ಥಯೊಸಲ್ಫ್ಯೂರಿಕ್ ಆಮ್ಲ
ಥಯೊಸಲ್ಫ್ಯೂರಿಕ್ ಆಮ್ಲ (H2S2O3) ಒಂದು ಅಕಾರ್ಬನಿಕ ಸಂಯುಕ್ತ. ಇದುವರೆಗೂ ಇದನ್ನು ಪ್ರತ್ಯೇಕಿಸಲು ಸಾಧ್ಯವಾಗಿಲ್ಲ. ದ್ರಾವಣದಲ್ಲಿ ಕ್ಷಣಿಕವಾಗಿ ಉತ್ಪತ್ತಿಯಾಗಿ ಕೂಡಲೇ ಗಂಧಕ ಮತ್ತು ಸಲ್ಫ್ಯೂರಸ್ ಆಮ್ಲಗಳಿಗೆ ವಿಭಜಿಸುವುದು. ಉಂಟಾದ ಸಲ್ಫ್ಯೂರಸ್ ಆಮ್ಲದ ದೆಸೆಯಿಂದ ಇದಕ್ಕೂ ಅಪಕರ್ಷಣ ಗುಣ ಪ್ರಾಪ್ತವಾಗುತ್ತದೆ.
ಥಯೊಸಲ್ಫೇಟುಗಳು
ಬದಲಾಯಿಸಿಥಯೊಸಲ್ಫ್ಯೂರಿಕ್ ಆಮ್ಲದ ಲವಣಗಳೇ (salts) ಥಯೊಸಲ್ಫೇಟುಗಳು. ಇವು ಸ್ಥಿರ ವಸ್ತುಗಳು. ಇವುಗಳಲ್ಲಿ ಮುಖ್ಯವಾದದ್ದು ಸೋಡಿಯಂ ಥಯೊಸಲ್ಫೇಟ್ (Na2S2O3). ಇದು ಛಾಯಚಿತ್ರಗ್ರಾಹಕರಿಗೆ ಪರಿಚಿತವಾದ ಲವಣ. ಹೈಪೊ ಎಂಬುದು ಇದರ ವ್ಯವಹಾರ ನಾಮ.[೧] ದ್ರಾವ್ಯ ಸಲ್ಫೈಡುಗಳನ್ನು ಗಾಳಿಯಿಂದ ಉತ್ಕರ್ಷಿಸಿ ಅಥವಾ ಸಲ್ಫೈಟುಗಳ ದ್ರಾವಣಗಳೊಡನೆ ಗಂಧಕವನ್ನು ಕುದಿಸಿ ಥಯೊಸಲ್ಫೇಟುಗಳನ್ನು ಮಾಡಿಕೊಳ್ಳಬಹುದು.[೨]
2K2S2 + 3O2 → 2K2S2O3
Na2SO3 + S → Na2S2O3
ಸೋಡಿಯಂ ಸಲ್ಫೈಡ್ ಮತ್ತು ಸಲ್ಫೈಡುಗಳ ಮಿಶ್ರಣ ಅಯೊಡೀನಿನೊಡನೆ ವರ್ತಿಸಿದಾಗಲೂ ಸೋಡಿಯಂ ಥಯೊಸಲ್ಫೇಟು ರೂಪಿತವಾಗುತ್ತದೆ. ಇದನ್ನು ಸ್ಪ್ರಿಂಗನ ಕ್ರಿಯೆ ಎನ್ನುವುದುಂಟು. ವಾಸ್ತವವಾಗಿ ಸೋಡಿಯಂ ಥಯೊಸಲ್ಫೇಟಿನ ಎರಡು ಅಣುಗಳು ಸೇರಿ ಅಯೊಡೀನಿನ ಸಮ್ಮುಖದಲ್ಲಿ ಸೋಡಿಯಂ ಟೆಟ್ರಥಯೊನೇಟನ್ನು ಕೊಡುವ ಕ್ರಿಯೆಗೆ ಈ ಹೆಸರು.[೩] ಸೋಡಿಯಂ ಥಯೊಸಲ್ಫೇಟಿನ ದ್ರಾವಣಕ್ಕೆ ಬೆಳ್ಳಿಯ ಹ್ಯಾಲೈಡುಗಳನ್ನು ವಿಲೀನಮಾಡಿಕೊಂಡು ಸಂಕೀರ್ಣ ಲವಣವಾಗಬಲ್ಲ ಸಾಮರ್ಥ್ಯ ಉಂಟು. ಛಾಯಚಿತ್ರಗ್ರಹಣ ಕಲೆಯಲ್ಲಿ ಹೈಪೊವಿನ ಬಳಕೆ ಈ ಗುಣವನ್ನು ಅವಲಂಬಿಸಿದೆ. ಅಲ್ಲದೆ ಇದು ಚಿನ್ನದ ಕ್ಲೋರೈಡನ್ನೂ ಹೀಗೆಯೇ ಸಂಕೀರ್ಣ ಲವಣವಾಗಿ ಮಾರ್ಪಡಿಸುವುದು. ಅದಕ್ಕೆ ಸೋಡಿಯಂ ಆರೋಥಯೊಸಲ್ಫೇಟ್ [Na3{Au(S2O3)2}] ಎನ್ನುವರು.[೪] ಇದನ್ನು ಚುಚ್ಚುಮದ್ದಿನ ರೂಪದಲ್ಲಿ ಕೊಟ್ಟರೆ ಸಂಧಿವಾತ ರೋಗ ಗುಣವಾಗುವುದು ಕಂಡುಬಂದಿದೆ.[೫]
ಉಲ್ಲೇಖಗಳು
ಬದಲಾಯಿಸಿ- ↑ Gibson CR (1908). The Romance of Modern Photography, Its Discovery & Its Achievements. Seeley & Co. pp. 37.
hyposulphite-of-soda herschel fixer hypo.
- ↑ Barbera JJ, Metzger A, Wolf M. "Sulfites, Thiosulfates, and Dithionites". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a25_477.
{{cite encyclopedia}}
: Cite has empty unknown parameter:|authors=
(help) - ↑ Greenwood, N. N.; Earnshaw, A. (2 January 1991). Chemistry of the Elements - 3rd Edition. Elsevier. doi:10.1016/C2013-0-11881-8. ISBN 978-1-4832-8008-0. OCLC 1040594550. Retrieved 2022-02-15.
- ↑ Ruben H, Zalkin A, Faltens MO, Templeton DH (1974). "Crystal structure of sodium gold(I) thiosulfate dihydrate, Na3Au(S2O3)2.2H2O". Inorganic Chemistry. 13 (8): 1836–1839. doi:10.1021/ic50138a011.
- ↑ Shaw III CF (September 1999). "Gold-based therapeutic agents". Chemical Reviews. 99 (9): 2589–2600. doi:10.1021/cr980431o. PMID 11749494.