ಲತಾ ರಾಜಶೇಖರ್

(ಡಾ.ಲತಾ ರಾಜಶೇಖರ್ ಇಂದ ಪುನರ್ನಿರ್ದೇಶಿತ)

ಡಾ. ಲತಾ ರಾಜಶೇಖರ ಅವರು ‘ಬುದ್ಧ ಮಹಾದರ್ಶನ’, ‘ಯೇಸು ಮಹಾದರ್ಶನ’, ‘ಬಸವ ಮಹಾದರ್ಶನ’, ‘ಮಹಾವೀರ ಮಹಾದರ್ಶನ’, ’ರಾಮ ಮಹಾದರ್ಶನ’ ಎಂಬ ಐದು ಮಹಾಕಾವ್ಯಗಳನ್ನು ರಚಿಸಿದ್ದಾರೆ.[] ಲತಾರವರ ಸಾಧನೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಡಾ. ಲತಾ ರಾಜಶೇಖರ್
ಡಾ. ಲತಾ ರಾಜಶೇಖರ್
ಜನನ1954 ಜೂನ್ 2
ಅಂಬಿಗರಹಳ್ಳಿ, ಕೆ ಆರ್ ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ
ವೃತ್ತಿಕವಯತ್ರಿ, ಲೇಖಕಿ.
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾನಿಲಯ
ಕಾಲ20ನೆಯ ಶತಮಾನ
ಪ್ರಕಾರ/ಶೈಲಿಸಣ್ಣಕತೆ, ಕವಿತೆ, ವಿಮರ್ಶೆ, ಮಹಾಕಾವ್ಯ
ವಿಷಯವಿಶ್ವಶಾಂತಿ, ಪ್ರಕೃತಿ, ಅಧ್ಯಾತ್ಮ, ವಿಚಾರ
ಸಾಹಿತ್ಯ ಚಳುವಳಿನವೋದಯ
ಬಾಳ ಸಂಗಾತಿಡಾ. ರಾಜಶೇಖರ್
ಮಕ್ಕಳು3

ಜನನ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

ಲತಾ ಅವರು ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಯಲ್ಲಿ 1954 ಜೂನ್ 2 ರಂದು ಎಂ. ಕೃಷ್ಣೇಗೌಡ ಮತ್ತು ಕೆ. ಎಸ್. ಕಾವೇರಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದರು. ಉನ್ನತ ಶಿಕ್ಷಣದಲ್ಲಿ ಎಂ. ಎ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. ಇವರು ಮೈಸೂರು ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ. ಮುಗಿಸಿ ಡಾಕ್ಟರೇಟ್ ಪದವಿಗೆ ಪಡೆದರು. ‘ಕೋಗಿಲೆ ಕೂಗಿದಂತೆ’ ಮೊದಲ ಕವನ ಸಂಕಲನಕ್ಕೆ ಮಂಗಳಾ ಕಲಾವೇದಿಕೆಯ ಕುವೆಂಪು ಸಾಹಿತ್ಯ ಪ್ರಶಸ್ತಿ ಹಾಗು ಡಾ. ರಾಜ್ ಸಾಹಿತ್ಯ ಪ್ರಶಸ್ತಿ ಲಭಿಸಿವೆ. ‘ಬೆಳಕಿನ ಹನಿಗಳು’ ಇವರ ೨ನೆಯ ಕವನ ಸಂಕಲನ. ಕೋಗಿಲೆ ಕೂಗಿದಂತೆ ಕ್ಯಾಸೆಟ್ ಬಿಡುಗಡೆಯಾಗಿದೆ.

ವೈವಾಹಿಕ ಜೀವನ

ಡಾ. ಲತಾರವರ ಪತಿ ಡಾ. ರಾಜಶೇಖರ್‍ರವರು ಮೈಸೂರಿನ ಖ್ಯಾತ ಮಕ್ಕಳ ವೈದ್ಯರಾಗಿದ್ದು ಸದ್ಯ ಡಾ. ರಾಜಶೇಖರ್ ಮೆಡಿಕಲ್ ಫೌಂಡೇಷನ್ ಮತ್ತು ರೀಸರ್ಚ್ ಸೆಂಟರ್‍ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಶಸ್ತಿ-ಪುರಸ್ಕಾರಗಳು

ಬದಲಾಯಿಸಿ
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ವಿಶ್ವಕವಿ ಪ್ರಶಸ್ತಿ
  • ಕೆಂಪೇಗೌಡ ರಾಷ್ಟ್ರೀಯ ಪುರಸ್ಕಾರ
  • ವಿಶ್ವಕರ್ಮ ಪ್ರಶಸ್ತಿ ಮತ್ತು ಚಿನ್ನದ ಪದಕ
  • ಅಂತರರಾಷ್ಟ್ರೀಯ ವರ್ಷದ ಮಹಿಳೆ ಪ್ರಶಸ್ತಿ
  • ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ
  • ಕುಲಪತಿ ದಾ.ಕೆ.ಎಂ ಮುನ್ಷಿ ಭಾರತೀಯ ವಿದ್ಯಾ ಭವನ ಅವಾರ್ಡ್
  • ರೋಟರಿ ಸಂಸ್ಥೆಯ ಗೌರವ ಸದಸ್ಯತ್ವ
  • ಶಾಂತಲ ಪಾಟೀಲ ಸಾಹಿತ್ಯ ಪ್ರಶಸ್ತಿ.

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2019-07-30. Retrieved 2019-07-30.