ಆಟಿಸಮ್ ಎನ್ನುವುದು ಸಾಮಾಜಿಕ ಸಂವಹನ ಮತ್ತು ಸಂವಹನಗಳೊಂದಿಗಿನ ತೊಂದರೆಗಳು ಹಾಗೂ ನಿರ್ಬಂಧಿತ ಮತ್ತು ಪುನರಾವರ್ತಿತ ನಡವಳಿಕೆಯಿಂದ ಉಂಟಾಗುವ ಬೆಳವಣಿಗೆಯ ಅಸ್ವಸ್ಥತೆಯಾಗಿದೆ. ಇದನ್ನು ಸ್ವಲೀನತೆ ಅಥವಾ ತಂತಾನಿಕೆ ಎಂದು ಕರೆಯುತ್ತಾರೆ. ಪಾಲಕರು ಸಾಮಾನ್ಯವಾಗಿ ತಮ್ಮ ಮಗುವಿನ ಜೀವನದ ಮೊದಲ ಎರಡು ಅಥವಾ ಮೂರು ವರ್ಷಗಳಲ್ಲಿ ಆಟಿಸಮ್ ಅಸ್ವಸ್ಥತೆಯ ಚಿಹ್ನೆಗಳನ್ನು ಗಮನಿಸುತ್ತಾರೆ. ಆಟಿಸಮ್ಗೆ ಆನುವಂಶಿಕ ಮತ್ತು ಪರಿಸರದ ಅಂಶಗಳ ಪರಿಣಾಮಗಳು ಕಾರಣವಾಗುತ್ತದೆ.[][]

ಆಟಿಸಮ್
ಆಟಿಸಮ್ ಪೀಡಿತರ ಮೆದುಳಿನ ರಚನೆ
ವೈದ್ಯಕೀಯ ವಿಭಾಗಗಳುಮನೋವೈದ್ಯಶಾಸ್ತ್ರ
ಲಕ್ಷಣಗಳುಸಾಮಾಜಿಕ ಸಂವಹನದ ಕೊರತೆ, ನಡವಳಿಕೆ, ನಿರಾಸಕ್ತಿ ಮತ್ತು ಮಾಡಿದ್ದನ್ನೇ ಮಾಡುವುದು
ಕಾಯಿಲೆಯ ಗೋಚರ/ಪ್ರಾರಂಭಬಾಲ್ಯಾವಸ್ಥೆಯಲ್ಲಿ ಕಾಣಿಸಬಹುದು
ಕಾಲಾವಧಿದೀರ್ಘಾವಧಿ
ಕಾರಣಗಳುಆಹಾರ ಪದಾರ್ಥಗಳು, ಡೀಸೆಲ್ ಹೊಗೆ, ಪ್ಲಾಸ್ಟಿಕ್ ಬಳಕೆ, ಮಾದಕ ದ್ರವ್ಯಗಳು ಗರ್ಭಧಾರಣೆ ಮತ್ತು ಪ್ರಸವ ಪೂರ್ವದ ಮಾನಸಿಕ ಒತ್ತಡ, ಲಸಿಕೆಗಳು, ಸೋಂಕುರೋಗಗಳು, ಕೀಟನಾಶಕಗಳ ಬಳಕೆ, ಆಲ್ಕೋಹಾಲ್, ಧೂಮಪಾನ, ಸಿದ್ದಪಡಿಸಿದ ಆಹಾರ ಸಂರಕ್ಷಣೆಗೆ ಬಳಸುವ ಅಪಾಯಕಾರಿ ಸಂರಕ್ಷಕಗಳು ಮುಂತಾದವುಗಳು ಸಂಭವನೀಯ ಕಾರಣಗಳು
ಆವರ್ತನವಿಶ್ವದ ಒಟ್ಟು ಜನಸಂಖ್ಯೆಯ ೧% (ಅಂದಾಜು ೭೫,೦೦೦,೦೦೦)

ಅಸ್ವಸ್ಥತೆಯ ಲಕ್ಷಣಗಳು

ಬದಲಾಯಿಸಿ

ಆಟಿಸಮ್ ಎಂಬುದು ಸೂಕ್ಷ್ಮ ಭಾಗವಾದ ನರಮಂಡಲದ ಅಭಿವೃದ್ಧಿಯ ಅಸ್ವಸ್ಥತೆಯಾಗಿದೆ. ಇದು ಶೈಶವಾವಸ್ಥೆಯಲ್ಲಿ ಅಥವಾ ಬಾಲ್ಯದ ಸಮಯದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತದೆ. ಈ ಅಸ್ವಸ್ಥತೆ ಹೊಂದಿರುವವರಿಗೆ ಸಾಮಾಜಿಕವಾಗೆ ಬೆರೆಯಲು ಕಷ್ಟವಾಗುತ್ತದೆ. ಪುನರಾವರ್ತಿತ ನಡವಳಿಕೆಯನ್ನು ಹೊದಿರುತ್ತಾರೆ. ಆರು ತಿಂಗಳ ವಯಸ್ಸಿನ ನಂತರ ನಿಧಾನವಾಗಿ ರೋಗಲಕ್ಷಣಗಳು ಪ್ರಾರಂಭವಾಗುತ್ತವೆ ಮತ್ತು ಪ್ರೌಢಾವಸ್ಥೆಯ ವರೆಗೆ ಇರುವ ಸಂಭವವಿರುತ್ತದೆ. ಸಾಮಾಜಿಕ ಸಂವಹನದಲ್ಲಿನ ದುರ್ಬಲತೆ ಮತ್ತು ನಿರ್ಬಂಧಿತ ಆಸಕ್ತಿಗಳು ಹಾಗೂ ಪುನರಾವರ್ತಿತ ನಡವಳಿಕೆ ಇದರ ಪ್ರಮುಖ ಲಕ್ಷಣಗಳು.[]

ಕಾರಣಗಳು

ಬದಲಾಯಿಸಿ

ಅನುವಂಶಿಕ ಮತ್ತು ವಾಸಿಸುವ ಪರಿಸರದ ಅಂಶಗಳು, ಗರ್ಭಾವಸ್ಥೆಯಲ್ಲಿನ ತೊಂದರೆಗಳು ಮತ್ತು ದುಷ್ಪರಿಣಾಮಗಳು ಅಟಿಸಮ್ ಅಸ್ವಸ್ಥೆಗೆ ಕಾರಣಗಳು. ಸಿನಾಪ್ಟಿಕ್ ಅಪಸಾಮಾನ್ಯ ಕ್ರಿಯೆಯಿಂದ ಅಟಿಸಮ್ ಉಂಟಾಗುವ ಸಂಭವವಿದೆ ಎಂದು ಪ್ರಯೋಗಘಳು ದೃಢಪಡಿಸಿವೆ.[]

ರೋಗನಿರ್ಣಯ

ಬದಲಾಯಿಸಿ

ರೋಗನಿರ್ಣಯವು ವರ್ತನೆಯನ್ನು ಆಧರಿಸಿರುತ್ತದೆ. ಡಿಎಸ್ಎಮ್ -5ರ ಅಡಿಯಲ್ಲಿ ಸಾಮಾಜಿಕ ಸಂವಹನ ಮತ್ತು ಪರಸ್ಪರ ಕ್ರಿಯೆಯಲ್ಲಿ ಸ್ಥಿರವಾದ ಕೊರತೆಯಿಂದ ಹಾಗೂ ನಿರ್ಬಂಧಿತ ನಡವಳಿಕೆ, ಆಸಕ್ತಿಗಳು, ಅಥವಾ ಚಟುವಟಿಕೆಗಳು ಆಟಿಸಮ್ನ ರೋಗ ನಿರ್ಣಯ ಲಕ್ಷಣಗಳು. ಗರ್ಭಾವಸ್ಥೆಯಲ್ಲಿನ ರುಬೆಲ್ಲಾ ಸೋಂಕಿನಿಂದಾಗಿ ೧% ನಷ್ಟು ಆಟಿಸಮ್ ಉಂಟಾಗುತ್ತದೆ. ಮುಂಜಾಗ್ರತ ಕ್ರಮವಾಗಿ ರುಬೆಲ್ಲಾ ವಿರುದ್ಧದ ಚುಚ್ಚುಮದ್ದು ಈ ಸಂಭವವನ್ನು ಕಡಿಮೆ ಮಾಡುತ್ತದೆ.[]

ಚಿಕಿತ್ಸೆ

ಬದಲಾಯಿಸಿ

ಸ್ವಲೀನತೆ ಅಸ್ವಸ್ಥತೆಗೆ ಪ್ರಸ್ತುತ ಯಾವುದೇ ಪ್ರಮಾಣಿತ ಚಿಕಿತ್ಸೆ ಇಲ್ಲ. ಆದರೆ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಸಾಮರ್ಥ್ಯಗಳನ್ನು ಗರಿಷ್ಠಗೊಳಿಸಲು ಸಹಾಯ ಮಾಡುವ ಹಲವು ಮಾರ್ಗಗಳಿವೆ. ಸರಿಯಾದ ಚಿಕಿತ್ಸೆ ಮತ್ತು ಮಧ್ಯಸ್ಥಿಕೆಗಳನ್ನು ಪಡೆದರೆ ಆಟಿಸಮ್ ಹೊಂದಿರುವ ಜನರು ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಬಳಸಿಕೊಳ್ಳುವ ಅವಕಾಶವಿದೆ.[][]

ಉಲ್ಲೇಖ

ಬದಲಾಯಿಸಿ
  1. https://www.autismspeaks.org/what-autism
  2. https://www.autismspeaks.org/
  3. https://www.autismspeaks.org/what-are-symptoms-autism
  4. "ಆರ್ಕೈವ್ ನಕಲು". Archived from the original on 2018-12-25. Retrieved 2019-01-11.
  5. https://iancommunity.org/cs/autism/dsm_iv_criteria
  6. https://www.autismspeaks.org/treatments
  7. https://iancommunity.org/cs/therapies_treatments


"https://kn.wikipedia.org/w/index.php?title=ಆಟಿಸಮ್&oldid=1249366" ಇಂದ ಪಡೆಯಲ್ಪಟ್ಟಿದೆ