ಜೀರ್ಕೊಳವೆ
ಜೀರ್ಕೊಳವೆಯು ಮದ್ದನ್ನು ದೇಹದೊಳಗೆ ಹೋಗಿಸಲು, ಕಿವಿ, ಜಠರ, ಮೂತ್ರಕೋಶ, ಯೋನಿ, ಗರ್ಭಕೋಶ ಮುಂತಾದ ಅಂಗಗಳನ್ನು ತೊಳೆಯಲೂ ಉಪಯೋಗಿಸುವ ಉಪಕರಣ (ಸಿರಿಂಜ್). ಪಿಚಕಾರಿ ಪರ್ಯಾಯನಾಮ. ವುಡ್ ಎಂಬಾತ 1852ರಲ್ಲಿ ಚರ್ಮದಡಿ ಚುಚ್ಚುಮದ್ದು ಕೊಡಲು ಜೀರ್ಕೊಳವೆಯನ್ನು ಪ್ರಥಮಬಾರಿಗೆ ಉಪಯೋಗಿಸಿದನು. ಈ ಕೊಳವೆಯಲ್ಲಿ ಮೂರು ವಿಧದವು ಇವೆ. ಪೂರ್ಣವಾಗಿ ಗಾಜಿನಿಂದ ಮಾಡಿದವು. ಲೊಹ ಗಾಜು ಇವೆರಡನ್ನೂ ಉಪಯೋಗಿಸಿ ಮಾಡಿದವು ಮತ್ತು ಲ್ಯೂಯರ್ ಲಾಕ್ ಎಂಬ ಹೆಸರಿನವು. ಈ ಮೂರನೆಯದರಲ್ಲಿ ಸೂಜಿ ಕಳಚಿಕೊಳ್ಳದಂತೆ ತಿರುಚಿನಲ್ಲಿ ಭದ್ರವಾಗಿ ಸೇರಿಸಲು ಅನುಕೂಲತೆ ಉಂಟು. ಕಿವಿಯನ್ನು ತೊಳೆಯುವ ಜೀರ್ಕೊಳವೆಯನ್ನು ಪೂರ್ಣವಾಗಿ ಲೋಹದಿಂದ ಮಾಡಿರುತ್ತಾರೆ. ಜೀರ್ಕೊಳವೆಗಳನ್ನು ಕುದಿಸಿ ಅಥವಾ ಆಟೋಕ್ಲೇವಿನಲ್ಲಿ ಶುದ್ಧೀಕರಿಸಿ ಮತ್ತೆ ಉಪಯೋಗಿಸಬಹುದು. ಈಚೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಒಮ್ಮೆ ಮಾತ್ರ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಜೀರ್ಕೊಳವೆ ಬಳಕೆಗೆ ಬಂದಿದೆ.
ಸೂಜಿಗಳು ಮತ್ತು ಜೀರ್ಕೊಳವೆಗಳ ಮರುಬಳಕೆಯಿಂದ ರೋಗಗಳು ಹರಡುತ್ತವೆ, ವಿಶೇಷವಾಗಿ ಎಚ್ಐವಿ ಹಾಗೂ ಹೆಪಟೈಟಿಸ್ ರೋಗಗಳು, ಅದೂ ಅಭಿಧಮನಿಯ ಮದ್ದು ಬಳಕೆದಾರರಲ್ಲಿ. ಜೀರ್ಕೊಳವೆಗಳನ್ನು ಮಧುಮೇಹ ರೋಗಿಗಳು ಕೂಡ ಸಾಮಾನ್ಯವಾಗಿ ಮರುಬಳಕೆ ಮಾಡುತ್ತಾರೆ, ಏಕೆಂದರೆ ಅವರು ದಿನದಲ್ಲಿ ಅನೇಕ ಇನ್ಸುಲಿನ್ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳಬೇಕಾಗುವುದರಿಂದ ಅನೇಕರಿಗೆ ಇದು ಖರೀದಿ ಸಾಮರ್ಥ್ಯದ ಸಮಸ್ಯೆಯಾಗುತ್ತದೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Inventors of the hypodermic syringe
- Hypodermic syringe patents
- Medical syringe patents Archived 2011-09-29 ವೇಬ್ಯಾಕ್ ಮೆಷಿನ್ ನಲ್ಲಿ.