ಸಂಸ್ಕೃತ ಶಬ್ದವಾದ ಗಣದ ಅರ್ಥ "ಸಮೂಹ, ಪಡೆ, ಜನಸ್ತೋಮ, ಸಂಖ್ಯೆ, ಗುಂಪು, ಸರಣಿ ಅಥವಾ ವರ್ಗ". ಇದನ್ನು "ಸೇವಕರ ಸಮೂಹ"ವನ್ನು ಸೂಚಿಸಲು ಕೂಡ ಬಳಸಬಹುದು ಮತ್ತು ಸಮಾನ ಗುರಿಗಳ ಸಾಧನೆಗಾಗಿ ರಚನೆಯಾದ ವ್ಯಕ್ತಿಗಳ ಗುಂಪು, ಯಾವುದೇ ಕೂಟ ಅಥವಾ ಸಂಘವನ್ನು ಸೂಚಿಸಬಹುದು. "ಗಣ" ಶಬ್ದವು ಧರ್ಮದ ವಿಷಯಗಳು ಅಥವಾ ಇತರ ವಿಷಯಗಳನ್ನು ಚರ್ಚಿಸಲು ಕರೆಯಲಾದ ಪರಿಷತ್ತುಗಳು ಅಥವಾ ಸಭೆಗಳನ್ನು ಕೂಡ ಸೂಚಿಸಬಹುದು.

ಗಣಪತಿ, ಅವನ ಸುತ್ತ ಅವನ ಗಣ

ಹಿಂದೂ ಧರ್ಮದಲ್ಲಿ, ಗಣಗಳು ಎಂದರೆ ಶಿವನ ಸೇವಕರು ಮತ್ತು ಕೈಲಾಸಪರ್ವತದ ಮೇಲೆ ಇರುತ್ತಾರೆ. ಶಿವನು ಗಣೇಶನನ್ನು ಅವರ ನಾಯಕನನ್ನಾಗಿ ಆಯ್ಕೆಮಾಡಿದನು, ಹಾಗಾಗಿ ಗಣೇಶನಿಗೆ ಗಣೇಶ ಅಥವಾ ಗಣಪತಿ, "ಗಣಗಳ ನಾಯಕ ಅಥವಾ ಒಡೆಯ" ಎಂಬ ಉಪಾಧಿ ಬಂದಿದೆ.[೧] ಇವರು ಸಮಾಧಿ ಭೂಮಿಗಳು ಹಾಗೂ ಸ್ಮಶಾನಗಳಂತಹ ಪಾತಾಳ ಹಾಗೂ ಪ್ರವೇಶದ್ವಾರದ ಸ್ಥಳಗಳಲ್ಲಿ ವಾಸಿಸುತ್ತಾರೆ. ಶಿವನ ಕುರುಳಿನಿಂದ ವೀರಭದ್ರನ ಸೃಷ್ಟಿಯ ಕಥೆ ಮತ್ತು ವೀರಭದ್ರ ಹಾಗೂ ಅವನ ಗಣಗಳಿಂದ ದಕ್ಷನ ನಾಶ ಪುರಾಣಗಳ ಜನಪ್ರಿಯ ಕಥೆಗಳಾಗಿವೆ.

ಉಲ್ಲೇಖಗಳುಸಂಪಾದಿಸಿ

  1. Dictionary of Hindu Lore and Legend (ISBN 0-500-51088-1) by Anna L. Dallapiccola
"https://kn.wikipedia.org/w/index.php?title=ಗಣ&oldid=893781" ಇಂದ ಪಡೆಯಲ್ಪಟ್ಟಿದೆ