ಸಿ. ಆರ್. ಚಂದ್ರಶೇಖರ್

(ಡಾ. ಸಿ. ಆರ್. ಚಂದ್ರಶೇಖರ್ ಇಂದ ಪುನರ್ನಿರ್ದೇಶಿತ)

ಸಿ. ಆರ್. ಚಂದ್ರಶೇಖರ್ ಅವರು ಮಾನಸಿಕ ಆರೋಗ್ಯ ತಜ್ಞರು. ಬೆಂಗಳೂರಿನ ನಿಮ್ಹಾನ್ಸ್(NIMHANS)ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. [೧]. ಇವರು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ದೆವ್ವ, ಭೂತ, ಭಾನಾಮತಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಆ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ನಡೆಸಿದ್ದಾರೆ [೨]. ಸಾವಿರಾರು ಭಾಷಣಗಳನ್ನು ನೀಡಿದ್ದಾರೆ. ೭೫೦ಕ್ಕೂ ಹೆಚ್ಚು ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ೮೫ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಿ.ಆರ್.ಸಿ ಯವರು ಮಾನಸಿಕ ಆರೋಗ್ಯ, ಸಾಮಾನ್ಯ ಆರೋಗ್ಯ, ಲೈಂಗಿಕ ವಿಜ್ಞಾನ, ವೈಚಾರಿಕ ಸಾಹಿತ್ಯ, ಕಾದಂಬರಿ, ಸಣ್ಣ ಕತೆ, ಅನುವಾದ ಸಾಹಿತ್ಯ ಮುಂತಾದ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ೧೯೮೬ರಲ್ಲೇ ಸ್ಥಾಪಿತವಾಗಿದ್ದ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿಗೆ ೧೯೯೪ರಲ್ಲಿ ಪುನಃಶ್ಚೇತನ ನೀಡಿದರು. ಹಲವಾರು ವಿದೇಶಗಳಿಗೆ ತಜ್ಞ ವೈದ್ಯರಾಗಿಯೂ ಮತ್ತು ಪ್ರವಾಸಿಗರಾಗಿಯೂ ಹೋಗಿಬಂದಿದ್ದಾರೆ.

ವೈಯಕ್ತಿಕ ವಿವರಗಳು ಬದಲಾಯಿಸಿ

  • ಜನನ: ೧೨-೧೨-೧೯೪೮, ಬೆಂಗಳೂರು
  • ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾಭ್ಯಾಸ: ಸರ್ಕಾರಿ ಶಾಲೆಗಳು, ಚನ್ನಪಟ್ಟಣ, ೧೯೬೪
  • ಪಿ.ಯು.ಸಿ: ಸರ್ಕಾರಿ ಕಲೆ ಮತ್ತು ವಿಜ್ಞಾನ ಕಾಲೇಜು, ಬೆಂಗಳೂರು, ೧೯೬೬-೬೭
  • ಎಂ.ಬಿ.ಬಿ.ಎಸ್: ಬೆಂಗಳೂರು ವೈದ್ಯಕೀಯ ಕಾಲೇಜು, ಬೆಂಗಳೂರು, ೧೯೬೭-೭೩
  • ಪಿಪಿಸಿ: ೮ನೇ ರ‍್ಯಾಂಕ್
  • ಬೆಂಗಳೂರು ಡಾ|| ಎಚ್.ಎಸ್.ನಾರಾಯಣ್, ಡಾ||ಜಿ.ಎನ್.ನಾರಾಯಣ ರೆಡ್ಡಿಯವರ ಪ್ರೋತ್ಸಾಹ ಮಾನಸಿಕ ಆಸ್ಪತ್ರೆಯಲ್ಲಿ ’ಆನರರಿ ಸೀನಿಯರ್ ರೆಸಿಡೆಂಟ್’ ಡಾಕ್ಟರಾಗಿ ನೇಮಕ, ೧೯೭೪
  • ನಿಮ್ಹಾನ್ಸ್ ನಲ್ಲಿ ಡಿ.ಪಿ.ಎಂ. ಪದವಿಗೆ ತರಬೇತಿ, ೧೯೭೫-೭೬
  • ಐಸಿಎಂಆರ್ ರಿಸರ್ಚ್ ಅಸಿಸ್ಟೆಂಟ್, ೧೯೭೭
  • ನಿಮ್ಹಾನ್ಸ್ ನಲ್ಲಿ ಎಂ.ಡಿ. (ಮನೋವೈದ್ಯಕೀಯ), ೧೯೭೭-೭೯

ಸಾಹಿತ್ಯ ರಚನೆ ಬದಲಾಯಿಸಿ

ಇವುಗಳಲ್ಲಿ ೩೦ಕ್ಕೂ ಹೆಚ್ಚು ಪುಸ್ತಕಗಳು ಮರು ಮುದ್ರಣಗಳನ್ನು ಕಂಡಿವೆ. ತೆಲುಗಿಗೆ ಅನುವಾದವಾಗಿರುವ ನಾಲ್ಕು ಕೃತಿಗಳು ನಾಲ್ಕು ಮುದ್ರಣಗಳಾಗಿವೆ. ಕನ್ನಡದ ಬಾನಾಮತಿ ೭ ಮುದ್ರಣಗಳನ್ನು ಕಂಡಿದ್ದರೆ ’ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಿ’ ೬ ಮುದ್ರಣಗಳನ್ನು ಕಂಡಿದೆ.ಇಂಗ್ಲೀಷಿನಲ್ಲೂ ಸಹ ೧೦-೧೧ ಪುಸ್ತಕಗಳನ್ನು, ಕೈಪಿಡಿಗಳನ್ನು ರಚಿಸಿದ್ದಾರೆ.

ಮಾನಸಿಕ ಆರೋಗ್ಯ ಬದಲಾಯಿಸಿ

  1. ’ಮಗು, ಮನಸ್ಸು ಮತ್ತು ಆರೋಗ್ಯ’, ೧೯೮೦, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ
  2. ’ಹದಿ ವಯಸ್ಸು, ಅಸ್ವಸ್ಥ ಮನಸ್ಸು’, ೧೯೮೧, ಕನ್ನಡ ಸಾಹಿತ್ಯ ಪರಿಷತ್ತು
  3. ’ಚಿತ್ತ ವೈಚಿತ್ರ್ಯ’, ೧೯೮೧, ಐಬಿಎಚ್ ಪ್ರಕಾಶನ, ಬೆಂಗಳೂರು
  4. ’ಮಾನಸಿಕ ಕಾಯಿಲೆ ಎಂದರೇನು’, ೧೯೮೧
  5. ’ಬುದ್ಧಿಮಾಂದ್ಯತೆ’, ೧೯೮೧, ಐಬಿಎಚ್ ಪ್ರಕಾಶನ, ಬೆಂಗಳೂರು
  6. ’ಮಾನಸಿಕ ಕಾಯಿಲೆಗಳು, ಚಿಕಿತ್ಸೆ’, ೧೯೮೩, ಕಿರಣ ಪ್ರಕಾಶನ, ಸಂಶಿ
  7. ’ಹುಚ್ಚು, ಒಂದು ಒಳನೋಟ’, ೧೯೮೪, ಐಬಿಎಚ್ ಪ್ರಕಾಶನ ಬೆಂಗಳೂರು
  8. ’ಖಿನ್ನತೆ ಕಾಯಿಲೆ’, ೧೯೮೪
  9. ’ಆತಂಕವನ್ನು ತಡೆಗಟ್ಟುವುದು ಹೇಗೆ?, ೧೯೮೪
  10. ’ಮಿದುಳಿನ ನ್ಯೂನತೆಗಳು’, ೧೯೮೪
  11. ’ಮಾದಕ ವಸ್ತುಗಳು, ನೋವು ನಲಿವು’, ೧೯೮೪
  12. ’ಮನಸ್ಸು, ಮಾನಸಿಕ ಅಸ್ವಸ್ಥತೆ’, ೧೯೮೫, ನಿಮ್ಹಾನ್ಸ್, ಬೆಂಗಳೂರು
  13. ’ಮನ ಮಂದಾರ’, ೧೯೮೬, ಐಬಿಎಚ್ ಪ್ರಕಾಶನ
  14. ’ನಿಮ್ಮ ಮಗುವಿನ ಮನಸ್ಸು’, ನವಕರ್ನಾಟಕ ಪ್ರಕಾಶನ
  15. ’ಮನೋರೋಗ: ನಿಮ್ಮ ನಂಬಿಕೆ ಎಷ್ಟು ಸರಿ, ಎಷ್ಟು ತಪ್ಪು?’, ೧೯೮೬
  16. ’ಮನೋವಿಜ್ಞಾನದ ಧೃವತಾರೆಗಳು’ ೧೯೮೬, ಪ್ರತಾಪ ಪ್ರಕಾಶನ, ಮೈಸೂರು
  17. ’ಸಾಮಾಜಿಕೆ ನಂಬಿಕೆಗಳು ಮತ್ತು ಮಾನಸಿಕ ಆರೋಗ್ಯ’ ೧೯೮೬, ನಿಮ್ಹಾನ್ಸ್, ಬೆಂಗಳೂರು
  18. ’ಹದಿಹರೆಯ’ ೧೯೮೬, ನವಕರ್ನಾಟಕ ಪ್ರಕಾಶನ
  19. ’ಮನೋರೋಗಕ್ಕೆ ಮದ್ದು’, ೧೯೮೭, ಪ್ರತಾಪ ಪ್ರಕಾಶನ
  20. ’ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು’, ೧೯೮೭, ನವಕರ್ನಾಟಕ ಪ್ರಕಾಶನ
  21. ’ಮಾದಕ ವಸ್ತುಗಳ ಮಾಯಾಜಾಲ’,೧೯೮೭
  22. ’ಚಿತ್ತ ವಿಹಾರ’, ೧೯೮೭, ಐಬಿಎಚ್ ಪ್ರಕಾಶನ
  23. ’ತನು ಮನ’ ೧೯೮೮, ನವಕರ್ನಾಟಕ ಪ್ರಕಾಶನ
  24. ’ಕಿಶೋರ ಚಿತ್ತ’ ೧೯೮೮, ವಿದ್ಯಾವರ್ಧಕ ಸಂಘ, ಬೆಂಗಳೂರು
  25. ’ಬುದ್ಧಿಮಾಂದ್ಯ ಮಗುವಿನ ಆರೈಕೆ’ ೧೯೯೧, ನವಕರ್ನಾಟಕ ಪ್ರಕಾಶನ
  26. ’ಸ್ಕಿಜೊಫ್ರೀನಿಯಾ ರೋಗಿಗೆ ಮನೆಯಲ್ಲೇ ಆರೈಕೆ’, ೧೯೯೧, ನವಕರ್ನಾಟಕ ಪ್ರಕಾಶನ
  27. ’ಮದ್ಯಪಾನ ನೋವು, ನಲಿವು, ನಂಬಿಕೆ, ೧೯೯೧, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ
  28. ’ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ’ ೧೯೯೨
  29. ’ಖಿನ್ನತೆ ಎಂಬ ಕಾಯಿಲೆ’, ೧೯೯೨
  30. ಮನೋರೋಗಕ್ಕೆ ಚಿಕಿತ್ಸೆ ಏನು?’ ೧೯೯೨
  31. ’ನಿದ್ರೆ ಮತ್ತು ಕನಸುಗಳು’, ೧೯೯೨
  32. ’ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ’ ೧೯೯೨
  33. ’ಉಲ್ಲಾಸ-ಮಾನಸ’ ೧೯೯೨, ಲೋಕ ಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ
  34. ’ಮಿದುಳು ಮತ್ತು ಮನಸ್ಸು’ ೧೯೯೨, ಕನ್ನಡ ವಿಜ್ಞಾನ ಪರಿಷತ್ತು, ಬೆಂಗಳೂರು
  35. ’ಶಾಲಾ ಮಕ್ಕಳ ಮಾನಸಿಕ ಸಮಸ್ಯೆಗಳು’ ೧೯೯೩, ನವಕರ್ನಾಟಕ ಪ್ರಕಾಶನ
  36. ’ಮೂರ್ಛೆರೋಗಕ್ಕೆ ಮದ್ದು’, ೧೯೯೩, ಲೋಕಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ
  37. ’ಮಾನಸಿಕ ಕಾಯಿಲೆಗಳು’, ೧೯೯೪, ಕನ್ನಡ ವಿಶ್ವವಿದ್ಯಾಲಯ, ಹಂಪಿ
  38. ’ಬುದ್ದಿಮಾಂದ್ಯ ಮಕ್ಕಳ ಲಾಲನೆ-ಪಾಲನೆ’, ೧೯೯೪, ನವಕರ್ನಾಟಕ ಪ್ರಕಾಶನ
  39. ’ಚಿತ್ರಕಲೆ ಮತ್ತು ಮನೋವಿಕಾಸ’, ಲಲಿತಕಲಾ ಅಕಾಡೆಮಿ, ಕರ್ನಾಟಕ
  40. ’ಆಪ್ತಸಲಹೆ-ಸಮಾಧಾನ’ ೧೯೯೬, ನವಕರ್ನಾಟಕ ಪ್ರಕಾಶನ
  41. ’ಕಷ್ಟ ಮನಸ್ಸಿಗೆ ಕಾಯಿಲೆ ದೇಹಕ್ಕೆ’ ೧೯೯೬, ನವಕರ್ನಾಟಕ ಪ್ರಕಾಶನ
  42. ’ಮನಸ್ಸು ಎಂದರೆ ಏನಪ್ಪಾ?’, ೧೯೯೬, ನಿರ್ಮಲಾ ಪ್ರಕಾಶನ, ಬೆಂಗಳೂರು
  43. ’ಮನಸ್ಸು ೧೦೮ ಪ್ರಶ್ನೆಗಳು’, ೧೯೯೭, ನವಕರ್ನಾಟಕ ಪ್ರಕಾಶನ
  44. ’ವಿದ್ಯಾರ್ಥಿಗಳ ಮಾನಸಿಕ ಸಮಸ್ಯೆಗಳು’, ೧೯೯೬, ಕನ್ನಡ ಪುಸ್ತಕ ಪ್ರಾಧಿಕಾರ
  45. ’ಓ ಮನಸೇ’ ೧೯೯೭, ಕರ್ಮವೀರ ತಿಂಗಳ ಬೋನಸ್ ಪುಸ್ತಕ

ಸಾಮಾನ್ಯ ಆರೋಗ್ಯ ಬದಲಾಯಿಸಿ

  1. ’ಮಿದುಳು’, ೧೯೭೯, ಕನ್ನಡ ಸಾಹಿತ್ಯ ಪರಿಷತ್ತು
  2. ’ಸೃಷ್ಟಿಯ ಅದ್ಭುತ ಮಿದುಳು’, ೧೯೮೬, ನವಕರ್ನಾಟಕ ಪ್ರಕಾಶನ
  3. ’ನಮ್ಮ ಶರೀರ ಅದರ ರಕ್ಷಣೆ’ ೧೯೯೨
  4. ’ಪ್ರಥಮ ಚಿಕಿತ್ಸೆ’, ೧೯೯೩, ಓರಿಯಂಟ್ ಲಾಂಗ್ಸ್ ಮನ್, ಬೆಂಗಳೂರು
  5. ’ಸದಾ ಆರೋಗ್ಯವಾಗಿರುವುದು ಹೇಗೆ?, ೧೯೯೪, ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು
  6. ’ಮಿದುಳು, ಮಿದುಳಿನ ನ್ಯೂನತೆ ಮತ್ತು ತಲೆನೋವು’, ೧೯೯೪, ನವಕರ್ನಾಟಕ ಪ್ರಕಾಶನ
  7. ’ನರಮಂಡಲದ ರೋಗಗಳು’, ೧೯೯೪
  8. ’ಸಾಮಾನ್ಯ ರೋಗ ಲಕ್ಷಣಗಳು’, ೧೯೯೫
  9. ’ಜನಾರೋಗ್ಯ’, ೧೯೯೭
  10. ’ತಲೆನೋವು ಏಕೆ? ಪರಿಹಾರ ಎಂತು?, ೧೯೯೭
  11. ’ಅಂಗವಿಕಲತೆ ಏಕೆ? ಪರಿಹಾರ ಏನು?, ೧೯೯೮, ಕರ್ಮವೀರ, ಬೆಂಗಳೂರು

ಲೈಂಗಿಕ ವಿಜ್ಞಾನ ಬದಲಾಯಿಸಿ

  1. ’ಲೈಂಗಿಕ ದುರ್ಬಲತೆ: ಕಾರಣ, ಪರಿಹಾರ’, ಹರೀಶ ಪ್ರಕಾಶನ, ಬೆಂಗಳೂರು
  2. ’ಲೈಂಗಿಕ ಶಿಕ್ಷಣ ೧೦೦ ಪ್ರಶ್ನೋತ್ತರಗಳು’ ೧೯೮೩
  3. ’ಮೈ-ಮನಸ್ಸು’, ೧೯೮೬, ಐಬಿಎಚ್ ಪ್ರಕಾಶನ
  4. ’ಸುಖ ದಾಂಪತ್ಯ’, ೧೯೮೭, ನವಕರ್ನಾಟಕ ಪ್ರಕಾಶನ
  5. ’ಲೈಂಗಿಕ ಅರಿವು: ೧೦೬ ಪ್ರಶ್ನೆಗಳು’, ೧೯೮೮
  6. ’ದಾಂಪತ್ಯ ಸಮಸ್ಯೆಗಳು’, ೧೯೯೨
  7. ’ಆರೋಗ್ಯ ದಾಂಪತ್ಯ ಜೀವನ’, ೧೯೯೫, ಭಾನು ಪ್ರಕಾಶನ, ಬೆಂಗಳೂರು

ವೈಚಾರಿಕ ಬದಲಾಯಿಸಿ

  1. ’ಬಾನಾಮತಿ’, ೧೯೮೨, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
  2. ’ಮೈಮೇಲೆ ದೇವರು ದೆವ್ವ ಬರುವುದೇ?’, ೧೯೮೩
  3. ’ಬಾನಾಮತಿ, ಮಾಟ, ಮಂತ್ರ ಇವೆಲ್ಲ ನಿಜವೇ?’, ೧೯೯೨, ಜ್ಞಾನ ವಿಜ್ಞಾನ ಜಾಥಾ
  4. ’ಅತೀಂದ್ರಿಯ ಶಕ್ತಿ ಇರುವುದು ನಿಜವೇ?’, ೧೯೯೩, ಲೋಕ ಶಿಕ್ಷಣ ಟ್ರಸ್ಟ್
  5. ’ದೆವ್ವ ಭೂತಗಳು ಇರುವುದು ನಿಜವೇ?’, ೧೯೯೪, ರಾಜ್ಯ ಸಂಪನ್ಮೂಲ ಮಂಡಳಿ
  6. ’ಪುನರ್ಜನ್ಮ ಇರುವುದು ನಿಜವೇ?’, ಭಾನು ಪ್ರಕಾಶನ
  7. ’ದೇವರು ದೆವ್ವ ಇರುವುದೇ, ಮೈಮೇಲೆ ಬರುವುದೇ?’, ನವಕರ್ನಾಟಕ ಪ್ರಕಾಶನ

ಕಾದಂಬರಿ ಬದಲಾಯಿಸಿ

  1. ’ಮನೆ ಮನಸ್ಸು, ೧೯೮೩, ಪ್ರಿಂಟರ್ಸ್ ಪ್ರಕಾಶನ, ಬೆಂಗಳೂರು
  2. ’ನೀಲಿತಾರೆ/ಎರಡನೆಯ ಹೆಂಡತಿ’ ೧೯೮೬, ಐಬಿಎಚ್ ಪ್ರಕಾಶನ
  3. ’ಪಚ್ಚೆಯುಂಗುರ/ಆತ್ಮಹತ್ಯೆ ಮಾಡಿಕೊಂಡವಳ ಪ್ರಕರಣ’, ೧೯೮೬
  4. ’ತಲೆ ತಪ್ಪಿಸಿಕೊಂಡವನು/ಕಾಣೆಯಾದವನ ಕಥೆ’, ೧೯೮೬
  5. ’ಕದಡಿದ ಮನಸ್ಸು’, ೧೯೯೦, ನವಕರ್ನಾಟಕ ಪ್ರಕಾಶನ

ಅನುವಾದ ಬದಲಾಯಿಸಿ

  1. ’ಬುದ್ಧಿಮಾಂದ್ಯ ಮಗುವಿಗೆ ಮನೆಯಲ್ಲೇ ತರಬೇತಿ’, ೧೯೮೨, ಬುದ್ಧಿಮಾಂದ್ಯ ಮಕ್ಕಳ ಕಲ್ಯಾಣ ಸಂಸ್ಥೆ, ನವದೆಹಲಿ
  2. ’ಲೈಂಗಿಕ ಶಕ್ತಿ’, ೧೯೯೪, ಐಬಿಎಚ್ ಪ್ರಕಾಶನ
  3. ’ಆಹಾರ-ಪರಿಸರ-ಆರೋಗ್ಯ’, ನವಕರ್ನಾಟಕ ಪ್ರಕಾಶನ, ಬೆಂಗಳೂರು
  4. ’ಏಡ್ಸ್ ರೋಗ ಎಂದರೇನು? ಅದರ ಜೊತೆ ಬದುಕುವುದು ಹೇಗೆ?’, ೧೯೯೫, ನವಕರ್ನಾಟಕ ಪ್ರಕಾಶನ

ತೆಲುಗಿಗೆ ಅನುವಾದಗೊಂಡಿರುವ ಪುಸ್ತಕಗಳು ಬದಲಾಯಿಸಿ

  1. ’ಮಹಿಳೆಯಲ್ಲೋ ಮಾನಸಿಕ ಸಮಸ್ಯಗಲು’, ೧೯೮೮
  2. ’ಮೀ ಪಿಲ್ಲಲ ಮನಸ್ಸು’, ೧೯೮೮
  3. ’ಮಾನಸಿಕ ವ್ಯಾಧುಲು’, ೧೯೯೦
  4. ’ಯೌವನಂಲೋ ಮಾನಸಿಕ ಸಮಸ್ಯಲು’, ೧೯೯೦

ನಾಟಕಗಳ ಪ್ರಕಟಣೆ ಹಾಗೂ ರಂಗ ಪ್ರದರ್ಶನ ಬದಲಾಯಿಸಿ

  1. ’ಪರನಾರಿ ಸಂಗ ಬೇಡೆಲೋ ನನ್ನ ರಾಯ (ಇದು ರೇಡಿಯೋ ನಾಟವಾಗಿಯೂ ಪ್ರಸಾರಗೊಂಡಿದೆ)
  2. ’ನಾರದರ ಪರದಾಟ’
  3. ’ಕೃಷ್ಣಾಯಣ’
  4. ’ವೈದ್ಯೋನಾರಾಯಣೋ ಹರಿಃ’

ಸಂಪಾದನೆ ಬದಲಾಯಿಸಿ

  1. ’ಆರೋಗ್ಯ ಸಹಾಯಕರಿಗೆ ಮಾನಸಿಕ ಆರೋಗ್ಯ ಕೈಪಿಡಿ’

ಇಂಗ್ಲೀಷ್ ಕೃತಿಗಳು ಬದಲಾಯಿಸಿ

  1. ಮಾನಸಿಕ ಆರೋಗ್ಯ ಅನಾರೋಗ್ಯ ಚಿಕಿತ್ಸೆ ಬಗ್ಗೆ ವೈದ್ಯರು, ಆರೋಗ್ಯಕಾರ್ಯಕರ್ತರು ಮತ್ತು ಜನಸಾಮಾನ್ಯರಿಗೆ ಕೈಪಿಡಿಗಳು ಮತ್ತು ಪುಸ್ತಕಗಳು
  2. Mental healthcare by primary care doctors, 1994
  3. Manual of psychotherapy for Medical officers, 1990
  4. Training of PHC personnel in mental healthcare - NIMHANS experiences, 1990
  5. Bhopal disaster: Manual of mental health care for medical officers, 1987
  6. Manual of mental health care for multipurpose worker, 1988
  7. Manual on students conselling for college teachers

ಪ್ರಶಸ್ತಿಗಳು ಬದಲಾಯಿಸಿ

  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ
  • ಡಾ. ಎಸ್.ಎಸ್. ಜನರಾಂ ಪ್ರಶಸ್ತಿ
  • ಡಾ. ಎಚ್.ನರಸಿಂಹಯ್ಯ ದತ್ತಿ ಬಹುಮಾನ
  • ಭಾರತೀಯ ವೈದ್ಯಕೀಯ ಸಂಘದ ಡಾ. ಬಿ.ಸಿ.ರಾಯ್ ವೈದ್ಯ ದಿನಾಚರಣೆ ಪ್ರಶಸ್ತಿ
  • ಅಮೆರಿಕಾದವರಿಂದ ೧೯೯೭ ವರ್ಷದ ವ್ಯಕ್ತಿ
  • ಕನ್ನಡ ಪುಸ್ತಕ ಪ್ರಾಧಿಕಾರದ 'ಡಾ.ಅನುಪಮಾ ನಿರಂಜನ ವೈದ್ಯಕೀಯ ವಿಜ್ಞಾನ ಸಾಹಿತ್ಯ ಪ್ರಶಸ್ತಿ', 2012-13 [೩] [೪]
  • ಕೇಂದ್ರ ಸರ್ಕಾರದ ರಾಷ್ಟ್ರೀಯ ಪುರಸ್ಕಾರಕ್ಕೆ (ಎನ್‌ಸಿಎಸ್‌ಟಿಸಿ), 2001 [೫]
  • ಕೇಂದ್ರ ಸರಕಾರದ ಪದ್ಮಶ್ರೀ ಪುರಸ್ಕಾರ (೨೦೨೪)[೬]

ಉಲ್ಲೇಖಗಳು ಬದಲಾಯಿಸಿ