ತ್ರಿಪುರಾಂಬಾ

ಕನ್ನಡದ ಮೊದಲ ನಾಯಕನಟಿ

ತ್ರಿಪುರಾಂಬಾ (೧೯೧೦-೧೯೭೯) ರು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಭಾರತೀಯ ರಂಗಭೂಮಿ ಹಾಗು ಚಲನಚಿತ್ರ ನಟಿ ಮತ್ತು ಗಾಯಕಿ. ೧೯೩೪ ರಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಟಾಕಿ ಸತಿ ಸುಲೋಚನಾದಲ್ಲಿ ಸುಲೋಚನಾ ಪಾತ್ರದಿಂದ ಉತ್ತಮವಾಗಿ ನೆನಪುಳಿದುಕೊಳ್ಳುತ್ತಾರೆ. ಇದೇ ಅವರನ್ನು ಕನ್ನಡ ಚಿತ್ರರಂಗದ ಮೊದಲ ನಾಯಕಿಯನ್ನಾಗಿ ಮಾಡಿತು. [೧] [೨] [೩]

ತ್ರಿಪುರಾಂಬಾ
ಜನನ೧೭ ಜುಲೈ ೧೯೧೦
ಮರಣ೧೯೭೯
ಉದ್ಯೋಗ
  • ನಾಯಕಿ
  • ಗಾಯಕಿ
ಜೀವನ ಸಂಗಾತಿವೇಣುಗೋಪಾಲ್

ವೃತ್ತಿ ಬದಲಾಯಿಸಿ

ತ್ರಿಪುರಾಂಬ ರಂಗಭೂಮಿಯಲ್ಲಿ ತೊಡಗಿಸಿಕೊಂಡರು ಹಾಗು ನಿಪುಣ ನಟಿ ಮತ್ತು ಗಾಯಕಿಯಾದರು. ಅವರು ಸುಬ್ಬಯ್ಯ ನಾಯ್ಡು ಅವರೊಂದಿಗೆ ಕನ್ನಡ ಚಿತ್ರರಂಗದ ಮೊದಲ ಟಾಕಿ ಚಿತ್ರ ಸತಿ ಸುಲೋಚನಾದಲ್ಲಿ ಇಂದ್ರಜಿತ್ ಅವರ ಪತ್ನಿ ಸುಲೋಚನಾ ಪಾತ್ರವನ್ನು ನಿರ್ವಹಿಸಿದರು. ಈ ಐತಿಹಾಸಿಕ ಸಿನಿಮಾ ಅವರನ್ನು ಕನ್ನಡದ ಮೊದಲ ನಾಯಕಿಯನ್ನಾಗಿ ಮಾಡಿತು. [೪] [೫]

ಆಶ್ಚರ್ಯವೆಂದರೆ ತ್ರಿಪುರಾಂಬ ಹೆಚ್ಚು ಸಿನಿಮಾ ಮಾಡಲಿಲ್ಲ. ೧೯೩೭ ರಲ್ಲಿ ಅವರ ಮುಂದಿನ ಮತ್ತು ಕೊನೆಯ ಚಿತ್ರ ಪುರಂದರದಾಸ. ಅವರು ೧೯೭೯ ರಲ್ಲಿ ನಿಧನರಾದರು.

ಚಿತ್ರಕಥೆ ಬದಲಾಯಿಸಿ

ಹಲವಾರು ರಂಗ ನಾಟಕಗಳ ಹೊರತಾಗಿ, ತ್ರಿಪುರಾಂಬಾ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. [೬]

ವರ್ಷ ಶೀರ್ಷಿಕೆ ಪಾತ್ರ ಭಾಷೆ ಟಿಪ್ಪಣಿಗಳು
1934 ಸತಿ ಸುಲೋಚನಾ ಸುಲೋಚನಾ ಕನ್ನಡ ಕನ್ನಡ ಚಿತ್ರರಂಗದ ಮೊದಲ ನಾಯಕಿ
1937 ಪುರಂದರದಾಸರು ಸರಸ್ವತಿ ಕನ್ನಡ

ಉಲ್ಲೇಖಗಳು ಬದಲಾಯಿಸಿ

  1. Shashidhara Chitradurga (3 March 2017). "Kannada's first talkie film Sati Sulochana turns 83 today". Asianet Newsable. Retrieved 16 September 2020.
  2. S. N. Deepak (15 April 2018). "Wealth of material found on first Kannada talkie". Deccan Herald. Retrieved 16 September 2020.
  3. Deepak SN (1 March 2019). "First Kannada talkie turns 85". Deccan Herald. Retrieved 16 September 2020.
  4. Muralidhara Khajane (3 March 2019). "Attempt to retell history of Kannada's first talkie". The Hindu. Retrieved 16 September 2020.
  5. "First Kannada movie Sati Sulochana". Chitraloka.com. Archived from the original on 3 ಡಿಸೆಂಬರ್ 2021. Retrieved 16 September 2020.
  6. "Celebrity Tripuramba". Chiloka.com. Retrieved 16 September 2020.

ಬಾಹ್ಯ ಕೊಂಡಿಗಳು ಬದಲಾಯಿಸಿ

ತ್ರಿಪುರಾಂಬಾ @ ಐ ಎಮ್ ಡಿ ಬಿ