ಪುರಂದರದಾಸ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ
ಈ ಲೇಖನ ಕನ್ನಡ ಚಲನಚಿತ್ರ ಪುರಂದರದಾಸ ಬಗ್ಗೆ.
ಹರಿಭಕ್ತ, ದಾಸಸಾಹಿತ್ಯದ ಪುರಂದರದಾಸರ ಬಗ್ಗೆ ಮಾಹಿತಿಗೆ ಈ ಲೇಖನವನ್ನು('ಪುರಂದರದಾಸರು') ಓದಿ.

ಪುರಂದರದಾಸ - ೧೯೩೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ನಂಜಪ್ಪ ಚೆಟ್ಟಿಯಾರ್ ನಿರ್ಮಿಸಿದ್ದ, ಬಿ. ಚೌಹಾಣ್ ರವರ ನಿರ್ದೇಶನದ ಈ ಚಿತ್ರದಲ್ಲಿ ಜಿ. ಕೃಷ್ಣಸ್ವಾಮಿ ಅಯ್ಯಂಗಾರ್, ತ್ರಿಪುರಾಂಬ ಮತ್ತು ಜೆ. ಟಿ. ಬಾಲಕೃಷ್ಣರಾವ್ ರವರು ನಟಿಸಿದ್ದರು. ಚಿತ್ರ ಬೆಳ್ಳಾವೆ ನರಹರಿ ಶಾಸ್ತ್ರಿಯವರ ಸಂಗೀತವನ್ನು ಹೊಂದಿತ್ತು.

ಪುರಂದರದಾಸ (ಚಲನಚಿತ್ರ)
ಪುರಂದರದಾಸ
ನಿರ್ದೇಶನಬಿ.ಚವಾನ್
ನಿರ್ಮಾಪಕನಂಜಪ್ಪ
ಪಾತ್ರವರ್ಗಜಿ.ಕೃಷ್ಣಸ್ವಾಮಿ ಅಯ್ಯಂಗಾರ್ ತ್ರಿಪುರಾಂಭ ಜೆ.ಟಿ.ಬಾಲಕೃಷ್ಣರಾವ್
ಸಂಗೀತಬೆಳ್ಳಾವೆ ನರಹರಿಶಾಸ್ತ್ರಿ
ಛಾಯಾಗ್ರಹಣ(ಸ್ಟೂಡಿಯೊ)
ಬಿಡುಗಡೆಯಾಗಿದ್ದು೧೯೩೭
ಚಿತ್ರ ನಿರ್ಮಾಣ ಸಂಸ್ಥೆದೇವಿ ಫಿಲಂಸ್

ಕಥಾ ಸಾರಾಂಶ

ಬದಲಾಯಿಸಿ

ನವಕೋಟಿ ನಾರಾಯಣನಾಗಿ, ಜಿಪುಣನಾಗಿದ್ದ ಶ್ರೀನಿವಾಸ ನಾಯಕನಿಗೆ ದೈವ ಪ್ರೇರಣೆಯಾಗಿ ಸಕಲವನ್ನು ದಾನ ಮಾಡಿ, ಭಗವನ್ನಾಮ ಸ್ಮರಣೆಯಲ್ಲಿ ತೊಡಗಿ ಪುರಂದರದಾಸ ಎಂದು ಹೆಸರು ಪಡೆಯುವ ಪ್ರಚಲಿತ ಕತೆ ಈ ಚಲನಚಿತ್ರದ ಕಥಾ ಹಂದರ ಒಳಗೊಂಡಿದೆ.

ನಿರ್ಮಾಣ ಮತ್ತು ಬಿಡುಗಡೆ

ಬದಲಾಯಿಸಿ

ದೇವಿ ಫಿಲಂಸ್‌ ಲಾಂಛನದಲ್ಲಿ ತಯಾರಾದ "ಪುರಂದರ ದಾಸ" ಚಿತ್ರ, ೧೬೨ ನಿಮಿಷಗಳಷ್ಟು ಅವಧಿಯದಾಗಿತ್ತು. ೧೪,೨೦೦ ಅಡಿ ಉದ್ದವಿದ್ದ ಈ ಚಲನಚಿತ್ರ ಮೈಸೂರು ಸೆಲೆಕ್ಟ್‌ ಟಾಕೀಸ್‌ ಅವರಿಗಾಗಿ, ೧೩ ಅಕ್ಟೋಬರ್‌, ೧೯೩೭ರಂದು ಸೆನ್ಸಾರ್‌ ಆಯಿತು.

ಹಾಡುಗಳು

ಬದಲಾಯಿಸಿ
  • ಅತಿ ಮುಡಿಲಲ್ಲ್ಲಿ
  • ಬಿರಿದ ಹೂಗಳು
  • ಶಾಂತಿಯೆ ಜೀವನ
  • ಸುಮ ಮಾಲೆ
  • ಕಾಮನು ಕಾಡುವ