ದೀಪಾ ಕರ್ಮಾಕರ್ (ಜನನ 9 ಆಗಸ್ಟ್ 1993, ಅಗರ್ತಲಾ) ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ತ್ರಿಪುರದ ಅಗರ್ತಲಾಕ್ಕೆ ಸೇರಿದ ಭಾರತೀಯ ಕಲಾತ್ಮಕ ವ್ಯಾಯಾಮಪಟು/ಜಿಮ್ನಾಸ್ಟಿಕ್‌ ಪಟು. ಗ್ಲ್ಯಾಸ್ಗೋನಲ್ಲಿ ನಡೆದ 2014 ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಅವರು ಜಿಮ್ನಾಸ್ಟಿಕ್‌ ಇತಿಹಾಸದಲ್ಲಿ ಮೊದಲ ಭಾರತೀಯ ಸ್ತ್ರೀ ಜಿಮ್ನಾಸ್ಟಿಕ್‌ ಪಟುವಾಗಿ ಗಮನ ಸೆಳೆದರು. ಬಹಳ ಕಷ್ಟದ ವಾಲ್ಟ್ ವಿಭಾಗದಲ್ಲಿ ಯಶಸ್ವಿಯಾಗಿ ಪ್ರಾಡುನೊವಾ ಜಿಗಿತದಲ್ಲಿ ಉತ್ತಮವಾಗಿ ಜಿಗತದ ನಂತರ ಸುಸ್ಥಿರ ನಿಲುವು ತೋರಿದ ಜಗತ್ತಿನ ಐವರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೂ ಪಾತ್ರರಾದರು.

  • ರಿಯೊ ಡಿ ಜನೈರೊ, ಬ್ರೆಜಿಲ್‌'ಲ್ಲಿ ಶನಿವಾರ 16-4-2016 ರಾತ್ರಿ ನಡೆದ ಒಲಿಂಪಿಕ್ಸ್‌ ಅರ್ಹತಾ ಸ್ಪರ್ಧೆಯಲ್ಲಿ ಅವರು 52.698 ಪಾಯಿಂಟ್ಸ್‌ಗಳನ್ನು ಗಳಿಸಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅರ್ಹತೆ ಗಿಟ್ಟಿಸಿದ್ದಾರೆ.ವಿಶ್ವದ ಅತ್ಯುನ್ನತ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ದೇಶದ ಪ್ರಪ್ರಥಮ ಮಹಿಳಾ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 52 ವರ್ಷಗಳಿಂದ ಭಾರತದ ಯಾವುದೇ ಜಿಮ್ನಾಸ್ಟಿಕ್ಸ್‌ ಪಟುವು ಮಾಡದ ಸಾಧನೆಯನ್ನೂ ಅವರು ಮಾಡಿದರು. ಪುರುಷರ ವಿಭಾಗದಲ್ಲಿ 1964ರಲ್ಲಿ ಭಾರತದ ಆರು ಮಂದಿ ಜಿಮ್ನಾಸ್ಟಿಕ್ಸ್‌ ಪಟುಗಳು ಭಾಗವಹಿಸಿದ್ದರು. ನಂತರದ ಒಲಿಂಪಿಕ್ಸ್‌ಗಳಲ್ಲಿ ಯಾರೂ ಅರ್ಹತೆ ಪಡೆದಿರಲಿಲ್ಲ. ಇದೀಗ ದೀಪಾ ಆ ಸಾಧನೆ ಮಾಡಿದ್ದಾರೆ.ಇಲ್ಲಿಯವರೆಗೆ ಪುರುಷರ ವಿಭಾಗದಲ್ಲಿ ಒಟ್ಟು 11 ಸ್ಪರ್ಧಿಗಳು (1952ರಲ್ಲಿ ಇಬ್ಬರು, 1956ರಲ್ಲಿ ಮೂವರು ಮತ್ತು 1964ರಲ್ಲಿ ಆರು) ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು.
ದೀಪಾ ಕರ್ಮಾಕರ್
— ಜಿಮ್ನಾಸ್ಟ್ —
ದೀಪಾ ಕರ್ಮಾಕರ್
Personal information
ಪೂರ್ಣ ಹೆಸರುದೀಪಾ ಕರ್ಮಾಕರ್
ಪ್ರತಿನಿಧಿಸುವ ದೇಶIndia
ಜನ್ಮ ದಿನಾಂಕ (1993-08-09) ೯ ಆಗಸ್ಟ್ ೧೯೯೩ (ವಯಸ್ಸು ೩೧)
ಅಗರ್ತಲ, ತ್ರಿಪುರ, ಭಾರತ
ಎತ್ತರ೪ ಅಡಿ ೧೧ ಇಂಚು
Disciplineಡಬ್ಲೂಎಜಿ
ಮಟ್ಟSenior International Elite
ಮುಖ್ಯ ತರಬೇತುದಾರ(ರು)ಬಿಸ್ವೆಶ್ವರ್ ನಂದಿ
  • ಕಳೆದ ನವೆಂಬರ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ ಮೊದಲ ಭಾರತೀಯ ಮಹಿಳೆಯೆಂಬ ಹೆಗ್ಗಳಿಕೆಯನ್ನೂ ಅವರು ಪಡೆದಿದ್ದಾರೆ. ಆ ಸ್ಪರ್ಧೆಯಲ್ಲಿ ದೀಪಾ ಐದನೇ ಸ್ಥಾನ ಪಡೆದಿದ್ದರು. ಆದರೆ, ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವಲ್ಲಿ ವಿಫರಾಗಿದ್ದರು.

(ಒಲಂಪಿಕ್ ಅರ್ಹತಾ ವಿಜೇತೆ:[[೨]])[]

ಒಲಿಂಪಿಕ್ಸ್‌ನ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ ಅರ್ಹತಾ ಸ್ಪರ್ಧೆ

ಬದಲಾಯಿಸಿ
  • ಅರ್ಹತಾ ಸುತ್ತಿನ ಎಲ್ಲ ಸ್ಪರ್ಧೆಗಳಲ್ಲಿಯೂ 22 ವರ್ಷದ ದೀಪಾ 14 ಪ್ರತಿ ಸ್ಪರ್ಧಿಗಳಿಂದ ಕಠಿಣ ಪೈಪೋಟಿ ಎದುರಿಸಿದರು. ವಾಲ್ಟ್‌ ವಿಭಾಗದಲ್ಲಿ 15.066 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದರು. ನಿಖರವಾದ ಕೌಶಲ್ಯ ಪ್ರದರ್ಶಿಸುವ ಮೂಲಕ ಕರಾರುವಾಕ್ ಲ್ಯಾಂಡಿಂಗ್ ಮಾಡಿದ ಅವರು ಈ ವಿಭಾಗದಲ್ಲಿ ಅಗ್ರಸ್ಥಾನ ಪಡೆದರು. ಆದರೆ, ಅನ್‌ಈವನ್ ಬಾರ್‍ನಲ್ಲಿ ಅವರ ಆಟ ಉತ್ತಮವಾಗಿರಲಿಲ್ಲ. 14 ಸ್ಪರ್ಧಿಗಳಿದ್ದ ವಿಭಾಗದಲ್ಲಿ ಅವರು ಕೇವಲ 11.700 ಅಂಕಗಳನ್ನು ಮಾತ್ರ ಪಡೆದರು. ನಂತರ ಬ್ಯಾಲೆನ್ಸಿಂಗ್ ಬೀಮ್ ಮತ್ತು ಫ್ಲೋರ್‌ ಎಕ್ಸ್‌ರ್‌ಸೈಜ್‌ ವಿಭಾಗಗಳಲ್ಲಿ ಕ್ರಮವಾಗಿ 13.366 ಮತ್ತು 12.566 ಅಂಕಗಳನ್ನು ಕಲೆ ಹಾಕಿದರು.
  • ಒಲಿಂಪಿಕ್ಸ್‌ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ಗೆ ಇದುವರೆಗೆ ಒಟ್ಟು 78 ವನಿತೆಯರು ಆಯ್ಕೆಯಾಗಿದ್ದರು. ದೀಪಾ 79ನೇ ಸ್ಪರ್ಧಿಯಾಗಿ ಕಣಕ್ಕಿಳಿಯಲಿದ್ದಾರೆ.
ದೀಪಾ ಅವರಿಗೆ ಹಾರ್ದಿಕ ಅಭಿನಂದನೆಗಳು. ಅವರು ತಮ್ಮ ಪ್ರತಿಭೆಯ ಮೂಲಕ ಉನ್ನತ ಸಾಧನೆ ಮಾಡಿದ್ದಾರೆ. ತಮ್ಮ ಸಾಧನೆ ಮೂಲಕ ಭಾರತದ ಯುವಜನರಿಗೆ ಸ್ಫೂರ್ತಿ ತುಂಬಿದ್ದಾರೆ.–ಸಚಿನ್ ತೆಂಡೂಲ್ಕರ್, ಮಾಜಿ ಕ್ರಿಕೆಟಿಗ;

ಒಲಿಂಪಿಕ್ಸ್‌ ಅರ್ಹತೆ ಪಡೆದಿರುವ ದೀಪಾ ಕರ್ಮಾಕರ್ ಅವರು ಟಾಪ್ಸ್‌ ಯೋಜನೆಗೆ ಅರ್ಹತೆ ಗಳಿಸಿದ್ದಾರೆ. ಅವರ ಮುಂದಿನ ಸಿದ್ಧತೆಗಾಗಿ ರೂ.30 ಲಕ್ಷ ಪಡೆಯಲಿದೆ. ನಾಲ್ಕು ಹಂತದ ವಿಶೇಷ ತರಬೇತಿಯನ್ನೂ ಕೂಡ ಅವರು ಪಡೆಯುವರು. –ಸಾಯ್ (ಭಾರತ ಕ್ರೀಡಾ ಪ್ರಾಧಿಕಾರ)

ಭಾರತದ ಜಿಮ್ನಾಸ್ಟಿಕ್ಸ್‌ ಕ್ರೀಡೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದೀರಿ. ಒಲಿಂಪಿಕ್ಸ್‌ ಜಿಮ್ನಾಸ್ಟಿಕ್ಸ್‌ನಲ್ಲಿ ಭಾಗವಹಿಸುವ ಪ್ರಥಮ ಭಾರತೀಯ ಮಹಿಳೆ ಎಂಬ ಗೌರವ ನಿಮ್ಮದಾಗಿದೆ. ನಿಮಗೆ ಶುಭಾಶಯಗಳು. ಸರ್ವಾನಂದ್ ಸೋನೊವಾಲ್, ಕೇಂದ್ರ ಕ್ರೀಡಾ ಸಚಿವರು

ಆರಂಭಿಕ ಜೀವನ

ಬದಲಾಯಿಸಿ
  • ದೀಪಾ ಕರ್ಮಾಕರ್ ತ್ರಿಪುರದ ಅಗರ್ತಲಾದಿಂದ ಬಂದವರು., ಮತ್ತು ಅವರು 6 ವರ್ಷದವಳಾಗಿದ್ದಾಗಿನಿಂದಲೇ ಜಿಮ್ನಾಸ್ಟಿಕ್ಸ್ ಅಭ್ಯಾಸ ಆರಂಭಿಸಿದರು.ಅನುಭವಿ ವಿಶ್ವೇಶ್ವರ ನಂದಿ ತರಬೇತುದಾರರಾಗಿದ್ದರು. ಕರ್ಮಾಕರ್ ಮೊದಲು ಜಿಮ್ನಾಸ್ಟಿಕ್ಸ್'ಗೆ ಸೇರಿಕೊಂಡಾಗ ಚಪ್ಪಟೆ ಪಾದ (ಫ್ಲಾಟ್ ಫುಟ್) ಹೊಂದಿದ್ದರು. ತರಬೇತುದಾರ ನಂದಿ ಈಗಲೂ ನೆನಪಿಸಿಕೊಳ್ಲುತ್ತಾರೆ. "ನಾನು ಇನ್ನೂ ನೆನಪಿಸಿಕೊಳ್ಳುತ್ತೇನೆ, ದೀಪಾ ಒಂದು ಚಪ್ಪಟೆ(ಫ್ಲಾಟ್) ಕಾಲಿನ ಮಗು, ಒಂದು ವ್ಯಾಯಾಮ/ಜಿಮ್ನಾಸ್ಟ್' ಪಟುವಾಗಲು ಉತ್ತಮ ಲಕ್ಷಣ ಅಲ್ಲ. ಇದು ನನಗೆ ಬರುವ ನೆನಪು." ಅವರು, "ದೀಪುವಿನ ಪಾದವನ್ನು ಸರಿಪಿಸಲು ಬಹಳ ಬಹಳ ಕಷ್ಟ ಪಡಬೇಕಅಯಿತು" ಎನ್ನುತ್ತಾರೆ. ದೀಪು ಮಾತ್ರಾ ತನ್ನೆಲ್ಲಾ ಯಶಸ್ಸಿಗೆ ತನ್ನ ತರಬೇತುದಾರರೇ ಕಾರಣ ಎನ್ನುತ್ತಾರೆ.
  • ದೀಪಾ ತಂದೆ ದುಲಾಲ್ ಕರ್ಮಾಕರ್, ಭಾರ ಎತ್ತುವಿಕೆ ಒಂದು ಸಾಯಿ ತರಬೇತುದಾರ, ತಾಯಿ ಗೀತಾ ಕರ್ಮಾಕರ್'ಗೃಹಿಣಿ
  • ಕಠಿಣ ಸಾಧನೆ: ವಾಸ್ತವಾಗಿ ದೀಪಾ ಕರ್ಮಾಕರ್ ಅವರು ಸವೆಸಿರುವ ಸಾಧನೆಯ ಹಾದಿ ಸರಳವಲ್ಲ. ಅವರು ಆರು ವರ್ಷದ ಬಾಲಕಿಯಾಗಿದ್ದಾಗ ಜಿಮ್ನಾಸ್ಟಿಕ್ಸ್‌ ಕೋಚ್ ವಿಶ್ವೇಶ್ವರ್ ನಂದಿ ಅವರು ತರಬೇತಿ ನೀಡಲು ಮೊದಲಿಗೆ ಒಪ್ಪಿರಲಿಲ್ಲ. ಏಕೆಂದರೆ ಒಬ್ಬ ಜಿಮ್ನಾಸ್ಟಿಕ್ಸ್‌ ಪಟುವಿಗೆ ಇರಬೇಕಾದ ಆಕೃತಿಯ ಪಾದಗಳು ದೀಪಾಗೆ ಇರಲಿಲ್ಲ. ಜಿಗಿಯಲು, ತುದಿಗಾಲಿನಲ್ಲಿ ಓಡಲು ಅವರಿಗಿದ್ದ ಪಾದಗಳ ರಚನೆ ಸೂಕ್ತವಾಗಿರಲಿಲ್ಲ. ಆದರೆ, ಬಾಲಕಿಯ ಆಸಕ್ತಿ ಗಮನಿಸಿದ್ದ ನಂದಿ ನಂತರ ತರಬೇತಿ ಆರಂಭಿಸಿದ್ದರು.

ಅಂದಿನಿಂದ ಇಂದಿನವರೆಗೆ ನಂದಿ ಅವರೇ ದೀಪಾಗೆ ಕೋಚ್ ಆಗಿದ್ದಾರೆ. []

ಪ್ರಥಮಗಳು

ಬದಲಾಯಿಸಿ
  • ಪ್ರಥಮಗಳ ಸಾಲು: ಐದು ವರ್ಷ ವಯಸ್ಸಿನಿಂದಲೇ ಜಿಮ್ನಾಸ್ಟಿಕ್ಸ್‌ ತರಬೇತಿ ಪಡೆಯುತ್ತಿರುವ ದೀಪಾ ಕರ್ಮಾಕರ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅಂತರರಾಷ್ಟ್ರೀಯ ಜಿಮ್ನಾಸ್ಟಿಕ್ಸ್‌ನಲ್ಲಿ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. 2014ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತದ ಮೊದಲ ವನಿತೆ ಎಂಬ ಶ್ರೇಯವೂ ಅವರದ್ದಾಗಿದೆ.
  • ಕಳೆದ 2015ರ ನವೆಂಬರ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ ಮೊದಲ ಭಾರತೀಯ ಮಹಿಳೆ.(ಐದನೇ ಸ್ಥಾನ)
  • ಇದೀಗ ಅಂತರರಾಷ್ಟ್ರೀಯ ಜಿಮ್ನಾಸ್ಟಿಕ್ಸ್‌ ಫೆಡರೇಷನ್ (ಎಫ್‌ಐಜಿ) ಅವರ ಆಯ್ಕೆಯನ್ನು ಘೋಷಿಸಿದೆ. ಭಾರತದ ಜಿಮ್ನಾಸ್ಟಿಕ್ಸ್‌ ಕ್ರೀಡಾಕ್ಷೇತ್ರಕ್ಕೆ ಇದು ಅಪಾರವಾದ ಹೆಮ್ಮೆಯ ವಿಷಯ’ ಎಂದು ಅಂತರರಾಷ್ಟ್ರೀಯ ರೆಫರಿ ದೀಪಕ್ ಕಾಗ್ರಾ ಸಂತಸ ವ್ಯಕ್ತಪಡಿಸಿದ್ದಾರೆ
  • 2011ರಲ್ಲಿ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಐದು ಚಿನ್ನದ ಪದಕ.

[][]

2015 ರ ಸಾಧನೆಗಳು

ಬದಲಾಯಿಸಿ

೨೦೧೫ ವಿಶ್ವ ಆರ್ಟಿಸ್ಟಿಕ್ ಜಿಮ್ನ್ಯಾಸ್ಟಿಕ್ಸ್ ಚಾಂಪಿಯನ್ಷಿಪ್ಸ್

ಬದಲಾಯಿಸಿ
ಹಂತ ಶ್ರೇಣಿ ಒಟ್ಟು ಸ್ಕೋರ್ ೧ ಕಷ್ಟ Execution Penalty Score 2 Difficulty Execution Penalty
ಅರ್ಹತೆ ೧೪.೯೦೦ ೧೫.೧೦೦ ೭.೦00 ೮.೧೦೦ 0.00 14.700 6.000 8.700 0.00
ಕೊನೆಯ ಹಂತ ೧೪.೬೮೩ 15.300 ೭.೦00 ೮.೩೦೦ 0.00 14.066 6.000 8.366 -0.300

2016ರ ಸಾಧನೆಗಳು

ಬದಲಾಯಿಸಿ
  • ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ ಜಿಮ್ನಾಸ್ಟಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ:
  • ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ ಜಿಮ್ನಾಸ್ಟಿಕ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಪ್ರಥಮ ವನಿತೆ ದೀಪಾ ಕರ್ಮಾಕರ್ ಅವರಿಗೆ 14-8-2016 ಭಾನುವಾರ ರಾತ್ರಿ ಸ್ವಲ್ಪದರಲ್ಲಿ ಪದಕ ತಪ್ಪಿತು.ವಿಶ್ವದ ಘಟಾನುಘಟಿ ಜಿಮ್ನಾಸ್ಟಿಕ್ ಪಟುಗಳಿಗೆ ಕಠಿಣ ಪೈಪೋಟಿ ಒಡ್ಡಿದ ದೀಪಾ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
  • ಮೊದಲ ಅವಕಾಶದಲ್ಲಿ 14,866 ಮತ್ತು ಎರಡನೇ ಅವಕಾಶದಲ್ಲಿ ಕಠಿಣವಾದ ಪ್ರುಡೊನೊವಾ ವಾಲ್ಟ್‌ನಲ್ಲಿ 15.266 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಎರಡನೇ ಸ್ಥಾನಕ್ಕೆ ಬಂದರು. ಒಟ್ಟು 15.066 ಅಂಕಗಳು.[] ದೀಪಾ ನಂತರ ಕಣಕ್ಕಿಳಿದ ಸ್ವಿಟ್ಜರ್‍ಲೆಂಡ್ ಗುಲಿಯಾ ಸ್ಟೇನ್‌ಗ್ರುಬೆರ್ 15.216 (ಕಂಚು)(ದೀಪಾಗಿಂತ 0.150ಹೆಚ್ಚು) ಅಂಕಗಳನ್ನು ಪಡೆದರು. ಕೊನೆಯ ಸ್ಪರ್ಧಿಯಾಗಿ ಕಣಕ್ಕಿಳಿದ ಅಮೆರಿಕದ ಸಿಮೊನ್ ಬೈಲ್ಸ್ 15.966 ಅಂಕ ಪಡೆದು ಚಿನ್ನ ಗೆದ್ದರು. ಮರಿಯಾಪಸೇಕಾ ರಷ್ಯಾ15253 (ಬೆಳ್ಳಿ).[]

ಪ್ರಶಸ್ತಿಗಳು

ಬದಲಾಯಿಸಿ
  • ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ:ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಜಿಮ್ನಾಸ್ಟಿಕ್ಸ್ ಪಟು ದೀಪಾ ಕರ್ಮಾಕರ್ ಮತ್ತು ಶೂಟರ್ ಜಿತು ರಾಯ್ ಅವರಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ದಿ.29 Aug, 2016 ಸೋಮವಾರ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು. ಪದಕ, ಪ್ರಮಾನಪತ್ರ ಹಾಗೂ ರೂ. 7.5 ಲಕ್ಷ ನಗದು ಬಹುಮಾನವನ್ನು ಒಳಗೊಂಡ ಖೇಲ್‌ ರತ್ನ ಪ್ರಶಸ್ತಿಯನ್ನು ಪ್ರಣವ್‌ ಮುಖರ್ಜಿ ಅವರಿಂದ ಕ್ರೀಡಾಪಟುಗಳು ಸ್ವೀಕರಿಸಿದರು.[]
  • ೨೦೧೭ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀಪ್ರಶಸ್ತಿ.[]

ಉಲ್ಲೇಖ

ಬದಲಾಯಿಸಿ
  1. [[೧]]
  2. "Glasgow 2014 - Dipa Karmakar profile". Glasgow
  3. https://www.youtube.com/watch?v=MkdDizUJCYc
  4. "ಆರ್ಕೈವ್ ನಕಲು". Archived from the original on 2017-09-20. Retrieved 2016-04-19.
  5. "Simone Biles of USA wins Gold in Women's Vault Gymnastics". Archived from the original on 2019-03-08. Retrieved 2016-11-29.
  6. ಪದಕ ತಪ್ಪಿದರೂ ಮನಗೆದ್ದ ದೀಪಾ
  7. ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ
  8. "Padma Awards 2017 announced".


ಹೊರಗಿನ ಕೊಂಡಿಗಳು

ಬದಲಾಯಿಸಿ
ಫೋಟೋ:ವೀಡಿಯೊ: [[೪]]
16-4-2016 ವೀಡಿಯೊ:[[೫]]