ಥ್ಯಾಚರ್ ಪರಿಣಾಮ
ಥ್ಯಾಚರ್ ಪರಿಣಾಮ ಅಥವಾ ಥ್ಯಾಚರ್ ಭ್ರಮೆಯು ಒಂದು ವಿದ್ಯಮಾನ. ಈ ವಿದ್ಯಮಾನದಲ್ಲಿ, ಒಬ್ಬರ ಮುಖವನ್ನು ನೇರವಾಗಿ ನೋಡಿದಾಗ ಅವರ ಮುಖದಲ್ಲಿನ ಬದಲಾವಣೆಗಳನ್ನು ಸ್ಪಷ್ಟವಾಗಿ ಪತ್ತೆ ಹಚ್ಚಬಹುದು, ಆದರೆ ಅವರ ಮುಖವನ್ನು ತಲೆಕೆಳಗಾದ ರೀತಿಯಲ್ಲಿ ನೋಡಿದರೆ ಬದಲಾವಣೆಗಳನ್ನು ಪತ್ತೆಹಚ್ಚಲು ಹೆಚ್ಚು ಕಷ್ಟಕರವಾಗುತ್ತದೆ.ಈ ವಿದ್ಯಮಾನಕ್ಕೆ ಆಗಿನ ಬ್ರಿಟಿಷ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರ ಹೆಸರನ್ನು ಇಡಲಾಗಿದೆ, ಅವರ ಛಾಯಾಚಿತ್ರದ ಮೇಲೆ ಇದರ ಪರಿಣಾಮವನ್ನು ಮೊದಲು ಪ್ರದರ್ಶಿಸಲಾಯಿತು. ಈ ಪರಿಣಾಮವನ್ನು ಮೂಲತಃ ೧೯೮೦ ರಲ್ಲಿ ಯಾರ್ಕ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರಾಧ್ಯಾಪಕರಾದ ಪೀಟರ್ ಥಾಂಪ್ಸನ್ ಮಾಡಿದರು.[೧]
ಅವಲೋಕನ
ಬದಲಾಯಿಸಿಇದರ ಪರಿಣಾಮವು ಎರಡು ಮೂಲತಃ ಒಂದೇ ರೀತಿಯ ತಲೆಕೆಳಗಾದ ಚಿತ್ರಗಳಿಂದ[೨] ವಿವರಿಸಲ್ಪಟ್ಟಿದೆ. ಎರಡನೇ ಚಿತ್ರದ ಕಣ್ಣುಗಳನ್ನು ಮತ್ತು ಬಾಯಿಯನ್ನು ಲಂಬವಾಗಿ ತಿರುಗಿಸಿ ಬದಲಾಯಿಸಲಾಗಿದೆ, ಆದರೂ ಚಿತ್ರವನ್ನು ನೇರವಾಗಿ ನೋಡುವವರಿಗೆ ಬದಲಾವಣೆಗಳು ತಕ್ಷಣವೇ ಸ್ಪಷ್ಟವಾಗುವುದ್ದಿಲ್ಲ.
ಮುಖದ ಗ್ರಹಿಕೆಗಳಲ್ಲಿ, ವಿಶೇಷವಾಗಿ ನೇರವಾದ ಮುಖಗಳಿಗೆ ಟ್ಯೂನ್ ಮಾಡಲಾದ ನಿರ್ದಿಷ್ಟ ಮಾನಸಿಕ ಅರಿವಿನ ಮಾಡ್ಯೂಲ್ ಗಳ ಕಾರಣದಿಂದ ಥ್ಯಾಚರ್ ಪರಿಣಾಮವಾಗುತ್ತದೆ ಎಂದು ಭಾವಿಸಲಾಗಿದೆ.ಕಣ್ಣುಗಳು, ಮೂಗು ಮತ್ತು ಬಾಯಿಯಂತಹ ವೈಯಕ್ತಿಕ ಮುಖದ ಲಕ್ಷಣಗಳ ವಿವರಗಳಂತೆ ಸಂರಚನಾದ ( ಮುಖದ ಮೇಲಿನ ವೈಯಕ್ತಿಕ ಗುಣಲಕ್ಷಣಗಳ ನಡುವಿನ ರಚನಾತ್ಮಕ ಸಂಬಂಧ) ಮೇಲೆ ಅವಲಂಬಿಸಿರುವ ಮುಖಗಳ ನಡುವಿನ ವ್ಯತ್ಯಾಸಮಾಡಲು ನಾವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಊಹಿಸಲಾಗಿದೆ.
ರೀಸಸ್ ಮಂಗಗಳು[೩][೪] ಹಾಗೂ ಚಿಂಪಾಂಜಿಗಳು[೫] ಥ್ಯಾಚರ್ ಪರಿಣಾಮವನ್ನು ಅನುಭವಿಸುತ್ತವೆ ಎಂಬುದಕ್ಕೆ ಪುರಾವೆಗಳಿವೆ, ಮುಖಗಳನ್ನು ಸಂಸ್ಕರಿಸುವಲ್ಲಿ ಒಳಗೊಂಡಿರುವ ಕೆಲವು ಮೆದುಳಿನ ಕಾರ್ಯವಿಧಾನಗಳು ೩೦ ಮಿಲಿಯನ್ ವರ್ಷಗಳ ಹಿಂದೆಯೇ ಸಾಮಾನ್ಯ ಪೂರ್ವಜರಲ್ಲಿ ವಿಕಸನಗೊಂಡಿರಬಹುದು ಎಂಬುವುದಕ್ಕೆ ಸಾಕ್ಷ್ಯಗಳಿವೆ.
ಮುಖದ ಗ್ರಹಿಕೆಯಲ್ಲಿ ಥ್ಯಾಚರ್ ಪರಿಣಾಮದ ಮೂಲ ತತ್ವಗಳನ್ನು ಜೈವಿಕ ಚಲನೆಗೆ ಅನ್ವಯಿಸಲಾಗಿದೆ. ಪ್ರತ್ಯೇಕ ಚುಕ್ಕೆಗಳ ಸ್ಥಳೀಯ ವಿಲೋಮವು ಕಠಿಣವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ, ಸಂಪೂರ್ಣ ಆಕೃತಿಯು ತಲೆಕೆಳಗಾದಾಗ ಗುರುತಿಸಲು ಅಸಾಧ್ಯವಾಗಿದೆ.[೬]
ಹೆಚ್ಚಿನ ತನಿಖೆಗಳು
ಬದಲಾಯಿಸಿಮುಖ ಗುರುತಿಸುವಿಕೆಯ ಮನೋವಿಜ್ಞಾನವನ್ನು ಬಹಿರಂಗಪಡಿಸುವಲ್ಲಿ ಥ್ಯಾಚರ್ ಭ್ರಮೆಯು ಸಹ ಉಪಯುಕ್ತವಾಗಿದೆ. ವಿಶಿಷ್ಟವಾಗಿ, ಥ್ಯಾಚರ್ ಭ್ರಮೆಯನ್ನು ಬಳಸುವ ಪ್ರಯೋಗಗಳು ನೇರವಾದ ಅಥವಾ ತಲೆಕೆಳಗಾದ ಅಸಮಂಜಸವಾದ ವೈಶಿಷ್ಟ್ಯಗಳನ್ನು ನೋಡಲು ಅಗತ್ಯವಿರುವ ಸಮಯವನ್ನು ನೋಡುತ್ತವೆ.[೭] ಸಮಗ್ರ ಮುಖದ ಚಿತ್ರಗಳ ಸಂಸ್ಕರಣೆಯ ಸ್ವರೂಪವನ್ನು ನಿರ್ಧರಿಸಲು ಇಂತಹ ಕ್ರಮಗಳನ್ನು ಬಳಸಲಾಗಿದೆ.[೮]
ನೆಟ್ಟಗೆ ಮತ್ತು ತಲೆಕೆಳಗಾದ ಚಿತ್ರದ ನಡುವಿನ ಮಧ್ಯಂತರ ಕೋನಗಳನ್ನು ನೋಡುವ ಮೂಲಕ, ಅಧ್ಯಯನಗಳು ಭ್ರಮೆಗಳ ಕ್ರಮೇಣ ಅಥವಾ ಹಠಾತ್ ನೋಟವನ್ನು ಪರಿಶೋಧಿಸುತ್ತವೆ.[೯][೧೦] ಥ್ಯಾಚರ್ ಭ್ರಮೆಯ ಸೂಕ್ಷ್ಮತೆಯು ಆಟಿಸಮ್ ಹೊಂದಿರುವ ಮಕ್ಕಳು[೧೧] ಸೇರಿದಂತೆ ಎಲ್ಲಾ ಮಕ್ಕಳಲ್ಲಿ[೧೨] ಕಂಡುಬರುತ್ತದೆ.
ಆದಾಗ್ಯೂ, ಜನ್ಮಜಾತ ಪ್ರೊಸೊಪಾಗ್ನೋಸಿಯಾ ಹೊಂದಿರುವ ಜನರು ಅಂತಹ ಸ್ಥಿತಿಯಿಲ್ಲದ ಜನರಿಗೆ ಹೋಲಿಸಿದರೆ ಭ್ರಮೆಗೆ ಒಟ್ಟಾರೆ ಹೆಚ್ಚು ದುರ್ಬಲ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದ್ದಾರೆ ಎಂದು ತೋರಿಸಲಾಗಿದೆ. ಅವರ ಪ್ರತಿಕ್ರಿಯೆಯ ಸಮಯವನ್ನು ಗ್ರೋಟ್ಸ್ಕ್ ಫೇಸ್ ನ ದೃಷ್ಟಿಕೋನದಿಂದ ದುರ್ಬಲ ಮತ್ತು ರೇಖೀಯವಾಗಿ ಪ್ರಭಾವಿತವಾಗಿ ತೋರಿಸಲಾಗಿದೆ.[೧೩] ಈ ಕೊನೆಯ ಅವಲೋಕನವು, ಮುಖ ಗುರುತಿಸುವಿಕೆಗಾಗಿ ಜವಾಬ್ದಾರವಾಗಿರುವ ಮಿದುಳಿನ ಭಾಗವು ಕಾರ್ಟೆಕ್ಸ್ ನ ಫಸಿಫಾರ್ಮ್ ಫೇಸ್ ಏರಿಯಾ ಎಂದು ಸೂಚಿಸುತ್ತದೆ, ಇದು ಜನ್ಮಜಾತ ಮತ್ತು ಸ್ವಾಧೀನಪಡಿಸಿಕೊಂಡ ಸ್ಥಿತಿಯಲ್ಲಿ ಪರಿಣಾಮ ಬೀರುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Thompson, P. (1980). "Margaret Thatcher: a new illusion" (PDF). Perception. 9 (4): 483–484. doi:10.1068/p090483. PMID 6999452. S2CID 32492890.
- ↑ "Reading Upside-down Lips". faculty.ucr.edu. Retrieved 11 April 2013.
- ↑ Adachi Ikuma, Chou Dina P., Hampton Robert R. Thatcher Effect in Monkeys Demonstrates Conservation of Face Perception across Primates, Current Biology 2009, 19, 1270–1273. doi:10.1016/j.cub.2009.05.067.
- ↑ Dahl Christoph D, Logothetis Nikos K, Bülthoff Heinrich H, Wallraven Christian 'The Thatcher illusion in humans and monkeys', Proceedings of the Royal Society B: Biological Sciences, 2010, 277 (1696)
- ↑ Weldon, K. B., Taubert, J., Smith, C. L., & Parr, L. A. (2013). 'How the Thatcher illusion reveals evolutionary differences in the face processing of primates'. Animal cognition, 16(5), 691-700.
- ↑ Mirenzi A, Hiris E, 2011, "The Thatcher effect in biological motion" Perception 40(10) 1257 – 1260
- ↑ Sjoberg, W., & Windes, J. D. (1992)
- ↑ Lewis, M.B. & Johnston, R.A. (1997). The Thatcher Illusion as a test of configural disruption. Perception, 26, 225-227.
- ↑ Stuerzel, F., & Spillmann, L. (2000). Thatcher illusion: dependence on angle of rotation. Perception, 29(8), 937-942.
- ↑ Lewis, M. B. (2001). The lady's not for turning: Rotation of the Thatcher illusion. Perception, 30(6), 769-774.
- ↑ Rouse, H., Donnelly, N., Hadwin, J. A., & Brown, T. (2004). Do children with autism perceive second-order relational features? The case of the Thatcher illusion. Journal of Child Psychology and Psychiatry, 45(7), 1246-1257.
- ↑ Lewis, M.B. (2003). Thatcher’s children: Development and the Thatcher illusion. Perception, 32, 1415-1421.
- ↑ Carbon, C. C., Grüter, T., Weber, J. E., & Lueschow, A. (2007). Faces as objects of non-expertise: Processing of Thatcherised faces in congenital prosopagnosia. Perception, 36(11), 1635-1645.