂಚಿಸಿದೆ" ಎಂಬುದನ್ನು ಇತರರು ಪ್ರತಿಪಾದಿಸುತ್ತಾರೆ.[]

ವ್ಯಕ್ತಿಯೋರ್ವನ ವರ್ತನೆ ಅಥವಾ ಮನಸ್ಸಿನ ಸ್ಥಿತಿಗೆ ಸಂಬಂಧಿಸಿದ ಸೂಚನೆಗಳನ್ನು ದೇಹ ಭಾಷೆಯು ಒದಗಿಸಬಹುದು. ಉದಾಹರಣೆಗೆ, ಇತರ ಇನ್ನೂ ಅನೇಕ ಸೂಚನೆಗಳ ಜೊತೆಗೆ ಇದು ಆಕ್ರಮಣಶೀಲತೆ, ವಿನಯಶೀಲತೆ, ಬೇಸರ, ಆರಾಮವಾಗಿರುವ ಸ್ಥಿತಿ, ಮನಃಪ್ರಸನ್ನತೆ, ವಿನೋದ ಪ್ರವೃತ್ತಿ ಇವೇ ಮೊದಲಾದವುಗಳನ್ನು ಸೂಚಿಸಬಹುದು.

ದೇಹ ಭಾಷೆಯನ್ನು ಅರ್ಥಮಾಡಿಕೊಳ್ಳುವುದು

ಬದಲಾಯಿಸಿ

ಜನರನ್ನು 'ಓದುವ' ಕೌಶಲವನ್ನು ಆಗಾಗ ಬಳಸಲಾಗುತ್ತದೆ. ಉದಾಹರಣೆಗೆ, ಜನರನ್ನು ನಿರಾಳವಾಗಿಸುವ ಒಂದು ಪ್ರಯತ್ನವಾಗಿ ದೇಹಭಾಷೆಯನ್ನು ಪ್ರತಿಬಿಂಬಿಸುವ ಪರಿಕಲ್ಪನೆಯನ್ನು ಸಂದರ್ಶನಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಬೇರೊಬ್ಬ ವ್ಯಕ್ತಿಯ ದೇಹ ಭಾಷೆಯ ಪ್ರತಿಬಿಂಬಿಸುವಿಕೆಯು ಅವರು ಗ್ರಹಿಸಿದ್ದಾರೆ ಎಂಬುದನ್ನು ಸೂಚಿಸುತ್ತದೆ.

ದೇಹ ಭಾಷೆಯ ಸಂಜ್ಞೆಗಳು ಸಂಹವನೆಗಿಂತ ಮಿಗಿಲಾದ ಒಂದು ಗುರಿಯನ್ನು ಹೊಂದಿರಬಹುದು. ಎರಡೂ ಜನರೂ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಪದರಹಿತ ಸೂಚನೆಗಳ ಮೇಲೆ ತಾವು ಇರಿಸುವ ತೂಕಕ್ಕೆ ವೀಕ್ಷಕರು ಮಿತಿ ಹಾಕಿಕೊಳ್ಳುತ್ತಾರೆ. ಸಂಜ್ಞಾಕಾರರು ತಮ್ಮ ಚಲನಾ ರೀತಿಗಳ ಜೈವಿಕ ಮೂಲವನ್ನು ಸೂಚಿಸುವುದಕ್ಕಾಗಿ ತಮ್ಮ ಸಂಜ್ಞೆಗಳನ್ನು ವಿಶದೀಕರಿಸುತ್ತಾರೆ.

ದೈಹಿಕ ಅಭಿವ್ಯಕ್ತಿ

ಬದಲಾಯಿಸಿ

ಕೈಬೀಸುವುದು, ಬೊಟ್ಟುಮಾಡಿ ತೋರಿಸುವುದು, ಸ್ಪರ್ಶಿಸುವುದು ಮತ್ತು ಜೋತುಬೀಳುವುದು ಇವೇ ಮೊದಲಾದ ದೈಹಿಕ ಅಭಿವ್ಯಕ್ತಿಗಳೆಲ್ಲವೂ ಪದರಹಿತ ಸಂವಹನೆಯ ಸ್ವರೂಪಗಳಾಗಿವೆ. ದೇಹದ ಅಚಲನೆ ಹಾಗೂ ಅಭಿವ್ಯಕ್ತಿಯ ಅಧ್ಯಯನವನ್ನು ದೇಹಚಲನ ಅಧ್ಯಯನ ಎಂದು ಕರೆಯುತ್ತಾರೆ. ಸಂಹವನೆ ನಡೆಸುತ್ತಿರುವಾಗ ಮಾನವರು ತಮ್ಮ ದೇಹಕ್ಕೆ ಚಾಲನೆಯನ್ನು ನೀಡುತ್ತಾರೆ. ಏಕೆಂದರೆ, ಸಂಶೋಧನೆಗಳು ತೋರಿಸಿರುವಂತೆ[ಸೂಕ್ತ ಉಲ್ಲೇಖನ ಬೇಕು], "ಸಂವಹನೆಯು ಕಷ್ಟಕರವಾಗಿದ್ದಾಗ ಮಾನಸಿಕ ಪ್ರಯತ್ನವನ್ನು ಸುಲಭಗೊಳಿಸುವಲ್ಲಿ" ಇದು ನೆರವಾಗುತ್ತದೆ. ದೈಹಿಕ ಅಭಿವ್ಯಕ್ತಿಗಳು, ಅವನ್ನು ಬಳಸುತ್ತಿರುವ ವ್ಯಕ್ತಿಯ ಕುರಿತಾದ ಅನೇಕ ಅಂಶಗಳನ್ನು ಹೊರಗೆಡಹುತ್ತವೆ. ಉದಾಹರಣೆಗೆ, ಭಾವಸೂಚಕಗಳು ಒಂದು ಅಂಶಕ್ಕೆ ಒತ್ತು ನೀಡಬಹುದು ಅಥವಾ ಒಂದು ಸಂದೇಶವನ್ನು ಪ್ರಸಾರ ಮಾಡಬಲ್ಲವು, ಬೇಸರ ಅಥವಾ ಮಹಾನ್‌ ಆಸಕ್ತಿಯನ್ನು ಭಂಗಿಯು ಹೊರಗೆಡವಬಲ್ಲದು, ಮತ್ತು ಸ್ಪರ್ಶವು ಪ್ರೋತ್ಸಾಹ ಅಥವಾ ಎಚ್ಚರಿಕೆಯನ್ನು ತಲುಪಿಸಬಲ್ಲದು.[]

  • ಓರ್ವ ವ್ಯಕ್ತಿಯು ಆತನ ಅಥವಾ ಆಕೆಯ ಕೈಗಳನ್ನು ಎದೆಗೆ ಅಡ್ಡಲಾಗಿ ಇಟ್ಟುಕೊಂಡಾಗ ಅದು ಅತ್ಯಂತ ಮೂಲಭೂತ ಹಾಗೂ ಶಕ್ತಿಯುತ ದೇಹಭಾಷಾ ಸಂಜ್ಞೆಗಳಲ್ಲಿ ಒಂದು ಎನಿಸಿಕೊಳ್ಳುತ್ತದೆ. ಓರ್ವ ವ್ಯಕ್ತಿಯು ತನ್ನ ಹಾಗೂ ಇತರರ ನಡುವೆ ಒಂದು ಅರಿವಿಲ್ಲದ ತಡೆಗೋಡೆ ಅಥವಾ ಪ್ರತಿಬಂಧಕವನ್ನು ನಿರ್ಮಿಸುತ್ತಿದ್ದಾನೆ ಎಂಬುದನ್ನು ಇದು ಸೂಚಿಸಬಲ್ಲದು. ಸದರಿ ವ್ಯಕ್ತಿಯ ತೋಳುಗಳು ತಣ್ಣಗಾಗಿವೆ ಎಂಬುದನ್ನು ಸಹ ಇದು ಸೂಚಿಸಬಲ್ಲದು. ಆತ ಅವುಗಳನ್ನು ಉಜ್ಜಿಕೊಳ್ಳುವುದರಿಂದ ಅಥವಾ ಮುದುರಿಕೊಳ್ಳುವುದರಿಂದ ಇದು ಸ್ಪಷ್ಟೀಕರಿಸಲ್ಪಡುತ್ತದೆ. ಒಟ್ಟಾರೆ ಸನ್ನಿವೇಶವು ಸೌಹಾರ್ದಯುತವಾಗಿದ್ದಾಗ, ಯಾವ ವಿಷಯವು ಚರ್ಚೆಗೆ ಒಳಗಾಗಿದೆಯೋ ಅದರ ಕುರಿತು ಸದರಿ ವ್ಯಕ್ತಿಯು ಆಳವಾಗಿ ಯೋಚಿಸುತ್ತಿದ್ದನೆ ಎಂಬುದನ್ನೂ ಇದು ಅರ್ಥೈಸಬಲ್ಲದು. ಆದರೆ, ಒಂದು ಗಂಭೀರವಾದ ಅಥವಾ ಮುಖಾಮುಖಿಯಾಗಿರುವ ಸನ್ನಿವೇಶದಲ್ಲಿ, ಓರ್ವ ವ್ಯಕ್ತಿಯು ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದಾನೆ ಎಂಬುದನ್ನು ಇದು ಅರ್ಥೈಸಬಲ್ಲದು. ಒಂದು ವೇಳೆ ಆ ವ್ಯಕ್ತಿಯು ಮಾತನಾಡುವವನಿಂದ ಆಚೆಗೆ ಓಲುತ್ತಿದ್ದರೆ ಇದು ನಿರ್ದಿಷ್ಟವಾಗಿ ಆ ರೀತಿಯ ಅರ್ಥವನ್ನು ಕೊಡುತ್ತದೆ. ಒಂದು ಬಿರುಸಾದ ಅಥವಾ ಬರಿದಾದ ಮೌಖಿಕ ಅಭಿವ್ಯಕ್ತಿಯು ಅನೇಕ ವೇಳೆ ಸ್ಪಷ್ಟವಾದ ಪ್ರತಿಕೂಲತೆಯನ್ನು ಸೂಚಿಸುತ್ತದೆ.
  • ಓರ್ವ ಮಾತುಗಾರನು ಹೇಳುತ್ತಿರುವುದರ ಕುರಿತು ಓರ್ವ ವ್ಯಕ್ತಿಯು ಧನಾತ್ಮಕವಾಗಿ ಯೋಚಿಸುತ್ತಿರುವುದನ್ನು ಆ ವ್ಯಕ್ತಿಯ ಏಕನಿಷ್ಠೆಯ ಕಣ್ಣಿನ ಸಂಪರ್ಕವು ಸೂಚಿಸಬಲ್ಲದು. ಸದರಿ ಮಾತನಾಡುತ್ತಿರುವವನಿಂದ "ತನ್ನ ಕಣ್ಣಿನ ದೃಷ್ಟಿಯನ್ನು ಆಚೀಚೆ ಹೊರಳಿಸಲಾಗುವಷ್ಟರ" ಮಟ್ಟಿಗೆ ಅವನ ಮೇಲೆ ಮತ್ತೋರ್ವ ವ್ಯಕ್ತಿಯು ವಿಶ್ವಾಸವಿರಿಸದಿರುವುದನ್ನೂ ಸಹ ಇದು ಅರ್ಥೈಸಬಲ್ಲದು.
ಕಣ್ಣಿನ ಸಂಪರ್ಕವಿಲ್ಲದಿರುವುದು ನಕಾರಾತ್ಮಕತೆಯನ್ನು ಸೂಚಿಸಬಲ್ಲದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕಳವಳದ ಅಸ್ವಸ್ಥತೆಗಳೊಂದಿಗಿನ ವ್ಯಕ್ತಿಗಳು ಯಾವುದೇ ಇರುಸುಮುರುಸು ಇಲ್ಲದೇ ಕಣ್ಣಿನ ಸಂಪರ್ಕವನ್ನು ಮಾಡಲು ಅನೇಕವೇಳೆ ಅಸಮರ್ಥರಾಗಿರುತ್ತಾರೆ. ಕಣ್ಣಿನ ಸಂಪರ್ಕವು ಅನೇಕವೇಳೆ ಒಂದು ದ್ವಿತೀಯಕ ಮತ್ತು ತಪ್ಪುದಾರಿಗೆಳೆಯುವ ಭಾವಸೂಚಕವಾಗಿರುತ್ತದೆ. ಏಕೆಂದರೆ, ಮಾತನಾಡುವಾಗ ಮಾತ್ರವೇ ಕಣ್ಣಿನ ಸಂಪರ್ಕವನ್ನು ಮಾಡುವಂತೆ ನಮಗೆ ಬಾಲ್ಯದಿಂದಲೂ ಹೇಳಿಕೊಡಲಾಗಿರುತ್ತದೆ. ಒಂದು ವೇಳೆ ವ್ಯಕ್ತಿಯೋರ್ವನು ನಿಮ್ಮೆಡೆಗೆ ನೋಡುತ್ತಿದ್ದರೂ ಎದೆಗೆ-ಅಡ್ಡಲಾಗಿ-ತೋಳುಗಳನ್ನು ಇರಿಸಿಕೊಂಡಿರುವ ಸಂಜ್ಞೆಯನ್ನು ಮಾಡುತ್ತಿದ್ದರೆ, ಯಾವುದೋ ಒಂದು ಅಂಶವು ಆತನನ್ನು ಕಾಡುತ್ತಿದೆ, ಮತ್ತು ಅದರ ಕುರಿತು ಆತ ಮಾತನಾಡಲು ಪ್ರಯತ್ನಿಸುತ್ತಿದ್ದಾನೆ ಎಂಬುದಕ್ಕೆ ಕಣ್ಣಿನ ಸಂಪರ್ಕವು ಸೂಚಕವಾಗಬಲ್ಲದಾಗಿದೆ. ಅಥವಾ ಒಂದು ವೇಳೆ ನೇರವಾದ ಕಣ್ಣಿನ ಸಂಪರ್ಕವನ್ನು ಮಾಡುವಾಗ ವ್ಯಕ್ತಿಯೋರ್ವನು ಯಾವುದರೊಂದಿಗೋ ಕಾಲಹರಣ ಮಾಡುತ್ತಿದ್ದರೆ, ಅದೂ ಕೂಡ ನಿಮ್ಮೆಡೆಗೆ ನೇರವಾಗಿ ನೋಡುತ್ತಿರುವಾಗ ಹೀಗೆ ಮಾಡುತ್ತಿದ್ದರೆ, ಆತನ ಗಮನ ಬೇರೆಲ್ಲೋ ಇದೆ ಎಂಬುದನ್ನು ಅದು ಸೂಚಿಸಬಲ್ಲದು. ಇಷ್ಟೇ ಅಲ್ಲ, ಓರ್ವ ವ್ಯಕ್ತಿಯು ನೋಡುವುದಕ್ಕೆ ಸಂಬಂಧಿಸಿದಂತೆ ಮೂರು ಮಾದರಿ ವಲಯಗಳಿದ್ದು, ಅವು ಅಸ್ತಿತ್ವದ ವಿಭಿನ್ನ ಅವಸ್ಥೆಗಳನ್ನು ಪ್ರತಿನಿಧಿಸುತ್ತವೆ. ಒಂದು ವೇಳೆ ವ್ಯಕ್ತಿಯು ಒಂದು ಕಣ್ಣಿನಿಂದ ಮತ್ತೊಂದು ಕಣ್ಣಿಗೆ, ನಂತರ ಹಣೆಯ ಕಡೆಗೆ ನೋಡಿದರೆ, ಆ ಕಣ್ಣುಗಳು ಒಂದು ಅಧಿಕಾರಯುತ ಸ್ಥಾನವನ್ನು ತೆಗೆದುಕೊಳ್ಳುತ್ತಿವೆ ಎಂಬುದನ್ನು ಅದು ಸೂಚಿಸುತ್ತದೆ. ಒಂದು ವೇಳೆ ಅವು ಒಂದು ಕಣ್ಣಿನಿಂದ ಮತ್ತೊಂದಕ್ಕೆ ನಂತರ ಮೂಗಿನ ಕಡೆಗೆ ಚಲಿಸಿದರೆ, ತಾವು ಪರಿಗಣಿಸಿರುವ ಒಂದು "ಅಂತಸ್ತಿನ ಸಂಭಾಷಣೆ"ಯಲ್ಲಿ ಅವರು ತೊಡಗಿಸಿಕೊಂಡಿವೆ, ಹಾಗೂ ಅವರಿಬ್ಬರ ಪೈಕಿ ಯಾರಿಗೂ ಹೆಚ್ಚುಗಾರಿಕೆ ಎಂಬುದಿಲ್ಲ ಎಂಬುದನ್ನು ಅದು ಸೂಚಿಸುತ್ತದೆ. ಕೊನೆಯ ನಿದರ್ಶನವು ಒಂದು ಕಣ್ಣಿನಿಂದ ಮತ್ತೊಂದು ಕಣ್ಣಿಗೆ ಹಾಗೂ ನಂತರ ಕೆಳಗೆ ತುಟಿಗಳವರೆಗೆ ಇರುವಂಥದಾಗಿರುತ್ತದೆ.  ಇದು ರಮ್ಯ ಭಾವನೆಗಳು ಅಥವಾ ಪ್ರಣಯಸೂಚಕ ಭಾವನೆಗಳ ಒಂದು ಪ್ರಬಲ ಸೂಚನೆಯಾಗಿರುತ್ತದೆ.
  • ವಿಮುಖವಾಗಿರುವ ದಿಟ್ಟನೋಟದಿಂದ, ಅಥವಾ ಕಿವಿಯನ್ನು ಸ್ಪರ್ಶಿಸುವುದರಿಂದ ಅಥವಾ ಗಲ್ಲವನ್ನು ಕೆರೆದುಕೊಳ್ಳುವುದರಿಂದ ಅಪನಂಬಿಕೆಯು ಹಲವು ಬಾರಿ ಸೂಚಿಸಲ್ಪಡುತ್ತದೆ. ಯಾರಾದರೊಬ್ಬರು ಏನನ್ನೋ ಹೇಳುತ್ತಿರುವಾಗ ಅದರಿಂದ ಓರ್ವ ವ್ಯಕ್ತಿಗೆ ಮನವರಿಕೆಯಾಗದಿದ್ದರೆ, ಗಮನವು ಎಲ್ಲೆಲ್ಲೋ ಸುತ್ತುತ್ತದೆ. ಮತ್ತು ತೀರಾ ವಿಸ್ತೃತ ಅವಧಿಯವರೆಗೆ ಕಣ್ಣುಗಳು ಬೇರೆಲ್ಲೋ ದಿಟ್ಟಿಸುತ್ತಿರುತ್ತವೆ.[]
  • ತಲೆಯು ಒಂದು ಕಡೆಗೆ ಬಾಗಿಕೊಂಡಿದ್ದರೆ, ಅಥವಾ ಮಾತಾಡುತ್ತಿರುವವನನ್ನು ಕಣ್ಣುಗಳು ನೋಡುತ್ತಿದ್ದರೂ ಕೊಂಚವೇ ಅತ್ತಿತ್ತ ದೃಷ್ಟಿಬದಲಾವಣೆಯಾದರೆ ಅದು ಬೇಸರವನ್ನು ಸೂಚಿಸುತ್ತದೆ. ತಲೆಯೊಂದರ ಓಲುವಿಕೆಯು ಒಂದು ಸೋಯುತ್ತಿರುವ ಕುತ್ತಿಗೆ ಅಥವಾ ದೃಷ್ಟಿಮಾಂದ್ಯವನ್ನೂ ಸೂಚಿಸಬಹುದು, ಮತ್ತು ದೃಷ್ಟಿನೆಟ್ಟಿರದ ಕಣ್ಣುಗಳು ಕೇಳುವವನಲ್ಲಿನ ಕಣ್ಣಿನ ಸಮಸ್ಯೆಗಳನ್ನು ಸೂಚಿಸಬಹುದು.
  • ಸೂಕ್ತವಾಗಿ ನಿಲ್ಲುವ ಮತ್ತು ಕೇಳುವ ರೀತಿಯಂಥ ಭಂಗಿಗಳ ಅಥವಾ ವಿಸ್ತೃತ ಕಣ್ಣಿನ ಸಂಪರ್ಕದ ಮೂಲಕ ಆಸಕ್ತಿಯನ್ನು ಸೂಚಿಸಲು ಸಾಧ್ಯವಿದೆ.
  • ಸಂಭಾಷಣೆಯ ಅವಧಿಯಲ್ಲಿ ಮುಖವನ್ನು ಸ್ಪರ್ಶಿಸುವುದರ ಮೂಲಕ, ಮೋಸಗಾರಿಕೆ ಅಥವಾ ಮಾಹಿತಿಯನ್ನು ತಡೆಹಿಡಿಯುವ ನಡವಳಿಕೆಯು ಕೆಲವೊಮ್ಮೆ ಸೂಚಿಸಲ್ಪಡುತ್ತದೆ. ಯಾರದ್ದಾದರೂ ಕಣ್ಣ ರೆಪ್ಪೆಗಳು ಅಗತ್ಯಕ್ಕಿಂತ ಹೆಚ್ಚಾಗಿ ಮಿಟುಕಿಸಲ್ಪಡುತ್ತಿವೆಯೆಂದಾದರೆ, ಅದು ಆತ ಸುಳ್ಳು ಹೇಳುತ್ತಿದ್ದಾನೆ ಎಂಬುದರ ಸೂಚನೆಯಾಗಿದೆ. ಕಣ್ಣ ರೆಪ್ಪೆಯ ಮಿಟುಕಿಸುವಿಕೆ ಕಂಡುಬರದಿರುವುದು ಕೂಡಾ ಸುಳ್ಳು ಹೇಳುತ್ತಿರುವುದನ್ನು ಪ್ರತಿನಿಧಿಸಬಹುದು. ಮಿತಿಮೀರಿ ಮಿಟುಕಿಸುವುದಕ್ಕಿಂತಲೂ ಇದು ಹೆಚ್ಚು ವಿಶ್ವಾಸಾರ್ಹವಾದ ಅಂಶವಾಗಿದೆ ಎಂದು ಇತ್ತೀಚೆಗೆ ಕೆಲವೊಂದು ಸಾಕ್ಷ್ಯಗಳು ಬಹಿರಂಗಪಡಿಸಿವೆ. [೧] Archived 2010-05-29 ವೇಬ್ಯಾಕ್ ಮೆಷಿನ್ ನಲ್ಲಿ.

ಕೆಲವೊಂದು ಜನರು (ಉದಾಹರಣೆಗೆ, ಕೆಲವೊಂದು ಅಸಾಮರ್ಥ್ಯಗಳೊಂದಿಗಿನ ಜನರು, ಅಥವಾ ಕಲ್ಪನಾ ಮಗ್ನತೆಯ ವ್ಯಾಪ್ತಿಯಲ್ಲಿರುವವರು) ದೇಹ ಭಾಷೆಯನ್ನು ವಿಭಿನ್ನವಾಗಿ ಬಳಸುತ್ತಾರೆ ಮತ್ತು ಅರ್ಥೈಸಿಕೊಳ್ಳುತ್ತಾರೆ, ಅಥವಾ ಇಲ್ಲವೇ ಇಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಸಾಮಾನ್ಯ ದೇಹ ಭಾಷೆಯ ಸಂದರ್ಭದಲ್ಲಿ, ಅವರ ಭಾವಸೂಚಕಗಳನ್ನು ಹಾಗೂ ಮೌಖಿಕ ಅಭಿವ್ಯಕ್ತಿಗಳನ್ನು (ಅಥವಾ ಅದರ ಕೊರತೆಯನ್ನು) ಅರ್ಥೈಸುವುದು ಸಾಮಾನ್ಯವಾಗಿ ತಪ್ಪುಗ್ರಹಿಕೆಗಳಿಗೆ ಹಾಗೂ ತಪ್ಪುವ್ಯಾಖ್ಯಾನಗಳಿಗೆ (ಅದರಲ್ಲೂ ವಿಶೇಷವಾಗಿ ಒಂದು ವೇಳೆ ಆಡುವ ಭಾಷೆಗಿಂತ ದೇಹ ಭಾಷೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದರೆ) ಕಾರಣವಾಗುತ್ತದೆ. ವಿಭಿನ್ನ ಸಂಸ್ಕೃತಿಗಳಿಂದ ಬಂದ ಜನರು ವಿಭಿನ್ನವಾದ ರೀತಿಯಲ್ಲಿ ದೇಹ ಭಾಷೆಯನ್ನು ಅರ್ಥೈಸಬಲ್ಲರು ಎಂಬುದನ್ನೂ ಈ ಸಂದರ್ಭದಲ್ಲಿ ಹೇಳಬೇಕಾಗುತ್ತದೆ.

ಉದಾಹರಣೆಗಳ ಪಟ್ಟಿ

ಬದಲಾಯಿಸಿ
  • ಮೊಣಕಾಲುಗಳ ಮೇಲಿನ ಕೈಗಳು : ಸನ್ನದ್ಧತೆಯನ್ನು ಸೂಚಿಸುತ್ತವೆ.[]
  • ಸೊಂಟಗಳ ಮೇಲಿನ ಕೈಗಳು : ಅಸಹನೆಯನ್ನು ಸೂಚಿಸುತ್ತವೆ.[]
  • ನಿಮ್ಮ ಬೆನ್ನಿನ ಹಿಂದೆ ನಿಮ್ಮ ಕೈಗಳನ್ನು ಕಟ್ಟಿಕೊಳ್ಳುವುದು : ಆತ್ಮಸಂಯಮವನ್ನು ಸೂಚಿಸುತ್ತದೆ.[]
  • ತಲೆಯ ಹಿಂದೆ ಕಟ್ಟಿಕೊಂಡಿರುವ ಕೈಗಳು : ಆತ್ಮವಿಶ್ವಾಸವನ್ನು ನಿರೂಪಿಸುತ್ತವೆ.[]
  • ಕುರ್ಚಿಯ ತೋಳಿನ ಮೇಲೆ ಕಾಲುಹಾಕಿಕೊಂಡು ಕುಳಿತಿರುವುದು : ಔದಾಸೀನ್ಯವನ್ನು ಧ್ವನಿಸುತ್ತದೆ.[]
  • ಕಾಲುಗಳು ಹಾಗೂ ಪಾದಗಳು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತಿರುಗಿರುವುದು : ಹೆಚ್ಚು ಆಸಕ್ತಿಯ ಅನುಭವ ಎಲ್ಲಾಗಿದೆಯೋ ಆ ದಿಕ್ಕನ್ನು ಸೂಚಿಸುತ್ತದೆ[]
  • ಕತ್ತರಿಯಾಕಾರದಲ್ಲಿರಿಸಿದ ತೋಳುಗಳು : ಶರಣಾಗುವ ಮನೋವೃತ್ತಿಯನ್ನು ಸೂಚಿಸುತ್ತವೆ.[]

ದೇಹ ಭಾಷೆಯು ಪದರಹಿತ ಸಂಹವನೆಯ ಒಂದು ಸ್ವರೂಪವಾಗಿದ್ದು, ಇತರ ಜನರಿಗೆ ಸೂಚನೆಗಳಾಗಿ ವರ್ತಿಸುವ ವಿಲಕ್ಷಣೀಕರಿಸಿದ ಭಾವಸೂಚಕಗಳು, ಭಂಗಿಗಳು, ಮತ್ತು ಶಾರೀರಿಕ ಸಂಜ್ಞೆಗಳ ಬಳಕೆಯನ್ನು ಒಳಗೊಂಡಿರುತ್ತದೆ. ಮಾನವರು, ಕೆಲವೊಮ್ಮೆ ಅರಿವಿಲ್ಲದೆಯೇ, ಎಲ್ಲ ಸಮಯಗಳಲ್ಲಿ ಪದರಹಿತ ಸಂಜ್ಞೆಗಳನ್ನು ಕಳಿಸುತ್ತಾರೆ ಮತ್ತು ಸ್ವೀಕರಿಸುತ್ತಾರೆ.

ಮಾನವರಲ್ಲಿ ಪದರಹಿತ ಸಂಹವನೆಯು ಹೇಗೆ ಪ್ರಚಲಿತವಾಗಿದೆ?

ಬದಲಾಯಿಸಿ

ಕೆಲವೊಂದು ಸಂಶೋಧಕರು ಪದರಹಿತ ಸಂವಹನೆಯ ಮಟ್ಟವನ್ನು ಗುರುತಿಸಿದ್ದು, ಎಲ್ಲಾ ಸಂವಹನೆಯ ಪೈಕಿ ಇದು ಸುಮಾರು ಶೇಕಡಾ 50-65ನಷ್ಟು ಇರಬಹುದಾದ ಸಂದರ್ಭದಲ್ಲಿ ಶೇಕಡಾ 80ನಷ್ಟು ಹೆಚ್ಚಿನ ಮಟ್ಟದಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ಬೇರೆ ಬೇರೆ ಅಧ್ಯಯನಗಳು ಬೇರೆಯದೇ ಆದ ಪ್ರಮಾಣಗಳನ್ನು ಕಂಡುಕೊಂಡಿವೆ. ಮೌಖಿಕ ಸಂವಹನೆಯು ಪದದ ಸಂವಹನೆಗಿಂತ 4.3 ಪಟ್ಟು ಹೆಚ್ಚು ಬಾರಿ ಕಾಣಿಸಿಕೊಳ್ಳುತ್ತದೆ ಎಂದು ಕೆಲವು ಅಧ್ಯಯನಗಳು ಹೇಳಿದರೆ, ಮತ್ತೊಂದು ಅಧ್ಯಯನವು ಹೇಳುವ ಪ್ರಕಾರ, ಒಂದು ಸ್ಪಷ್ಟ ಮಾತಿನಲ್ಲಿ ಹೇಳುವುದಾದರೆ ಪದದ ಸಂಹವನೆಯು ಒಂದು ಅಪ್ಪಟ ಮೌಖಿಕ ಅಭಿವ್ಯಕ್ತಿಗಿಂತ 4 ಪಟ್ಟು ಹೆಚ್ಚು ಅರ್ಥವಾಗುವ ಸಾಧ್ಯತೆಗಳಿರುತ್ತವೆ. ಒಂದು 7%-38%-55% ನಿಯಮವನ್ನು ಕಂಡುಹಿಡಿಯುವುದಕ್ಕೆ ಸಂಬಂಧಿಸಿ ಆಲ್ಬರ್ಟ್‌ ಮೆಹ್ರಾಬಿಯನ್‌ ಗಮನಾರ್ಹನಾಗಿದ್ದು, ಸಾಮಾನ್ಯವಾಗಿ ಭಾವಿಸಿರುವಂತೆ, ಪದಗಳಿಂದ, ಧ್ವನಿಯಿಂದ, ಮತ್ತು ದೇಹ ಭಾಷೆಯಿಂದ ಎಷ್ಟರಮಟ್ಟಿಗಿನ ಸಂವಹನೆಯು ನೀಡಲ್ಪಟ್ಟಿತು ಎಂಬುದನ್ನು ಈ ನಿಯಮವು ಸೂಚಿಸುತ್ತದೆ. ಆದಾಗ್ಯೂ , ಓರ್ವ ವ್ಯಕ್ತಿಯು "ನಿನ್ನೊಂದಿಗೆ ನನಗಾವ ಸಮಸ್ಯೆಯೂ ಇಲ್ಲ!" ಎಂದು ಹೇಳುವಂಥ, ಭಾವನೆಗಳು ಅಥವಾ ವರ್ತನೆಗಳನ್ನು ಅಭಿವ್ಯಕ್ತಿಸುವ ಸನ್ನಿವೇಶಗಳನ್ನು ಮಾತ್ರವೇ ಮೆಹ್ರಾಬಿಯನ್‌ ಉಲ್ಲೇಖಿಸುತ್ತಿದ್ದ.

ವಾಸ್ತವವಾಗಿ ಹೇಳಲಾದ ಪದಗಳ ಮೇಲೆ ಗಮನಹರಿಸುವುದಕ್ಕಿಂತ, ಮಾತಿನ ಧ್ವನಿಯ ಮೇಲೆ, ಮತ್ತು ವ್ಯಕ್ತಿಯ ದೇಹ ಭಾಷೆಯ ಮೇಲೆ ಜನರು ಸಾಮಾನ್ಯವಾಗಿ ಗಮನಹರಿಸುವಾಗ ಇದು ಪರಿಗಣಿಸಲ್ಪಡುತ್ತದೆ. ಈ ಶೇಕಡಾವಾರು ಪ್ರಮಾಣಗಳು ಎಲ್ಲಾ ಸಂವಹನೆಗೂ ಅನ್ವಯವಾಗುತ್ತವೆ ಎಂಬುದೊಂದು ಸಾಮಾನ್ಯ ತಪ್ಪುಗ್ರಹಿಕೆಯಾಗಿದೆ.[]

ದೇಹ ಭಾಷೆ ಮತ್ತು ಅಂತರ

ಬದಲಾಯಿಸಿ

ಯಾರಾದರೊಬ್ಬರು ನಮಗೆ ತೀರಾ ಹತ್ತಿರದ ದಾರಿಯಲ್ಲಿ ನಿಂತಿರುವಾಗ, ಕಂಡುಬರುತ್ತದೆ ಎಂದು ನಾವು ಕಲ್ಪಿಸಿಕೊಳ್ಳಬಹುದಾದ ಮಾನಸಿಕವಾದ "ಕಲ್ಪನೆ"ಗೆ ವ್ಯಕ್ತಿಗಳ ನಡುವಿನ ಅಂತರವು ಉಲ್ಲೇಖಿಸಲ್ಪಡುತ್ತದೆ. ವ್ಯಕ್ತಿಗಳ ನಡುವಣ ಅಂತರಕ್ಕೆ ಸಂಬಂಧಿಸಿ ನಾಲ್ಕು ಬಗೆ ವಲಯಗಳಿವೆ ಎಂದು ಸಂಶೋಧನೆಯು ತಿಳಿಸಿದೆ. ಮೊದಲ ವಲಯವನ್ನು ಆತ್ಮೀಯ ಅಂತರ ಎಂದು ಕರೆಯಲಾಗುತ್ತದೆ. ಸ್ಪರ್ಶಿಸುವುದರಿಂದ ಮೊದಲ್ಗೊಂಡು ಸುಮಾರು ಹದಿನೆಂಟು ಇಂಚುಗಳವರೆಗೆ (46 ಸೆಂಮೀ) ಅಂತರವನ್ನು ಕಾಯ್ದುಕೊಳ್ಳುವುದರವರೆಗೆ ಇದರ ಲಕ್ಷಣವಿದೆ. ಆತ್ಮೀಯ ಅಂತರ ಎಂಬುದು ನಮ್ಮ ಸುತ್ತ ಇರುವ ಅಂತರವಾಗಿದ್ದು ಇದನ್ನು ನಾವು ಪ್ರಣಯಿಗೆ, ಮಕ್ಕಳಿಗಷ್ಟೇ ಅಲ್ಲದೇ, ಹತ್ತಿರದ ಕುಟುಂಬ ಸದಸ್ಯರಿಗೆ ಹಾಗೂ ಸ್ನೇಹಿತರಿಗೆ ಮೀಸಲಿರಿಸುತ್ತೇವೆ. ಎರಡನೆಯ ವಲಯವನ್ನು ವೈಯಕ್ತಿಕ ಅಂತರ ಎಂದು ಕರೆಯಲಾಗುತ್ತದೆ. ಒಂದು ತೋಳಿನ ಉದ್ದದಷ್ಟು ದೂರದಿಂದ ಇದು ಆರಂಭವಾಗುತ್ತದೆ; ನಮ್ಮ ಶರೀರದ ಸುತ್ತಲಿನ ಹದಿನೆಂಟು ಇಂಚುಗಳಿಂದ (46 ಸೆಂಮೀ) ಪ್ರಾರಂಭಿಸಿ ಸುಮಾರು ನಾಲ್ಕು ಅಡಿ (122 ಸೆಂಮೀ) ಆಚೆಯಲ್ಲಿ ಕೊನೆಗೊಳ್ಳುವುದು ಇದರ ಲಕ್ಷಣ. ಸ್ನೇಹಿತರೊಂದಿಗೆ ಸಂಭಾಷಿಸುವಾಗ, ಸಹವರ್ತಿಗಳ ಜೊತೆ ಹರಟೆ ಹೊಡೆಯುವಾಗ, ಮತ್ತು ಗುಂಪು ಚರ್ಚೆಗಳಲ್ಲಿ ನಾವು ವೈಯಕ್ತಿಕ ಅಂತರವನ್ನು ಬಳಸುತ್ತೇವೆ. ವ್ಯಕ್ತಿಗಳ ನಡುವಿನ ಅಂತರದ ಮೂರನೆಯ ವಲಯವನ್ನು ಸಾಮಾಜಿಕ ಅಂತರ ಎಂದು ಕರೆಯಲಾಗುತ್ತದೆ. ಇದು ನಿಮ್ಮಿಂದ ನಾಲ್ಕರಿಂದ ಎಂಟು ಅಡಿಗಳ (1.2 ಮೀ - 2.4 ಮೀ) ದೂರದವರೆಗೆ ವ್ಯಾಪಿಸುವ ಪ್ರದೇಶವಾಗಿದೆ. ಅಪರಿಚಿತರಿಗೆ, ಹೊಸದಾಗಿ ರೂಪುಗೊಂಡ ಗುಂಪುಗಳಿಗೆ, ಹಾಗೂ ಹೊಸ ಪರಿಚಯಗಳಿಗೆ ಸಾಮಾಜಿಕ ಅಂತರವನ್ನು ಮೀಸಲಿಡಲಾಗುತ್ತದೆ. ಇದೇ ರೀತಿಯಲ್ಲಿ ಗುರುತಿಸಲ್ಪಟ್ಟಿರುವ ನಾಲ್ಕನೆಯ ವಲಯವನ್ನು ಸಾರ್ವಜನಿಕ ಅಂತರ ಎಂದು ಕರೆಯಲಾಗುತ್ತದೆ. ನಿಮ್ಮಿಂದ ಎಂಟು ಅಡಿಗಳಿಗೂ (2.4 ಮೀ) ಆಚೆಯಿರುವ ಏನನ್ನೇ ಆಗಲಿ ಇದು ಒಳಗೊಂಡಿರುತ್ತದೆ. ಭಾಷಣಗಳು, ಉಪನ್ಯಾಸಗಳು, ಮತ್ತು ರಂಗಭೂಮಿಗೆ ಸಂಬಂಧಿಸಿದಂತೆ ಈ ವಲಯವನ್ನು ಬಳಸಲಾಗುತ್ತದೆ; ಸಾರ್ವಜನಿಕ ಅಂತರ ಎಂಬುದು ಮೂಲತಃ ಬೃಹತ್‌ ಪ್ರಮಾಣದ ಪ್ರೇಕ್ಷಕ ವೃಂದಲ್ಲೆ ಮೀಸಲಾದ ಅಂತರವಾಗಿದೆ.[]

ಲೈಂಗಿಕ ಆಸಕ್ತಿ ಮತ್ತು ದೇಹ ಭಾಷೆ

ಬದಲಾಯಿಸಿ

ಇತರ ಜನರಲ್ಲಿ ತಮಗಿರುವ ಲೈಂಗಿಕ ಆಸಕ್ತಿಯನ್ನು ದೇಹ ಭಾಷೆಯ ಮೂಲಕ ಜನರು ಸಾಮಾನ್ಯವಾಗಿ ವ್ಯಕ್ತಪಡಿಸುತ್ತಾರೆ. ಆದರೂ ಸಹ, ಖಚಿತವಾದ ಸ್ವರೂಪ ಹಾಗೂ ಮಟ್ಟವು ಸಂಸ್ಕೃತಿ, ಕಾಲ ಹಾಗೂ ಲಿಂಗಕ್ಕನುಗುಣವಾಗಿ ಬದಲಾಗುತ್ತವೆ. ಆಸಕ್ತಿಯನ್ನು ಸಂಜ್ಞೆ ಮಾಡಲು ಇರುವ ಕೆಲವೊಂದು ಸೂಚನೆಗಳಲ್ಲಿ ಇವು ಸೇರಿವೆ: ಉತ್ಪ್ರೇಕ್ಷಿತ ಭಾವಸೂಚಕಗಳು ಹಾಗೂ ಚಲನೆ, ಅನುಕರಣೆ ಮಾಡುವುದು ಮತ್ತು ಪ್ರತಿಬಿಂಬಿಸುವುದು, ಕಣ್ಣುಹಾಯಿಸುವಿಕೆಯನ್ನು ಕೋಣೆಯು ಒಳಗೊಂಡಿರುವುದು, ಕಾಲುಗಳನ್ನು ಅಡ್ಡಲಾಗಿ ಹಾಕಿಕೊಂಡಿರುವುದು, ಒಂದೆಡೆ ತಿರುಗಿಸಿದ ಮೊಣಕಾಲು, ಕೂದಲನ್ನು ಚಿಮ್ಮಿಸುವುದು ಅಥವಾ ಸ್ಪರ್ಶಿಸುವುದು, ತಲೆಯನ್ನು ಓಲಿಸುವುದು, ಸೊಂಟವನ್ನು ತಿರುಗಿಸುವುದು, ಮಣಿಕಟ್ಟುಗಳನ್ನು ತೋರಿಸುವುದು, ಬಟ್ಟೆಗಳನ್ನು ಸರಿಮಾಡಿಕೊಳ್ಳುವುದು, ನಗುವುದು ಹಾಗೂ ಮಂದಹಾಸ ಬೀರುವುದು, ಕಣ್ಣಿನ ಸಂಪರ್ಕ, ಸ್ಪರ್ಶಿಸುವುದು, ತಮಾಷೆಯಾಗಿರುವುದು, ಮತ್ತು ತೀರಾ ಹತ್ತಿರದಲ್ಲಿರುವುದು. ಮಾನವರು ಲೈಂಗಿಕವಾಗಿ ಉದ್ರೇಕಗೊಂಡಾಗ ಕಣ್ಣಿನ ಪಾಪೆಯನ್ನು ಅಗಲಿಸುವಂಥ ಶಾರೀರಿಕ ಸೂಚನೆಗಳನ್ನೂ ಪ್ರದರ್ಶಿಸುತ್ತಾರೆ.

ಉದ್ದೇಶಪೂರ್ವಕವಲ್ಲದ ಭಾವಸೂಚಕಗಳು

ಬದಲಾಯಿಸಿ

ಇತ್ತೀಚೆಗೆ, ಒಂದು ಪರಸ್ಪರ ಕಾರ್ಯ ನಡೆಸಬಲ್ಲ ಹಾಗೂ ಹೊಂದಿಕೊಳ್ಳಬಲ್ಲ ಮಾನವ-ಯಂತ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಪ್ರಯೋಜನಕಾರಿಯಾಗಬಲ್ಲ ಮಾನವನ ನಡವಳಿಕೆಯ ಸೂಚನೆಗಳನ್ನು ಅಧ್ಯಯನ ಮಾಡುವಲ್ಲಿ ಬೃಹತ್‌ ಪ್ರಮಾಣದ ಆಸಕ್ತಿಯು ಕಂಡುಬರುತ್ತಿದೆ. ಉದ್ದೇಶಪೂರ್ವಕವಲ್ಲದ ಮಾನವ ಭಾವಸೂಚಕಗಳಾದ ಕಣ್ಣುಜ್ಜಿಕೊಳ್ಳುವುದು, ಗಲ್ಲದ ಕೆಳಗೆ ಕೈಯಿಟ್ಟುಕೊಳ್ಳುವುದು, ತುಟಿಯನ್ನು ಮುಟ್ಟಿಕೊಳ್ಳುವುದು, ಮೂಗನ್ನು ತುರಿಸಿಕೊಳ್ಳುವುದು, ತಲೆಯನ್ನು ಕೆರೆದುಕೊಳ್ಳುವುದು, ಕಿವಿಯನ್ನು ಕೆರೆದುಕೊಳ್ಳುವುದು, ತೋಳುಗಳನ್ನು ಅಡ್ಡಲಾಗಿ ಹಿಡಿದುಕೊಳ್ಳುವುದು, ಮತ್ತು ಬೆರಳುಗಳನ್ನು ಬಂಧಿಸಿಟ್ಟುಕೊಳ್ಳುವುದು ಇವೆಲ್ಲವೂ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಕೆಲವೊಂದು ಪ್ರಯೋಜನಕಾರಿ ಮಾಹಿತಿಯನ್ನು ಒದಗಿಸುತ್ತವೆ ಎಂದು ಕಂಡುಬಂದಿದೆ. ಶೈಕ್ಷಣಿಕ ಅನ್ವಯಿಕೆಗಳ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಇಂಥ ಭಾವಸೂಚಕಗಳನ್ನು ಉದ್ಧರಣ ಮಾಡಲು ಅಥವಾ ಎತ್ತಿ ತೆಗೆಯಲು ಕೆಲವೊಂದು ಸಂಶೋಧಕರು ಪ್ರಯತ್ನಿಸಿದ್ದಾರೆ.[೧೦]

ಆಕರಗಳು

ಬದಲಾಯಿಸಿ
  1. ಬೋರ್ಗ್‌, ಜಾನ್‌. ಬಾಡಿ ಲಾಂಗ್ವೇಜ್‌: 7 ಈಸಿ ಲೆಸನ್ಸ್‌ ಟು ಮಾಸ್ಟರ್‌ ದಿ ಸೈಲೆಂಟ್‌ ಲಾಂಗ್ವೇಜ್‌. ಪ್ರೆಂಟೈಸ್‌ ಹಾಲ್‌ ಲೈಫ್‌, 2008
  2. "More or Less". 2009-08-14. BBC Radio 4. http://www.bbc.co.uk/programmes/b00lyvz9. 
  3. ಎಂಗಲ್‌ಬರ್ಗ್‌, ಇಸಾ N. ವರ್ಕಿಂಗ್‌ ಇನ್‌ ಗ್ರೂಪ್ಸ್‌: ಕಮ್ಯುನಿಕೇಷನ್‌ ಪ್ರಿನ್ಸಿಪಲ್ಸ್‌ ಅಂಡ್‌ ಸ್ಟ್ರಾಟಜೀಸ್‌. ಮೈ ಕಮ್ಯುನಿಕೇಷನ್‌ ಕಿಟ್‌ ಸೀರೀಸ್‌, 2006. ಪುಟ 133
  4. ಎಂಗಲ್‌ಬರ್ಗ್‌, ಇಸಾ N. ವರ್ಕಿಂಗ್‌ ಇನ್‌ ಗ್ರೂಪ್ಸ್‌: ಕಮ್ಯುನಿಕೇಷನ್‌ ಪ್ರಿನ್ಸಿಪಲ್ಸ್‌ ಅಂಡ್‌ ಸ್ಟ್ರಾಟಜೀಸ್‌. ಮೈ ಕಮ್ಯುನಿಕೇಷನ್‌ ಕಿಟ್‌ ಸೀರೀಸ್‌, 2006. ಪುಟ 137
  5. ಬಾಡಿ ಲಾಂಗ್ವೇಜ್‌ ಬೇಸಿಕ್ಸ್‌ - ಡೆವಲಪ್‌ಮೆಂಟ್‌
  6. ೬.೦ ೬.೧ ೬.೨ ೬.೩ ೬.೪ ೬.೫ ಮ್ಯಾಥ್ಯೂ ಮೆಕೆ, ಮಾರ್ಥಾ ಡೇವಿಸ್‌, ಪ್ಯಾಟ್ರಿಕ್‌ ಫ್ಯಾನಿಂಗ್‌ [1983] (1995) ಮೆಸೇಜಸ್‌: ದಿ ಕಮ್ಯುನಿಕೇಷನ್ಸ್‌ ಸ್ಕಿಲ್ಸ್‌ ಬುಕ್‌ , ಎರಡನೇ ಆವೃತ್ತಿ, ನ್ಯೂ ಹರ್ಬಿಂಗರ್‌ ಪಬ್ಲಿಕೇಷನ್ಸ್‌, ISBN 1572245921, 9781572245921, ಪುಟಗಳು 56-57
  7. ಟಾರ್ನೋ, E. (2005)
  8. "ಥ್ರೀ ಎಲಿಮೆಂಟ್ಸ್‌ ಆಫ್‌ ಕಮ್ಯುನಿಕೇಷನ್‌ - ಅಂಡ್‌ ದಿ ಸೋ ಕಾಲ್ಡ್‌ "7%-38%-55% ರೂಲ್‌" - ಎಕಾಡೆಮಿ". Archived from the original on 2020-03-25. Retrieved 2010-02-19.
  9. ಎಂಗಲ್‌ಬರ್ಗ್‌, ಇಸಾ N. ವರ್ಕಿಂಗ್‌ ಇನ್‌ ಗ್ರೂಪ್ಸ್‌: ಕಮ್ಯುನಿಕೇಷನ್‌ ಪ್ರಿನ್ಸಿಪಲ್ಸ್‌ ಅಂಡ್‌ ಸ್ಟ್ರಾಟಜೀಸ್‌. ಮೈ ಕಮ್ಯುನಿಕೇಷನ್‌ ಕಿಟ್‌ ಸೀರೀಸ್‌, 2006. ಪುಟ 140-141
  10. ಅಬ್ಬಾಸಿ, A.R.(2007).


ಹೆಚ್ಚಿನ ಓದಿಗಾಗಿ

ಬದಲಾಯಿಸಿ
  • ಅಬ್ಬಾಸಿ, A.R.(2007) ಟುವರ್ರ್ಡ್ಸ್ ನಾಲೆಜ್‌-ಬೇಸ್ಡ್‌ ಅಫೆಕ್ಟಿವ್‌ ಇಂಟರಾಕ್ಷನ್‌-ಸಿಚುಯೇಷನಲ್‌ ಇಂಟರ್‌ಪ್ರಿಟೇಷನ್‌ ಆಫ್‌ ಅಫೆಕ್ಟ್‌, ಅಬ್ದುಲ್‌ ರೆಹಮಾನ್‌ ಅಬ್ಬಾಸಿ, ತಕಿಯಾಕಿ ಯುನೊ, ಮ್ಯಾಥ್ಯೂ N.ಡೈಲೆ, ನಿತಿನ್‌ V. ಅಫ್ಜಲ್‌ಪುರ್‌ಕರ್‌, ಪ್ರೊಸೀಡಿಂಗ್ಸ್‌ ಆಫ್‌ 2ಡ್‌ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್‌ ಆನ್‌ ಅಫೆಕ್ಟಿವ್‌ ಕಂಪ್ಯೂಟಿಂಗ್‌ ಅಂಡ್‌ ಇಂಟಲಿಜೆಂಟ್‌ ಇಂಟರಾಕ್ಷನ್‌, ಲಿಸ್ಬನ್‌, ಪೋರ್ಚುಗಲ್‌ 12-14 ಸೆಪ್ಟೆಂಬರ್‌, 2007, ಲೆಕ್ಚರ್‌ ನೋಟ್ಸ್‌ ಇನ್‌ ಕಂಪ್ಯೂಟರ್‌ ಸೈನ್ಸ್‌ ಸಂಪುಟ. 4738, ಪುಟಗಳು 455–466, ಸ್ಪ್ರಿಂಗರ್-ವೆರ್ಲಾಗ್‌,2007.
  • ಆರ್ಗೈಲ್‌, M. (1990). ಬಾಡಿಲಿ ಕಮ್ಯುನಿಕೇಷನ್‌ (2ನೇ ಆವೃತ್ತಿ) . ನ್ಯೂಯಾರ್ಕ್‌: ಇಂಟರ್‌ನ್ಯಾಷನಲ್‌ ಯೂನಿವರ್ಸಿಟಿ ಪ್ರೆಸ್‌. ISBN 0823605515
  • ಕೋಹೆನ್‌, ಡೇವಿಡ್‌. ಬಾಡಿ ಲಾಂಗ್ವೇಜ್‌, ವಾಟ್‌ ಯು ನೀಡ್‌ ಟು ನೋ, 2007.
  • ಗ್ರ್ಯಾಮರ್‌ K. 1990. ಸ್ಟ್ರೇಂಜರ್ಸ್‌ ಮೀಟ್‌: ಲಾಫ್ಟರ್‌ ಅಂಡ್‌ ನಾನ್‌ವರ್ಬಲ್‌ ಸೈನ್ಸ್‌ ಆಫ್ ಇಂಟರೆಸ್ಟ್‌ ಇನ್‌ ಆಪೋಸಿಟ್‌ ಸೆಕ್ಸ್‌ ಎನ್‌ಕೌಂಟರ್ಸ್‌. ಜರ್ನಲ್‌ ಆಫ್‌ ನಾನ್‌ವರ್ಬಲ್‌ ಬಿಹೇವಿಯರ್‌ 14: 209-236.
  • ಹಾಲ್‌, E.T. ಸೈಲೆಂಟ್‌ ಲಾಂಗ್ವೇಜ್‌. ಡಬಲ್‌ಡೇ & ಕಂ, ನ್ಯೂಯಾರ್ಕ್‌, 1959.
  • ಹೆನ್ಲೆ, N. M. ಬಾಡಿ ಪಾಲಿಟಿಕ್ಸ್‌: ಪವರ್, ಸೆಕ್ಸ್‌ ಅಂಡ್‌ ನಾನ್‌-ವರ್ಬಲ್‌ ಕಮ್ಯುನಿಕೇಷನ್ಸ್‌. ಪ್ರೆಂಟೈಸ್‌-ಹಾಲ್‌, 1977.
  • ಹೆಸ್‌, E. H. (1975). ದಿ ಟೆಲ್‌-ಟೇಲ್‌ ಐ. ನ್ಯೂಯಾರ್ಕ್‌: ವಾನ್‌ ನೋಸ್ಟ್ರಾಂಡ್‌.
  • ಹಿಕ್ಸನ್‌ M. 1985. ನಾನ್‌ವರ್ಬಲ್‌ ಕಮ್ಯುನಿಕೇಷನ್‌ ವಿಲಿಯಂ C. ಬ್ರೌನ್‌ ಕಂಪನಿ ಪಬ್ಲಿಷರ್ಸ್‌, ಬಾಸ್ಟನ್‌.
  • ಹಿಂಡೆ, R.A. (ಸಂಪಾದಿತ). ನಾನ್‌ವರ್ಬಲ್‌ ಕಮ್ಯುನಿಕೇಷನ್‌ ಕೇಂಬ್ರಿಜ್‌ ಯೂನಿವರ್ಸಿಟಿ ಪ್ರೆಸ್‌, 1972.
  • ಹಿರ್ಷ್‌, L.R. ಮತ್ತು L. ಪಾಲ್‌. 1996. ಹ್ಯೂಮನ್‌ ಮೇಲ್‌ ಮೇಟಿಂಗ್‌ ಸ್ಟ್ರಾಟಜೀಸ್‌: ಕೋರ್ಟ್‌ಷಿಪ್‌ ಟ್ಯಾಕ್ಟಿಕ್ಸ್‌ ಆಫ್‌ ದಿ "ಕ್ವಾಲಿಟಿ" ಅಂಡ್‌ "ಕ್ವಾಂಟಿಟಿ" ಆಲ್ಟರ್ನೇಟಿವ್ಸ್‌. ಇಥಾಲಜಿ ಅಂಡ್‌ ಸೋಷಿಯೋಬಯಾಲಜಿ 17: 55-70.
  • ಲಿವಿಂಗ್‌ಸ್ಟನ್‌, ವೈದ್ಯರುಗಳಾದ ಷರೋನ್‌ ಮತ್ತು ಗ್ಲೆನ್‌ (2004). ಹೌ ಟು ಯೂಸ್‌ ಬಾಡಿ ಲಾಂಗ್ವೇಜ್‌ . ಪಿಎಸ್‌ವೈ ಟೆಕ್‌ ಇಂಕ್‌.
  • ಆಲ್ಬರ್ಟ್‌ ಮೆಹ್ರಾಬಿಯನ್‌ ಮತ್ತು ಆತನ 7%-38%-55% ನಿಯಮ.
  • ನೀರೆನ್‌ಬರ್ಗ್‌ G.I. ಮತ್ತು H.C. ಕೆಲೆರೊ. 1971. ಹೌ ಟು ರೀಡ್‌ ಎ ಪರ್ಸನ್‌ ಲೈಕ್‌ ಎ ಬುಕ್‌ . ಹಾಥಾರ್ನ್‌ ಬುಕ್ಸ್‌, ಇಂಕ್‌., ನ್ಯೂಯಾರ್ಕ್‌.
  • ಅಲನ್‌ ಪೀಸ್‌ ಬಾಡಿ ಲಾಂಗ್ವೇಜ್‌ (30 ವರ್ಷಗಳಿಗೂ ಹೆಚ್ಚಿನ ಸಂಶೋಧನೆ)
  • ಪೀಸ್‌, A. ಬಾಡಿ ಲಾಂಗ್ವೇಜ್‌. ಶೆಲ್ಡನ್‌ ಪ್ರೆಸ್‌, ಲಂಡನ್‌, 1984.
  • ಪೆರ್ಪರ್‌ T. 1985. ಸೆಕ್ಸ್‌ ಸಿಗ್ನಲ್‌: ದಿ ಬಯಾಲಜಿ ಆಫ್‌ ಲವ್‌. ISI ಪ್ರೆಸ್‌, ಫಿಲಡೆಲ್ಫಿಯಾ.

ಹೊರಗಿನ ಕೊಂಡಿಗಳು

ಬದಲಾಯಿಸಿ