ತಿರುಮುರುಗನಾಥೇಶ್ವರ ದೇವಸ್ಥಾನ
ತಿರುಮುರುಗನಾಥೇಶ್ವರ ದೇವಸ್ಥಾನ | |
---|---|
ಭೂಗೋಳ | |
ಕಕ್ಷೆಗಳು | 11°09′54″N 77°18′41″E / 11.16500°N 77.31139°E |
ದೇಶ | ಭಾರತ |
ರಾಜ್ಯ | ತಮಿಳುನಾಡು |
ಜಿಲ್ಲೆ | ತಿರುಪ್ಪೂರ್ |
ಸ್ಥಳ | ತಿರುಮುರುಗನಪೂಂಡಿ |
ವಾಸ್ತುಶಿಲ್ಪ | |
ವಾಸ್ತುಶಿಲ್ಪ ಶೈಲಿ | ದ್ರಾವಿಡ ವಾಸ್ತುಶಿಲ್ಪ |
ಇತಿಹಾಸ ಮತ್ತು ಆಡಳಿತ | |
ಅಧೀಕೃತ ಜಾಲತಾಣ | thirumuruganpoonditemple |
ದಕ್ಷಿಣ ಭಾರತದ ತಮಿಳುನಾಡು ರಾಜ್ಯದ ತಿರುಪ್ಪೂರ್ ಜಿಲ್ಲೆಯ ಪಂಚಾಯತ ಪಟ್ಟಣವಾದ ತಿರುಮುರುಗನಪೂಂಡಿಯಲ್ಲಿರುವ ತಿರುಮುರುಗನಾಥೀಶ್ವರರ್ ದೇವಸ್ಥಾನ (ತಿರುಮುರುಗನಪೂಂಡಿ ದೇವಸ್ಥಾನ ಎಂದೂ ಕರೆಯುತ್ತಾರೆ) ಹಿಂದೂ ದೇವರಾದ ಶಿವನಿಗೆ ಸಮರ್ಪಿತವಾಗಿದೆ. ದ್ರಾವಿಡ ಶೈಲಿಯ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿರುವ ಈ ದೇವಾಲಯದ ಪ್ರಸ್ತುತ ರಚನೆಯು ೧೦ ನೇ ಶತಮಾನದಲ್ಲಿ ಕೊಂಗು ಚೋಳರ ಕಾಲದಲ್ಲಿ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಶಿವನನ್ನು ತಿರುಮುರುಗನಾಥೀಶ್ವರರ್ ಎಂದು ಮತ್ತು ಅವನ ಪತ್ನಿ ಪಾರ್ವತಿಯನ್ನು ಅವುದೈನಯಾಗಿ ಎಂದು ಪೂಜಿಸಲಾಗುತ್ತದೆ.
೭ ನೇ ಶತಮಾನದ ತಮಿಳು ಶೈವ ಅಂಗೀಕೃತ ಕೃತಿಯಾದ ತೇವರಂನಲ್ಲಿ ಪ್ರಧಾನ ದೇವತೆಯನ್ನು ಪೂಜಿಸಲಾಗುತ್ತಿದ್ದು ಇದನ್ನು ತಮಿಳು ಸಂತ ಕವಿಗಳು ನಾಯನ್ಮಾರ್‌ಗಳು ಎಂದು ಬರೆದಿದ್ದಾರೆ ಹಾಗು ಇದನ್ನು ಪಾದಲ್ ಪೇತ್ರ ಸ್ಥಲಂ ಎಂದು ವರ್ಗೀಕರಿಸಲಾಗಿದೆ. ದೇವಾಲಯದ ಸುತ್ತಲೂ ಗ್ರಾನೈಟ್ ಗೋಡೆಯು ಸುತ್ತುವರೆದಿದೆ. ಈ ದೇವಾಲಯವು ರಾಜಗೋಪುರವನ್ನು ಮತ್ತು ಗೇಟ್‌ವೇಗೋಪುರಗಳನ್ನು ಹೊಂದಿಲ್ಲ. ಇದು ದಕ್ಷಿಣ ಭಾರತದ ದೇವಾಲಯಗಳಲ್ಲಿ ಸಾಮಾನ್ಯ ಲಕ್ಷಣವಾಗಿದೆ.
ದೇವಾಲಯವು ಎಲ್ಲಾ ದಿನಗಳಲ್ಲಿ ೫:೩೦ - ೧೨:೪೫ ರವರೆಗೆ ಮತ್ತು ೩:೩೦ - ೮:೧೫ ರವರೆಗೆ ತೆರೆದಿರುತ್ತದೆ. ದೇವಾಲಯದಲ್ಲಿ ನಾಲ್ಕು ದೈನಂದಿನ ಆಚರಣೆಗಳು ಮತ್ತು ಅನೇಕ ವಾರ್ಷಿಕ ಉತ್ಸವಗಳು ನಡೆಯುತ್ತವೆ. ಅದರಲ್ಲಿ ಸುಂದರರ್ ಮತ್ತು ಮಹಾಶಿವರಾತ್ರಿ ಹಬ್ಬಕ್ಕಾಗಿ ತಮಿಳು ತಿಂಗಳ ಮಾಸಿ (ಫೆಬ್ರವರಿ - ಮಾರ್ಚ್) ನಲ್ಲಿ ಬ್ರಹ್ಮೋತ್ಸವವನ್ನು ಆಚರಿಸಲಾಗುತ್ತದೆ. ಈ ದೇವಾಲಯವನ್ನು ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಮಂಡಳಿಯು ನಿರ್ವಹಿಸುತ್ತದೆ.
ದಂತಕಥೆ
ಬದಲಾಯಿಸಿಈ ಗ್ರಾಮಕ್ಕೆ ಈ ಹೆಸರು ಬಂದಿರುವುದು ಈ ಸ್ಥಳದಲ್ಲಿ ಶಿವನನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದಾನೆಂದು ಭಾವಿಸಲಾದ ಮುರುಗ(ಸುಬ್ರಹ್ಮಣ್ಯ) ದೇವರಿಂದ. ಸುಬ್ರಹ್ಮಣ್ಯನುದೇವತೆಗಳ ಆಜ್ಞೆಯ ಮೇರೆಗೆ ರಾಕ್ಷಸ ರಾಜ ಸೂರಪದ್ಮನನ್ನು ಕೊಂದನು. ರಾಕ್ಷಸನನ್ನು ಎರಡು ತುಂಡುಗಳಾಗಿ ಕೊಂದು ಬ್ರಹ್ಮಹತ್ಯಾ ದೋಷವನ್ನು ಅನುಭವಿಸಿದನು. ಮುರುಗನು ಈ ಸ್ಥಳದಲ್ಲಿ ತನ್ನ ಶೂಲ, ಈಟಿಯಿಂದ ಒಂದು ಚಿಲುಮೆಯನ್ನು ಅಗೆದು ಶಿವನನ್ನು ಪೂಜಿಸಿದನೆಂದು ನಂಬಲಾಗಿದೆ. ಮುರುಗನು ತನ್ನ ತಂದೆಯಾದ ಶಿವನನ್ನು ಪೂಜಿಸಿದ್ದರಿಂದ ಪ್ರಧಾನ ದೇವರನ್ನು ಮುರುಗನಾಥಸ್ವಾಮಿ ಎಂದು ಕರೆಯಲಾಯಿತು. [೧]
ಸುಂದರರ್ ಪ್ರಸಿದ್ಧ ಶೈವ ಸಂತ ಮತ್ತು ನಾಯನ್ಮಾರ್ ೮ ನೇ ಶತಮಾನಕ್ಕೆ ಸೇರಿದವರು. ಅವರು ಏಳನೇ ತಿರುಮುರೈ ಎಂದು ಸಂಕಲಿಸಿದ ತಮ್ಮ ಶ್ಲೋಕಗಳಲ್ಲಿ ದಕ್ಷಿಣ ಭಾರತದಲ್ಲಿನ ಅನೇಕ ಶಿವ ದೇವಾಲಯಗಳನ್ನು ಗೌರವಿಸಿದ್ದಾರೆ. ಹಿಂದೂ ದಂತಕಥೆಯ ಪ್ರಕಾರ ಈ ಸ್ಥಳಕ್ಕೆ ಆಗಮಿಸಿದಾಗ ಅವರು ವಿನಾಯಕ ದೇವಸ್ಥಾನದಲ್ಲಿ ವಿಶ್ರಾಂತಿ ಪಡೆದಿದ್ದರು. ಸುಂದರರ್ ಶಿವನ ಬಗ್ಗೆ ಆಲೋಚನೆಗಳನ್ನು ಪಡೆಯುವುದನ್ನು ಮರೆತಿದ್ದರಿಂದ ಅವನ ಭಕ್ತಿಯನ್ನು ಪರೀಕ್ಷಿಸಲು ಶಿವನು ಅವನ ಎಲ್ಲಾ ಆಸ್ತಿಯನ್ನು ಕದಿಯಲು ತನ್ನ ಭೂತಗಣಗಳನ್ನು ಕಳುಹಿಸಿದನು. ಆಗ ಸುಂದರರ್ ದೇವಾಲಯದಲ್ಲಿ ವಿನಾಯಕನನ್ನು ಪ್ರಾರ್ಥಿಸಿ ಪೂರ್ವಕ್ಕೆ ಮುಂದುವರಿದನು. ಸುಂದರರ್ ಕೋಪದಲ್ಲಿ ತನ್ನ ಆಸ್ತಿಯನ್ನು ರಕ್ಷಿಸಲಿಲ್ಲ ಎಂದು ಶಿವನನ್ನು ದೂಷಿಸಿದನು. ಶಿವನು ಈ ಸ್ಥಳದಲ್ಲಿ ಅವನ ಉಪಸ್ಥಿತಿಯನ್ನು ದಯಪಾಲಿಸಿ ಅವನ ಎಲ್ಲಾ ಆಸ್ತಿಯನ್ನು ಪುನಃಸ್ಥಾಪಿಸಿದನು. [೨]
ವಾಸ್ತುಶಿಲ್ಪ
ಬದಲಾಯಿಸಿಈ ದೇವಾಲಯವನ್ನು ಕೊಂಗು ಚೋಳರು ನಿರ್ಮಿಸಿದ್ದಾರೆಂದು ನಂಬಲಾಗಿದೆ. ರಾಜ ಪ್ರಥಮ ವಿಕ್ರಮ ಚೋಳ ರ ೬೮ ದಾಖಲೆ ಶಾಸನಗಳು ಗರ್ಭಗುಡಿಯ ಗೋಡೆಗಳ ಮೇಲೆ ಮತ್ತು ಆವರಣದ ಸುತ್ತಲೂ ಕಂಡುಬರುತ್ತವೆ. ತಿರುಮುರುಗನಾಥೀಶ್ವರರ್ ದೇವಸ್ಥಾನವು ತಿರುಮುರುಗನಪೂಂಡಿಯಲ್ಲಿದ್ದು ಇದು ತಿರುಪ್ಪೂರ್ ನಿಂದ ೯ ಕಿ.ಮೀ ದೂರದಲ್ಲಿ ನೆಲೆಗೊಂಡಿದೆ[೩]. ಈ ದೇವಾಲಯವನ್ನು ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದ್ದು ಇದನ್ನು ಕೊಕ್ಕುಡಿ ಕೊಯಿಲ್ ಎಂದು ವರ್ಗೀಕರಿಸಲಾಗಿದೆ. ಇದು ಹೂವಿನ ಉದ್ಯಾನದ ಸುತ್ತಲಿನ ಸ್ಥಳದಲ್ಲಿ ನಿರ್ಮಿಸಲಾದ ದೇವಾಲಯವಾಗಿದೆ. ಶಾಸನಗಳ ಪ್ರಕಾರ ದೇವಾಲಯವು ಕೊಕ್ಕುಡಿ ಎಂಬ ಹೂವಿನ ಗಿಡದಿಂದ ಸುತ್ತುವರಿದಿದೆ. [೪]
ಈ ದೇವಾಲಯವು ಇತರ ದಕ್ಷಿಣ ಭಾರತದ ದೇವಾಲಯಗಳಲ್ಲಿರಾಜಗೋಪುರವನ್ನು ಹೊಂದಿಲ್ಲ. ಎಲ್ಲಾ ದೇವಾಲಯಗಳನ್ನು ೧ ಎಕರೆ ಅಳತೆಯ ಆಯತಾಕಾರದ ಆವರಣದಲ್ಲಿ ಇರಿಸಲಾಗಿದೆ. ಗರ್ಭಗುಡಿಯು ಲಿಂಗದ ರೂಪದಲ್ಲಿ ತಿರುಮುರುಗನಾಥೀಶ್ವರರ ಚಿತ್ರವನ್ನು ಹೊಂದಿದ್ದು ಇದು ಪಶ್ಚಿಮಕ್ಕೆ ಎದುರಾಗಿರುವ ಶಿವನ ಸಾಂಪ್ರದಾಯಿಕರೂಪವಾಗಿದೆ. ಗರ್ಭಗುಡಿಗೆ ಹೋಗುವ ಅರ್ಧ ಮಂಟಪ ಮತ್ತು ಮುಖ ಮಂಟಪ ಕಂಬದ ಸಭಾಂಗಣಗಳಿವೆ. ಶಿವನ ಗುಡಿಯ ಕಡೆಗೆ ದಕ್ಷಿಣಾಭಿಮುಖವಾಗಿ ಮುರುಗ(ಸುಬ್ರಹ್ಮಣ್ಯ)ನ ಗುಡಿ ಇದೆ. ಮುರುಗನು ತನ್ನ ಆಯುಧವಾದ ಶೂಲವನ್ನು ಬುಗ್ಗೆಯನ್ನು ಅಗೆಯಲು ಬಳಸಿದ್ದಾನೆ ಎಂದು ನಂಬಲಾಗಿದೆ.ಆದ್ದಂದ ದೇವಾಲಯದಲ್ಲಿ ಅವನು ತನ್ನ ಆಯುಧ ಮತ್ತು ವಾಹನ ನವಿಲು ಇಲ್ಲದೆ ಕಾಣಿಸುತ್ತಾನೆ. ಮೊದಲ ಆವರಣದಲ್ಲಿ ವಿನಾಯಕ, ದುರ್ಗಾ, ದಕ್ಷಿಣಾಮೂರ್ತಿ ಮತ್ತು ಚಂಡಿಕೇಶ್ವರ ಚಿತ್ರಗಳಿವೆ . ಮೊದಲ ಆವರಣದಲ್ಲಿ ಪಶ್ಚಿಮಾಭಿಮುಖವಾಗಿ ಅವುದೈನಗಿ(ಪಾರ್ವತಿ)ಯ ಗುಡಿಯನ್ನು ಕಾಣಬಹುದು. ಗೋಡೆಗಳ ಮೇಲೆ ಸುಂದರರನ್ನು ಕೋಪ, ಅವಮಾನ ಮತ್ತು ಸಂತೋಷದ ಮೂರು ವಿಭಿನ್ನ ಭಾವನೆಗಳಲ್ಲಿ ತೋರಿಸುವ ಶಿಲ್ಪದ ಚಿತ್ರಣಗಳಿವೆ. ಅಡವಲ್ಲನ್ ಸಭಾ ಎಂಬ ನಟರಾಜನ ಸಭಾಂಗಣವಿದೆ. ದೇವಾಲಯಕ್ಕೆ ಸಂಬಂಧಿಸಿದ ಮೂರು ದೇವಾಲಯದ ತೊಟ್ಟಿಗಳಿವೆ - ಷಣ್ಮುಘ ತೀರ್ಥಂ, ಜ್ಞಾನತೀರ್ಥಂ ಮತ್ತು ಬ್ರಹ್ಮತೀರ್ಥಂ. [೫] ಕಾಲಭೈರವರ ಮತ್ತು ಲಿಂಗೋತ್ಭವರ ಚಿತ್ರಗಳಿದ್ದು ಇವುಗಳನ್ನು ಕೊಂಗು ಚೋಳರ ವಾಸ್ತುಶಿಲ್ಪದ ಮಾದರಿಗಳೆಂದು ಪರಿಗಣಿಸಲಾಗಿದೆ. [೬]
ಸಂಸ್ಕೃತಿ
ಬದಲಾಯಿಸಿದೇವಾಲಯವು ಶೈವ ಸಂಪ್ರದಾಯವನ್ನು ಅನುಸರಿಸುತ್ತದೆ. ದೇವಾಲಯದ ಅರ್ಚಕರು ಹಬ್ಬಗಳ ಸಂದರ್ಭದಲ್ಲಿ ಮತ್ತು ದಿನನಿತ್ಯ ಪೂಜೆಯನ್ನು (ಆಚರಣೆಗಳನ್ನು) ಮಾಡುತ್ತಾರೆ. ದೇವಾಲಯದ ಆಚರಣೆಗಳನ್ನು ದಿನಕ್ಕೆ ನಾಲ್ಕು ಬಾರಿ ನಡೆಸಲಾಗುತ್ತದೆ: ಉಷಾಕಾಲಂ ೬:೦೦ಕ್ಕೆ ಬೆಳಿಗ್ಗೆ, ೮:೦೦ ಕ್ಕೆ ಕಲಾಶಾಂತಿ ಬೆಳಿಗ್ಗೆ, ೧೨:೦೦ ಕ್ಕೆ ಉಚ್ಚಿಕಾಲಂ ಅಪರಾಹ್ನ, ಮತ್ತು ೫:೦೦ ಕ್ಕೆ ಸಾಯರಾಟ್ಚೈ ಸಂಜೆ [೭] ಪ್ರತಿಯೊಂದು ಆಚರಣೆಯು ಮೂರು ಹಂತಗಳನ್ನು ಹೊಂದಿದೆ. ತಿರುಮುರುಗನಾಥೀಶ್ವರರ್ ಮತ್ತು ಅವುದೈನಗಿ ಇಬ್ಬರಿಗೂ ಅಲಂಗಾರಂ (ಅಲಂಕಾರ), ನೈವೇತನಂ (ಆಹಾರ ನೈವೇದ್ಯ) ಮತ್ತು ದೀಪ ಆರದನೈ ( ದೀಪಗಳನ್ನು ಬೆಳಗಿಸುವುದು ). ದೇವಸ್ಥಾನದಲ್ಲಿ ಸಾಪ್ತಾಹಿಕ, ಮಾಸಿಕ ಮತ್ತು ಹದಿನೈದು ದಿನಗಳ ಆಚರಣೆಗಳು ನಡೆಯುತ್ತವೆ. ದೇವಾಲಯವು ಬೆಳಿಗ್ಗೆ ೫:೩೦ ರಿಂದ ೧೨:೪೫ ರವರೆಗೆ ಮತ್ತು ಮಧ್ಯಾಹ್ನ ೩:೩೦ ರಿಂದ ೮:೧೫ ರವರೆಗೆ ತೆರೆದಿರುತ್ತದೆ. [೫]
ಸುಂದರರ್ ಮತ್ತು ಮಹಾಶಿವರಾತ್ರಿ ಹಬ್ಬಕ್ಕಾಗಿ ತಮಿಳು ತಿಂಗಳ ಮಾಸಿ (ಫೆಬ್ರವರಿ - ಮಾರ್ಚ್) ನಲ್ಲಿ ಬ್ರಹ್ಮೋತ್ಸವವನ್ನು ಆಚರಿಸಲಾಗುತ್ತದೆ. ದೇವಾಲಯದಲ್ಲಿ ಆಚರಿಸಲಾಗುವ ತೈಪೂಸಂ, ಅನ್ನಾಭಿಷೇಕ, ಕಂಠಶಷ್ಟಿ ಮತ್ತು ಕಾರ್ತಿಗೈ ದೀಪಂ ಮುಂತಾದ ಇತರ ಸಾಮಾನ್ಯ ಹಬ್ಬಗಳಿವೆ. [೫] [೮]
೮ನೇ ಶತಮಾನದ ತಮಿಳು ಶೈವ ಕವಿ ಸುಂದರಾರ್, ಏಳನೇ ತಿರುಮುರೈ ಎಂದು ಸಂಕಲಿಸಿದ ತೇವರಂನಲ ಹತ್ತು ಪದ್ಯಗಳಲ್ಲಿ ತಿರುಮುರುಗನಾಥೀಶ್ವರರನ್ನು ಪೂಜಿಸಿದರು. ಈ ದೇವಾಲಯವನ್ನು ತೇವರಂನಲ್ಲಿ ಪೂಜಿಸಲಾಗಿರುವುದರಿಂದ ಇದನ್ನು ಪಾದಲ್ ಪೇತ್ರ ಸ್ಥಲಂ ಎಂದು ವರ್ಗೀಕರಿಸಲಾಗಿದೆ. ಇದು ಶೈವ ನಿಯಮದಲ್ಲಿ ಉಲ್ಲೇಖವನ್ನು ಕಂಡುಕೊಳ್ಳುವ ೨೭೫ ದೇವಾಲಯಗಳಲ್ಲಿ ಒಂದಾಗಿದೆ. [೯] ಮೂವರು ಸಂತರಿಂದ ಪೂಜಿಸಲ್ಪಟ್ಟ ೨೭೫ ದೇವಾಲಯಗಳಲ್ಲಿ, ಸುಂದರರ್ ಪ್ರತ್ಯೇಕವಾಗಿ ೨೫ ದೇವಾಲಯಗಳಿಗೆ ಭೇಟಿ ನೀಡಿದ್ದು ಈ ದೇವಾಲಯವು ಅವುಗಳಲ್ಲಿ ಒಂದಾಗಿದೆ. ಶಿವನು ವಿವಿಧ ಸ್ಥಳಗಳಲ್ಲಿ ಮಾಡಿದ ಐದು ತಾಂಡವಗಳಲ್ಲಿ ಈ ಸ್ಥಳವನ್ನು ಅವನು ಬ್ರಹ್ಮ ತಾಂಡವವನ್ನು ಮಾಡಿದ ಸ್ಥಳವೆಂದು ಪರಿಗಣಿಸಲಾಗಿದೆ [೧೦]. ಆಧುನಿಕ ಕಾಲದಲ್ಲಿ ದೇವಾಲಯವನ್ನು ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಮಂಡಳಿಯು ನಿರ್ವಹಿಸುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ "Sri Thirumuruganatheeswarar temple". Dinamalar. 2014. Retrieved 31 ಮೇ 2014.
- ↑ Swaminathan, Subrahmanya (1992). Srimad Periya-puraanam. S. Swaminathan.
- ↑ India. Office of the Registrar General (1965). Census of India, 1961: Madras Volume 9, Issue 1 of Census of India, 1961, India. Office of the Registrar General. Manager of Publications. p. 357.
- ↑ Reddy, G.Venkatramana (2010). Alayam - The Hindu temple - An epitome of Hindu Culture. Mylapore, Chennai: Sri Ramakrishna Math. p. 31. ISBN 978-81-7823-542-4.
- ↑ ೫.೦ ೫.೧ ೫.೨ "Sri Thirumuruganatheeswarar temple". Dinamalar. 2014. Retrieved 31 ಮೇ 2014."Sri Thirumuruganatheeswarar temple". Dinamalar. 2014. Retrieved 31 May 2014.
- ↑ R., Krishnamurthy (10 ಜನವರಿ 2013). "Muruga worshipped Siva here". The Hindu. Retrieved 30 ನವೆಂಬರ್ 2015.
- ↑ "Pooja details". Arulmigu Thirumuruganatha Swamy Temple administration. 2014. Archived from the original on 4 ಮಾರ್ಚ್ 2016. Retrieved 30 ನವೆಂಬರ್ 2015.
- ↑ "Festival details". Arulmigu Thirumuruganatha Swamy Temple administration. 2014. Archived from the original on 4 ಮಾರ್ಚ್ 2016. Retrieved 30 ನವೆಂಬರ್ 2015.
- ↑ Sundarar. "Seventh Thirumurai". Thevaram.org. Retrieved 30 ನವೆಂಬರ್ 2015.
- ↑ R., Krishnamurthy (10 ಜನವರಿ 2013). "Muruga worshipped Siva here". The Hindu. Retrieved 30 ನವೆಂಬರ್ 2015.R., Krishnamurthy (10 January 2013). "Muruga worshipped Siva here". The Hindu. Retrieved 30 November 2015.
ಫೋಟೋಗ್ಯಾಲರಿ
ಬದಲಾಯಿಸಿ-
ದೇವಾಲಯದ ಸಂಪೂರ್ಣ ನೋಟ
-
ಪ್ರವೇಶ
-
ಮುಂಭಾಗ
-
ಮುಂಭಾಗದ ಮಂಟಪ
-
ಧ್ವಜಸ್ತಂಭ
-
ಪ್ರಧಾನ ದೇವತೆಯ ವಿಮಾನ
-
ದೇವಿಯ ವಿಮಾನ