ಡುಫೂ(杜甫,೭೧೨-೭೭೦),ಒಬ್ಬ ಚೀನಾದ ಪ್ರಖ್ಯಾತ ಆಶುಕವಿ,ಪಂಡಿತ ಮತ್ತು ಸರ್ವಶ್ರೇಷ್ಠ ಕವಿ. ಅವನನ್ನು ಚೀನಾದ ರಾಷ್ಟ್ರೀಯ ಕವಿ ಎಂದು ಕರೆಯುತ್ತಾರೆ.ಡುಫೂ ಚೀನಾದ ಪ್ರಖ್ಯಾತ ಆಶುಕವಿ,ಪಂಡಿತ ಮತ್ತು ಸರ್ವಶ್ರೇಷ್ಠ ಕವಿ. ಟ್ಯಾಂಗ್ ಸಾಮರಾಜ್ಯದ ಒಬ್ಬ ಪ್ರಸಿದ ಕವಿ ಆಗಿದ್ದರು.ಲೀ ಪೂ ಜೊತೆಗೆ ಇವರನ್ನು ಕೂಡ ಚೀನಾದ ಅತ್ಯಂತ ಪ್ರಸಿದ್ಧ ಕವಿಗಳಲ್ಲಿ ಒಬ್ಬರು ಎಂದು ಪರಿಗನಿಸಲಾಗುತ್ತದೆ. ಡುಫೂಗೆ ತನ್ನ ರಾಜ್ಯದ ನಾಗರಿಕಾ ಸೇವಾ ಕೆಲಸಕ್ಕೆ ಸೆರಬೇಕು ಎಂಬ ಆಸೆ ಇತ್ತು. ೭೫೫ನಲ್ಲಿ ಆದ ಆನ್ ಲುಶಾನ್ ದಂಗೆದಿಂದ ಆವನು ಇದ ಟ್ಯಾಂಗ್ ಸಾಮರಾಜ್ಯದಂತೆ ಅವನ ಜೀವನ ಕೂಡ ತುಂಬಾ ಅಶಾಂತಿಯಿಂದ ಕೂಡಿತ್ತು. ಕೂನೆಯ ಹದಿನೈದು ವರ್ಷಗಳನ್ನು ಡುಫೂ ತುಂಬಾ ಕಠಿಣ ಪರಿಸ್ಥಿತಿಯಲ್ಲಿ ಕಳೆದನು.

ಡುಫೂ
Later portrait of Du Fu with a goatee, a mustache, and black headwear
There are no contemporaneous portraits of Du Fu; this is a later artist's impression.
ಜನನ೭೧೨
ಲುವೊಯಾಂಗ್(ಡುಫೂರ ಪೂರ್ವಿಕರ ಸ್ಥಳ ಚಾಂಗಾನ್ ಆಗಿತ್ತು, ಆದರಿಂದ ಆತ ಈ ಸ್ಥಳವನ್ನು ತನ್ನ ಹುಟ್ಟಿದೂರು ಎಂದು ಭಾವಿಸಿದನ್ನು.)
ಮರಣ770 (ವಯಸ್ಸು ೫೭–೫೮)
ಚಾಂಗಸಾ
ವೃತ್ತಿಕವಿ

ಪ್ರಭಾವಗಳು
  • ಲಿ ಪೂ


ಮೊದಲ್ಲಿಗೆ ಡುಫೂನ ಕವಿತೆಗಳು ಪ್ರಸಿದ್ಧವಾಗಿರಲ್ಲಿಲ ಆದರೆ ನಂತರದ ದಿನಗಳಲ್ಲಿ ಇವರ ಬರಹ ಶೈಲಿ ಚೀನೀ ಮತ್ತು ಜಪಾನೀ ಸಾಹಿತ್ಯದ ಮೇಲೆ ಪ್ರಭಾವ ಬೀರಿತು. ಇವರ ಕಾವ್ಯಮಯವಾದ ಬರವಣಿಗೆಯ ಕವಿತೆಗಲಲ್ಲಿ ಸುಮಾರು ಹದಿನೈದು ಸಾವಿರ ಕವಿತೆಗಳನ್ನು ಸಂರಕ್ಷಿಸಲಾಗಿದೆ. ಚೀನಾ ವಿಮರ್ಶಕರು ಡುಫುನನ್ನು "ಕವಿ-ಇತಿಹಾಸಕಾರ" ಹಾಗು "ಕವಿ-ಋಷಿ"ಎಂದು ಕರೆಯುತ್ತಾರೆ.

ಡುಫೂನ ಕವಿತೆಗಳಿಂದ ಅವರ ಜೀವನದ ಬಗ್ಗೆ ಹಲವಾರು ವಿಷಯಗಳು ತಿಳಿದು ಬಂದಿವೆ. ರಾಣಿ ವೂರವರ ಆಳ್ವಿಕೆಯ ಸಮಯದಲ್ಲಿ ಡುಫೂನ ಅಜ್ಜನಾದ ಶಯಾನ, ಒಬ್ಬ ರಾಜಕಾರಣಿ ಹಾಗು ಕವಿಯುಯಾಗಿದ. ಡುಫೂನಾ ಜನನ ೭೧೨ನಲ್ಲಿ ಲುವೊಯಾಂಗ್ ಎಂಬ ಪ್ರದೇಶದಲಾಯಾಯಿತ್ತು. ಡುಫೂರ ಪೂರ್ವಿಕರ ಸ್ಥಳ ಚಾಂಗಾನ್ ಆಗಿತ್ತು, ಆದರಿಂದ ಆತ ಈ ಸ್ಥಳವನ್ನು ತನ್ನ ಹುಟ್ಟಿದೂರು ಎಂದು ಭಾವಿಸಿದನ್ನು.

ಡುಫೂನ ತಾಯಿ ಅವನು ಹುಟ್ಟಿದಾಗಲೇ ತೀರಿಕೂಂಡಳು, ಆದರಿಂದ ಅವನ ಚಿಕ್ಕಮ್ಮಾ ಅವನನ್ನು ಸಾಕಿದಳು. ಡುಫೂಗೆ ಅಣ್ಣನಿದ ಆದರೆ ಆತ ಸಣ್ಣ ವಯಸ್ಸಿನಲೇ ತೀರಿಕೂಂಡ. ಆದರೆ ಡುಫೂಗೆ ಮೂರು ಮಲ-ತಮ್ಮಂದಿರು ಹಾಗೂ ಒಬ್ಬಳು ಮಲ-ತಂಗಿ ಇದ್ದಳು, ಇವರ ಬಗ್ಗೆ ಡುಫೂ ತನ್ನ ಕೆಲವು ಕವಿತೆಗಳಲ್ಲಿ ಪ್ರಸ್ತಾಪಿಸುತ್ತಾನೆ. ಆದರೆ ಆತೆ ತನ್ನ ಮಲ-ತಾಯಿಯ ಬಗ್ಗೆ ಯಾವುದರಲ್ಲಿಯು ಪ್ರಸ್ತಾಪಿಸುವುದಿಲ್ಲ.

ಡುಫೂ ಒಬ್ಬ ವಿದ್ವಾಂಸ ಅಧಿಕಾರಿಯ ಮಗನಾಗಿದ್ದು. ಡುಫೂ ಹದಿಹರೆಯದಲ್ಲಿಯೆ ಹಲವಾರು ಕವಿತೆಗಳನ್ನು ರಚಿಸಿದ ಎಂದು ಹೇಳಲಾಗುತ್ತದೆ, ಆದರೆ ಅವನು ಬರೆದ ಆ ಕವಿತೆಗಳು ಇನ್ನು ಯಾರಿಗೂ ದೊರೆತಿಲ್ಲ.


೭೩೦ರ ಆರಂಭಿಕದಲ್ಲಿ ಡುಫೂ ಝೆಜಿಯಾಂಗ್ ಎಂಬ ಪ್ರದೇಶದಲ್ಲಿ ಪ್ರವಾಸ ಮಾಡಿದನು. ನಂತರ ೭೩೫ರಲ್ಲಿ ಆತ ನಾಗರಿಕ ಸೇವಾ ಪರೀಕ್ಷೆಯನ್ನು ಬರೆದನು, ಆದರೆ ಆ ಪರೀಕ್ಷೆಯಲ್ಲಿ ಅನುತ್ತೀರ್ಣನಾದನು. ಈ ವಿಫಲತೆಯ ನಂತರ ಮತ್ತೆ ಆತ ಷಾನ್‌ಡಾಂಗ್‌ ಹಾಗೂ ಹೇಬೇ ಪ್ರದೇಶಗಳನ್ನು ಪ್ರವಾಸ ಮಾಡಲು ತೆರೆಳಿದನ್ನು.

ಡುಫೂನ ತಂದೆ ೭೪೦ರಲ್ಲಿ ತೀರಿಕೂಂಡರು, ತನ್ನ ತಂದೆಯ ಶ್ರೇಣಿಯ ನಾಗರಿಕ ಸೇವೆಯ ಕೆಲಸ ಆಗಾ ಡುಫೂಗೆ ಒಲೆದು ಬಂದ್ದಿತು, ಆದರೆ ಆತ ಆ ಕೆಲಸವನ್ನು ತನ್ನ ತಮ್ಮನಿಗಾಗಿ ತ್ಯಾಗ ಮಾಡಿದನು.

೭೪೪ರಲ್ಲಿ ಡುಫೂ ಲಿ ಪೂರನ್ನು ಮೊದಲ ಬಾರಿ ಭೇಟಿಯಾದರು, ಕೆಲವು ದಿನಗಳಲ್ಲಿ ಇಬ್ಬರು ಒಳ್ಳೆಯ ಸ್ನೇಹಿತರಾದರು. ಇಗಿರುವ ಡುಫೂನ ಸುಮಾರು ಹನ್ನೆರಡು ಕವಿತೆಗಳಲ್ಲಿ ಡುಫೂ ಲಿಪೂರವರ ಬಗ್ಗೆ ಬರೆದಿದಾದರೆ, ಈ ಕವಿತೆಗಳನ್ನು ಇವರು ಲಿಪೂ ಜೊತೆ ಇವರ ಸ್ನೇಹ ಆರಂಭವಾಗುವ ಸಮಯದಲ್ಲಿ ಬರೆಯಲಾಗಿದೆ ಎಂದು ಹೇಳಲಾಗುತ್ತೆ. ನಂತರ ಇವರು ಲಿಪೂನಾ ಭೇಟಿಮಾಡಿದ್ದು ೭೪೫ದಲ್ಲಿ ಕೇವಲ ಒಂದು ಬಾರಿ,

೭೬೪ರಲ್ಲಿ ಡುಪೂ ತನ್ನ ವೃತ್ತಿ ಜೀವನವನ್ನು ಮತ್ತೆ ಪ್ರಾರಂಭಿಸಲು ತನ್ನ ರಾಜ್ಯಗೆ ಮರಳಿದನ್ನು. ಈ ಬಾರಿ ಡುಫೂ ಮತ್ತೆ ನಾಗರಿಕಾ ಸೇವಾ ಪರೀಕ್ಷೆಯನ್ನು ಬರೆದ್ದನು, ಆದರೆ ಈ ಸಮಯದಲ್ಲಿ ಅಲ್ಲಿನ ಪ್ರಧಾನ ಮಂತ್ರಿ ಎಲ್ಲ ಅಭ್ಯರ್ಥಿಗಳು ವಿಫಲವಾಗಿದಾರೆ ಎಂದು ಘೋಷಣೆ ಮಾಡಿದ್ದರು. ಇದರಿಂದ ನಿರಾಶನ್ಶ್ಗಿ ಡುಫೂ ಮತ್ತೆ ಈ ಪರೀಕ್ಷೆಯನ್ನು ಬರಿಯಲ್ಲಿಲ. ೭೫೨ರಲ್ಲಿ ಡುಫೂ ವೈವಾಹಿಕ ಜೀವನಕ್ಕೆ ಪ್ರವೇಶಿಸಿದನು. ೭೫೭ ಅನ್ನುವವರೆಗೆ ಇವರಿಗೆ ಐದು ಜನ ಮಕ್ಕಳಾಗಿದರು. ಡುಫೂಗೆ ಮೂರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದರು, ಅದರಲ್ಲಿ ಒಬ್ಬ ಮಗ ೭೫೫ರಲ್ಲಿ ತೀರಿಕೂಂಡುನು. ಡುಪೂಗೆ ೭೪೫ದಿಂದ ಆರೋಗ್ಯಾದ ಸಮಸ್ಯ ಕಾಡತೋಡಗಿತ್ತು. ನಂತರ ಡುಫೂ ಇದ ಪ್ರದೇಶದಲ್ಲಿ ದೂಡ್ದ ಪ್ರವಾಹ ಬಂದು ಎಲ್ಲ ಜನರು ಕಷ್ಟದಲ್ಲಿ ಸಿಲುಕಿದರು, ಆಗಾ ಡುಫೂಗೆ ತನ್ನ ಕುಟುಂಬವನ್ನು ಸ್ಥಳಾಂತರ ಮಾಡಬೇಕಾದ ಪರಿಸ್ಥಿತಿ ಬಂದಿತ್ತು.

 
ಟ್ಯಾಂಗ್ ಸಾಮ್ರಾಜ್ಯ
 
ಡುಫೂನ ಕಾಲದಲ್ಲಿನ ಚೀನಾ ದೇಶ

755 ರಲ್ಲಿ, ಅವರು ಯುವರಾಜ ಅರಮನೆ ಹಕ್ಕು ಕಮಾಂಡೆಂಟ್ ಕಚೇರಿಯಲ್ಲಿ ನೋಂದಣಿ ಮಾಹಿತಿ ಅಪಾಯಿಂಟ್ಮೆಂಟ್ ಪಡೆದರು. ಆದರೆ ಆನ್ ಲುಶಾನ್ ದಂಗೆ ಪ್ರಾರಂಭವಾಯಿತ್ತು , ಆದ್ದರಿಂದ ಅವನು ತನ್ನು ಕೆಲಸ ಪ್ರಾರಂಭಿಸುವ ಮೂದಲೆ ಅವನ ಕೆಲಸ ಮುಗಿದುಹೋಯಿತ್ತು.

 


ಆನ್ ಲುಶಾನ್ ದಂಗೆ

ಬದಲಾಯಿಸಿ
 
ಡುಫೂ



೭೫೫ ಡಿಸೆಂಬರ್ ದಲ್ಲಿ ಆನ್ ಲುಶಾನ್ ದಂಗೆ ಪ್ರಾರಂಭವಾಯಿತು, ಸುಮಾರು ಎಂಟು ವರ್ಷಗಳ ಕಾಲ ಈ ದಂಗೆ ಮುಂದುವರೆಯಿತ್ತು. ೭೫೪ರ ಜನಗಣತಿಯ ಪ್ರಕಾರ ೫೨.೯ ಮಿಲಿಯನ್ ಜನ ಚೀನಾದಲ್ಲಿ ಇದ್ದರು, ಆದರೆ ಹತ್ತು ವರ್ಷಗಳ ನಂತರ ಜನಗಣತಿಯ ಮಾಹಿತಿಯ ಪ್ರಕಾರ ಕೇವಲ ೧೬.೭ ಮಿಲಿಯನ್ ಜನ ಮಾತ್ರ ಇದ್ದರು. ಇದರ ಅರ್ಥ ಆನ್ ಲುಶಾನ್ ದಂಗೆಯಿಂದ ತುಂಬಾ ಜನ ತಮ್ಮ ಪ್ರಾಣವನ್ನು ಕಳೆದುಕೂಂಡರು ಹಾಗೂ ಹಲವಾರು ಜನ ದಂಗೆಯ ಸಮಯದಲ್ಲಿ ಸ್ಥಳಾಂತರವಾಗಿದರು. ಈ ಸಮಯದಲ್ಲಿ ಡುಫೂನ ಜೀವನ ಒಬ್ಬ ಸಂಚಾರಿಯ ಜೀವನವಾಗಿ ಹೋಗಿತ್ತು, ಕ್ಷಾಮದ ಪರಿಸ್ಥಿತಿಯು ಅವನ ಅಸಮಾದಾನಕ್ಕೆ ಕಾರಣವಾಗಿತ್ತು. ಈ ಒಂದು ಅತೃಪ್ತಿಯ ಜೀವನವೇ ಅವನನ್ನು ಒಬ್ಬ ಕವಿಯನಾಗಿ ಮಾಡಿತ್ತು. ದಂಗೆಯ ಸಮಯದಲ್ಲಿ ತನ್ನ ಮುದ್ದಿನ ಕೊನೆಯ ಮಗನನ್ನು ಡುಫೂ ಕಳೆದು ಕೊಂಡನು. ಡುಫೂ ತನ್ನ ಕವಿತೆಗಳ ಮೂಲಕ ದಂಗೆಯಿಂದ ಜನರಿಗೆ ಆಗುತ್ತಿದ ನೋವಿನ ಬಗ್ಗೆ ಹೇಳುತ್ತಿದ್ದನು. ಡುಫೂಗೆ ತನ್ನ ದುಃಖಕಿಂತ ಬೇರೆಯವರ ದುಃಖದ ಬಗ್ಗೆ ಚಿಂತೆ ಹಾಗೂ ಕಾಳಜಿ ಇತ್ತು.ಡುಫೂ ತನ್ನ ಕೂನೆಯ ದಿನಗಳನ್ನು ಚಾಂಗಸಾನಲ್ಲಿ ಕಳೆದನ್ನು, ೭೭೦ರಲ್ಲಿ ಆತ ಚಾಂಗಸಾನಲ್ಲಿ ತೀರಿಕೊಂಡನು.



ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖನಗಳು

ಬದಲಾಯಿಸಿ
"https://kn.wikipedia.org/w/index.php?title=ಡುಫೂ&oldid=1115967" ಇಂದ ಪಡೆಯಲ್ಪಟ್ಟಿದೆ