ತವಾಂಗ್ ಮೊನ್ಯಾಸ್ಟರಿ
ತವಾಂಗ್ ಮೊನ್ಯಾಸ್ಟರಿ ಭಾರತದ ಅರುಣಾಚಲ ಪ್ರದೇಶ ರಾಜ್ಯದ ತವಾಂಗ್ ಜಿಲ್ಲೆಯ ತವಾಂಗ್ ನಗರದಲ್ಲಿ ಸ್ಥಿತವಾಗಿದೆ. ಇದು ಭಾರತದ ಅತಿದೊಡ್ಡ ಮೊನ್ಯಾಸ್ಟರಿ ಆಗಿದೆ ಮತ್ತು ಟಿಬೆಟ್‍ನ ಲಾಸಾದಲ್ಲಿರುವ ಪೊಟಾಲಾ ಅರಮನೆಯ ನಂತರ ವಿಶ್ವದ ಎರಡನೇ ಅತಿದೊಡ್ಡ ಮೊನ್ಯಾಸ್ಟರಿ ಆಗಿದೆ.
ಟಿಬೇಟಿಯನ್ ಭಾಷೆಯಲ್ಲಿ ತವಾಂಗ್ ಮೊನ್ಯಾಸ್ಟರಿಯ ಹೆಸರು ಗಾಡೆನ್ ನಾಮ್ಗ್ಯಾಲ್ ಲಾಟ್ಸೆ ಎಂದಾಗಿದೆ. ಇದರರ್ಥ "ಸಂಪೂರ್ಣ ವಿಜಯದ ದೈವಿಕ ಸ್ವರ್ಗ". ಇದನ್ನು 1680-1681ರಲ್ಲಿ ಮೆರಾಕ್ ಲಾಮಾ ಲೋಡ್ರೆ ಗ್ಯಾಟ್ಸೊ 5 ನೇ ದಲೈ ಲಾಮಾ ನ್ಗವಾಂಗ್ ಲೋಬ್ಸಾಂಗ್ ಗ್ಯಾಟ್ಸೊ ಅವರ ಆಶಯಗಳಿಗೆ ಅನುಗುಣವಾಗಿ ಸ್ಥಾಪಿಸಿದರು. ಇದು ವಜ್ರಯಾನ ಬೌದ್ಧಧರ್ಮದ ಗೆಲುಗ್ ಪಂಥಕ್ಕೆ ಸೇರಿದೆ.
ಈ ಮೊನ್ಯಾಸ್ಟರಿ ಮೂರು ಮಹಡಿಯಷ್ಟು ಎತ್ತರವಿದೆ. ಇದರ ಸುತ್ತ 925 feet (282 m) ಉದ್ದನೆಯ ಕಾಂಪೌಂಡ್ ಗೋಡೆ ಇದೆ. ಇದರ ಸಂಕೀರ್ಣದೊಳಗೆ 65 ವಸತಿ ಕಟ್ಟಡಗಳಿವೆ. ಮೊನ್ಯಾಸ್ಟರಿಯ ಗ್ರಂಥಾಲಯವು ಅಮೂಲ್ಯವಾದ ಹಳೆಯ ಗ್ರಂಥಗಳನ್ನು ಹೊಂದಿದೆ, ಮುಖ್ಯವಾಗಿ ಕಾಂಗ್ಯೂರ್ ಮತ್ತು ತೆಂಗ್ಯೂರ್ .
ಈ ಬೌದ್ಧಮಠವು 10,000 feet (3,000 m) ಎತ್ತರದ ಪರ್ವತದ ತುದಿಯ ಹತ್ತಿರ ನೆಲೆಗೊಂಡಿದೆ. ಇಲ್ಲಿಂದ ತವಾಂಗ್ ಚು ಕಣಿವೆಯ ದೂರದೃಶ್ಯದ ನೋಟ ಕಾಣಿಸುತ್ತದೆ. ಈ ಕಣಿವೆಯು ಹಿಮಾಚ್ಛಾದಿತ ಪರ್ವತಗಳು ಮತ್ತು ಕೋನಿಫೆರಸ್ ಕಾಡುಗಳನ್ನು ಒಳಗೊಂಡಿದೆ. ಈ ಬೌದ್ಧಮಠವನ್ನು ಉತ್ತರ ದಿಕ್ಕಿನಿಂದ ಆಲ್ಪೈನ್ ಸಸ್ಯಗಳಿರುವ ಇಳಿಜಾರಾದ ಚಾಚಿನ ಮೂಲಕ ಪ್ರವೇಶಿಸಲಾಗುತ್ತದೆ.[೧][೨][೩][೪][೫]
ಇಲ್ಲಿ ೪೫೦ ಬೌದ್ಧ ಭಿಕ್ಕುಗಳಿದ್ದಾರೆ ಎಂದು ೨೦೧೦ರಲ್ಲಿ ವರದಿಯಾಗಿತ್ತು.[೩]
ಮುಖ್ಯಲಕ್ಷಣಗಳು
ಬದಲಾಯಿಸಿಪ್ರವೇಶದ್ವಾರ ಮತ್ತು ಹೊರಗಿನ ಗೋಡೆಗಳು
ಬದಲಾಯಿಸಿಮಠದ ಪ್ರವೇಶದ್ವಾರದಲ್ಲಿ ವರ್ಣರಂಜಿತ ಪ್ರವೇಶದ ರಚನೆಯಿದೆ. ಇದನ್ನು "ಗುಡಿಸಲಿನಂತಹ ರಚನೆಯ" ಆಕಾರದಲ್ಲಿ ನಿರ್ಮಿಸಲಾಗಿದೆ. ಪಕ್ಕದ ಗೋಡೆಗಳನ್ನು ಕಲ್ಲಿನಿಂದ ನಿರ್ಮಿಸಲಾಗಿದೆ. ಛಾವಣಿಯು ಮಂಡಲಗಳನ್ನು ಹೊಂದಿದೆ. ಒಳಗಿನ ಗೋಡೆಗಳ ಮೇಲೆ ದೇವತೆಗಳು ಮತ್ತು ಸಂತರ ಚಿತ್ರಗಳನ್ನು ಬಿಡಿಸಲಾಗಿದೆ.
ಮಠದ ಮುಖ್ಯ ದ್ವಾರವು ಉತ್ತರದ ಗೋಡೆಗೆ ಅಳಡಿಸಲ್ಪಟ್ಟ ಬೃಹತ್ ಬಾಗಿಲುಗಳನ್ನು ಹೊಂದಿದೆ. ಮುಖ್ಯ ದ್ವಾರದ ಹೊರತಾಗಿ, ಮಠದ ದಕ್ಷಿಣ ಭಾಗವು ಮತ್ತೊಂದು ಪ್ರವೇಶ ದ್ವಾರವನ್ನು ಹೊಂದಿದೆ. ಇದು ಕೂಡ ಬೃಹತ್ ಬಾಗಿಲನ್ನು ಹೊಂದಿದೆ.
ಮುಖ್ಯ ಕಟ್ಟಡಗಳು
ಬದಲಾಯಿಸಿದೊಡ್ಡ ಭವನದಂತೆ ನಿರ್ಮಿಸಲ್ಪಟ್ಟ ಮಠವು ಮೂರು ಅಂತಸ್ತುಗಳನ್ನು ಹೊಂದಿದ್ದು ದೊಡ್ಡ ಸಭಾಂಗಣ, ಹತ್ತು ಇತರ ಕ್ರಿಯಾತ್ಮಕ ರಚನೆಗಳು ಮತ್ತು ವಿದ್ಯಾರ್ಥಿಗಳು, ಲಾಮಾಗಳು ಹಾಗೂ ಸನ್ಯಾಸಿಗಳಿಗಾಗಿ 65 ವಸತಿ ನಿವಾಸಗಳನ್ನು ಹೊಂದಿದೆ.[೩][೫][೬][೭] ಮಠವು ಶಾಲೆ ಮತ್ತು ತನ್ನದೇ ಆದ ನೀರು ಸರಬರಾಜು ಸೌಲಭ್ಯ,[೬] ಮತ್ತು ಒಂದು ಬೌದ್ಧ ಸಾಂಸ್ಕೃತಿಕ ಅಧ್ಯಯನ ಕೇಂದ್ರವನ್ನು ಹೊಂದಿದೆ.[೧]
ಮಠದ ನೆಲ ಮಹಡಿಯಲ್ಲಿ ಧಾರ್ಮಿಕ ನೃತ್ಯಗಳನ್ನು ನಡೆಸಲಾಗುತ್ತದೆ. ಮಠದ ಆವರಣದಲ್ಲಿ ಸುಮಾರು 700 ಸನ್ಯಾಸಿಗಳಿಗೆ ಅವಕಾಶ ಕಲ್ಪಿಸಲು ವಸತಿ ಕಟ್ಟಡಗಳಿವೆ, ಇದು ಈಗ 450 ಸನ್ಯಾಸಿಗಳನ್ನು ಹೊಂದಿದೆ.[೧][೮][೨]
ಮುಖ್ಯ ದೇವಾಲಯ (ದುಖಾಂಗ್)
ಬದಲಾಯಿಸಿಮಠದಲ್ಲಿನ ಮುಖ್ಯ ದೇವಾಲಯವನ್ನು ದುಖಾಂಗ್ ಎಂದು ಕರೆಯಲಾಗುತ್ತದೆ. ಇದನ್ನು 1860-61ರಲ್ಲಿ ನಿರ್ಮಿಸಲಾಯಿತು. ಬುದ್ಧನ ದೊಡ್ಡ ವಿಗ್ರಹವನ್ನು (5.5 ಮಿ. ಎತ್ತರ) ಪೂಜಿಸಲಾಗುತ್ತದೆ. ಇದು ಸ್ವರ್ಣ ಲೇಪನವುಳ್ಳದ್ದು ಮತ್ತು ಅಲಂಕೃತವಾಗಿದೆ, ಮತ್ತು ಕಮಲದ ಭಂಗಿಯಲ್ಲಿದೆ. ವಿಗ್ರಹವನ್ನು ವೇದಿಕೆಯ ಮೇಲೆ ಸ್ಥಾಪಿಸಲಾಗಿದೆ ಮತ್ತು ಅದರ ಶಿರವು ಮೊದಲ ಮಹಡಿಯವರೆಗೆ ವಿಸ್ತರಿಸುತ್ತದೆ.[೭] ಬುದ್ಧನ ಪ್ರತಿಮೆಯ ಪಕ್ಕದಲ್ಲಿ ಆಶ್ರಮದ ರಕ್ಷಕ ದೇವತೆಯಾದ ಸ್ರೋ ದೇವಿಯ (ಪಾಲ್ಡೆನ್ ಲಾಮೊ) ವಿಶೇಷ ತಂಗ್ಕಾವನ್ನು ಹೊಂದಿರುವ ಬೆಳ್ಳಿಯ ಪೆಟ್ಟಿಗೆಯಿದೆ.
ಗ್ರಂಥಾಲಯ ಮತ್ತು ಪಠ್ಯಗಳು
ಬದಲಾಯಿಸಿಸ್ಥಳೀಯವಾಗಿ ತಯಾರಿಸಿದ ಕಾಗದವನ್ನು ಬಳಸಿ ಧಾರ್ಮಿಕ ಪುಸ್ತಕಗಳನ್ನು ಮುದ್ರಿಸಲು ಮಠದಲ್ಲಿ ಮುದ್ರಣಾಲಯವಿದೆ. ಮರದ ನಾಟಗಳನ್ನು ಮುದ್ರಣಕ್ಕಾಗಿ ಬಳಸಲಾಗುತ್ತದೆ. ಇಡೀ ಎರಡನೇ ಮಹಡಿಯಲ್ಲಿ ಗ್ರಂಥಾಲಯವಿದೆ.
ಉಲ್ಲೇಖಗಳು
ಬದಲಾಯಿಸಿ
- ↑ ೧.೦ ೧.೧ ೧.೨ Dalal 2010.
- ↑ ೨.೦ ೨.೧ Mibang & Chaudhuri 2004.
- ↑ ೩.೦ ೩.೧ ೩.೨ "Landslides hit Tawang monaster". The Times of India. 28 November 2010.
- ↑ Das 2009.
- ↑ ೫.೦ ೫.೧ Bareh 2001.
- ↑ ೬.೦ ೬.೧ Pal 2014.
- ↑ ೭.೦ ೭.೧ "Tawang Monastery (Gonpa)". Tawang Monastery organization. Archived from the original on 2009-11-24. Retrieved 2021-10-31.
- ↑ Kler 1995.
ಗ್ರಂಥಸೂಚಿ
ಬದಲಾಯಿಸಿ- Arpi, Claude i (1962). 1962 and the McMahon Line Saga. Lancer Publishers LLC. ISBN 978-1-935501-57-2.
- Bareh, Hamlet (2001). Encyclopaedia of North-East India. Mittal Publications. ISBN 978-81-7099-788-7.
- Bisht, Ramesh Chandra (1 January 2008). International Encyclopaedia Of Himalayas (5 Vols. Set). Mittal Publications. ISBN 978-81-8324-265-3.
- Bose, Manilal (1997). History of Arunachal Pradesh. Concept Publishing Company. ISBN 978-81-7022-666-6.
- Dalal, Roshen (2010). The Religions of India: A Concise Guide to Nine Major Faiths. Penguin Books India. ISBN 978-0-14-341517-6.
- Das, Gautam (2009). China-Tibet-India: The 1962 War and the Strategic Military Future. Har-Anand Publications. ISBN 978-81-241-1466-7.
- Kapadia, Harish; Kapadia, Geeta (2005). Into the Untravelled Himalaya: Travels, Treks, and Climbs. Indus Publishing. ISBN 978-81-7387-181-8.
- Kler, Gurdip Singh (1995). Unsung Battles of 1962. Lancer Publishers. ISBN 978-1-897829-09-7.
- Kohli, M.S. (2002). Mountains of India: Tourism, Adventure and Pilgrimage. Indus Publishing. ISBN 978-81-7387-135-1.
- Mibang, Tamo; Chaudhuri, Sarit Kumar (2004). Understanding Tribal Religion. Mittal Publications. ISBN 978-81-7099-945-4.
- Mullin, Glenn H. The Practice of the Six Yogas of Naropa. Snow Lion Publications. ISBN 978-1-55939-905-0.
- Pal, Susant (5 February 2014). Imbibed In Faith. Author Solutions, Incorporated. ISBN 978-1-4828-1259-6.
- Pathak, Guptajit; Gogoi, Raju (2008). Cultural fiesta in the "Island of peace" Arunachal Pradesh. Mittal Publications. ISBN 978-81-8324-231-8.
- Richardson, Hugh (1984). Tibet and Its History. Shambhala. ISBN 978-0-87773-376-8.
- Shakya, Tsering (29 February 2012). Dragon In The Land Of Snows: The History of Modern Tibet since 1947. Random House. ISBN 978-1-4481-1429-0.
ಹೊರಗಿನ ಕೊಂಡಿಗಳು
ಬದಲಾಯಿಸಿ- Tawang Monastery multilingual site
- Tawang Archived 2020-06-27 ವೇಬ್ಯಾಕ್ ಮೆಷಿನ್ ನಲ್ಲಿ. at Arunachaltourism.com
- "A Walk Around Tawang Monastery." [೧]