ತಾರೆ ಜ಼ಮೀನ್ ಪರ್ (ಚಲನಚಿತ್ರ)
ತಾರೆ ಜ಼ಮೀನ್ ಪರ್ ೨೦೦೭ರ ಒಂದು ಹಿಂದಿ ನಾಟಕೀಯ ಚಲನಚಿತ್ರ. ಇದನ್ನು ಆಮಿರ್ ಖಾನ್ ನಿರ್ಮಿಸಿ ನಿರ್ದೇಶಿಸಿದರು. ಚಲನಚಿತ್ರವು ಡಿಸ್ಲೆಕ್ಸಿಯಾ ಇರುವ ೮ ವರ್ಷ ವಯಸ್ಸಿನ ಮಗು ಇಶಾನ್‍ನ ಜೀವನ ಮತ್ತು ಕಲ್ಪನೆಯನ್ನು ಅನ್ವೇಷಿಸುತ್ತದೆ. ಅವನು ಕಲೆಯಲ್ಲಿ ಮುಂದೆ ಇದ್ದರೂ, ಅವನ ಕಳಪೆ ಶೈಕ್ಷಣಿಕ ಸಾಧನೆಯ ಕಾರಣ ಅವನ ತಂದೆತಾಯಿ ಅವನನ್ನು ವಸತಿಶಾಲೆಗೆ ಕಳಿಸುತ್ತಾರೆ. ಅವನಿಗೆ ಡಿಸ್ಲೆಕ್ಸಿಯಾ ಇದೆ ಎಂದು ಇಶಾನ್‍ನ ಹೊಸ ಕಲಾ ಶಿಕ್ಷಕನು ಶಂಕಿಸಿ ಅವನಿಗೆ ಅವನ ಅಸಮರ್ಥತೆಯನ್ನು ಜಯಿಸಲು ನೆರವಾಗುತ್ತಾನೆ. ದರ್ಶೀಲ್ ಸಫ಼ಾರಿ ೮ ವರ್ಷದ ಇಶಾನ್ ಆಗಿ ನಟಿಸಿದ್ದರೆ, ಖಾನ್ ಅವನ ಕಲಾ ಶಿಕ್ಷಕನ ಪಾತ್ರವಹಿಸಿದ್ದಾರೆ.
ತಾರೆ ಜ಼ಮೀನ್ ಪರ್ | |
---|---|
ನಿರ್ದೇಶನ | ಆಮಿರ್ ಖಾನ್ |
ನಿರ್ಮಾಪಕ | ಆಮಿರ್ ಖಾನ್ |
ಲೇಖಕ | ಅಮೋಲ್ ಗುಪ್ತೆ |
ಪಾತ್ರವರ್ಗ | ದರ್ಶೀಲ್ ಸಫ಼ಾರಿ ಆಮಿರ್ ಖಾನ್ ಟಿಸ್ಕಾ ಚೋಪ್ರಾ ವಿಪಿನ್ ಶರ್ಮಾ ಸಾಚೇತ್ ಇಂಜಿನಿಯರ್ ತನಯ್ ಛೇಡಾ |
ಸಂಗೀತ | ಶಂಕರ್-ಎಹಸಾನ್-ಲಾಯ್ |
ಛಾಯಾಗ್ರಹಣ | ಸೇತು (ಸತ್ಯಜೀತ್ ಪಾಂಡೆ) |
ಸಂಕಲನ | ದೀಪಾ ಭಾಟಿಯಾ |
ವಿತರಕರು | ಆಮಿರ್ ಖಾನ್ ಪ್ರೊಡಕ್ಷನ್ಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | 164 ನಿಮಿಷಗಳು[೧] |
ದೇಶ | ಭಾರತ |
ಭಾಷೆ | ಹಿಂದಿ |
ಬಂಡವಾಳ | ರೂ.120 ಮಿಲಿಯನ್[೨] |
ಬಾಕ್ಸ್ ಆಫೀಸ್ | ಅಂದಾಜು ರೂ. 889 ಮಿಲಿಯನ್[೩] |
ಸೃಜನಾತ್ಮಕ ನಿರ್ದೇಶಕ ಮತ್ತು ಬರಹಗಾರ ಅಮೋಲ್ ಗುಪ್ತೆ ಆರಂಭದಲ್ಲಿ ಚಿತ್ರದ ಸಂಕಲನಗಾರ್ತಿಯಾಗಿ ಕಾರ್ಯನಿರ್ವಹಿಸಿದ ತಮ್ಮ ಹೆಂಡತಿ ದೀಪಾ ಭಾಟಿಯಾರೊಂದಿಗೆ ಕಲ್ಪನೆಯನ್ನು ಅಭಿವೃದ್ಧಿಪಡಿಸಿದರು. ಶಂಕರ್-ಎಹಸಾನ್-ಲಾಯ್ ಚಲನಚಿತ್ರದ ಸಂಗೀತವನ್ನು ಸಂಯೋಜಿಸಿದರು ಮತ್ತು ಅನೇಕ ಗೀತೆಗಳಿಗೆ ಪ್ರಸೂನ್ ಜೋಶಿ ಸಾಹಿತ್ಯವನ್ನು ಬರೆದರು. ಪ್ರಧಾನ ಛಾಯಾಗ್ರಹಣವು ಮುಂಬೈ ಮತ್ತು ಪಂಚ್ ಗಣಿಯ ನ್ಯೂ ಈರಾ ಹೈ ಸ್ಕೂಲ್‍ನಲ್ಲಿ ನಡೆಯಿತು, ಮತ್ತು ಆ ಶಾಲೆಯ ಕೆಲವು ವಿದ್ಯಾರ್ಥಿಗಳು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
ಚಲನಚಿತ್ರವು ಭಾರತದಲ್ಲಿ ೧೪ ಡಿಸೆಂಬರ್ ೨೦೦೭ರಲ್ಲಿ ಬಿಡುಗಡೆಗೊಂಡಿತು, ಮತ್ತು ಚಿತ್ರದ ಡಿವಿಡಿಯನ್ನು ೨೦೦೮ರಲ್ಲಿ ಬಿಡುಗಡೆ ಮಾಡಲಾಯಿತು. ಡಿಸ್ನಿ ನಂತರ ಅಂತರರಾಷ್ಟ್ರೀಯ ಆವೃತ್ತಿಯ ಡಿವಿಡಿಯನ್ನು ಬಿಡುಗಡೆ ಮಾಡಿತು. ಇದು ಒಂದು ಭಾರತೀಯ ಚಿತ್ರದ ವಿತರಣಾ ಹಕ್ಕುಗಳನ್ನು ಜಾಗತಿಕ ಕಂಪನಿಯೊಂದು ಖರೀದಿಸಿದ ಮೊದಲ ಸಲವಾಗಿತ್ತು.
೨೦೦೮ರ ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮತ್ತು ೨೦೦೮ರ ಕುಟುಂಬ ಕಲ್ಯಾಣದ ಮೇಲಿನ ಅತ್ಯುತ್ತಮ ಚಲನಚಿತ್ರ ರಾಷ್ಟ್ರಪ್ರಶಸ್ತಿ ಸೇರಿದಂತೆ ತಾರೆ ಜ಼ಮೀನ್ ಪರ್ ಅಸಂಖ್ಯಾತ ಪ್ರಶಸ್ತಿಗಳನ್ನು ಪಡೆದಿದೆ. ೨೦೦೯ರ ಅಕ್ಯಾಡೆಮಿ ಅತ್ಯುತ್ತಮ ವಿದೇಶಿ ಚಲನಚಿತ್ರ ಪ್ರಶಸ್ತಿಗಾಗಿ ಇದು ಭಾರತದ ಅಧಿಕೃತ ಪ್ರವೇಶವಾಗಿತ್ತು, ಆದರೆ ಅಲ್ಪಪಟ್ಟಿಗೆ ಮುಂದುವರಿಯಲಿಲ್ಲ.
ಕಥಾವಸ್ತು
ಬದಲಾಯಿಸಿಇಶಾನ್ ಅವಸ್ಥಿ ಶಾಲೆಯನ್ನು ಇಷ್ಟಪಡದ ೮ ವರ್ಷದ ಹುಡುಗನಾಗಿರುತ್ತಾನೆ, ಏಕೆಂದರೆ ಅವನಿಗೆ ಎಲ್ಲ ವಿಷಯಗಳು ಕಷ್ಟವಾಗಿ ಕಂಡುಬರುತ್ತವೆ ಮತ್ತು ಅವನ ಶಿಕ್ಷಕರು ಹಾಗೂ ಸಹಪಾಠಿಗಳು ಇಬ್ಬರೂ ಅವನ ಬಗ್ಗೆ ಆಗಾಗ್ಗೆ ಕೀಳಾಡುತ್ತಿರುತ್ತಾರೆ ಹಾಗೂ ಅವನನ್ನು ಬಯ್ಯುತಿರುತ್ತಾರೆ. ಹಲವುವೇಳೆ, ಅವನ ಕಲ್ಪನಾಶಕ್ತಿ, ಸೃಜನಾತ್ಮಕತೆ ಮತ್ತು ಕಲಾ ಪ್ರತಿಭೆಯನ್ನು ನಿರ್ಲಕ್ಷಿಸಲಾಗುತ್ತದೆ ಅಥವಾ ಗಮನಿಸಲಾಗುವುದಿಲ್ಲ. ಅವನ ತಂದೆ ನಂದ್‍ಕಿಶೋರ್ ಅವಸ್ಥಿ ತನ್ನ ಮಕ್ಕಳು ಗೆಲ್ಲಬೇಕು ಎಂದು ಅಪೇಕ್ಷಿಸುವ ಒಬ್ಬ ಯಶಸ್ವಿ ಹಿರಿಯ ಅಧಿಕಾರಿಯಾಗಿರುತ್ತಾನೆ, ಮತ್ತು ಅವನ ತಾಯಿ ಮಾಯಾ ಅವಸ್ಥಿ ಇಶಾನ್‍ಗೆ ಶಿಕ್ಷಣ ನೀಡುವ ತನ್ನ ಅಸಾಮರ್ಥ್ಯದಿಂದ ನಿರಾಶೆಗೊಂಡ ಗೃಹಿಣಿಯಾಗಿರುತ್ತಾಳೆ. ಇಶಾನ್‍ನ ಅಣ್ಣ ಯೋಹಾನ್ ಅವಸ್ಥಿ ಆದರ್ಶಪ್ರಾಯ ವಿದ್ಯಾರ್ಥಿ ಮತ್ತು ಕ್ರೀಡಾಪಟುವಾಗಿದ್ದು ಹಲವುವೇಳೆ ಅವನ ಗುಣಗಳನ್ನು ಇಶಾನ್‍ಗೆ ನೆನಪಿಸಲಾಗುತ್ತದೆ.
ವಿಶೇಷವಾಗಿ ಕಳಪೆ ಶೈಕ್ಷಣಿಕ ವರದಿಯನ್ನು ಪಡೆದ ನಂತರ, ಇಶಾನ್‍ನ ತಂದೆ ಅವನನ್ನು ವಸತಿಶಾಲೆಗೆ ಕಳಿಸುತ್ತಾನೆ. ಅಲ್ಲಿ ಅವನು ಭಯ, ಏಕಾಂಗಿತನ ಹಾಗೂ ಖಿನ್ನತೆಯ ಸ್ಥಿತಿಗೆ ಕುಸಿಯುತ್ತಾನೆ, ತರಗತಿಯಲ್ಲಿ ಅಗ್ರ ವಿದ್ಯಾರ್ಥಿಗಳಲ್ಲಿ ಒಬ್ಬನಾದ, ದೈಹಿಕವಾಗಿ ಅಂಗವಿಕಲ ಹುಡುಗ ರಾಜನ್ ದಾಮೋದರನ್, ಅವನ ಸ್ನೇಹಿತನಾದ ಹೊರತಾಗಿಯೂ. ಅವನು ಒಂದು ಚಾವಣಿಯಲ್ಲಿನ ಗೋಡೆಯನ್ನು ಹತ್ತಿ ಆತ್ಮಹತ್ಯೆಯನ್ನೂ ಪರಿಗಣಿಸುತ್ತಾನೆ, ಆದರೆ ರಾಜನ್ ಅವನನ್ನು ರಕ್ಷಿಸುತ್ತಾನೆ.
ಬೆಳವಣಿಗೆಯ ಅಸಾಮರ್ಥ್ಯಗಳಿರುವ ಚಿಕ್ಕ ಮಕ್ಕಳ ಟ್ಯೂಲಿಪ್ಸ್ ಶಾಲೆಯಲ್ಲಿ ಕಲಿಸುವ ನಗುಮೊಗದ ಆಶಾವಾದಿಯಾದ ಒಬ್ಬ ಹೊಸ ಕಲಾ ಶಿಕ್ಷಕ ರಾಮ್ ಶಂಕರ್ ನಿಕುಂಭ್ ಶಾಲೆಗೆ ಸೇರಿದಾಗ, ಇಶಾನ್‍ನ ಸ್ಥಿತಿ ಬದಲಾಗುತ್ತದೆ. ನಿಕುಂಭ್‍ನ ಬೋಧನಾ ಶೈಲಿಯು ಅವನ ನಿಷ್ಠುರ ಪೂರ್ವಾಧಿಕಾರಿಗಿಂತ ಗಮನಾರ್ಹವಾಗಿ ಭಿನ್ನವಾಗಿರುತ್ತದೆ, ಮತ್ತು ಅವನು ತರಗತಿಯ ಚಟುವಟಿಗೆಳಲ್ಲಿ ಇಶಾನ್‍ನ ಅಸಂತೋಷ ಮತ್ತು ಭಾವಶೂನ್ಯ ಭಾಗವಹಿಕೆಯನ್ನು ಬೇಗನೇ ಗಮನಿಸುತ್ತಾನೆ. ಅವನು ಇಶಾನ್‍ನ ಕಾರ್ಯವನ್ನು ಪರಿಶೀಲಿಸಿ ಅವನ ಶೈಕ್ಷಣಿಕ ನ್ಯೂನತೆಗಳು ಅವನ ಕಲಾತ್ಮಕ ಸಾಮರ್ಥ್ಯಗಳನ್ನು ಹತ್ತಿಕ್ಕುತ್ತಿರುವ ಸ್ಥಿತಿಯಾದ ಡಿಸ್ಲೆಕ್ಸಿಯಾದ ಸೂಚಕವಾಗಿವೆ ಎಂದು ತೀರ್ಮಾನಿಸುತ್ತಾನೆ. ಒಂದು ದಿನ ಅವನು ಇಶಾನ್‍ನ ತಂದೆತಾಯಿಗಳನ್ನು ಭೇಟಿಯಾಗಲು ಮುಂಬಯಿಗೆ ಹೋಗುತ್ತಾನೆ. ಅಲ್ಲಿ ಅವನು ಇಶಾನ್‍ನ ಕೆಲವು ರೇಖಾಚಿತ್ರಗಳನ್ನು ಪತ್ತೆಹಚ್ಚಿದ ನಂತರ ಕಲೆಯಲ್ಲಿ ಇಶಾನ್‍ನ ಗುಪ್ತ ಆಸಕ್ತಿಯನ್ನು ಕಂಡು ಆಶ್ಚರ್ಯಗೊಳ್ಳುತ್ತಾನೆ. ಅಸಮಾಧಾನಗೊಂಡು, ಮೊದಲನೆಯದಾಗಿ ಮಗುವನ್ನು ವಸತಿಶಾಲೆಗೆ ಏಕೆ ಕಳಿಸಿದರಿ ಎಂದು ಅವಸ್ಥಿಯನ್ನು ಕೇಳಿ ಶ್ರೀಮತಿ ಅವಸ್ಥಿಗೆ ಅವರ ಮಗನ ಟಿಪ್ಪಣಿ ಪುಸ್ತಕಗಳನ್ನು ತೋರಿಸಿ ಅವನ ಹೋರಾಟಗಳ ವಿಶ್ಲೇಷಣೆಯನ್ನು ನೀಡುತ್ತಾನೆ. ಡಿಸ್ಲೆಕ್ಸಿಯಾದ ಕಾರಣ ಅಕ್ಷರಗಳು ಮತ್ತು ಶಬ್ದಗಳನ್ನು ಅರ್ಥಮಾಡಿಕೊಳ್ಳಲು ಇಶಾನ್‍ಗೆ ತೀವ್ರ ತೊಂದರೆಯಿದೆ ಎಂದು ಅವನು ವಿವರಿಸುತ್ತಾನೆ. ಆದರೆ ಅವಸ್ಥಿ ಅದಕ್ಕೆ ಮಂದಬುದ್ಧಿ ಎಂಬ ಪಟ್ಟಿ ಕಟ್ಟಿ, ಅದನ್ನು ಸೋಮಾರಿತನಕ್ಕೆ ಬರಿಯ ನೆಪವೆಂದು ತಳ್ಳಿಹಾಕುತ್ತಾನೆ. ಇಶಾನ್‍ನ ಸ್ಥಿತಿಯ ಬಗ್ಗೆ ಅವನ ಒರಟು ಮತ್ತು ಸರಿಯಲ್ಲದ ವಿವರಣೆಯಿಂದ ನಿರಾಶೆಗೊಂಡು, ನಿಕುಂಭ್ ಹೊರಡುತ್ತಾನೆ ಮತ್ತು ಇಶಾನ್‍ನ ಕಡೆಗೆ ತಾನು ತೋರಿಸಿದ ಕೀಳು ವರ್ತನೆಗೆ ಅವಸ್ಥಿಗೆ ತಪ್ಪಿತಸ್ಥ ಭಾವನೆ ಬರುತ್ತದೆ.
ನಿಕುಂಭ್ ಹಿಂದಿರುಗಿ ನಂತರ ತರಗತಿಯಲ್ಲಿ ಡಿಸ್ಲೆಕ್ಸಿಯಾ ಇದ್ದ ಪ್ರಸಿದ್ಧ ಜನರ ಪಟ್ಟಿಯನ್ನು ಪ್ರಸ್ತುತಪಡಿಸಿ ಡಿಸ್ಲೆಕ್ಸಿಯಾದ ವಿಷಯವನ್ನು ಎತ್ತುತ್ತಾನೆ. ಆಮೇಲೆ, ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿ ತಾನೂ ಸಹ ಮಗುವಾಗಿದ್ದಾಗ ಹೇಗೆ ಕಷ್ಟಪಟ್ಟಿದ್ದೆ ಎಂದು ಇಶಾನ್‍ಗೆ ಹೇಳಿ ಅವನನ್ನು ಸಂತೈಸುತ್ತಾನೆ. ನಂತರ ನಿಕುಂಭ್ ಶಾಲೆಯ ಪ್ರಾಂಶುಪಾಲನನ್ನು ಭೇಟಿಯಾಗಿ ಇಶಾನ್‍ನ ಶಿಕ್ಷಕನಾಗಲು ಅವನ ಅನುಮತಿಯನ್ನು ಪಡೆಯುತ್ತಾನೆ. ಕ್ರಮವಾದ ಆರೈಕೆಯಿಂದ, ಡಿಸ್ಲೆಕ್ಸಿಯಾ ತಜ್ಞರು ಅಭಿವೃದ್ಧಿಪಡಿಸಿದ ಪರಿಹಾರ ತಂತ್ರಗಳನ್ನು ಬಳಸಿ ಇಶಾನ್‍ನ ಓದು ಮತ್ತು ಬರಹವನ್ನು ಸುಧಾರಿಸಲು ಪ್ರಯತ್ನಿಸುತ್ತಾನೆ. ಬೇಗನೇ ಇಶಾನ್ ತನ್ನ ಓದಿನಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾನೆ ಮತ್ತು ಅಂತಿಮವಾಗಿ ಅವನ ವರ್ಗಾಂಕಗಳು ಸುಧಾರಿಸುತ್ತವೆ.
ಶಾಲ ವರ್ಷದ ಕೊನೆಯ ಭಾಗದಲ್ಲಿ, ನಿಕುಂಭ್ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗಾಗಿ ಒಂದು ಕಲಾ ಜಾತ್ರೆಯನ್ನು ಸಂಘಟಿಸುತ್ತಾನೆ. ಕಲಾವಿದೆ ಲಲಿತಾ ಲಾಜ್ಮಿ ಸ್ಪರ್ಧೆಗೆ ತೀರ್ಪುಗಾರರಾಗಿರುತ್ತಾರೆ. ಅವನ ಗಮನಾರ್ಹವಾಗಿ ಸೃಜನಾತ್ಮಕ ಶೈಲಿಯ ಕಾರಣ ಇಶಾನ್‍ನನ್ನು ವಿಜೇತನೆಂದು ಘೋಷಿಸಲಾಗುತ್ತದೆ ಮತ್ತು ಇಶಾನ್‍ನ ಭಾವಚಿತ್ರವನ್ನು ಬಿಡಿಸಿದ ನಿಕುಂಭ್‍ನನ್ನು ದ್ವಿತೀಯ ವಿಜೇತನೆಂದು ಘೋಷಿಸಲಾಗುತ್ತದೆ. ನಿಕುಂಭ್‍ನನ್ನು ಶಾಲೆಯ ಶಾಶ್ವತ ಕಲಾ ಶಿಕ್ಷಕನಾಗಿ ನೇಮಿಸಲಾಗಿದೆಯೆಂದು ಪ್ರಾಂಶುಪಾಲನು ಘೋಷಿಸುತ್ತಾನೆ. ಶಾಲೆಯ ಕೊನೆಯ ದಿನದಂದು ಇಶಾನ್‍ನ ತಂದೆತಾಯಿಗಳು ಅವನ ಶಿಕ್ಷಕರನ್ನು ಭೇಟಿಯಾದಾಗ, ಅವನಲ್ಲಿ ನೋಡಿದ ಪರಿವರ್ತನೆಯಿಂದ ಮೂಕರಾಗಿಬಿಡುತ್ತಾರೆ. ಭಾವನೆಗಳಿಗೆ ಒಳಗಾಗಿ, ಅವಸ್ಥಿ ನಿಕುಂಭ್‍ಗೆ ಧನ್ಯವಾದ ಹೇಳುತ್ತಾನೆ. ಬೇಸಿಗೆ ರಜೆಗಾಗಿ ತನ್ನ ತಂದೆತಾಯಿಗಳ ಜೊತೆಗೆ ಹೊರಡಲು ಇಶಾನ್ ಕಾರಿನೊಳಗೆ ಹೋಗುತ್ತಿದ್ದಂತೆ, ಅವನು ಹಿಂದೆ ತಿರುಗಿ ನಿಕುಂಭ್‍ನೆಡೆಗೆ ಓಡುತ್ತಾನೆ. ಅವನು ಇಶಾನ್‍ನನ್ನು ಆಲಿಂಗಿಸಿ ಮುಂದಿನ ವರ್ಷ ಮರಳುವಂತೆ ಹೇಳುತ್ತಾನೆ.
ಪಾತ್ರವರ್ಗ
ಬದಲಾಯಿಸಿ- ಇಶಾನ್ ನಂದ್‍ಕಿಶೋರ್ ಅವಸ್ಥಿ ಆಗಿ ದರ್ಶೀಲ್ ಸಫ಼ಾರಿ[೪]
- ರಾಮ್ ಶಂಕರ್ ನಿಕುಂಭ್ ಆಗಿ ಆಮಿರ್ ಖಾನ್[೫]
- ರಾಜನ್ ದಾಮೋದರನ್ ಆಗಿ ತನಯ್ ಛೇಡಾ
- ಯೊಹಾನ್ ನಂದ್‍ಕಿಶೋರ್ ಅವಸ್ಥಿ ("ದಾದಾ") ಆಗಿ ಸಾಚೇತ್ ಇಂಜಿನಿಯರ್
- ಮಾಯಾ ಅವಸ್ಥಿ ಆಗಿ ಟಿಸ್ಕಾ ಚೋಪ್ರಾ
- ನಂದ್‍ಕಿಶೋರ್ ಅವಸ್ಥಿ ಆಗಿ ವಿಪಿನ್ ಶರ್ಮಾ
- ಜಬೀನ್ ಆಗಿ ಗಿರಿಜಾ ಓಕ್
- ಸೇನ್ ಸರ್ ಮತ್ತು ತಿವಾರಿ ಸರ್ ಆಗಿ ಬಗ್ಸ್ ಭಾರ್ಗವ ಮತ್ತು ಶಂಕರ್ ಸಚ್‍ದೇವ್
- ನ್ಯೂ ಈರಾ ಹೈ ಸ್ಕೂಲ್‍ನ ಪ್ರಾಂಶುಪಾಲನಾಗಿ ಎಂ. ಕೆ. ರಾಯ್ನಾ
- ಸ್ವಂತ ಪಾತ್ರದಲ್ಲಿ ಲಲಿತಾ ಲಾಜ್ಮಿ
ತಯಾರಿಕೆ
ಬದಲಾಯಿಸಿಬೆಳವಣಿಗೆ
ಬದಲಾಯಿಸಿಅಮೋಲ್ ಗುಪ್ತೆ ಮತ್ತು ದೀಪಾ ಭಾಟಿಯಾ ಗಂಡ-ಹೆಂಡತಿ ಜೋಡಿಯು ಅಂತಿಮವಾಗಿ ತಾರೆ ಜ಼ಮೀನ್ ಪರ್ ಆದ ಕಥೆಯನ್ನು ಕೆಲವು ಮಕ್ಕಳು ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯನ್ನು ಏಕೆ ಅನುಸರಿಸಲಾರರು ಎಂಬುದನ್ನು ಅರ್ಥಮಾಡಿಕೊಳ್ಳುವ ರೀತಿಯಾಗಿ ಅಭಿವೃದ್ಧಿಪಡಿಸಿದರು. ಅವರ ಆರಂಭಿಕ ಕೆಲಸವು ಸಣ್ಣಕತೆಯಾಗಿ ಆರಂಭವಾಗಿ ಏಳು ವರ್ಷಗಳಲ್ಲಿ ಚಿತ್ರಕಥೆಯಾಗಿ ವಿಕಸನವಾಯಿತು. ಜಪಾನ್‍ನ ಚಿತ್ರತಯಾರಕ ಅಕಿರಾ ಕುರೋಸಾವಾರ ಬಾಲ್ಯವು ಭಾಟಿಯಾರಿಗೆ ಮೂಲ ಸ್ಫೂರ್ತಿಯಾಗಿತ್ತು. ಶಾಲಾ ವಾಹಿನಿಯಲ್ಲಿ ಹೊಂದಿಕೊಳ್ಳದ ಒಂದು ಮಗುವಿನ ಕಥೆಯನ್ನು ಅನ್ವೇಷಿಸುವುದು ಅವರ ಗುರಿಯಾಗಿತ್ತು.
ಕುರೊಸಾವಾರ ಮೇಲೆ ಆಧಾರಿತವಾದ ಹುಡುಗನ ಪಾತ್ರವನ್ನು ಅಭಿವೃದ್ಧಿಪಡಿಸುವಲ್ಲಿ, ಭಾಟಿಯಾ ಮತ್ತು ಗುಪ್ತೆ ಅವರು ಶಾಲೆಯಲ್ಲಿ ಯಾಕೆ ವಿಫಲರಾದರು ಎಂಬುದಕ್ಕೆ ಕೆಲವು ಸಂಭಾವ್ಯ ಕಾರಣಗಳನ್ನು ಅನ್ವೇಷಿಸಿದರು. ಅವರ ಸಂಶೋಧನೆಯು ಅವರನ್ನು ಮಹಾರಾಷ್ಟ್ರ ಡಿಸ್ಲೆಕ್ಸಿಯಾ ಸಂಘದಂತಹ ಗುಂಪುಗಳಿಗೆ ಕರೆದೊಯ್ಯಿತು. ಅಂತಿಮವಾಗಿ ಡಿಸ್ಲೆಕ್ಸಿಯಾ ಚಿತ್ರದ ಕೇಂದ್ರ ವಿಷಯವಾಯಿತು. ಚಿತ್ರಕಥೆಯನ್ನು ಸಂಶೋಧಿಸಿ ಅಭಿವೃದ್ಧಿಪಡಿಸಲು ಈ ಜೋಡಿಯು ಡಿಸ್ಲೆಕ್ಸಿಯಾ ಇರುವ ಮಕ್ಕಳೊಂದಿಗೆ ಕೆಲಸ ಮಾಡಿತು, ಮತ್ತು ಪಾತ್ರಗಳು ಹಾಗೂ ಸನ್ನಿವೇಶಗಳನ್ನು ತಮ್ಮ ವೀಕ್ಷಣೆಗಳ ಮೇಲೆ ಆಧರಿಸಿತು. ಚಿತ್ರಕಥೆಯ ಅಂತಿಮ ಆವೃತ್ತಿಯಲ್ಲಿ ಭಾಟಿಯಾ ಮತ್ತು ಗುಪ್ತೆ ಮಕ್ಕಳ ಗುರುತುಗಳನ್ನು ಎಚ್ಚರಿಕೆಯಿಂದ ಮುಚ್ಚಿಟ್ಟರು.[೪]
ಖಾನ್ ಮತ್ತು ಗುಪ್ತೆ ಮೊದಲು ಕಾಲೇಜಿನಲ್ಲಿ ಭೇಟಿಯಾದರು. ಚಿತ್ರದ ಬಿಡುಗಡೆಗೆ ಮೂರು ವರ್ಷ ಮುನ್ನ ಗುಪ್ತೆ ಖಾನ್‍ರನ್ನು ಯೋಜನೆಗೆ ನಿರ್ಮಾಪಕ ಹಾಗೂ ನಟನಾಗಿ ತಂದರು. ಗುಪ್ತೆ ತಾವೇ ನಿರ್ದೇಶಿಸುವುದರಲ್ಲಿದ್ದರು,[೬] ಆದರೆ ಮೊದಲ ವಾರದ ಮುದ್ರಿತ ತುಣುಕುಗಳು ಖಾನ್‍ರಿಗೆ ಬಹಳ ನಿರಾಶಾದಾಯಕವೆನಿಸಿ ಅಮೋಲ್ ಹಾಗೂ ಅವರ ಸಾಮರ್ಥ್ಯದಲ್ಲಿ ನಂಬಿಕೆ ಕಳೆದುಕೊಂಡರು.[೭] ಸೃಜನಾತ್ಮಕ ಮನಸ್ತಾಪಗಳ ಕಾರಣ ಖಾನ್ ಚಿತ್ರದಿಂದ ಹೊರಬರುವುದರಲ್ಲಿದ್ದರು, ಆದರೆ ನಿರ್ದೇಶಕರಾಗಿ ಗುಪ್ತೆ ಕೆಳಗಿಳಿದು ಖಾನ್‍ರನ್ನು ಚಿತ್ರದಲ್ಲಿ ಉಳಿಸಿಕೊಂಡರು. ಖಾನ್ ನಿರ್ದೇಶಕನ ಪಾತ್ರವನ್ನು ವಹಿಸಿಕೊಂಡರು. ಈ ಚಿತ್ರವು ನಟ ಹಾಗೂ ನಿರ್ದೇಶಕನ ದ್ವಿಪಾತ್ರದಲ್ಲಿ ಖಾನ್‍ರ ಮೊದಲ ಅನುಭವವಾಗಿತ್ತು.
ಶೀರ್ಷಿಕೆ ಮತ್ತು ಅನುವಾದ
ಬದಲಾಯಿಸಿಆರಂಭದಲ್ಲಿ, ಚಿತ್ರಕ್ಕೆ ಸಣ್ಣಕತೆಯ ಹೆಸರಾದ (ಜಿಮ್ ತರಗತಿಯಲ್ಲಿ ಹೈ ಜಂಪ್ ಮಾಡುವ ಇಶಾನ್‍ನ ಅಸಾಮರ್ಥ್ಯದ ಕಾರಣ) "ಹೈ ಜಂಪ್" ಎಂಬ ಹೆಸರನ್ನೇ ಇಡಬೇಕೆಂದಾಗಿತ್ತು.
ಅಂತಿಮವಾಗಿ, ಈ ಶೀರ್ಷಿಕೆಯು ಪ್ರಸ್ತುತವಾಗಿ ಉಳಿಯಲಿಲ್ಲ, ಮತ್ತು ಖಾನ್, ಗುಪ್ತೆ ಹಾಗೂ ಭಾಟಿಯಾ ಹಲವು ಪರ್ಯಾಯಗಳನ್ನು ಚರ್ಚಿಸಿ,[೮] ಅಂತಿಮವಾಗಿ ತಾರೆ ಜ಼ಮೀನ್ ಪರ್ ಇರಬೇಕೆಂದು ತೀರ್ಮಾನಿಸಿದರು.
ಚಿತ್ರೀಕರಣ
ಬದಲಾಯಿಸಿಚಿತ್ರದ ಪ್ರಧಾನ ಛಾಯಾಗ್ರಹಣವು ಭಾರತದಲ್ಲಿ ಐದು ತಿಂಗಳ ಅವಧಿಯಲ್ಲಿ ನಡೆಯಿತು. ಪ್ರೇಕ್ಷಕರಿಗೆ ಕ್ಯಾಮರಾದ ಅರಿವಿರಬಾರದು ಎಂದು ನಂಬಿ, ಖಾನ್ ಚಿತ್ರಕ್ಕಾಗಿ ತುಲನಾತ್ಮಕವಾಗಿ ಅತ್ಯಲ್ಪ ಕ್ಯಾಮರಾ ಚಲನೆಯನ್ನು ಒಳಗೊಂಡ ಸರಳ ಚಿತ್ರೀಕರಣ ಶೈಲಿಯನ್ನು ಆಯ್ದುಕೊಂಡರು.
ಎಲ್ಲ ಶಾಲಾ ಭಾಗಗಳನ್ನು ಸ್ಥಳದಲ್ಲಿ ಚಿತ್ರೀಕರಿಸಲಾಯಿತು. ಸೇಂಟ್ ಕ್ಸೇವಿಯರ್ಸ್ ಶಾಲೆಯು ಮುಖ್ಯರಸ್ತೆಯಲ್ಲಿ ಇದ್ದಿದ್ದರಿಂದ, ಹಿನ್ನೆಲೆ ಗದ್ದಲವನ್ನು ಕನಿಷ್ಠೀಕರಿಸಲು ಚಿತ್ರೀಕರಣವು ವಾರಾಂತ್ಯಗಳಲ್ಲಿ ನಡೆಯಿತು. ನ್ಯೂ ಈರಾ ಹೈ ಸ್ಕೂಲ್ ಇಶಾನ್‍ನ ವಸತಿಶಾಲೆಯಾಗಿ ಕಾರ್ಯನಿರ್ವಹಿಸಿತು.
ಮಕ್ಕಳು
ಬದಲಾಯಿಸಿಚಿತ್ರದ ಚಿತ್ರೀಕರಣದ ಉದ್ದಕ್ಕೂ ನಿಜವಾದ ಶಾಲಾಮಕ್ಕಳು ಭಾಗವಹಿಸಿದರು. ಖಾನ್ ಚಿತ್ರದ ಯಶಸ್ಸಿಗೆ ಅವರಿಗೆ ಗೌರವ ನೀಡಿದರು. ಇದಲ್ಲದೆ, ತಮ್ಮ ಬಾಲನಟರ ದೈನಂದಿನ ಅಗತ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದರು, ಮತ್ತು ಅವನ್ನು ಈಡೇರಿಸಲು ಬಹಳ ಪ್ರಯತ್ನ ಮಾಡಿದರು.[೮] ವಿದ್ಯಾರ್ಥಿಗಳು ಯಾವ ಕ್ಷಣದಲ್ಲೂ ಸೋಮಾರಿಯಾಗದಂತೆ ತಯಾರಿಕಾ ಸಿಬ್ಬಂದಿ ಖಾತರಿ ಮಾಡಿಕೊಂಡರು, ಮತ್ತು ಚಿತ್ರೀಕರಣದ ಹೊರಗೆ ಅವರನ್ನು ಯಾವಾಗಲೂ ಕ್ರಿಯಾಶೀಲರಾಗಿಸುತ್ತಿದ್ದರು. ಚಿತ್ರೀಕರಣವು ಚಳಿಗಾಲದ ರಜೆಗಳಲ್ಲಿ ನಡೆದಿದ್ದರಿಂದ, ಇಶಾನ್‍ನ ಸಹಪಾಠಿಗಳಾಗಿ ನಟಿಸಿದವರು ಭಾಗವಹಿಸಲು ತಮ್ಮ ರಜೆಗಳನ್ನು ಬಿಟ್ಟುಕೊಟ್ಟರು.
ಪ್ರೇಕ್ಷಕರು ಚಿತ್ರವನ್ನು ನಿಜವಾದ ಮಕ್ಕಳೊಂದಿಗೆ ಸಂಬಂಧಿಸಬೇಕು ಎಂದು ಖಾನ್‍ರಿಗೆ ಅನಿಸಿತು, ಹಾಗಾಗಿ ಎಲ್ಲ ಸಾಮಾಜಿಕ ವರ್ಗಗಳ ಮಕ್ಕಳ ಸಾಕ್ಷ್ಯಚಿತ್ರ ಶೈಲಿಯ ತುಣುಕನ್ನು ಭಾರತದಾದ್ಯಂತ ಪ್ರಯಾಣಿಸಿ ಚಿತ್ರೀಕರಿಸಲಾಯಿತು. ಆ ದೃಶ್ಯಗಳನ್ನುಅಂತ್ಯಭಾಗದಲ್ಲಿ ಸೇರಿಸಲಾಯಿತು.
ಕಲೆ ಮತ್ತು ಆ್ಯನಿಮೇಶನ್
ಬದಲಾಯಿಸಿಶೀರ್ಷಿಕೆ ದೃಶ್ಯಾವಳಿಯ ಭಾಗವಾಗಿ (ಇಶಾನ್‍ನ ಕಲ್ಪನೆಯ ಚಿತ್ರಣ) ಕ್ಲೇಮೇಶನ್ನನ್ನು ಒಂದು ಬಾಲಿವುಡ್ ಚಿತ್ರದಲ್ಲಿ ಬಳಸಲಾದ ಮೊದಲ ನಿದರ್ಶನವಾಗಿತ್ತು.[೯]
ಕಲಾವಿದ ಸಮೀರ್ ಮೊಂಡಲ್ ಇಶಾನ್ ಮತ್ತು ನಿಕುಂಭ್‍ನ ಕಲಾಜಾತ್ರೆಯ ಜಲವರ್ಣ ಚಿತ್ರಗಳನ್ನು ಬಿಡಿಸಿದರು.
"ಬಮ್ ಬಮ್ ಬೋಲೆ" ಹಾಡಿನ ನೃತ್ಯವನ್ನು ಶ್ಯಾಮಕ್ ದಾವರ್ ಸಂಯೋಜಿಸಿದರು.
ಬಿಡುಗಡೆ
ಬದಲಾಯಿಸಿಬಾಕ್ಸ್ ಆಫ಼ಿಸ್
ಬದಲಾಯಿಸಿತಾರೆ ಜ಼ಮೀನ್ ಪರ್ ವಿಶ್ವಾದ್ಯಂತ ೧೪ ಡಿಸೆಂಬರ್ ೨೦೦೭ರಂದು ಬಿಡುಗಡೆಗೊಂಡಿತು. ಹೆಚ್ಚು ಪ್ರೇಕ್ಷಕರನ್ನು ತಲುಪಲು, ನಂತರ ಚಲನಚಿತ್ರವನ್ನು ಪ್ರಾದೇಶಿಕ ಭಾಷೆಗಳಾದ ತೆಲುಗು ಮತ್ತು ತಮಿಳಿನಲ್ಲಿ ಡಬ್ ಮಾಡಲಾಯಿತು. ಚಿತ್ರದ ವಿಶ್ವಾದ್ಯಂತ ಹಣಗಳಿಕೆಗೆ ಸಂಬಂಧಿಸಿದಂತೆ ವರದಿಗಳು ವಿರುದ್ಧವಾಗಿವೆ, ಮತ್ತು ಮೂಲಗಳು ₹889.7 ಮಿಲಿಯನ್, ₹1.07 ಬಿಲಿಯನ್,[೧೦] ₹1.31 ಬಿಲಿಯನ್,[೨] ಹಾಗೂ ₹1.35 ಬಿಲಿಯನ್ ಎಂದು ಉಲ್ಲೀಖಿಸಿವೆ.[೧೧]
ಗುಜರಾತ್‍ನಲ್ಲಿ ಪ್ರತಿಭಟನೆಗಳು
ಬದಲಾಯಿಸಿನರ್ಮದಾ ಬಚಾವೊ ಚಳುವಳಿಗಾಗಿ ಖಾನ್‍ರ ಬೆಂಬಲ ಮತ್ತು ಮುಖ್ಯಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಅವರ ಟೀಕೆಗೆ ಪ್ರತಿಕ್ರಿಯೆಯಾಗಿ,[೧೨] ಸರ್ದಾರ ಪಟೇಲ್ ಗುಂಪಿನ ಸರಿಸುಮಾರು ೫೦ ಕಾರ್ಯಕರ್ತರು ಚಿತ್ರಮಂದಿರಗಳ ಹೊರಗೆ ಪ್ರತಿಭಟನೆಗಳನ್ನು ಮಾಡಿದರು. ಈ ಗುಂಪು ಗುಜರಾತ್‍ನ ಎಲ್ಲ ಮಲ್ಟಿಪ್ಲೆಕ್ಸ್‌ಗಳಿಗೆ ತಮ್ಮ ಹೇಳಿಕೆಗಳಿಗಾಗಿ ಕ್ಷಮೆ ಯಾಚಿಸುವವರೆಗೆ ಚಿತ್ರವನ್ನು ಪ್ರದರ್ಶಿಸಬಾರದು ಎಂದು ಸೂಚಿಸುವ ಹೇಳಿಕೆಗಳನ್ನು ನೀಡಿತು.[೧೩][೧೪]
ಅಂತರರಾಷ್ಟ್ರೀಯ ಡಿಸ್ಲೆಕ್ಸಿಯಾ ಸಂಘ
ಬದಲಾಯಿಸಿಅಂತರರಾಷ್ಟ್ರೀಯ ಡಿಸ್ಲೆಕ್ಸಿಯಾ ಸಂಘವು ತಾರೆ ಜ಼ಮೀನ್ ಪರ್ ಚಿತ್ರವನ್ನು ೨೯ ಅಕ್ಟೋಬರ್ ೨೦೦೯ರಂದು ಸಿಯಾಟಲ್, ವಾಷಿಂಗ್ಟನ್‍ನಲ್ಲಿ ಪ್ರದರ್ಶಿಸಿತು. ಪ್ರದರ್ಶನ ಮುಗಿದ ಮೇಲೆ ಪ್ರೇಕ್ಷಕರು ನಿಂತುಕೊಂಡು ಜಯಘೋಷ ಮಾಡಿದರು ಮತ್ತು ಪ್ರೇಕ್ಷಕರು ಕೆನ್ನೆಗಳ ಮೇಲೆ ಕಣ್ಣೀರುಗಳಿದ್ದವು.
ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ
ಬದಲಾಯಿಸಿಸಾರ್ವಜನಿಕ ಪ್ರತಿಕ್ರಿಯೆ
ಬದಲಾಯಿಸಿಚಲನಚಿತ್ರವು ಡಿಸ್ಲೆಕ್ಸಿಯಾ ಸಮಸ್ಯೆಯ ಬಗ್ಗೆ ಅರಿವನ್ನು ಹೆಚ್ಚಿಸಿತು, ಮತ್ತು ತಂದೆತಾಯಿಗಳು, ಶಾಲೆಗಳು, ಕಾರ್ಯಕರ್ತರು ಹಾಗೂ ನೀತಿ ರಚನೆಕಾರರ ನಡುವೆ ಹೆಚ್ಚು ಮುಕ್ತ ಚರ್ಚೆಗಳನ್ನು ಪ್ರಚೋದಿಸಿತು.
ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಗಳು ಕಾರ್ಯನೀತಿಗಳಲ್ಲಿ ಬದಲಾವಣೆಯನ್ನೂ ತಂದವು. ಚಿತ್ರ ಬಿಡುಗಡೆಯಾದ ಹತ್ತು ದಿನಗಳಲ್ಲೇ ದೃಷ್ಟಿಹೀನರು, ವಿಕಲಚೇತನ ಹಾಗೂ ಡಿಸ್ಲೆಕ್ಸಿಯಾ ಇರುವ ಮಕ್ಕಳು ಸೇರಿದಂತೆ ವಿಶೇಷ ಮಕ್ಕಳಿಗೆ ಪರೀಕ್ಷೆಗಳಲ್ಲಿ ಹೆಚ್ಚುವರಿ ಸಮಯವನ್ನು ಒದಗಿಸುವಂತೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ ಮೇಲೆ ಪ್ರಭಾವ ಬೀರಿತು. ೨೦೦೮ರಲ್ಲಿ, ಮುಂಬಯಿಯ ಪೌರಸಂಸ್ಥೆಯು ಸ್ವಲೀನತೆಯಿರುವ ಮಕ್ಕಳಿಗಾಗಿ ೧೨ ತರಗತಿಗಳನ್ನು ಕೂಡ ತೆರೆಯಿತು. ಚಂಡೀಗಡದಲ್ಲಿ, ಶಿಕ್ಷಣ ಆಡಳಿತವು ಶಿಕ್ಷಕರಿಗೆ ಕಲಿಕಾ ಅಸಾಮರ್ಥ್ಯಗಳಿರುವ ಮಕ್ಕಳನ್ನು ಹೇಗೆ ನಿಭಾಯಿಸಬೇಕೆಂಬ ಬಗ್ಗೆ ತರಬೇತಿ ನೀಡಲು ಒಂದು ಪಾಠಸರಣಿಯನ್ನು ಶುರುಮಾಡಿತು.[೧೫]
ಚಲನಚಿತ್ರಕ್ಕೆ ಗ್ರೇಟರ್ ಚೈನಾದಲ್ಲಿ ಇದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಇಲ್ಲಿ ಚಿತ್ರಕ್ಕೆ ಭಾರಿ ಆನ್‍ಲೈನ್ ಅಭಿಮಾನಿಗಳ ಗುಂಪಿದೆ. ಶಿಕ್ಷಣ ಮತ್ತು ಡಿಸ್ಲೆಕ್ಸಿಯಾನಂತಹ ಸಮಸ್ಯೆಗಳನ್ನು ನಿಭಾಯಿಸಿದಕ್ಕಾಗಿ ಚಿತ್ರವನ್ನು ಚೈನಾದ ಪ್ರೇಕ್ಷಕರು ಉತ್ತಮವಾಗಿ ಸ್ವೀಕರಿಸಿದ್ದಾರೆ, ಮತ್ತು ಜನಪ್ರಿಯ ಚೈನೀಸ್ ಚಲನಚಿತ್ರ ತಾಣ ಡೌಬಾನ್‍ನಲ್ಲಿ ಅತಿ ಉನ್ನತ ಶ್ರೇಣಿ ಪಡೆದ ಚಲನಚಿತ್ರಗಳಲ್ಲಿ ಒಂದಾಗಿದೆ.[೧೬][೧೭]
2009ರ ಅಕ್ಯಾಡೆಮಿ ಪ್ರಶಸ್ತಿಗಾಗಿ ಸಲ್ಲಿಕೆ ಮತ್ತು ಸ್ಲಮ್‍ಡಾಗ್ ಮಿಲಿಯನೇರ್
ಬದಲಾಯಿಸಿತಾರೆ ಜ಼ಮೀನ್ ಪರ್ ಅಕ್ಯಾಡೆಮಿ ಅತ್ಯುತ್ತಮ ವಿದೇಶಿ ಚಲನಚಿತ್ರ ಪ್ರಶಸ್ತಿಯ ಲಘುಪಟ್ಟಿಗೆ ಮುಂದುವರಿಯಲು ವಿಫಲವಾದ ನಂತರ, ಭಾರತೀಯ ಚಲನಚಿತ್ರಗಳು ಏಕೆ ಎಂದೂ ಅಕ್ಯಾಡೆಮಿ ಪ್ರಶಸ್ತಿಗಳನ್ನು ಗೆಲ್ಲುವುದಿಲ್ಲ ಎಂದು ಭಾರತೀಯ ಮಾಧ್ಯಮಗಳಲ್ಲಿ ಚರ್ಚೆ ಶುರುವಾಯಿತು.[೧೮]
ಭಾರತೀಯ ಸುದ್ದಿಮಾಧ್ಯಮಗಳು ಕೂಡ ಆಗಾಗ್ಗೆ ತಾರೆ ಜ಼ಮೀನ್ ಪರ್ನ ನಾಮನಿರ್ದೇಶನ ವೈಫಲ್ಯವನ್ನು ಬ್ರಿಟಿಷ್ ಚಲನಚಿತ್ರ ಸ್ಲಮ್‍ಡಾಗ್ ಮಿಲಿಯನೇರ್ನ ಅನೇಕ ಅಕ್ಯಾಡೆಮಿ ಪ್ರಶಸ್ತಿ ನಾಮನಿರ್ದೇಶನಗಳು ಮತ್ತು ಗೆಲುವುಗಳೊಂದಿಗೆ ಹೋಲಿಸಿತು,[೧೯][೨೦] ಮತ್ತು ಹಿಂದೆ ಇತರ ಭಾರತೀಯ ಚಲನಚಿತ್ರಗಳನ್ನು ಕಡೆಗಣಿಸಲಾಗಿತ್ತು ಎಂದು ಗಮನಿಸಿದವು.[೨೧]
ಗೃಹ ಮಾಧ್ಯಮ
ಬದಲಾಯಿಸಿಯುಟಿವಿ ಹೋಮ್ ಎಂಟರ್‍ಟೇನ್‍ಮಂಟ್ ಚಿತ್ರದ ಡಿವಿಡಿಯನ್ನು ೨೫ ಜುಲೈ ೨೦೦೮ರಂದು ಬಿಡುಗಡೆಮಾಡಿತು.[೨೨][೨೩]
ವಾಲ್ಟ್ ಡಿಸ್ನಿ ಕಂಪನಿ ಹೋಮ್ ಎಂಟರ್‍ಟೇನ್‍ಮಂಟ್ ಉತ್ತರ ಅಮೇರಿಕಾ, ಯುನೈಟಡ್ ಕಿಂಗ್ಡಮ್, ಮತ್ತು ಆಸ್ಟ್ರೇಲಿಯಾದಲ್ಲಿ ವಿತರಣೆಗಾಗಿ ಡಿವಿಡಿ ಹಕ್ಕುಗಳನ್ನು ₹70 ಮಿಲಿಯನ್ ಕೊಟ್ಟು ಖರೀದಿಸಿತು.[೨೪] ಚಿತ್ರಕ್ಕೆ ಲೈಕ್ ಸ್ಟಾರ್ಸ್ ಆನ್ ಅರ್ತ್ ಎಂದು ಮರುನಾಮಕರಣ ಮಾಡಿ ಪ್ರದೇಶ ೨ರಲ್ಲಿ ಅದನ್ನು ೨೬ ಅಕ್ಟೋಬರ್ ೨೦೦೯ರಂದು ಬಿಡುಗಡೆಮಾಡಿತು.[೨೫] ಚಲನಚಿತ್ರವು ನೆಟ್ಫ್ಲಿಕ್ಸ್‌ನಲ್ಲಿ ಲಭ್ಯವಿದೆ.[೨೬]
ಧ್ವನಿವಾಹಿನಿ
ಬದಲಾಯಿಸಿತಾರೆ ಜ಼ಮೀನ್ ಪರ್ನ ಧ್ವನಿವಾಹಿನಿಯನ್ನು ಟಿ-ಸೀರೀಸ್‍ನ ಗುರುತು ಪಟ್ಟಿಯಡಿ ೪ ನವಂಬರ್ ೨೦೦೭ರಂದು ಬಿಡುಗಡೆ ಮಾಡಲಾಯಿತು.[೨೭] "ಮೇರಾ ಜಹಾನ್" ಹಾಡಿಗೆ ಶೈಲೇಂದ್ರ ಬರ್ವೆ ಸಂಗೀತ ನೀಡಿದ್ದರೆ ಗುಪ್ತೆ ಸಾಹಿತ್ಯ ಬರೆದಿದ್ದರು. ಉಳಿದ ಎಲ್ಲ ಹಾಡುಗಳಿಗೆ ಶಂಕರ್-ಎಹಸಾನ್-ಲಾಯ್ ಸಂಗೀತವನ್ನು ನೀಡಿದರು ಮತ್ತು ಪ್ರಸೂನ್ ಜೋಶಿ ಸಾಹಿತ್ಯವನ್ನು ಬರೆದರು. ಜೋಶಿ ಅತ್ಯುತ್ತಮ ಗೀತಸಾಹಿತ್ಯ ರಾಷ್ಟ್ರಪ್ರಶಸ್ತಿಯನ್ನು ಪಡೆದರು ಮತ್ತು ಶಂಕರ್ ಮಹಾದೇವನ್ "ಮಾ"" ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕ ರಾಷ್ಟ್ರಪ್ರಶಸ್ತಿಯನ್ನು ಗೆದ್ದರು.[೨೮]
ಉಲ್ಲೇಖಗಳು
ಬದಲಾಯಿಸಿ- ↑ "TAARE ZAMEEN PAR (PG) – British Board of Film Classification". 17 December 2007. Archived from the original on 29 October 2013. Retrieved 23 October 2012.
- ↑ ೨.೦ ೨.೧ Lahiri, Samhita Chakraborty (7 March 2010). "Screen syndrome". Kolkata Telegraph. Calcutta, India. Archived from the original on 29 July 2010. Retrieved 7 March 2010.
- ↑ "Top Lifetime Grossers Worldwide (IND Rs)". Boxofficeindia.com. Archived from the original on 21 October 2013.
- ↑ ೪.೦ ೪.೧ Vij, Gauri (3 February 2008). "A leap of faith". The Hindu. Archived from the original on 7 April 2008. Retrieved 11 April 2008.
- ↑ "In 2002, Taare Zameen Par was still called and registered as High Jump". Bollywood Hungama. 28 January 2008. Archived from the original on 21 May 2008. Retrieved 27 July 2010.
- ↑ "Director's Note: Official website for Taare Zameen Par". Archived from the original on 10 April 2008. Retrieved 11 April 2008.
- ↑ Singh, Harneet (21 May 2007). ""Yes, I have directed Taare Zameen Par" – Aamir Khan". Bollywood Hungama. Archived from the original on 28 July 2010. Retrieved 11 April 2008.
- ↑ ೮.೦ ೮.೧ Patel, Devansh (18 December 2007). "TZP makes me a proud actor, producer and a director". Bollywood Hungama. Archived from the original on 28 July 2010. Retrieved 12 May 2009.
- ↑ Pillai, Varsha (18 January 2008). "Taare Zameen Par brings clay animation to Bollywood". CNN-IBN. Archived from the original on 30 July 2010. Retrieved 30 July 2010.
- ↑ "Taare Zameen Par". Box office Mojo. Archived from the original on 14 October 2011. Retrieved 14 October 2011.
- ↑ "Aamir does it again, TZP is India's official entry at Oscar awards". Indian Express. Retrieved 14 October 2011.
- ↑ "Anti-Modi remarks haunts Aamir Khan before release of 'Taare Zameen Par' in Gujarat". Yahoo! India Movies. Archived from the original on 28 July 2010. Retrieved 27 July 2010.
- ↑ "Taare Zameen Par banned in Vadodara multiplex". Yahoo! India Movies. Archived from the original on 28 July 2010. Retrieved 27 July 2010.
- ↑ "TZP runs into trouble in Gujarat". Yahoo! India Movies. Archived from the original on 2 March 2008. Retrieved 27 July 2010.
- ↑ Lakshmi, Rama (12 April 2008). "Taare Zameen Par inspires people, institutions into action". The Economic Times. Archived from the original on 22 October 2010. Retrieved 22 October 2010.
- ↑ "印度的良心阿米尔·汗如何用电影改变国家". Sina. 19 May 2017.
- ↑ "《摔跤吧!爸爸》主演阿米尔·汗被誉为"印度刘德华"-中新网". China News Service. 11 May 2017.
- ↑ Mishra, Somen (23 February 2009). "Why can't Indian films crack the Oscar code?". CNN-IBN. Archived from the original on 2 September 2012. Retrieved 22 July 2010.
- ↑ "Aamir's 'Taare Zameen Par' misses Oscar shortlist". DNA. 14 January 2009. Archived from the original on 1 September 2012. Retrieved 26 May 2010.
- ↑ Shetty-Saha, Shubha (17 February 2009). "Slumdog bags 10 Oscar hopes". DNA. Archived from the original on 1 September 2012. Retrieved 22 July 2010.
"Govt. lauds Rahman, 'Slumdog' team". ದಿ ಹಿಂದೂ. Chennai, India. 17 February 2009. Archived from the original on 1 September 2012. Retrieved 26 May 2010.
"Is 'Slumdog' India's?". AsiaOne. 13 January 2009. Archived from the original on 28 July 2010. Retrieved 26 May 2010. - ↑ Quadri, Misbah (24 February 2009). "Gujarat says Jai Ho to Slumdog victory". DNA. Archived from the original on 1 September 2012. Retrieved 22 July 2010.
- ↑ Shahryar, Faridoon (21 July 2008). "Hindi Movie DVD Review". Bollywood Hungama. Archived from the original on 6 September 2012. Retrieved 25 July 2008.
- ↑ "Aamir Khan to launch TZP DVD at Darsheel Safary's school in Mumbai". Bollywood Hungama. 24 July 2008. Archived from the original on 22 August 2008. Retrieved 27 July 2010.
- ↑ Frater, Patrick (25 July 2008). "Disney goes Bollywood". Variety. Archived from the original on 1 September 2012. Retrieved 25 July 2008.
- ↑ "Like Stars On Earth". Amazon. 26 October 2009. Archived from the original on 13 May 2016. Retrieved 18 June 2016.
- ↑ "Taare Zameen Par". Netflix. Archived from the original on 3 ಜುಲೈ 2021. Retrieved 3 September 2019.
- ↑ Khan, Atta. "Planet Bollywood Music Review: Taare Zameen Par". Planet Bollywood. Archived from the original on 2 May 2008. Retrieved 11 April 2008.
- ↑ "55th National Film Awards for the Year 2007" (PDF). Press Information Bureau (Govt. of India). Archived from the original (PDF) on 7 October 2009.
ಡಿವಿಡಿ ಉಲ್ಲೇಖಗಳು
ಬದಲಾಯಿಸಿ- Khan, Aamir (12 January 2010). Like Stars on Earth DVD commentary (DVD). Walt Disney Studios Home Entertainment.
- Various (12 January 2010). Like Stars on Earth Bonus Disc: The Making... (DVD). Walt Disney Studios Home Entertainment.
ಹೆಚ್ಚಿನ ಓದಿಗಾಗಿ
ಬದಲಾಯಿಸಿ- Mohideen, Nabeel. "Aamir Khan Makes Sparkling Debut as Film Director With Taare." Bloomberg News, 2007-12-26.
- Mukherjee, Krittivas. "Taare Zameen Par, film on dyslexic child, pulls at Indian heartstrings Archived 2009-01-10 ವೇಬ್ಯಾಕ್ ಮೆಷಿನ್ ನಲ್ಲಿ.." Reuters. 2007-12-24.
- WBUR-FM, "Singing The Praises Of Bollywood Films Archived 2016-01-13 ವೇಬ್ಯಾಕ್ ಮೆಷಿನ್ ನಲ್ಲಿ.," 25 February 2009 (transcript and audio).
.