ರಾಮದಾಸ ಮಾಧವ ಪೈ

(ಡಾ. ರಾಮದಾಸ ಮಾಧವ ಪೈ ಇಂದ ಪುನರ್ನಿರ್ದೇಶಿತ)

ಆಧುನಿಕ ಮಣಿಪಾಲ ವಿಶ್ವವಿದ್ಯಾನಿಲಯದ ವಿಸ್ತಾರವಾದ ಶಿಕ್ಷಣ ಸಾಮ್ರಾಜ್ಯದ ಮಹಾಧ್ಯಕ್ಷ, ಮತ್ತು ಕುಲಾಧಿಕಾರಿ ಡಾ. ರಾಮದಾಸ ಎಂ ಪೈ ರವರು ಒಬ್ಬ ಸಶಕ್ತ ಹಾಗೂ ದೂರದೃಷ್ಟಿಯ ವೈದ್ಯಾಧಿಕಾರಿಯಾಗಿ ಎಲ್ಲರಿಗೂ ಮಾದರಿಯಾದ ಜೀವನವನ್ನು ನಡೆಸುತ್ತಿದ್ದಾರೆ.

ಜನನ,ಹಾಗೂ ವಿದ್ಯಾಭ್ಯಾಸ

ಬದಲಾಯಿಸಿ

ಡಾ ಮಾಧವ ಪೈ ಮತ್ತು ಶ್ರೀಮತಿ ಶಾರದಾ ಪೈರವರ ದ್ವಿತೀಯ ಪುತ್ರರಾಗಿ ಸನ್, ೧೯೩೫ ರಲ್ಲಿ ಜನಿಸಿದರು. ಅವರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣಗಳು ಮಣಿಪಾಲ್ ಹಾಗೂ ಉಡುಪಿಗಳಲ್ಲೇ ನಡೆಯಿತು. ತಂದೆಯವರು ಸ್ಥಾಪಿಸಿದ ಉಡುಪಿಯ ಎಂ.ಜಿ.ಎಂ ಕಾಲೇಜಿ,ನಲ್ಲಿ ಇಂಟರ್ಮೀಡಿಯೇಟ್ ಶಿಕ್ಷಣ ಮುಗಿಸಿ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ನಲ್ಲಿ ಎರಡನೇ ಬ್ಯಾಚಿನ ವೈದ್ಯಕೀಯ ವಿದ್ಯಾರ್ಥಿಯಾಗಿ ೧೯೫೮ ರಲ್ಲಿ 'ಎಂ.ಬಿ.ಬಿ.ಎಸ್. ಪದವಿ'ಯನ್ನು ಗಳಿಸಿದರು. ಮುಂದೆ ನವದೆಹಲಿಯ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಕೆಲಕಾಲ ತಮ್ಮ ತಂದೆಯವರಿಗೆ ಆಸ್ಪತ್ರೆಯ ಆಡಳಿತ ಕಾರ್ಯಗಳಲ್ಲಿ ನೆರವಾದರು. ಹೆಚ್ಚಿನ ಕಲಿಕೆಗಾಗಿ ಅಮೆರಿಕದ ಫಿಲೆಡೆಲ್ಫಿಯಾದ ಆಲ್ಬರ್ಟ್ ಐನ್ ಸ್ಟೈನ್ ಮೆಡಿಕಲ್ ಸೆಂಟರ್ ನಿಂದ ವೈದ್ಯಾಲಯ ಕಾರ್ಯತಂತ್ರಗಳಲ್ಲಿ ಮತ್ತಷು ಹೆಚ್ಚಿನ ಪ್ರಶಿಕ್ಷಣವನ್ನು ಗಳಿಸಿ ಸ್ವದೇಶಕ್ಕೆ ವಾಪಸ್ಸಾದರು.

ವೈದ್ಯಕೀಯ ಸೌಲಭ್ಯಗಳ ವಿಸ್ತರಣೆ

ಬದಲಾಯಿಸಿ

ವೈದ್ಯಕೀಯ ಜಗತ್ತಿನ ಏನೆಲ್ಲ ಸಾಧ್ಯತೆಗಳನ್ನುಕಂಡುಕೊಂಡು ಹೊಸ ಜ್ಞಾನ ಶಾಖೆಗಳಾದ ರೋಗಪರೀಕ್ಷೆ, ರೋಗನಿವಾರಣೆ ಮುಂತಾದ ವಿಭಾಗಗಳಲ್ಲಿ ಅತ್ಯಾಧುನಿಕ ಉಪಕರಣಗಳನ್ನು ವಿದೇಶಗಳಿಂದ ತಂದು ಸ್ಥಾಪಿಸುವ ನಿಟ್ಟಿನಲ್ಲಿ ಮುಂದುವರೆದರು. ಈ ಉಪಾಯಗಳಿಗೆ ಅಳವಡಿಸಲಾಗಿರುವ ತಕ್ಕ ತಂತ್ರಜ್ಞಾನವನ್ನು ಮೇಲ್ನೋಡಿಕೊಳ್ಳಲು ಮತ್ತು ನಿರ್ವಹಿಸಲು ವೈದ್ಯವಿಶಾರದರನ್ನು ತಯಾರಿಸುವ ನಿಟ್ಟಿನಲ್ಲಿ ವಿಶೇಷ ತಜ್ಞರೊಡನೆ ಪರಾಮರ್ಶೆಮಾಡಿ ಕೆಲಸಮಾಡಿದರು. ಮಣಿಪಾಲ್ ನಂತಹ, ಉಡುಪಿಯಿಂದ ದೂರದಲ್ಲಿ ಹಾಗೂ ಎತ್ತರ ಪ್ರದೇಶಕ್ಕೆ ತಕ್ಕ ಸಮಯಕ್ಕೆ ಹೊಂದಿಸಿಕೊಂಡು ತರುವ ವ್ಯವಸ್ಥೆ ಮಾಡಲಾಯಿತು. ಹೀಗೆ ನಿಷ್ಠೆಯಿಂದ ದುಡಿದ ಫಲವಾಗಿ ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆ ಗುಣಾತ್ಮಕತೆಯಲ್ಲಿ ರಾಷ್ಟ್ರೀಯ ಸ್ತರದಲ್ಲಿ ಮೊದಲನೆಯ ಸಾಲಿನಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿತು. ೧೯೫೦ ರಲ್ಲೇ 'ಮಣಿಪಾಲ್ ನ ಕಸ್ತೂರ್ಬಾ ಮೆಡಿಕಲ್ ಕಾಲೇಜ್','ಮಂಗಳೂರಿನಲ್ಲಿ ಕಾಲೇಜೂ' ಸಹಿತ ಪ್ರಾರಂಭವಾಗಿತ್ತು.'ರಾಮದಾಸ್ ಪೈ' [] ರವರು ಅವುಗಳ ವ್ಯಾಪ್ತಿಯನ್ನು ಹೆಚ್ಚಿಸಿದರು. 'ಬೆಂಗಳೂರಿನ ಮಣಿಪಾಲ್ ಸೂಪರ್ ಸ್ಪೆಶ್ಯಾಲಿಟಿ ಆಸ್ಪತ್ರೆ ಇದಕ್ಕೆ ಒಂದು ಉದಾಹರಣೆಯಾಗಿದೆ. ಆ ತರಹೆಯ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ ಇನ್ನೂ ಕೆಲವು ಆಸ್ಪತ್ರೆಗಳಿವೆ. ಮಣಿಪಾಲ್ ಸಮೀಪದ ಚಿಕ್ಕ ನಗರ,ಹಳ್ಳಿಗಳಲ್ಲೂ ಮಣಿಪಾಲ್ ಸಮೂಹದಿಂದ ಪ್ರಾಯೋಜಿತವಾದ ಸುವ್ಯವಸ್ಥಿತ ಚಿಕಿತ್ಸಾಲಯಗಳಿವೆ. ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ 'ಕಾರ್ಕಳ'ದಲ್ಲಿ ಇದೆ. ಜನಸಾಮಾನ್ಯರಿಗೂ ಸೂಕ್ತ ಸೌಲಭ್ಯಗಳಿರುವ ಸಂಪರ್ಕ ಸಾಧ್ಯವಾಗಬೇಕೆಂಬುದು 'ಮಾಧವ ಪೈ'ರವರ ಆಶೆಯಾಗಿದೆ.

ಸರಳ ವ್ಯಕ್ತಿತ್ವ ಹಾಗೂ ಸ್ಪಷ್ಟ ನಿಲವುಗಳು

ಬದಲಾಯಿಸಿ

ಅತ್ಯಂತ ಸರಳಾತಿಸರಳ ವ್ಯಕ್ತಿತ್ವದ ಬಹುದೊಡ್ಡ ಶಿಕ್ಷಣ ಸಾಮ್ರಾಜ್ಯದ ಪ್ರಭುವಾಗಿದ್ದಾಗ್ಯೂ ಅಹಂಕಾರ ದರ್ಪಗಳು ಅವರ ಹತ್ತಿರವೂ ಸುಳಿದಿಲ್ಲ. ಅವರಿಗೆ ಯಾವುದೇ ವ್ಯಸನಗಳಿಲ್ಲ. ಆದರೆ ಹವ್ಯಾಸಗಳು ಹಲವು. ಅವೆಲ್ಲಾ ತಮ್ಮ ಸಂಸ್ಥೆಯ ಮೂಲಸೌಲಭ್ಯಗಳು, ಸರಿಯಾದ ಶಿಕ್ಷಣ ಪದ್ಧತಿಗಳು ಬಡ ಮಕ್ಕಳಿಗೂ ಸಿಕ್ಕು,ಅವರಿಗೆ ನೆರವಾಗುವಲ್ಲಿ ತಮ್ಮ ಪಾತ್ರವನ್ನು ರೂಪಿಸಿಕೊಳ್ಳುವ ಬಗ್ಗೆ ಸದಾ ಚಿಂತೆ. 'ಮಣಿಪಾಲ್ ನ ಶಿಕ್ಷಣ ಸಂಸ್ಥೆಗಳು' ದೇಶದ ಅತ್ಯುತ್ತಮ ಕೇಂದ್ರಗಳಲ್ಲಿ ಒಂದಾಗಬೇಕು. ಹೆಚ್ಚು ಹೆಚ್ಚು ಬಡ,ಪ್ರತಿಭಾವಂತ ಮಕ್ಕಳು ತಮ್ಮ ಸಂಸ್ಥೆಯಲ್ಲಿ ಬಂದು, ಶಿಕ್ಷಣದ ಲಾಭವನ್ನು ಪಡೆಯಬೇಕು. ತೆರೆದ ಮನಸ್ಸು, ಜನರ ಮಾತುಗಳನ್ನು ಕೇಳಿಸಿಕೊಳ್ಳುವ ಸ್ವಭಾವ, ಆಸ್ತಿಕರಾದರೂ ಸದಾ 'ದೇವರಪೂಜೆ'ಯಲ್ಲಿ ಹೆಚ್ಚು ಸಮಯ ಕಳೆಯುವವರಲ್ಲ. ನ್ಯಾಯದೊರೆಯದಿದ್ದರೆ, ವ್ಯವಸ್ಥೆಯ ವಿರುದ್ಧ ಹೋರಾಡಲೂ ಸಿದ್ಧ. ತಮ್ಮ ಎಲ್ಲ ಕೆಲಸಗಳಲ್ಲೂ ಪಾರದರ್ಶಕತೆಯನ್ನು ಮೆಚ್ಚುವ ಹಾಗೂ ಅನ್ವಯಕ್ಕೆ ತರುವ, ತಮ್ಮ ದನಿಯನ್ನು ಎತ್ತರಿಸಿ ಸ್ಪಷ್ಟ ಸಮ್ಮತಿ ಇಲ್ಲವೇ ನಿರಾಕರಣೆಯನ್ನು ಸೂಚಿಸುವ ಸ್ವಭಾವ ಅವರದು. ದಿನವೂ ಅವರನ್ನು ಕಾಣಲುಬರುವ ಆಸಕ್ತರಿಗೆ, ಆಚಾರ ಸಂಹಿತೆಯನ್ನು ವಿಧಿಸಿಕೊಂಡಿಲ್ಲ.(Protocal)ಅವರು ಹೆಚ್ಚು ಸಮಯವನ್ನು ತಮ್ಮ ಸ್ವಗೃಹ,ಗೀತಾಂಜಲಿಯಲ್ಲಿ ಇಲ್ಲವೇ ವಿಶ್ವವಿದ್ಯಾಲಯದ ನಾಲ್ಕನೆಯ ಅಂತಸ್ತಿನ ಕಾರ್ಯಾಲಯದಲ್ಲಿ ಹಾಜರಿದ್ದು ಸ್ವಾಗತಿಸುತ್ತಾರೆ. ನಿಷ್ಟುರವಾದಿ. ಸಿಬ್ಬಂದಿಯ ವಿದ್ಯಾರ್ಥಿಗಳ ಪ್ರವೇಶ ನೀತಿ ಪದೋನ್ನತಿಗಳಲ್ಲಿ ಕ್ರಮಬದ್ಧ ತೀರ್ಮಾನ ಆಗೂ ಅಚರಣೆ. ಜೇಷ್ಟತೆಗೆ, ಗುಣಕ್ಕೆ ಪ್ರಧಾನ್ಯತೆ, ಜಾತಿ, ಬಂಧುತ್ವ, ಭಾಷೆ, ದೇಶಗಳೆಲ್ಲಾ ನಿಷಿದ್ಧ. ತಮ್ಮ ಒಬ್ಬನೇ ಮಗ,ರಂಜನ್ ಪೈ ರವರ ಅರ್ಹತಾ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದ ಪ್ರಯುಕ್ತ, 'ಕೆ.ಎಂ.ಸಿ'.ಯಲ್ಲಿ ಪ್ರವೇಶವನ್ನು ನಿರಾಕರಿಸಿದರು. ಮಗನನ್ನು 'ಮಣಿಪಾಲ್' ನಿಂದ ಹೊರಗಡೆ ಕಳಿಸಿ ಓದಿಸಿದರು.

'ಡಾ.ರಾಮದಾಸ ಮಾಧವ ಪೈರವರ ಪರಿವಾರ

ಬದಲಾಯಿಸಿ

ವಸಂತಿ ಪೈ, ಸಹಧರ್ಮಿಣಿ, ಪತಿಯ ಹಲವಾರು ಕಾರ್ಯ ಕ್ಷೇತ್ರಗಳಲ್ಲಿ ಸಹಭಾಗಿನಿ, ಮಗ, ರಂಜನ್ ಪೈ' ಮಣಿಪಾಲ್ ಆಸ್ಪತ್ರೆಯ, ಬೆಂಗಳೂರು ಘಟಕವನ್ನು ಸಕ್ಷಮವಾಗಿ ನಿರ್ವಹಿಸುತ್ತಿದ್ದಾರೆ. ರೇಖಾ, ಮತ್ತು ಶೈಲಾ, ಇಬ್ಬರು ಪುತ್ರಿಯರು ವೈದ್ಯಕೀಯ ಪದವೀಧರೆಯರು. ಅಮೆರಿಕಾದಲ್ಲಿ ತಮ್ಮ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದಾರೆ. ೪ ಮಂದಿ ಸೋದರರು, ಪಾಡುರಂಗ ಪೈ, ನಿಧನರಾಗಿದ್ದಾರೆ. ೬ ಜನ ಸೋದರಿಯರು ಡಾ. ರಾಮದಾಸ ಪೈರವರು ಅವರೆಲ್ಲರನ್ನೂ ಬೆಸೆಯುವ ಸ್ನೇಹ ಸರಪಳಿಯ ಕೊಂಡಿಯಾಗಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು

ಬದಲಾಯಿಸಿ
  • ೨೦೧೧- ಭಾರತ ಸರಕಾರದ ಪದ್ಮ ಭೂಷಣ ಪ್ರಶಸ್ತಿ
  • ೨೦೦೯-ಗೋಕರ್ಣಾ ಪರ್ತಗಾಳಿ ಮಠದ ಶ್ರೀಮದ್ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರಿಂದ ನವರತ್ನ ಪುರಸ್ಕಾರ
  • ೨೦೦೮- ಕುಮುಟಾದ ಕೆನರಾ ಕಾಲೇಜ್ ಸೊಸೈಟಿಯವರಿಂದ ಕೆನರಾ ರತ್ನ ಪ್ರಶಸ್ತಿ
  • ೨೦೦೭-ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ ಚಾಣಕ್ಯ ಪ್ರಶಸ್ತಿ
  • ೨೦೦೫-ಡೆಖ್ಖನ್ ಹೆರಾಲ್ಡ್ ಅವೆನ್ಯೂಸ್, ಜೀವಮಾನ ಸಾಧನೆ ಪುರಸ್ಕಾರ
  • ೨೦೦೪-ರಾಯಲ್ ಕಾಲೆಜ್ ಆಫ್ ಸರ್ಜನ್ಸ್ ಆಫ್ ಇಂಗ್ಲೆಂಡ್ ಗೌರವ ಫೆಲೋಸ್ಶಿಪ್
  • ೨೦೦೪-ಅರ್ನೆಸ್ಟ್ ಅಂಡ್ ಯಂಗ್ ಉದ್ಯಮ ಶೀಲ ಪ್ರಶಸ್ತಿ
  • ೧೯೯೯-ಗೌರವ ಪ್ರೊಫೆಸರ್ (ಅಂತಾರಾಷ್ಟ್ರೀಯ ಆರೋಗ್ಯ) ಮಿನ್ನಸೋಟ ವಿ.ವಿ.ಮೆಡಿಕಲ್ ಸ್ಕೂಲ್
  • ೧೯೯೮-ಗೌರವ ಡಾಕ್ಟೊರೇಟ್ (ಆಂಡ್ರ್ಯೂಸ್ ವಿ.ವಿ,ಯು.ಎಸ್.ಎ)
  • ೧೯೯೭-ಪ್ರತಿಷ್ಠಿತ ಬುದ್ಧಿಜೀವಿ ಮಣ್ಣಿನ ಮಗ ಪ್ರಶಸ್ತಿ-ಅಖಿಲ ಭಾರತ ಬುದ್ಧಿಜೀವಿಗಳ ಸಮ್ಮೇಳನ
  • ೧೯೯೬-ಗೌರವ ಡಾಕ್ಟರೇಟ್, ಮಿಲ್ ವಾಕಿ ಸ್ಕೂಲ್ ಆಫ್ ಇಂಜಿನಿಯರಿಂಗ್, ಯು.ಎಸ್.ಅ.
  • ೧೯೯೩-'ಡಾ.ಬಿ.ಸಿ.ರಾಯ್ ರಾಷ್ಟ್ರೀಯ ಪುರಸ್ಕಾರ',ಸಾಮೂಹಿಕ ಆರೋಗ್ಯ ಸೇವೆಗಾಗಿ ಭಾರತದ ರಾಷ್ಟ್ರಪತಿಗಳಿಂದ
  • ೧೯೮೨ ಮತ್ತು ೧೯೯೧-ಸಿಟಿ ಆಫ್ ಲೋಮಾ ಲಿಂಡಾ, ಯು.ಎಸ್.ಎ.ಯ 'ಕೀಲಿಕೈ ಪುರಸ್ಕಾರ'

ಉಲ್ಲೇಖಗಳು

ಬದಲಾಯಿಸಿ
  1. Padma Bhushan to Dr. Ramdas Pai - Visionary Par Excellance

ಬಾಹ್ಯ ಸಂಪರ್ಕಗಳು

ಬದಲಾಯಿಸಿ