ತಿಲಕ್‌ ಇಲ್ಲಿಗೆ ಮರುನಿರ್ದೇಶಿಸುತ್ತದೆ. ಹಿಂದೂ ರಾಷ್ಟ್ರೀಯತಾವಾದಿ ನಾಯಕರ ಬಗ್ಗೆ ತಿಳಿಯಲು ಬಾಲ ಗಂಗಾಧರ ತಿಲಕ ನೋಡಿ.

ಹಿಂದೂ ಧರ್ಮದಲ್ಲಿ ತಿಲಕ್‌ ಅಥವಾ ತಿಲಕ ವು (ಸಂಸ್ಕೃತ:तिलक tilaka; Hindustani pronunciation: [t̪ɪˈlək] ತಿಲಕ)[] ಹಣೆಯ ಮೇಲೆ ಹಾಗೂ ದೇಹದ ಇತರೆ ಭಾಗಗಳ ಮೇಲೆ ಹಚ್ಚಿಕೊಳ್ಳುವ ಅಂಕಿತವಾಗಿದೆ. ತಿಲಕವನ್ನು ದೈನಂದಿನವಾಗಿ ಅಥವಾ ವಿಶೇಷ ಧಾರ್ಮಿಕ ಸಂದರ್ಭಗಳಲ್ಲಿ ಮಾತ್ರವೆನ್ನುವಂತೆ ವಿವಿಧ ಪದ್ಧತಿಗಳಿಗನುಸಾರವಾಗಿ ಹಚ್ಚಿಕೊಳ್ಳಬಹುದಾಗಿರುತ್ತದೆ.

ತಿಲಕ ಮತ್ತು ಬಿಂದಿಗಳನ್ನು ಧರಿಸಿರುವ ಭಾರತೀಯ ಮಹಿಳೆ

ತಿಲಕದ ಮಹತ್ವ

ಬದಲಾಯಿಸಿ

ತಿಲಕವು ಹಲವು ಹಿಂದೂ ದೇವತೆಗಳ ವಿಚಾರದಲ್ಲಿ ಕಂಡುಬರುವ ಮೂರನೆಯ ಕಣ್ಣು ಅಥವಾ ಮನಸ್ಸಿನ ಕಣ್ಣನ್ನು ಪ್ರತಿನಿಧಿಸುತ್ತದೆ ಹಾಗೂ ದೈವಧ್ಯಾನ ಮತ್ತು ಪಾರಮಾರ್ಥಿಕ ಜ್ಞಾನೋದಯಗಳಿಗೆ ಸಂಬಂಧಪಟ್ಟಿರುತ್ತದೆ. ಹಿಂದಿನ ಕಾಲದಲ್ಲಿ ತಿಲಕಗಳನ್ನು ಸಾಧಾರಣವಾಗಿ ದೇವತೆಗಳು, ಅರ್ಚಕ/ಪೂಜಾರರು, ಸಂನ್ಯಾಸಿಗಳು ಅಥವಾ ಆರಾಧಕರು ಹಚ್ಚಿಕೊಳ್ಳುತ್ತಿದ್ದರು, ಆದರೆ ಪ್ರಸ್ತುತ ಕಾಲದಲ್ಲಿ ಬಹುತೇಕ ಹಿಂದೂಗಳು ಅವುಗಳನ್ನು ಧರಿಸುವುದು ವಾಡಿಕೆಯಾಗಿಬಿಟ್ಟಿದೆ. ಕೆಲವೊಮ್ಮೆ ಇದು ಆಯಾ ವ್ಯಕ್ತಿಯು ಪಾಲಿಸುವ ಹಿಂದೂ ಸಂಪ್ರದಾಯಗಳನ್ನು ಸೂಚಿಸಬಲ್ಲಂತಹುದಾಗಿರುತ್ತದೆ. ಇದನ್ನು ಶ್ರೀಗಂಧದ ಲೇಪ, ಭಸ್ಮ (ವಿಭೂತಿ), ಕುಂಕುಮ, ಸಿಂಧೂರ, ಮೃತ್ತಿಕೆ ಅಥವಾ ಇತರೆ ವಸ್ತುಗಳಿಂದ ತಯಾರಿಸಬಹುದಾಗಿರುತ್ತದೆ. ಇದರಿಂದ ತಯಾರಾದ ಲೇಪವನ್ನು ಹಣೆಯ ಮೇಲೆ ಅಥವಾ ಕೆಲವು ಸಂದರ್ಭಗಳಲ್ಲಿ ತಲೆಯ ಮೇಲ್ಭಾಗದಲ್ಲಿ ಹಚ್ಚಿಕೊಳ್ಳಲಾಗುತ್ತದೆ.

ತಿಲಕದ ಇತಿಹಾಸ ಹಾಗೂ ಅದರ ವಿಕಾಸ

ಬದಲಾಯಿಸಿ

ತಿಲಕವು ಹಣೆಯ ಮೇಲೆ ಚೂರ್ಣ/ಪುಡಿ ಅಥವಾ ಲೇಪವನ್ನು ಹಚ್ಚಿಕೊಳ್ಳುವುದರ ಮೂಲಕ ಇಟ್ಟುಕೊಳ್ಳುವ ಅಂಕಿತವಾಗಿದೆ. ಸಂದರ್ಭಾನುಸಾರ ಇದನ್ನು ಹಣೆಯ ವಿಸ್ತಾರವಾದ ಪ್ರದೇಶದ ಮೇಲೆ ಲಂಬ/ನೇರವಾಗಿ ಹಾಗೂ ಸಮತಲೀಯವಾಗಿ ವ್ಯಾಪಿಸುತ್ತಾ ಕೆಲವೊಮ್ಮೆ ಮೂಗಿನ ಮೇಲೆ ಕೂಡಾ ಹಚ್ಚಲಾಗುತ್ತದೆ. ಇಂತಹವುಗಳಲ್ಲಿ ಬಹುಮಟ್ಟಿಗೆ ಎದ್ದು ಕಾಣುವ ಮತ್ತು ವ್ಯಾಪಕವಾದ ತಿಲಕಗಳೆಂದರೆ ವೈಷ್ಣವರು ಅಥವಾ ಭಗವಾನ್‌ ವಿಷ್ಣು ಹಾಗೂ ಆತನ ಅವತಾರಗಳ ಆರಾಧಕರು ಅದರಲ್ಲಿಯೂ ಮುಖ್ಯವಾಗಿ ಭಗವಾನ್‌ ಶ್ರೀಕೃಷ್ಣನ ಭಕ್ತರು ಹಚ್ಚಿಕೊಳ್ಳುವ ತಿಲಕಗಳಾಗಿರುತ್ತವೆ. ಇವರುಗಳು ಧರಿಸುವ ತಿಲಕವು ಬೈತಲೆಗೆ ಸ್ವಲ್ಪವೇ ಕೆಳಭಾಗದಿಂದ ಹೊರಟ ಲಂಬರೇಖೆಯು ಬಹುತೇಕ ಮೂಗಿನ ತುದಿಯವರೆಗೆ ವ್ಯಾಪಿಸಿರುತ್ತದೆ. ಇದರಲ್ಲಿ ನೀಳವಾದ U ಆಕಾರದಿಂದ ಆ ರೇಖೆಯು ಮಧ್ಯದಲ್ಲಿ ಛೇದಿತವಾಗಿರುತ್ತದೆ. ಇದೇ ರೀತಿಯಲ್ಲಿ ದೇವಾಲಯಗಳ ಮೇಲೆ ಎರಡು ಚಿಹ್ನೆಗಳು ಕೂಡಾ ಇರಬಹುದಾಗಿರುತ್ತದೆ. ಈ ತಿಲಕವನ್ನು ಸಾಂಪ್ರದಾಯಿಕವಾಗಿ ಶ್ರೀಗಂಧದ ಲೇಪಗಳಿಂದ ತಯಾರಿಸಲಾಗಿರುತ್ತದಲ್ಲದೇ ಇವುಗಳನ್ನು ಹಿಂದೂ ಪುಣ್ಯಗ್ರಂಥಗಳಲ್ಲಿ ಅವುಗಳ ಶುದ್ಧತೆ ಹಾಗೂ ತಂಪನ್ನು ನೀಡುವ ಸ್ವಭಾವಕ್ಕಾಗಿ ಶ್ಲಾಘಿಸಲಾಗುತ್ತದೆ.

ಮತ್ತೊಂದು ಪ್ರಮುಖ ತಿಲಕದ ರೂಪಾಂತರವೆಂದರೆ ಭಗವಾನ್‌ ಶಿವ ಹಾಗೂ ದೇವಿ ಶಕ್ತಿಮಾತೆಯ ವಿವಿಧ ಸ್ವರೂಪಗಳು ಹಾಗೂ ಅವುಗಳ ಭಕ್ತರು ಹಚ್ಚಿಕೊಳ್ಳುವವ ತಿಲಕಗಳು. ಹಣೆಯ ಮೇಲೆ ಅಡ್ಡಲಾಗಿ ಮೂರು ಸಮತಲೀಯ ಪಟ್ಟೆಗಳನ್ನು ಹಾಗೂ ಒಂದು ಲಂಬ/ನೇರವಾದ ಪಟ್ಟೆ ಅಥವಾ ಮಧ್ಯದಲ್ಲಿ ವೃತ್ತವೊಂದನ್ನು ಇವು ಹೊಂದಿರುತ್ತದೆ. ಪರಮಶಿವ ಅಥವಾ ದೇವಿ ಶಕ್ತಿಮಾತೆಯನ್ನು ಒಲಿಸಿಕೊಳ್ಳಲು ನಡೆಸುವ ಯಜ್ಞಯಾಗಾದಿಗಳಲ್ಲಿ ಬಳಸುವ ಮರದ ತುಂಡುಗಳ ಬೂದಿ ಅಥವಾ ಭಸ್ಮದಿಂದ ಇದನ್ನು ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತದೆ. ಆ ಎರಡೂ ರೂಪಾಂತರಗಳಲ್ಲಿ ಈ ರೂಪಾಂತರವು ಅತ್ಯಂತ ಪ್ರಾಚೀನವಾಗಿದ್ದು ವಿಶ್ವದಾದ್ಯಂತದ ಅಂತಹುದೇ ಚಿಹ್ನೆಗಳ ಇದೇ ತರಹದ ಹಚ್ಚಿಕೊಳ್ಳುವಿಕೆಗಳೊಂದಿಗೆ ಹಲವು ಸಾಧಾರಣ ಅಂಶಗಳಲ್ಲಿ ಹೋಲಿಕೆಯನ್ನು ಹೊಂದಿವೆ. ಶಕ್ತಿ ದೇವತೆಯ ಹಲವು ಆರಾಧಕರು ವಿಶೇಷವಾಗಿ ದಕ್ಷಿಣ ಭಾರತೀಯರು ಅಥವಾ ದಕ್ಷಿಣ ಭಾರತೀಯ ಮೂಲದವರು ಹಣೆಯ ಮೇಲೆ ಕುಂಕುಮದ ಚೌಕಾಕಾರದ ಚಿಹ್ನೆಯನ್ನು ಹಚ್ಚಿಕೊಂಡಿರುತ್ತಾರೆ.

ಇತ್ತೀಚಿನ ದಿನಗಳಲ್ಲಿ ಹಲವು ಹಿಂದೂಗಳು ತಮ್ಮ ದೈನಂದಿನ ಜೀವನದಲ್ಲಿ ತಿಲಕವನ್ನು ಹಚ್ಚಿಕೊಳ್ಳುವುದಿಲ್ಲ. ಮಹಿಳೆಯರು ಅದನ್ನು ಹಳೆಯ ಸಂಪ್ರದಾಯದ್ದೆಂದು ಹಾಗೂ ತಮ್ಮ ಪಾಶ್ಚಿಮಾತ್ಯ ಉಡುಗೆಗಳಿಗೆ ಹೊಂದುವುದಿಲ್ಲವೆಂದು ಪರಿಗಣಿಸುತ್ತಾರಾದರೂ ಹಲವು ಹಿಂದೂ ಮಹಿಳೆಯರು ಬಿಂದಿಯನ್ನು ಹಚ್ಚಿಕೊಳ್ಳುತ್ತಾರೆ. ಈ ತಿಲಕವನ್ನು ಸರ್ವೇಸಾಮಾನ್ಯವಾಗಿ ಧಾರ್ಮಿಕ ಸಂದರ್ಭಗಳಲ್ಲಿ ಹಾಗೂ ಮಂಗಳಕರ ದಿನಗಳಲ್ಲಿ (ಹುಟ್ಟಿದಹಬ್ಬದ ದಿನಗಳು, ವಿವಾಹಗಳು etc.) ಅಥವಾ ವಿವಾಹದ ನಂತರ ಹಚ್ಚಿಕೊಳ್ಳಲಾಗುತ್ತದೆ.

ಜಾತಿ ಪದ್ಧತಿಯ ಮೇಲೆ ಆಧಾರಿತವಾಗಿ ತಿಲಕಗಳು

ಬದಲಾಯಿಸಿ

ಹಿಂದೂ ಜಾತಿ ಪದ್ಧತಿಯ ಮೇಲೆ ಹಾಗೂ ವೈದಿಕ ಗ್ರಂಥಗಳ ಮೇಲೆ ಆಧರಿಸಿ ಹೇಳುವುದಾದರೆ ಒಟ್ಟಾರೆಯಾಗಿ ನಾಲ್ಕು ವಿಧಗಳ ತಿಲಕಗಳಿರುತ್ತವೆ [].

ಬ್ರಾಹ್ಮಣ ತಿಲಕ - ಊರ್ಧ್ವಪುಂಡ್ರ

ಬದಲಾಯಿಸಿ

ಹಣೆಯ ಮೇಲೆ ಎರಡು ಲಂಬ/ನೇರವಾದ ರೇಖೆಗಳನ್ನು ಎಳೆದುಕೊಳ್ಳುವುದು (ಇತ್ತೀಚಿನ ದಿನಗಳಲ್ಲಿ ಇದು ಬಹುತೇಕ U - ಆಕಾರದ್ದಾಗಿರುತ್ತದೆ) U ಆಕಾರದ ತಿಲಕ.

ಕ್ಷತ್ರಿಯ ತಿಲಕ - ತ್ರಿಪುಂಡ್ರ

ಬದಲಾಯಿಸಿ

ಮೂರು ಕಂಸಾಕಾರ(ಕಮಾನಿನಾಕಾರ)ದ ಲಂಬ/ನೇರವಾದ ರೇಖೆಗಳನ್ನು ಹಣೆಯ ಮೇಲೆ ಎಳೆದುಕೊಂಡಿದ್ದು ಅದರ ಮೇಲೆ ಒಂದು ವೃತ್ತಾಕೃತಿಯ ಚಿಹ್ನೆಯನ್ನು ಹೊಂದಿರುವುದು.

ವೈಶ್ಯ ತಿಲಕ - ಅರ್ಧಚಂದ್ರ

ಬದಲಾಯಿಸಿ

ಅರ್ಧಚಂದ್ರಾಕೃತಿಯ ತಿಲಕ, ಅರ್ಧಚಂದ್ರಾಕೃತಿಯ ಮಧ್ಯದಲ್ಲಿ ಒಂದು ಬಿಂದಿ ಅಥವಾ ವೃತ್ತಾಕಾರದ ಚಿಹ್ನೆಯನ್ನು ಹೊಂದಿರುತ್ತದೆ.

ಶೂದ್ರ ತಿಲಕ - ಪಾರ್ತ/ರ್ಥಳ

ಬದಲಾಯಿಸಿ

ಹಣೆಯ ಮೇಲೆ ದೊಡ್ಡ ದುಂಡಗಿನ ಚಿಹ್ನೆ

ಪಾರಿಭಾಷಿಕ ಪದಗಳು

ಬದಲಾಯಿಸಿ
 
ಹರಿದ್ವಾರದಲ್ಲಿ ಕೆಂಪು ಟಿಕ್ಕಾ ಪುಡಿ

ಈ ಪದವನ್ನು ಕೊನೆಯಲ್ಲಿರುವ "ಅ"ಅನ್ನು ಯಾವಾಗಲೂ ಉಚ್ಚರಿಸಲಾಗುವುದಿಲ್ಲವಾದುದರಿಂದ ಹಾಗೂ ಅದೇ ರೀತಿಯಲ್ಲಿ ಬರೆಯಲಾಗುವುದರಿಂದ "ತಿಲಕದ " ಬದಲಾಗಿ "ತಿಲಕ್‌ " ಎಂದು ಹಿಂದಿ ಆಡುಭಾಷೆಯಲ್ಲಿ ಉಚ್ಚರಿಸಲಾಗುತ್ತದೆ.

ನೇಪಾಳ, ಬಿಹಾರ ಹಾಗೂ ಇನ್ನಿತರ ಪ್ರದೇಶಗಳಲ್ಲಿ, ತಿಲಕವನ್ನು ಟಿಕಾ /ಟೀಕಾ (टिका [ʈɪkaː][]) ಎಂದು ಕರೆಯಲಾಗುತ್ತಿದ್ದು, ಇದು ಅಬಿರ್‌ ಎಂಬ ಕೆಂಪು ಪುಡಿ, ಮೊಸರು ಹಾಗೂ ಭತ್ತದ ಕಾಳುಗಳ ಒಂದು ಮಿಶ್ರಣವಾಗಿರುತ್ತದೆ. ಬಹುಸಾಮಾನ್ಯವಾಗಿ ಬಳಸಲಾಗುವ ಟೀಕಾ/ಟಿಕ್ಕಾ ಯಾವುದೆಂದರೆ ಕೆಂಪು ಪುಡಿಯಲ್ಲಿ ಹೆಬ್ಬೆಟ್ಟನ್ನು ಅದ್ದಿ ಒಂದೇ ಗೀಟಿನಲ್ಲಿ ಮೇಲ್ಮುಖವಾಗಿ ಎಳೆದುಕೊಳ್ಳುವುದು.

ಒಳಪಂಗಡ/ಪಂಥಗಳನ್ನು ಆಧರಿಸಿದ ತಿಲಕಗಳ ವಿವರ

ಬದಲಾಯಿಸಿ
 
ತಿಲಕವನ್ನು ಧರಿಸಿರುವ ಪುರುಷ

ವಿವಿಧ ಹಿಂದೂ ಸಂಪ್ರದಾಯಗಳು ಬೇರೆ ಬೇರೆ ಸಾಮಗ್ರಿಗಳನ್ನು ಬಳಸುತ್ತವಲ್ಲದೇ ಭಿನ್ನವಾದ ಆಕಾರಗಳಲ್ಲಿ ತಿಲಕವನ್ನು [] ಇಟ್ಟುಕೊಳ್ಳುತ್ತವೆ.

  • ಶೈವರು ಸಾಧಾರಣವಾಗಿ ವಿಭೂತಿಯನ್ನು ಹಣೆಯ ಮೇಲೆ ಅಡ್ಡಲಾಗಿ ಮೂರು ಸಮತಲೀಯ ರೇಖೆಗಳಾಗಿ ಬಳಿದುಕೊಳ್ಳುತ್ತಾರೆ. ಕುಂಕುಮದ ಚುಕ್ಕೆಯನ್ನು ಮಧ್ಯದಲ್ಲಿ ಹೊಂದಿರುವ ಶ್ರೀಗಂಧದ ಲೇಪದ ಬಿಂದುವೊಂದನ್ನು ವಿಭೂತಿಯ ಜೊತೆಗೆ ಹಲವು ವೇಳೆ ಹಚ್ಚಿಕೊಳ್ಳಲಾಗುತ್ತದೆ. (ತ್ರಿಪುಂಡ್ರ ).
  • ವೈಷ್ಣವರು ಪವಿತ್ರ ನದಿ ಅಥವಾ ಸ್ಥಳಗಳಿಂದ ಪಡೆದುಕೊಂಡ ಮೃತ್ತಿಕೆಯನ್ನು ಹಚ್ಚಿಕೊಳ್ಳುತ್ತಾರೆ (ವೃಂದಾವನ ಅಥವಾ ಯಮುನಾ ನದಿಯಂತಹಾ) ಕೆಲವು ವೇಳೆ ಇದನ್ನು ಶ್ರೀಗಂಧದ ಲೇಪದೊಂದಿಗೆ ಬೆರೆಸಲಾಗುತ್ತದೆ. ಅವರು ಈ ಸಾಮಗ್ರಿಯನ್ನು ಎರಡು ಕೆಳಭಾಗದಲ್ಲಿ ಜೋಡಿಸಬಹುದಾದಂತಹಾ ಲಂಬ/ನೇರವಾದ ರೇಖೆಗಳ ರೂಪದ ಮೂಲಕ ಸರಳ U ಆಕಾರದಲ್ಲಿ ಅಥವಾ ತುಳಸಿ ದಳ/ಎಲೆಯ ರೂಪಕ್ಕೆ ಬರುವಂತೆ ಹೆಚ್ಚುವರಿ ರೇಖೆಗಳನ್ನೆಳೆದುಕೊಂಡು ತಮ್ಮ ತಿಲಕವನ್ನು ರೂಪಿಸಿಕೊಳ್ಳುತ್ತಾರೆ. ಇಂತಹವರುಗಳ ತಿಲಕವನ್ನು ಊರ್ಧ್ವ ಪುಂಡ್ರ ತಿಲಕವೆಂದು ಕರೆಯಲಾಗುತ್ತದೆ.
  • ಗಾಣಪತ್ಯರು ಕೆಂಪು ಚಂದನದ ಲೇಪವನ್ನು ಬಳಸುತ್ತಾರೆ (ರಕ್ತ ಚಂದನ).[]
  • ಶಾಕ್ತ್ಯರು ಕುಂಕುಮ ಅಥವಾ ಪುಡಿಯ ರೂಪದಲ್ಲಿರುವ ಕೆಂಪು ಅರಿಶಿನವನ್ನು ಬಳಸುತ್ತಾರೆ. ಅವರು ಲಂಬ/ನೇರವಾದ ರೇಖೆಯೊಂದನ್ನು ಅಥವಾ ಬಿಂದುವೊಂದನ್ನು ಇಟ್ಟುಕೊಳ್ಳುತ್ತಾರೆ.
  • ಗೌರವಸೂಚಕ ತಿಲಕಗಳು (ರಾಜ ತಿಲಕ ಮತ್ತು ವೀರತಿಲಕ ): ಇವುಗಳನ್ನು ಸಾಧಾರಣವಾಗಿ ಒಂದೇ ಲಂಬ/ನೇರವಾದ ಕೆಂಪು ರೇಖೆಯಾಗಿ ಎಳೆಯಲಾಗುತ್ತದೆ. ರಾಜ ತಿಲಕವನ್ನು ಮಹಾರಾಜರುಗಳ ಪಟ್ಟಾಭಿಷೇಕಗಳ ಸಮಯದಲ್ಲಿ ಅಥವಾ ಪ್ರಮುಖ ವ್ಯಕ್ತಿಗಳನ್ನು ಆಹ್ವಾನಿಸುವಾಗ ಬಳಸಲಾಗುತ್ತದೆ. ವೀರ ತಿಲಕವನ್ನು ಯುದ್ಧ ಅಥವಾ ಕ್ರೀಡೆಯೊಂದರ ನಂತರ ಅದರ ವಿಜಯಿಗಳಿಗೆ ಅಥವಾ ನಾಯಕರಿಗೆ ಅಭಿಷೇಕ ಮಾಡಲು ಬಳಸಲಾಗುತ್ತದೆ.
  • ಸ್ವಾಮಿನಾರಾಯಣ್‌ ತಿಲಕ : ಇದು U-ಆಕಾರದಲ್ಲಿದ್ದು ಹಣೆಯ ಮಧ್ಯಭಾಗದಲ್ಲಿ U ಆಕಾರದ (ಚಾಂಡ್ಲೋ ಎಂದು ಹೆಸರಾಗಿದೆ) ಮಧ್ಯದಲ್ಲಿ ಕೆಂಪು ಬಿಂದುವೊಂದನ್ನು ಹೊಂದಿರುತ್ತದೆ.

ತಿಲಕಗಳ ವಿಧಗಳು

ಬದಲಾಯಿಸಿ

ಒಟ್ಟಾರೆಯಾಗಿ ತಿಲಕಗಳಲ್ಲಿ ಹತ್ತೊಂಬತ್ತು ವಿಧಗಳಿವೆ[].

ವಿಜಯಶ್ರೀ

ಬದಲಾಯಿಸಿ

ಮಧ್ಯದಲ್ಲಿ ಶ್ವೇತ ರೇಖೆಯೊಂದಿಗಿನ ಊರ್ಧ್ವಪುಂಡ್ರ ಶ್ವೇತವರ್ಣದ ತಿಲಕ[]. ಜೈಪುರದ ಸ್ವಾಮಿ ಬಾಲಾನಂದರು ಈ ತಿಲಕದ ರೂವಾರಿಗಳು.

ಬೆಂಡಿ ತಿಲಕ

ಬದಲಾಯಿಸಿ

ಮಧ್ಯದಲ್ಲಿ ವೃತ್ತಾಕಾರದ ಚಿಹ್ನೆಯೊಂದಿಗಿನ ಊರ್ಧ್ವಪುಂಡ್ರ ಶ್ವೇತವರ್ಣದ ತಿಲಕ[]. ಅಯೋಧ್ಯೆಯ ಬಡಾ ಸ್ಥಾನದ ಸ್ವಾಮಿ ರಾಮಪ್ರಸಾದ್‌ ಆಚಾರ್ಯರು ಇದರ ಸ್ಥಾಪಕರು.

ಚತುರ್ಭುಜಿ ತಿಲಕ

ಬದಲಾಯಿಸಿ

ಮೇಲ್ಭಾಗವು ವಿರುದ್ಧ ದಿಕ್ಕಿನಲ್ಲಿ 90 ಡಿಗ್ರಿ ಕೋನಕ್ಕೆ ತಿರುಗಿದಂತಿರುವ ಶ್ವೇತವರ್ಣದ ಊರ್ಧ್ವಪುಂಡ್ರ ತಿಲಕ. ಇದರ ಮಧ್ಯಭಾಗದಲ್ಲಿ ಶ್ರೀ ಎಂದಿರುವುದಿಲ್ಲ. ಬಿಹಾರದ ನಾರಾಯಣ್‌ದಾಸ್‌ಜಿಯವರು ಇದನ್ನು ಸ್ಥಾಪಿಸಿದ್ದವರು. ಅಯೋಧ್ಯೆಯ ಸ್ವರ್ಗ ದ್ವಾರದ ಸಂನ್ಯಾಸಿಗಳು ಇದನ್ನು ಪಾಲಿಸುತ್ತಾರೆ.

ಇತರೆ ತಿಲಕಗಳು

ಬದಲಾಯಿಸಿ
 
Examples of Tilaks or sect-marking in British India, summarized by 19th century scholar Russell.

ಉಳಿದವುಗಳಲ್ಲಿ 12 ಶ್ರೀ ತಿಲಕಗಳು ಸೇರಿವೆ[]

  1. ರೇವಸ ಗಡ್ಡಿಯ ಶ್ರೀ ತಿಲಕ
  2. ರಾಮಚರಣದಾಸ ತಿಲಕ
  3. ಶ್ರೀ ಜೀವಾರಾಮ್‌ರವರ ತಿಲಕ
  4. ಶ್ರೀ ಜನಕರಾಜ ಕಿಶೋರಿ ಶರಣ ರಸಿಕ್‌ ಅಲಿಜಿಯವರ ತಿಲಕ
  5. ಶ್ರೀ ರೂಪ್‌ಕಾಲಜೀರವರ ತಿಲಕ
  6. ರೂಪ್‌ಸರಸ್‌ಜೀರವರ ತಿಲಕ
  7. ರಾಮಸಖೀಜಿರವರ ತಿಲಕ
  8. ಕಾಮ್‌ನೇಂದು ಮಣಿಯವರ ತಿಲಕ
  9. ಕಾರುಣ್‌ಸಿಂಧುಜೀಯವರ ತಿಲಕ
  10. ಸ್ವಾಮಿನಾರಾಯಣ್‌ರವರ ತಿಲಕ
  11. ನಿಂಬಾರ್ಕ್‌ರ ತಿಲಕ
  12. ಮಾಧ್ವರ ತಿಲಕ

ಬಿಂದಿಯೊಂದಿಗಿನ ಸಂಬಂಧ/ಬಾಂಧವ್ಯ

ಬದಲಾಯಿಸಿ

ತಿಲಕ ಮತ್ತು ಬಿಂದಿ ಎಂಬ ಪಾರಿಭಾಷಿಕ ಪದಗಳು ಕೆಲಮಟ್ಟಿಗೆ ಒಂದೇ ಎಂಬಂತೆ ಕಾಣಿಸಿದರೂ, ಖಚಿತವಾಗಿ ಸಮಾನಾರ್ಥಕ ಪದಗಳಂತೂ ಅಲ್ಲ. ಅವುಗಳ ನಡುವಿನ ಕೆಲ ಭಿನ್ನತೆಗಳು ಈ ಕೆಳಕಂಡಂತಿವೆ:

  • ತಿಲಕ ವೊಂದನ್ನು ಯಾವಾಗಲೂ ಲೇಪ ಅಥವಾ ಪುಡಿಯೊಂದರ ಜೊತೆಗೆ ಹಚ್ಚಿಕೊಳ್ಳಲಾಗುವುದಾದರೆ, ಬಿಂದಿ ಯು ಒಂದು ಲೇಪವಾಗಿರಬಹುದು, ಒಂದು ಅಂಟುಚೀಟಿ/ಸ್ಟಿಕರ್‌ ಅಥವಾ ಒಂದು ಅಲಂಕರಣವೂ ಆಗಿರಬಹುದು.
  • ತಿಲಕ ವೊಂದನ್ನು ಪುರುಷ ಮಹಿಳೆಯರೀರ್ವರೂ ಹಚ್ಚಿಕೊಳ್ಳಬಹುದಾಗಿದ್ದರೆ, ಬಿಂದಿ ಯನ್ನು ಕೇವಲ ಮಹಿಳೆಯರು ಮಾತ್ರವೇ ಹಚ್ಚಿಕೊಳ್ಳುವರು.
  • ತಿಲಕ ವೊಂದನ್ನು ಸಾಧಾರಣವಾಗಿ ಧಾರ್ಮಿಕ ಅಥವಾ ಪಾರಮಾರ್ಥಿಕ ಕಾರಣಗಳಿಗಾಗಿ ಅಥವಾ ಓರ್ವ ಗಣ್ಯವ್ಯಕ್ತಿ, ಸಂಗತಿ ಅಥವಾ ವಿಜಯೋತ್ಸವವನ್ನು ಗೌರವಿಸಲು ಹಚ್ಚಿಕೊಳ್ಳಲಾಗುತ್ತದೆ. ಬಿಂದಿ ಯೊಂದು ವಿವಾಹವನ್ನು ಸೂಚಿಸಬಹುದು ಅಥವಾ ಸರಳವಾಗಿ ಅಲಂಕಾರದ ಉದ್ದೇಶದಿಂದ ಬಳಸಿರಬಹುದಾಗಿರುತ್ತದೆ.
  • ಬಿಂದಿ ಯೊಂದನ್ನು ಕೇವಲ ಕಣ್ಣುಗಳ ನಡುವೆ ಮಾತ್ರ ಹಚ್ಚಿಕೊಳ್ಳಲಾಗುವುದಾದರೆ, ತಿಲಕವೊಂದು ಮುಖವನ್ನೇ ಆವರಿಸಬಹುದಾಗಿದ್ದು ಅಥವಾ ದೇಹದ ಇತರೆ ಭಾಗಗಳಿಗೆ ಹಚ್ಚಿಕೊಂಡಿರಬಹುದಾಗಿರುತ್ತದೆ. ತಿಲಕವನ್ನು ದೇಹದ ಹನ್ನೆರಡು ಭಾಗಗಳಿಗೆ ಲೇಪಿಸಬಹುದಾಗಿರುತ್ತದೆ : ತಲೆ, ಹಣೆಯ ಮೇಲೆ, ಕುತ್ತಿಗೆ, ಹೆಗಲಿನ ಎರಡೂ ಬದಿಗಳು, ಮುಂದೋಳಿನ ಎರಡೂ ಬದಿಗಳು, ಎದೆ, ಮುಂಡದ ಎರಡೂ ಬದಿಗಳು, ಹೊಟ್ಟೆ ಮತ್ತು ಭುಜ.
  • ಬಿಂದಿ ಎಂಬುದು ಒಂದು ಹಿಂದಿ ಪದವಾಗಿದ್ದರೆ, ತಿಲಕ ವು ಇಡೀ ಭಾರತೀಯ ಉಪಖಂಡಕ್ಕೆ ಅನ್ವಯಿಸುತ್ತದೆ.

ವಿವಿಧ ಶೈಲಿಗಳು

ಬದಲಾಯಿಸಿ

ಕೆಂಪು ಟಿಕ್ಕಾ ಚಿಹ್ನೆಗಳನ್ನು ಸಾಂಪ್ರದಾಯಿಕವಾಗಿ ವಿವಾಹ ಸಮಾರಂಭಗಳಲ್ಲಿ ಹಾಗೂ ದೈನಂದಿನ ಜೀವನದಲ್ಲಿಯೂ ಬಳಸಲಾಗುತ್ತದೆ

ಇವನ್ನೂ ಗಮನಿಸಿ‌

ಬದಲಾಯಿಸಿ
  • ತಿಲಕ (ವೈಷ್ಣವ)

ಟಿಪ್ಪಣಿಗಳು

ಬದಲಾಯಿಸಿ
  1. V. S. ಆಪ್ಟೆ. ಎ ಪ್ರಾಕ್ಟಿಕಲ್‌ ಸ್ಯಾನ್ಸ್‌ಕ್ರಿಟ್‌ ಡಿಕ್ಷನರಿ. p. 475
  2. ಗೌತಮ್‌ ಚಟರ್ಜಿ, ಸೇಕ್ರೆಡ್‌ ಹಿಂದೂ ಸಿಂಬಲ್ಸ್‌ , ಪುಟ 71
  3. Wells, John (11 September 2009). "But Soft!". John Wells's Phonetic Blog. Retrieved 11 September 2009.
  4. ಮಖನ್‌ ಝಾ, ಆಂಥ್ರೋಪಾಲಜಿ ಆಫ್‌ ಏನ್‌ಷಿಯೆಂಟ್‌ ಹಿಂದೂ ಕಿಂಗ್‌ಡಮ್ಸ್‌ : ಎ ಸ್ಟಡಿ ಇನ್‌ ಸಿವಿಲೈಸೇಷನಲ್‌ ಪರ್ಸ್‌ಪೆಕ್ಟೀವ್‌, ಪುಟ 126
  5. p. 202, ಟಿಪ್ಪಣಿ 40. ಗ್ರೈಮ್ಸ್‌ , ಜಾನ್‌ A. ಗಣಪತಿ: ಸಾಂಗ್‌ ಆಫ್‌‌ ದ ಸೆಲ್ಫ್‌. (ಸ್ಟೇಟ್‌ ಯೂನಿವರ್ಸಿಟಿ/ವಿಶ್ವವಿದ್ಯಾಲಯದ ಆಫ್‌ ನ್ಯೂಯಾರ್ಕ್‌ ಪ್ರೆಸ್‌ : ಆಲ್ಬೆನಿ, 1995) ISBN 0-7914-2440-5
  6. ೬.೦ ೬.೧ ವಿಜಯ ಪ್ರಕಾಶ ಶರ್ಮಾ, ದ ಸಾಧೂಸ್‌ ಅಂಡ್‌ ಇಂಡಿಯನ್‌ ಸಿವಿಲೈಜೇಷನ್‌, ಪುಟ 72
  7. ವಿಜಯ ಪ್ರಕಾಶ ಶರ್ಮಾ, ದ ಸಾಧೂಸ್‌ ಅಂಡ್‌ ಇಂಡಿಯನ್‌ ಸಿವಿಲೈಜೇಷನ್‌, ಪುಟ 73
  8. ವಿಜಯ ಪ್ರಕಾಶ ಶರ್ಮಾ, ದ ಸಾಧೂಸ್‌ ಅಂಡ್‌ ಇಂಡಿಯನ್‌ ಸಿವಿಲೈಜೇಷನ್‌, ಪುಟ 75

ಉಲ್ಲೇಖಗಳು‌

ಬದಲಾಯಿಸಿ
  • Entwistle, A. W. (1981). Vaishnava tilakas: Sectarian marks worn by worshippers of Vishnu (IAVRI bulletin). International Association of the Vrindaban Research Institute.

ಬಾಹ್ಯ ಕೊಂಡಿಗಳು‌

ಬದಲಾಯಿಸಿ

ಟೆಂಪ್ಲೇಟು:Hinduism footer small

"https://kn.wikipedia.org/w/index.php?title=ತಿಲಕ&oldid=1125288" ಇಂದ ಪಡೆಯಲ್ಪಟ್ಟಿದೆ