ಚುಚ್ಚುಮದ್ದು
ಚುಚ್ಚುಮದ್ದು ಸಾಮಾನ್ಯವಾಗಿ ಶರೀರದೊಳಗೆ ವಸ್ತುವನ್ನು ಒತ್ತಲು ಸಾಕಾಗುವಷ್ಟು ಆಳಕ್ಕೆ ಚರ್ಮದೊಳಗೆ ಚುಚ್ಚಬಹುದಾದಂಥ ಒಂದು ಪೊಳ್ಳಾದ ಸೂಜಿ ಮತ್ತು ಒಂದು ಜೀರ್ಕೊಳವೆಯಿಂದ ದ್ರವವನ್ನು ಶರೀರದೊಳಗೆ ಹಾಕುವ ಒಂದು ಒಳಸೇರಿಸಿಕೆಯ ವಿಧಾನ. ಚುಚ್ಚುಮದ್ದು ಮದ್ದು ಕೊಡಲು ಅಂತ್ರೇತರ (ಪ್ಯಾರೆಂಟರಲ್), ಅಂದರೆ ಅರಗಣಿಯ ಅಂಗವ್ಯೂಹಕ್ಕೆ ಸೇರದ, ಮಾರ್ಗವನ್ನು ಅನುಸರಿಸುತ್ತದೆ. ಚರ್ಮಪದರಗಳ ನಡುವಿನ, ಚರ್ಮದಡಿಯ, ಅಂತಃಸ್ನಾಯು, ಅಂತರಭಿಧಮನಿ, ಅಂತರಸ್ಥಿ, ಮತ್ತು ಅಂತರುದರಪೊರೆ ಚುಚ್ಚುಮದ್ದನ್ನು ಒಳಗೊಂಡಂತೆ, ಚುಚ್ಚುಮದ್ದಿನ ಹಲವಾರು ವಿಧಾನಗಳಿವೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |